WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Thursday, June 17, 2021

ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ ಯುವತಿ ಪ್ರಾಣ ಉಳಿಸಲು ನೆರವಾಯ್ತು ಶ್ವಾನ

 

ಸೇತುವೆ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದ ಯುವತಿಯೊಬ್ಬರನ್ನು ರಕ್ಷಿಸಿದ ಬ್ರಿಟನ್‌ನ ನಾಯಿಯೊಂದನ್ನು ಹೀರೋ ಎಂದು ನೆಟ್ಟಿಗರು ಕೊಂಡಾಡಿದ್ದಾರೆ.

ಡಿಗ್ಬಿ ಹೆಸರಿನ ಈ ನಾಯಿಯ ಬಗ್ಗೆ ಪರಿಚಯ ಕೊಟ್ಟಿರುವ ಡೆವೋನ್ ಮತ್ತು ಸೋಮರ್ಸೆಟ್ ಅಗ್ನಿ ಮತ್ತು ರಕ್ಷಣಾ ಸೇವೆ ಟ್ವೀಟ್ ಒಂದನ್ನು ಮಾಡಿದ್ದು, "ಇದು ಡಿಗ್ಬಿ. ಇಂದು ಈತ ಅಸಾಧಾರಣ ಕೆಲಸವೊಂದನ್ನು ಮಾಡಿದ್ದು, ಎಕ್ಸ್ಟರ್‌ ಬಳಿಯ ಎಂ5 ಮೇಲಿನ ಸೇತುವೆ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳಲು ಆಲೋಚಿಸಿದ ಯುವತಿಯೊಬ್ಬರನ್ನು ರಕ್ಷಿಸಿದ್ದಾನೆ" ಎಂದು ತಿಳಿಸಿದ್ದಾರೆ.

ತನ್ನ 'ಡಿಫ್ಯೂಸಿಂಗ್ ಸೆಶನ್‌ಗಳ ಮೂಲಕ ಡಿಗ್ಬಿ, ಭಾರೀ ನೋವಿನಲ್ಲಿರುವ ಮಂದಿಗೆ ಥೆರಪಿ ಕೊಡುತ್ತಾನೆ" ಎಂದಿರುವ ಇಲಾಖೆ, "ಆತ್ಮಹತ್ಯೆಯ ಆಲೋಚನೆ ಮಾಡುತ್ತಿದ್ದ ಯುವತಿ ಡಿಗ್ಬಿಯನ್ನು ನೋಡಿ ಸ್ಮೈಲ್ ಮಾಡಿದ್ದಾಳೆ. ಇದರಿಂದಾಗಿ ಸಂವಹನವೊಂದು ಆರಂಭಗೊಂಡಿತು" ಎಂದು ಹೇಳಿದ್ದು, ಆತನ ಸೇವೆಯ ಬಗ್ಗೆ ವಿವರಿಸಿದೆ.

"ಡಿಗ್ಬಿಯನ್ನು ಭೇಟಿ ಮಾಡಲು ಸೇತುವೆಯಿಂದ ಇಳಿದು ಬರಲು ಸಾಧ್ಯವೇ ಎಂದು ಯುವತಿಯನ್ನು ಕೇಳಿದಾಗ ಆಕೆ ಇಳಿದು ಬಂದಿದ್ದಾರೆ. ಆಕೆಯ ತ್ವರಿತ ಚೇತರಿಕೆಗೆ ಹಾರೈಸುತ್ತೇವೆ" ಎಂದು ಟ್ವೀಟ್‌ನಲ್ಲಿ ತಿಳಿಸಲಾಗಿದೆ. ಇದೇ ವೇಳೆ ಡಿಗ್ಬಿಯ ತರಬೇತುದಾರ ಮ್ಯಾಟ್‌ಗೆ ಧನ್ಯವಾದ ತಿಳಿಸಲಾಗಿದೆ.

(ಮಾಹಿತಿ ಕೃಪೆ ಕನ್ನಡದುನಿಯಾ  )

No comments:

Post a Comment

ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ