ಬಸವಣ್ಣ
12ನೇ ಶತಮಾನದಲ್ಲಿದ್ದ ಶರಣ ಪ್ರಮುಖ. ಪ್ರಸಿದ್ಧ ವಚನಕಾರ, ಸಮಾಜ ಸುಧಾರಕ. ಅಂದು ಕರ್ನಾಟಕದಲ್ಲಿ ನಡೆದ ಸಾಮಾಜಿಕ ಮತ್ತು ಧಾರ್ಮಿಕ ಮಹಾಕ್ರಾಂತಿಯ ನೇತಾರ. ಬಿಜಾಪುರ ಜಿಲ್ಲೆಯ ಬಾಗೇವಾಡಿ ಇವರ ಜನ್ಮಸ್ಥಳ. ವಿದ್ವಾಂಸರು ಬಸವಣ್ಣನವರ ಜನನದ ಕಾಲವನ್ನು 1131 ಎಂದು ಅಭಿಪ್ರಾಯ ಪಡುತ್ತಾರೆ. ಬಿಜ್ಜಳನ ರಾಜ್ಯದ ಭಂಡಾರಿಯಾಗಿದ್ದ ಹಾಗೆ ರಾಜ್ಯದ ಭಕ್ತಿ ಭಂಡಾರಿಯೂ ಆಗಿದ್ದರು. ಕವಿ ಹೃದಯವುಳ್ಳ ವಚನಕಾರರಾಗಿದ್ದರು. ಇವರ ವಚನಗಳಲ್ಲಿ ಭಾವಗೀತೆಯ ತೀವ್ರತೆ ಹಾಗೂ ಮಧುರತೆಯಿದೆ. 1000 ಕ್ಕೂ ಹೆಚ್ಚು ವಚನಗಳುದೊರೆತಿವೆ. "ಕೂಡಲಸಂಗಮದೇವ" ಎಂಬುದು ಇವರ ಅಂಕಿತ. ಇವರ ವಚನಗಳು ಆ ಕಾಲದ ಸಾಮಾಜಿಕ ಹಾಗೂ ಧಾರ್ಮಿಕ ಜೀವನಕ್ಕೆ ಬೆಳಕನ್ನು ಚೆಲ್ಲುತ್ತವೆ ಹಾಗೂ ವಚನಕಾರರ ಜೀವನದೃಷ್ಟಿಯನ್ನು ತಿಳಿಸುತ್ತವೆ.

No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ