ದಾವಣಗೆರೆ: ಮಾಯಕೊಂಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ನಡೆಯಬೇಕಿದ್ದ ಬಾಲ್ಯ ವಿವಾಹವನ್ನು ಅಧಿಕಾರಿಗಳು ತಡೆದಿದ್ದಾರೆ. ಬಾಲಕಿಯನ್ನು ಬಾಲಮಂದಿರಕ್ಕೆ ದಾಖಲಿಸಿದ್ದಾರೆ.
18 ವರ್ಷದ ತುಂಬದ ಬಾಲಕಿಗೆ ಮದುವೆ ನಡೆಯಲಿದೆ ಎಂಬ ಮಾಹಿತಿ ಮಕ್ಕಳ ಸಹಾಯವಾಣಿಗೆ ಬಂದಿತ್ತು. ಅದರ ಆಧಾರದಲ್ಲಿ ವಾಣಿ ಕೊಲ್ಯಾಬ್ ಡಾನ್ ಬಾಸ್ಕೋ ತಂಡದ ಸಂಯೋಜಕ ಟಿ.ಎಂ.ಕೊಟ್ರೇಶ, ಕುರ್ಕಿ ಗ್ರಾಮ ಪಂಚಾಯಿತಿ ಪಿಡಿಒ ಸುರೇಖಾ, ಶಿಶು ಅಭಿವೃದ್ಧಿ ಯೋಜನೆ ಹಿರಿಯ ಮೇಲ್ವಿಚಾರಕಿ ಮೈತ್ರಾದೇವಿ, ಮೇಲ್ವಿಚಾರಕಿ ಕೆ.ಸಿ. ಪ್ರಮೀಳಾ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮಮತಾ, ಮಾಯಕೊಂಡ ಠಾಣೆ ಎಎಸ್‍ಐ ಮೂರ್ತಿ, ಕಾನ್‌ಸ್ಟೆಬಲ್ ಟಿ. ತಿಮ್ಮಪ್ಪ, ಚಾಲಕ ಮಾರುತಿ ಅವರನ್ನು ಒಳಗೊಂಡ ತಂಡ ಭಾನುವಾರ ಭೇಟಿ ನೀಡಿತ್ತು.
ಬಾಲಕಿಯ ಶಾಲಾ ದಾಖಲಾತಿ ಸಂಗ್ರಹಿಸಿ, ಪರಿಶೀಲಿಸಿದಾಗ ವಯಸ್ಸು 16 ವರ್ಷ 11 ತಿಂಗಳಾಗಿರುವುದು ಕಂಡು ಬಂದಿತು. ಬಾಲ್ಯ ವಿವಾಹ ನಿಷೇಧ ಕಾಯ್ದೆ ಪ್ರಕಾರ ಬಾಲ್ಯ ವಿವಾಹ ಮಾಡಿದರೆ 1 ವರ್ಷಕ್ಕೆ ಕಡಿಮೆ ಇಲ್ಲದಂತೆ ಜೈಲು ಶಿಕ್ಷೆ, ₹ 1 ಲಕ್ಷ ದಂಡ ಇರುವುದನ್ನು ತಿಳಿಸಲಾಯಿತು. ವರನ ತಾಯಿಯ ಅನಾರೋಗ್ಯದ ಕಾರಣದಿಂದ ಬೇಗ ಮದುವೆ ಮಾಡಬೇಕಾಗಿದೆ ಎಂದು ವಧುವಿನ ಕಡೆಯವರು ಪಟ್ಟು ಹಿಡಿದರು. ಹಾಗಾಗಿ ಬಾಲಕಿಯನ್ನು ವಶಕ್ಕೆ ಪಡೆದು ದಾವಣಗೆರೆಯ ಬಾಲಕಿಯರ ಬಾಲಮಂದಿರಕ್ಕೆ ದಾಖಲಿಸಿ ಬಾಲ್ಯ ವಿವಾಹವನ್ನು ತಡೆದಿದ್ದಾರೆ.
(ಮಾಹಿತಿ ಕೃಪೆ ಪ್ರಜಾವಾಣಿ )
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ