ದಾವಣಗೆರೆ: ಸೈನಿಕ ದೇಶವನ್ನು ಕಾಯುವ ದೇವರು. ತನ್ನ ಆಸೆ-ಆಕಾಂಶೆಗಳನ್ನು ಬದಿಗೊತ್ತಿ ದೇಶಕ್ಕಾಗಿ ತನ್ನ ಪ್ರಾಣವನ್ನು ಮುಡಿಪಾಗಿಟ್ಟು ಉಗ್ರರ ಜೊತೆ ಹೋರಾಟ ಮಾಡುವವರು. ಯಾವುದಕ್ಕೂ ಎದೆಗುಂದದೆ ಭಯೋತ್ಪಾದಕರ ವಿರುದ್ಧ ಸೆಣಸಾಡುವವರು. ಅದರಂತೆ ಜಿಲ್ಲೆಯ ವೀರಪ್ಪ ಎಂಬ ನಿವೃತ್ತ ಸೈನಿಕ ದೇಶ ಸೇವೆಗೆ 22 ವರ್ಷ ತನ್ನ ಬದುಕನ್ನು ಮುಡುಪಾಗಿಟ್ಟಿದ್ದರು.
ಆದರೆ ನಿವೃತ್ತ ಸೈನಿಕನ ಸ್ಥಿತಿಯನ್ನು ನೋಡಿದರೆ ಕರುಳು ಕಿತ್ತು ಬಂದಂತಾಗುತ್ತದೆ. ಅವರ ಈ ಸ್ಥಿತಿಗೆ ಕಾರಣ ಗ್ರಾಮಾಂತರ ಪೊಲೀಸ್ ಠಾಣೆಯ ನಾಲ್ವರು ಪೊಲೀಸ್ ಕಾನ್ ಸ್ಟೇಬಲ್ಗಳು ಎನ್ನುವುದು ನಿವೃತ್ತ ಸೈನಿಕನ ಆರೋಪ. 1996 ರಿಂದ 2018ರವರೆಗೆ ಬರೋಬ್ಬರಿ 22 ವರ್ಷ ಸೇವೆ ಸಲ್ಲಿಸಿ ನಿವೃತ್ತಿಯಾದ ಬಳಿಕ ದಾವಣಗೆರೆಯಲ್ಲಿ ವೀರಪ್ಪ ವಾಸ ಮಾಡುತ್ತಿದ್ದರು.
ಕಳೆದ ಸೋಮವಾರ ಆನಗೋಡು ಬಳಿ ಪತ್ನಿ ಜೊತೆ ಬೈಕ್ನಲ್ಲಿ ಬರುವಾಗ ಗ್ರಾಮಾಂತರ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ನಿಂಗನಗೌಡ ನೆಗಳೂರು ಮತ್ತು ನಾಲ್ವರು ಕಾನ್ ಸ್ಟೇಬಲ್ಗಳು ಗಸ್ತಿನಲ್ಲಿದ್ದರು.
ನಿವೃತ್ತ ಸೈನಿಕ ಎಂದರೂ ಕೇಳದೆ ಮನಸ್ಸಿಗೆ ಬಂದಂತೆ ಥಳಿಸಿದ್ದಾರೆಂದು ಹಲ್ಲೆಗೊಳಗಾದ ನಿವೃತ್ತ ಸೈನಿಕ ಬಿ.ಎಸ್.ವೀರಪ್ಪ ಆರೋಪಿಸಿದ್ದಾರೆ. ದಾವಣಗೆರೆಯ ಚಿಗಟೇರಿ ಜಿಲ್ಲಾಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದಿರುವ ವೀರಪ್ಪ ಅವರ ಬಲಗೈ ಭುಜ, ಕೈ ಹಾಗೂ ಎಡಕಾಲಿನ ಹೆಬ್ಬೆರಳು ಊದಿಕೊಂಡಿದೆ. ಕೈ ದಪ್ಪಗಾಗುವಂತೆ ಥಳಿಸಿದ್ದು, ಆರಾಮಾಗಲು ಇನ್ನು ತಿಂಗಳುಗಳು ಬೇಕಾಗಬಹುದು.
(ಮಾಹಿತಿ ಕೃಪೆ All Indian News 24x7)
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ