ಕೊರೊನಾದ ಜೊತೆ ಬದುಕುವುದು ಕಲಿಯಬೇಕು ಎನ್ನುತ್ತಿರುವಾಗಲೇ ಕೊರೊನಾವನ್ನು ಮೆಟ್ಟಿ ನಿಲ್ಲುವ ಪ್ರಯತ್ನಗಳು ಕೂಡ ಯಶಸ್ಸಿನ ದಿಕ್ಕನ್ನು ಫಾಲೋ ಮಾಡುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ ವಾಷಿಂಗ್ಟನ್ನ ವಿಜ್ಞಾನಿಗಳು ಕೇವಲ 10 ನಿಮಿಷದಲ್ಲಿ ಕೊರೊನಾ ಇದೆಯಾ ಇಲ್ಲವಾ ಎಂದು ಕಂಡುಹಿಡಿಯುವ ಟೆಸ್ಟಿಂಗ್ ಕಿಟ್ ರೆಡಿಮಾಡಿದ್ದಾರೆ.
ದೇಹದಲ್ಲಿ ಕೊರೊನಾ ಸೋಂಕು ಇದೆಯಾ ಎನ್ನುವುದನ್ನು ಈ ಯಂತ್ರ ಕೇವಲ 10 ನಿಮಿಷದಲ್ಲಿ ಕಂಡುಹಿಡಿಯಬಲ್ಲದಂತೆ. ಕೊರೊನಾ ವೈರಸ್ ಇದ್ದಾಗ ಆಗುವ ಬಣ್ಣ ಬದಲಾವಣೆಯನ್ನು ಪತ್ತೆಹಚ್ಚಬಲ್ಲ ಪರೀಕ್ಷಾ ಸಾಧನವನ್ನು ಸಂಶೋಧಕರು ತಯಾರಿಸಿದ್ದಾರೆ. ಇಲ್ಲಿನ ಎಸಿಎಸ್ ನ್ಯಾನೋ ಪತ್ರಿಕೆಯಲ್ಲಿ , ಯೂನಿವರ್ಸಿಟಿ ಆಫ್ ಮರ್ಯಲ್ಯಾಂಡ್ ಸ್ಕೂಲ್ ಆಫ್ ಮೆಡಿಸಿನ್ ನ ಸಂಶೋಧಕರು ಪ್ರಕಟಿಸಿರುವ ವರದಿಯಲ್ಲಿ ಈ ವಿಷಯ ತಿಳಿಸಲಾಗಿದೆ.
ನಮ್ಮ ಪ್ರಾಯೋಗಿಕ ಸಂಶೋಧನೆಯ ಪ್ರಕಾರ, ಈ ಪರೀಕ್ಷೆಯು ವ್ಯಕ್ತಿಯ ಸ್ವ್ಯಾಬ್ನ ಸ್ಯಾಂಪಲ್ನಲ್ಲಿ ಇರಬಹುದಾದ ವೈರಸ್ನ ಆರ್ಎನ್ಎ ಮೆಟಿರಿಯಲ್ನ್ನು ಪತ್ತೆ ಹಚ್ಚಲಿದೆ. ಸೋಂಕು ತಗುಲಿದ ಮೊದಲನೇ ದಿನದಂದೆ, ಸೋಂಕಿನ ಇರುವಿಕೆಯನ್ನು ಪತ್ತೆ ಹಚ್ಚಬಲ್ಲದು. ಆದಾಗ್ಯೂ ಈ ಸಂಬಂಧ ಇನ್ನೊಂದಿಷ್ಟು ಅಧ್ಯಯನದ ಅಗತ್ಯವಿದೆ ಅಂತ ಸಂಶೋಧನೆಯ ಮುಖ್ಯಸ್ಥರಾದ ಡೀಪಾಂಜನ್ ಪಾನ್ ಹೇಳಿದ್ದಾರೆ.
(ಮಾಹಿತಿ ಕೃಪೆ ನ್ಯೂಸ್ ಫಾಸ್ಟ್ ಲೈವ್)
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ