ಬೆಂಗಳೂರು: ಸಣ್ಣ ಮತ್ತು ಮಧ್ಯಮ ಪ್ರಮಾಣದ ರೈತರಿಗೆ ಅಂದರೆ ಒಂದು ಎಕರೆಯಿಂದ ಆರಂಭಿಸಿ ಐದು ಎಕರೆ ವಿಸ್ತೀರ್ಣದ ಹೊಲ-ತೋಟ ಹೊಂದಿರುವವರಿಗೆ ಬೇರೆಬೇರೆ ಕೆಲಸಗಳಿರುತ್ತವೆ. ಸಾಕಷ್ಟು ಬಾರಿ ತುಂಬ ಅಗತ್ಯ, ಅನಿವಾರ್ಯ ಸಂದರ್ಭಗಳಲ್ಲಿ ಕೃಷಿಕಾರ್ಮಿಕರು ಲಭ್ಯರಾಗದೇ ತೊಂದರೆಯಾಗುತ್ತದೆ. ಅದರಲ್ಲಿಯೂ ಒಂದು - ಎರಡು ಎಕರೆಯಲ್ಲಿ ಬೇಸಾಯ ಮಾಡುತ್ತಿರುವವರಿಗೆ ಕೃಷಿಕಾರ್ಮಿಕರ ವೆಚ್ಚವನ್ನು ಭರಿಸುವುದು ಹೊರೆಯಾಗುತ್ತದೆ.
ಇಂಥ ಸಮಸ್ಯೆಗಳಿಗೆ ವಿದಾಯ ಹೇಳಿ ಸಣ್ಣ-ಮಧ್ಯಮ ರೈತರಿಗೆ ಹಲವು ರೀತಿಯಲ್ಲಿ ನೆರವಾಗಬಲ್ಲ ಯಂತ್ರಗಳು ಅಗತ್ಯ. ಒಲಿಯೋ ಮ್ಯಾಕ್ ಕಂಪನಿಯ ಎಂ.ಹೆಚ್. 180 ರೋಟರಿ ಟಿಲ್ಲರ್ ಈ ನಿಟ್ಟಿನಲ್ಲಿ ಸಾಕಷ್ಟು ಸಹಾಯ ಮಾಡುತ್ತದೆ. ಬಹಳ ಮುಖ್ಯವಾದ ಸಂಗತಿ ಏನೆಂದರೆ ಇದರ ನಿರ್ವಹಣಾ ವೆಚ್ಚ ಕಡಿಮೆ. ಇದು ಸಹ ರೈತರ ಆರ್ಥಿಕ ಹೊರೆಯನ್ನು ಕಡಿಮೆ ಮಾಡುತ್ತದೆ.
ಒಲಿಯೋ ಮ್ಯಾಕ್ ಎಂ.ಹೆಚ್. 180 ರೋಟರಿ ಟಿಲ್ಲರ್ ಚಕ್ರಗಳ ಅಗಲ ಮೂರು ಅಡಿ. ಈ ಟಿಲ್ಲರ್ 5 1/2 ( ಐದೂವರೆ ಹೆಚ್.ಪಿ.) ಅಶ್ವಶಕ್ತಿ ಇಂಜಿನ್ ಸಾಮರ್ಥ್ಯ ಹೊಂದಿದೆ.
ಕಳೆ ನಿರ್ವಹಣೆ
ಹೊಲ - ತೋಟಗಳಲ್ಲಿ ಕಳೆಗಳ ಬೆಳವಣಿಗೆಗೆ ಕೊನೆಯೇ ಇಲ್ಲ. ಕಿತ್ತು ಹಾಕಿದಂತೆಲ್ಲ ಬೆಳೆಯುತ್ತಲೇ ಇರುತ್ತವೆ. ಪ್ರತಿಬಾರಿಯೂ ಕೃಷಿಕಾರ್ಮಿಕರನ್ನೇ ಅವಲಂಬಿಸಿ ಕಳೆ ಕೀಳಿಸುವುದು ಆರ್ಥಿಕವಾಗಿ ಆಗದ ಕೆಲಸ. ಇಂಥ ಸಂದರ್ಭಗಳಲ್ಲ ರೋಟರಿ ಟಿಲ್ಲರ್ ಗಳು ಸಹಾಯಕ್ಕೆ ಬರುತ್ತವೆ. ಒಂದು ಅಡಿ ಎತ್ತರದ ಕಳೆಗಿಡಗಳನ್ನು ಬೇರು ಸಮೇತ ಕಿತ್ತು ಮಣ್ಣಿನಲ್ಲಿ ಸೇರಿಸುತ್ತವೆ. ಹೀಗೆ ಮಣ್ಣಿನಲ್ಲಿ ಮಲ್ಚಿಂಗ್ ಮಾಡುವುದರಿಂದ ಸಾವಯವ ಪೋಷಕಾಂಶ ದೊರೆತು ಭೂಮಿಯ ಫಲವತತ್ತೆಯೂ ಹೆಚ್ಚಾಗಿ ಬೆಳೆಯೂ ಸಮೃದ್ಧಿಯಾಗಿ ಬರುತ್ತದೆ. ಕಳೆಗಿಡಗಳು ಹೂ ಬಿಡುವ ಮುನ್ನವೇ ಮಣ್ಣಿನಲ್ಲಿ ಬೆರೆಸಿದರಂತೂ ಮತ್ತೆ ಹೆಚ್ಚಾಗಿ ಅವುಗಳು ಬೆಳೆಯುವುದಿಲ್ಲ.
ಅಂತರ ಬೇಸಾಯ
ತರಕಾರಿ ಸಸ್ಯಗಳ ಬದುಗಳ ನಡುವೆ ಸಾಮಾನ್ಯವಾಗಿ ಎರಡರಿಂದ ಮೂರು ಅಡಿ ಅಂತರ ನೀಡಿರುತ್ತಾರೆ. ಇಲ್ಲಿ ಎತ್ತುಗಳನ್ನಾಗಲಿ ಅಥವಾ ಟ್ರಾಕ್ಟರ್ ಆಗಲಿ ಅಥವಾ ಬೇರೆ ಯಾವುದೇ ಯಂತ್ರವನ್ನಾಗಲಿ ಬಳಸಿ ಅಂತರ ಬೇಸಾಯ ಮಾಡಲು ಸಾಧ್ಯವಾಗುವುದಿಲ್ಲ. ಇಂಥಲ್ಲಿಯೂ ಒಲಿಯೋ ಮ್ಯಾಕ್ ರೋಟರಿ ಟಿಲ್ಲರ್ ಗಳು ಸಹಾಯಕ್ಕೆ ಬರುತ್ತವೆ. ಸಾಲುಗಳ ನಡುವೆ ಇರುವ ಕಳೆ ಕೀಳಲೂ ಸಹ ಸಾಧ್ಯವಾಗುತ್ತದೆ.
ಟ್ರಾಕ್ಟರ್ ಇದ್ದರೂ ಬೇಕು ರೋಟರಿ ಟಿಲ್ಲರ್
ಟ್ರಾಕ್ಟರ್ ಗಳು ಹೋಗಲಾಗದ ಕಡೆಗಳಿಗೂ ಸಲೀಸಾಗಿ ಹೋಗಿ ಅಂತರ ಬೇಸಾಯ ಮಾಡುವುದು ಸಹ ಒಲಿಯೋ ಮ್ಯಾಕ್ ರೋಟರಿ ಟಿಲ್ಲರ್ ವಿಶೇಷತೆ. 20 ಅಥವಾ 30 ವರ್ಷದ ಹಿಂದಿನ ತೋಟಗಳಲ್ಲಿ ಸಾಲಿನಿಂದ ಸಾಲಿಗೆ 6 ಅಡಿಗಿಂತಲೂ ಕಡಿಮೆ ಅಂತರ ಕೊಟ್ಟಿರುತ್ತಾರೆ. ಇಂಥಲ್ಲಿ ಟ್ರಾಕ್ಟರ್ ಬಳಸಿ ಅಂತರ ಬೇಸಾಯ ಮಾಡಬಾರದು. ಸಾಲಿನಿಂದ ಸಾಲಿಗೆ 8 ಅಡಿ ಅಂತರ ಕೊಟ್ಟಿದ್ದರೂ ಸಹ ಟ್ರಾಕ್ಟರ್ ಬಳಕೆ ಮಾಡಬಾರದು. ಇದಕ್ಕೆ ಕಾರಣವೇನೆಂದರೆ ಟ್ರಾಕ್ಟರ್ ಗಳಿಗೆ ಜೋಡಿಸಿದ ಉಳುಮೆ ಸಾಧನಗಳು ಮರಗಳ ಬುಡಕ್ಕೆ ತಗುಲಿ ಗಾಯ ಮಾಡಬಹುದು. ಇಂಥ ಹಾನಿಗಳನ್ನು ಒಲಿಯೋ ಮ್ಯಾಕ್ ಪವರ್ ಟಿಲ್ಲರ್ ಗಳು ತಡೆಯುತ್ತವೆ. ಸೂಕ್ತವಾದ ರೀತಿಯಲ್ಲಿ ಅಂತರಬೇಸಾಯ ಮಾಡಲು ಸಾಧ್ಯವಾಗುವುದರಿಂದ ತೋಟದ ಇಳುವರಿಯೂ ಅಧಿಕವಾಗುತ್ತದೆ.
ತೆಂಗಿನ ತೋಟ, ಹಣ್ಣಿನ ತೋಟಗಳ ಸಸ್ಯಗಳ ಬುಡದ ಸುತ್ತ ಗರಿಯ ಅಂಚುಗಳವರೆಗೂ ಪಾತಿ ಮಾಡಿ ಗೊಬ್ಬರ, ನೀರು ನೀಡುವುದು ಅವುಗಳ ಬೆಳೆವಣಿಗೆಯನ್ನು ಹೆಚ್ಚಿಸುತ್ತದೆ ಎಂದು ತಜ್ಞರು ಹೇಳುತ್ತಾರೆ. ಕೃಷಿಕಾರ್ಮಿಕರನ್ನು ಅವಲಂಬಿಸಿ ಪ್ರತಿ ಗಿಡ - ಮರದ ಬುಡದಲ್ಲಿ ಹೀಗೆ ಅಗಲವಾದ ಪಾತಿ ಮಾಡಿಸುವುದು ಆರ್ಥಿಕವಾಗಿ ಹೊರೆ. ಆದರೆ ರೋಟರಿ ಟಿಲ್ಲರ್, ಬಹಳ ಸಲೀಸಾಗಿ ಪಾತಿ ಮಾಡುವ ಕಾರ್ಯವನ್ನು ಮಾಡುತ್ತವೆ.
ಅಡಿಕೆ ತೋಟಗಳಲ್ಲಿ ಪ್ರತಿ ಮರದ ಬುಡದಲ್ಲಿ ಸುತ್ತು ಅಗೆತ ಎಂದು ಮಾಡುವ ರೂಡಿ ಇದೆ. ಕೃಷಿಕಾರ್ಮಿಕರು ಈ ಕೆಲಸಕ್ಕೆ ಕೃಷಿಕಾರ್ಮಿಕರು ಒಂದು ಮರಕ್ಕೆ ಕನಿಷ್ಟ 70 ರೂಗಳಿಂದ 150 ರೂ. ತನಕ ಕೂಲಿ ಕೇಳುತ್ತಾರೆ. ಸಣ್ಣ-ಮಧ್ಯಮ ರೈತರಿಗೆ ಇಷ್ಟು ಹಣ ನೀಡಿ ಕೆಲಸ ಮಾಡಿಸಲು ಸಾಧ್ಯವಾಗುವುದಿಲ್ಲ. ಇಂಥಲ್ಲಿಯೂ ಒಲಿಯೋ ಮ್ಯಾಕ್ ರೋಟರಿ ಟಿಲ್ಲರ್ ಗಳು ನೆರವಿಗೆ ಬರುತ್ತವೆ. ಅತೀ ಕಡಿಮೆ ಖರ್ಚಿನಲ್ಲಿ ಕೆಲಸವಾಗುತ್ತದೆ. ಗಿಡ, ಮರಗಳ ಸುತ್ತ ಪಾತಿ ಮಾಡುವುದಾಗಲಿ, ತರಕಾರಿ ಬೆಳೆಗಳ ನಡುವೆ ಅಂತರ ಬೇಸಾಯ ಮಾಡುವುದಕ್ಕಾಗಲಿ ರೋಟರಿ ಟಿಲ್ಲರ್ ಅತ್ಯವಶ್ಯಕ.
ಗೊಬ್ಬರ ಮಿಶ್ರಣ
ಮೊದಲೇ ಹೇಳದಂತೆ ಮಣ್ಣಿನಲ್ಲಿ ತೇವಾಂಶವಿದ್ದರೆ ನಾಲ್ಕುವರೆ ಇಂಚಿನಷ್ಟು ಆಳದವರೆಗೆ ಉಳುಮೆ ಮಾಡುತ್ತದೆ. ಒಂದಕ್ಕಿಂತಲೂ ಹೆಚ್ಚು ಬಾರಿ ಉಳುಮೆ ಮಾಡುವುದರಿಂದ ಮಣ್ಣಿನ ಉಳುಮೆ ಆಳ ಹೆಚ್ಚಿಸಬಹುದು. ಉಳುಮೆ ಮಾಡಿ ಗೊಬ್ಬರ ಹಾಕಿ ಮತ್ತೆ ಉಳುಮೆ ಮಾಡುವುದರಿಂದ ಪೋಷಕಾಂಶ ಮಣ್ಣಿನಲ್ಲಿ ಚೆನ್ನಾಗಿ ಬೆರೆತು ಫಲವತ್ತತೆ ವೃದ್ಧಿಗೆ ಕಾರಣವಾಗುತ್ತದೆ.
ಕೀಟಬಾಧೆ ನಿಯಂತ್ರಣ
ಮಣ್ಣಿನಲ್ಲಿ ಶೇಕಡ 40 ರಷ್ಟಾದರೂ ತೇವಾಂಶವಿದ್ದರೆ ಒಲಿಯೋ ಮ್ಯಾಕ್ ರೋಟರಿ ಟಿಲ್ಲರ್ ನಾಲ್ವುವರೆ ಇಂಚು ಆಳದವರೆಗೆ ಉಳುಮೆ ಮಾಡುತ್ತದೆ. ಹೀಗೆ ಮಣ್ಣನ್ನು ಮಗುಚಿ ಹಾಕುವುದರಿಂದ ಮಣ್ಣಿನ ಅಡಿಯಲ್ಲಿರುವ ಹಾನಿಕಾರಕ ಕೀಟಗಳ ಕೋಶಗಳು ಬಿಸಿಲಿಗೆ ಸಿಲುಕಿ ನಾಶವಾಗುತ್ತವೆ. ಹಕ್ಕಿಪಕ್ಷಿಗಳಿಗೆ ಆಹಾರವಾಗುತ್ತವೆ. ಇದರಿಂದ ಕೀಟಭಾದೆಯೂ ನಿಯಂತ್ರಣದಲ್ಲಿರುತ್ತದೆ.
ಹೆಚ್ಚುವರಿ ಜೋಡಣೆಗಳು
ತಜ್ಞರು ಶಿಫಾರಸು ಮಾಡುವ ನೇಗಿಲನ್ನು ಜೋಡಣೆ ಮಾಡಲು ಸಾಧ್ಯವಿರುವುದು ಭಾರಿ ಅನುಕೂಲಕರ ಸಂಗತಿ. ಇದು ರೈತರಿಗೆ ಅಪಾರವಾದ ರೀತಿಯಲ್ಲಿ ಸಹಾಯಕಾರಿ. ಶ್ರಡ್ಡರ್ ಅನ್ನು ಸಹ ಜೋಡಣೆ ಮಾಡಲು ಸಾಧ್ಯ. ಸಾವಯವ ಗೊಬ್ಬರ, ಎರೆಗೊಬ್ಬರ ಮಾಡಲು ಸಹಾಯಕವಾಗಲು ಸಣ್ಣಸಣ್ಣ ಕಡ್ಡಿ, ರೆಂಬೆಗಳನ್ನು, ಕತ್ತರಿಸಿ ಪುಡಿಪುಡಿ ಮಾಡುವ ಶ್ರಡ್ಡರ್ ಯಂತ್ರಕ್ಕೂ ರೋಟರಿ ಟಿಲ್ಲರ್ ಜೋಡಿಸಿ ಚಾಲನೆ ಮಾಡಬಹುದು.
ನೀರಾವರಿ
ತಜ್ಞರ ಮಾರ್ಗದರ್ಶನದಲ್ಲಿ ಹೆಚ್.ಟಿ.ಪಿ. ಪಂಪ್ ಜೋಡಣೆ ಮಾಡಿಕೊಂಡು ಪೈಪ್ ಮೂಲಕ ಸುಮಾರು 450 ಅಡಿ ದೂರದವರೆಗೂ ನೀರು ಹಾಯಿಸಬಹುದು ಅಥವಾ ಸ್ಪಿಂಕ್ಲರ್ ( ತುಂತುರು ನೀರಾವರಿ) ಮಾಡಬಹದು. ಗಿರಮರಗಳಿಗೆ ಔಷಧ ಸಿಂಪಡಣೆ ಮಾಡಲು ಒಲಿಯೋ ಮ್ಯಾಕ್ ರೋಟರಿ ಟಿಲ್ಲರ್ ಗಳು ಸಹಾಯಕ.
ಚಾಲನೆ ಮಾಡಲು ಸರಾಗ ಜೊತೆಗೆ ಮಿತವ್ಯಯಕಾರಿ
ಒಲಿಯೋ ಮ್ಯಾಕ್ ಎಂ.ಹೆಚ್. 180 ರೋಟರಿ ಟಿಲ್ಲರ್ ಭಾರ ಕಡಿಮೆ. ಮುಖ್ಯವಾಗಿ ಇದರಲ್ಲಿ ಎಕ್ಸಲೇಟರ್ ಇರುವುದರಿಂದ ಚಾಲನೆ ಮಾಡುವವರಿಗೆ ಶ್ರಮವಾಗುವುದಿಲ್ಲ. ಮುಂದೆ ಚಾಲನೆ ಮಾಡಲು, ರಿವರ್ಸ್ ತೆಗೆಯಲು ಗೇರ್ ನೀಡಲಾಗಿದೆ. ಇದರಿಂದ ಮತ್ತೆ ಸುತ್ತು ಬರುವ ಅಗತ್ಯವಿರುವುದಿಲ್ಲ. ಇವೆಲ್ಲದರ ಜೊತೆಗೆ ಮತ್ತೊಂದು ಮುಖ್ಯವಾದ ಅಂಶವೇನೆಂದರೆ ಒಂದು ಲೀಟರ್ ಪೆಟ್ರೋಲಿನಲ್ಲಿ ಒಂದೂಕಾಲು ಗಂಟೆಗಿಂತಲೂ ಅಧಿಕ ಸಮಯ ಚಾಲನೆಯಾಗುತ್ತದೆ. ಮಣ್ಣಿನಲ್ಲಿ ಸೂಕ್ತ ಪ್ರಮಾಣದ ತೇವಾಂಶವಿದ್ದು, ಚಾಲನೆ ಮಾಡುವವರು ಅನಗತ್ಯವಾಗಿ ಹೆಚ್ಚು ಎಕ್ಸಲೇಟರ್ ಕೊಡದೇ ಇದ್ದರೆ ಇದರ ಅವಧಿ ಮತ್ತಷ್ಟೂ ಹೆಚ್ಚಾಗುತ್ತದೆ.
ಗುಣಮಟ್ಟ ಪ್ರಮಾಣಪತ್ರ
ಒಲಿಯೋ ಮ್ಯಾಕ್ ಎಂ.ಹೆಚ್. 180 ರೋಟರಿ ಟಿಲ್ಲರ್ ವಿದೇಶಗಳಲ್ಲಿ ಕೃಷಿ ಯಂತ್ರೋಪಕರಣಗಳ ಗುಣಮಟ್ಟ ಪರೀಕ್ಷೆ ಮಾಡುವ ಸಂಸ್ಥೆಗಳಿಂದ ಪ್ರಮಾಣ ಪತ್ರ ಪಡೆದಿದೆ. ಇದರ ಜೊತೆಗೆ ಭಾರತದ ಸಂಸ್ಥೆಗಳಿಂದಲೂ ಪ್ರಮಾಣ ಪತ್ರ ಪಡೆದಿದೆ. ರಾಷ್ಟ್ರದ ಖ್ಯಾತ ಹಾಗೂ ಬಹುದೊಡ್ಡ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ, ಕೇಂದ್ರ ಸರ್ಕಾರದ ಸಂಬಂಧಿತ ಸಂಸ್ಥೆ (ಎಫ್.ಎಂ.ಟಿ.ಟಿ.ಐ) ಯಿಂದಲೂ ಪ್ರಮಾಣಪತ್ರಗಳನ್ನು ಪಡೆದಿದೆ. ಇಷ್ಟೆಲ್ಲ ಅನುಕೂಲಗಳಿರುವ ಒಲಿಯೋ ಮ್ಯಾಕ್ ಎಂ.ಹೆಚ್. 180 ರೋಟರಿ ಟಿಲ್ಲರ್ ಬೆಲೆಯೂ ಕೂಡ ಕೈಗೆ ಎಟುಕುವಂತೆ ಇವೆ. ಈ ಟಿಲ್ಲರ್, ರಾಜ್ಯದ್ಯಂತ ಇರುವ 'ಅಗ್ರಿಮಾರ್ಟ್' ಮಳಿಗೆಗಳಲ್ಲಿ ದೊರೆಯುತ್ತದೆ. ಇದಲ್ಲದೇ ಕೃಷಿ ಉಪಕರಣಗಳನ್ನು ಮಾರಾಟ ಮಾಡುವ ಅಧಿಕೃತ ಮಾರಾಟ ಮಳಿಗೆಗಳಲ್ಲಿಯೂ ಲಭ್ಯವಿದೆ.
ಸಬ್ಸಿಡಿ ಮತ್ತು ಇನ್ನಿತರ ತಾಂತ್ರಿಕ ಮಾಹಿತಿಗೆ ಸಂಪರ್ಕಿಸಿ: 080 2698 5200 / Toll Free: 1800 425 3036 (ಬೆಳಗ್ಗೆ 10 ರಿಂದ ಸಂಜೆ 6)
(ಮಾಹಿತಿ ಕೃಪೆ ಕನ್ನಡಪ್ರಭ)