WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Wednesday, May 5, 2021

ಅಧಿಕಾರಿಗಳನ್ನು ಅಮಾನತು ಮಾಡಿ, ಸಚಿವರು ರಾಜೀನಾಮೆ ನೀಡಲಿ : ಅಭಯಚಂದ್ರ

 

ಹಳೆಯಂಗಡಿ: ಚಾಮರಾಜನಗರದಲ್ಲಿನ ಆಕ್ಸಿಜನ್ ದುರಂತ ಹಾಗೂ ಬೆಂಗಳೂರಿನಲ್ಲಿನ ಬೆಡ್ ಬ್ಲಾಕಿಂಗ್ ಹಗರಣದಲ್ಲಿನ ಅಧಿಕಾರಿಗಳನ್ನು ಹಾಗೂ ಎರಡೂ ಜಿಲ್ಲೆಯ ಜಿಲ್ಲಾಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕು, ಇದಕ್ಕೆ ನೇರ ಹೊಣೆಗಾರರಾಗಿರುವ ಆರೋಗ್ಯ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಆಗ್ರಹಿಸಿದರು.

ಹಳೆಯಂಗಡಿಯ ಮೂಲ್ಕಿ ಬ್ಲಾಕ್ ಕಾಂಗ್ರೆಸ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರಕ್ಕೆ ತನ್ನ ಆಡಳಿತದ ಅಧಿಕಾರಿಗಳನ್ನು ಹತೋಟಿಗೆ ಇಟ್ಟುಕೊಳ್ಳಲು ಸಾಧ್ಯವಾಗುತ್ತಿಲ್ಲ, ಇಷ್ಟೇಲ್ಲಾ ಹಗರಣ ನಡೆದರೂ ಕೇಂದ್ರ ಸರ್ಕಾರ ಮೌನ ವಹಿಸಿದೆ, ಆಡಳಿತ ನಡೆಸುವ ಬಿಜೆಪಿಯ ಇಬ್ಬರು ಶಾಸಕರು, ಒರ್ವ ಸಂಸದರೇ ಈ ಹಗರಣ ಬಯಲಿಗೆಳೆದಿರುವುದು ಸರ್ಕಾರದಲ್ಲಿನ ಇಚ್ಚಾಶಕ್ತಿಯ ಕೊರತೆ ಎದ್ದು ಕಾಣುತ್ತಿದೆ, ಸರ್ಕಾರದ ಮಂತ್ರಿ ಮಂಡಲ ಹಾಗೂ ಆಡಳಿತದ ಕಾರ್ಯದರ್ಶಿಯೇ ಇದಕ್ಕೆ ನೇರ ಹೊಣೆಯಾಗಿದ್ದಾರೆ. ರಾಜಕೀಯವನ್ನು ಸಮಾಜ ಸೇವೆಗೆಂದು ಮೀಸಲಿಡಿ, ಜನರ ಸಂಕಷ್ಟವನ್ನು ಅರಿತುಕೊಳ್ಳಬೇಕು ಎಂದ ಅವರು, ಧರ್ಮಸ್ಥಳದ ಯೋಜನೆಯಿಂದ ಬಂದಂತಹ ನೆರವು ಶ್ಲಾಘನೀಯ ಎಂದರು.

ಕರಾವಳಿಯ ಆಸ್ಪತ್ರೆಯವರು ಪರೋಕ್ಷವಾಗಿ ಸಮಾಜ ಸೇವಕರಾಗಿರುವುದರಿಂದ ಇಲ್ಲಿ ಬೆಂಗಳೂರಿನಂತೆ ಬೆಡ್ ಬ್ಲಾಕಿಂಗ್ ಮಾಡಲು ಸಾಧ್ಯವಿಲ್ಲ, ಅಧಿಕಾರಿಗಳ ಕುಮ್ಮಕ್ಕಿನಿಂದ ನಡೆದರೆ ಅದೂ ಸಹ ಖಂಡನೀಯ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಅಭಯಚಂದ್ರ ಅವರು ಉತ್ತರಿಸಿದರು.

ವೆನ್‌ಲಾಕ್‌ನಲ್ಲಿ ವೆಂಟಿಲೇಟರ್ ಹೆಚ್ಚಿಸಿ : ಮಿಥುನ್ ರೈ

ಮಂಗಳೂರಿನ ಜಿಲ್ಲಾ ವೆನ್‌ಲಾಕ್‌ನಲ್ಲಿ ಈಗಿರುವ ವೆಂಟಿಲೇಟರ್ ಸಾಕಾಗುವುದಿಲ್ಲ, ಇದನ್ನು 100ಕ್ಕೇರಿಸಬೇಕು, ಮುಂದಿನ ಅಪಾಯವನ್ನು ಅರಿತು ಇಂದೇ ಜಾಗೃತೆ ವಹಿಸಿರಿ, ಆಕ್ಸಿಜನ್ ಸಮಸ್ಯೆ ಜಿಲ್ಲೆಗೂ ಕಾಡಲಿದೆ, ಪ್ರತಿದಿನ ಕೋವಿಡ್ ವಿರುದ್ಧ ನಡೆಸುವ ಕಾರ್ಯದ ಬಗ್ಗೆ ಉಸ್ತುವಾರಿ ಸಚಿವರು ಪ್ರತಿಸ್ಪಂದಿಸಬೇಕು, ಹೊರ ರಾಜ್ಯ, ಜಿಲ್ಲೆಯಿಂದ ಜನರು ಕೋವಿಡ್‌ನೊಂದಿಗೆ ಆಗಮಿಸುತ್ತಿದ್ದರೂ ಜಿಲ್ಲಾಡಳಿತ ಎಚ್ಚೆತ್ತಿಲ್ಲ, ಜಿಲ್ಲೆಯ ಎಲ್ಲಾ 7 ಮಂದಿ ಸಚಿವರು, ಸಂಸದವರು ಒಟ್ಟಾಗಿ ರಾಜ್ಯ, ಕೇಂದ್ರಕ್ಕೆ ಒತ್ತಡ ಹಾಕಿ ಸುರಕ್ಷತೆಗಾಗಿ ಈಗಲೇ ಎಚ್ಚೆತ್ತುಕೊಳ್ಳಬೇಕು, ಬಡವರ್ಗದ ಜನರು ನಲುಗುತ್ತಿದ್ದಾರೆ ಅವರನ್ನು ಮೊದಲು ರಕ್ಷಿಸಲು ಪ್ರಯತ್ನಿಸಿ, ಕೋವಿಡ್ ನಿಯಂತ್ರಣಕ್ಕಾಗಿ ಪಕ್ಷಬೇದ ಮರೆತು ಕೆಲಸ ಮಾಡೋಣ ಎಂದರು.

ಕೆಪಿಸಿಸಿ ಜಿಲ್ಲಾ ವಕ್ತಾರ ಎಚ್.ವಸಂತ ಬೆರ್ನಾಡ್, ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಮಟ್ಟು, ಯುವ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಪೂಜಾರ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪದ್ಮಾವತಿ ಶೆಟ್ಟಿ, ಇಂಟಕ್‌ನ ಅಧ್ಯಕ್ಷ ಮೋಹನ್ ಕೊಟ್ಯಾನ್ ಶಿಮಂತೂರು ಮತ್ತಿತರರು ಉಪಸ್ಥಿರಿದ್ದರು.

(ಮಾಹಿತಿ ಕೃಪೆ ಉದಯವಾಣಿ )


No comments:

Post a Comment

ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ