WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Saturday, April 11, 2020

'ಬೇರೇನೂ ಬೇಡ, ನಮಗೆ ಊಟ ಕೊಡಿ....': ಅಲೆಮಾರಿ ಕುಟುಂಬಗಳ ಅಳಲು


ರಾಯಚೂರು, ಎ.11: ಕೊರೋನ ವೈರಸ್ ಸೋಂಕು ನಿಯಂತ್ರಣಕ್ಕೆ ಲಾಕ್‍ಡೌನ್ ಜಾರಿಯಾದ ಬೆನ್ನಲ್ಲೇ ಹಲವು ಜನರ ಜೀವನದ ಮೇಲೆ ಪರಿಣಾಮ ಬೀರಿದ್ದು, ಅದರಂತೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಪಟ್ಟಣದಲ್ಲಿರುವ 20ಕ್ಕೂ ಹೆಚ್ಚು ಅಲೆಮಾರಿ ಕುಟುಂಬಗಳು 'ನಿಮ್ಮಿಂದ ನಮಗೆ ಏನೂ ಬೇಡ. ಆದರೆ, ಊಟವನ್ನು ನೀಡಿ' ಎಂದು ಅಂಗಲಾಚಿ ಮನವಿ ಮಾಡಿಕೊಂಡಿದ್ದಾರೆ.
ದೇವದುರ್ಗ ತಾಲೂಕಿನ ಜಾಲಹಳ್ಳಿಯ ಸಾರ್ವಜನಿಕ ಆಸ್ಪತ್ರೆಯ ಹಿಂದೆ ಸುಮಾರು 20ಕ್ಕೂ ಹೆಚ್ಚು ಅಲೆಮಾರಿ ಕುಟುಂಬಗಳು ವಾಸಿಸುತ್ತಿದ್ದು, ಲಾಕ್‍ಡೌನ್‍ನಿಂದಾಗಿ ಊಟಕ್ಕೂ ಪರದಾಡುವಂತಹ ಪರಿಸ್ಥಿತಿ ಬಂದಿದೆ. ಹೀಗಾಗಿ, ಈ ಕುಟುಂಬಗಳು ನಿಮ್ಮಿಂದ ನಮಗೆ ಏನೂ ಬೇಡ. ಆದರೆ, ಊಟವನ್ನು ಕೊಟ್ಟು ನಮ್ಮನ್ನು ಬದುಕಿಸಿ ಎಂದು ಅಳಲು ತೋಡಿಕೊಂಡಿದ್ದಾರೆ.
ಕೊರೋನ ಲಾಕ್‍ಡೌನ್ ಬಳಿಕ ಅಲೆಮಾರಿ ಜನರು ಎಲ್ಲಿಗೂ ಹೋಗಲಾರದೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಪರದಾಡುತ್ತಿದ್ದಾರೆ.
'ಕಳೆದ 15 ದಿನಗಳಿಂದ ತಾಲೂಕು ಆಡಳಿತ ಅಥವಾ ಶಾಸಕರು ಯಾರೂ ನಮ್ಮ ನೆರವಿಗೆ ಬರಲಿಲ್ಲ. ಬೇರೆ ಯಾರೂ ನಮ್ಮ ಗೋಳು ಕೇಳಿ ಸಹಾಯ ಮಾಡೋರಿಲ್ಲ' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

2ನೇ ಹಂತದ ಲಾಕ್‌ಡೌನ್ ವಿಭಿನ್ನ: ಕರ್ನಾಟಕದಲ್ಲಿ ಹೇಗಿರಲಿದೆ..?


ಬೆಂಗಳೂರು, (ಏ.11): 2ನೇ ಹಂತದ ಲಾಕ್‌ ಡೌನ್ ಎದುರಿಸಲು ರಾಜ್ಯದ ಜನತೆ ಮಾನಸಿಕವಾಗಿ ಸಿದ್ಧರಾಗಿ.
ಯಾಕಂದ್ರೆ ಕರ್ನಾಟಕದಲ್ಲಿ ಲಾಕ್ ಡೌನ್ ವಿಸ್ತರಣೆ ಕುರಿತಂತೆ ಮುಖ್ಯಮಂತ್ರಿ ಬಿಎಸ್ ಯಡಿಯ್ಯೂರಪ್ಪನವರು ಮಹತ್ವದ ಮುನ್ಸೂಚನೆ ನೀಡಿದ್ದಾರೆ.
2ನೇ ಹಂತದ ಲಾಕ್‌ಡೌನ್ ವಿಭಿನ್ನ: ಮದ್ಯಪ್ರಿಯರಿಗೆ ಸಿಗುತ್ತಾ ಗುಡ್‌ನ್ಯೂಸ್..?
ಇಂದು (ಶನಿವಾರ) ಪ್ರಧಾನಿ ನರೇಂದ್ರ ಮೋದಿಯವರ ಜೊತೆಗೆ ನಡೆದ ಸಂವಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಎಸ್‌ವೈ, ಮುಂದಿನ 15 ದಿನಗಳ ಕಾಲ ಲಾಕ್‌ಡೌನ್‌ ವಿಸ್ತರಣೆ ಮಾಡುವುದು ಅನಿವಾರ್ಯವಾಗಿದೆ. ಆದ್ರೆ, ಈ ಬಾರಿ ಲಾಕ್‌ಡೌನ್ ವಿಭಿನ್ನವಾಗಿರಿದ್ದು, ಶೀಘ್ರದಲ್ಲೇ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.
ಸಿಎಂ ಸುದ್ದಿಗೋಷ್ಠಿ: ಲಾಕ್​ಡೌನ್​ ವಿಸ್ತರಣೆ ಅನಿವಾರ್ಯ, ವಿಭಿನ್ನವಾಗಿರಲಿದೆ ಎಂದ ಬಿಎಸ್‌ವೈ
ಸಿಎಂ ಹೇಳಿದಂತೆ ವಿಭಿನ್ನವಾಗಿರಲಿದ್ದು, 2ನೇ ಹಂತದ ಲಾಕ್‌ಡೌನ್ ಫುಲ್ ಕಟ್ಟುನಿಟ್ಟಾಗಿರುತ್ತದೆ.
ಈ ನಡುವೆ ಕೆಲವು ಸೇವೆಗಳು ಎಂದಿನಂತೆ ಲಭ್ಯವಾಗಲಿದ್ದಾವೆ ಎನ್ನಲಾಗಿದ್ದು, ಹಾಲು, ತುರ್ತುವಾಹನ, ಜಲಮಂಡಳಿ ಸೇವೆ. ಹೂವು, ಹಣ್ಣಿನ ಅಂಗಡಿ, ದಿನಸಿ ಅಂಗಡಿ, ಮೆಡಿಕಲ್‌ ಶಾಪ್‌ ಸೇವೆಗಳು ಲಭ್ಯವಿರುತ್ತದೆ.
ಕರ್ನಾಟಕದಲ್ಲಿ ಲಾಕ್ ಡೌನ್ ಹೇಗಿರಲಿದೆ?
* ಅಗತ್ಯ ವಸ್ತುಗಳು ಎಂದಿನಂತೆ ಸಿಗಲಿದೆ..
* ಕೃಷಿ ಚಟುವಟಿಕೆಗಳಿಗೆ ತೊಂದರೆ ಇಲ್ಲ.
* ಮೆಡಿಷಿನ್ ಕಾರ್ಖಾನೆಗಳಿಗೆ ಆದ್ಯತೆ..
* 50:50ರಷ್ಟು ಕಾರ್ಮಿಕರ ಮಾದರಿಯಲ್ಲಿ ಕಾರ್ಯಾಚರಣೆ...
* ಸರ್ಕಾರಿ ಕಚೇರಿಗಳು ಭಾಗಶಃ ಕಾರ್ಯನಿರ್ವಹಣೆ..
* ಶೇಕಡಾ 50 ಸಿಬ್ಬಂದಿಗಳು ಮಾತ್ರ ಕಾರ್ಯನಿರ್ವಹಿಸುವುದು..
* ಸಾಂಪ್ರದಾಯಿಕ ಮೀನುಗಾರಿಕೆಗೆ ಮಾತ್ರ ಪೂರ್ಣ ಸ್ವಾತಂತ್ರ್ಯ. ಬಂದರುಗಳ ಬಳಕೆ ಮಾಡುವಂತಿಲ್ಲ...
* ಸರ್ಕಾರಿ ಸೇವೆಗೆ ಮಾತ್ರ ಅಗತ್ಯ ಸಾರಿಗೆ ವ್ಯವಸ್ಥೆ.
* ಜಿಲ್ಲಾ ಗಡಿ ಪೂರ್ಣ ಬಂದ್.
* ಪಾಸ್ ಇಲ್ಲದ ಖಾಸಗಿ ವಾಹನಗಳು ಪೂರ್ಣ ಬಂದ್ .
* ಬಾರ್, ಜಿಮ್, ಮಾಲ್ ಪೂರ್ಣ ಬಂದ್...
* ಜಾತ್ರೆ, ಶಾಲೆಗಳು, ಕಾಲೇಜುಗಳು ಪೂರ್ಣ ಬಂದ್.
* ಎಂಎಸ್ ಐಎಲ್ ಮೂಲಕ‌ ಮದ್ಯ ಮಾರಾಟಕ್ಕೆ ಚಿಂತನೆ...
* ಸೋಂಕು ಹೆಚ್ಚಿರುವ ಪ್ರದೇಶಗಳಲ್ಲಿ ಡಬ್ಬಲ್ ಲಾಕ್ ಡೌನ್...
* ಅನ್ ಲೈನ್ ಫುಡ್ ಸರಬರಾಜಿಗೆ ಅನುಮತಿ ಮುಂದುವರಿಕೆ.

ಕೊರೊನಾ ಎಫೆಕ್ಟ್ : 'ಆರೋಗ್ಯ ಸೇತು' ಆಯಪ್ ಕಡ್ಡಾಯವಾಗಿ ಬಳಸುವಂತೆ 'ರಾಜ್ಯ ಸರ್ಕಾರ' ಆದೇಶ




ಬೆಂಗಳೂರು ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಆರೋಗ್ಯ ಸೇತು ಆಯಪ್ ನ್ನು ಎಲ್ಲರೂ ಕಡ್ಡಾಯವಾಗಿ ಬಳಸುವಂತೆ ರಾಜ್ಯ ಸರ್ಕಾರ ಆದೇಶ ನೀಡಿದೆ.
ಈ ಬಗ್ಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯ್ ಭಾಸ್ಕರ್ ಸುತ್ತೋಲೆ ಹೊರಡಿಸಿದ್ದು, ಸಾರ್ವಜನಿಕರು, ಸ್ವಯಂ ಸೇವಕರು. ಸರ್ಕಾರಿ ನೌಕರರು ಕಡ್ಡಾಯವಾಗಿ ಆರೋಗ್ಯ ಸೇತು ಆಯಪ್ ನ್ನು ನ್ನು ಡೌನ್ ಲೋಡ್ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರದಿಂದ ಕೊರೊನಾ ವಿರುದ್ಧದ ಹೋರಾಟಕ್ಕೆ ಈ ಆಪ್ ಬಿಡುಗಡೆ ಮಾಡಲಾಗಿದೆ. ಈ ಆಪ್ ಮೂಲಕ ಸಾರ್ವಜನಿಕರ ಆರೋಗ್ಯದ ಮೇಲೆ ನಿಗಾ ವಹಿಸುತ್ತಿರುವ ಕೇಂದ್ರ ಸರ್ಕಾರ, ಕೊರೊನಾ ಸೋಂಕಿನ ನಿಯಂತ್ರಣಕ್ಕೆ ಬ್ರೇಕ್ ಆಗುವ ಕೆಲಸ ಮಾಡುತ್ತಿದೆ.
ದೇಶಾದ್ಯಂತ ಕೊರೊನಾ ವೈರಸ್ ಸೋಂಕತ ಸಂಖ್ಯೆ ಹೆಚ್ಚಾಗುತ್ತಿದೆ. ಅಲ್ಲದೇ ಹೋಂ ಕ್ವಾರಂಟೈನ್ ನಲ್ಲಿದ್ದವರು ಹೊರಗೆ ಬರುವ ಮೂಲಕ, ಸೋಂಕಿನ ಸಂಖ್ಯೆ ಕೂಡ ದ್ವಿಗುಣವಾಗುತ್ತಿದೆ. ಇದನ್ನು ನಿಯಂತ್ರಿಸುವ ಸಲುವಾಗಿ, ಕೇಂದ್ರ ಆರೋಗ್ಯ ಸೇತು ಎನ್ನುವಂತ ಆಪ್ ಬಿಡುಗಡೆ ಮಾಡಿದೆ. ಈ ಮೂಲಕ ಕೊರೊನಾ ವೈರಸ್ ಸೋಂಕು ಸೇರಿದಂತೆ ದೇಶದ ಜನರ ಆರೋಗ್ಯದ ಮೇಲೆ ನಿಗಾ ವಹಿಸುತ್ತಿದೆ.ಈ ಆಪ್ ಮೂಲಕ ಕೊರೊನಾ ವೈರಸ್ ಸೋಂಕಿತರ ಲೊಕೇಷನ್ ಮಾಹಿತಿ ಸೇರಿದಂತೆ ಸೋಂಕಿತರು ಮತ್ತೊಬ್ಬ ಆರೋಗ್ಯ ವಂತ ವ್ಯಕ್ತಿಯ ಸಂಪರ್ಕ ಹೊಂದಿ, ಸೋಂಕು ಹರಡದಂತೆ ಎಚ್ಚರಿಕೆ ವಹಿಸಲಿದೆ.

ಕಾರವಾರ: 'ಅಮ್ಮನ ಅಂತ್ಯಸಂಸ್ಕಾರಕ್ಕೂಹೋಗಲಿಲ್ಲ' ಅಸ್ಸಾಂನ ಕಾರ್ಮಿಕನ ಕಣ್ಣೀರು


ಕಾರವಾರ: ದೂರದ ಅಸ್ಸಾಂ ರಾಜ್ಯದ ಆ ಯುವಕ ನೌಕರಿ ನಿಮಿತ್ತ ಬೆಂಗಳೂರಿನಿಂದ ಪಣಜಿಗೆ ಪ್ರಯಾಣಿಸುತ್ತಿದ್ದರು. ಮಾರ್ಚ್ 24ರಂದು ಕಾರವಾರಕ್ಕೆ ತಲುಪಿದಾಗ ಲಾಕ್‌ಡೌನ್ ಘೋಷಣೆಯಾಗಿ, ಇಲ್ಲೇ ಬಾಕಿಯಾದರು. ಏ.8ರಂದು ಸ್ವಗ್ರಾಮದಲ್ಲಿ ತಾಯಿ ಮೃತಪಟ್ಟರು. ಆದರೆ, ಅವರ ಮುಖವನ್ನು ಕೊನೆಯ ಬಾರಿಗೊಮ್ಮೆ ನೋಡಲಾಗದೇ ದುಃಖಿಸುತ್ತಿದ್ದಾರೆ.
ಇದು ಅಸ್ಸಾಂನ ಬಾಬುಲ್ ಮಾಜಿ ಎಂಬ ಕಾರ್ಮಿಕರೊಬ್ಬರು ಎದುರಿಸುತ್ತಿರುವ ಸಂಕಟದ ಸ್ಥಿತಿ. ಕಾರವಾರಕ್ಕೆ ತಲುಪಿದಾಗ ಲಾಕ್‌ಡೌನ್ ಘೋಷಣೆಯಾಯಿತು. ಬಳಿಕ ಎಲ್ಲ ರೀತಿಯ ವಾಹನಗಳ ಸಂಚಾರ ನಿಂತುಹೋಯಿತು. ಹಾಗಾಗಿ ನಗರಸಭೆಯು ನಿರ್ಗತಿಕರಿಗೆ ಮಾಡಿದ ವಸತಿ ವ್ಯವಸ್ಥೆಯಲ್ಲಿ ಅವರು ಉಳಿದುಕೊಂಡಿದ್ದಾರೆ. ಅವರಂತೆ ಸುಮಾರು 15 ಮಂದಿ ಇಲ್ಲಿ ಆಶ್ರಯ ಪಡೆದಿದ್ದಾರೆ.

‘ತಾಯಿ ಮೃತಪಟ್ಟಿದ್ದಾಗಿ ಊರಿನಿಂದ ದೂರವಾಣಿ ಕರೆ ಬಂತು. ಆದರೆ, ಊರಿಗೆ ತೆರಳಲು ಯಾವುದೇ ಸಾರಿಗೆ ವ್ಯವಸ್ಥೆ, ರೈಲುಗಳ ಸಂಚಾರ ಇಲ್ಲ. ಹಾಗಾಗಿ ಅಮ್ಮನ ಮುಖವನ್ನೊಮ್ಮೆ ಕೊನೆಯ ಬಾರಿಗೆ ನೋಡಿ ಅವರ ಅಂತ್ಯಸಂಸ್ಕಾರದಲ್ಲಿ  ಭಾಗವಹಿಸಲು ಸಾಧ್ಯವಾಗಲಿಲ್ಲ’ ಎಂದು ಕಣ್ಣೀರಿಟ್ಟರು.

‘ಕೆಲಸಕ್ಕೆ ತೆರಳಲು ಅಮ್ಮನೇ ನನಗೆ ₹ 500 ಕೊಟ್ಟಿದ್ದರು. ನನ್ನ ದುಡಿಮೆಯನ್ನು ನೋಡಲು ಈಗ ಅವರೇ ಇಲ್ಲ. ಅವರ ಅಂತ್ಯಸಂಸ್ಕಾರದ ಎಲ್ಲ ಕಾರ್ಯಗಳನ್ನೂ ಅಪ್ಪ ಹಾಗೂ ಅಣ್ಣಂದಿರು ನೆರವೇರಿಸಿದ್ದಾರೆ. ನನಗೆ ಇನ್ನಾದರೂ ಮನೆಗೆ ತೆರಳಲು ಯಾವುದಾದರೂ ವ್ಯವಸ್ಥೆ ಕಲ್ಪಿಸಬೇಕು’ ಎಂದು ಅಳಲು ತೋಡಿಕೊಂಡರು.

‘ಇಲ್ಲಿ ಆಶ್ರಯ ಪಡೆದವರಿಗೆ ವಿವಿಧ ಸಂಘಟನೆಗಳಿಂದ ಊಟ, ತಿಂಡಿ ಪೂರೈಕೆ ಮಾಡಲಾಗುತ್ತಿದೆ. ಆದರೆ, ದುಡಿಮೆಯಿಲ್ಲದ ಕಾರಣ ಕುಟುಂಬದವರ ಸ್ಥಿತಿ ಹೇಗಿದೆ ಎಂದು ತಿಳಿಯುತ್ತಿಲ್ಲ. ನಮ್ಮನ್ನು ಮನೆಗಳಿಗೆ ಕಳುಹಿಸಿಕೊಡಲು ವ್ಯವಸ್ಥೆ ಮಾಡಬೇಕು’ ಎಂದು ಕಾರ್ಮಿಕರು ಮನವಿ ಮಾಡಿದರು.

ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ದಾರಿಹೋಕನಿಗೆ ಡಿಕ್ಕಿ: ಸಾವು

ಹೊಸಪೇಟೆ: ತಾಲ್ಲೂಕಿನ ಮಲಪನಗುಡಿ ಬಳಿ ಶುಕ್ರವಾರ ದ್ವಿಚಕ್ರ ವಾಹನ ಸವಾರ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ದಾರಿಹೋಕನಿಗೆ ಡಿಕ್ಕಿ ಹೊಡೆದಿದ್ದರಿಂದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ತಾಲ್ಲೂಕಿನ ಗಾಳೆಮ್ಮನಗುಡಿಯ ರಾಮಪ್ಪ (60) ಮೃತರು.
'ರಾಮಪ್ಪ ಅವರು ಶುಕ್ರವಾರ ಮಧ್ಯಾಹ್ನ ಪಡಿತರ ತೆಗೆದುಕೊಂಡು ಹೋಗಲು ಮಲಪನಗುಡಿಗೆ ಬಂದಿದ್ದರು. ರಸ್ತೆ ದಾಟಿಕೊಂಡು ಹೋಗುವಾಗ ಈ ವೇಳೆ ಕಮಲಾಪುರದಿಂದ ನಗರದ ಕಡೆಗೆ ದ್ವಿಚಕ್ರ ವಾಹನದ ಮೇಲೆ ಇಬ್ಬರು ಯುವಕರು ಬರುತ್ತಿದ್ದರು. ಅವರನ್ನು ತಡೆಯಲೆತ್ನಿಸಿದಾಗ ತಪ್ಪಿಸಿಕೊಂಡು ಹೋಗುವ ಭರದಲ್ಲಿ ನಿಯಂತ್ರಣ ತ‍ಪ್ಪಿ ರಾಮಪ್ಪ ಅವರಿಗೆ ಡಿಕ್ಕಿ ಹೊಡೆದಿದ್ದಾರೆ. ತೀವ್ರ ರಕ್ತಸ್ರಾವವಾಗಿ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ' ಎಂದು ಪೊಲೀಸ್‌ ಅಧಿಕಾರಿ  ತಿಳಿಸಿದ್ದಾರೆ.
'ಬೈಕ್‌ ಸವಾರ ಕೂಡ ಗಂಭೀರವಾಗಿ ಗಾಯಗೊಂಡಿದ್ದು, ಬಳ್ಳಾರಿಯ ವಿಮ್ಸ್‌ಗೆ ಕಳುಹಿಸಿಕೊಡಲಾಗಿದೆ. ಯುವಕರು ಇಲ್ಲಿನ ಪಟೇಲ್‌ ನಗರದ ನಿವಾಸಿ ಎಂದು ಗೊತ್ತಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ' ಎಂದು ಹೇಳಿದ್ದಾರೆ.

Friday, April 10, 2020

ಏ.14ಕ್ಕೆ ಲಾಕ್ ಡೌನ್ ಮುಂದುವರೆಯುತ್ತಾ..? ಇಲ್ಲವಾ..? : ಕೊರೊನಾ ತಡೆಗೆ ಪ್ರಧಾನಿ ಮೋದಿಯಿಂದ ನಾಳೆ ಮತ್ತೊಂದು ಸಂದೇಶ


ನವದೆಹಲಿ : ಮಾರಕ ಕೊರೊನಾ ಸೋಂಕು ವ್ಯಾಪಿಸುತ್ತಿದ್ದು, ದೇಶ ಆತಂಕಗೊಂಡಿದೆ. ಏ.14ರ ಬಳಿಕ ದೇಶದಲ್ಲಿ ಲಾಕ್ ಡೌನ್ ಕೊನೆಗೊಳ್ಳಲಿದೆಯಾ ಅಥವಾ ಮುಂದೇನು ಎಂಬ ಪ್ರಶ್ನೆ ಉದ್ಭವಿಸಿದ್ದು, ನಾಳೆ ಪ್ರಧಾನಿ ಮೋದಿ ಈ ಕುರಿತಂತೆ ದೇಶದ ಜನತೆಗೆ ಸ್ಪಷ್ಟ ಸಂದೇಶ ರವಾನಿಸಲಿದ್ದಾರೆ.
ನಾಳೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ಮೋದಿ ಮತ್ತೊಂದು ಸುತ್ತಿನ ವಿಡಿಯೋ ಕಾನ್ಫರೆನ್ಸ್ ಸಭೆ ನಡೆಸಲಿದ್ದು, ಈ ವೇಳೆ ರಾಜ್ಯಗಳಿಂದ ಕೊರೊನಾ ನಿಯಂತ್ರಣ ಹಾಗೂ ವ್ಯಾಪಕವಾಗಿ ಹರಡುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಲಿದ್ದಾರೆ. ಆ ಬಳಿಕ ಪ್ರಧಾನಿ ದೇಶದ ಪರಿಸ್ಥಿತಿಯನ್ನು ಪರಾಮರ್ಶೆ ನಡೆಸಿ ಪರಿಸ್ಥಿತಿ ಅವಲೋಕಿಸಿ ಮುಂದಿನ ಕ್ರಮದ ಕುರಿತು ಜನತೆಗೆ ತಿಳಿಸಲಿದ್ದಾರೆ.
ಕರ್ನಾಟಕದಲ್ಲಿ ಕೊರೊನಾ ತಡೆಗೆ ಇನ್ನು 15 ದಿನಗಳವರೆಗೆ ಲಾಕ್ ಡೌನ್ ಮುಂದುವರೆಸುವುದು ಸೂಕ್ತ ಎಂಬ ವರದಿಯನ್ನು ರಾಜ್ಯ ಸರ್ಕಾರ ಕೇಂದ್ರಕ್ಕೆ ರವಾನಿಸಿದೆ.
ಇನ್ನು ಪ್ರತಿ ರಾಜ್ಯಗಳು ತಮ್ಮ ತಮ್ಮ ರಾಜ್ಯಗಳ ಮಾಹಿತಿಯನ್ನು ಸಲ್ಲಿಸುತ್ತಿದ್ದು, ಈ ಎಲ್ಲ ವಿಚಾರಗಳ ಬಗ್ಗೆ ನಾಳಿನ ಸಿಎಂಗಳೊಂದಿಗೆ ಸಭೆಯಲ್ಲಿ ಪ್ರಸ್ತಾಪವಾಗಲಿದೆ. ಆ ಬಳಿಕ ಏ.14ರ ಬಳಿಕ ಯಾವ ಕ್ರಮ ಕೈಗೊಳ್ಳಲಾಗುವುದೆಂದು ಪ್ರಧಾನಿ ದೇಶದ ಜನತೆಗೆ ಸ್ಪಷ್ಟ ಸಂದೇಶ ರವಾನಿಸಲಿದ್ದಾರೆ…

Thursday, April 9, 2020

ಬಸವಣ್ಣ

ಬಸವಣ್ಣ
12ನೇ ಶತಮಾನದಲ್ಲಿದ್ದ ಶರಣ ಪ್ರಮುಖ. ಪ್ರಸಿದ್ಧ ವಚನಕಾರ, ಸಮಾಜ ಸುಧಾರಕ. ಅಂದು ಕರ್ನಾಟಕದಲ್ಲಿ ನಡೆದ ಸಾಮಾಜಿಕ ಮತ್ತು ಧಾರ್ಮಿಕ ಮಹಾಕ್ರಾಂತಿಯ ನೇತಾರ. ಬಿಜಾಪುರ ಜಿಲ್ಲೆಯ ಬಾಗೇವಾಡಿ ಇವರ ಜನ್ಮಸ್ಥಳ. ವಿದ್ವಾಂಸರು ಬಸವಣ್ಣನವರ ಜನನದ ಕಾಲವನ್ನು 1131 ಎಂದು ಅಭಿಪ್ರಾಯ ಪಡುತ್ತಾರೆ. ಬಿಜ್ಜಳನ ರಾಜ್ಯದ ಭಂಡಾರಿಯಾಗಿದ್ದ ಹಾಗೆ ರಾಜ್ಯದ ಭಕ್ತಿ ಭಂಡಾರಿಯೂ ಆಗಿದ್ದರು. ಕವಿ ಹೃದಯವುಳ್ಳ ವಚನಕಾರರಾಗಿದ್ದರು. ಇವರ ವಚನಗಳಲ್ಲಿ ಭಾವಗೀತೆಯ ತೀವ್ರತೆ ಹಾಗೂ ಮಧುರತೆಯಿದೆ. 1000 ಕ್ಕೂ ಹೆಚ್ಚು ವಚನಗಳುದೊರೆತಿವೆ. "ಕೂಡಲಸಂಗಮದೇವ" ಎಂಬುದು ಇವರ ಅಂಕಿತ. ಇವರ ವಚನಗಳು ಆ ಕಾಲದ ಸಾಮಾಜಿಕ ಹಾಗೂ ಧಾರ್ಮಿಕ ಜೀವನಕ್ಕೆ ಬೆಳಕನ್ನು ಚೆಲ್ಲುತ್ತವೆ ಹಾಗೂ ವಚನಕಾರರ ಜೀವನದೃಷ್ಟಿಯನ್ನು ತಿಳಿಸುತ್ತವೆ.


ಬಳ್ಳಾರಿ: 8 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಕರ್ಬೂಜಾ ಹಣ್ಣನ್ನು ಜನರಿಗೆ ದಾನ ಮಾಡಿದ ರೈತ

ಬಳ್ಳಾರಿ, ಎ.9: ತನ್ನ ಎಂಟು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಕರ್ಬೂಜಾ ಹಣ್ಣನ್ನು ಕೊರೋನ ಭೀತಿ ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ಸಾಗಾಟ ಮಾಡಲಾಗದೆ ರೈತರೊಬ್ಬರು ಕೊನೆಗೆ ಅದನ್ನು ಜನರಿಗೆ ಉಚಿತವಾಗಿ ನೀಡಿದ ಘಟನೆ ನಡೆದಿದೆ.
ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಕೊಡಾಲು ಗ್ರಾಮದ ರೈತ ತಿಮ್ಮನಗೌಡ ಅವರು ತನ್ನ ಎಂಟು ಎಕರೆ ಪ್ರದೇಶದಲ್ಲಿ ಕರ್ಬೂಜಾ ಹಣ್ಣನ್ನು ಬೆಳೆದಿದ್ದರು. ಆದರೆ ಕೊರೋನ ಭೀತಿ ಹಿನ್ನೆಲೆಯಲ್ಲಿ ಅದನ್ನು ಮಾರುಕಟ್ಟೆಗೆ ಸಾಗಿಸಲು ಸಾಧ್ಯವಾಗಿಲ್ಲ. ಈ ಹಿನ್ನೆಲೆ ಕರ್ಬೂಜಾ ಹಣ್ಣನ್ನು ಸುತ್ತಮುತ್ತಲಿನ ಗ್ರಾಮಗಳಾದ ಕೊಡಾಲು, ಚಿಕ್ಕಂತಾಪುರ, ಸುಲ್ತಾನಪುರ ತೋರಣಗಲ್ಲು ಗ್ರಾಮಗಳ ಪ್ರತಿ ಮನೆಮನೆಗೆ ಹಂಚಿದ್ದಾರೆ.
ತಿಮ್ಮನಗೌಡರು 8 ಲಕ್ಷ ರೂ. ಸಾಲ ಮಾಡಿ ತನ್ನ 8 ಎಕರೆ ಪ್ರದೇಶದಲ್ಲಿ ಕರ್ಬೂಜಾ ಹಣ್ಣನ್ನು ಬೆಳೆದಿದ್ದರು.



ಉತ್ತಮ ಫಸಲು ಕೂಡಾ ಬಂದಿತ್ತು. ಆದರೆ, ಫಸಲು ಕೈಗೆ ಬಂದರೂ ಅದನ್ನು ಲಾಕ್ ಡೌನ್ ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಮಾರಲಾಗದ ಪರಿಸ್ಥಿತಿ ಬಂದಿರುವುದರಿಂದ ಜನರಿಗೆ ಉಚಿತವಾಗಿ ಹಂಚಿದ್ದಾರೆ.

ಬ್ರೇಕಿಂಗ್ : ನಾಳೆಯಿಂದ ರಾಜ್ಯದಲ್ಲಿ 'ಲಾಕ್ ಡೌನ್' ಮತ್ತಷ್ಟು ಟೈಟ್ : ರೋಡಿಗಿಳಿದ್ರೆ ನಿಮ್ಮ 'ವಾಹನ ಗ್ಯಾರಂಟಿ ಸೀಜ್'



ಬೆಂಗಳೂರು : ಈಗಾಗಲೇ ಬೆಂಗಳೂರಿನಲ್ಲಿ 10 ಸಾವಿರ ವಾಹನಗಳನ್ನು ಲಾಕ್ ಡೌನ್ ನಿಯಮ ಮೀರಿ ರಸ್ತೆಗೆ ಇಳಿದಿದ್ದಕ್ಕೆ ಸೀಜ್ ಮಾಡಲಾಗಿದೆ. ಲಾಕ್ ಡೌನ್ ಸಂದರ್ಭದಲ್ಲಿ ಜನರು ಮನೆಯಿಂದ ಹೊರಗೆ ಬರಬಾರದು. ನಾಳೆಯಿಂದ ರಾಜ್ಯದಲ್ಲಿ ಲಾಕ್ ಡೌನ್ ಮತ್ತಷ್ಟು ಟೈಟ್ ಮಾಡಲಾಗುತ್ತಿದ್ದು, ರೋಡಿಗಿಳಿದ್ರೆ.. ನಿಮ್ಮ ವಾಹನವನ್ನು ಸೀಜ್ ಮಾಡಲಾಗುತ್ತದೆ ಎಂಬುದಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಖಡಕ್ ಎಚ್ಚರಿಕೆ ನೀಡಿದ್ದಾರೆ.
ರಾಜ್ಯದಲ್ಲಿ ಲಾಕ್ ಡೌನ್ ಮುಂದುವರೆಸಬೇಕೇ..? ಬೇಡವೇ ಎಂಬ ಕುರಿತಂತೆ ಇಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿ ತುರ್ತು ಸಚಿವ ಸಂಪುಟ ಸಭೆ ನಡೆಯಿತು. ಈ ಸಭೆಯ ಬಳಿಕ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಲಾಕ್ ಡೌನ್ ರಾಜ್ಯದಲ್ಲಿ ಮುಂದುವರೆಸುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಏಪ್ರಿಲ್ 11ರಂದು ಕರೆ ನೀಡಿರುವ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯ ನಂತ್ರ ನಿರ್ಧಾರವನ್ನು ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ರಾಜ್ಯದ ಜನರಲ್ಲಿ ವಿನಂತಿ ಮಾಡುತ್ತೇನೆ. ಲಾಕ್ ಡೌನ್ ನಿಯಮ ಉಲ್ಲಂಘಿಸಿ, ಮನೆಯಿಂದ ಹೊರಗೆ ಬರಬೇಡಿ. ಮನೆಯಲ್ಲಿಯೇ ಇದ್ದು ಲಾಕ್ ಡೌನ್ ನಿಯಮವನ್ನು ಪಾಲಿಸಿ. ಏಪ್ರಿಲ್ 14ರ ವರೆಗೆ ಒಬ್ಬ ವ್ಯಕ್ತಿಯೂ ಮನೆಯಿಂದ ಹೊರಗೆ ಬರಬಾರದು. ವಿನಾ ಕಾರಣ ವ್ಯಕ್ತಿಗಳು ಹೊರಗೆ ಬಂದ್ರೆ ಕ್ರಮ ಕೈಗೊಳ್ಳಲಾಗುತ್ತಿದೆ. ಲಾಕ್ ಡೌನ್ ಒಂದು ಹಂತಕ್ಕೆ ಬರಬೇಕು ಅಂದ್ರೆ ಯಾರೂ ಹೊರಗೆ ಬರಬಾರದು. ಒಂದು ವೇಳೆ ಲಾಕ್ ಡೌನ್ ಉಲ್ಲಂಘಿಸಿ ಹೊರಗೆ ಬರುವವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ. ರಸ್ತೆಗೆ ಇಳಿಯುವ ವಾಹನಗಳನ್ನು ಸೀಜ್ ಮಾಡಲಾಗುತ್ತದೆ ಎಂಬುದಾಗಿ ಎಚ್ಚರಿಕೆ ನೀಡಿದರು.

ಪಡಿತರ ಚೀಟಿ ಇಲ್ಲದ 2.50 ಲಕ್ಷ ಬಡವರಿಗೆ 2 ತಿಂಗಳ ಪಡಿತರ: ಜೆ.ಸಿ.ಮಾಧುಸ್ವಾಮಿ

ಬೆಂಗಳೂರು: ರಾಜ್ಯದಲ್ಲಿ ಪಡಿತರ ಚೀಟಿ ಹೊಂದಿಲ್ಲದ ಮತ್ತು ನೋಂದಾಯಿಸಿರುವ 2.50 ಲಕ್ಷ ಬಡವರಿಗೆ ಪಡಿತರ ನೀಡಲು ತೀರ್ಮಾನಿಸಲಾಗಿದೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಇವರಿಗೆ ಎರಡು ತಿಂಗಳ ಪಡಿತರವನ್ನು ನೀಡಲಾಗುವುದು ಎಂದು ಅವರು ಮಾಧ್ಯಮಗೋಷ್ಠಿಯಲ್ಲಿ ವಿವರಿಸಿದರು.
ರಾಜ್ಯದ 49 ಬರ ಪೀಡಿತ ತಾಲ್ಲೂಕುಗಳಿಗೆ ಕುಡಿಯುವ ನೀರಿಗಾಗಿ ತಲಾ ₹1 ಕೋಟಿ ನೀಡಲಾಗುವುದು. ಉಳಿದ ಪಟ್ಟಣ ಪಂಚಾಯತ್‌ಗಳಿಗೆ ತಲಾ ₹25 ಲಕ್ಷ ನೀಡುವುದರ ಜತೆಗೆ ಹೆಚ್ಚುವರಿಯಾಗಿ ₹25 ಲಕ್ಷ ನೀಡಲು ತೀರ್ಮಾನಿಸಲಾಗಿದೆ ಎಂದರು.
ಲಾಕ್‌ಡೌನ್‌ ಪರಿಣಾಮ ಹೂವು ಬೆಳೆದವರು ನಷ್ಟಕ್ಕೆ ತುತ್ತಾಗಿದ್ದಾರೆ ಎಂಬ ದೂರುಗಳ ಬಂದಿವೆ. ಈ ಹಿನ್ನೆಲೆಯಲ್ಲಿ ಸಮೀಕ್ಷೆ ನಡೆಸಿ ನಷ್ಟ ಆಗಿದ್ದರೆ ಸೂಕ್ತಪರಿಹಾರ ನೀಡಲು ಸಂಪುಟ ತೀರ್ಮಾನಿಸಿದೆ ಎಂದರು.
ಜಿಎಸ್‌ಟಿಯನ್ನು ಇದೇ 30 ರೊಳಗೆ ಪಾವತಿಸಬೇಕಾಗಿತ್ತು. ಕೊರೊನಾದಿಂದಾಗಿ ಗಡುವನ್ನು ಜೂನ್‌ 30ರವರೆಗೆ ವಿಸ್ತರಿಸಲು ಸುಗ್ರೀವಾಜ್ಞೆ ಹೊರಡಿಸಲು ತೀರ್ಮಾನಿಸಲಾಗಿದೆ ಎಂದೂ ಅವರು ಹೇಳಿದರು.
ಕಂದಾಯ ಭೂಮಿ ಒತ್ತುವರಿ ಮಾಡಿದ ರೈತರ ವಿರುದ್ಧ ಮುಂದಿನ ಆದೇಶ ಆಗುವವರೆಗೆ ಮೊಕದ್ದಮೆ ಹೂಡಬಾರದು. ಫಾರಂ 57 ರಡಿ ಅರ್ಜಿ ಹಾಕಲು ಅವಧಿ ವಿಸ್ತರಣೆ ಮಾಡಲಾಗಿದೆ ಇದಕ್ಕಾಗಿ ಸುಗ್ರಿವಾಜ್ಞೆ ಹೊರಡಿಸಲಾಗುವುದು ಎಂದು ಮಾಧುಸ್ವಾಮಿ ತಿಳಿಸಿದರು.

Wednesday, April 8, 2020

ಹೊಸಪೇಟೆ ತಾಲ್ಲೂಕಿನ ನಲ್ಲಾಪುರ ಗ್ರಾಮದ ಜನರ ಸಂಕಷ್ಟದ ಮಾತುಗಳು

ಕೊರೊನಾ ಎಂಬ ಮಹಾಮಾರಿಯಿಂದ  ನಲ್ಲಾಪುರ ಜನರಿಗೆ ದಿನನಿತ್ಯಾದ ಬದಕು ತುಂಬ ಕಷ್ಟಕವಾಗಿದೆ ದುಡಿದರೆ ಅನ್ನ ಇಲ್ಲಂದ್ರೆ ಯಾವುದು ಇಲ್ಲ ಅನ್ನೊಗೆ ಆಗಿದೆ ಇಲ್ಲಿನ ಪರಿಸ್ಥಿತಿ. ಗ್ರಾಮಸ್ಥರ ಮಾತು...

  

ತಿನ್ನಲು ಊಟವಿಲ್ಲ, ದುಡಿಯಲು ಕೆಲಸವಿಲ್ಲ ಕೊರೊನಾ ಎಂಬ ಹೆಮ್ಮಮಾರಿಯಿಂದ ಬದುಕು ಅದಿಗೆಟ್ಟಿದೆ. ಇಡಿ ಕುಟುಂಬ ಮನೆಯಲ್ಲಿ ಇರುವ ಪರಿಸ್ಥಿತಿ ಬಂದಿದೆ ಮನೆಯಲ್ಲಿ ರೋಗ ಬಂದರು ಮಕ್ಕಳಿಗೆ ಸರಿಯಾದ ಊಟವನ್ನು ವದಗಿಸದ ಪರಿಸ್ಥಿತಿ ಉಂಟಾಗಿದೆ. ಲಾಕ್ ಡೌನ್ ಆಗಿ 15ದು ದಿನಗಳು ಆಗಿದ್ದರು ಸರ್ಕಾರದಿಂದ ಯವುದೇ ವ್ಯವಸ್ಥೆಯಾಗಿಲ್ಲ ನಲ್ಲಾಪುರಲ್ಲಿ.  ಅಕ್ಕಿ ಬೆಳೆ ಎಣ್ಣೆ (ರೇಷನ್) ಕೊಡಲಾಗುತ್ತದೆ ಎಂದು ಹೇಳಿದ್ದರು. ಆದರೆ  ನಲ್ಲಾಪುರಕ್ಕೆ  ಸರ್ಕಾರ ದಿಂದ ಯಾವುದೇಯವಸ್ಥಿಸ್ತಿ  ಆಗಿಲ್ಲ.
ನಿಮ್ಮಲ್ಲಿ ಕೇಳಿಕೊಳ್ಳುವುದ ಇಷ್ಟೇ ಯಾವುದೇ ರೀತಿಯಿಂದ ಅದರು ಊಟಾದ ವ್ಯವಸ್ಥೆಯನ್ನು ಮಾಡಿ ಕೊಡಿ ಮತ್ತು ನಿಮ್ಮಗೆ ಕೈಲಾದ ಸಹಾಯ ಮಾಡಬೇಕೆಂದು ನಿಮ್ಮಲ್ಲಿ ಮನವಿ ಮಾಡಿಕ್ಕೊತ್ತೇವೆ. ಸರ್ಕಾರ ನಮ್ಮ ಬಗ್ಗೆ ಗಮನ ಹರಿಸದಿದ್ದಾರು ಪರವಾಗಿಲ್ಲ, ನಮ್ಮ ಕ್ಷೇತ್ರ ಎಂಎಲ್‍ಎ ಆನಂದ ಸಿಂಗ್ ಅವರು ಗಮನ ಹರಿಸಬೇಕು ಎಂದು ಮನವಿ ಮಾಡಿಕೊಳ್ಳುತ್ತವೆ.

Monday, April 6, 2020

ಜನಪ್ರಿಯ ಹಾಸ್ಯ ನಟ ಬುಲೆಟ್ ಪ್ರಕಾಶ್ ಇನ್ನಿಲ್ಲ

ಬೆಂಗಳೂರು: ಜನಪ್ರಿಯ ಹಾಸ್ಯ ನಟ ಬುಲೆಟ್ ಪ್ರಕಾಶ್(44) ಚಿಕಿತ್ಸೆ ಫಲಕಾರಿಯಾಗದೇ ಇಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಹಾಸ್ಯ ನಟ ಬುಲೆಟ್ ಪ್ರಕಾಶ್ ಆರೋಗ್ಯ ಸ್ಥಿತಿ ಕೆಲ ದಿನಗಳಿಂದ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ವೆಂಟಿಲೇಟರಿನಲ್ಲಿ  ಇಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು.
ಕಳೆದೊಂದು ತಿಂಗಳಿನಿಂದ ಬುಲೆಟ್ ಪ್ರಕಾಶ್ ಆರೋಗ್ಯದಲ್ಲಿ ಏರುಪೇರಾಗಿತ್ತು. ಒಂದು ತಿಂಗಳ ಹಿಂದೆ ಹೆಬ್ಬಾಳದ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಪ್ರಕಾಶ್ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲಿಂದ ಆಸ್ಕರ್ ಆಸ್ಪತ್ರೆಗೆ ದಾಖಲಾಗಿದ್ದರು. 6 ದಿನಗಳ ಹಿಂದೆ ಕನ್ನಿಂಗ್‍ಹ್ಯಾಮ್ ರಸ್ತೆಯ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದರು. ಕಿಡ್ನಿ ವೈಫಲ್ಯದ ಜೊತೆಗೆ ಕಾಲಿಗೆ ಗ್ಯಾಂಗ್ರಿನ್ ಕೂಡ ಆಗಿತ್ತು. ಗಂಭೀರ ಸ್ಥಿತಿಯಲ್ಲಿದ್ದ ಕಾರಣ ವೆಂಟಿಲೇಟರ್ ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು

ಎರಡು ವರ್ಷಗಳ ಹಿಂದೆ ತೂಕ ಇಳಿಸಿಕೊಳ್ಳಲು ಬುಲೆಟ್ ಪ್ರಕಾಶ್ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದರು. ಶಸ್ತ್ರ ಚಿಕಿತ್ಸೆಯ ನಂತರ ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಹೀಗಾಗಿ ಶಸ್ತ್ರ ಚಿಕಿತ್ಸೆಯೇ ಅವರ ಜೀವಕ್ಕೆ ಮುಳ್ಳಾಯಿತೇ ಎಂಬ ಪ್ರಶ್ನೆ ಎದ್ದಿತ್ತು. ಅಲ್ಲದೆ ಶಸ್ತ್ರ ಚಿಕಿತ್ಸೆಯ ನಂತರ ಸಿನಿಮಾಗಳಲ್ಲಿ ಅವಕಾಶ ಕಡಿಮೆಯಾಗಿತ್ತು. ಹೀಗಾಗಿ ಹಾಸ್ಯನಟ ಮಾನಸಿಕವಾಗಿ ಬಹಳ ನೊಂದಿದ್ದ ವಿಚಾರ ಆಪ್ತ ಮೂಲಗಳಿಂದ ತಿಳಿದು ಬಂದಿತ್ತು.
ಬುಲೆಟ್ ಪ್ರಕಾಶ್ ಒಟ್ಟು 300ಕ್ಕೂ ಹೆಚ್ಚು ಚಲನ ಚಿತ್ರದಲ್ಲಿ ಅಭಿನಯಿಸಿದ್ದಾರೆ. ತಮ್ಮ ರಾಯಲ್ ಎನ್‍ಫೀಲ್ಡ್ ಬೈಕಿನಿಂದಾಗಿ ‘ಬುಲೆಟ್’ ಹೆಸರು ಬಂದಿತ್ತು. 2015ರಲ್ಲಿ ಬಿಜೆಪಿ ಪಕ್ಷವನ್ನು ಬುಲೆಟ್ ಪ್ರಕಾಶ್ ಸೇರಿದ್ದರು.

logo editing


ಫೋಟೋ ಟಚ್ ಮಾಡಿ


ರಾಜ್ಯದಲ್ಲಿ 7 ಹೊಸ ಪಾಸಿಟಿವ್ ಪ್ರಕರಣ ಸೇರಿ 151 ಜನರಿಗೆ ಕೊರೊನಾ ಸೋಂಕು..!

ಬೆಂಗಳೂರು: ಕೊರೊನಾ ವೈರಸ್​​ಗೆ ಸಂಬಂಧಿಸಿದಂತೆ ರಾಜ್ಯದಲ್ಲಿನ ಇಂದಿನ ಪರಿಸ್ಥಿತಿಯ ಬಗ್ಗೆ ಆರೋಗ್ಯ ಸಚಿವಾಲಯ ಬುಲೆಟಿನ್ ರಿಲೀಸ್​ ಮಾಡಿದೆ. ಹೊಸದಾಗಿ 7 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಸಂಜೆ 5 ಗಂಟೆಯ ವೇಳೆಗೆ ರಾಜ್ಯದಲ್ಲಿ ಒಟ್ಟು 151 ಕೇಸ್​ಗಳು ಧೃಡಪಟ್ಟಿರೋದಾಗಿ ತಿಳಿಸಿದೆ. ಒಟ್ಟು ನಾಲ್ವರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದು, 12 ಮಂದಿ ಸೋಂಕಿನಿಂದ ಗುಣಮುಖರಾದವರನ್ನ ಡಿಸ್ಚಾರ್ಜ್ ಮಾಡಲಾಗಿದೆ ಅಂತ ಮಾಹಿತಿ ನೀಡಿದೆ.
135 ಆಕ್ಟೀವ್ ಪ್ರಕರಣಗಳಲ್ಲಿ ಗರ್ಭಿಣಿ ಮಹಿಳೆ ಸೇರಿದಂತೆ ಒಟ್ಟು 132 ಜನರ ಆರೋಗ್ಯ ಸ್ಥಿರವಾಗಿದ್ದು, ಆಸ್ಪತ್ರೆಯಲ್ಲಿ ಐಸೋಲೇಶನ್​ನಲ್ಲಿಟ್ಟು ಚಿಕಿತ್ಸೆ ನೀಡಲಾಗಿದೆ. ಇನ್ನುಳಿದ ಮೂವರನ್ನು ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಲಾಗ್ತಿದೆ. ಪೇಶೆಂಟ್ ನಂ.43, ಪೇಶೆಂಟ್ ನಂ.101 ಹಾಗೂ ಪೇಶೆಂಟ್ ನಂ.102ರನ್ನು ಐಸಿಯುನ ವೆಂಟಿಲೇಟರ್​ನಲ್ಲಿಡಲಾಗಿದೆ.
ಹೊಸದಾಗಿ ಪತ್ತೆಯಾದವರಲ್ಲಿ ನಾಲ್ವರು ಬೆಳಗಾವಿಯ ರಾಯ​ಬಾಗ್ ಮೂಲದವರಾಗಿದ್ದಾರೆ. ಇವರಲ್ಲಿ ಮೂವರು ಮಹಿಳೆಯರು ಹಾಗೂ ಓರ್ವ ಪುರುಷನಿಗೆ ಸೋಂಕು ಧೃಡಪಟ್ಟಿದೆ. ಇನ್ನು, ದುಬೈನಿಂದ ಆಗಮಿಸಿದ್ದ ಬೆಂಗಳೂರಿನ ದಂಪತಿಗೆ ಸೋಂಕು ತಗಲಿರುವುದು ಪತ್ತೆಯಾಗಿದೆ. ದೆಹಲಿಯಿಂದ ಆಗಮಿಸಿದ್ದ ಬಳ್ಳಾರಿ ಮೂಲದ ವ್ಯಕ್ತಿಗೂ ಕೊರೊನಾ ಇರೋದು ಧೃಡಪಟ್ಟಿದ್ದು, ಚಿಕಿತ್ಸೆ ನೀಡಲಾಗ್ತಿದೆ.
ಇನ್ನು ಬೆಂಗಳೂರಿನಲ್ಲಿ ಇದುವರೆಗೂ ಅತಿಹೆಚ್ಚು ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು 57 ಮಂದಿಗೆ ಸೋಂಕು ತಗಲಿರುವುದು ಪತ್ತೆಯಾಗಿದೆ. 9 ಜನರು ಡಿಸ್ಜಾರ್ಜ್ ಆಗಿದ್ದು, 47 ಪ್ರಕರಣ ಆಕ್ಟೀವ್​ನಲ್ಲಿದೆ. ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ. ಇನ್ನು, ಮೈಸೂರಿನಲ್ಲಿ ಇದುವರೆಗೆ 28 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ. ದಕ್ಷಿಣ ಕನ್ನಡದಲ್ಲಿ ಒಟ್ಟು 12 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದೆ.

ಕೊರೋನಾ ವಿರುದ್ಧ ಹೋರಾಟ: ಪ್ರಧಾನಿ ಕರೆಯಂತೆ 9 ಗಂಟೆಗೆ 9 ನಿಮಿಷ ದೀಪ ಬೆಳಗುವ ಮೂಲಕ ಒಗ್ಗಟ್ಟು ಪ್ರದರ್ಶಿಸಿದ ಭಾರತೀಯರು


ಪ್ರಧಾನಿ ಮೋದಿ ಅವರು ಕೊರೋನಾ ವಿರುದ್ಧ ಹೋರಾಟದಲ್ಲಿ ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂಬ ಸಂದೇಶ ಸಾರುವ ಉದ್ದೇಶದಿಂದ ಇಂದು ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ದೀಪ ಬೆಳಗುವಂತೆ ಕರೆ ನೀಡಿದ್ದರು. ಅದರಂತೆಯೇ ಈಗ ದೇಶಾದ್ಯಂತ ಇಂದು ರಾತ್ರಿ ದೀಪ ಬೆಳಗುವ ಮೂಲಕ ಕೊರೋನಾ ವಿರುದ್ಧ ನಾವೆಲ್ಲಾ ಒಗ್ಗಟ್ಟಾಗಿ ಹೋರಾಡುತ್ತಿದ್ದೇವೆ ಎಂಬ ಸಾಂಕೇತಿಕವಾಗಿ ಐಕ್ಯತೆ ಪ್ರದರ್ಶನ ಮಾಡಿದ್ದಾರೆ. 

            

ನವದೆಹಲಿ(ಏ.05): ಇಡೀ ವಿಶ್ವವನ್ನೇ ತಲ್ಲಣಗೊಳಿಸಿರುವ ಮಾರಕ ಮಹಾಮಾರಿ ಕೊರೋನಾ ಸೋಂಕು ಭಾರತದಲ್ಲೂ ರುದ್ರನರ್ತನ ತೋರುತ್ತಿದೆ. ಮಾರಕ ಸೋಂಕು ನಿಯಂತ್ರಣಕ್ಕಾಗಿ ಇಡೀ ದೇಶವನ್ನು 21 ದಿನಗಳ ಕಾಲ ಲಾಕ್​ಡೌನ್​ ಮಾಡಿ 14 ದಿನಗಳು ಕಳೆದರೂ ಸೋಂಕು ನಿಯಂತ್ರಣಕ್ಕೆ ಬಾರದೆ ದಿನೇದಿನೇ ವ್ಯಾಪಕವಾಗಿ ಹರಡುತ್ತಿದೆ. ಏತನ್ಮಧ್ಯೆ ಪ್ರಧಾನಿ ಮೋದಿ ಅವರು ಕೊರೋನಾ ವಿರುದ್ಧ ಹೋರಾಟದಲ್ಲಿ ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂಬ ಸಂದೇಶ ಸಾರುವ ಉದ್ದೇಶದಿಂದ ಇಂದು ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ದೀಪ ಬೆಳಗುವಂತೆ ಕರೆ ನೀಡಿದ್ದರು. ಅದರಂತೆಯೇ ಈಗ ದೇಶಾದ್ಯಂತ ಇಂದು ರಾತ್ರಿ ದೀಪ ಬೆಳಗುವ ಮೂಲಕ ಕೊರೋನಾ ವಿರುದ್ಧ ನಾವೆಲ್ಲಾ ಒಗ್ಗಟ್ಟಾಗಿ ಹೋರಾಡುತ್ತಿದ್ದೇವೆ ಎಂಬ ಸಾಂಕೇತಿಕವಾಗಿ ಐಕ್ಯತೆ ಪ್ರದರ್ಶನ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಕರೆಗೆ ಓಗೊಟ್ಟ ದೇಶದ ಜನತೆ ದೀಪ ಹಚ್ಚುವ ಮೂಲಕ ಕೊರೊನಾ ವಿರುದ್ಧ ಸಮರ ಸಾರಿದ್ದಾರೆ. ಇನ್ನೂ ಸಿಎಂ ಬಿ.ಎಸ್ ಯಡಿಯೂರಪ್ಪ ಕೂಡ ತಮ್ಮ ಕುಟುಂಬದ ಜೊತೆ ದೀಪ ಬೆಳಗಿಸಿದ್ದಾರೆ. ತಮ್ಮ ನಿವಾಸದಲ್ಲಿ ಲೈಟು ಆರಿಸಿ ತಮ್ಮ ಕುಟುಂಬದ ಜೊತೆ ದೀಪ ಬೆಳಗಿಸಿದರು.


ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್​​ ಶಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಬಾಬಾ ರಾಮದೇವ್, ಸಚಿವರಾದ ಶ್ರೀರಾಮುಲು, ಅಶೋಕ್, ಕೇಂದ್ರ ಸಚಿವ ನಿತಿನ್ ಗಡ್ಕರಿ ಹೀಗೆ ಅನೇಕರು ತಮ್ಮ ಮನೆಗಳಲ್ಲಿ ದೀಪ ಬೆಳಗಿಸಿದರು.