ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗದಿಂದ ದಿನಾಂಕ 24-01-2021ರಂದು ನಿಗಧಿ ಪಡಿಸಿದ್ದಂತ ಸಹಾಯಕ, ಪ್ರಥಮ ದರ್ಜೆ ಸಹಾಯಕರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತ ಪ್ರವೇಶ ಪರೀಕ್ಷೆಯನ್ನು ರದ್ದು ಪಡಿಸಲಾಗಿತ್ತು. ಈ ಬಳಿಕ ದಿನಾಂಕ 28-02-2021ರಂದು ಪರೀಕ್ಷೆಯನ್ನು ನಿಗಧಿ ಪಡಿಸಲಾಗಿದೆ. ಇಂತಹ ಪ್ರವೇಶ ಪರೀಕ್ಷೆಯ ಪರಿಷ್ಕೃತ ಪ್ರವೇಶ ಪತ್ರ ಡೌನ್ ಲೋಡ್ ಬಗ್ಗೆ ಕೆಪಿಎಸ್ಸಿಯಿಂದ ಅವಕಾಶ ನೀಡಲಾಗಿದೆ.
ಈ ಕುರಿತಂತೆ ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿ ಜಿ.ಸತ್ಯವತಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಆಯೋಗವು 2019ನೇ ಸಾಲಿನ ರಾಜ್ಯ ಮಟ್ಟದ ವಿವಿಧ ಇಲಾಖೆಗಳಲ್ಲಿ ಮತ್ತು ಕರ್ನಾಟಕ ಭವನ ದೆಹಲಿಯ ಉಳಿಕೆ ಮೂಲ ವೃಂದದ ಮತ್ತು ಹೈದರಾಬಾದ್ ಕರ್ನಾಟಕ ವೃಂದದ ಸಹಾಯಕ, ಪ್ರಥಮ ದರ್ಜೆ ಸಹಾಯಕರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ದಿನಾಂಕ 24-01-2021ರಂದು ನಡೆಸಲು ಉದ್ದೇಶಿಸಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಪ್ರಕಟಿಸಲಾದ ಪ್ರವೇಶ ಪತ್ರಗಳನ್ನು ರದ್ದು ಪಡಿಸಿದೆ ಎಂದು ಈ ಮೂಲಕ ತಿಳಿಸಿದೆ. ಪ್ರಸ್ತುತ ಸದರಿ ಪರೀಕ್ಷೆಯ ಅಭ್ಯರ್ಥಿಗಳಿಗೆ ಮರು ನಿಗದಿಯಾದ ದಿನಾಂಕ 28-02-2021ರ ಸ್ಪರ್ಧಾತ್ಮಕ ಪರೀಕ್ಷೆಗೆ ಪ್ರವೇಶ ಪತ್ರಗಳನ್ನು ಬಿಡುಗಡೆಗೊಳಿಸಲು ಆಯೋಗವು ತೀರ್ಮಾನಿಸಿರುತ್ತದೆ. ಅದರಂತೆ ಅಭ್ಯರ್ಥಿಗಳು ಆಯೋಗದ ವೆಬ್ ಸೈಟ್ http://kpsc.kar.nic.in ನಲ್ಲಿ ಸಹಾಯಕ, ಪ್ರಥಮ ದರ್ಜೆ ಸಹಾಯಕರ ಹುದ್ದೆಗಳ ದಿನಾಂಕ 28-02-2021ಕ್ಕೆ ಪರಿಕ್ಷೃತ ಪ್ರವೇಶ ಪತ್ರಗಳು ಎಂಬ ಶೀರ್ಷಿಕೆಯಡಿಯಲ್ಲಿ ತಮ್ಮ ಯೂಸರ್ ನೇಮ್ ಮತ್ತು ಪಾಸ್ ವರ್ಡ್ ಉಪಯೋಗಿಸಿ, ಪರಿಷ್ಕೃತ ಪ್ರವೇಶ ಪತ್ರವನ್ನು ಡೌನ್ ಲೋಡ್ ಮಾಡಿಕೊಳ್ಳಲು ದಿನಾಂಕ 21-02-2021ರಿಂದ ಅವಕಾಶ ಕಲ್ಪಿಸಲಾಗಿದೆ.
ದಿನಾಂಕ 24-01-2021ರ ಸ್ಪರ್ಧಾತ್ಮಕ ಪರೀಕ್ಷೆಗೆ ಜಾರಿಗೊಳಿಸಲಾಗಿದ್ದ ಪ್ರವೇಶ ಪತ್ರವನ್ನು ಈಗಾಗಲೇ ರದ್ದುಪಡಿಸಲಾಗಿದೆ. ಆದುದರಿಂದ ಯಾವುದೇ ಕಾರಣಕ್ಕೂ ದಿನಾಂಕ 24-01-2021ರ ಪ್ರವೇಶ ಪತ್ರವನ್ನು ಸದರಿ ಸ್ಪರ್ಧಾತ್ಮಕ ಪರೀಕ್ಷೆಗೆ ಪರಿಗಣಿಸಲಾಗುವುದಿಲ್ಲ. ಅಭ್ಯರ್ಥಿಗಳು ಪರಿಷ್ಕೃತ ಪ್ರವೇಶ ಪತ್ರವನ್ನು ಹಾಜರುಪಡಿಸದಿದ್ದಲ್ಲಿ ಮತ್ತು ದಿನಾಂಕ 24-01-2021ರ ಸ್ಪರ್ಧಾತ್ಮಕ ಪರೀಕ್ಷೆಯ ಪ್ರವೇಶ ಪತ್ರವನ್ನು ಹಾಜರುಪಡಿಸಿದ್ದಲ್ಲಿ ಅಂತಹ ಅಭ್ಯರ್ಥಿಗಳಿಗೆ ದಿನಾಂಕ 28-02-2021ರ ಪರೀಕ್ಷೆಗೆ ಹಾಜರಾಗಲು ಅನುಮತಿ ನೀಡಲಾಗುವುದಿಲ್ಲ. ಅಭ್ಯರ್ಥಿಗಳು ಕಡ್ಡಾಯವಾಗಿ ದಿನಾಂಕ 28-02-2021ರ ಸ್ಪರ್ಧಾತ್ಮಕ ಪರೀಕ್ಷೆಗೆ ಜಾರಿಗೊಳಿಸಲಾದ ಪರಿಷ್ಕೃತ ಪ್ರವೇಶ ಪತ್ರಗಳೊಂದಿಗೆ ಮಾತ್ರ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಬೇಕು.
ವರದಿ : ವಸಂತ ಬಿ ಈಶ್ವರಗೆರೆ
(ಮಾಹಿತಿ ಕೃಪೆ ಕನ್ನಡ ನ್ಯೂಸ್ ನೌವ್)
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ