ವರನೊಬ್ಬ ಮದುವೆ ಮಂಟಪದಲ್ಲಿ ಇಬ್ಬರು ಹುಡುಗಿಯರಿಗೆ ತಾಳಿ ಕಟ್ಟಿದ್ದಾನೆ. ಮಧ್ಯಪ್ರದೇಶದ ಬೈತುಲ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಸಂದೀಪ್ ಎಂಬಾತನೇ ಇಬ್ಬರು ಹುಡುಗಿಯರಿಗೆ ತಾಳಿಕಟ್ಟಿದ ವರನಾಗಿದ್ದಾನೆ. ಕಾಲೇಜ್ ನಲ್ಲಿ ಪ್ರೀತಿ ಮಾಡಿದ ಹುಡುಗಿ ಹಾಗೂ ತಂದೆ, ತಾಯಿ ಗೊತ್ತು ಮಾಡಿದ ಹುಡುಗಿಗೆ ಒಂದೇ ಮಂಟಪದಲ್ಲಿ ತಾಳಿ ಕಟ್ಟಿದ್ದಾನೆ. ಇಬ್ಬರೂ ಹುಡುಗಿಯರು ಹಾಗೂ ಅವರ ಮನೆಯವರು ಮತ್ತು ಹುಡುಗನ ಮನೆಮಂದಿ ಇದಕ್ಕೆ ಸಹಮತ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. (ಮಾಹಿತಿ Saturday, 11 Jul, 7.36 pm ವೆಬ್ದುನಿಯಾ ಕೃಪೆ )
ಬೀಜಿಂಗ್, ಜುಲೈ 12: ಚೀನಾದ ಉತ್ತರ ಭಾಗದ ಹೆಬಿಯಿ ಪ್ರಾಂತ್ಯದಲ್ಲಿ ಭಾನುವಾರ
ಬೆಳಗ್ಗೆ ಭೂಕಂಪದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ 5.1 ತೀವ್ರತೆ ಕಂಡು ಬಂದಿದೆ.
ಚೀನಾದ
ಹೆಬಿಯಿಯ ತಾಂಗ್ಶಾನ್ ನಗರದಲ್ಲಿ ಭೂಕಂಪ ಉಂಟಾಗಿದ್ದು, ಬೀಜಿಂಗ್ ಹಾಗೂ ಸುತ್ತಮುತ್ತಲ
ಪ್ರದೇಶದಲ್ಲೂ ಕಂಪನದ ಅನುಭವವಾಗಿದೆ ಎಂದು ಸರ್ಕಾರು ಸ್ವಾಮ್ಯದ ಕ್ಸಿನ್ಯೂವಾ ಸುದ್ದಿ
ಸಂಸ್ಥೆ ವರದಿ ಮಾಡಿದೆ.
ಭೂಕಂಪದ ಕೇಂದ್ರ ಬಿಂದು ಗುಯೆ ಜಿಲ್ಲೆಯಲ್ಲಿ
ಸ್ಥಳೀಯ ಕಾಲಮಾನ 6:38 AMರಲ್ಲಿ ದಾಖಲಾಗಿದೆ, 10 ಕಿ.ಮೀ ಆಳದಲ್ಲಿ ಕಾಣಿಸಿಕೊಂಡಿದೆ
ಎಂದು ಚೀನಾದ ಭೂಕಂಪ ಜಾಲ ಕೇಂದ್ರ( ಸಿಇಎನ್ ಸಿ) ಹೇಳಿದೆ.
ಎರಡನೇ ಭೂಕಂಪದ ಅನುಭವ 2.2 ತೀವ್ರತೆ ಕೂಡಾ ಇದೇ ಜಿಲ್ಲೆಯಲ್ಲಿ ಅರ್ಧಗಂಟೆಗಳಲ್ಲಿ ಕಾಣಿಸಿಕೊಂಡಿದೆ. ಸದ್ಯಕ್ಕೆ ಯಾವುದೇ ಸಾವು ನೋವಿನ ವರದಿ ಕಂಡು ಬಂದಿಲ್ಲ.
ಸದ್ಯಕ್ಕೆ
ಕಂಪನದ ಅನುಭವ ಕಂಡು ಬಂದ ಪ್ರದೇಶಗಳಲ್ಲಿ ರೈಲು ಸಂಚಾರ ನಿರ್ಬಂಧಿಸಲಾಗಿದೆ. ಅಗ್ನಿ
ಶಾಮಕದಳವನ್ನು ನಿಯೋಜಿಸಲಾಗಿದೆ. 1976ರಲ್ಲಿ ತಾಂಗ್ಶಾನ್ ಪ್ರಾಂತ್ಯದಲ್ಲಿ ರಿಕ್ಟರ್
ಮಾಪಕದಲ್ಲಿ ತೀವ್ರತೆ ಭೂಕಂಪ ಸಂಭವಿಸಿ240,000 ಮಂದಿ ಮೃತಪಟ್ಟಿದ್ದರು.
(ಮಾಹಿತಿ Oneindia ಕೃಪೆ )
ಲಿಂಗಸುಗೂರು: ಕೃಷ್ಣಾ ನದಿಯ ನಡುಗಡ್ಡೆ ಪ್ರದೇಶದ ಸಂತ್ರಸ್ತ
ಕುಟುಂಬಸ್ಥರಿಗೆ ಎರಡು ದಶಕಗಳ ಅವಧಿಯಿಂದ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಭರವಸೆ ಕೊಡುತ್ತ
ಬಂದಿರುವ ಆಡಳಿತ ಇಂದಿಗೂ ಏನೊಂದು ವ್ಯವಸ್ಥೆ ಕಲ್ಪಿಸಿಲ್ಲ. ಸಂರಕ್ಷಣೆ ಭರವಸೆಗಳು
ಹುಸಿಯಾಗಿರುವುದು ನಡುಗಡ್ಡೆ ಜನರ ಆಕ್ರೋಶಕ್ಕೆ ಎಡೆಮಾಡಿಕೊಟ್ಟಿದೆ.
ಮಹಾರಾಷ್ಟ್ರದಲ್ಲಿ
ನಿರಂತರವಾಗಿ ಮಳೆ ಸುರಿಯುತ್ತಿದ್ದು, ಆಲಮಟ್ಟಿ ಜಲಾಶಯ ಭರ್ತಿಯಾಗಿದೆ. ನಾರಾಯಣಪುರ
ಕೆಳಭಾಗ ಕೃಷ್ಣಾನದಿಗೆ ಜುಲೈ 12 ರ ನಂತರ ಯಾವುದೇ ಕ್ಷಣದಲ್ಲಿ ನೀರು ಹರಿಬಿಡುವ ಸಾಧ್ಯತೆ
ಇದೆ. ನದಿಪಾತ್ರದಲ್ಲಿ ಜನರು ಜಾಗೃತಿ ವಹಿಸಬೇಕು ಎಂದು ಜಿಲ್ಲಾಧಿಕಾರಿ
ಆರ್.ವೆಂಕಟೇಶಕುಮಾರ್ ಈಗಾಗಲೇ ಸೂಚನೆ ನೀಡಿದ್ದಾರೆ.
ಇದೀಗ ನಡುಗಡ್ಡೆ ಪ್ರದೇಶದ ಜನರಲ್ಲಿ ಮತ್ತೆ ಆತಂಕ ಮನೆ ಮಾಡಿದೆ.
ಕೃಷ್ಣಾ
ಪ್ರವಾಹದಿಂದ ಕರಕಲಗಡ್ಡಿ (4), ಅರಲಗಡ್ಡಿ(11), ವಂಕಂನಗಡ್ಡಿಯಲ್ಲಿ (1) ಕುಟುಂಬ ಸೇರಿ
ಒಟ್ಟು 16 ಕುಟುಂಬದ 60ಕ್ಕೂ ಹೆಚ್ಚು ಜನರು ಪ್ರತಿ ವರ್ಷ ಸಂಕಷ್ಟ ಎದುರಿಸುತ್ತ
ಬಂದಿದ್ದಾರೆ.
4 ವರ್ಷಗಳಿಂದ ಮನೆಗಳ ನಿರ್ಮಾಣಕ್ಕೆ ಭೂಮಿ ಪೂಜೆ ಸಲ್ಲಿಸಿದ್ದು
ಬಿಟ್ಟರೆ ಏನೊಂದು ಪ್ರಗತಿ ಕಾಣದೆ ಹೋಗಿರುವುದು ಸಂತ್ರಸ್ತ ಕುಟುಂಬಸ್ಥರಲ್ಲಿ ನಿರಾಶೆ
ಭಾವನೆ ಮೂಡಿದೆ.
ದಶಕದ ಹಿಂದೆ ಕೃಷ್ಣಾ ಪ್ರವಾಹ ದಾಟಲು ಯತ್ನಿಸಿದ್ದ ಯರಗೋಡಿ
ಇಬ್ಬರು ತೆಪ್ಪ (ಹರಗೋಲು) ಮುಳುಗಿ ಮೃತಪಟ್ಟಿದ್ದಾರೆ. ಏಳು ವರ್ಷಗಳ ನಂತರ ಪರಿಹಾರ
ನೀಡುವ ಭರವಸೆ ನೀಡಿದ್ದ ತಾಲ್ಲೂಕು ಮತ್ತು ಜಿಲ್ಲಾ ಆಡಳಿತ ಇಂದಿಗೂ ಬಿಡಿಕಾಸು ಪರಿಹಾರ
ನೀಡಿಲ್ಲ. ಆರು ವರ್ಷಗಳಿಂದ ಕಚೇರಿಗೆ ಅಲೆದು ಸುಸ್ತಾದ ಕುಟುಂಬಕ್ಕೆ ನ್ಯಾಯ ಒದಗಿಸಲು
ಯಾವೊಬ್ಬ ಅಧಿಕಾರಿಗಳು ಮುಂದಾಗುತ್ತಿಲ್ಲ ಎಂಬುದು ಕುಟುಂಬಸ್ಥರ ಆರೋಪ.
ಜಲದುರ್ಗ,
ಶೀಲಹಳ್ಳಿ, ಯರಗೋಡಿ ಸೇತುವೆಗಳು ಮುಳುಗಿ ಭಾಗಶಃ ಕೊಚ್ಚಿ ಹೋಗಿದ್ದವು. ಅವುಗಳ ಶಾಶ್ವತ
ದುರಸ್ತಿಯು ಆಗುತ್ತಿಲ್ಲ. ಈ ಸಂದರ್ಭದಲ್ಲಿ ನದಿ ಪಾತ್ರದ ಜಮೀನುಗಳು ಕೊಚ್ಚಿ ಕೋಟ್ಯಂತರ
ಮೌಲ್ಯದ ಫಸಲು ಕೃಷ್ಣೆಯ ಪಾಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಬಹುತೇಕರಿಗೆ ಪರಿಹಾರ
ಕೂಡ ಜಮೆ ಆಗಿಲ್ಲ.
ಆಲಮಟ್ಟಿ ಜಲಾಶಯ ಬಹುತೇಕ ಭರ್ತಿಯಾಗಿದೆ. ನಾರಾಯಣಪುರ
ಅಣೆಕಟ್ಟೆಗೆ ಒಳ ಹರಿವು ಹೆಚ್ಚಾಗುವ ಸಾಧ್ಯತೆಗಳಿವೆ. ಈಗಾಗಲೇ ರಾಯಚೂರು ಮತ್ತು ಯಾದಗಿರಿ
ಜಿಲ್ಲಾಧಿಕಾರಿಗೆ ಪತ್ರ ಬರೆದಿರುವ ಅಣೆಕಟ್ಟೆ ವಿಭಾಗ ಕಾರ್ಯನಿರ್ವಾಹಕ ಎಂಜಿನಿಯರ್,
ಕೃಷ್ಣಾ ನದಿ ಪಾತ್ರದ ಜನತೆ ಜಾನುವಾರುಗಳನ್ನು ಎತ್ತರ ಪ್ರದೇಶಕ್ಕೆ ಸ್ಥಳಾಂತರ ಹಾಗೂ
ಎಚ್ಚರಿಕೆ ವಹಿಸಲು ಸೂಚಿಸಿದ್ದಾರೆ.
ಉಪ ವಿಭಾಗಾಧಿಕಾರಿ ರಾಜಶೇಖರ ಡಂಬಳ
ಮಾತನಾಡಿ, 'ಕೃಷ್ಣಾ ನದಿಗೆ ನೀರು ಬಿಡುವ ಸಾಧ್ಯತೆಗಳ ಕುರಿತು ಈಗಾಗಲೆ ನಡುಗಡ್ಡೆ
ಜನರಿಗೆ ಮಾಹಿತಿ ನೀಡಲಾಗಿದೆ. 13ವರ್ಷಗಳ ಹಿಂದೆ ಮೃತಪಟ್ಟವರ ಹಾಗೂ ಶಾಶ್ವತ ಪರ್ಯಾಯ
ವ್ಯವಸ್ಥೆ ಕಲ್ಪಿಸುವಲ್ಲಿ ತಾಂತ್ರಿಕ ತೊಂದರೆಗಳಿದ್ದು ಪರಿಶೀಲಿಸಲಾಗುವುದು. ಕಳೆದ
ವರ್ಷದ ಬೆಳೆ ನಷ್ಟ ಪರಿಹಾರ ನೀಡುವಲ್ಲಿ ಗೊಂದಲ ಇದ್ದು ಅಗತ್ಯ ಕ್ರಮ ಕೈಗೊಳ್ಳಲಾಗುವುದು'
ಎಂದು ಸ್ಪಷ್ಟಪಡಿಸಿದರು.
(ಮಾಹಿತಿ ಪ್ರಜಾವಾಣಿ ಕೃಪೆ )
ವಿಜಯಪುರ : ಆಲಮಟ್ಟಿ ಜಲಾಶಯಕ್ಕೆ ಶನಿವಾರ ಮತ್ತೆ 6.37 ಟಿಎಂಸಿ
ಅಡಿ ನೀರು ಹರಿದು ಬಂದಿದೆ. ಇದರಿಂದಾಗಿ ಒಂದೇ ವಾರದಲ್ಲಿ (ಜುಲೈ 5 ರಿಂದ 11ರ ವರೆಗೆ)
ಜಲಾಶಯಕ್ಕೆ 23.25 ಟಿಎಂಸಿ ಅಡಿ ನೀರು ಹರಿದು ಬಂದಂತಾಗಿದೆ.
123.081 ಟಿಎಂಸಿ ಅಡಿ ಸಾಮರ್ಥ್ಯದ ಜಲಾಶಯದಲ್ಲಿ 89 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ.
ಹೊರ ಹರಿವು ಹೆಚ್ಚಳ: 20 ಸಾವಿರ ಕ್ಯುಸೆಕ್ ಇದ್ದ ಆಲಮಟ್ಟಿ ಜಲಾಶಯದ ಹೊರಹರಿವನ್ನು ಶನಿವಾರ ಬೆಳಿಗ್ಗೆ 11ಕ್ಕೆ 35,000 ಕ್ಯುಸೆಕ್‌ಗೆ ಹೆಚ್ಚಿಸಲಾಗಿದೆ.
235 ಮೆಗಾ ವಾಟ್ ವಿದ್ಯುತ್ ಉತ್ಪಾದನೆ:
35,000 ಕ್ಯುಸೆಕ್ ನೀರನ್ನು ಆಲಮಟ್ಟಿ ಜಲಾಶಯದ ಬಲಭಾಗದ ಆಲಮಟ್ಟಿ ವಿದ್ಯುತ್ ಉತ್ಪಾದನಾ
ಕೇಂದ್ರದ ಮೂಲಕ ನದಿಗೆ ಹರಿಸಲಾಗುತ್ತಿದ್ದು, ಎಲ್ಲಾ ಘಟಕಗಳು ಕಾರ್ಯಾರಂಭಗೊಂಡಿವೆ.
ಇದರಿಂದ 235 ಮೆಗಾವಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ ಎಂದು ಜಲಾಶಯದ ಮೂಲಗಳು ತಿಳಿಸಿವೆ.
519.60 ಮೀಟರ್ ಗರಿಷ್ಠ ಎತ್ತರದ ಜಲಾಶಯದಲ್ಲಿ 517.36 ಮೀಟರ್ ವರೆಗೆ ನೀರು ಸಂಗ್ರಹವಾಗಿದೆ.
(ಮಾಹಿತಿ ಪ್ರಜಾವಾಣಿ ಕೃಪೆ )