WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Sunday, May 2, 2021

ಐಪಿಎಲ್‌ನಲ್ಲಿ ಅತೀ ವೇಗದ ಅರ್ಧ ಶತಕ ದಾಖಲೆ ಬರೆದ ಪೊಲಾರ್ಡ್


 ನವದೆಹಲಿ: ದೆಹಲಿಯ ಅರುಣ್‌ ಜೇಟ್ಲಿ ಸ್ಟೇಡಿಯಂನಲ್ಲಿ ಮೇ 1ರಂದು ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 27ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ತಂಡ ಮಾಜಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್‌ ವಿರುದ್ಧ 4 ವಿಕೆಟ್‌ ರೋಚಕ ಜಯ ಗಳಿಸಿದೆ. ಐಪಿಎಲ್ ನಲ್ಲಿ ಎಂಐ ತಂಡ 200+ ದೊಡ್ಡ ಮೊತ್ತವನ್ನು ಚೇಸ್ ಮಾಡಿ ಗೆದ್ದ ದಾಖಲೆ ಇದಾಗಿದೆ.  ಇದೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಆಲ್ ರೌಂಡರ್, ವೆಸ್ಟ್‌ ಇಂಡೀಸ್‌ನ ಪ್ರಮುಖ ಆಟಗಾರ ಕೀರನ್ ಪೊಲಾರ್ಡ್ ಅತೀ ವೇಗದ ಅರ್ಧ ಶತಕ ದಾಖಲೆ ನಿರ್ಮಿಸಿದ್ದಾರೆ. ಕೇವಲ 17 ಎಸೆತಗಳಲ್ಲಿ ಪೊಲಾರ್ಡ್ 50 (ಅಸಲಿಗೆ 17 ಎಸೆತಗಳಲ್ಲಿ 53 ರನ್) ರನ್ ಬಾರಿಸಿ ಈ ದಾಖಲೆ ನಿರ್ಮಿಸಿದ್ದಾರೆ.   ಎಂಐ ಪರ 4ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದಿದ್ದ ಕೀರನ್ ಪೊಲಾರ್ಡ್ 34 ಎಸೆತಗಳಲ್ಲಿ ಅಜೇಯ 87 ರನ್ ಸೇರಿಸಿದರು. ಇದರಲ್ಲಿ 6 ಫೋರ್ಸ್, 8 ಸಿಕ್ಸರ್ ಸೇರಿತ್ತು. ಅಲ್ಲದೆ ಐಪಿಎಲ್‌ನಲ್ಲಿ ವೇಗದ ಅರ್ಧಶತಕ ದಾಖಲೆಗಾಗಿಯೂ ಪೊಲಾರ್ಡ್ ಗುರುತಿಸಿಕೊಂಡರು.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಚೆನ್ನೈ ಸೂಪರ್ ಕಿಂಗ್ಸ್‌ನಿಂದ ಉತ್ತಮ ಆರಂಭ ಲಭಿಸಿತು. ಫಾಫ್ ಡು ಪ್ಲೆಸಿಸ್ 50 (28), ಮೊಯೀನ್ ಅಲಿ 58 (36), ಅಂಬಾಟಿ ರಾಯುಡು 72 (27), ರವೀಂದ್ರ ಜಡೇಜಾ 22, ಋತುರಾಜ್ ಗಾಯಕ್ವಾಡ್ 4, ಸುರೇಶ್ ರೈನಾ 2 ರನ್‌ನೊಂದಿಗೆ 20 ಓವರ್‌ಗೆ 4 ವಿಕೆಟ್ ಕಳೆದು 218 ರನ್ ಗಳಿಸಿತ್ತು.

ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್, ಕ್ವಿಂಟನ್ ಡಿ ಕಾಕ್ 38, ರೋಹಿತ್ ಶರ್ಮಾ 35, ಕೃನಾಲ್ ಪಾಂಡ್ಯ 32, ಕೀರನ್ ಪೊಲಾರ್ಡ್ ಅಜೇಯ 87 (34), ಹಾರ್ದಿಕ್ ಪಾಂಡ್ಯ 16 ರನ್‌ನೊಂದಿಗೆ 20 ಓವರ್‌ಗೆ 6 ವಿಕೆಟ್ ಕಳೆದು 219 ರನ್ ಗಳಿಸಿತು.

(ಮಾಹಿತಿ ಕೃಪೆ myKhel ಕನ್ನಡ)

No comments:

Post a Comment

ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ