WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Saturday, February 27, 2021

ಹೊಸಪೇಟೆ ಕೋರ್ಟ್ ಆವರಣದಲ್ಲಿ ವಕೀಲನ ಭೀಕರ ಕೊಲೆ.


 ಹೊಸಪೇಟೆ ಕೋರ್ಟ್ ಅಲ್ಲಿ ಸಂಬಂಧಿಕ ಯುವಕನಿಂದಲೇ ಭೀಕರ ಕೊಲೆ 
ಸವಾದ ತಾರಿಹಳ್ಳಿ ಹನುಮಂತಪ್ಪ ಕೊಲೆಯಾದ ವಕೀಲ





ಕೊಲೆ ಮಾಡಿದ ವ್ಯಕ್ತಿ


Friday, February 26, 2021

Covid-19 Karnataka Update: ರಾಜ್ಯದಲ್ಲಿ 5,576 ಪ್ರಕರಣಗಳು ಸಕ್ರಿಯ


 ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಕೋವಿಡ್‌-19 ದೃಢಪಟ್ಟ 453 ಪ್ರಕರಣಗಳು ದಾಖಲಾಗಿವೆ. ಇದೇ ಅವಧಿಯಲ್ಲಿ 947 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, 7 ಮಂದಿ ಸಾವಿಗೀಡಾಗಿದ್ದಾರೆ.

ಪ್ರಸ್ತುತ 5,576 ಪ್ರಕರಣಗಳು ಸಕ್ರಿಯವಾಗಿವೆ. ಒಟ್ಟು 9,49,636 ಪ್ರಕರಣಗಳ ಪೈಕಿ ಈವರೆಗೂ 9,31,725 ಮಂದಿ ಗುಣಮುಖರಾಗಿದ್ದರೆ, 12,316 ಜನ ಮೃತಪಟ್ಟಿದ್ದಾರೆ.

ಜನವರಿ 16ರಿಂದ ಫೆಬ್ರುವರಿ 25ರ ವರೆಗೂ ಒಟ್ಟು 7,86,404 ಜನರಿಗೆ ಕೋವಿಡ್‌ ಲಸಿಕೆ ಹಾಕಲಾಗಿದೆ.

ಐಸಿಯುನಲ್ಲಿ 121 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಗಳೂರಿನಲ್ಲಿ 271, ದಕ್ಷಿಣ ಕನ್ನಡದಲ್ಲಿ 24, ಮೈಸೂರಿನಲ್ಲಿ 27, ತುಮಕೂರಿನಲ್ಲಿ 24 ಹೊಸ ಪ್ರಕರಣಗಳು ದಾಖಲಾಗಿವೆ.

(ಮಾಹಿತಿ ಕೃಪೆ ಪ್ರಜಾವಾಣಿ)

ಹೀಗೆ ಈರುಳ್ಳಿ ಪೌಡರ್ ತಯಾರಿಸಿ ಕೂದಲಿಗೆ ಬಳಸಿ


 ಅಡುಗೆಯಲ್ಲಿ ಈರುಳ್ಳಿಯನ್ನು ಹೆಚ್ಚಾಗಿ ಬಳಸುತ್ತಾರೆ. ಇದು ಅಡುಗೆಯ ರುಚಿಯ ಜೊತೆಗೆ ಪರಿಮಳವನ್ನು ಹೆಚ್ಚಿಸುತ್ತದೆ. ಅಲ್ಲದೇ ಇದರಿಂದ ಕೂದಲಿನ ಸಮಸ್ಯೆಯನ್ನು ನಿವಾರಿಸಬಹುದು. ಹಾಗಾಗಿ ಈರುಳ್ಳಿಯಿಂದ ಪೌಡರ್ ತಯಾರಿಸಿ ಬಳಸಿ ಆರೋಗ್ಯಕರವಾದ ಕೂದಲನ್ನು ಹೊಂದಿರಿ.

ಈರುಳ್ಳಿಯನ್ನು ಚೆನ್ನಾಗಿ ತೊಳೆದು ಉದ್ದವಾಗಿ ಪೀಸ್ ಮಾಡಿ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ. ಬಳಿಕ ಅದನ್ನು ಮಿಕ್ಸಿಯಲ್ಲಿ ಪುಡಿ ಮಾಡಿ. ಗಾಜಿನ ಬಾಟಲಿನಲ್ಲಿ ಸ್ಟೋರ್ ಮಾಡಿ ಇಡಿ. ವಾರದಲ್ಲಿ 2 ಬಾರಿ 2 ಚಮಚ ಈರುಳ್ಳಿ ಪುಡಿಯನ್ನು ತೆಗೆದುಕೊಂಡು 2 ಚಮಚ ಆಲಿವ್ ಆಯಿಲ್ ಅಥವಾ 2 ಚಮಚ ಜೇನುತುಪ್ಪ ಸೇರಿಸಿ ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ 2 ಗಂಟೆಗಳ ಬಳಿಕ ಕೂದಲನ್ನು ವಾಶ್ ಮಾಡಿ. ಇದು ನೆತ್ತಿಯಲ್ಲಿರುವ ಬ್ಯಾಕ್ಟೀರಿಯಾ ಸೋಂಕನ್ನು ನಿವಾರಿಸುತ್ತದೆ.

ರಕ್ತ ಪರಿಚಲನೆಯನ್ನು ಹೆಚ್ಚಿಸಿ ಆರೋಗ್ಯವಂತ ಕೂದಲು ಪಡೆಯಲು ಸಹಾಯ ಮಾಡುತ್ತದೆ. ಕೂದಲಿನ ತೇವಾಂಶ ಕಾಪಾಡಿ ಕೂದಲು ಹೊಳೆಯುವಂತೆ ಮಾಡುತ್ತದೆ.

(ಮಾಹಿತಿ ಕೃಪೆ ಕನ್ನಡದುನಿಯಾ)


Thursday, February 25, 2021

ಅಭಿಮಾನಿಗಳ ಪರ ದರ್ಶನ್‌ ಕ್ಷಮೆಮೊಬೈಲ್‌ ಕರೆ ಆಡಿಯೊ ಹುಟ್ಟುಹಾಕಿದ್ದ ವಿವಾದ ಕೊನೆಗೂ ಸುಖಾಂತ್ಯ


                ದರ್ಶನ್‌
                      ಜಗ್ಗೇಶ್‌

ಪ್ರಜಾವಾಣಿ ವಾರ್ತೆ

ಬೆಂಗಳೂರು: ದರ್ಶನ್‌ ಅಭಿಮಾನಿಗಳು ಮತ್ತು ನಟ ಜಗ್ಗೇಶ್‌ ಅವರ ನಡುವಿನ ಸಂಘರ್ಷ ಕೊನೆಗೂ ಸುಖಾಂತ್ಯ ಕಂಡಿದೆ. ‘ನನ್ನ ಅಭಿಮಾನಿಗಳಿಂದ ಹಿರಿಯರಿಗೆ (ಜಗ್ಗೇಶ್‌ ಅವರಿಗೆ) ನೋವಾಗಿದ್ದರೆ ಅವರ ಪರವಾಗಿ ನಾನೇ ಕ್ಷಮೆಯಾಚಿಸುತ್ತೇನೆ’ ಎಂದು ನಟ ದರ್ಶನ್‌ ಅವರು ಟಿವಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

‘ವಿವಾದ ಆದ ದಿನ ನಾನು ತಿರುಪತಿಗೆ ಹೋಗಿದ್ದೆ. ಬರುವಾಗ ತಡರಾತ್ರಿ ಆಗಿತ್ತು. ಆ ವೇಳೆಗೆ ನಿರ್ಮಾಪಕ ವಿಖ್ಯಾತ್‌ ಅವರ ಸುಮಾರು 50ರಿಂದ 60 ಮಿಸ್ಡ್‌ ಕಾಲ್‌ಗಳು ಇದ್ದವು. ಆ ಹೊತ್ತಿನಲ್ಲಿ ಕರೆ ಮಾಡುವುದು ಸರಿಯಲ್ಲ ಎಂದು ಹೇಳಿ ಮರುದಿನ ಮಾತನಾಡಿದೆ. ನನ್ನ ಅಭಿಮಾನಿಗಳು ಜಗ್ಗೇಶ್‌ ಅವರ ಶೂಟಿಂಗ್‌ ಸೆಟ್‌ಗೆ ಹೋಗಿರುವುದು ಗೊತ್ತಾಗಿದ್ದರೆ ಅಂದೇ ಬೈದು ಬಿಡುತ್ತಿದ್ದೆ’ ಎಂದರು.

‘ಜಗ್ಗೇಶ್‌ ನಮ್ಮ ಹಿರಿಯರು. ಹಿರಿಯರು ಯಾವತ್ತೂ ಮುಂದಿರಬೇಕು. ನಾವು ಹಿಂದಿರಬೇಕು. ಒಂದು ವೇಳೆ ಅವರು ಮಾತನಾಡಿದ್ದರೆ ನಮ್ಮ ಬಗ್ಗೆ ತಾನೆ. ನಮ್ಮ ಬಗೆಗಲ್ಲದೇ ಇನ್ಯಾರ ಬಗ್ಗೆ ಮಾತನಾಡಲು ಸಾಧ್ಯ? ಎಂದ ಅವರು, ಈ ವಿವಾದ ಆಗುತ್ತಿದ್ದಂತೆಯೇ ಜಗ್ಗೇಶ್‌ ಅವರಿಗೆ ಕರೆ ಮಾಡಿದ್ದೆ. ಆದರೆ ಸಂಪರ್ಕ ಸಾಧ್ಯವಾಗಲಿಲ್ಲ’ ಎಂದು ಹೇಳಿದರು

‘ಇಷ್ಟಕ್ಕೂ ಈ ವಿವಾದದಲ್ಲಿ ನನ್ನ ಯಾವುದೇ ಪಾತ್ರ ಇಲ್ಲ. ನಿರ್ಮಾಪಕ ವಿಖ್ಯಾತ್‌ ಅವರಿಗೂ ಇದನ್ನೇ ಹೇಳಿದ್ದೆ. ಕರೆಯ ರೆಕಾರ್ಡಿಂಗನ್ನು ಒಂದೋ ವಿಖ್ಯಾತ್‌ ಸೋರಿಕೆ ಮಾಡಿರಬೇಕು ಅಥವಾ ಜಗ್ಗೇಶ್‌ ಅವರು ಮಾಡಿರಬೇಕು. ಇವರಿಬ್ಬರ ನಡುವಿನ ವಿಚಾರ ಇದರಲ್ಲಿ ನನ್ನ ಪಾತ್ರ ಏನಿದೆ? ಆದರೂ ಅವರಿಗೆ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ’ ಎಂದರು.

ಮನಸ್ಸು ಹಗುರವಾಯಿತು: ಜಗ್ಗೇಶ್‌

ದರ್ಶನ್‌ ಮಾತಿಗೆ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದ ಜಗ್ಗೇಶ್‌,

‘ಸಮಯ ಸಂದರ್ಭ ವಿಷಗಳಿಗೆ. ಪ್ರೀತಿ ವಿಶ್ವಾಸಕ್ಕೆ ತಾತ್ಕಾಲಿಕ ಸಮಸ್ಯೆ. ವೈಶಾಲ್ಯತೆ ಚಿಂತನೆ ಹೃದಯ ಇದ್ದಾಗ ಅಪನಂಬಿಕೆ ಮೋಡ ಸರಿದು ಮತ್ತೆ ಸೂರ್ಯ ಪ್ರಜ್ವಲಿ ಸುತ್ತಾನೆ! ಕನ್ನಡ ಒಗ್ಗಟ್ಟಿರಲಿ. ಮನಸ್ಸು ಹಗುರವಾಯಿತು ಧನ್ಯವಾದ. ಇನ್ನೆಂದು ಇಂಥ ದಿನ ಬರದಿರಲಿ’ ಎಂದಿದ್ದಾರೆ.

(ಮಾಹಿತಿ ಕೃಪೆ ಪ್ರಜಾವಾಣಿ)

IIM ಜೊತೆ ಕೌಶಲ್ಲ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯವು

 

ಗುರಿ ಮುಟ್ಟಲು ಇಲ್ಲಿಗೆ ಬನ್ನಿ!

 ಗುರಿ ಮುಟ್ಟಲು ಇಲ್ಲಿಗೆ ಬನ್ನಿ!ಗ್ರಂಥಾಲಯವೀಗ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಕೇಂದ್ರನಗರ ಕೇಂದ್ರ ಗ್ರಂಥಾಲಯಕ್ಕೆ ಈಗ ಶೈಕ್ಷಣಿಕ ರೂಪ ಬಂದಿದೆ. ಯುವಜನರಲ್ಲೂ ಉತ್ಸಾಹ ಹೆಚ್ಚಿದೆಬಿ.ಕೆ.ಲಕ್ಷ್ಮಿಕಿರಣ್, ಮುಖ್ಯಗ್ರಂಥಪಾಲಕಿ

ಜಿಲ್ಲಾಡಳಿತದ ಉಚಿತ ತರಬೇತಿಗೆ ಆಯ್ಕೆಯಾಗಿರುವ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಗ್ರಂಥಾಲಯದ ಆವರಣದಲ್ಲಿ ಇನ್‌ಸೈಟ್‌ ಆನ್‌ ಇಂಡಿಯಾ ಸಂಸ್ಥೆಯಿಂದ ತರಬೇತಿ ನಡೆದಿದೆ
ಬಳ್ಳಾರಿಯ ನಗರ ಕೇಂದ್ರ ಗ್ರಂಥಾಲಯದ ಡಿಜಿಟಲ್‌ ವಿಭಾಗದಲ್ಲಿ ವಿದ್ಯಾರ್ಥಿನಿಯರಿಗೆ ಸಿಬ್ಬಂದಿ ಮಾರ್ಗದರ್ಶನ

ಕೆ.ನರಸಿಂಹಮೂರ್ತಿ

ಬಳ್ಳಾರಿ: ನಗರ ಕೇಂದ್ರ ಗ್ರಂಥಾಲಯವು ಈಗ ತನ್ನ ಸಾಂಪ್ರದಾಯಿಕ ಸ್ವರೂಪವನ್ನು ದಾಟಿ ಹೊಸ ಕಾಲದ ಯುವಜನರ ಅಧ್ಯಯನದ ಅಗತ್ಯಗಳನ್ನು ಪೂರೈಸು ವತ್ತ ದಾಪುಗಾಲಿಟ್ಟಿದೆ. ಯಾವುದೇ ವಿಶ್ವವಿದ್ಯಾಲಯ ಅಥವಾ ಉನ್ನತ ಮಟ್ಟದ ಕಾಲೇಜು ಕ್ಯಾಂಪಸ್‌ ನಲ್ಲಿರಬಹುದಾದ ಎಲ್ಲ ಅಧ್ಯಯನ ಸಾಮಗ್ರಿಗಳೊಂದಿಗೆ ಸೂಕ್ತ ಮಾರ್ಗದರ್ಶನವೂ ಇಲ್ಲಿ ದೊರಕುತ್ತಿದೆ.

ಸಾಂಸ್ಕೃತಿಕ ಸಮುಚ್ಛಯದ ಆವರಣದಲ್ಲಿರುವ ಬ್ರೂಸ್‌ಪೂಟ್‌ ಮ್ಯೂಸಿಯಂ ಇತಿಹಾಸಕ್ಕೆ ಆದ್ಯತೆ ನೀಡಿದ್ದರೆ, ಬಯಲು ರಂಗಮಂದಿರ ಕಲೆಗೆ ಆದ್ಯತೆ ನೀಡಿದೆ. ಇವುಗಳಿಗಿಂತ ಭಿನ್ನವಾಗಿ ಗ್ರಂಥಾಲಯವು ಶೈಕ್ಷಣಿಕ ಮತ್ತು ಔದ್ಯೋಗಿಕ ನೆಲೆಯಲ್ಲಿ ಯುವಜನರಿಗೆ ನೆರವಾಗುತ್ತಿರುವುದು ವಿಶೇಷ.

ಗ್ರಂಥಾಲಯ ಈಗ ಡಿಜಿಟಲ್‌ ಗ್ರಂಥಾಲಯವೂ ಆಗಿದೆ. ಡಿಜಿಟಲ್‌ ಪುಸ್ತಕಗಳನ್ನು ಓದುವ ಅವಕಾಶವೂ ನಗರ ಮತ್ತು ಸುತ್ತಮುತ್ತಲಿನ ಗ್ರಾಮಗಳ ಕಾಲೇಜು ವಿದ್ಯಾರ್ಥಿಗಳಿಗೆ ದೊರಕುತ್ತಿದೆ. ಅಷ್ಟೇ ಅಲ್ಲ. ಗ್ರಂಥಾಲಯದ ಮೇಲ್ಭಾಗದ ಕಟ್ಟಡದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಕೇಂದ್ರವೂ ಇದೆ. ಅಲ್ಲಿ ವಿಶೇಷವಾಗಿ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬಲು ಬೇಕಾದ ಎಲ್ಲ ಬಗೆಯ ಪುಸ್ತಕಗಳ ಸಂಗ್ರಹವೂ ಇದೆ.

ಹೀಗಾಗಿಯೇ ಬೆಳಿಗ್ಗೆ 10.30ಕ್ಕೆ ಗ್ರಂಥಾಲಯ ತೆರೆಯುವ ಅರ್ಧ ಗಂಟೆ ಮುಂಚಿತವಾಗಿಯೇ ನೂರಾರು ವಿದ್ಯಾರ್ಥಿಗಳು ಗ್ರಂಥಾಲಯದ ಆವರಣದಲ್ಲಿ ನೆರೆಯುತ್ತಾರೆ. ಬಾಗಿಲು ತೆಗೆಯುವುದನ್ನೇ ಕಾಯುವ ಅವರಲ್ಲಿ ಬಹುತೇಕರು ಬೆಳಿಗ್ಗೆಯಿಂದ ಸಂಜೆವರೆಗೂ ಅಧ್ಯಯನದಲ್ಲಿ ತೊಡಗುತ್ತಾರೆ.

ಡಿಜಿಟಲ್‌ ಗ್ರಂಥಾಲಯದ ಜೊತೆಗೆ ಈಗ ಗ್ರಂಥಾಲಯದ ಆವರಣದಲ್ಲೇ ಐಎಎಸ್‌, ಕೆಎಎಸ್‌ ಮತ್ತು ಬ್ಯಾಂಕಿಂಗ್‌ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವವರಿಗೆ ತರಬೇತಿಯೂ ನಡೆಯುತ್ತಿದೆ.

ಜಿಲ್ಲಾ ಖನಿಜ ನಿಧಿಯ ಅಡಿ ಜಿಲ್ಲಾಡಳಿತವೇ ಡಿ.26ರಿಂದ ತರಬೇತಿಯನ್ನೂ ಆರಂಭಿಸಿರುವುದು ವಿಶೇಷ. ತರಬೇತಿಗೆ ಆಯ್ಕೆ ಮಾಡಲೆಂದೇ ನಗರದ ಸರಳಾದೇವಿ ಕಾಲೇಜಿನಲ್ಲಿ ಪ್ರವೇಶ ಪರೀಕ್ಷೆಯನ್ನೂ ನಡೆಸಲಾಗಿತ್ತು. ಅದರಲ್ಲಿ ಉತ್ತೀರ್ಣರಾದ 150 ಮಂದಿಯನ್ನು ಆಯ್ಕೆ ಮಾಡಿ ಜನವರಿ ಎರಡನೇ ವಾರದಿಂದಲೇ ಇನ್‌ಸೈಟ್‌ ಆನ್‌ ಇಂಡಿಯಾದ ಸಂಪನ್ಮೂಲ ವ್ಯಕ್ತಿಗಳು ತರಗತಿಗಳನ್ನು ನಡೆಸುತ್ತಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಗ್ರಂಥಾಲಯದ ಮುಖ್ಯ ಗ್ರಂಥಪಾಕಿ ಬಿ.ಕೆ.ಲಕ್ಷ್ಮಿಕಿರಣ್, ‘ಗ್ರಂಥಾಲಯಕ್ಕೆ ಬರುವ ವಿದ್ಯಾರ್ಥಿಗಳು, ಯುವಜನರು ಮೊದಲು ಲಭ್ಯವಿದ್ದ ಪುಸ್ತಕಗಳನ್ನು ಹುಡುಕಿ ಓದಬೇಕಾಗಿತ್ತು. ಆದರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗುವವರಿಗಾಗಿಯೇ ಕೇಂದ್ರ ವನ್ನು ಆರಂಭಿಸಿ, ಅಲ್ಲಿಯೇ ಎಲ್ಲ ಪುಸ್ತಕಗಳನ್ನೂ ಸಂಗ್ರಹಿಸಿಟ್ಟಿ ರುವುದರಿಂದ ಅಧ್ಯಯನಕ್ಕೆ ಅನುಕೂಲವಾಗಿದೆ’ ಎಂದು ಹೇಳಿದರು.

‘ಗ್ರಂಥಾಲಯಕ್ಕೆ ಬರುವ ಓದುಗರ ಸಂಖ್ಯೆಯೂ ಹೆಚ್ಚಾಗಿದೆ. ಅವರಲ್ಲಿ ಯುವ ಓದುಗರು ಹೆಚ್ಚಿದ್ದಾರೆ. ಅವರ ಆಸಕ್ತಿ, ಜೀವನದ ಗುರಿಗಳಿಗೆ ಅನುಗುಣವಾಗಿಯೇ ಈಗ ಗ್ರಂಥಾಲಯವನ್ನು ಹೊಸ ರೂಪದಲ್ಲಿ ಮಾರ್ಪಡಿಸಿ ಸಜ್ಜುಗೊಳಿಸಲಾಗಿದೆ. ಜಿಲ್ಲಾಡಳಿತದ ನೆರವು ಕೂಡ ಸ್ಮರಣೀಯ’ ಎಂದು ಹೇಳಿದರು.

ನಗರ ಕೇಂದ್ರ ಗ್ರಂಥಾಲಯವನ್ನು ಕೇಂದ್ರ ವನ್ನಾಗಿಸಿಕೊಂಡು ತರಬೇತಿ ನೀಡುತ್ತಿರುವ ಜಿಲ್ಲಾಡಳಿತವು, ಆನ್‌ ಲೈನ್‌ನಲ್ಲೂ ಒಂದು ದಿನ ಪ್ರೊಬೆಷನರಿ ಐಎಎಸ್‌ ಅಧಿಕಾರಿ ರಾಹುಲ್‌ ಸಂಕನೂರ್ ಅವರ ನೇತೃತ್ವದಲ್ಲಿ ಮಾರ್ಗದರ್ಶಿ ಉಪನ್ಯಾಸವನ್ನು ಏರ್ಪಡಿಸಿತ್ತು. ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಅವರು ಸ್ಪರ್ಧಾತ್ಮಕ ಪರೀಕ್ಷೆ, ಅದರಲ್ಲೂ ಯುಪಿಎಸ್‌ಸಿ ಪರೀಕ್ಷೆ ಕುರಿತು ಪ್ರಾಥಮಿಕ ಮಾಹಿತಿಗಳನ್ನು ನೀಡಿ,  ಸಂವಾದ ನಡೆಸಿದ್ದರು. ‘ಈಗ ತರಬೇತಿ ಪಡೆಯುತ್ತಿರುವವರು ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಬೇಕಾದ ಮಾರ್ಗದರ್ಶನವನ್ನು ನೀಡಲಾಗುತ್ತಿದೆ. ತರಬೇತಿ ಪೂರ್ಣಗೊಂಡ ಬಳಿಕ ಅವರು ಬಯಸಿದರೆ ಪರೀಕ್ಷೆಗಳಿಗೆ ಹಾಜರಾಗಲು ಮಾರ್ಗದರ್ಶನ ನೀಡಲಾಗುವುದು’ ಎಂದು ಅವರು ತಿಳಿಸಿದರು.

(ಮಾಹಿತಿ ಕೃಪೆ ಪ್ರಜಾವಾಣಿ)

ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ಬಿಜೆಪಿಯಿಂದ ಧರ್ಮದ ಹೆಸರಿನಲ್ಲಿ ರಾಜಕಾರಣ: ಶಾಸಕ ಗಣೇಶ್ ಆರೋಪ


 

Wednesday, February 24, 2021

ಮಾರ್ಚ್ 1 ರಿಂದ ಎರಡನೇ ಹಂತದ ಕೊರೊನಾ ಲಸಿಕೆ ವಿತರಣೆ: 60 ವರ್ಷ ಮೇಲ್ಪಟ್ಟವರಿಗೆ ಆದ್ಯತೆ

 

ನವದೆಹಲಿ,ಫೆಬ್ರವರಿ 24: ದೇಶದಲ್ಲಿ ಮಾರ್ಚ್ 1 ರಿಂದ ಎರಡನೇ ಹಂತದ ಕೊರೊನಾ ಲಸಿಕೆ ವಿತರಣೆ ಅಭಿಯಾನ ಶುರುವಾಗಲಿದ್ದು, 60 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತದೆ.

ಈ ಕುರಿತು ಸಚಿವ ಪ್ರಕಾಶ್ ಜಾವಡೇಕರ್ ಮಾಹಿತಿ ನೀಡಿದ್ದು, 60 ವರ್ಷ ಮೇಲ್ಪಟ್ಟವರು ಹಾಗೂ 45 ವರ್ಷ ಮೇಲ್ಪಟ್ಟ ಅಸ್ವಸ್ಥರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.ಸರ್ಕಾರದಿಂದ ನಡೆಸಲ್ಪಡುವ 10 ಸಾವಿರ ಕೇಂದ್ರಗಳು ಹಾಗೂ ಖಾಸಗಿಯ 20 ಸಾವಿರ ಕೇಂದ್ರಗಳಲ್ಲಿ ಕೊರೊನಾ ಲಸಿಕೆ ಲಭ್ಯವಿರಲಿದೆ.

ಆದರೆ ಸರ್ಕಾರಿ ಕೇಂದ್ರಗಳಲ್ಲಿ ಲಸಿಕೆ ಉಚಿತವಾಗಿ ನೀಡಲಾಗುತ್ತಿದ್ದು, ಖಾಸಗಿ ಕೇಂದ್ರಗಳಲ್ಲಿ ಹಣ ಪಾವತಿಸಬೇಕಾಗುತ್ತದೆ, ಶುಲ್ಕವನ್ನು ಶೀಘ್ರವೇ ತಿಳಿಸಲಾಗುತ್ತದೆ ಎಂದಿದ್ದಾರೆ.

ಎರಡನೇ ಹಂತದ ಲಸಿಕಾ ವಿತರಣೆ ಕಾರ್ಯಕ್ರಮದಲ್ಲಿ ಅಂದಾಜು 27 ಕೋಟಿ ಮಂದಿಯನ್ನು ತಲುಪುವ ಗುರಿ ಹೊಂದಲಾಗಿದೆ.ಭಾರತೀಯ ಕೌನ್ಸಿಲ್ ಫಾರ್ ಮೆಡಿಕಲ್ ರಿಸರ್ಚ್ ನ ಸಲಹೆಗಾರರಾದ ಡಾ. ಸುನೀತಾ ಗರ್ಗ್ ಮಾತನಾಡಿ, ರಾಷ್ಟ್ರೀಯ ಲಸಿಕೆ ವಿತರಣೆ ಕಾರ್ಯಕ್ರಮವು ಹೆಚ್ಚೆಚ್ಚು ಜನರನ್ನು ತಲುಪುವಂತಾಗಬೇಕು. ಆದರೆ ಮೊದಲು 60 ವರ್ಷ ಮೇಲ್ಪಟ್ಟವರಿಗೆ ಲಸಿಕೆ ದೊರೆಯಬೇಕು ಎಂದರು.

ಬಳಿಕ 50 ವರ್ಷ ಮೇಲ್ಪಟ್ಟವರು, ಬಳಿಕ ಅಸ್ವಸ್ಥರಾಗಿರುವವರು ಹೀಗೆ ಬೇರ್ಪಡಿಸಲಾಗುತ್ತದೆ. ದೀರ್ಘಕಾಲದ ಕಾಯಿಲೆಗಳನ್ನು ಹೊಂದಿರುವವರಿಗೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.

ಮಧುಮೇಹ, ಹೈಪರ್‌ಟೆನ್ಷನ್,ಪಾರ್ಶ್ವವಾಯು,ಕ್ಯಾನ್ಸರ್,ಉಸಿರಾಟದ ಸಮಸ್ಯೆ ಹೊಂದಿರುವವರಿಗೆ ಮೊದಲು ಲಸಿಕೆ ನೀಡಲಾಗುವುದು ಎಂದು ತಿಳಿಸಿದರು. ಭಾರತದಲ್ಲಿ ಕೊವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್‌ಗೆ ತುರ್ತು ಸಂದರ್ಭದಲ್ಲಿ ಬಳಕೆ ಮಾಡಲು ಅನುಮತಿ ನೀಡಲಾಗಿದೆ.

(ಮಾಹಿತಿ ಕೃಪೆ Oneindia

ಇಂತಹ ಶಾರ್ಕ್​ ಮರಿಯನ್ನ ನೀವು ನೋಡಿರೋಕೆ ಸಾಧ್ಯವೇ ಇಲ್ಲ...!

 

ಈ ಚಿತ್ರವನ್ನ ನೋಡ್ತಿದ್ರೆ ಯಾವುದೋ ಪುಟ್ಟ ಮಕ್ಕಳ ಆಟಿಕೆ ಇರಬಹುದು ಎಂದು ನಿಮಗೆ ಎನಿಸಬಹುದು. ಇಷ್ಟು ಮುದ್ದಾಗಿರುವ ಆಟಿಕೆ ಎಲ್ಲಿ ಸಿಗ್ತು ಅಂತಾ ಯೋಚನೆ ಮಾಡ್ತಿದ್ರೆ ನಿಮ್ಮ ಊಹೆ ತಪ್ಪು. ಅಸಲಿಗೆ ಇದು ಶಾರ್ಕ್​ ಮೀನಿನ ದಿವ್ಯಾಂಗ ಮರಿ.

ಇಂಡೋನೇಷಿಯಾದ ಮೀನುಗಾರನ ಬಲೆಗೆ ಈ ದಿವ್ಯಾಂಗ ಶಾರ್ಕ್​ ಮರಿ ಬಂದು ಬಿದ್ದಿದೆ.

ನೋಡೋಕೆ ವಿಚಿತ್ರವಾಗಿದ್ದ ಈ ಜೀವಿಯನ್ನ ಕಂಡು ಮೀನುಗಾರ ಕೂಡ ಗೊಂದಲಕ್ಕೆ ಒಳಗಾಗಿದ್ದಾನೆ.
ಫೆಬ್ರವರಿ 21ರಂದು ಪೂರ್ವ ನುಸಾ ತೆಂಗಾರಾದ ಮೀನುಗಾರಿಕಾ ಪ್ರದೇಶದಲ್ಲಿ ಮೀನುಗಾರಿಕೆ ಮಾಡ್ತಿದ್ದ ವೇಳೆ ಅಬ್ದುಲ್ಲ ನುರೆನ್​​ ಈ ವಿಚಿತ್ರ ಶಾರ್ಕ್​ ಮರಿಯನ್ನ ಕಂಡು ಹಿಡಿದಿದ್ದಾರೆ.

ಮೀನುಗಾರನ ಬಲೆಗೆ ಬಿದ್ದ ಶಾರ್ಕ್​ ಹೊಟ್ಟೆಯಲ್ಲಿದ್ದ ಮೂರು ಶಾರ್ಕ್​ ಮರಿಗಳಲ್ಲಿ ಈ ವಿಚಿತ್ರ ಮರಿ ಕೂಡ ಒಂದಾಗಿತ್ತು. ಇನ್ನೆರಡು ಶಾರ್ಕ್​ ಮರಿಗಳು ಸಾಮಾನ್ಯ ಸ್ಥಿತಿಯಲ್ಲಿದ್ದವು ಎಂದು ಮೀನುಗಾರ ಹೇಳಿದ್ದಾರೆ.

(ಮಾಹಿತಿ ಕೃಪೆ ಕನ್ನಡದುನಿಯಾ

Tuesday, February 23, 2021

ಕುರಿ/ಮೇಕೆ ಘಟಕ ಅನುಷ್ಟಾನಗೊಳಿಸಲು ಅರ್ಜಿ ಆಹ್ವಾನ

 \

ಶಿವಮೊಗ್ಗ : ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯು ಗ್ರಾಮೀಣ ಭಾಗದ ಪರಿಶಿಷ್ಟ ಪಂಗಡದ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಸ್ವಯಂ ಉದ್ಯೋಗ ಯೋಜನೆಯಡಿ ಕುರಿ ಅಥವಾ ಮೇಕೆ ಘಟಕಗಳನ್ನು ಸ್ಥಾಪಿಸಲು ಅರ್ಜಿಗಳನ್ನು ಆಹ್ವಾನಿಸಿದೆ.

ಆಸಕ್ತಿಯುಳ್ಳವರು ನಿಗಧಿತ ನಮೂನೆ ಅರ್ಜಿಯನ್ನು ಆಯಾ ತಾಲೂಕುಗಳ ಸಮಾಜ ಕಲ್ಯಾಣ ಇಲಾಖೆಗಳ ಸಹಾಯಕ ನಿರ್ದೇಶಕರ ಕಚೇರಿಯಿಂದ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಸೂಕ್ತ ದಾಖಲೆಗಳನ್ನು ಲಗತ್ತಿಸಿ ದಿ: 15/03/2021 ರೊಳಗಾಗಿ ಸಲ್ಲಿಸುವಂತೆ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಇಲಾಖಾ ಕಚೇರಿಯನ್ನು ಖುದ್ದಾಗಿ ಅಥವಾ ದೂ.ಸಂ.: 08182-279222 ನ್ನು ಸಂಪರ್ಕಿಸುವುದು.   

(ಮಾಹಿತಿ ಕೃಪೆ Kannada News Now)            


ಕುರೆಕುಪ್ಪ : ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನ

 ಬಳ್ಳಾರಿ, ಫೆ. 23(ಹಿ.ಸ): ಕುರೆಕುಪ್ಪ ಪುರಸಭೆ ಜಿಲ್ಲಾಧಿಕಾರಿಗಳಿಂದ 2018-19, 2019-20 ಹಾಗೂ 2020-21ನೇ ಸಾಲಿನ ಎಸ್.ಎಫ್.ಸಿ ಶೇ.24.10, ಶೇ.7.25 ಹಾಗೂ ಶೇ.5 ರ ಅನುಮೋದನೆಗೊಂಡ ಕಾರ್ಯಕ್ರಮಗಳನ್ನು ಸರ್ಕಾರದ ಮಾರ್ಗಸೂಚಿಗಳನ್ವಯ ಅನುಷ್ಠಾನಗೊಳಿಸುವುದಕ್ಕಾಗಿ ಅರ್ಹ ಪ.ಜಾತಿ/ಪ.ಪಂಗಡ, ಇತರೆ ಹಿಂದುಳಿದ ವರ್ಗ ಹಾಗೂ ವಿಕಲಚೇತನ ಆಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಪುರಸಭೆಯ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ.ಜಾತಿ/ಪ.ಪಂಗಡ ಜನಾಂಗದವರ ಶ್ರೇಯೋಭಿವೃದ್ಧಿಗಾಗಿ ಶೇ.24.10ರ ಯೋಜನೆಯಡಿ ನಿವೇಶನ ಹೊಂದಿದoತಹ ಪ.ಜಾತಿ/ಪ.ಪಂಗಡ ಜನಾಂಗದವರಿಗೆ ಪಕ್ಕಾ ಮನೆ ನಿರ್ಮಾಣ ಮಾಡಿಕೊಳ್ಳಲು ಸಹಾಯಧನ ಬಿಡುಗಡೆ ಮಾಡುವುದು ಮತ್ತು ಕುರೇಕುಪ್ಪ ಪುರಸಭೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವಂತಹ ಪೌರಕಾರ್ಮಿಕರಿಗೆ ನಿವೇಶನ ಖರೀದಿಗಾಗಿ ಧನ ಸಹಾಯ ಬಿಡುಗಡೆ ಮಾಡುವುದಾಗಿದೆ.

ಇತರೆ ಹಿಂದುಳಿದ ಜನಾಂಗದವರ ಶ್ರೇಯೋಭಿವೃದ್ಧಿಗಾಗಿ ಶೇ.7.25 ರ ಯೋಜನೆಯಡಿ ಇತರೆ ಹಿಂದುಳಿದ ವರ್ಗದ ಜನಾಂಗದವರ ಸಣ್ಣುದ್ದಿಮೆದಾರರಿಗೆ ಸಹಾಯಧನ ನೀಡುವುದು. ವಿಕಲಚೇತನರ ಶ್ರೇಯೋಭಿವೃದ್ಧಿಗಾಗಿ ಶೇ.5.0 ರ ಯೋಜನೆಯಡಿ ವಿಕಲ ಚೇತನರಿಗೆ ಕೃತಕ ಅಂಗಜೋಡಣೆಗಾಗಿ ಸಹಾಯಧನ ನೀಡುವುದು ಹಾಗೂ ವಿಕಲ ಚೇತನರ ಸಣ್ಣ ಉದ್ದಿಮೆದಾರರಿಗೆ ಸಹಾಯಧನ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.


ಮನೆ ಸೌಲಭ್ಯಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಮಹಿಳೆಯರಾರಬೇಕು. (ವಿಧುರ/ವಿಕಲಚೇತನರನ್ನು ಹೊರತುಪಡಿಸಿ) ಹಾಗೂ ನಿವೇಶನವು ಈ ನಗರ ಸ್ಥಳೀಯ ಸಂಸ್ಥೆಯ ಆಸ್ತಿ ತೆರಿಗೆ ವಹಿಯಲ್ಲಿ ದಾಖಲಾಗಿರಬೇಕು. ಅವಶ್ಯಕತೆ ದಾಖಲಾತಿಗಳು ಬೇಕಾದಲ್ಲಿ ಮೌಖಿಕ/ಲಿಖಿತ ರೂಪದಲ್ಲಿ ತಿಳಿಸುವಂತೆ ದಾಖಲಾತಿಗಳು ಮತ್ತು ನಿಯಮಗಳನ್ನು ಪಾಲಿಸಬೇಕು.

ಮಾ.25 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿರುತ್ತದೆ. ನಿಗದಿತ ಅವಧಿಯೊಳಗೆ ಬಂದoತಹ ಅರ್ಜಿಗಳನ್ನು ಮಾತ್ರ ಪರಿಗಣಿಸಲಾಗುವುದು ಹಾಗೂ ಅಪೂರ್ಣ ದಾಖಲಾತಿಹೊಂದಿದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಭರ್ತಿ ಮಾಡಿದ ಅರ್ಜಿಗಳನ್ನು ಪುರಸಭೆಯ ಕಛೇರಿಯಲ್ಲಿ ಸಲ್ಲಿಸಬೇಕು.

ಸಲ್ಲಿಸಬೇಕಾದ ದಾಖಲೆಗಳು : ಚಾಲ್ತಿಯಲ್ಲಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ರೇಷನ್ ಕಾರ್ಡ್,ಗುರುತಿನ ಚೀಟಿ,ಆಧಾರ್ ಕಾರ್ಡ್, ವಾಸಸ್ಥಳ ಪ್ರಮಾಣ ಪತ್ರ, ಇತ್ತೀಚಿನ ಮೂರು ಭಾವಚಿತ್ರಗಳನ್ನು ಸಲ್ಲಿಸಬೇಕಾಗಿದೆ. ಹೆಚ್ಚಿನ ಮಾಹಿತಿಗಾಗಿ ಪುರಸಭೆ ಕಚೇರಿಗೆ ಭೇಟಿ ನೀಡಲು ಸೂಚಿಸಿದೆ.

(ಮಾಹಿತಿ ಕೃಪೆ Hindusthan Samachar)

ನಿರುದ್ಯೋಗಿಗಳೇ ಗಮನಿಸಿ : ಕೌಶಲ್ಯಾಭಿವೃದ್ಧಿ ತರಬೇತಿಗಾಗಿ ಅರ್ಜಿ ಅಹ್ವಾನ

 

ಶಿವಮೊಗ್ಗ : ಜಿಲ್ಲಾ ಡಾ|| ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮವು 2019-20ನೇ ಸಾಲಿನ ಪರಿಶಿಷ್ಟ ಜಾತಿಯ ಫಲಾಪೇಕ್ಷಿಗಳಿಗೆ ತರಬೇತಿ ಯೋಜನೆಯಡಿ ಕಿಯೋನಿಕ್ಸ್ ಸಹಯೋಗದೊಂದಿಗೆ 3 ತಿಂಗಳ ಅವಧಿಯ ಅಕೌಂಟಿಂಗ್ ಮತ್ತು ಟ್ಯಾಲಿ, ಕಂಪ್ಯೂಟರ್ ಪ್ರೋಗ್ರಾಂರ್ ಕೋರ್ಸ್, ಕಾಲ್ ಸೆಂಟರ್ ಟ್ರೈನಿಂಗ್, ಕಂಪ್ಯೂಟರೈಸಡ್ ಪ್ಯಾಷನ್ ಡಿಸೈನಿಂಗ್ ಟೈಲರಿಂಗ್ ತರಬೇತಿಗಳಿಗೆ ಆಸಕ್ತ ಯುವಕ/ಯುವತಿಯರಿಂದ ಅರ್ಜಿ ಆಹ್ವಾನಿಸಿದೆ.

ಅರ್ಹ ಅಭ್ಯರ್ಥಿಗಳು ಹೆಚ್ಚಿನ ವಿವರಗಳಿಗೆ ಡಾ|| ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಗಾಂಧಿನಗರ, ಶಿವಮೊಗ್ಗ , ದೂ.ಸಂ.: 08182-224349 ಹಾಗೂ ಸಂಬಂಧಿಸಿದ ತಾಲೂಕು ಮಟ್ಟದ ಸಮಾಜ ಕಲ್ಯಾಣ ಇಲಾಖೆಗಳನ್ನು ಸಂಪರ್ಕಿಸುವಂತೆ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.   

(ಮಾಹಿತಿ ಕೃಪೆ Kannada News Now)              

'ವಿದ್ಯಾರ್ಥಿ ವೇತನ' : ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಇಲ್ಲಿದೆ ಮಹತ್ವದ ಮಾಹಿತಿ

 ಕೊಪ್ಪ : ಅಲ್ಪಸಂಖ್ಯಾತ ( ಮುಸ್ಲಿಂ, ಕ್ರಿಶ್ಚಿಯನ್, ಸಿಖ್ಖರು , ಜೈನರು, ಬೌದ್ದ, ಪಾರ್ಸಿ) ಸಮುದಾಯದ ವಿದ್ಯಾರ್ಥಿಗಳಿಗೆ 2020-21 ನೇ ಸಾಲಿನ ವಿದ್ಯಾರ್ಥಿ ವೇತನಕ್ಕಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿತ್ತು. ಇದೀಗ ಮುಂದುವರೆದು ಎನ್ ಎಸ್ ಪಿ ಸ್ಕಾಲರ್ ಶಿಪ್ ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು ಮತ್ತೆ ಎಸ್ ಎಸ್ ಪಿ ಸ್ಕಾಲರ್ ಶಿಪ್ ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಲು ಸೂಚನೆ ನೀಡಲಾಗಿದೆ.

ಹೌದು, (Post-matric and Merit-cum-means Scholarship) ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು ಎನ್ ಎಸ್ ಪಿ ಸ್ಕಾಲರ್ ಶಿಪ್ ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಇದೀಗ SSP ( state scholarship portal ) ನಲ್ಲಿ ಅರ್ಜಿ ಸಲ್ಲಿಸಲು ಸೂಚನೆ ನೀಡಲಾಗಿದೆ.ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನಕ್ಕೆ ಸಲ್ಲಿಸಿದ ದಾಖಲೆಗಳನ್ನು ಪರಿಶೀಲನೆ ಮಾಡುವಂತೆ ಆಯಾ ಕಾಲೇಜಿನ 'E attestation' ಆಫೀಸರ್ ಗಳಿಗೆ ಸೂಚನೆ ನೀಡಲಾಗಿದೆ.

ಅರ್ಹ ವಿದ್ಯಾರ್ಥಿಗಳು ಧೃಡೀಕೃತ ದಾಖಲೆಗಳೊಂದಿಗೆ https://ssp.postmatric.karnataka.gov.in/ portal ಮೂಲಕ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿ, ಅರ್ಜಿ ಸಲ್ಲಿಸಿದ ಪ್ರತಿಯನ್ನು ಕಾಲೇಜು ಕಛೇರಿಗೆ ಸಲ್ಲಿಸಲು ಸೂಚಿಸಲಾಗಿದೆ. ಹೆಚ್ಚಿನ ಮಾಹಿತಿಗೆ ವಿದ್ಯಾರ್ಥಿಗಳು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಕೊಪ್ಪ. ಹಾಗೂ ಶಾಲಾ/ಕಾಲೇಜು ಕಛೇರಿಯನ್ನು ಸಂಪರ್ಕಿಸಬಹುದಾಗಿದೆ.

(ಮಾಹಿತಿ ಕೃಪೆ ಪ್ರಜಾವಾಣಿ)

5ಜಿ: ಏರ್‌ಟೆಲ್‌, ಕ್ವಾಲ್ಕಂ ಸಹಯೋಗ

ನವದೆಹಲಿ: ದೇಶದಲ್ಲಿ 5ಜಿ ತಂತ್ರಜ್ಞಾನ ಅಭಿವೃದ್ಧಿಗೆ ವೇಗ ನೀಡಲು ದೂರಸಂಪರ್ಕ ಸೇವಾ ಕಂಪನಿ ಭಾರ್ತಿ ಏರ್‌ಟೆಲ್‌ ಮತ್ತು ಅಮೆರಿಕದ ಚಿಪ್‌ ತಯಾರಿಕಾ ಕಂಪನಿ ಕ್ವಾಲ್ಕಂ ಒಪ್ಪಂದ ಮಾಡಿಕೊಂಡಿವೆ.

ಮೊಬೈಲ್‌ಗೆ ಬಳಕೆಗೆ ಆದ್ಯತೆ ನೀಡುತ್ತಿರುವ ಇಂದಿನ ಸಮಾಜದಲ್ಲಿ ಎಲ್ಲೆಡೆಯೂ ಸಂಪರ್ಕ ಕಲ್ಪಿಸುವುದು ಸವಾಲಾಗಿದೆ. ಹೀಗಾಗಿ ‌ದೇಶದಾದ್ಯಂತ ಅತ್ಯಂತ ಕಡಿಮೆ ವೆಚ್ಚದಲ್ಲಿ ಬ್ರಾಡ್‌ಬ್ಯಾಂಡ್‌ ಸೇವೆಗಳನ್ನು ಅತ್ಯಂತ ವೇಗವಾಗಿ ಒದಗಿಸಲು ಈ ಸಹಯೋಗವು ನೆರವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಏರ್‌ಟೆಲ್‌ನ 5ಜಿ ಸಂಪರ್ಕವು ಗಿಗಾಬೈಟ್‌ ವೇಗದ ಇಂಟರ್‌ನೆಟ್‌ ಸೇವೆಗಳನ್ನು ಗ್ರಾಹಕರಿಗೆ ಒದಗಿಸಲಿದೆ.

'ಭಾರತದಲ್ಲಿ ವಿಶ್ವ ದರ್ಜೆಯ 5ಜಿ ಸೌಲಭ್ಯವನ್ನು ಜಾರಿಗೊಳಿಸುವ ನಮ್ಮ ಪ್ರಯಾಣದಲ್ಲಿ ಕ್ವಾಲ್ಕಂ ಟೆಕ್ನಾಲಜೀಸ್ ಪ್ರಮುಖ ತಂತ್ರಜ್ಞಾನ ಪೂರೈಕೆದಾರರಾಗಿರುವುದಕ್ಕೆ ನಾವು ಸಂತೋಷಪಡುತ್ತೇವೆ' ಎಂದು ಭಾರ್ತಿ ಏರ್‌ಟೆಲ್‌ನ ಮುಖ್ಯ ತಾಂತ್ರಿಕ ಅಧಿಕಾರಿ (ಸಿಟಿಒ) ರಣ್‌ದೀಪ್‌ ಸೇಖನ್‌ ಹೇಳಿದ್ದಾರೆ.

'ಈ ಸಹಯೋಗವು 5ಜಿ ನೆಟ್‌ವರ್ಕ್ ವ್ಯಾಪ್ತಿ ಮತ್ತು ಸಾಮರ್ಥ್ಯವನ್ನು ವೃದ್ಧಿಸುವ ಏರ್‌ಟೆಲ್‌ನ ಯೋಜನೆಗಳಲ್ಲಿ ನಿರ್ಣಾಯಕ ಪಾತ್ರ ವಹಿಸುವ ನಿರೀಕ್ಷೆಯಿದೆ' ಎಂದು ಕ್ವಾಲ್ಕಂ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ನ ಉಪಾಧ್ಯಕ್ಷ ರಾಜನ್‌ ವಗಾಡಿಯಾ ಹೇಳಿದ್ದಾರೆ. (ಮಾಹಿತಿ ಕೃಪೆ ಪ್ರಜಾವಾಣಿ)

ಚಿಕ್ಕಬಳ್ಳಾಪುರ ಸ್ಫೋಟ: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಎಂದ ಸಿಎಂ ಯಡಿಯೂರಪ್ಪ

 

ಬೆಂಗಳೂರು: ಚಿಕ್ಕಬಳ್ಳಾಪುರದಲ್ಲಿ ಸಂಭವಿಸಿದ ಸ್ಫೋಟಕ್ಕೆ ಸಂಬಂಧಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಘಟನೆಗೆ ಸಂಬಂಧಿಸಿ ಮುಖ್ಯಮಂತ್ರಿಗಳ ಅಧಿಕೃತ ಟ್ವಿಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದ್ದು, 'ಚಿಕ್ಕಬಳ್ಳಾಪುರದ ಹಿರೇನಾಗವಲ್ಲಿ ಗ್ರಾಮದ ಬಳಿ ಜಿಲೆಟಿನ್ ಸ್ಫೋಟದಿಂದ ಆರು ಮಂದಿ ಮೃತಪಟ್ಟಿರುವುದು ತೀವ್ರ ಆಘಾತ ತಂದಿದೆ. ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಹಿರಿಯ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗುತ್ತಿದ್ದು, ಪ್ರಕರಣದ ಸಂಪೂರ್ಣ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ' ಎಂದು ಉಲ್ಲೇಖಿಸಲಾಗಿದೆ.'  ಮೃತರ ಆತ್ಮಕ್ಕೆ ಶಾಂತಿಯನ್ನು ಕೋರುತ್ತಾ, ಅವರ ಕುಟುಂಬದವರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ.  ಈ ದುರ್ಘಟನೆ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಯುತ್ತಿದ್ದು, ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದು' ಎಂದು ಅವರು ಮತ್ತೊಂದು ಟ್ವೀಟ್‌ನಲ್ಲಿ ಮುಖ್ಯಮಂತ್ರಿಗಳು ಉಲ್ಲೇಖಿಸಿದ್ದಾರೆ.

(ಮಾಹಿತಿ ಕೃಪೆ ಪ್ರಜಾವಾಣಿ)


ಸರ್ಕಾರದ ಬೇಜವಾಬ್ದಾರಿಗೆ ಇನ್ನೆಷ್ಟು ಜೀವಗಳು ಬಲಿಯಾಗಬೇಕು?: ಡಿ.ಕೆ. ಶಿವಕುಮಾರ್


 ಬೆಂಗಳೂರು: 'ಚಿಕ್ಕಬಳ್ಳಾಪುರದ ಅಕ್ರಮ ಕಲ್ಲು ಕ್ವಾರಿ ಬಳಿ ಜಿಲೆಟಿನ್ ಸ್ಫೋಟದಿಂದ 6 ಮಂದಿ ಜೀವ ಕಳೆದುಕೊಂಡಿರುವುದಕ್ಕೆ ರಾಜ್ಯ ಸರ್ಕಾರದ ಬೇಜವಾಬ್ದಾರಿಯೇ ಕಾರಣ. ಸರ್ಕಾರದ ಅಸಡ್ಡೆಗೆ ಇನ್ನೆಷ್ಟು ಅಮಾಯಕ ಜೀವಗಳು ಬಲಿಯಾಗಬೇಕು?' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ಒಂದು ತಿಂಗಳಲ್ಲಿ ಎರಡನೇ ಬಾರಿ ಇಂಥ ದುರ್ಘಟನೆ ಸಂಭವಿಸಿದೆ. ಶಿವಮೊಗ್ಗದಲ್ಲಿನ ಸ್ಫೋಟ ಸಮಯದಲ್ಲೇ, ಈ ಸ್ಫೋಟಕಗಳ ನಿರ್ವಹಣೆ, ಸಾಗಣೆ ಬಗ್ಗೆ ಒಂದು ಸುರಕ್ಷಿತ ವ್ಯವಸ್ಥೆ ನಿರ್ಮಿಸಬೇಕು, ನೀತಿ-ನಿಯಮಗಳ ಕಟ್ಟುನಿಟ್ಟು ಪಾಲನೆಗೆ ಕ್ರಮ ಕೈಗೊಳ್ಳಬೇಕು ಎಂದು ನಾನು ಹೇಳಿದ್ದೆ.'

'ಆದರೆ ತನ್ನ ಆಂತರಿಕ ಸಮಾಸ್ಯೆಗಳಲ್ಲೇ ಮುಳುಗಿರುವ ಈ ಸರ್ಕಾರಕ್ಕೆ ಇತ್ತ ಗಮನ ಹರಿಸಲು ಸಾಧ್ಯವಾಗಿಲ್ಲ.

ಮಾಧ್ಯಮಗಳ ಮುಂದೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದು ಬಿಟ್ಟರೆ, ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಕ್ರಮ ಕೈಗೊಂಡಿದ್ದರೆ ಇಂಥ ದುರಂತ ಮರುಕಳಿಸುತ್ತಿರಲಿಲ್ಲ' ಎಂದು ಶಿವಕುಮಾರ್ ಕಿಡಿಕಾರಿದ್ದಾರೆ.

'ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಎನ್ನುವ ಮಾತು ಹಾಸ್ಯಾಸ್ಪದವಾಗಿದೆ. ಹೇಳಿಕೆ ನೀಡುವ ಸರ್ಕಾರದ ಪ್ರತಿನಿಧಿಗಳು ಜೋಕರ್ ಗಳಂತೆ ಕಾಣುತ್ತಿದ್ದಾರೆ. ಇದರ ಪರಿಣಾಮವೇ ಚಿಕ್ಕಬಳ್ಳಾಪುರದಲ್ಲಿ ಆರು ಮುಗ್ಧ ಜೀವಿಗಳ ಬಲಿ ಆಗಿರುವುದು. ಅಕ್ರಮ ಗಣಿಗಾರಿಕೆ ನಿಯಂತ್ರಣ ಮಾಡುತ್ತೇವೆ ಎನ್ನುವ ರಾಜ್ಯ ಸರ್ಕಾರ, ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿಲ್ಲ ಎಂಬುದಕ್ಕೆ ಈ ದುರಂತ ಸಾಕ್ಷಿ. ಈ ಸರ್ಕಾರ ಹೇಳುವುದೊಂದು, ಮಾಡುವುದೊಂದು' ಎಂದು ಟೀಕಿಸಿರುವ ಅವರು, ಸರ್ಕಾರ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ಜತೆಗೆ ಈ ಘಟನೆಗೆ ಕಾರಣವಾದ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.

'ರಾಜ್ಯ ಸರ್ಕಾರ ಇನ್ನಾದರೂ ನಿಜವಾಗಿ ಎಚ್ಚೆತ್ತುಕೊಂಡು, ಅಮಾಯಕ ಜೀವಗಳು ಬಲಿಯಾಗದಂತೆ ನೋಡಿಕೊಳ್ಳಬೇಕು' ಎಂದು ಶಿವಕುಮಾರ್ ಆಗ್ರಹಿಸಿದ್ದಾರೆ.

ಮಾಹಿತಿ ಕೃಪೆ ಪ್ರಜಾವಾಣಿ)

ಜನಾರ್ದನ ರೆಡ್ಡಿ ಪತ್ನಿ ಲಕ್ಷ್ಮೀ ಅರುಣಾಗೆ ಬಿಗ್ ರಿಲೀಫ್


 ಬೆಂಗಳೂರು (ಫೆ.23): ಮೆಸ​ರ್ಸ್ ಅಸೋಸಿಯೇಟೆಡ್‌ ಮೈನಿಂಗ್‌ ಕಂಪನಿ ಬಳ್ಳಾರಿಯಲ್ಲಿ ಅಕ್ರಮ ಗಣಿಗಾರಿಕೆ ನಡೆಸಿದ ಪ್ರಕರಣದಲ್ಲಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಪತ್ನಿ ಲಕ್ಷ್ಮೀ ಅರುಣಾ ಅವರ ಹೆಸರು ಕೈಬಿಟ್ಟು ನಗರದ ಸಿಬಿಐ ವಿಶೇಷ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್‌ ಪುರಸ್ಕರಿಸಿದೆ.

ಸಿಬಿಐ ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸಮಾಜ ಪರಿವರ್ತನಾ ಸಮುದಾಯದ ಅಂಗ ಸಂಸ್ಥೆ ಆಶಾ ದೀಪ್‌ ಸಂಸ್ಥೆಯ ಕಾರ್ಯಕಾರಿ ನಿರ್ದೇಶಕ ಎಸ್‌.ಆರ್‌. ಹಿರೇಮಠ್‌ ಹೈಕೋರ್ಟ್‌ಗೆ ಕ್ರಿಮಿನಲ್‌ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೋಮಶೇಖರ್‌ ಅವರಿದ್ದ ಏಕ ಸದಸ್ಯ ನ್ಯಾಯಪೀಠ, ಸಿಬಿಐ ವಿಶೇಷ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದು ಅರ್ಜಿ ವಜಾಗೊಳಿಸಿದೆ.

ಕರ್ನಾಟಕ-ಆಂಧ್ರ ಗಡಿ ಸರ್ವೇ ಕಂಪ್ಲೀಟ್‌: ಮತ್ತೆ ಜೈಲಿಗೆ ಹೋಗ್ತಾರಾ ಜನಾರ್ದನ ರೆಡ್ಡಿ?

ಲಕ್ಷ್ಮೀ ಅರುಣಾ ಅವರು ಮೆಸ​ರ್ಸ್ ಅಸೋಸಿಯೇಟೆಡ್‌ ಮೈನಿಂಗ್‌ ಕಂಪನಿಯ ದಾಖಲೆಗೆ ಸಹಿ ಹಾಕಿದ್ದಾರೆ. ಪತಿ ಗಾಲಿ ಜನಾರ್ದನ ರೆಡ್ಡಿ ಹೇಳಿದ ದಾಖಲೆಗೆ ಸಹಿ ಹಾಕಿದ್ದಾರೆ. ಅದಕ್ಕಾಗಿ ಅಕ್ರಮ ಗಣಿಗಾರಿಕೆಯಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಹೇಳಲಾಗುವುದಿಲ್ಲ. ಹೀಗಾಗಿ, ಪ್ರಕರಣದಿಂದ ಲಕ್ಷ್ಮೀ ಅರುಣಾ ಹೆಸರು ಕೈಬಿಟ್ಟಸಿಬಿಐ ನ್ಯಾಯಾಲಯದ ಆದೇಶ ಸರಿಯಿದೆ ಎಂದು ಹೈಕೋರ್ಟ್‌ ಆದೇಶದಲ್ಲಿ ತಿಳಿಸಿದೆ.

ಅಸೋಸಿಯೇಟೆಡ್‌ ಮೈನಿಂಗ್‌ ಕಂಪನಿ ಬಳ್ಳಾರಿಯಲ್ಲಿ ಅಕ್ರಮ ಗಣಿಗಾರಿಕೆ ನಡೆಸಿದ ಆರೋಪ ಸಂಬಂಧ ತನಿಖೆ ನಡೆಸಿದ್ದ ಸಿಬಿಐ ತನಿಖಾಧಿಕಾರಿಗಳು ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ್ದ ದೋಷಾರೋಪ ಪಟ್ಟಿಯಲ್ಲಿ ಜನಾರ್ದನ ರೆಡ್ಡಿ ಮೊದಲನೆ ಆರೋಪಿ ಹಾಗೂ ಅವರ ಪತ್ನಿ ಲಕ್ಷ್ಮೀ ಅರುಣಾ ಎರಡನೇ ಆರೋಪಿಯಾಗಿದ್ದರು. ಇದರಿಂದ ಲಕ್ಷ್ಮೀ ಅರುಣಾ ಅವರು ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

(ಮಾಹಿತಿ ಕೃಪೆ ಸುವರ್ಣ ನ್ಯೂಸ್)


ಡಾ.ಬಿ. ಆರ್. ಹರೀಶ್ ನಾಯ್ಕ್

 

Monday, February 22, 2021

ಫೆ.28ರಂದು FDA ಪರೀಕ್ಷೆ ಬರೆಯೋರಿಗೆ KPSCಯಿಂದ 'ಇಲ್ಲಿದೆ ಮಹತ್ವದ ಮಾಹಿತಿ': ಈ ಕೆಲಸ ತಪ್ಪದೇ ಮಾಡಿ


 ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗದಿಂದ ದಿನಾಂಕ 24-01-2021ರಂದು ನಿಗಧಿ ಪಡಿಸಿದ್ದಂತ ಸಹಾಯಕ, ಪ್ರಥಮ ದರ್ಜೆ ಸಹಾಯಕರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತ ಪ್ರವೇಶ ಪರೀಕ್ಷೆಯನ್ನು ರದ್ದು ಪಡಿಸಲಾಗಿತ್ತು. ಈ ಬಳಿಕ ದಿನಾಂಕ 28-02-2021ರಂದು ಪರೀಕ್ಷೆಯನ್ನು ನಿಗಧಿ ಪಡಿಸಲಾಗಿದೆ. ಇಂತಹ ಪ್ರವೇಶ ಪರೀಕ್ಷೆಯ ಪರಿಷ್ಕೃತ ಪ್ರವೇಶ ಪತ್ರ ಡೌನ್ ಲೋಡ್ ಬಗ್ಗೆ ಕೆಪಿಎಸ್ಸಿಯಿಂದ ಅವಕಾಶ ನೀಡಲಾಗಿದೆ.

ಈ ಕುರಿತಂತೆ ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿ ಜಿ.ಸತ್ಯವತಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಆಯೋಗವು 2019ನೇ ಸಾಲಿನ ರಾಜ್ಯ ಮಟ್ಟದ ವಿವಿಧ ಇಲಾಖೆಗಳಲ್ಲಿ ಮತ್ತು ಕರ್ನಾಟಕ ಭವನ ದೆಹಲಿಯ ಉಳಿಕೆ ಮೂಲ ವೃಂದದ ಮತ್ತು ಹೈದರಾಬಾದ್ ಕರ್ನಾಟಕ ವೃಂದದ ಸಹಾಯಕ, ಪ್ರಥಮ ದರ್ಜೆ ಸಹಾಯಕರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ದಿನಾಂಕ 24-01-2021ರಂದು ನಡೆಸಲು ಉದ್ದೇಶಿಸಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಪ್ರಕಟಿಸಲಾದ ಪ್ರವೇಶ ಪತ್ರಗಳನ್ನು ರದ್ದು ಪಡಿಸಿದೆ ಎಂದು ಈ ಮೂಲಕ ತಿಳಿಸಿದೆ. ಪ್ರಸ್ತುತ ಸದರಿ ಪರೀಕ್ಷೆಯ ಅಭ್ಯರ್ಥಿಗಳಿಗೆ ಮರು ನಿಗದಿಯಾದ ದಿನಾಂಕ 28-02-2021ರ ಸ್ಪರ್ಧಾತ್ಮಕ ಪರೀಕ್ಷೆಗೆ ಪ್ರವೇಶ ಪತ್ರಗಳನ್ನು ಬಿಡುಗಡೆಗೊಳಿಸಲು ಆಯೋಗವು ತೀರ್ಮಾನಿಸಿರುತ್ತದೆ. ಅದರಂತೆ ಅಭ್ಯರ್ಥಿಗಳು ಆಯೋಗದ ವೆಬ್ ಸೈಟ್ http://kpsc.kar.nic.in ನಲ್ಲಿ ಸಹಾಯಕ, ಪ್ರಥಮ ದರ್ಜೆ ಸಹಾಯಕರ ಹುದ್ದೆಗಳ ದಿನಾಂಕ 28-02-2021ಕ್ಕೆ ಪರಿಕ್ಷೃತ ಪ್ರವೇಶ ಪತ್ರಗಳು ಎಂಬ ಶೀರ್ಷಿಕೆಯಡಿಯಲ್ಲಿ ತಮ್ಮ ಯೂಸರ್ ನೇಮ್ ಮತ್ತು ಪಾಸ್ ವರ್ಡ್ ಉಪಯೋಗಿಸಿ, ಪರಿಷ್ಕೃತ ಪ್ರವೇಶ ಪತ್ರವನ್ನು ಡೌನ್ ಲೋಡ್ ಮಾಡಿಕೊಳ್ಳಲು ದಿನಾಂಕ 21-02-2021ರಿಂದ ಅವಕಾಶ ಕಲ್ಪಿಸಲಾಗಿದೆ.

ದಿನಾಂಕ 24-01-2021ರ ಸ್ಪರ್ಧಾತ್ಮಕ ಪರೀಕ್ಷೆಗೆ ಜಾರಿಗೊಳಿಸಲಾಗಿದ್ದ ಪ್ರವೇಶ ಪತ್ರವನ್ನು ಈಗಾಗಲೇ ರದ್ದುಪಡಿಸಲಾಗಿದೆ. ಆದುದರಿಂದ ಯಾವುದೇ ಕಾರಣಕ್ಕೂ ದಿನಾಂಕ 24-01-2021ರ ಪ್ರವೇಶ ಪತ್ರವನ್ನು ಸದರಿ ಸ್ಪರ್ಧಾತ್ಮಕ ಪರೀಕ್ಷೆಗೆ ಪರಿಗಣಿಸಲಾಗುವುದಿಲ್ಲ. ಅಭ್ಯರ್ಥಿಗಳು ಪರಿಷ್ಕೃತ ಪ್ರವೇಶ ಪತ್ರವನ್ನು ಹಾಜರುಪಡಿಸದಿದ್ದಲ್ಲಿ ಮತ್ತು ದಿನಾಂಕ 24-01-2021ರ ಸ್ಪರ್ಧಾತ್ಮಕ ಪರೀಕ್ಷೆಯ ಪ್ರವೇಶ ಪತ್ರವನ್ನು ಹಾಜರುಪಡಿಸಿದ್ದಲ್ಲಿ ಅಂತಹ ಅಭ್ಯರ್ಥಿಗಳಿಗೆ ದಿನಾಂಕ 28-02-2021ರ ಪರೀಕ್ಷೆಗೆ ಹಾಜರಾಗಲು ಅನುಮತಿ ನೀಡಲಾಗುವುದಿಲ್ಲ. ಅಭ್ಯರ್ಥಿಗಳು ಕಡ್ಡಾಯವಾಗಿ ದಿನಾಂಕ 28-02-2021ರ ಸ್ಪರ್ಧಾತ್ಮಕ ಪರೀಕ್ಷೆಗೆ ಜಾರಿಗೊಳಿಸಲಾದ ಪರಿಷ್ಕೃತ ಪ್ರವೇಶ ಪತ್ರಗಳೊಂದಿಗೆ ಮಾತ್ರ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಬೇಕು.

ವರದಿ : ವಸಂತ ಬಿ ಈಶ್ವರಗೆರೆ

(ಮಾಹಿತಿ ಕೃಪೆ ಕನ್ನಡ ನ್ಯೂಸ್ ನೌವ್)



ಪೊಗರು ಚಿತ್ರದಲ್ಲಿ ಬ್ರಾಹ್ಮಣರ ಅವಹೇಳನ ಆರೋಪ: ಪ್ರತಿಭಟನೆ ಎಚ್ಚರಿಕೆ


 ಬೆಂಗಳೂರು: ಧ್ರುವ ಸರ್ಜಾ ಹಾಗೂ ರಶ್ಮಿಕಾ ಮಂದಣ್ಣ ನಟನೆಯ 'ಪೊಗರು' ಚಿತ್ರವು ವಿವಾದವನ್ನು ಮೈಮೇಲೆ ಎಳೆದುಕೊಂಡಿದೆ. ಚಿತ್ರದಲ್ಲಿ ಬ್ರಾಹ್ಮಣರನ್ನು ಅವಹೇಳನ ಮಾಡುವ ದೃಶ್ಯಗಳಿವೆ ಎಂದು ಆರೋಪಿಸಿರುವ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್‌.ಎಸ್‌.ಸಚ್ಚಿದಾನಂದ ಮೂರ್ತಿ ಅವರು, ಆ ದೃಶ್ಯಗಳನ್ನು ತೆಗೆಯಬೇಕು ಎಂದು ಆಗ್ರಹಿಸಿದ್ದಾರೆ.

'ಇತ್ತೀಚಿಗಷ್ಟೆ ತೆರೆಕಂಡ ನಂದ ಕಿಶೋರ್ ನಿರ್ದೇಶನದ ಕನ್ನಡದ 'ಪೊಗರು' ಚಿತ್ರದಲ್ಲಿ ಬ್ರಾಹ್ಮಣ ಸಮುದಾಯವನ್ನು ಅವಹೇಳನ ಮಾಡಿರುವುದು ನಿಜಕ್ಕೂ ಖಂಡನೀಯ. ಬ್ರಾಹ್ಮಣರು ತಿರುಗಿ ಬಿಳುವುದಿಲ್ಲ ಅನ್ನುವ ಆಲೋಚನೆ ಇದ್ದಾರೆ ಅದು ತಪ್ಪು ಕಲ್ಪನೆ. ನಾನು ನಿರ್ದೇಶಕರಿಗೆ ಈ ಕೂಡಲೇ ಅವಹೇಳನಕಾರಿ ದೃಶ್ಯವನ್ನು ಚಿತ್ರದಿಂದ ತೆಗೆದು ಹಾಕಬೇಕೆಂದು ಆಗ್ರಹಿಸುತ್ತೇನೆ. ಇಲ್ಲದಿದ್ದರೆ ಫೆ.23ರಂದು ಚಲನಚಿತ್ರ ವಾಣಿಜ್ಯ ಮಂಡಳಿಗೆ ಮನವಿ ಸಲ್ಲಿಸುತ್ತೇವೆ. ಮತ್ತು ಫೆ.24ರಂದು ರಾಜ್ಯದಾದ್ಯಂತ ಉಗ್ರ ಹೋರಾಟ ಮಾಡುತ್ತೇವೆ. ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬ್ರಾಹ್ಮಣರ ಬಗ್ಗೆ ಅವಹೇಳನ ಮಾಡಿ ನಂತರ ಕ್ಷಮೆಯಾಚಿಸಿದ್ದಾರೆ. ಉನ್ನತ ಸ್ಥಾನದಲ್ಲಿರುವ ನೀವು ಹೀಗೆ ಮಾತನಾಡುವುದು ನಿಮಗೆ ಶೋಭೆ ತರುವಂತಹುದಲ್ಲ. ಜವಾಬ್ದಾರಿಯುತವಾಗಿ ನಡೆದುಕೊಳ್ಳುವುದು ಒಳ್ಳೆಯದು' ಎಂದು ಮಂಡಳಿಯ ಫೇಸ್‌ಬುಕ್‌ ಪೇಜ್‌ನಲ್ಲಿ ಸಚ್ಚಿದಾನಂದಮೂರ್ತಿ ಪೋಸ್ಟ್‌ ಮಾಡಿದ್ದಾರೆ.

ಚಿತ್ರದಲ್ಲೇ ಏನಿದೆ?

ಚಿತ್ರದ ಆರಂಭದಲ್ಲೇ ಯಜ್ಞ ಮಾಡುತ್ತಿದ್ದ ಪುರೋಹಿತರ ಮೇಲೆ ಖಳನಾಯಕನ ತಂಡದಲ್ಲಿದ್ದ ವ್ಯಕ್ತಿಯೊಬ್ಬ ಕಾಲಿಟ್ಟ ದೃಶ್ಯವಿದೆ. ಜೊತೆಗೆ ನಾಯಕನೇ ಬ್ರಾಹ್ಮಣರನ್ನು ಅವಹೇಳನ ಮಾಡುವ ಪದಗಳನ್ನು ಬಳಸಿದ್ದಾರೆ ಎನ್ನುವ ಆರೋಪಗಳು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತವೆ.

(ಮಾಹಿತಿ ಕೃಪೆ ಪ್ರಜಾವಾಣಿ)

ದೇಶದ ಅಭಿವೃದ್ಧಿಗೆ ಖಾಸಗೀಕರಣ ಅನಿವಾರ್ಯ: ನಿರ್ಮಲಾ ಸೀತಾರಾಮನ್


 ಬೆಂಗಳೂರು: 'ಉತ್ತಮವಾಗಿ ಕಾರ್ಯ ನಿರ್ವಹಿಸದೇ ಇರುವ ಸಾರ್ವಜನಿಕ ಸಂಸ್ಥೆಗಳನ್ನು ಸಮರ್ಥವಾಗಿ ನಿರ್ವಹಿಸುವಂತೆ ಮಾಡಲು ಮತ್ತು ದೇಶದ ಅಭಿವೃದ್ಧಿ ಸಾಧಿಸಲು ಖಾಸಗೀಕರಣ ಅನಿವಾರ್ಯ' ಎಂದು ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅಭಿಪ್ರಾಯಪಟ್ಟರು.

ಬಿಜೆಪಿ ಆರ್ಥಿಕ ಪ್ರಕೋಷ್ಠವು ಕೇಂದ್ರ ಬಜೆಟ್‌ ಕುರಿತು ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, 'ಭಾರತವೆಂದರೆ ಮೂಲಸೌಕರ್ಯಗಳ ಕೊರತೆ ಇರುವ ದೇಶ ಎಂಬ ಮಾತಿತ್ತು. ದೀನದಯಾಳ್‌ ಉಪಾಧ್ಯಾಯರ 'ಅಂತ್ಯೋದಯ' ಚಿಂತನೆಗಳೊಂದಿಗೆ ಇಂತಹ ಮಾತುಗಳನ್ನು ತೊಡೆದು ಹಾಕಲು ಕೇಂದ್ರ ಸರ್ಕಾರವು ಶ್ರಮಿಸುತ್ತಿದೆ' ಎಂದರು.

'ಉಜ್ವಲ, ಉಜಾಲಾ, ಸ್ವನಿಧಿ, ಮುದ್ರಾ, ಜನೌಷಧಿ, ಕಿಸಾನ್ ಸಮ್ಮಾನ್‍ನಂಥ ಯೋಜನೆಗಳ ಮೂಲಕ ಕೇಂದ್ರದ ಬಿಜೆಪಿ ಸರ್ಕಾರವು ಬಡವರ ಸಮಸ್ಯೆಗಳನ್ನು ನಿವಾರಿಸಲು ಆದ್ಯತೆ ನೀಡಿದೆ' ಎಂದು ಹೇಳಿದರು. 

'ಉಜ್ವಲ ಯೋಜನೆಯಡಿ ಈಗಾಗಲೇ 8 ಕೋಟಿ ಬಡವರಿಗೆ ಉಚಿತ ಅಡುಗೆ ಅನಿಲ ಸಿಲಿಂಡರ್ ಸಂಪರ್ಕ ನೀಡಿದ್ದು, ಈ ಬಜೆಟ್‍ನಡಿ ಮತ್ತೆ 1 ಕೋಟಿಗಳಷ್ಟು ಅರ್ಹ ಬಡವರಿಗೆ ಈ ಸೌಲಭ್ಯ ವಿಸ್ತರಿಸಲಾಗುವುದು' ಎಂದರು.

'1969ರಲ್ಲಿ ಬ್ಯಾಂಕ್‍ಗಳ ರಾಷ್ಟ್ರೀಕರಣ ನಡೆದರೂ ಬಡವರಿಗೆ ಅದರಿಂದ ವಿಶೇಷ ಪ್ರಯೋಜನ ಲಭಿಸಿರಲಿಲ್ಲ. ಆಧಾರ್ ಸಂಖ್ಯೆಯನ್ನು ಮೊಬೈಲ್‍ ಸಂಖ್ಯೆಗೆ ಜೋಡಿಸಿ ಜನಧನ್ ಕಾರ್ಯಕ್ರಮವನ್ನು ಜಾರಿಗೊಳಿಸಿದ್ದರಿಂದ ನಿಜವಾದ ಬಡವರಿಗೆ ಈ ಯೋಜನೆಯ ಪ್ರಯೋಜನ ಲಭಿಸುತ್ತಿದೆ' ಎಂದು ತಿಳಿಸಿದರು.

ಆರ್ಥಿಕ ಪ್ರಕೋಷ್ಠದ ಸಂಚಾಲಕ ಸಮೀರ್ ಕಾಗಲ್ಕರ್, ಪ್ರಕೋಷ್ಠದ ಸಲಹೆಗಾರರಾದ ವಿಶ್ವನಾಥ ಭಟ್, ಸಹ ಸಂಚಾಲಕ ಕರಣ್ ಜವಾಜೆ, ಆಹ್ವಾನಿತ ಪ್ರತಿನಿಧಿಗಳು ಭಾಗವಹಿಸಿದ್ದರು.

(ಮಾಹಿತಿ ಕೃಪೆ ಪ್ರಜಾವಾಣಿ)

Sunday, February 21, 2021


 

 • ಬ್ರಹ್ಮನ ಮಗ ಮರೀಚಿ

• ಮರೀಚಿಯ ಮಗ ಕಾಶ್ಯಪ

• ಕಾಶ್ಯಪರ ಮಗ ಸೂರ್ಯ

• ಸೂರ್ಯನ ಮಗ ಮನು

• ಮನುವಿನ ಮಗ ಇಕ್ಷ್ವಾಕು

• ಇಕ್ಷ್ವಾಕುವಿನ ಮಗ ಕುಕ್ಷಿ

• ಕುಕ್ಷಿಯ ಮಗ ವಿಕುಕ್ಷಿ

• ವಿಕುಕ್ಷಿಯ ಮಗ ಬಾಣ

• ಬಾಣನ ಮಗ ಅನರಣ್ಯ

• ಅನರಣ್ಯನ ಮಗ ಪೃಥು

• ಪೃಥುವಿನ ಮಗ ತ್ರಿಶಂಕು

• ತ್ರಿಶಂಕುವಿನ ಮಗ ದುಂಧುಮಾರ.(ಯುವನಾಶ್ವ)

• ದುಂಧುಮಾರುವಿನ ಮಗ ಮಾಂಧಾತ

• ಮಾಂಧಾತುವಿನ ಮಗ ಸುಸಂಧಿ

• ಸುಸಂಧಿಯ ಮಗ ಧೃವಸಂಧಿ

• ಧೃವಸಂಧಿಯ ಮಗ ಭರತ

• ಭರತನ ಮಗ ಅಶೀತಿ

• అಶೀತಿಯ ಮಗ ಸಗರ

• ಸಗರನ ಮಗ ಅಸಮಂಜಸ*

• ಅಸಮಂಜಸನ ಮಗ ಅಂಶುಮಂತ

• ಅಂಶುಮಂತನ ಮಗ ದಿಲೀಪ

• ದಿಲೀಪನ ಮಗ ಭಗೀರಥ

• ಭಗೀರಥನ ಮಗ ಕಕುತ್ಸು

• ಕಕುತ್ಸುವಿನ ಮಗ ರಘು

• ರಘುವಿನ ಮಗ ಪ್ರವುರ್ಧ

• ಪ್ರವುರ್ಧನ ಮಗ ಶಂಖನು

• ಶಂಖನುವಿನ ಮಗ ಸುದರ್ಶನ

• ಸುದರ್ಶನನ ಮಗ ಅಗ್ನಿವರ್ಣ

• ಅಗ್ನಿವರ್ಣನ ಮಗ ಶೀಘ್ರವೇದ

• ಶೀಘ್ರವೇದನ ಮಗ ಮರು

• ಮರುವಿನ ಮಗ ಪ್ರಶಿಷ್ಯಕ

• ಪ್ರಶಿಷ್ಯಕನ ಮಗ ಅಂಬರೀಶ

• ಅಂಬರೀಶನ ಮಗ ನಹುಶ

• ನಹುಶನ ಮಗ ಯಯಾತಿ

• ಯಯಾತಿಯ ಮಗ ನಾಭಾಗ

• ನಾಭಾಗನ ಮಗ ಅಜನ 

• ಅಜನ ಮಗ ದಶರಥ*


ದಶರಥನ ಮಗ #ರಾಮ...


ರಾಮನಿಗೆ ಲವ-ಕುಶರೀರ್ವರು ಮಕ್ಕಳು..


• ಭರತನಿಗೆ ತಕ್ಷ-ಪುಷ್ಕಲರು..

• ಲಕ್ಷ್ಮಣನಿಗೆ ಅಂಗದ-ಚಂದ್ರಕೇತುಗಳು..

• ಶತ್ರುಘ್ನನಿಗೆ ಸುಬಾಹು-ಶತ್ರುಪಾತಿಗಳು..

• ಇವರಲ್ಲಿ ಹಿರಿಯವನಾದ ಕುಶನು ಕುಮುದ್ವತಿಯನ್ನು ವರಿಸಿ ಕುಶಾವತಿ ಅಥವಾ ಕುಶಸ್ಥಲಿಯಲ್ಲಿ ರಾಜ್ಯವಾಳುತ್ತಾನೆ..

• ಲವನು ಶ್ರಾವಸ್ತಿ ಅಥವಾ ಲವಸ್ಥಲಿಯಲ್ಲಿ, ತಕ್ಷನು ತಕ್ಷಶಿಲೆಯಲ್ಲಿ, ಪುಷ್ಕಲನು ಪುಷ್ಕಲಾವತದಲ್ಲಿ, ಅಂಗದನು ಕಾರುಪಥದಲ್ಲಿ,ಚಂದ್ರಕೇತುವು ಚಂದ್ರಕಾಂತದಲ್ಲಿ, ಸುಬಾಹು ಮಧುರಾನಗರಿಯಲ್ಲಿ, ಶತ್ರುಪಾತಿಯು ವಿದಿಶಾನಗರಿಯಲ್ಲಿ ರಾಜ್ಯವಾಳಿದರು..

• ಕುಶ-ಕುಮುದ್ವತೀ ದಂಪತಿಗಳಿಂದ ಅತಿಥಿ.

• ಅವನಿಂದ ನಿಷಧ

• ನಭ

• ಪುಂಡರೀಕ

• ಕ್ಷೇಮಧನ್ವಾ

• ದೇವಾನೀಕ

• ಅನೀಹ

• ಪಾರಿಯಾತ್ರ

• ಬಲಸ್ಥಲ

• ಇವನಿಗೆ ಸೂರ್ಯನ ಅಂಶವನ್ನು ಪಡೆದ ವಜ್ರನಾಭನು ಮಗನಾಗಿ ಹುಟ್ಟಿದ.

• ಇವನ ಮಗ ಖಗಣ

• ವಿಧೃತಿ

• ಹಿರಣ್ಯನಾಭ. ಇವನು ಮಹರ್ಷಿಜೈಮಿನಿಯ ಶಿಷ್ಯನಾಗಿ ಯೋಗಾಚಾರ್ಯನೆಂದು ಖ್ಯಾತನಾಗಿದ್ದ.ಕೋಸಲದೇಶದ ಯಾಜ್ಞವಲ್ಕ್ಯಮಹರ್ಷಿಯು ಹಿರಣ್ಯನಾಭನಿಂದ ಅಧ್ಯಾತ್ಮಶಿಕ್ಷಣವನ್ನು ಪಡೆದ.

• ಹಿರಣ್ಯನಾಭನ ಮಗ ಪುಷ್ಯ

• ಧ್ರುವಸಂಧಿ

• ಸುದರ್ಶನ

• ಅಗ್ನಿವರ್ಣ

• ಶೀಘ್ರ

• ಮರು.ಈ ಮರುವು ಯೋಗಸಮಾಧಿಯಲ್ಲಿ ಸಿದ್ಧಿಯನ್ನು ಪಡೆದಿದ್ದ.ಈಗಲೂ ಈ ಮರುಮಹಾರಾಜನು ಕಲಾಪವೆಂಬ ಗ್ರಾಮದಲ್ಲಿವಾಸಿಸುತ್ತಿದ್ದಾನೆ.ಕಲಿಯುಗದ ಅಂತ್ಯದಲ್ಲಿ ಸೂರ್ಯವಂಶವು ನಷ್ಟವಾದಾಗ ಇವನು ಪುನರಪಿ ಸೂರ್ಯವಂಶವನ್ನು ಬೆಳೆಸುತ್ತಾನೆ.

• ಮರುವಿನ ಮಗ ಪ್ರಸುಶ್ರುತ

• ಸಂಧಿ

• ಅಮರ್ಷಣ

• ಮಹಸ್ವಂತ

• ವಿಶ್ವಸಾಹ್ವ

• ಪ್ರಸೇನಜಿತ್

• ತಕ್ಷಕ

• ಬೃಹದ್ಬಲ-ಈ ಬೃಹದ್ಬಲನನ್ನು ಕುರುಕ್ಷೇತ್ರಯುದ್ಧದಲ್ಲಿ ಅಭಿಮನ್ಯುವು ಸಂಹರಿಸಿದ.

• ಬೃಹದ್ಬಲನ ಮಗ ಬೃಹದ್ರಣ

• ಉರುಕ್ರಿ

• ವತ್ಸವೃದ್ಧ

• ಪ್ರತಿವ್ಯೋಮ

• ಭಾನು

• ದಿವಾಕ

• ಸಹದೇವ

• ಬೃಹದಶ್ವ

• ಭಾನುಮಂತ

• ಪ್ರತೀಕಾಶ್ವ

• ಸುಪ್ರತೀಕ

• ಮರುದೇವ

• ಸುನಕ್ಷತ್ರ

• ಪುಷ್ಕರ

• ಅಂತರಿಕ್ಷ

• ಸುತಪಸ

• ಅಮಿತ್ರಜಿತ್

• ಬೃಹದ್ರಾಜ

• ಬರ್ಹಿ

• ಕೃತಂಜಯ

• ರಣಂಜಯ

• ಸಂಜಯ

• ಶಾಕ್ಯ

• ಶುದ್ಧೋದ

• ಲಾಂಗಲ

• ಪ್ರಸೇನಜಿತ್

• ಕ್ಷುದ್ರಕ

• ರಣಕ

• ಸುರಥ..

ಈ ಸುರಥನಿಗೆ ಸೂರ್ಯವಂಶದ ಕೊನೆಯ ರಾಜನಾದ ಸುಮಿತ್ರನು ಮಗನಾಗಿ ಹುಟ್ಟಿದನು.

ಇವರೆಲ್ಲರೂ ಇಕ್ಷ್ವಾಕು ವಂಶಸಂಭೂತರು.

ಸುಮಿತ್ರನ ನಂತರ ಕಲಿಯುಗದಲ್ಲಿ ಈ ವಂಶವು ಮರೆಯಾಯಿತು



Ikvaku vanshya (Surya  vanshya) ( Raghu vanshya )


Galalli estondhu 

Maha maha arasaru eddru ramanee hege devaradaa ??



Gottidoru Heli

x