ಬೆಂಗಳೂರು : ನಗರದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳ ಸಂಖ್ಯೆ ಏರು ಗತಿಯಲ್ಲಿ ಸಾಗುತ್ತಿದೆ. ಸೋಂಕಿನ ಪ್ರಕರಣಗಳ ಸಂಖ್ಯೆ ಜೊತೆಗೆ ಸಾವಿನ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಸೋಂಕಿತರಿಗೆ ಚಿಕಿತ್ಸೆಗೆ ಬೆಡ್ ಸಿಗೋದು ಒಂದು ಸಮಸ್ಯೆ ಆದ್ರೇ.. ಸಾವನ್ನಪ್ಪಿದವರ ಅಂತ್ಯ ಸಂಸ್ಕಾರಕ್ಕೆ ಚಿತಾಗಾರದ ಮುಂದೆ ಸಾಲು ಗಟ್ಟಿರೋ ಅಂಬುಲೆನ್ಸ್ ಕೂಡ ಕಂಡು ಬರ್ತಾ ಇದೆ. ಇದೇ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಸತ್ತವರಿಗೆ ಮಾತ್ರವೇ ಚಿತಾಗಾರದಲ್ಲಿ ಅಂತ್ಯ ಸಂಸ್ಕಾರ, ಮನೆಯಲ್ಲಿ ಸತ್ತವರಿಗೆ ಇಲ್ಲ ಎಂಬುದಾಗಿ ಬಿಬಿಎಂಪಿ ಸಿಬ್ಬಂದಿಗಳು ಮನೆಯಲ್ಲಿ ಸತ್ತಂತ ಕೊರೋನಾ ಸೋಂಕಿತರ ಅಂತ್ಯ ಸಂಸ್ಕಾರಕ್ಕೆ ತಿರಸ್ಕರಿಸಿರುವಂತ ಘಟನೆ ಕೂಡ ವರದಿಯಾಗಿದೆ.
ಬೆಂಗಳೂರಿನಲ್ಲಿ ಕೊರೋನಾ ಪಾಸಿಟಿವ್ ಎಂದು ದೃಢಪಟ್ಟ ನಂತ್ರ, ಚಿಕಿತ್ಸೆಗಾಗಿ ಅನೇಕ ಆಸ್ಪತ್ರೆ ಅಲೆದ್ರೂ, ಬೆಡ್ ಸಿಕ್ಕಿರಲಿಲ್ಲ. ಹೀಗಾಗಿ ಕುಟುಂಬಸ್ಥರು ಮನೆಗೆ ಕರೆತಂದು, ಮನೆಯಲ್ಲಿಯೇ ಚಿಕಿತ್ಸೆ ಕೊಡಿಸ್ತಾ ಇದ್ದರು. ಆದ್ರೇ.. ಆತ ಚಿಕಿತ್ಸೆ ಫಲಕಾರಿಯಾಗದೇ ಇತ್ತೀಚೆಗೆ ಮೃತಪಟ್ಟಿದ್ದರು.
ಹೀಗೆ ಮಾಗಡಿ ರಸ್ತೆಯಲ್ಲಿ ಮನೆಯಲ್ಲೇ ಕೊರೋನಾ ಸೋಂಕಿನಿಂದ ಸಾವನ್ನಪ್ಪಿದ್ದಂತ ವ್ಯಕ್ತಿಯನ್ನು ಅಂತ್ಯ ಸಂಸ್ಕಾರಕ್ಕಾಗಿ ಬೆಂಗಳೂರಿನ ಚಿತಾಗಾರಕ್ಕೆ ಕುಟುಂಬಸ್ಥರು ತೆಗೆದುಕೊಂಡು ಹೋಗಿದ್ದರು. ವಿಚಿತ್ರವೆಂದರೇ, ಸೋಂಕಿತರು ಆಸ್ಪತ್ರೆಯಲ್ಲೇ ಸತ್ತಿದ್ದರೆ ಮಾತ್ರವೇ ಅಂತ್ಯ ಸಂಸ್ಕಾರಕ್ಕೆ ಅವಕಾಶ ಎಂದು ಬಿಬಿಎಂಪಿ ಸಿಬ್ಬಂದಿ ಅಂತ್ಯಸಂಸ್ಕಾರಕ್ಕೆ ಅವಕಾಶ ಮಾಡಿಕೊಟ್ಟಿಲ್ಲ ಎಂಬುದಾಗಿ ಮೃತ ಸೋಂಕಿತನ ಪತ್ನಿ ರೇಣುಕಾ ಆರೋಪಿಸಿದ್ದಾರೆ.
ಹಾಗಾದ್ರೇ.. ಬಿಬಿಎಂಪಿ ವ್ಯಾಪ್ತಿಯ ಚಿತಾಗಾರಗಳಲ್ಲಿ ಕೊರೋನಾ ಸೋಂಕಿತರಾದಂತವರು ಮನೆಯಲ್ಲಿ ಸತ್ತರೆ ಅಂತ್ಯಸಂಸ್ಕಾರಕ್ಕೆ ಅವಕಾಶ ಇಲ್ವಾ.? ಆಸ್ಪತ್ರೆಯಲ್ಲಿ ಸತ್ತ ಸೋಂಕಿತರಿಗೆ ಮಾತ್ರವೇ ಅಂತ್ಯ ಸಂಸ್ಕಾರಕ್ಕೆ ಅವಕಾಶವೇ.? ಇದ್ಯಾವ ನ್ಯಾಯ, ಇದ್ಯಾವ ಆದೇಶ ಸ್ವಾಮಿ ಎಂಬುದಾಗಿ ನಗರದ ಜನರು ಬಿಬಿಎಂಪಿ ವಿರುದ್ಧ ಕಿಡಿಕಾರಿದ್ದಾರೆ.
(ಮಾಹಿತಿ ಕೃಪೆ Kannada News Now )
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ