Saturday, June 19, 2021
ಚೈತ್ರದ ಪ್ರೇಮಾಂಜಲಿಯ ಸುಮ ಸುಮ ಸುಮ ಹಾಡು
Thursday, June 17, 2021
Alert : SBI ಗ್ರಾಹಕರೇ, ನೀವು ಅದೆಷ್ಟೇ ಒತ್ತಡದಲ್ಲಿದ್ರೂ ʼಈ 3 ಕೆಲಸʼಗಳನ್ನ ಮಾಡಿವಂತೆ ಬ್ಯಾಂಕ್ ಎಚ್ಚರಿಸಿದೆ
ಎಸ್‌ಬಿಐ ಏನು ಹೇಳಿದೆ? ಬ್ಯಾಂಕ್ ಪ್ರಕಾರ, ವಂಚಕರು ನಿಮ್ಮ ವೈಯಕ್ತಿಕ ವಿವರಗಳನ್ನ ಸಂಗ್ರಹಿಸಲು ಬ್ಯಾಂಕ್ / ಕಂಪನಿಯ ಪ್ರತಿನಿಧಿಯಾಗಿ ನಟಿಸುತ್ತಾರೆ ಮತ್ತು ನಿಮ್ಮ ಮೊಬೈಲ್ ಸಂಖ್ಯೆಗೆ ಸಂದೇಶ ಕಳುಹಿಸಲಾಗುತ್ತದೆ. ಗ್ರಾಹಕರು ಈ ಸಂದೇಶಕ್ಕೆ ಬಲಿಯಾಗಬಾರದು ಮತ್ತು ಕೆವೈಸಿಗಾಗಿ ಯಾವುದೇ ಲಿಂಕ್ ಕ್ಲಿಕ್ ಮಾಡಬೇಡಿ. ಒಂದ್ವೇಳೆ ಗ್ರಾಹಕರು ಮೋಸ ಹೋಗಿದ್ದಲ್ಲಿ ತಕ್ಷಣವೇ ಅದರ ಬಗ್ಗೆ ಸೈಬರ್ ಅಪರಾಧಕ್ಕೆ ತಿಳಿಸಿ ಎಂದಿದೆ.
ಅದ್ರಂತೆ, ಬ್ಯಾಂಕ್ ತಪ್ಪದೇ ಈ ಮೂರು ಕೆಲಸಗಳನ್ನ ಮಾಡುವಂತೆ ಹೇಳಿದೆ..!
1. ಯಾವುದೇ ಅಜ್ಞಾತ ಲಿಂಕ್ ಅನ್ನು ಕ್ಲಿಕ್ ಮಾಡುವುದನ್ನ ನಿಲ್ಲಿಸಿ.
2.ಬ್ಯಾಂಕ್ ಎಂದಿಗೂ ಕೆವೈಸಿ ನವೀಕರಣಕ್ಕಾಗಿ ಲಿಂಕ್ ಕಳುಹಿಸುವುದಿಲ್ಲ.
3. ನಿಮ್ಮ ಮೊಬೈಲ್ ಮತ್ತು ವೈಯಕ್ತಿಕ ಮಾಹಿತಿಯನ್ನ ಯಾರೊಂದಿಗೂ ಹಂಚಿಕೊಳ್ಳಬೇಡಿ.
ಮನೆಯಲ್ಲಿ ಕುಳಿತು KYC ನವೀಕರಿಸಿ..!
ವಿಶೇಷವೆಂದರೆ, ಕರೋನಾ ಸಾಂಕ್ರಾಮಿಕದ ಮಧ್ಯೆ, ಎಸ್‌ಬಿಐ ತನ್ನ ಖಾತೆದಾರರಿಗೆ ಕೆವೈಸಿ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ನವೀಕರಿಸುವ ಸೌಲಭ್ಯವನ್ನು ನೀಡಿದೆ. ಕೆವೈಸಿ ಅಪ್‌ಡೇಟ್‌ಗಾಗಿ, ಗ್ರಾಹಕರು ತಮ್ಮ ವಿಳಾಸ ಪುರಾವೆ ಮತ್ತು ಗುರುತಿನ ಚೀಟಿಯನ್ನು ನೋಂದಾಯಿತ ಇಮೇಲ್ ಅಥವಾ ಪೋಸ್ಟ್ ಮೂಲಕ ಕಳುಹಿಸಬೇಕಾಗುತ್ತದೆ.ನೀವು ನಿಮ್ಮ ಡಾಕ್ಯುಮೆಂಟ್‌ಗಳನ್ನ ಅದೇ ಮೇಲ್ ಐಡಿಯಿಂದ ಕಳುಹಿಸುತ್ತೀರಿ, ಅದನ್ನು ನೀವು ಬ್ಯಾಂಕಿನಲ್ಲಿ ನವೀಕರಿಸಿದ್ದೀರಿ. ಆ ಇಮೇಲ್‌ನಿಂದ, ದಾಖಲೆಗಳ ಸ್ಕ್ಯಾನ್ ಮಾಡಿದ ನಕಲನ್ನ ಬ್ಯಾಂಕ್ ಶಾಖೆಯ ಇಮೇಲ್ ವಿಳಾಸಕ್ಕೆ ಕಳುಹಿಸಬೇಕಾಗುತ್ತದೆ.
(ಮಾಹಿತಿ ಕೃಪೆ Kannada News Now)
ಅಂಬಾನಿ ನಿವಾಸದ ಬಳಿ ಸ್ಫೋಟಕ ಪ್ರಕರಣ: ಎನ್‌ಐಎಯಿಂದ ಮಾಜಿ ಎನ್ ಕೌಂಟರ್ ಸ್ಪೆಶಲಿಸ್ಟ್ ಪ್ರದೀಶ್ ಶರ್ಮಾ ಬಂಧನ
ಎನ್‌ಐಎ ತಂಡವೊಂದು ಬುಧವಾರ ತಡರಾತ್ರಿ ಮುಂಬೈ ಬಳಿಯ ಲೋನಾವ್ಲಾ ಬಳಿಯಿಂದ ಶರ್ಮಾ ಅವರನ್ನು ಎತ್ತಿಕೊಂಡು ಹೋಗಿದ್ದು, ವಿಚಾರಣೆಗಾಗಿ ದಕ್ಷಿಣ ಮುಂಬೈನ ಏಜೆನ್ಸಿಯ ಕೇಂದ್ರ ಕಚೇರಿಗೆ ಕರೆತರಲಾಯಿತು ಎಂದು ಅವರು ಹೇಳಿದರು.
ಅಂಧೇರಿಯ ಜೆ ಬಿ ನಗರದಲ್ಲಿರುವ ಆತನ ನಿವಾಸದ ಮೇಲೆ ಬೆಳಗ್ಗೆ 6 ಗಂಟೆ ಸುಮಾರಿಗೆ ಎನ್ ಐಎ ದಾಳಿ ನಡೆಸಿದೆ. ಹಲವು ಗಂಟೆಗಳ ಕಾಲ ಶೋಧ ಕಾರ್ಯಾಚರಣೆ ನಡೆಸಿದ ಕೆಲವೊಂದು ಮಹತ್ವದ ದಾಖಲೆಗಳನ್ನು ಆತನ ಮನೆಯಿಂದ ವಶಕ್ಕೆ ಪಡೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಕೆಲ ತಾಸುಗಳ ವಿಚಾರಣೆ ಬಳಿಕ ಗುರುವಾರ ಆತನನ್ನು ಬಂಧಿಸಲಾಗಿದೆ. ವೈದ್ಯಕೀಯ ಪರೀಕ್ಷೆ ಪೂರ್ಣಗೊಂಡ ಬಳಿಕ ಶರ್ಮಾನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತದೆ. ಈ ಪ್ರಕರಣದಲ್ಲಿ ಎನ್ ಐಎ ಬಂಧಿಸಿರುವ ಪೊಲೀಸ್ ಇಲಾಖೆ ಸಿಬ್ಬಂದಿ ಪೈಕಿ ಶರ್ಮಾ ಐದನೇಯವರು ಮತ್ತು ಎಂಟನೇ ವ್ಯಕ್ತಿಯಾಗಿದ್ದಾರೆ.
(ಮಾಹಿತಿ ಕೃಪೆ ಕನ್ನಡ ಪ್ರಭ)
ಉಸ್ತುವಾರಿ ಸಚಿವರ ಬದಲಿಸದಿದ್ದರೆ ಉಗ್ರ ಹೋರಾಟ: ಶಾಸಕ ಸೋಮಶೇಖರ್ ರೆಡ್ಡಿ ಎಚ್ಚರಿಕೆ
ಹೊಸಪೇಟೆ (ವಿಜಯನಗರ): 'ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರನ್ನು ಬದಲಿಸಿ, ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಅವರಿಗೆ ನೀಡಬೇಕು. ಜತೆಗೆ ಅವರಿಗೆ ಉಪಮುಖ್ಯಮಂತ್ರಿ ಹುದ್ದೆಯೂ ನೀಡಬೇಕು. ಒಂದುವೇಳೆ ಉಸ್ತುವಾರಿ ಬದಲಿಸದಿದ್ದರೆ ಉಗ್ರ ಹೋರಾಟ ನಡೆಸುವೆ' ಎಂದು ಬಳ್ಳಾರಿ ನಗರ ಬಿಜೆಪಿ ಶಾಸಕ ಜಿ. ಸೋಮಶೇಖರ್ ರೆಡ್ಡಿ ಎಚ್ಚರಿಕೆ ನೀಡಿದರು.
'ಈ ಹಿಂದೆಯೇ ಶ್ರೀರಾಮುಲು ಅವರಿಗೆ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಮಾಡಿದ್ದರೆ ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಸೋಲುತ್ತಿರಲಿಲ್ಲ. ಪಾಲಿಕೆ ಚುನಾವಣೆಯಲ್ಲಿ ಸೋತ ನಂತರ ಪಕ್ಷದ ಯಾರೊಬ್ಬರೂ ಕೂಡ ಯಾಕೆ ಸೋಲಾಯ್ತು ಎಂದು ಕೇಳಲಿಲ್ಲ. ಈ ಬಗ್ಗೆ ನನಗೆ ಅಸಮಾಧಾನ ಇದೆ' ಎಂದು ಗುರುವಾರ ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. 'ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಬಗ್ಗೆ ಬೇಸರ ಇದೆ. ಬಿ.ಎಸ್. ಯಡಿಯೂರಪ್ಪನವರು ಇನ್ನೆರಡು ವರ್ಷ ಮುಖ್ಯಮಂತ್ರಿಯಾಗಿ ಮುಂದುವರೆದರೆ ಒಳ್ಳೆಯದು. ಯಾರಿಗಾದರೂ ಒಂದುವೇಳೆ ಅಸಮಾಧಾನ ಇದ್ದರೆ ಅದನ್ನು ವ್ಯಕ್ತಪಡಿಸಲು ಇದು ಸೂಕ್ತ ಸಮಯವಲ್ಲ.
ಕೋವಿಡ್‌ನಿಂದ ಜನ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅದರ ನಿರ್ವಹಣೆಗೆ ಎಲ್ಲರೂ ಒತ್ತುಕೊಡಬೇಕಿದೆ. ನಾನು ಅರುಣ್ ಸಿಂಗ್ ಅವರನ್ನು ಭೇಟಿಯಾಗಲು ಬೆಂಗಳೂರಿಗೆ ತೆರಳುತ್ತಿಲ್ಲ. ಸಚಿವ ಸ್ಥಾನದ ಆಕಾಂಕ್ಷಿಯೂ ಅಲ್ಲ. ಬಳ್ಳಾರಿಯಲ್ಲಿ ಮಾಡುವುದಕ್ಕೆ ಬೇಕಾದಷ್ಟು ಕೆಲಸವಿದೆ. ಆಂಜನೇಯಸ್ವಾಮಿ, ಕನಕದುರ್ಗಮ್ಮದೇವಿ, ಕೋಟೆ ಮಲ್ಲೇಶ್ವರ ದೇವರು ಆಶಿರ್ವಾದ ಮಾಡಿದರೆ ಸಚಿವ ಸ್ಥಾನ ತಾನಾಗಿಯೇ ಸಿಗುತ್ತೆ' ಎಂದು ಹೇಳಿದರು.
(ಮಾಹಿತಿ ಕೃಪೆ ಪ್ರಜಾವಾಣಿ )
ಕೇಂದ್ರ ಸರ್ಕಾರದಿಂದ ರೈತ ಸಮುದಾಯಕ್ಕೆ ಗುಡ್ ನ್ಯೂಸ್ : 'DAP ರಸಗೊಬ್ಬರ' ಸಬ್ಸಿಡಿ 700ಕ್ಕೆ ಹೆಚ್ಚಿಸಿದ ಕೇಂದ್ರ ಸರ್ಕಾರ
ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಮಹತ್ವದ ಕೇಂದ್ರ ಸಚಿವ ಸಂಪುಟ ಸಭೆ ನಡೆಯಿತು. ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ, 2021-22ನೇ ವರ್ಷದ ಫಾಸ್ಫಾಟಿಕ್ ಮತ್ತು ಪೊಟ್ಯಾಸಿಕ್ (ಪಿ&ಕೆ) ರಸಗೊಬ್ಬರಗಳಿಗೆ 'ಪೋಷಕಾಂಶ ಆಧಾರಿತ ಸಬ್ಸಿಡಿ ದರ'ಗಳನ್ನು ನಿಗದಿಪಡಿಸುವ ರಸಗೊಬ್ಬರ ಇಲಾಖೆಯ ಪ್ರಸ್ತಾಪಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
(ಮಾಹಿತಿ ಕೃಪೆ Kannada News Now)
ತುಪ್ಪ ಸೇವನೆಯಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನವಿದೆ ಗೊತ್ತಾ.?
ತುಪ್ಪ ಸೇವನೆಯಿಂದ ನಮ್ಮ ಆರೋಗ್ಯಕ್ಕೆ ಸಾಕಷ್ಟು ಲಾಭವಿದೆ. ಆದರೆ ಇತ್ತೀಚೆಗೆ ಕೊಬ್ಬು ಎಂದು ಕೆಲವರು ಇದನ್ನು ಸೇವಿಸುವುದಿಲ್ಲ.
ಶುದ್ಧವಾದ ದೇಸಿ ತುಪ್ಪ ದೇಹಕ್ಕೆ ಯಾವುದೇ ಹಾನಿಕಾರಕವಲ್ಲ ಎಂದು ಸಂಶೋಧನೆಗಳು ಕೂಡ ಹೇಳುತ್ತಿವೆ. ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿಡಲು ಹಾಗೂ ನಮ್ಮ ಹಾರ್ಮೋನುಗಳನ್ನು ಸಮತೋಲನ ವ್ಯವಸ್ಥೆಯಲ್ಲಿಡಲು ತುಪ್ಪ ಮಹತ್ವದ ಪಾತ್ರ ವಹಿಸುತ್ತದೆ.
*ಚಳಿಗಾಲದಲ್ಲಿ ತುಪ್ಪ ಸೇವಿಸುವುದರಿಂದ ದೇಹವನ್ನು ಬೆಚ್ಚಗಿರಿಸಿಕೊಳ್ಳಬಹುದು. ಚಳಿಗಾಲದಲ್ಲಿ ತುಪ್ಪದಿಂದ ಮಾಡಿದ ಖಾದ್ಯಗಳನ್ನು ಹಿತಮಿತವಾಗಿ ಸೇವಿಸಿದರೆ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
*ಶೀತ, ಕಟ್ಟಿದ ಮೂಗಿನ ಸಮಸ್ಯೆ ಹೆಚ್ಚಾಗಿ ಮಳೆಗಾಲ, ಚಳಿಗಾಲದಲ್ಲಿ ಕಾಣಿಸಿಕೊಳ್ಳುತ್ತದೆ. ಶುದ್ಧವಾದ ದೇಸಿ ತುಪ್ಪವನ್ನು ಬಿಸಿ ಮಾಡಿ. ಅದು ಉಗುರು ಬೆಚ್ಚಗಿರುವಾಗ ಒಂದೊಂದು ಹನಿಯನ್ನು ಮೂಗಿಗೆ ಹಾಕಿದರೆ ಕಟ್ಟಿದ ಮೂಗಿನ ಸಮಸ್ಯೆ ನಿವಾರಣೆಯಾಗುತ್ತದೆ. ಜತೆಗೆ ಗಂಟಲಿನ ಕಿರಿಕಿರಿ ಕೂಡ ಕಡಿಮೆಯಾಗುತ್ತದೆ.
* ಇನ್ನು ಬಾಣಂತಿಯರಿಗೆ ತುಪ್ಪದಿಂದ ಮಾಡಿದ ಲಡ್ಡುಗಳನ್ನು ನೀಡಿದರೆ ಅವರಲ್ಲಿ ಶಕ್ತಿ ಹೆಚ್ಚುತ್ತದೆ.
* ದೇಹದ ತೂಕವನ್ನು ಇಳಿಸಿಕೊಳ್ಳಬಯಸುವವರಿಗೆ ತುಪ್ಪ ಕೂಡ ಒಂದು ಅದ್ಭುತವಾದ ಟಿಪ್ಸ್. ತುಪ್ಪದಲ್ಲಿ ದೇಹಕ್ಕೆ ಬೇಕಾದ ಒಳ್ಳೆಯ ಕೊಬ್ಬು ಇದೆ. ಇದನ್ನು ಸೇವಿಸುವುದರಿಂದ ದೇಹದಲ್ಲಿರುವ ಟಾಕ್ಸಿನ್ ಅನ್ನು ಹೊರ ಹಾಕುತ್ತದೆ.
*ನಿಯಮಿತವಾಗಿ ತುಪ್ಪ ಸೇವಿಸುವುದರಿಂದ ಜೀರ್ಣಕ್ರೀಯೆ ಚೆನ್ನಾಗಿ ಆಗುತ್ತದೆ. ಮಲಬದ್ಧತೆ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು. ಒಂದು ಗ್ಲಾಸ್ ಬಿಸಿ ಹಾಲಿಗೆ ಒಂದು ಟೀ ಸ್ಪೂನ್ ತುಪ್ಪ ಹಾಕಿ ಕುಡಿದರೆ ಮಲಬದ್ಧತೆ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು.
*ತುಪ್ಪ ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮಕ್ಕಳು ಸ್ವಲ್ಪ ಜಾಸ್ತಿ ಸೇವಿಸಿದರೆ ಒಳ್ಳೆಯದು. ಹಾಗೇ ದೊಡ್ಡವರು ಹಿತಮಿತವಾಗಿ ಸೇವಿಸಬೇಕು. ಇದು ಒಳ್ಳೆಯ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ.
(ಮಾಹಿತಿ ಕೃಪೆ ಕನ್ನಡದುನಿಯಾ)
ʼಗ್ಯಾಸ್ಟ್ರಿಕ್ʼ ಸಮಸ್ಯೆಗೆ ಯೋಗಾಸನದಿಂದ ಮುಕ್ತಿ
ಸೇವಿಸುವ ಆಹಾರದಲ್ಲಿ ಹೆಚ್ಚು ಕಡಿಮೆಯಾದರೆ, ಪೌಷ್ಟಿಕಾಂಶದ ಕೊರತೆಯಾದರೆ, ಸಮಯದಲ್ಲಿ ಬದಲಾವಣೆಯಾದರೆ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗುತ್ತದೆ. ಕೆಲವು ಯೋಗಾಸನಗಳ ಮೂಲಕ ಈ ಸಮಸ್ಯೆಯಿಂದ ಮುಕ್ತಿ ಪಡೆದುಕೊಳ್ಳಬಹುದು.
ಪಶ್ಚಿಮೋತ್ತಾಸನದಿಂದ ನಿಮ್ಮ ಕಿಬ್ಬೊಟ್ಟೆಯ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ ಹಾಗೂ ಇದರಿಂದ ಸೊಂಟದ ಭಾಗದ ಕೊಬ್ಬು ಕರಗುತ್ತದೆ. ಋತುಚಕ್ರದ ಸಮಸ್ಯೆಯನ್ನು ಇದು ಸರಿಪಡಿಸುತ್ತದೆ. ಜೀರ್ಣಕ್ಕೆ ಸಂಬಂಧಿಸಿದ ತೊಂದರೆಗಳನ್ನು ದೂರ ಮಾಡುತ್ತದೆ.
ನೇಗಿಲು ಭಂಗಿ ಅಥವಾ ಹಲಾಸನದಿಂದಲೂ ಸ್ನಾಯುಗಳ ಒತ್ತಡವನ್ನು ದೂರ ಮಾಡಬಹುದು. ಇದು ತೂಕ ನಿಯಂತ್ರಿಸುತ್ತದೆ. ಹಾಗೂ ಗ್ಯಾಸ್ಟ್ರಿಕ್ ಸಮಸ್ಯೆಗಳಿಂದ ಮುಕ್ತಿ ನೀಡುತ್ತದೆ.
ವಜ್ರಾಸನ ಉಸಿರಾಟದ ಪ್ರಕ್ರಿಯೆಯನ್ನು ಸುಧಾರಿಸುತ್ತದೆ. ಪವನಮುಕ್ತಾಸನ ಕೂಡಾ ದೇಹದಿಂದ ಆಸಿಡ್ ಹೊರಹಾಕುವ ಅತ್ಯುತ್ತಮ ಭಂಗಿ. ಇದು ಮಲಬದ್ಧತೆಯಿಂದ ಮುಕ್ತಿ ನೀಡುತ್ತದೆ. ಹೊಟ್ಟೆಯುಬ್ಬರ ಆಗದಂತೆ ನೋಡಿಕೊಳ್ಳುತ್ತದೆ. ಜೀರ್ಣಕ್ರಿಯೆಯನ್ನೂ ಚುರುಕುಗೊಳಿಸುತ್ತದೆ.
(ಮಾಹಿತಿ ಕೃಪೆ ಕನ್ನಡದುನಿಯಾ)
ʼಆರ್ಥಿಕʼ ಚೇತರಿಕೆ ಕುರಿತಂತೆ RBI ನಿಂದ ಮಹತ್ವದ ಹೇಳಿಕೆ
"ಮುಂದಿನ ದಿನಗಳಲ್ಲಿ ಲಸಿಕಾ ಕಾರ್ಯಕ್ರಮದ ವೇಗ ಹಾಗೂ ಮಟ್ಟವು ಆರ್ಥಿಕ ಚೇತರಿಕೆಯ ಗತಿಯನ್ನು ನಿರ್ಧರಿಸಲಿದೆ. ಹಿಂದಿನಿಂದ ಚಾಲ್ತಿಯಲ್ಲಿರುವ ಅಡಚಣೆಗಳನ್ನು ಮೀರಿ ಸಾಂಕ್ರಮಿಕದ ಸಂಕಷ್ಟದಿಂದ ಆರ್ಥಿಕತೆಯ ಪುಟಿದೇಳುವ ಕ್ಷಮತೆ ಹೊಂದಿದೆ" ಎಂದು ಆರ್‌ಬಿಐ ತನ್ನ ಬುಲೆಟಿನ್ ಮೂಲಕ ತಿಳಿಸಿದೆ.
"ಪ್ರಸಕ್ತ ವಿಶ್ಲೇಷಣೆಯಂತೆ, ಎರಡನೇ ಅಲೆಯಿಂದ ಉಂಟಾದ ನಷ್ಟವು ಮುಖ್ಯವಾಗಿ ದೇಶೀ ಬೇಡಿಕೆ ಮೇಲೆ ಪರಿಣಾಮ ಬೀರಲಿದೆ. ಮತ್ತೊಂದು ಕಡೆಯಲ್ಲಿ, ಪೂರೈಕೆ ಷರತ್ತುಗಳ ಅನೇಕ ಆಯಾಮಗಳಾದ - ಕೃಷಿ ಮತ್ತು ಸಂಪರ್ಕರಹಿತ ಸೇವೆಗಳು ಚೇತರಿಸಿಕೊಳ್ಳುತ್ತಿವೆ. ಇದೇ ವೇಳೆ, ಸಾಂಕ್ರಮಿಕದ ನಿರ್ಬಂಧಗಳ ನಡುವೆಯೂ ಕೈಗಾರಿಕಾ ರಫ್ತುಗಳು ಕಳೆದ ವರ್ಷಕ್ಕೆ ಹೋಲಿಸಿದರೆ ಬಹಳಷ್ಟು ವೃದ್ಧಿಯಾಗಿವೆ" ಎಂದು ಆರ್‌ಬಿಐನ ಬುಲೆಟಿನ್ ತಿಳಿಸಿದೆ.
(ಮಾಹಿತಿ ಕೃಪೆ ಕನ್ನಡದುನಿಯಾ )
ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ ಯುವತಿ ಪ್ರಾಣ ಉಳಿಸಲು ನೆರವಾಯ್ತು ಶ್ವಾನ
ಸೇತುವೆ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದ ಯುವತಿಯೊಬ್ಬರನ್ನು ರಕ್ಷಿಸಿದ ಬ್ರಿಟನ್‌ನ ನಾಯಿಯೊಂದನ್ನು ಹೀರೋ ಎಂದು ನೆಟ್ಟಿಗರು ಕೊಂಡಾಡಿದ್ದಾರೆ.
ಡಿಗ್ಬಿ ಹೆಸರಿನ ಈ ನಾಯಿಯ ಬಗ್ಗೆ ಪರಿಚಯ ಕೊಟ್ಟಿರುವ ಡೆವೋನ್ ಮತ್ತು ಸೋಮರ್ಸೆಟ್ ಅಗ್ನಿ ಮತ್ತು ರಕ್ಷಣಾ ಸೇವೆ ಟ್ವೀಟ್ ಒಂದನ್ನು ಮಾಡಿದ್ದು, "ಇದು ಡಿಗ್ಬಿ. ಇಂದು ಈತ ಅಸಾಧಾರಣ ಕೆಲಸವೊಂದನ್ನು ಮಾಡಿದ್ದು, ಎಕ್ಸ್ಟರ್ ಬಳಿಯ ಎಂ5 ಮೇಲಿನ ಸೇತುವೆ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳಲು ಆಲೋಚಿಸಿದ ಯುವತಿಯೊಬ್ಬರನ್ನು ರಕ್ಷಿಸಿದ್ದಾನೆ" ಎಂದು ತಿಳಿಸಿದ್ದಾರೆ.
ತನ್ನ 'ಡಿಫ್ಯೂಸಿಂಗ್ ಸೆಶನ್‌ಗಳ ಮೂಲಕ ಡಿಗ್ಬಿ, ಭಾರೀ ನೋವಿನಲ್ಲಿರುವ ಮಂದಿಗೆ ಥೆರಪಿ ಕೊಡುತ್ತಾನೆ" ಎಂದಿರುವ ಇಲಾಖೆ, "ಆತ್ಮಹತ್ಯೆಯ ಆಲೋಚನೆ ಮಾಡುತ್ತಿದ್ದ ಯುವತಿ ಡಿಗ್ಬಿಯನ್ನು ನೋಡಿ ಸ್ಮೈಲ್ ಮಾಡಿದ್ದಾಳೆ. ಇದರಿಂದಾಗಿ ಸಂವಹನವೊಂದು ಆರಂಭಗೊಂಡಿತು" ಎಂದು ಹೇಳಿದ್ದು, ಆತನ ಸೇವೆಯ ಬಗ್ಗೆ ವಿವರಿಸಿದೆ.
"ಡಿಗ್ಬಿಯನ್ನು ಭೇಟಿ ಮಾಡಲು ಸೇತುವೆಯಿಂದ ಇಳಿದು ಬರಲು ಸಾಧ್ಯವೇ ಎಂದು ಯುವತಿಯನ್ನು ಕೇಳಿದಾಗ ಆಕೆ ಇಳಿದು ಬಂದಿದ್ದಾರೆ. ಆಕೆಯ ತ್ವರಿತ ಚೇತರಿಕೆಗೆ ಹಾರೈಸುತ್ತೇವೆ" ಎಂದು ಟ್ವೀಟ್‌ನಲ್ಲಿ ತಿಳಿಸಲಾಗಿದೆ. ಇದೇ ವೇಳೆ ಡಿಗ್ಬಿಯ ತರಬೇತುದಾರ ಮ್ಯಾಟ್‌ಗೆ ಧನ್ಯವಾದ ತಿಳಿಸಲಾಗಿದೆ.
(ಮಾಹಿತಿ ಕೃಪೆ ಕನ್ನಡದುನಿಯಾ )
ಮಂಡಗದ್ದೆಯಲ್ಲಿ ಶುರುವಾಗಿದೆ ʼಪಕ್ಷಿʼಗಳ ಕಲರವ
ಮಳೆಗಾಲದ ಆರಂಭದವರೆಗೂ ಇಲ್ಲಿದ್ದು, ಅವು ಹೊರಟು ಹೋಗುತ್ತವೆ. ಕೆಲವು ಪಕ್ಷಿಗಳು ಇಲ್ಲಿಯೇ ಬೀಡು ಬಿಡುತ್ತವೆ. ಗಾಜನೂರು ತುಂಗಾ ಜಲಾಶಯ ಎತ್ತರಿಸಿದ ನಂತರ ನೀರಿನಮಟ್ಟ ಏರಿಕೆಯಾಗಿ ಪಕ್ಷಿಧಾಮಕ್ಕೆ ಹಾನಿಯಾಗಿತ್ತು. ನಂತರದಲ್ಲಿ ಪಕ್ಷಿಗಳ ಸುರಕ್ಷತೆಗೆ ಒತ್ತು ನೀಡಲಾಗಿದ್ದು, ಸುತ್ತಲೂ ಕಟ್ಟೆಯನ್ನು ಎತ್ತರಿಸಲಾಗಿದೆ. ಇಲ್ಲಿಯೇ ಪಕ್ಷಿಗಳು ಬೀಡುಬಿಟ್ಟಿರುತ್ತವೆ. ಪಕ್ಷಿಧಾಮದ ಜೊತೆಗೆ ಜಲಾಶಯ, ತುಂಗಾನದಿ ಸೊಬಗನ್ನು ಕಣ್ತುಂಬಿಕೊಳ್ಳಬಹುದಾಗಿದೆ.
ಶಿವಮೊಗ್ಗದಿಂದ ತೀರ್ಥಹಳ್ಳಿ ರಸ್ತೆಯಲ್ಲಿ ಸಾಗಿದಾಗ, ಹರಕೆರೆ ಶಿವಾಲಯ, ಗಾಜನೂರು ಜಲಾಶಯ, ಮಂಡಗದ್ದೆ ಪಕ್ಷಿಧಾಮ, ಸಕ್ರೆಬೈಲು ಆನೆ ಬಿಡಾರ ಸಿಗುತ್ತದೆ. ಆನೆ ಬಿಡಾರದಲ್ಲಿ ಆನೆಗಳನ್ನು ನೋಡಬಹುದಾಗಿದೆ. ಸಾಧ್ಯವಾದರೆ ಕೊರೊನಾ ಲಾಕ್ ಡೌನ್ ಜಂಜಾಟ ಮುಗಿದ ಬಳಿಕ ಒಮ್ಮೆ ಹೋಗಿಬನ್ನಿ.
(ಮಾಹಿತಿ ಕೃಪೆ ಕನ್ನಡದುನಿಯಾ )
Tuesday, June 15, 2021
BIG NEWS : ಹುಟ್ಟೂರಿನಲ್ಲಿ ಮಣ್ಣಲ್ಲಿ ಮಣ್ಣಾದ 'ನಟ ಸಂಚಾರಿ ವಿಜಯ್'
ಚಿಕ್ಕಮಗಳೂರು : ಬೈಕ್ ಅಪಘಾತದಲ್ಲಿ ಸಾವು-ಬದುಕಿನ ನಡುವೆ ಹೋರಾಡಿ, ಮೃತಪಟ್ಟಂತ ನಟ ಸಂಚಾರಿ ವಿಜಯ್ ಅವರ ಮೃತ ದೇಹವನ್ನು, ಅಂತ್ಯಕ್ರಿಯೆಗಾಗಿ ಹುಟ್ಟೂರು ಪಂಚನಹಳ್ಳಿಗೆ ತರಲಾಗಿದೆ. ನಟ ಸಂಚಾರಿ ವಿಜಯ್ ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕಾಗಿ ಪಂಚನಹಳ್ಳಿಯ ಗ್ರಾಮಸ್ಥರು ಸೇರಿದಂತೆ ಅಕ್ಕ ಪಕ್ಕದ ಊರಿನವರು ವೀಕ್ಷಿಸಲು ಮುಗಿ ಬಿದ್ದಿದ್ದರು. ಈ ಬಳಿಕ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿತು. ಈ ಮೂಲಕ ನಟ ಸಂಚಾರಿ ವಿಜಯ್ ಮಣ್ಣಲ್ಲಿ ಮಣ್ಣಾದರು.
ನಟ ಸಂಚಾರಿ ವಿಜಯ್ ಅವರು ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು, ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಿಗ್ಗೆ 3.34ಕ್ಕೆ ಸಾವನ್ನಪ್ಪಿದ್ದರು. ಇಂತಹ ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕಾಗಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಬೆಳಿಗ್ಗೆ 8 ರಿಂದ 10 ಗಂಟೆಯವರೆಗೆ ವ್ಯವಸ್ಥೆ ಮಾಡಲಾಗಿತ್ತು.
ಈ ಬಳಿಕ, ಅವರ ಪಾರ್ಥೀವ ಶರೀರವನ್ನು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಪಂಚನಹಳ್ಳಿಗೆ ತರಲಾಗಿದೆ.
ನಟ ಸಂಚಾರಿ ವಿಜಯ್ ಅವರ ಪಾರ್ಥೀವ ಶರೀರ ಅವರ ಹುಟ್ಟೂರಿಗೆ ಆಗಮಿಸುತ್ತಿದ್ದಂತೇ, ಗ್ರಾಮಸ್ಥರು ಅಂತಿಮ ದರ್ಶನಕ್ಕಾಗಿ ಮುಗಿ ಬಿದ್ದಿದ್ದಾರೆ. ಪಂಚನಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ನಟ ಸಂಚಾರಿ ವಿಜಯ್ ಅವರ ಪಾರ್ಥೀವ ಶರೀರರದ ಅಂತಿಮ ದರ್ಶನ ಪಡೆಯುತ್ತಿದ್ದು, ಈ ಬಳಿಕ ಇಂದು ಸಂಜೆ ಸಕಲ ಸರ್ಕಾರಿ ಗೌರವಗಳೊಂದಿಗೆ, ಹುಟ್ಟೂರು ಪಂಚನಹಳ್ಳಿಯಲ್ಲಿ ನಟ ಸಂಚಾರಿ ವಿಜಯ್ ಅವರ ಮೃತದೇಹದ ಅಂತ್ಯಕ್ರಿಯೆ, ಅವರ ಸ್ನೇಹಿತ ರಘು ತೋಟದಲ್ಲಿ ನೆರವೇರಲಿದೆ.
ಈಗಾಗಲೇ ನಟ ಸಂಚಾರಿ ವಿಜಯ್ ಅವರ ಅಂತ್ಯಕ್ರಿಯೆಗೆ ಕುಪ್ಪೂರು ಯತೀಶ್ವರ ಶಿವಾಚಾರ್ಯಶ್ರೀಗಳ ನೇತೃತ್ವದಲ್ಲಿ ನೆರವೇರಲಿದೆ. ಇದಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಇಂದು ಸಂಜೆ ವೀರಶೈವ ಲಿಂಗಾಯತ ಸಂಪ್ರದಾಯದ ವಿಧಿವಿಧಾನದಂತೆ ಅವರ ಅಂತ್ಯಕ್ರಿಯೆ, ನಟ ಸಂಚಾರಿ ವಿಜಯ್ ಗೆಳೆಯ ರಘು ಅವರ ತೋಟದಲ್ಲಿ ನೆರವೇರಲಿದೆ. ಈ ಬಳಿಕ ಸಮಾಧಿಯಲ್ಲಿ ಇರಿಸಿ, ವಿಲ್ವ ಪತ್ರೆ, ವಿಭೂತಿಗಳಿಂದ ವಿಧಿ-ವಿಧಾನ ನರೆವೇರಿಸಿ, ಮಣ್ಣಮಾಡಲಾಯಿತು. ಈ ಮೂಲಕ ಬಾರದ ಲೋಕಕ್ಕೆ ನಟ ಸಂಚಾರಿ ವಿಜಯ್ ತೆರಳಿದ್ದಾರೆ.
ವರದಿ : ವಸಂತ ಬಿ ಈಶ್ವರಗೆರೆ
(ಮಾಹಿತಿ ಕೃಪೆ Kannada News Now)
ಸ್ವಗ್ರಾಮ ಪಂಚನಹಳ್ಳಿಯಲ್ಲಿ ಸಂಚಾರಿ ವಿಜಯ್ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ
ಚಿಕ್ಕಮಗಳೂರು, ಜೂನ್ 15: ರಾಷ್ಟ್ರ ಪ್ರಶಸ್ತಿ ನಟ ಸಂಚಾರಿ ವಿಜಯ್ ವಿಧಿವಶ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕಿನ ಸ್ವಗ್ರಾಮ ಪಂಚನಹಳ್ಳಿಯಲ್ಲಿ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಲಿಂಗಾಯತ ಸಮುದಾಯದ ವಿಧಿ ವಿಧಾನದಂತೆ ಅಂತ್ಯಸಂಸ್ಕಾರ ಮಾಡಲಾಗುತ್ತಿದ್ದು, ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಪಂಚನಹಳ್ಳಿ ಗ್ರಾಮ ಸಂಚಾರಿ ವಿಜಯ್ ಅವರ ಹುಟ್ಟೂರಾಗಿದೆ.
ಸಂಚಾರಿ ವಿಜಯ್ ಸ್ನೇಹಿತ ರಘು ತೋಟದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದ್ದು, ಅದಕ್ಕಾಗಿ ಸಿದ್ಧತೆ ಮಾಡಲಾಗುತ್ತಿದೆ. ಕೆಲವೇ ಗಂಟೆಗಳಲ್ಲಿ ನಟ ವಿಜಯ್ ಹುಟ್ಟೂರು ಪಂಚನಹಳ್ಳಿಯಲ್ಲಿ ಮಣ್ಣಲ್ಲಿ ಮಣ್ಣಾಗಲಿದ್ದಾರೆ.
ಪಂಚನಹಳ್ಳಿಗೆ ಬಂದಾಗ ಇದೇ ತೋಟದಲ್ಲಿ ಸಂಚಾರಿ ವಿಜಯ್ ಕಾಲ ಕಳೆಯುತ್ತಿದ್ದ ಎನ್ನಲಾಗಿದೆ. ಮಂಗಳವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಅಂತಿಮ ವಿಧಿ ವಿಧಾನ ನಡೆಯಲಿದ್ದು, ಕುಪ್ಪೂರು ಮಠದ ಮಠಾಧೀಶರ ನೇತೃತ್ವದಲ್ಲಿ ಅಂತ್ಯಸಂಸ್ಕಾರಕ್ಕೆ ತಯಾರಿ ಮಾಡಲಾಗುತ್ತಿದೆ.
ವೀರಶೈವ ಲಿಂಗಾಯಿತ ವಿಧಿವಿಧಾನ ಪ್ರಕಾರ ಅಂತ್ಯಕ್ರಿಯೆ
"ನಟ ಸಂಚಾರಿ ವಿಜಯ್ ಅವರ ಅಂತ್ಯಕ್ರಿಯೆಯನ್ನು ವೀರಶೈವ ಲಿಂಗಾಯಿತ ಸಮುದಾಯದ ವಿಧಿವಿಧಾನಗಳ ಪ್ರಕಾರ ನಡೆಸಲಾಗುವುದು,'' ಎಂದು ಕುಪ್ಪೂರು ಮಠದ ಯತೀಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಈ ಕುರಿತು ಪಂಚನಹಳ್ಳಿಯಲ್ಲಿ ಮಾತನಾಡಿದ ಅವರು, "ವೀರಶೈವ ಲಿಂಗಾಯತ ಸಮುದಾಯದ ಷೋಡಶ ಕ್ರಿಯೆಗಳ ಮೂಲಕ ಅಂತ್ಯಸಂಸ್ಕಾರವನ್ನು ನೆರವೇರಿಸಲಾಗುವುದು. ವೀರಶೈವ ಸಮುದಾಯದ ಪ್ರಕಾರ ಲಿಂಗೈಕ್ಯ, ಶಿವೈಕ್ಯರಾದರು ಎಂಬ ರೂಪದಲ್ಲಿ ಭಾವಿಸಿಕೊಂಡು ಬಿಲ್ವಪತ್ರೆ, ವಿಭೂತಿ ಹಾಗೂ ಪಂಚ ಕಳಸವನ್ನು ಸ್ಥಾಪನೆ ಮಾಡಿಕೊಂಡು, ವಿವಿಧ ಶಾಸ್ತ್ರೋಸ್ತ್ರಗಳ ಅನ್ವಯ ಅಂತ್ಯಕ್ರಿಯೆ ನಡೆಸಲಾಗುವುದು,'' ಎಂದು ತಿಳಿಸಿದರು
ಇದೇ ವೇಳೆ ಮಾತನಾಡಿ, "ಸಂಚಾರಿ ವಿಜಯ್ ಮೃತಪಟ್ಟಿರುವುದು ನಮಗೆ ಆಘಾತ ತಂದಿದೆ. ಅವರ ಸಾವಿನಿಂದ ಕನ್ನಡ ಚಿತ್ರರಂಗಕ್ಕೆ ತುಂಬಲಾಗದ ನಷ್ಟ ಉಂಟಾಗಿದೆ. ಇನ್ನು ಸಂಚಾರಿ ವಿಜಯ್ ಅಭಿನಯ ಅಮೋಘವಾದದ್ದು, ಎಂತಹ ಪಾತ್ರವನ್ನು ನೀಡಿದರೂ, ಅದನ್ನು ಶ್ರದ್ಧೆಯಿಂದ ಮಾಡಿ ಸೈ ಎನಿಸಿಕೊಂಡಿದ್ದರು,'' ಎಂದು ಯತೀಶ್ವರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
(ಮಾಹಿತಿ ಕೃಪೆ Oneindia)
ಮಾಸ್ಕ್ ಇಲ್ಲ, ವ್ಯಕ್ತಿಗತ ಅಂತರವಿಲ್ಲ: ವುಹಾನ್‌ನಲ್ಲಿ 'ಗ್ರಾಜುಯೇನಷ್ ಡೇ' ಸಂಭ್ರಮ
ಕಾರ್ಯಕ್ರಮಕ್ಕೆ ಸುಮಾರು 11000 ಕ್ಕೂ ವಿದ್ಯಾರ್ಥಿಗಳಿಗೆ ಸ್ವಾಗತಕ್ಕಾಗಿ ಅದ್ಧೂರಿ ಸಿದ್ಧತೆ ಮಾಡಲಾಗಿತ್ತು. ಕಾರ್ಯಕ್ರಮ ದಲ್ಲಿ '2020ರ ಪದವೀಧರರಿಗೆ ಸ್ವಾಗತ ಬಯಸುತ್ತೇವೆ. ನಿಮ್ಮೆಲ್ಲರಿಗೂ ಉತ್ತಮ ಭವಿಷ್ಯ ದೊರೆಯಲಿ ಎಂದು ನಾವು ಹಾರೈಸುತ್ತೇವೆ' ಎಂಬ ಸ್ವಾಗತ ಫಲಕವನ್ನು ಹಾಕಲಾಗಿತ್ತು. ನೀಲಿ ಬಣ್ಣದ ನಿಲುವಂಗಿ ಗೌನ್ ಮತ್ತು ತಲೆಗೆ ವಿಶಿಷ್ಟ ಟೊಪಿ ತೊಟ್ಟ ವಿದ್ಯಾರ್ಥಿಗಳು ಯಾವುದೇ ವ್ಯಕ್ತಿಗತ ಅಂತರ ಕಾಯ್ದುಕೊಳ್ಳದೇ, ಮಾಸ್ಕ್ ಧರಿಸದೇ ಕಿಕ್ಕಿರಿದ ಸಾಲುಗಳಲ್ಲಿ ಆಸೀನರಾದ್ದರು.
2019ರ ಕೊನೆಯಲ್ಲಿ ವುಹಾನ್ ನಗರದಲ್ಲಿ ಮೊದಲ ಬಾರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ನಂತರ ಬೀಜಿಂಗ್ ಸೇರಿದಂತೆ ವಿವಿಧ ನಗರಗಳಲ್ಲಿ ಕಟ್ಟುನಿಟ್ಟಿನ ಲಾಕ್‌ಡೌನ್ ಜಾರಿಯಾಯಿತು. 76 ದಿನಗಳ ನಂತರ ಲಾಕ್‌ಡೌನ್ ತೆರವಾದ ನಂತರ, ಏಪ್ರಿಲ್‌ನಲ್ಲಿ ಮತ್ತೆ ಚಟುವಟಿಕೆ ಆರಂಭವಾಯಿತು. ಆದರೆ, ಶಾಲಾ-ಕಾಲೇಜುಗಳಿಗೆ ಮಾತ್ರ ಲಾಕ್‌ಡೌನ್‌ನಿಂದ ವಿನಾಯಿತಿ ನೀಡಿರಲಿಲ್ಲ. ಈ ನಡುವೆ ಕಳೆದ ವರ್ಷ ಜೂನ್ ತಿಂಗಳಲ್ಲಿ ವುಹಾನ್ ವಿಶ್ವವಿದ್ಯಾಲಯದವರು ಆನ್‌ಲೈನ್ ಮೂಲಕ ಕೆಲವೊಂದು ನಿರ್ಬಂಧಗಳೊಂದಿಗೆ ಗ್ರಾಜುಯೇಷನ್ ಡೇ ಕಾರ್ಯಕ್ರಮಗಳನ್ನು ನಡೆಸಿದರು.
ಕೋವಿಡ್ ಸೋಂಕಿನ ನಿರ್ಬಂಧಗಳ ನಡುವೆ ಕಳೆದ ವರ್ಷದ ಗ್ರಾಜುಯೇಷನ್ ಡೇನಲ್ಲಿ ಭಾಗವಹಿಸಲು ಸಾಧ್ಯವಾಗದ 2200 ವಿದ್ಯಾರ್ಥಿಗಳಿಗೆ, ಭಾನುವಾರದಂದು ನಡೆದ ಈ ಕಾರ್ಯಕ್ರಮದಲ್ಲಿ ಪದವಿ ಪ್ರದಾನ ಮಾಡಲಾಯಿತು.
ಈ ಸಂಭ್ರಮದ ಆಚರಣೆಗಳ ನಡುವೆ ಚೀನಾದಲ್ಲಿ ಮಂಗಳವಾರ 20 ಹೊಸ ಸೋಂಕಿನ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 18 ಪ್ರಕರಣಗಳು ವಿದೇಶದಿಂದ ಬಂದ ಪ್ರಯಾಣಿಕರಲ್ಲಿ ಪತ್ತೆಯಾಗಿದೆ. ಎರಡು ಪ್ರಕರಣಗಳು ದಕ್ಷಿಣ ಗುವಾಂಗ್‌ಡಾಂಗ್ ಪ್ರಾಂತ್ಯದ ಸ್ಥಳೀಯರಲ್ಲಿ ಕಂಡು ಬಂದಿದೆ. ಅದೇ ದಿನ ದೇಶದಲ್ಲಿ 4,636 ಸಾವುಗಳು ವರದಿಯಾಗಿದ್ದು, ಇದರಲ್ಲಿ ಹೆಚ್ಚಿನ ಸಾವುಗಳು ವುಹಾನ್‌ನಲ್ಲಿ ಸಂಭವಿಸಿವೆ. (ಮಾಹಿತಿ ಕೃಪೆ ಪ್ರಜಾವಾಣಿ)
ಹುಟ್ಟೂರಲ್ಲಿ ಸಂಚಾರಿ ವಿಜಯ್ ಅಂತ್ಯಕ್ರಿಯೆಗೆ ಸಿದ್ಧತೆ
ವಿಜಯ್ ಅವರ ಸ್ನೇಹಿತ ರಘು ಅವರ ತೋಟದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.
ಪಾರ್ಥಿವ ಶರೀರ ಮಧ್ಯಾಹ್ನ 2.30ರ ಹೊತ್ತಿಗೆ ಗ್ರಾಮಕ್ಕೆ ತಲುಪಲಿದೆ. ಅಂತಿಮ ದರ್ಶನಕ್ಕೆ ಗ್ರಾಮಸ್ಥರಿಗೆ ಅವಕಾಶ ಕಲ್ಪಿಸಿ, ನಂತರ ಅಂತ್ಯಸಂಸ್ಕಾರ ನೆರವೇರಿಸಲಾಗುವುದು ಎಂದು ರಘು ಅವರು 'ಪ್ರಜಾವಾಣಿ'ಗೆ ತಿಳಿಸಿದರು.
(ಮಾಹಿತಿ ಕೃಪೆ ಪ್ರಜಾವಾಣಿ)
Monday, June 14, 2021
ಆದಾಯ ತೆರಿಗೆ ಫಾರ್ಮ್15ಸಿ.ಎ/15 ಸಿ.ಬಿ. ಸಲ್ಲಿಕೆ ರಿಯಾಯಿತಿ
ನವದೆಹಲಿ, ಜೂನ್ 14: ಆದಾಯ ತೆರಿಗೆ ಕಾಯ್ದೆ 1961 ರನ್ವಯ ಫಾರಂ 15 ಸಿಎ /15 ಸಿಬಿ ಗಳನ್ನು ವಿದ್ಯುನ್ಮಾನ ಮೂಲಕ ಸಲ್ಲಿಸಬೇಕಾಗಿರುತ್ತದೆ. ಪ್ರಸ್ತುತ ತೆರಿಗೆ ಪಾವತಿದಾರರು ಎಲ್ಲೆಲ್ಲಿ ಅನ್ವಯವಾಗುತ್ತದೋ ಅಲ್ಲಿ ಫಾರಂ 15 ಸಿ.ಎ.ಯನ್ನು ಫಾರಂ 15 ಸಿ.ಬಿ.ಯಲ್ಲಿ ಲೆಕ್ಕ ಪರಿಶೋಧಕರ ಪ್ರಮಾಣ ಪತ್ರದೊಂದಿಗೆ ಇ-ಸಲ್ಲಿಕೆ ಪೋರ್ಟಲಿನಲ್ಲಿ ಅಪ್ಲೋಡ್ ಮಾಡಬೇಕಾಗಿರುತ್ತದೆ. ಯಾವುದೇ ವಿದೇಶಿ ವಹಿವಾಟಿಗಾಗಿ ಅಧಿಕೃತ ಡೀಲರಿಗೆ ಪ್ರತಿಯನ್ನು ಸಲ್ಲಿಕೆ ಮಾಡುವುದಕ್ಕೆ ಮೊದಲು ಈ ನಿಯಮವನ್ನು ಪಾಲಿಸಬೇಕಾಗಿರುತ್ತದೆ. ಹೊಸ ಪೋರ್ಟಲ್ www.incometax.gov.in ರಲ್ಲಿ ಆದಾಯ ತೆರಿಗೆ ಫಾರಂಗಳಾದ 15 ಸಿ.ಎ./15 ಸಿ.ಬಿ.ಗಳನ್ನು ವಿದ್ಯುನ್ಮಾನ ಸಲ್ಲಿಕೆ ಮಾಡುವಾಗ ತೆರಿಗೆದಾರರು ಸಮಸ್ಯೆಯಾಗುತ್ತಿರುವ ಬಗ್ಗೆ ವರದಿಗಳು ಬಂದಿವೆ. ಈ ಹಿನ್ನೆಲೆಯಲ್ಲಿ, ಮೇಲ್ಕಾಣಿಸಿದ ಫಾರಂಗಳನ್ನು ತೆರಿಗೆ ಪಾವತಿದಾರರು 2021 ರ ಜೂನ್ 30 ರವರೆಗೆ ಅಧಿಕೃತ ಡೀಲರುಗಳಿಗೆ ಮ್ಯಾನುವಲ್ ಮಾದರಿಯಲ್ಲಿ ಸಲ್ಲಿಸಬಹುದೆಂದು ನಿರ್ಧರಿಸಲಾಗಿದೆ.
ಅಧಿಕೃತ ಡೀಲರುಗಳಿಗೆ ಇಂತಹ ಫಾರಂಗಳನ್ನು ವಿದೇಶೀ ವಹಿವಾಟಿಗಾಗಿ 2021 ರ ಜೂನ್ 30 ರವರೆಗೆ ಅಂಗೀಕರಿಸುವಂತೆ ಸಲಹೆ ಮಾಡಲಾಗಿದೆ. ಹೊಸ ಇ-ಫೈಲಿಂಗ್ (ವಿದ್ಯುನ್ಮಾನ ಫೈಲಿಂಗ್) ಪೋರ್ಟಲಿನಲ್ಲಿ ಈ ಫಾರಂಗಳನ್ನು ಬಳಿಕದ ದಿನಾಂಕಗಳಲ್ಲಿ ಅಪ್ಲೋಡ್ ಮಾಡಲು ಹೊಸ ಸವಲತ್ತನ್ನು ಒದಗಿಸಲಾಗುವುದು. ದಾಖಲೆ ಗುರುತಿಸುವಿಕೆ ಸಂಖ್ಯೆಯನ್ನು ಪಡೆಯಲು ಇದರಿಂದ ಸಾಧ್ಯವಾಗಲಿದೆ.
(ಮಾಹಿತಿ ಕೃಪೆ Oneindia)
ಸಂಚಾರಿ ವಿಜಯ್ ಅವರ ಅಂಗಾಂಗ ದಾನ ಹೇಗೆ? ಸಂಪೂರ್ಣ ಮಾಹಿತಿ ನೀಡಿದೆ ಆರೋಗ್ಯ ಇಲಾಖೆ
ಬೆಂಗಳೂರು: ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ನಟ ಸಂಚಾರಿ ವಿಜಯ್ ಅವರ ಬ್ರೇನ್ ಡೆಡ್ ಆಗಿರುವ ಬಗ್ಗೆ ಇದಾಗಲೇ ಒಂದು ಬಾರಿ ಘೋಷಣೆ ಮಾಡಲಾಗಿದೆ. ನಿಯಮದ ಪ್ರಕಾರ, ಎರಡನೆಯ ಬಾರಿ ಪರೀಕ್ಷೆ ಮಾಡಿ ಘೋಷಣೆ ಮಾಡಬೇಕಿದೆ.
ಈ ಹಿನ್ನೆಲೆಯಲ್ಲಿ 'ಜೀವ ಸಾರ್ಥಕತೆ ತಂಡ' ಆಸ್ಪತ್ರೆಗೆ ಆಗಮಿಸಲಿದೆ. ಇವರ ಅಂಗಾಂಗವನ್ನು ದಾನ ಮಾಡಲು ಕುಟುಂಬಸ್ಥರು ಒಪ್ಪಿಗೆ ನೀಡಿದ್ದ ಹಿನ್ನೆಲೆಯಲ್ಲಿ ಎರಡನೆಯ ಬಾರಿ ಬ್ರೇನ್‌ಡೆಡ್ ಆಗಿರುವ ಘೋಷಣೆ ಮಾಡಬೇಕಿದೆ. ಈ ಎಲ್ಲಾ ಪ್ರಕ್ರಿಯೆ ಇಂದು ರಾತ್ರಿಯೊಳಗೆ ಮುಗಿಯುವ ಸಾಧ್ಯತೆ ಇದೆ.
ಆರೋಗ್ಯ ಇಲಾಖೆ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಜೀವ ಸಾರ್ಥಕತೆ ತಂಡ ಆಸ್ಪತ್ರೆಗೆ ಬಂದು ಬ್ರೈನ್ ಡೆಡ್ ಡಿಕ್ಲರೇಷನ್ ಮಾಡುತ್ತದೆ. ಸಂಚಾರಿ ವಿಜಯ್ ಅವರಿಗೆ ಮಧ್ಯಾಹ್ನ 12 ಗಂಟೆಗೆ ಅಪ್ನಿಯಾ ಟೆಸ್ಟ್ ಮಾಡಲಾಗಿದೆ. ಒಂದು ಪರೀಕ್ಷೆಯಿಂದ ಎರಡನೆಯ ಪರೀಕ್ಷೆಗೆ ಕನಿಷ್ಠ ಆರು ಗಂಟೆ ಅಂತರ ಇರಬೇಕಿರುವ ಕಾರಣ, ಇದೀಗ ಎರಡನೆಯ ಪರೀಕ್ಷೆ ಮಾಡಲಾಗುತ್ತದೆ.
ಅಪ್ನಿಯಾ ಟೆಸ್ಟ್ ನಲ್ಲಿ ಮೆದುಳು ಕೆಲಸ ಮಾಡ್ತಿದೆಯಾ ಇಲ್ವಾ ಎನ್ನುವುದನ್ನು ಖಚಿತಪಡಿಸಿಕೊಳ್ಳಲಾಗತ್ತದೆ. ಈ ಪ್ರಕ್ರಿಯೆಯಲ್ಲಿ ಕಣ್ಣಿನ ಮೇಲೆ ಹತ್ತಿ ಇಂದ ಸವರುವುದು, ಕಿವಿಯಲ್ಲಿ ತಣ್ಣೀರು ಹಾಕುವುದು, ಹೀಗೆ 10 ಟೆಸ್ಟ್ ಮಾಡಲಾಗುವುದು. ಈ ಪರೀಕ್ಷೆಗಳಲ್ಲಿ ಮೆದುಳು ಸ್ಪಂದಿಸದೇ ಇದ್ದರೆ ಬ್ರೈನ್ ಡೆಡ್ ಎಂದು ಘೋಷಣೆ ಮಾಡಲಾಗುತ್ತದೆ. ಬಳಿಕ ವೈದ್ಯರಿಂದ ಪಾರ್ಮ್ 10 ಗೆ ಸಹಿಪಡೆಯಲಾಗುವುದು. ಇದಾದ ನಂತರ ಅಂಗಾಂಗ ದಾನಕ್ಕೆ ಒಪ್ಪಿಗೆ ಪತ್ರಕ್ಕೆ ಕುಟುಂಬದವರ ಸಹಿ ಪಡೆಯಲಾಗತ್ತದೆ. ಬಳಿಕ ಆಪರೇಷನ್ ಥಿಯೇಟರ್‌ನಲ್ಲಿ ಅಂಗಾಂಗ ತೆಗೆಯುವ ಪ್ರಕ್ರಿಯೆ ನಡೆಯಲಿದೆ.
ಬ್ರೈನ್ ಡೆಡ್ ಆದ ವ್ಯಕ್ತಿಯಿಂದ ಹೃದಯ, ಶ್ವಾಸಕೋಶ, ಕಿಡ್ನಿ, ಕಣ್ಣು, ಪ್ಯಾಂಕ್ರಿಯಾಸ್ ತೆಗೆಯಬಹುದು. ಜೀವ ಸಾರ್ಥಕತೆಯ ಮತ್ತೊಂದು ತಂಡ ಅಂಗಾಂಗ ಪಡೆಯುವ ರೋಗಿಗಳ ಬಗ್ಗೆ ಮಾಹಿತಿ ಕಲೆ ಹಾಕಿ ತಯಾರಿರುವಂತೆ ಆಸ್ಪತ್ರೆಗಳಿಗೆ ಸೂಚನೆ ನೀಡಿರುತ್ತದೆ. ಅಂಗಾಂಗ ತೆಗೆದ ಬಳಿಕ ಅದರಲ್ಲಿನ ಬ್ಲಡ್ ಸೆಲ್‌ಗಳನ್ನು ತೆಗೆದು ಲಿಕ್ವಿಡ್ ಹಾಕಿ ಐಸ್ ಬಾಕ್ಸ್‌ನಲ್ಲಿ ಪ್ಯಾಕ್ ಮಾಡಲಾಗತ್ತೆ. ಕಿಡ್ನಿಯನ್ನ ಜಯನಗರ ಟಿಟಿಕೆ ಬ್ಲಡ್ ಬ್ಯಾಂಕ್ ಗೆ ಕಳಿಸಿಕೊಡಲಾಗತ್ತೆ. ಅಲ್ಲಿ ಡಿಎನ್‌ಎ ಮ್ಯಾಚ್ ಆಗುವ ರೋಗಿಗಳನ್ನ ಪತ್ತೆ ಮಾಡಿ ನಂತರ ಕಿಡ್ನಿ ಕಸಿಗೆ ಕಳಿಸಿಕೊಡಲಾಗುತ್ತೆ ಎಂದು ಜೀವ ಸಾರ್ಥಕತೆ ತಂಡ ತಿಳಿಸಿದೆ.
(ಮಾಹಿತಿ ಕೃಪೆ ವಿಜಯವಾಣಿ)
ವಿಜಯ್ ಬದುಕಿರುವ ಚಿಕ್ಕ ಆಸೆಯೂ ಕಮರಿಹೋಯ್ತು: ಅಧಿಕೃತ ಘೋಷಣೆಯೊಂದೇ ಬಾಕಿ- ನಾಳೆ ಅಂತ್ಯಕ್ರಿಯೆ
ಆದರೆ ಇದೀಗ ಅವರ ಪರೀಕ್ಷೆ ಮಾಡಿದ ಡಾ.ಅರುಣ್ ನಾಯ್ಕ್ ಅವರು ಎರಡೂ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದೆ, ಇದರರ್ಥ ಬ್ರೈನ್ ಡೆಡ್ ಆಗಿರುವುದು ನಿಶ್ಚಿತವಾಗಿದೆ. ಅವರಿಗೆ ಎರಡು ಬಾರಿ ಅಪ್ನಿಯಾ ಟೆಸ್ಟ್ ಮಾಡಿದ್ದು, ಎರಡರಲ್ಲಿಯೂ ಬ್ರೇನ್ ಡೆಡ್ ಆಗಿರುವುದು ಗೊತ್ತಾಗಿದೆ ಎಂದು ಹೇಳಿದ್ದಾರೆ. ಈ ಮೂಲಕ ಅವರು ಬದುಕಿರಬಹುದೇನೋ ಎಂಬ ಚಿಕ್ಕ ಕೊನೆಯ ಆಸೆಯೂ ಕಮರಿ ಹೋಗಿದೆ.
ಆರೋಗ್ಯ ಇಲಾಖೆಯಡಿ ಕಾರ್ಯ ನಿರ್ವಹಿಸುವ ಜೀವ ಸಾರ್ಥಕತೆ ತಂಡದಿಂದ ಅಂಗಾಂಗ ದಾನ ಕುರಿತು ಮುಂದಿನ ಪ್ರಕ್ರಿಯೆ ನಡೆಯಲಿದೆ. 9 ರಿಂದ 9:30 ರ ತನಕ ಅಂಗಾಂಗ ತೆಗೆಯುವ ಪ್ರಕ್ರಿಯೆ ನಡೆಯಲಿದೆ. ಈ ಸಂದರ್ಭದಲ್ಲಿ ಲಿವರ್, ಎರಡು ಕಿಡ್ನಿ, ಎರಡು ಕಣ್ಣು ಸದ್ಯ ಟ್ರಾನ್ಸ್‌ಪ್ಲಾಂಟ್ ಮಾಡಲಾಗುತ್ತದೆ. ಹೃದಯದ ಟಿಶ್ಯು ವಾಲ್ವ್ ಕೂಡ ಟ್ರಾನ್ಸ್‌ಪ್ಲಾಂಟ್ ಗೆ ಹೋಗಲಿದೆ.
12.30 ರಿಂದ 1 ಗಂಟೆ ವೇಳೆಗೆ ಅಧಿಕೃತವಾಗಿ ಮೃತಪಟ್ಟಿರುವ ಬಗ್ಗೆ ಹೇಳಿಕೆ ನೀಡಲಾಗುತ್ತದೆ. ಅಂಗಾಗ ದಾನ ಪ್ರಕ್ರಿಯೆ ಮುಗಿದ ಬಳಿಕವೇ ಡೆತ್ ಡಿಕ್ಲೆರೇಷನ್ ಮಾಡಲಾಗುತ್ತದೆ. ಸದ್ಯ ಬ್ರೈನ್ ಡೆತ್ ಮಾತ್ರ ಆಗಿರುವ ಬಗ್ಗೆ ಅಧಿಕೃತವಾಗಿ ಘೋಷಣೆಯಾಗಿದೆ ಎಂದು ವೈದ್ಯ ಅರುಣ್ ನಾಯ್ಕ್ ಹೇಳಿದ್ದಾರೆ.
ನಾಳೆ ಅಂತಿಮ ದರ್ಶನ: ನಾಳೆ ಬೆಳಿಗ್ಗೆ 8 to 10 ಸಂಚಾರಿ ವಿಜಯ್ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ಸರ್ಕಾರದ ಕಡೆಯಿಂದಲೇ ವ್ಯವಸ್ಥೆ ಮಾಡಲಾಗಿದೆ. ಬಳಿಕ ಅವರ ಹುಟ್ಟೂರು ಚಿಕ್ಕಮಗಳೂರಿನ ಕಡೂರು ತಾಲೂಕಿನ ಪಂಚನಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ನಿರ್ದೇಶಕ ಮನ್ಸೋರೆ ಹೇಳಿದ್ದಾರೆ.
ಜೂ.12ರ ರಾತ್ರಿ ಸ್ನೇಹಿತರೊಂದಿಗೆ ಬೈಕ್ನಲ್ಲಿ ಹೋಗುತ್ತಿರುವಾಗ ಜೆಪಿ ನಗರದ 7ನೇ ಹಂತದಲ್ಲಿ ಅಪಘಾತವಾಗಿ ಸಂಚಾರಿ ವಿಜಯ್ ತಲೆಗೆ ತೀವ್ರ ಪೆಟ್ಟಾಗಿತ್ತು. ಮಿದುಳಿನ ಬಲಭಾಗದಲ್ಲಿ ತೀವ್ರ ಗಾಯವಾಗಿ ರಕ್ತ ಸೋರುತ್ತಿದ್ದ ಹಿನ್ನೆಲೆ ಅವರರಿಗೆ ಬನ್ನೇರುಘಟ್ಟ ರಸ್ತೆಯಲ್ಲಿನ ಅಪೋಲೋ ಆಸ್ಪತ್ರೆಯಲ್ಲಿ ಮಿದುಳಿನ ಶಸ್ತ್ರ ಚಿಕಿತ್ಸೆ ಮಾಡಿ ಐಸಿಯುನಲ್ಲಿ ಇರಿಸಲಾಗಿತ್ತು. ಕೋಮದಲ್ಲಿದ್ದ ವಿಜಯ್ರ ಬ್ರೈನ್ ಫಂಕ್ಷನ್ ನಿಂತು ಹೋಗಿತ್ತು. ಟ್ರೀಟ್ಮೆಂಟ್ಗೆ ಅವರು ಸ್ಪಂದಿಸುತ್ತಿಲ್ಲ ಎಂದು ವೈದ್ಯರು ಹೇಳಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಇಂದು ಬೆಳಗ್ಗೆ ಬೆಳಗ್ಗೆ 10 ಗಂಟೆಗೆ ಮಿದುಳು ನಿಷ್ಕ್ರಿಯವಾಗಿತ್ತು. ನೋವಿನಲ್ಲೂ ವಿಜಯ್ರ ಅಂಗಾಗ ದಾನ ಮಾಡುವ ಮೂಲಕ ಸಾರ್ಥಕತೆ ಮೆರೆದಿದ್ದಾರೆ.
ರಂಗಪ್ಪ ಹೋಗ್ಬಿಟ್ನಾ' ಸಿನಿಮಾ ಮೂಲಕ ಸಿನಿರಂಗಕ್ಕೆ ಕಾಲಿಟ್ಟಿದ್ದ ಸಂಚಾರಿ ವಿಜಯ್, 24ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು. 'ನಾನು ಅವನಲ್ಲ ಅವಳು' ಚಿತ್ರದ ಮೂಲಕ ಭಾರೀ ಜನಪ್ರಿಯತೆ ಪಡೆದಿದ್ದರು. ಇದೇ ಚಿತ್ರದ ನಟನೆಗಾಗಿ ರಾಷ್ಟ್ರ ಪ್ರಶಸ್ತಿ ಕೂಡ ಒಲಿದಿತ್ತು. ನಟರಾದ ವಾಸುದೇವರಾವ್, ಚಾರುಹಾಸನ್ ಬಳಿಕ ರಾಷ್ಟ್ರಪ್ರಶಸ್ತಿ ಪಡೆದ ಹೆಮ್ಮೆ ಇವರದ್ದು.
ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಪಂಚಮಹಳ್ಳಿಯಲ್ಲಿ 1983ರ ಜುಲೈ 18ರಂದು ಜನಿಸಿದ್ದ ಸಂಚಾರಿ ವಿಜಯ್, ಬಾಲ್ಯದಲ್ಲೇ ರಂಗಭೂಮಿ ಹಾಗೂ ಚಿತ್ರಕಲೆಯಲ್ಲಿ ತೊಡಗಿಸಿಕೊಂಡಿದ್ದರು. ಬಿಎಂಎಸ್ ಶಿಕ್ಷಣ ಸಂಸ್ಥೆಯಲ್ಲಿ ಇಂಜಿನಿಯರಿಂಗ್ ಪದವಿ ಮುಗಿಸಿ ಕೆಲಕಾಲ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು. ಬಳಿಕ ರಂಗಭೂಮಿಯತ್ತ ಕಾಲಿಟ್ಟರು. 'ಸಂಚಾರಿ' ನಾಟಕ ತಂಡದಲ್ಲಿ ನಟನಾ ತಾಲೀಮು ಆರಂಭಿಸಿದ್ದ ವಿಜಯ್, ಸಿನಿರಂಗಕ್ಕೆ ಬಂದ ನಂತರ ಸಂಚಾರಿ ವಿಜಯ್ ಅಂತಲೇ ಜನಪ್ರಿಯತೆ ಗಳಿಸಿದ್ದರು. ಕರ್ನಾಟಕ ಶಾಸ್ತ್ರೀಯ ಹಾಗೂ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನೂ ಕಲಿತಿದ್ದರು. ಇತ್ತೀಚಿಗೆ 'ಆಟಕ್ಕುಂಟು ಲೆಕ್ಕಕ್ಕಿಲ್ಲ' ಹಾಗೂ 'ಮೇಲೊಬ್ಬ ಮಾಯಾವಿ' ಚಿತ್ರಗಳಲ್ಲೂ ನಟಿಸಿದ್ದಾರೆ.
(ಮಾಹಿತಿ ಕೃಪೆ ವಿಜಯವಾಣಿ)
ಮದುವೆ ಮಾಡಲಿಲ್ಲ ಎಂದು ಕುಡಿದ ಅಮಲಿನಲ್ಲಿ ಟವರ್ ಏರಿದ ಯುವಕ
ಮರಿಯಮ್ಮನಹಳ್ಳಿ: ಪ್ರೀತಿಸಿದ ಯುವತಿಯ ಜೊತೆ ಮದುವೆ ಮಾಡಿಕೊಡಲು ವಿಳಂಬ ಮಾಡುತ್ತಿರುವುದಕ್ಕೆ ಬೇಸತ್ತ ಯುವಕನೊಬ್ಬ ಕುಡಿದ ಅಮಲಿನಲ್ಲಿ ಮೊಬೈಲ್ ಟವರ್ ಏರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಪಟ್ಟಣದಲ್ಲಿ ಸೋಮವಾರ ನೆಡದಿದೆ.
ಸ್ಥಳೀಯ ಆರನೇ ವಾರ್ಡ್ ಯುವಕ ಚಿರಂಜೀವಿ ಗೋಸಂಗಿ (23) ಪಕ್ಕದ ಮನೆಯ ಯುವತಿ ಉಮಾ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರ ಮದುವೆಗೆ ಮನೆಯವರು ಒಪ್ಪಿದ್ದಾರೆ. ಆದರೆ, ಲಾಕ್ ಡೌನ್‌ನಿಂದ ಮದುವೆಗೆ ವಿಳಂಬವಾಗುತ್ತಿದೆ. ಇದರಿಂದ ಬೇಸತ್ತ ಯುವಕ ಕುಡಿದ ಅಮಲಿನಲ್ಲಿ ಹಳೆಯ ವೀರಭದ್ರೇಶ್ವರ ಟಾಕೀಸ್ ಬಳಿಯ ಏರ್‌ಟೆಲ್ ಮೊಬೈಲ್ ಟವರ್ ಏರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಸ್ಥಳಕ್ಕೆ ಸಿಪಿಐ ವಸಂತ ವಿ ಅಸೋದೆ, ಅಪರಾಧ ವಿಭಾಗದ ಪಿಎಸ್‌ಐ ಬಿ. ಮೀನಾಕ್ಷಿ, ಸಿಬ್ಬಂದಿ ಮತ್ತು ಸ್ಥಳೀಯರು ಬಂದು ಯುವಕನ ಮನವೊಲಿಸಲು ಯತ್ನಿಸಿದ್ದಾರೆ. ಇನ್ನೊಂದೆಡೆ ಏಳು ಜನ ಯುವಕರ ತಂಡ ಮೊಬೈಲ್ ಟವರ್ ಏರಿ ಅಮಲಿನಲ್ಲಿದ್ದ ಯುವಕನನ್ನು ಕೆಳಗಿಳಿಸಿ ಕರೆತಂದಿದ್ದಾರೆ. ಬಳಿಕ ಯುವಕನನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ನೀಡಲಾಯಿತು. ಈ ವೇಳೆ ನೂರಾರು ಜನ ನೆರೆದಿದ್ದರು.
ಮೊಬೈಲ್ ಟವರ್ ಏರಿ ಅಮಲಿನಲ್ಲಿದ್ದ ಯುವಕನನ್ನು ಕೆಳಗಿಳಿಸಿ ಕರೆತಂದ ಪೊಲೀಸರು
(ಮಾಹಿತಿ ಕೃಪೆ ಪ್ರಜಾವಾಣಿ)
BREAKING : ಅಪೊಲೋ ಆಸ್ಪತ್ರೆಗೆ ಡಿಸಿಎಂ ಅಶ್ವತ್ಥನಾರಾಯಣ, ನಟ ಜಗ್ಗೇಶ್ ಭೇಟಿ : ನಟ ಸಂಚಾರಿ ವಿಜಯ್ ಆರೋಗ್ಯಸ್ಥಿತಿ ವಿಚಾರಣೆ
ಶನಿವಾರ ರಾತ್ರಿ ಬೈಕ್ ನಲ್ಲಿ ಸ್ಕಿಡ್ ಆಗಿ ಬಿದ್ದು, ತಲೆಗೆ ಗಂಭೀವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವಂತ ನಟ ಸಂಚಾರಿ ವಿಜಯ್ ಅವರ ಆರೋಗ್ಯಸ್ಥಿತಿ ಗಂಭೀರಗೊಂಡಿತ್ತು. ಇಂತಹ ಅವರ ಚಿಕಿತ್ಸಾ ವೆಚ್ಚವನ್ನು ಡಿಸಿಎಂ ಡಾ.ಸಿಎನ್ ಅಶ್ವತ್ಥ ನಾರಾಯಣ, ತಮ್ಮ ಟ್ರಸ್ಟ್ ಮೂಲಕ ಭರಿಸೋದಾಗಿ ತಿಳಿಸಿದ ಕಾರಣ, ಕುಟುಂಬಸ್ಥರು ಕಟ್ಟಿದ್ದಂತ ಹಣವನ್ನು ಕೂಡ ಆಸ್ಪತ್ರೆ ವಾಪಾಸ್ ಮರಳಿಸಿತ್ತು.
ಈ ನಂತ್ರ, ಇದೀಗ ಡಿಸಿಎಂ ಅಶ್ವತ್ಥನಾರಾಯಣ ಅವರು ಬನ್ನೇರುಘಟ್ಟ ರಸ್ತೆಯಲ್ಲಿನ ಅಪೋಲೋ ಆಸ್ಪತ್ರೆಗೆ ಭೇಟಿಯಾಗಿದ್ದಾರೆ. ಅವರೊಂದಿಗೆ ನಟ ಜಗ್ಗೇಶ್ ಕೂಡ ಭೇಟಿ ನೀಡಿ, ನಟ ಸಂಚಾರಿ ವಿಜಯ್ ಅವರ ಆರೋಗ್ಯ ಸ್ಥಿತಿಯ ಬಗ್ಗೆ ವೈದ್ಯರಿಂದ ಮಾಹಿತಿಯನ್ನು ಪಡೆದರು.
Sunday, June 13, 2021
ಹಿರಿಯ ಕಾಂಗ್ರೆಸ್ ನಾಯಕಿ ಇಂದಿರಾ ಹೃದಯೇಶ್ ನಿಧನ
ದೆಹಲಿಗೆ ಪಕ್ಷದ ಸಭೆಯೊಂದರಲ್ಲಿ ಪಾಲ್ಗೊಳ್ಳಲು ತೆರಳಿದ್ದ ಇಂದಿರಾ ಅವರು, ಉತ್ತರಾಖಂಡ್ ಸದನ್ನಲ್ಲಿ ತಂಗಿದ್ದರು. ಇಂದು ಬೆಳಿಗ್ಗೆ ಹೃದಯಾಘಾತವಾಗಿ ಮರಣ ಹೊಂದಿದರು ಎಂದು ಉತ್ತರಾಖಂಡ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ದೇವೇಂದರ್ ಯಾದವ್ ತಿಳಿಸಿದ್ದಾರೆ. ಅವರ ಪಾರ್ಥಿವ ಶರೀರವನ್ನು ಉತ್ತರಾಖಂಡಕ್ಕೆ ಒಯ್ಯಲಾಗುತ್ತಿದೆ ಎನ್ನಲಾಗಿದೆ.
ರಾಜ್ಯದ ಸಿಎಂ ತೀರಥ್ ಸಿಂಗ್ ರಾವತ್ ಅವರು ತೀವ್ರ ಸಂತಾಪ ಸೂಚಿಸಿದ್ದು, ಜನಹಿತದ ವಿಚಾರಗಳನ್ನು ಪ್ರಸ್ತಾಪಿಸಿ ಚರ್ಚೆಗೆ ತರುವುದರಲ್ಲಿ ಇಂದಿರಾ ಅವರು ಮಹತ್ವದ ಪಾತ್ರ ವಹಿಸುತ್ತಿದ್ದರು ಎಂದು ಟ್ವೀಟ್ ಮಾಡಿದ್ದಾರೆ. (ಏಜೆನ್ಸೀಸ್)
(ಮಾಹಿತಿ ಕೃಪೆ ವಿಜಯವಾಣಿ)
'ಈ ವೈದ್ಯರು ನನ್ನ ಕೊಲ್ಲಲು ಕರೆದುಕೊಂಡು ಹೊರಟಿದ್ದಾರೆ': ವಿಡಿಯೋ ಮಾಡಿ ಸೋಂಕಿತನಿಂದ ಹುಚ್ಚಾಟ
ಧಾರವಾಡ ಸಮೀಪದ ತಡಕೋಡ ಗ್ರಾಮದ ಪರಪ್ಪ ಎಂಬಾತ ಕೋವಿಡ್ ಸೋಂಕಿತ ನಾಗಿದ್ದಾಗ ವೈದ್ಯರು ಆತನನ್ನು ಚಿಕಿತ್ಸೆ ಗಾಗಿ ಜಿಲ್ಲಾ ಆಸ್ಪತ್ರೆ ಗೆ ಕರೆದುಕೊಂಡು ಹೋಗಲು ಬಂದಿದ್ದಾರೆ. ಆಗ ತನ್ನ ಮೊಬೈಲ್ ನಲ್ಲಿ ನಾನೆ ವಿಡಿಯೋ ಮಾಡಿಕೊಂಡು, ಈ ವೈದ್ಯರು ನನ್ನ ಕೊಲ್ಲಲು ಕರೆದುಕೊಂಡು ಹೊರಟಿದ್ದಾರೆ.
ನನ್ನ ಸಾವಿಗೆ ಇವರೆ ಕಾರಣ ಎಂದೆಲ್ಲ ಹುಚ್ಚಾಟ ಮಾಡಿದ್ದಾನೆ. ಕೋವಿಡ್ ಗೆ ಚಿಕಿತ್ಸೆ ಪಡೆದು ಗುಣಮುಖ ನಾಗಿರುವ ಪರಪ್ಪ ಇದೀಗ ಆಗಿನ ವಿಡಿಯೋ ಗಳನ್ನು ತನ್ನ ಗೆಳೆಯರೊಂದಿಗೆ ಹಂಚಿಕೊಂಡಿದ್ದಾನೆ. ಇದನ್ನು ಕೆಲವರು ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದಾರೆ. ಇದೀಗ ಪರಪ್ಪನ ಹುಚ್ಚಾಟ ದಾರವಾಡ ಸೀಮೆಯಲ್ಲಿ ವೈರಲ್ ಆಗಿದೆ. ಈತನ ಹುಚ್ಚಾಟದ ಬಗ್ಗೆ ಪೋಲಿಸ್ ರು ಮಾಹಿತಿ ಪಡೆದುಕೊಂಡಿದ್ದಾರೆ.
(ಮಾಹಿತಿ ಕೃಪೆ ಉದಯವಾಣಿ)
ಪಿಯುಸಿ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ : ಶಿಕ್ಷಣ ಸಚಿವರಿಂದ ಮಹತ್ವದ ಮಾಹಿತಿ
ಪಿಯುಸಿ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ : ಶಿಕ್ಷಣ ಸಚಿವರಿಂದ ಮಹತ್ವದ ಮಾಹಿತಿ PUC
ಕೋಲಾರ : ಕೊರೊನಾ ಕಾರಣದಿಂದಾಗಿ ಈ ಬಾರಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಅನ್ ಲೈನ್ ನಲ್ಲಿ ಪರೀಕ್ಷೆ ನಡೆಸಲಾಗುವುದು ಎಂದು ಹೇಳಲಾಗಿತ್ತು.
ಆದ್ರೆ ಇದೀಗ ಈ ಬಗ್ಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್, ಪ್ರಥಮ ಪಿಯುಸಿಗೆ ಪರೀಕ್ಷೆ ನಡೆಸುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವ ಬಗ್ಗೆ ಕೋಲಾರದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಘೋಷಿಸಿದಂತೆ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಇಲ್ಲ.
ಈಗ ಪ್ರಕಟಿಸಲಾಗಿರುವಂತದ್ದು ಕೇವಲ ಅಸೈನ್ಮೆಂಟ್ ಮಾತ್ರ. ಮಕ್ಕಳ ನಿರಂತರ ಕಲಿಕೆಗೆ ಪ್ರಯತ್ನವಷ್ಟೇ. ಇದು ಫಲಿತಾಂಶಕ್ಕೆ ಮಾನದಂಡವೂ ಅಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.
ಈಗ ತಿಳಿಸಿರೋದು ಮಕ್ಕಳು ಮನೆಯಲ್ಲೇ ಇದ್ದು, 10 ದಿನ ಪಠ್ಯಪುಸ್ತಕ ನೋಡಿಯೇ ಉತ್ತರ ಬರೆದು ಕಳುಹಿಸಬಹುದು.
ಪ್ರಥಮ ಪಿಯುಸಿ ವಿದ್ಯಾರ್ಥಿಗಳು ಈ ಬಗ್ಗೆ ಗೊಂದಲ ಮಾಡಿಕೊಳ್ಳಬೇಡಿ ಎಂದು ತಿಳಿಸಿದ್ದಾರೆ.
Mahesh M Dhandu :
ಕಂಟೆಂಟ್ ಎಡಿಟರ್
(ಮಾಹಿತಿ ಕೃಪೆ Saaksha TV)
ಇಂಧನ ಬೆಲೆ ಏರಿಕೆ ಖಂಡಿಸಿ : ಬೈಕ್ ನ್ನು ಕೆರೆಗೆ ಎಸೆದ ಕೈ ಕಾರ್ಯಕರ್ತರು
ಹೈದರಾಬಾದ್ : ದೇಶಾದ್ಯಂತ ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆಯಾಗುತ್ತಲೇ ಇದೆ. ಇದನ್ನ ವಿರೋಧಿಸಿ ಕಾಂಗ್ರೆಸ್ ದೇಶದಾದ್ಯಂತ ಪ್ರತಿಭಟನೆ ನಡೆಸುತ್ತಿದೆ.
ಈ ಮಧ್ಯೆ ತೆಲಂಗಾಣದಲ್ಲಿ ಬೈಕ್ ಅನ್ನು ಕೆರೆಗೆ ಎಸೆಯುವ ಮೂಲಕ ಕಾಂಗ್ರೆಸ್ ಕಾರ್ಯಕರ್ತರು ವಿನೂತನವಾಗಿ ಪ್ರತಿಭಟನೆ ನಡೆಸಿದ್ದಾರೆ.
ಕೊರೊನಾ ಸಂಕಷ್ಟದಲ್ಲೂ ಪೆಟ್ರೋಲ್, ಡೀಸೆಲ್ ದರ ಏರಿಕೆ ಖಂಡಿಸಿ ತೆಲಂಗಾಣದಲ್ಲಿ ಯೂತ್ ಕಾಂಗ್ರೆಸ್ ಪ್ರತಿಭಟನೆ ನಡೆಸಿತು.
ಈ ವೇಳೆನಗರದ ಪಕ್ಕದಲ್ಲಿದ್ದ ಹುಸೇನ್ ಸಾಗರ್ ಕೆರೆಗೆ ಬೈಕ್ ಒಂದನ್ನು ಎಸೆದು ಆಕ್ರೋಶ ಹೊರಹಾಕಿದೆ.
ಈ ವಿಡಿಯೋದ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಇನ್ನು ಪ್ರತಿಭಟನೆಯಲ್ಲಿ ಕಾಂಗ್ರೆಸ್ ನಾಯಕರಾದ ಎನ್, ಉತ್ತಮ್ ಕುಮಾರ್ ರೆಡ್ಡಿ, ಎ ರೇವಂತ್ ರೆಡ್ಡಿ, ಪೊನ್ನಮ್ ಪ್ರಭಾಕರ್, ಜಯಪ್ರಕಾಶ್ ರೆಡ್ಡಿ, ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದರು.
Mahesh M Dhandu :
ಕಂಟೆಂಟ್ ಎಡಿಟರ್
ನಾಳೆಯಿಂದ 'ಬೆಂಗಳೂರು ಅನ್ ಲಾಕ್' : ಬೆಂಗಳೂರಿನತ್ತ ಜನರ ದಂಡು, 'ಸಾರಿಗೆ ಬಸ್' ಇಲ್ಲದೆ ಕೆಲಸಕ್ಕೆ ಹೋಗೋದು ಹೇಗ್ ಸ್ವಾಮಿ.?
ಬೆಂಗಳೂರು : ರಾಜ್ಯದ 11 ಜಿಲ್ಲೆಗಳಲ್ಲಿ ನಾಳೆಯಿಂದ ಲಾಕ್ ಡೌನ್ ಮತ್ತೆ ಜೂನ್ 21ರವರೆಗೆ ಮುಂದುವರೆದರೇ, ಇನ್ನುಳಿದಂತ ಜಿಲ್ಲೆಗಳಲ್ಲಿ ಅನ್ ಲಾಕ್ ಮಾರ್ಗಸೂಚಿ ಕ್ರಮಗಳು ಜಾರಿಗೊಳ್ಳಲಿವೆ. ಬೆಂಗಳೂರು ಸೇರಿದಂತೆ 19 ಜಿಲ್ಲೆಗಳು ಅನ್ ಲಾಕ್ ಆಗುತ್ತಿರೋ ಕಾರಣದಿಂದಾಗಿ, ಬೆಂಗಳೂರಿಗೆ ಊರಿಗೆ ತೆರಳಿದ್ದಂತ ಜನರ ದಂಡೇ ವಾಪಾಸ್ ಆಗುತ್ತಿದ್ದಾರೆ.
ಹೌದು.. ನಾಳೆಯಿಂದ ಸಿಲಿಕಾನ್ ಸಿಟಿ ಬೆಂಗಳೂರು ಸೇರಿ ಸೇರಿದಂತೆ ರಾಜ್ಯದಲ್ಲಿ ಪಾಸಿಟಿವಿಟಿ ದರ ಕಡಿಮೆಗೊಂಡಿರುವಂತ ಜಿಲ್ಲೆಗಳಲ್ಲಿ ಅನ್ ಲಾಕ್ ಮಾರ್ಗಸೂಚಿ ಕ್ರಮಗಳು ಜಾರಿಗೊಳ್ಳಲಿವೆ. ಇನ್ನುಳಿದಂತೆ ಕೊರೋನಾ ಸೋಂಕಿನ ಪಾಸಿಟಿವಿಟಿ ದರ ಹೆಚ್ಚಾಗಿರುವಂತ 11 ಜಿಲ್ಲೆಗಳಲ್ಲಿ ಲಾಕ್ ಡೌನ್ ಮುಂದುವರೆಯುತ್ತಿದೆ.
ಲಾಕ್ ಡೌನ್ ಜಾರಿಗೊಂಡಿದ್ದ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ದುಡಿಯುತ್ತಿದ್ದಂತ ವಿವಿಧ ವರ್ಗದ ಜನರು, ನಾಳೆಯಿಂದ ಅನ್ ಲಾಕ್ ಆಗಿ, ಶೇ.50ರಷ್ಟು ನೌಕರರೊಂದಿಗೆ ಕಾರ್ಖಾನೆಗಳು, ಶೇ.30ರಷ್ಟು ನೌಕರರೊಂದಿಗೆ ಗಾರ್ಮೆಂಟ್ಸ್ ಗಳು ಕೂಡ ಆರಂಭಗೊಳ್ಳಲಿವೆ. ಇಂತಹ ವಿವಿಧ ವಲಯದಲ್ಲಿ ಕೆಲಸ ಮಾಡುತ್ತಿರುವಂತ ನೌಕರರು ಅನ್ ಲಾಕ್ ನಿಂದಾಗಿ ಕೆಲಸ ಮತ್ತೆ ಆರಂಭಗೊಳ್ಳುತ್ತಿರ ಕಾರಣ, ಬೆಂಗಳೂರಿನತ್ತ ಈಗ ಪಯಣ ಆರಂಭಿಸಿದ್ದಾರೆ.
ಕೊರೋನಾ ಪಾಸಿಟಿವಿಟಿ ದರ ಕಡಿಮೆಗೊಂಡಂತ ಜಿಲ್ಲೆಗಳಲ್ಲಿ ಅನ್ ಲಾಕ್ ಮಾರ್ಗಸೂಚಿ ಜಾರಿಗೊಳಿಸಿ, ಕಾರ್ಖಾನೆ, ಗಾರ್ಮೆಂಟ್ ಸೇರಿದಂತೆ ವಿವಿಧ ವಲಯಗಳ ಆರ್ಥಿಕ ಪುನಶ್ಚೇತನಕ್ಕೆ ಅವಕಾಶ ಮಾಡಿಕೊಟ್ಟಿರುವಂತ ರಾಜ್ಯ ಸರ್ಕಾರ, ಸಾರಿಗೆ ಸಂಚಾರಕ್ಕೆ ಮಾತ್ರ ಅವಕಾಶ ಮಾಡಿಕೊಟ್ಟಿಲ್ಲ.
ಬಹುತೇಕ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವಂತ ಅನೇಕ ನೌಕರರು ತಮ್ಮ ಖಾಸಗಿ ವಾಹನಗಳಿಗಿಂತ ಸಾರ್ವಜನಿಕ ಸಾರಿಗೆ ಬಳಸಿಕೊಂಡೇ ಕೆಲಸಕ್ಕೆ ತೆರಳುತ್ತಿರೋ ನೌಕರರು ಆಗಿದ್ದಾರೆ. ಬೆಂಗಳೂರಿನಲ್ಲಿ ಈಗ ಅನ್ ಲಾಕ್ ಮಾರ್ಗಸೂಚಿ ಜಾರಿಗೊಳಿಸಿ, ಕಂಪನಿಗಳನ್ನು ಆರಂಭಿಸಿದರೂ, ಕೆಲಸಕ್ಕೆ ಹೇಗೆ ತೆರಳೋದು ಎನ್ನುವುದೇ ನೌಕರರಿಗೆ ಯಕ್ಷ ಪ್ರಶ್ನೆಯಾಗಿದೆ. ಆ ಬಗ್ಗೆ ಸರ್ಕಾರ ನಂತ್ರದ ದಿನಗಳಲ್ಲಿ ಏನ್ ಕ್ರಮ ಕೈಗೊಳ್ಳಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.
ಕೊರೋನಾ ಟೆಸ್ಟ್ ಮಾಡುವಾಗ ಮೂಗಿನ ಒಳಗೆ ಮುರಿದ ಸ್ವಾಬ್ ಸ್ಟಿಕ್ : ಮುಂದೇನಾಯ್ತು?
ಈ ಘಟನೆ ಶುಕ್ರವಾರ ವರದಿಯಾಗಿದೆ. ಕರೀಂನಗರದ ರಾಮದುಗು ಮಂಡಲದ ವೆಂಕಟರೋಪಲ್ಲಿ ಗ್ರಾಮದ ಸರಪಂಚ್ ಜುವಾಜಿ ಶೇಕರ್ ಅವರು ತಮ್ಮ ಹಳ್ಳಿಯಲ್ಲಿ ಕೋವಿಡ್-19 ಗಾಗಿ ಕ್ಷಿಪ್ರ ಆಂಟಿಜೆನ್ ಟೆಸ್ಟ್ (ಆರ್ ಎಟಿ) ವ್ಯವಸ್ಥೆ ಮಾಡಿದ್ದರು ಮತ್ತು ಮೊದಲು ಪರೀಕ್ಷೆ ತೆಗೆದುಕೊಳ್ಳಲು ನಿರ್ಧರಿಸಿದ್ದರು.
ಸ್ಥಳೀಯ ಗೋಪಾಲರಾವ್ ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಕೋವಿಡ್ ಪರೀಕ್ಷೆ ನಡೆಸಲಾಯಿತು. ಮೂಗಿನ ಮಾದರಿಯನ್ನು ಸಂಗ್ರಹಿಸುವ ಸಮಯದಲ್ಲಿ, ಸ್ವಾಬ್ ಸ್ಟಿಕ್ ಶೇಕರ್ ಅವರ ಮೂಗಿನ ಒಳಗೆ ಮುರಿದಿದೆ. ಸ್ಥಳೀಯ ನರ್ಸ್ ಮತ್ತು ವೈದ್ಯರು ಅವನಿಗೆ ಸಹಾಯ ಮಾಡಲು ವಿಫಲವಾದ ನಂತರ, ಸರಪಂಚ್ ಅನ್ನು ಕರೀಂನಗರದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಎಂಡೋಸ್ಕೋಪಿ ಮೂಲಕ ಸ್ವಾಬ್ ಸ್ಟಿಕ್ ಅನ್ನು ತೆಗೆದುಹಾಕಲಾಯಿತು.
ವೈದ್ಯರ ಪ್ರಕಾರ, ಸ್ವಾಬ್ ಸ್ಟಿಕ್ ಅವನ ಮೂಗಿನಿಂದ ಜಾರಿ ಗಂಟಲಿನಲ್ಲಿ ಸಿಲುಕಿಕೊಂಡಿತ್ತು. ಚೇತರಿಸಿಕೊಂಡ ನಂತರ, ಶೆಕರ್ ಗ್ರಾಮ ಕೇಂದ್ರದಲ್ಲಿ 'ಕೌಶಲ್ಯ ರಹಿತ ಮತ್ತು ತರಬೇತಿ ಪಡೆಯದ' ವೈದ್ಯಕೀಯ ಸಿಬ್ಬಂದಿಯ ಬಗ್ಗೆ ದೂರಿದರು
(ಮಾಹಿತಿ ಕೃಪೆ Kannada News Now)
ಪೆಟ್ರೋಲ್ ಬೆಲೆ ಏರಿಕೆ; ಕಾಂಗ್ರೆಸ್‌ಗೆ ಕುಮಾರಸ್ವಾಮಿ ಪ್ರಶ್ನೆಗಳು!
ಭಾನುವಾರ ಎಚ್. ಡಿ. ಕುಮಾರಸ್ವಾಮಿ ಪೆಟ್ರೋಲ್ ದರದ ಬಗ್ಗೆ ಸರಣಿ ಟ್ವೀಟ್‌ಗಳನ್ನು ಮಾಡಿದ್ದಾರೆ. "ಕೇಂದ್ರದ ಅಧಿಕಾರದ ಮೇಲೆ ಕಣ್ಣಿಟ್ಟು ಅದರ ಸುತ್ತಲೇ ರಾಜಕಾರಣ ಮಾಡುವುದಷ್ಟೇ ರಾಷ್ಟ್ರೀಯ ಪಕ್ಷಗಳ ಅಜೆಂಡಾ" ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
"ಪೆಟ್ರೋಲಿಯಂ ಖಾತೆಯ ಮಾಜಿ ಸಚಿವರೂ, ಕಾಂಗ್ರೆಸ್‌ನ ಹಿರಿಯರೂ ಆಗಿರುವ ನಾಯಕರೊಬ್ಬರು ಪೆಟ್ರೋಲ್‌ಅನ್ನು ಜಿಎಸ್‌ಟಿಗೆ ಸೇರಿಸಬೇಕೆಂದು ಆಗ್ರಹಿಸಿದ್ದಾರೆ. ಪೆಟ್ರೋಲ್ ಮೇಲಿನ ಮಿತಿ ಇಲ್ಲದ ತೆರಿಗೆ ಇಳಿಸುವುದು ಕಾಂಗ್ರೆಸ್ ಉದ್ದೇಶವಲ್ಲ, ಅದನ್ನು GSTಗೆ ಸೇರಿಸುವುದಷ್ಟೇ ಅದರ ಉದ್ದೇಶ ಎಂಬುದು ಸಾಬೀತಾಗಿದೆ. ಆದರೆ ಅದರ ಅಪಾಯ ಕಾಂಗ್ರೆಸ್‌ಗೆ ಗೊತ್ತಿಲ್ಲ" ಎಂದು ಹೇಳಿದ್ದಾರೆ.
"ಕೇಂದ್ರದ ಅಧಿಕಾರದ ಮೇಲೆ ಕಣ್ಣಿಟ್ಟು ಅದರ ಸುತ್ತಲೇ ರಾಜಕಾರಣ ಮಾಡುವುದಷ್ಟೇ ರಾಷ್ಟ್ರೀಯ ಪಕ್ಷಗಳ ಅಜೆಂಡಾ. ಅವುಗಳಿಗೆ ರಾಜ್ಯಗಳ ಹಿತಾಸಕ್ತಿ, ಸ್ಥಳೀಯ ಅಗತ್ಯಗಳು ಲೆಕ್ಕಕ್ಕೇ ಇಲ್ಲ. ಪೆಟ್ರೋಲ್ ಅನ್ನು GSTಗೆ ಸೇರಿಸುವುದು ರಾಜ್ಯಗಳನ್ನು ಶೋಷಿಸಿದಂತೆ. ಈಗ ಕಾಂಗ್ರೆಸ್-ಬಿಜೆಪಿಗಳೆರಡೂ ಆ ಶೋಷಣೆ ಪರವಾಗಿ ನಿಂತಿವೆ ಎಂಬುದು ಬಹಿರಂಗವಾಗಿದೆ" ಎಂದು ಟ್ವೀಟ್ ಮಾಡಿದ್ದಾರೆ.
(ಮಾಹಿತಿ ಕೃಪೆ Oneindia)
ಶಾಲಾ ಶುಲ್ಕ ವಿಚಾರದಲ್ಲಿ ಪೋಷಕರಿಗೆ ಶಾಕಿಂಗ್ ನ್ಯೂಸ್
ಬೆಂಗಳೂರು: ಶಾಲಾ ಶುಲ್ಕ ವಿನಾಯಿತಿಗೆ ಕಾಯುತ್ತಿದ್ದ ಪೋಷಕರಿಗೆ ಖಾಸಗಿ ಶಾಲೆಗಳ ಒಕ್ಕೂಟದಿಂದ ಬಿಗ್ ಶಾಕ್ ನೀಡಲಾಗಿದ್ದು, ಈ ವರ್ಷ ಖಾಸಗಿ ಶಾಲೆಗಳ ಶುಲ್ಕದಲ್ಲಿ ವಿನಾಯಿತಿ ನೀಡುವುದಿಲ್ಲ ಎಂದು ಹೇಳಲಾಗಿದೆ.
ಶುಲ್ಕ ವಿಚಾರದಲ್ಲಿ ವಿನಾಯಿತಿ ನೀಡಲು ಸಾಧ್ಯವಿಲ್ಲ. ಯಾವುದೇ ಕಾರಣಕ್ಕೂ ಶುಲ್ಕ ವಿನಾಯಿತಿ ನೀಡುವುದಿಲ್ಲ ಎಂದು ಖಾಸಗಿ ಶಾಲೆಗಳ ಒಕ್ಕೂಟದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಶೇಕಡ 20 ರಷ್ಟು ಮಕ್ಕಳ ದಾಖಲಾತಿ ಕುಂಠಿತವಾಗಿದೆ. ಒಂದೇ ಹಂತದಲ್ಲಿ ಶುಲ್ಕ ಕಟ್ಟಲು ಹೇಳುತ್ತಿಲ್ಲ. ಪೋಷಕರು ಹಲವು ಕಂತುಗಳಲ್ಲಿ ಶುಲ್ಕ ಪಾವತಿಸಬೇಕು. ಯಾವುದೇ ಕಾರಣಕ್ಕೂ ವಿನಾಯ್ತಿ ನೀಡುವುದಿಲ್ಲವೆಂದು ಖಾಸಗಿ ಶಾಲೆಗಳ ಸಭೆಯಲ್ಲಿ ಒಮ್ಮತದ ನಿರ್ಧಾರ ಕೈಗೊಳ್ಳಲಾಗಿದೆ.
ಮಕ್ಕಳನ್ನು ಶಾಲೆಗೆ ದಾಖಲಿಸುವಂತೆ ಸರ್ಕಾರವೇ ಸೂಚನೆ ನೀಡಬೇಕು. ಶುಲ್ಕ ಪಾವತಿ, ವಿನಾಯಿತಿ ಬಗ್ಗೆ ಸರ್ಕಾರ ಆದೇಶ ಹೊರಡಿಸಿಲ್ಲ. ಕೆಲವು ಪೋಷಕರು 2 -3 ವರ್ಷಗಳಿಂದ ಶುಲ್ಕ ಪಾವತಿಸಿಲ್ಲ. ಹಾಗಾಗಿ ಶುಲ್ಕ ಪಾವತಿಸಬೇಕು. ವಿನಾಯಿತಿ ನೀಡಲ್ಲವೆಂದು ತೀರ್ಮಾನಿಸಲಾಗಿದೆ ಎಂದು ಹೇಳಲಾಗಿದೆ.
ಹಸಿವು ತಾಳದೇ ಕೂದಲನ್ನು ತಿನ್ನುತ್ತಿದ್ದ ಬಾಲಕಿ: ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರಿಗೆ ಕಾದಿತ್ತು ಅಚ್ಚರಿ!
'ರಾಪುಂಜೆಲ್ ಸಿಂಡ್ರೋಮ್' ಎಂಬ ಅಪರೂಪದ ಕಾಯಿಲೆಯಿಂದ ಶಂಶಾಬಾದ್ ಎಂಬ ಬಾಲಕಿ ಬಳಲುತ್ತಿದ್ದಳು. ಇದಕ್ಕೆ ಕಾರಣ ಹಸಿವಿನಿಂದ ತನ್ನ ಕೂದಲನ್ನೇ ಈಕೆ ಐದು ತಿಂಗಳಿನಿಂದ ಸೇವಿಸುತ್ತಾ ಬಂದಿದ್ದಾಳೆ. ನಂತರ ಸಮಸ್ಯೆ ವಿಪರೀತಕ್ಕೆ ಹೋದಾಗ
ಆಸ್ಪತ್ರೆಗೆ ಸೇರಿಸಲಾಗಿದೆ
.
150 ಸೆಂ.ಮೀ ಉದ್ದ ಬೆಳೆದಿದ್ದ ಸುಮಾರು 2 ಕೆಜಿ ಕೂದಲನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರ ತೆಗೆಯಲಾಗಿದೆ. ವಾಂತಿ ಮತ್ತು ಹೊಟ್ಟೆ ನೋವಿನಿಂದಾಗಿ ಒಂದು ತಿಂಗಳ ಹಿಂದೆ 17 ವರ್ಷದ ಹುಡುಗಿ ಪೂಜಿತಾ ಮಂಡಲ್ ಆಸ್ಪತ್ರೆಗೆ ದಾಖಲಾಗಿದ್ದಳು. ತನ್ನ ಸ್ವಂತ ಕೂದಲನ್ನು ಹುಡುಗಿ ತಿನ್ನುತ್ತಿದ್ದಳು ಎಂದು ಆಕೆಯ ಸಹೋದರಿ ತಿಳಿಸಿದ ಬಳಿಕ ಆಕೆಗೆ ಚಿಕಿತ್ಸೆ ಪ್ರಾರಂಭಿಸಿದ್ದೆವು ಎಂದು ಉಸ್ಮಾನಿಯ ಆಸ್ಪತ್ರೆಯ ಅಧೀಕ್ಷಕ ಡಾ.ನಾಗೇಂದರ್ ಬಿ. ಹೇಳಿದ್ದಾರೆ.(ಮಾಹಿತಿ ಕೃಪೆ ವಿಜಯವಾಣಿ)
ಅಪಹರಣವಾದ 24 ಗಂಟೆಯಲ್ಲೇ ಶಿಶು ರಕ್ಷಣೆ: ಗೋವಾ ಪೊಲೀಸರಿಗೆ ಸಿಎಂ ಸಾವಂತ್ ಶ್ಲಾಘನೆ
ಮಗು ಅಪಹರಿಸಿದ್ದ ಮಹಿಳೆಯನ್ನು ಉತ್ತರ ಗೋವಾದ ಸಾಲೇಲಿ ಗ್ರಾಮದಲ್ಲಿ ಬಂಧಿಸಲಾಗಿದೆ.
ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಮುನ್ನಡೆಸಿದ ಮತ್ತು ಅಪಹರಣವಾದ ಕೇವಲ 24 ಗಂಟೆಗಳಲ್ಲೇ ಒಂದೂವರೆ ತಿಂಗಳ ಶಿಶುವನ್ನು ರಕ್ಷಿಸಿದ ಗೋವಾ ಪೊಲೀಸರನ್ನು ಅಭಿನಂದಿಸುತ್ತೇನೆ. ನಾಗರಿಕರ ರಕ್ಷಣೆ ಮತ್ತು ಭದ್ರತೆಯೇ ಸರ್ಕಾರದ ಮೊದಲ ಆದ್ಯತೆ ಎಂದು ಸಾವಂತ್ ಟ್ವೀಟ್ ಮಾಡಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ ಜೂನ್ 11 ರಂದು, ಗೋವಾ ವೈದ್ಯಕೀಯ ಕಾಲೇಜು ಆಸ್ಪತ್ರೆಯಿಂದ ಅಪರಿಚಿತ ಮಹಿಳೆಯೊಬ್ಬರು ಶಿಶು ಅಪಹರಿಸಿದ್ದಾರೆ ಎಂಬ ಮಾಹಿತಿ ಅಗಾಕೈಮ್ ಪೊಲೀಸ್ ಠಾಣೆಗೆ ಲಭ್ಯವಾಗಿದೆ.
ಶಿಶುವಿನ ತಾಯಿ ಲಲಿತಾ ನಾಯಕ್ ಅವರನ್ನು ಭೇಟಿಯಾದ ಅಪರಿಚಿತ ಮಹಿಳೆಯೊಬ್ಬರು, ಮಾತನಾಡಿಸುವ ನೆಪದಲ್ಲಿ ಅವರ (ತಾಯಿಯ) ಗಮನವನ್ನು ಬೇರೆಡೆಗೆ ಸೆಳೆದು ಮಗು ಅಪಹರಿಸಿದ್ದಾರೆ.
ಮಾಹಿತಿ ದೊರೆತ ತಕ್ಷಣವೇ ಉತ್ತರ ಗೋವಾ ಜಿಲ್ಲೆ ಮತ್ತು ಅಪರಾಧ ವಿಭಾಗದ ತಂಡ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ಆರಂಭಿಸಿದೆ. ಸಿಸಿಟಿವಿ ದೃಶ್ಯಗಳಲ್ಲಿಯೂ ಮುಖ ಗುರುತು ಸ್ಪಷ್ಟವಾಗಿಲ್ಲದ ಕಾರಣ ಪ್ರಕರಣ ಬೇಧಿಸುವುದು ಸವಾಲಾಗಿದೆ ಎಂದು ಪೊಲೀಸರು ತಿಳಿಸಿದ್ದರು.
ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ತಂಡಗಳು ಲಭ್ಯವಾದ ನಿಖರ ಮಾಹಿತಿಯನ್ನು ಆಧರಿಸಿ ಬಿಚೋಲಿಮ್ ಮತ್ತು ವಲ್ಪೋಯಿ ನಗರ, ಸುತ್ತಮುತ್ತ ಹುಡುಕಾಟ ಆರಂಭಿಸಿದವು. ಬಳಿಕ ಸಾಲೇಲಿ ಗ್ರಾಮವನ್ನು ಸುತ್ತುವರಿದು, ಆಸ್ಪತ್ರೆ ಮತ್ತು ತಾಯಿ ನೀಡಿದ ಹೇಳಿಕೆಗಳಿಗೆ ಹೊಂದಿಕೆಯಾಗುವ ಮಗುವನ್ನು ಪತ್ತೆಹಚ್ಚಲಾಯಿತು.
ಬಂಧನಕ್ಕೊಳಗಾಗಿರುವ ಮಹಿಳೆಯನ್ನು ವಿಶ್ರಾಂತಿ ಗವಾಸ್ ಎಂದು ಗುರುತಿಸಲಾಗಿದೆ. ಮಗುವನ್ನು ತಾನೇ ಸಾಕಲು ನಿರ್ಧರಿಸಿದ್ದುದಾಗಿ ಮತ್ತು ಅದಕ್ಕಾಗಿಯೇ ಅಪಹರಿಸಿದ್ದಾಗಿ ವಿಚಾರಣೆ ವೇಳೆ ಆರೋಪಿ ಮಹಿಳೆ ಹೇಳಿಕೆ ನೀಡಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.