WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Wednesday, April 28, 2021

ರಾಜ್ಯದಲ್ಲಿ 14 ದಿನ ಕೊರೊನಾ ಕರ್ಪ್ಯೂ : ಈ ನಿಯಮಗಳ ಪಾಲನೆ ಕಡ್ಡಾಯ

 

ಡಿಜಿಟಲ್ ಡೆಸ್ಕ್ : ರಾಜ್ಯದಲ್ಲಿ ಕೊರೋನಾ ಸೋಂಕಿನ 2ನೇ ಅಲೆಯ ಚೈನ್ ಲಿಂಕ್ ಬ್ರೇಕ್ ಗಾಗಿ 14 ದಿನ ಕೊರೋನಾ ಕರ್ಪ್ಯೂ ಜಾರಿಗೊಳಿಸಲಾಗಿದ್ದು, ಮಂಗಳವಾರ ರಾತ್ರಿಯಿಂದಲೇ ಜಾರಿಗೆ ಬರಲಿದೆ. ಅಗತ್ಯವಸ್ತು ಸೇವೆ ಹೊರತುಪಡಿಸಿ, ಯಾವುದೇ ಸೇವೆ ಲಭ್ಯವಾಗೋದಿಲ್ಲ. ಈ ಮೂಲಕ ಕೊರೋನಾ 2ನೇ ಅಲೆಯ ಅಬ್ಬರಕ್ಕೆ ಬ್ರೇಕ್ ಹಾಕೋದಕ್ಕೆ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ.

ಈ ಹಿನ್ನೆಲೆ ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಕೆಲವು ಸೂಚನೆಗಳನ್ನು ನೀಡಿದರು. ಮಾರ್ಗಸೂಚಿ ಪ್ರಕಾರ,ಬೆಂಗಳೂರಿನಲ್ಲಿ ಬೆಳಗ್ಗೆ 6 ಗಂಟೆಯಿಂದ ಹತ್ತು ಗಂಟೆವರೆಗೂ ಅಗತ್ಯ ವಸ್ತುಗಳು ಖರೀದಿಗೆ ಅವಕಾಶ ನೀಡಲಾಗಿದೆ. ಹೋಮ್ ಡಿಲಿವರಿಗೆ ಅವಕಾಶ, ಇ ಕಾಮರ್ಸ್ ಗೆ ಅವಕಾಶ ಕಲ್ಪಿಸಲಾಗಿದೆ. ಹೊರ ರಾಜ್ಯಗಳಿಗೆ ಪ್ರಯಾಣಿಸುವ ಪ್ರಯಾಣಿಕರು ಟ್ರಾವೆಲ್ ಟಿಕೆಟ್ ತೋರಿಸಿ, ಓಡಾಡಲು ಅವಕಾಶ ನೀಡಲಾಗಿದೆ. ಬಾರ್, ಪಬ್​ಗಳಲ್ಲಿ ಮದ್ಯ ಪಾರ್ಸಲ್ ಗೆ ಅವಕಾಶ ಇದೆ. ಹತ್ತು ಗಂಟೆಯ ಬಳಿಕ ಯಾವುದೇ ಅಂಗಡಿ ಓಪನ್ ಇರಲ್ಲ ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂಥ್ ಅವರು ತಿಳಿಸಿದರು.

ಏರ್​ಪೋರ್ಟ್​ಗೆ ಹೋಗುವರಿಗೆ ಅವಕಾಶ ನೀಡಲಾಗಿದೆ. ಅನುಮತಿ ಇರುವ ಕಂಪನಿ ಉದ್ಯೋಗಿಗಳ ಬಳಿ ಐಡಿ ಕಾರ್ಡ್ ಕಡ್ಡಾಯ. ಒಂದು ವೇಳೆ ದುರುಪಯೋಗ ಮಾಡಿದರೆ ಶಿಸ್ತುಕ್ರಮ ಜರುಗಿಸಲಾಗುವುದು. ಮದುವೆ ಸಮಾರಂಭದಲ್ಲಿ ಐವತ್ತು ಮಂದಿ ಭಾಗವಹಿಸಲು ಅವಕಾಶ ನೀಡಲಾಗಿದೆ. ಹಾಗೆಯೇ ರಾತ್ರಿ ಪಾಳಿಯ ಐಟಿ ಉದ್ಯೋಗಿಗಳ ಐಡಿ ಕಾರ್ಡ್​ಅನ್ನು ಕಡ್ಡಾಯವಾಗಿ ಹೊಂದಿರಬೇಕು ಎಂದು ಹೇಳಿದರು.

ರೈತರಿಗೆ ಯಾವುದೇ ಸಮಸ್ಯೆ ಇಲ್ಲ. ಗೂಡ್ಸ್ ವಾಹನಗಳಿಗೆ ಅವಕಾಶ ಇದೆ. ಹೂ- ಹಣ್ಣು, ತರಕಾರಿ ಮಾರುಕಟ್ಟೆಗೆ ತರಲು ಸಮಸ್ಯೆ ಇಲ್ಲ. ಮದುವೆಗೆ ಬಿಬಿಎಂಪಿಯಿಂದ ಅನುಮತಿ ಪಡೆಯಬೇಕು. ಒಂದು ವೇಳೆ ಕಾನೂನು ಉಲ್ಲಂಘಿಸಿದ್ರೆ ಮುಲಾಜಿಲ್ಲದೇ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

(ಮಾಹಿತಿ ಕೃಪೆ Kannada News Now )

No comments:

Post a Comment

ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ