WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Thursday, May 6, 2021

ಮದುವೆ ಸಮಾರಂಭಗಳಿಗೆ ಇ-ಪಾಸ್ ಪಡೆಯುವುದು ಹೇಗೆ?

 

ಧಾರವಾಡ, ಮೇ 06; ಕೋವಿಡ್ ಸೋಂಕು ನಿಯಂತ್ರಣಕ್ಕಾಗಿ ಕರ್ನಾಟಕ ಸರ್ಕಾರ ಲಾಕ್ ಡೌನ್ ಜಾರಿಗೊಳಿಸಿದೆ. ಮೇ 12ರ ಬೆಳಗ್ಗೆ 6 ಗಂಟೆಯ ತನಕ ಲಾಕ್ ಡೌನ್ ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ಮದುವೆಗಳನ್ನು ನಡೆಸಲು ಆಯಾ ಜಿಲ್ಲಾಡಳಿತದ ವತಿಯಿಂದ ಅನುಮತಿ ಪಡೆಯಬೇಕು.

ಧಾರವಾಡ ಜಿಲ್ಲೆಯಲ್ಲಿ ಲಾಕ್ ಡೌನ್ ಅವಧಿಯಲ್ಲಿ ಮದುವೆ ಸಮಾರಂಭಗಳನ್ನು ಮಾಡುವವರು ಜಿಲ್ಲಾಡಳಿತದ ವೆಬ್‍ಸೈಟ್ ಮೂಲಕ ಇ-ಪಾಸ್ ಪಡೆಯಬಹುದು.

ಆನ್‍ಲೈನ್ ಮೂಲಕ ಇ-ಪಾಸ್ ಪಡೆಯಲು ಮದುವೆ ಆಮಂತ್ರಣ ಪತ್ರಿಕೆ, ಪರವಾನಿಗೆ ಪಡೆಯುವವರ ಗುರುತಿನ ಚೀಟಿ (ಆಧಾರ್ ಕಾರ್ಡ್, ಪಾಸ್‍ಪೆÇೀರ್ಟ್, ಡ್ರೈವಿಂಗ್ ಲೈಸನ್ಸ್) ಮುಂತಾದವುಗಳನ್ನು ಅಪ್‍ಲೋಡ್ ಮಾಡಬೇಕು.

ಇ-ಪಾಸ್ ಧಾರವಾಡ ಜಿಲ್ಲೆ ವ್ಯಾಪ್ತಿಯೊಳಗೆ ಮಾತ್ರ ಅನ್ವಯ. ಮದುವೆಗಳಿಗೆ ಕನಿಷ್ಠ 50 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ಮದುವೆಗಳಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಬೇಕು.

ಸಮಾರಂಭದಲ್ಲಿ ಮಾರ್ಗಸೂಚಿಗಳನ್ನು ಪಾಲಿಸದೇ ಇದ್ದಲ್ಲಿ ಪರವಾನಿಗೆ ಪಡೆದ ವ್ಯಕ್ತಿ ಸಂಪೂರ್ಣ ಜವಾಬ್ದಾರ. ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಹಾಯವಾಣಿ (1077) ಸಹ ಆರಂಭಿಸಲಾಗಿದೆ.

ಮದುವೆಗೆ ಅನುಮತಿ ಪಡೆದ ವ್ಯಕ್ತಿಗಳಿಗೆ ಮದುವೆ ಕಾರ್ಯಕ್ರಮದಲ್ಲಿ 50 ಜನರ ಮಿತಿ ನಿರ್ವಹಿಸಲು ಕೈಗಳಿಗೆ ಧರಿಸಲು ಕೈ ಬ್ಯಾಂಡ್‍ಗಳನ್ನು ತಹಶೀಲ್ದಾರ್ ಕಚೇರಿ ಅಥವಾ ಹುಬ್ಬಳ್ಳಿ-ಧಾರವಾಡ ಪಾಲಿಕೆಯ ವಲಯ ಸಹಾಯಕ ಆಯುಕ್ತರ ಕಚೇರಿಯಿಂದ ಪಡೆಯಬಹುದು.

(ಮಾಹಿತಿ ಕೃಪೆ ಓನ್ ಇಂಡಿಯಾ)

No comments:

Post a Comment

ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ