👉
ಗಂಡು :- ವಸಂತ ಮಾಸ ಶೃಂಗಾರ ಮಾಸ ಬಂದಿದೆ
ಒಂಟಿ ಬಾಳು ಸಾಕು ಸಾಕು
ಜೋಡಿಯೊಂದು ಬೇಕೇ ಬೇಕು
ಎಂದಿದೆ ಈ ಯವ್ವನ ನೀನೇನು ಹೇಳುವೆ..
ಹೆಣು :-ವಸಂತ ಮಾಸ ಶೃಂಗಾರ ಮಾಸ ಬಂದಿದೆ
ಜೋಡಿ ಈಗ ಏಕೆ ಬೇಕು
ಕಣ್ಣ ತುಂಬ ಕನಸೆ ಸಾಕು
ಎಂದಿದೆ ಈ ಯವ್ವನ ನೀನೇನು ಮಾಡುವೆ
ಗಂಡು:-ವಸಂತ ಮಾಸ
ಹೆಣು:-ಶೃಂಗಾರ ಮಾಸ
ಹೆಣು ಗಂಡು:-ಬಂದಿದೆ
ಗಂಡು:- ಜೋಡಿ ಬೇಡವೆಂದರೇನು ಬಾಯಲಿ..
ಕಣ್ಣು ಬೇಕೆಂದಿದೆ.
ಹೆಣು:-ಮೋಡಿ ಹಾಕ ಬೇಡ ಬರಿಯ ಮಾತಲ್ಲಿ
ನನಗೆ ಸಾಕಾಗಿದೆ
ಗಂಡು:-ಇಂಥ ಸಮಯ ಸಿಗದು ನಮಗೆ
ಇಂಥ ತರುಣ ಸಿಗನು ನಿನಗೆ
ಹೆಣು:-ಇನ್ನೂ ಚಪಲವೇಕೆ ನಿನಗೆ
ಇದು ನಿನಗೆ ಮುಗಿಲ ಮಲ್ಲಿಗೆ
ಗಂಡು:-ಆ ಮುಗಿಲಿಗೆ ಈ ಕ್ಷಣ ಕೈಯ ಚಾಚುವೆ
ಹೆಣು:-ವಸಂತ ಮಾಸ (ಗ: ಓಹೋ)
ಶೃಂಗಾರ ಮಾಸ (ಗ: ಓಹೋ)
ಬಂದಿದೆ
ಗಂಡು:-ಒಂಟಿ ಬಾಳು ಸಾಕು ಸಾಕು
ಜೋಡಿಯೊಂದು ಬೇಕೇ ಬೇಕು
ಎಂದಿದೆ ಈ ಯವ್ವನ ನೀನೇನು ಹೇಳುವೆ
ಹೆಣು:-ವಸಂತ ಮಾಸ
ಗಂಡು:-ಶೃಂಗಾರ ಮಾಸ
ಹೆಣು ಗಂಡು:-ಬಂದಿದೆ
ಹೆಣು:-ಅಯ್ಯೋ ಆಸೆ ಒಂದೇ ಮೂಲ ದು:ಖಕೇ
ಅರಿಯೋ ಓ ಬಾಲಕ
ಗಂಡು:-ಎಕೇ ಕಾವಿಯನ್ನು ಕೊಡುವ ಹಂಚಿಕೆ..
ಬೇಡ ಬೂಟಾಟಿಕೆ
ಹೆಣು:-ನಿನ್ನ ಪ್ರೇಮ ನೋಡಿ ನನಗೆ
ನಗು ಬರುವ ಹಾಗೆ ಆಯ್ತೆ
ಗಂಡು:-ನಿ ನ್ನ ಮಾತು ಕೇಳಿ ನನಗೆ
ಮನದಾಸೆ ಇಂಗಿ ಹೋಯ್ತೇ
ಹೆಣು:-ಅದು ಇಂಗಲಿ ಒಣಗಲಿ
ನಾನು ಇಲ್ಲವೇ
ಗಂಡು:-ವಸಂತ ಮಾಸ (ಹೆ: ಓಹೋ)
ಶೃಂಗಾರ ಮಾಸ (ಹೆ: ಓಹೋ)
ಬಂದಿದೆ
ಒಂಟಿ ಬಾಳು ಸಾಕು ಸಾಕು
ಜೋಡಿಯೊಂದು ಬೇಕೇ ಬೇಕು
ಎಂದಿದೆ ಈ ಯವ್ವನ ನೀನೇನು ಹೇಳುವೆ
ಹೆಣು:-ವಸಂತ ಮಾಸ (ಗ: ಓಹೋ)
ಶೃಂಗಾರ ಮಾಸ (ಗ: ಓಹೋ)
ಬಂದಿದೆ
ಜೋಡಿ ಈಗ ಏಕೆ ಬೇಕು
ಕಣ್ಣ ತುಂಬ ಕನಸೆ ಸಾಕು
ಎಂದಿದೆ ಈ ಯವ್ವನ ನೀನೇನು ಮಾಡುವೆ
ಹೆಣು ಗಂಡು:-ವಸಂತ ಮಾಸ ಶೃಂಗಾರ ಮಾಸ ಬಂದಿದೆ
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ