ಬಳ್ಳಾರಿ: ಬಳ್ಳಾರಿಯ ಹೊಸಪೇಟೆಯ 'ಶತಾಯುಷಿ' ವೃದ್ಧರೊಬ್ಬರು ಮಾರಕ ಕೊರೋನಾ ವೈರಸ್ ನಿಂದ ಗುಣಮುಖರಾಗಿ ಇತರೆ ಸೋಂಕಿತರಿಗೆ ಸ್ಪೂರ್ತಿಯಾಗಿದ್ದಾರೆ.
ಹೌದು... ಕಳೆದ ನಾಲ್ಕು ತಿಂಗಳಿನಿಂದ ಪ್ರಪಂಚದ ಮೂಲೆ ಮೂಲೆಯ ಜನ ಸಾಮನ್ಯರನ್ನು ಬಿಚ್ಚಿ ಬೀಳಿಸಿರುವ ಮಹಾಮಾರಿ ಕೊರೋನಾ ವಿರುದ್ಧ ಬಳ್ಳಾರಿಯ ಹೊಸಪೇಟೆಯ 'ಶತಾಯುಷಿ' ವೃದ್ಧರೊಬ್ಬರು ಹೋರಾಡಿ ಜಯಿಸಿದ್ದಾರೆ. ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ಪಟ್ಟಣದ ನಿವಾಸಿಯಾಗಿರುವ ಈ ಶತಾಯುಷಿ ಅಜ್ಜಿ ಹಾಲಮ್ಮ ಎಂಬುವವರು ಮಹಾಮಾರಿ ಕೊರೋನ ವೈರಸ್ ಮೆಟ್ಟಿನಿಂತು ಬದುಕುಳಿದಿದ್ದಾರೆ.
ಕಳೆದ ಎರಡು ವಾರಗಳ ಹಿಂದೆ ಈಕೆಯ ಮಗನ ಆರೋಗ್ಯದಲ್ಲಿ ವ್ಯತ್ಯಾಸವಾಗಿತ್ತು, ಚಿಕಿತ್ಸೆಗೆಂದು ಆಸ್ಪತ್ರೆಗೆ ತೆರಳಿದಾಗ ಅವರಲ್ಲಿ ಕೊರೋನ ಸೋಂಕು ಇರುವುದು ದೃಢವಾಗಿತ್ತು. ಬಳಿಕ ಅವರ ಮನೆಯ ಇತರೆ ನಾಲ್ಕು ಜನರಿಗೂ ಕೊರೋನಾ ಸೋಂಕು ಹರಡಿ ಪಟ್ಟಣದ ಜನ ಸಾಮಾನ್ಯರನ್ನ ಬೆಚ್ಚಿ ಬೀಳುವಂತೆ ಮಾಡಿತ್ತು, ಆ ನಾಲ್ಕು ಜನರಲ್ಲಿ ಈ ಶತಾಯುಷಿ ಅಜ್ಜಿ ಹಾಲಮ್ಮ ಕೂಡ ಒಬ್ಬರಾಗಿದ್ದರು.
ಇನ್ನು ಮನೆಯಲ್ಲಿದ್ದ ನಾಲ್ವರು ಸೋಂಕಿತರು ಚಿಕಿತ್ಸೆ ಪಡೆದು ಗುಣ ಮುಖರಾಗಬಹುದು. ಆದರೆ ಈ ಹಾಲಮ್ಮನ ಪರಿಸ್ಥಿತಿ ಹೇಗೆ ಎಂಬುದು ಸಂಬಂಧಿಕರ ಹಾಗೂ ಸ್ಥಳೀಯ ತಾಲೂಕು ಆಡಳಿತಕ್ಕೂ ಚಿಂತೆಯಾಗಿ ಪರಿಣಮಿಸಿತ್ತು, ಹಾಲಮ್ಮನಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಗೆ ಕರೆದೊಯ್ದರೆ ಅಲ್ಲಿ ಮತ್ತೆ ಬೇರೆ ಯಾವುದಾದರೂ ಸೋಂಕು ತಗುಲಿ ಇವರ ಆರೋಗ್ಯ ಪರಿಸ್ಥಿತಿ ಮತ್ತಷ್ಟು ಹದಗಡಬಹುದೆಂದು ತಿಳಿದ ಸ್ಥಳೀಯ ತಾಲೂಕು ಆಡಳಿತ ಅವರನ್ನು ಮನೆಯಲ್ಲೇ ಇರಿಸಿ ಚಿಕಿತ್ಸೆ ಕೊಡುವ ಮೂಲಕ ಅವರ ಮೇಲೆ ನಿಗಾ ವಹಿಸಿತ್ತು.
ಇದೀಗ ಅಜ್ಜಿ ಹಾಲಮ್ಮ ಕೊರೋನಾ ವೈರಸ್ ನಿಂದ ಗುಣಮುಖರಾಗಿದ್ದು, ಹಾಲಮ್ಮ ಅವರ ಇತ್ತೀಚೆಗಿನ ಸ್ವಾಬ್ ಪರೀಕ್ಷೆಯಲ್ಲಿ ವರದಿ ನೆಗೆಟಿವ್ ಬಂದಿದೆ. ಹೀಗಾಗಿ ಸ್ಥಳೀಯ ತಾಲೂಕು ಆಡಳಿತ ಸಂತಸಗೊಂಡಿದೆ.
ಇದುವರೆಗೆ ಅರವತ್ತು ವರ್ಷ ಮೇಲ್ಪಟ್ಟವರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡರೆ ಬದುಕುಳಿಯುವುದು ಕಷ್ಟ ಸಾಧ್ಯ ಎಂಬ ಭಯ ಎಲ್ಲರಲ್ಲಿತ್ತು, ಆದರೆ ಅದನ್ನ ಹುಸಿಗೊಳಿಸಿದ್ದಾಳೆ ಹಾಲಮ್ಮ, ಕಾಯಿಲೆ ಯಾವುದಾದರೇನು, ವಯಸ್ಸು ಎಷ್ಟಾದರೇನು ವೈದ್ಯರು ನೀಡುವ ಚಿಕಿತ್ಸೆಗೆ ಔಷಧಿಗೆ ಸ್ಪಂಧಿಸಿದರೆ ಎಂತಹ ಕಾಯಿಲೆಯಿಂದ ಬೇಕಾದರು ಗುಣಮುಖರಾಗಬಹುದು ಎಂದು ಹಾಲಮ್ಮ ತೋರಿಸಿ ಕೊಟ್ಟಿದ್ದಾಳೆ.
(ಮಾಹಿತಿ ಕೃಪೆ ಕನ್ನಡಪ್ರಭ)
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ