ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಕೋವಿಡ್-19 ದೃಢಪಟ್ಟ 453 ಪ್ರಕರಣಗಳು ದಾಖಲಾಗಿವೆ. ಇದೇ ಅವಧಿಯಲ್ಲಿ 947 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, 7 ಮಂದಿ ಸಾವಿಗೀಡಾಗಿದ್ದಾರೆ.
ಪ್ರಸ್ತುತ 5,576 ಪ್ರಕರಣಗಳು ಸಕ್ರಿಯವಾಗಿವೆ. ಒಟ್ಟು 9,49,636 ಪ್ರಕರಣಗಳ ಪೈಕಿ ಈವರೆಗೂ 9,31,725 ಮಂದಿ ಗುಣಮುಖರಾಗಿದ್ದರೆ, 12,316 ಜನ ಮೃತಪಟ್ಟಿದ್ದಾರೆ.
ಜನವರಿ 16ರಿಂದ ಫೆಬ್ರುವರಿ 25ರ ವರೆಗೂ ಒಟ್ಟು 7,86,404 ಜನರಿಗೆ ಕೋವಿಡ್ ಲಸಿಕೆ ಹಾಕಲಾಗಿದೆ.
ಐಸಿಯುನಲ್ಲಿ 121 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರಿನಲ್ಲಿ 271, ದಕ್ಷಿಣ ಕನ್ನಡದಲ್ಲಿ 24, ಮೈಸೂರಿನಲ್ಲಿ 27, ತುಮಕೂರಿನಲ್ಲಿ 24 ಹೊಸ ಪ್ರಕರಣಗಳು ದಾಖಲಾಗಿವೆ.
(ಮಾಹಿತಿ ಕೃಪೆ ಪ್ರಜಾವಾಣಿ)
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ