WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Friday, April 30, 2021

ಭಾರತೀಯ ಚಿತ್ರರಂಗದ ಪಿತಾಮಹರ ಹುಟ್ಟು ಹಬ್ಬ : ದಾದಾ ಸಾಹೇಬ್ ಫಾಲ್ಕೆಯ ಆ ದಿನಗಳು!

 

ಇಂದು ಭಾರತೀಯ ಚಿತ್ರರಂಗದ ಪಿತಾಮಹ ದಾದಾ ಸಾಹೇಬ್ ಫಾಲ್ಕೆಯವರ ಹುಟ್ಟು ಹಬ್ಬ (ಏಪ್ರಿಲ್ 30. 1870). ಇವರ ಪೂರ್ಣ ಹೆಸರು ದುಂಡಿರಾಜ್ ಗೋವಿಂದ ಫಾಲ್ಕೆ. ಫಾಲ್ಕೆಯವರು ನಿರ್ಮಾಪಕರಾಗಿ, ನಿರ್ದೇಶದಕರಾಗಿ, ಚಿತ್ರಕಥೆಗಾರರಾಗಿ ಭಾರತೀಯ ಚಿತ್ರರಂಗವನ್ನು ಹುಟ್ಟುಹಾಕಿದ್ದಾರೆ. ಇವರ ಮೊಟ್ಟ ಮೊದಲ ಸಿನಿಮಾ ರಾಜ ಹರಿಶ್ಚಂದ್ರ (1913). ಈ ಸಿನಿಮಾವನ್ನು ಭಾರತದ ಮೊಟ್ಟ ಮೊದಲ ಪೂರ್ಣ ಪ್ರಮಾಣದ ಚಿತ್ರ ಎಂದು ಕರೆಯಲಾಗುತ್ತದೆ. ಇನ್ನು ದಾದಾ ಸಾಹೇಬರು ಸುಮಾರು 95 ಸಿನಿಮಾಗಳು ಮತ್ತು 27 ಕಿರುಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ. ಈ ಎಲ್ಲಾ ಕಾರಣಕ್ಕೆ ಇವರ ಹೆಸರಲ್ಲಿ ಭಾರತೀಯ ಚಿತ್ರರಂಗದಲ್ಲಿ ಜೀವಮಾನ ಸಾಧನೆ ಮಾಡಿದ ಸಿನಿಮಾ ರಂಗದ ಕಲಾವಿಧರಿಗೆ ಪ್ರಶಸ್ತಿಯನ್ನು ನೀಡಲಾಗುತ್ತದೆ. ಅದೇ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ. ಕನ್ನಡದ ಸಿನಿಮಾ ರಂಗದಿಂದ ಡಾ.ರಾಜ್ ಕುಮಾರ್ ಈ ಪ್ರಶಸ್ತಿಯನ್ನು 1995ರಲ್ಲಿ ಪಡೆದಿದ್ದಾರೆ.

ಹಾಗಾದ್ರೆ ದಾದಾ ಸಾಹೇಬರ ಬಗ್ಗೆ ಅಪರೂಪದ ಒಂದಷ್ಟು ಮಾಹಿತಿಗಳನ್ನು ಈ ಲೇಖನದಲ್ಲಿ ತಿಳಿಯೋಣ

* ಇವರು ತಮ್ಮ 15 ನೇ ವಯಸ್ಸಿನಲ್ಲಿ ಮುಂಬೈನ ಜೆ.ಜೆ ಸ್ಕೂಲ್ ಆಫ್ ಆರ್ಟ್ಗೆ ಸೇರಿದರು, ಅಲ್ಲಿ ಶಿಲ್ಪಕಲೆ, ಚಿತ್ರಕಲೆ, ಫೋಟೋಗ್ರಫಿ ಬಗ್ಗೆ ಅಧ್ಯಯನ ಮಾಡಿದರು.

* ಬರೋಡಾದ ಮಹಾರಾಜ ಸಯಾಜಿರಾವ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ್ದಾರೆ. ಅಲ್ಲಿ ಆಯಿಲ್ ಪೇಂಟಿಂಗ್ ಮತ್ತು ಜಲವರ್ಣ(watercolour painting) ಚಿತ್ರಕಲೆಯಲ್ಲಿ ಕೋರ್ಸ್ ಮುಗಿಸಿದ್ದಾರೆ.

* 1890 ರಲ್ಲಿ ಗುಜರಾತ್‌ ನ ವಡೋದರಾಕ್ಕೆ ತೆರಳಿ ಫೋಟೋಗ್ರಾಫರ್ ಆಗಿ ಕೆಲಸ ಮಾಡಿದರು.

* ಬುಬೊನಿಕ್ ಪ್ಲೇಗ್‌ ಕಾಯಿಲೆಯಿಂದ ತನ್ನ ಮೊದಲ ಹೆಂಡತಿ ಮತ್ತು ಮಗುವನ್ನು ಕಳೆದುಕೊಳ್ಳುತ್ತಾರೆ. ಇದಾದ ಮೇಲೆ ಫೋಟೋಗ್ರಫಿ ಕೆಲಸವನ್ನು ತೊರೆಯುತ್ತಾರೆ.

* ಫಾಲ್ಕೆ ಭಾರತದ ಪುರಾತತ್ವ ಸಮೀಕ್ಷೆ ಇಲಾಖೆಯಲ್ಲಿ ಕರಕುಶಲ ಕೆಲಸಕ್ಕೆ ಸೇರುತ್ತಾರೆ. ಆದರೆ ಮಹಾರಾಷ್ಟ್ರದಲ್ಲಿ ತನ್ನದೇ ಆದ ಮುದ್ರಣಾಲಯವನ್ನು ಪ್ರಾರಂಭಿಸುವ ಕಾರಣದಿಂದ ಆ ಕೆಲಸಕ್ಕೆ ರಾಜೀನಾಮೆ ನೀಡಿದರು.

*ಭಾರತೀಯ ವರ್ಣಚಿತ್ರಕಾರ ರಾಜಾ ರವಿವರ್ಮ ಅವರೊಂದಿಗೆ ಕೆಲಸ ಮಾಡಿದ ನಂತರ, ದಾದಾಸಾಹೇಬ್ ತಮ್ಮ ಮೊದಲ ವಿದೇಶ ಪ್ರವಾಸವನ್ನು ಕೈಗೊಂಡು ಜರ್ಮನಿಯಲ್ಲಿ ಕಾರ್ಲ್ ಹರ್ಟ್ಜ್ ಎಂಬ ಜಾದೂಗಾರನೊಂದಿಗೆ ಕೆಲಸ ಮಾಡಿದರು.

*ಫರ್ಡಿನ್ಯಾಂಡ್ ಜೆಕ್ಕಾ ಅವರ ಮೂಕ ಚಿತ್ರ ‘ದಿ ಲೈಫ್ ಆಫ್ ಕ್ರೈಸ್ಟ್’ ನೋಡಿದ ನಂತರ ದಾದಾಸಾಹೇಬರ ಜೀವನ ಸಿನಿಮಾ ರಂಗದ ಕಡೆ ತಿರುಗಿತು. ಇದರ ನಂತರವೇ ದಾದಾಸಾಹೇಬ್ ತಮ್ಮ ಮೊದಲ ಚಿತ್ರ ಮಾಡಲು ನಿರ್ಧರಿಸಿದರು.

*ದಾದಾಸಾಹೇಬ್ ತಮ್ಮ ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸಲು ಕೆಲವು ಸುಂದರ ಮುಖಗಳನ್ನು ಹುಡುಕುತ್ತಿದ್ದರು. ಅಲ್ಲದೆ ಅದಕ್ಕಾಗಿ ಜಾಹೀರಾತುಗಳನ್ನು ನೀಡಿದರು. ಇದಾದ ಮೇಲೆ ಎಂಥೆಂತವರೋ ನಟಿಸಲು ಅವಕಾಶ ಕೊಡಿ ಎಂದು ಬಂದಾಗ ಸುಂದರವಾಗಿರುವವರಿಗೆ ಮಾತ್ರ ಎಂದು ಜಾಹಿರಾತಿನಲ್ಲಿ ಬದಲಾವಣೆ ಮಾಡಿದರು.

* ದಾದಾಸಾಹೇಬ್ ತಮ್ಮ ಮೊದಲ ಸಿನಿಮಾ ರಾಜ ಹರಿಶ್ಚಂದ್ರದಲ್ಲಿ ತಾವೇ ಹರಿಶ್ಚಂದ್ರನ ಪತ್ರಕ್ಕೆ ಬಣ್ಣ ಹಚ್ಚಿದರು. ಇಷ್ಟೆ ಅಲ್ಲದೆ ಈ ಸಿನಿಮಾದಲ್ಲಿ

ಹರಿಶ್ಚಂದ್ರನ ಮಗನಪಾತ್ರಕ್ಕೆ ತಮ್ಮ ಮಗನನ್ನೇ ಬಳಸಿಕೊಂಡರು. ಹಾಗೂ ಚಿತ್ರದ ಕಾಸ್ಟ್ಯೂಮ್ ಡಿಸೈನರ್ ಕಾರ್ಯವನ್ನು ಫಾಲ್ಕೆಯವರ ಪತ್ನಿಯೇ ನಿರ್ವಹಿಸಿದರು. ಇಷ್ಟೆ ಅಲ್ಲದೆ ಚಿತ್ರದ ನಿರ್ದೇಶನ, ವಿತರಣೆ, ಸೆಟ್-ಬಿಲ್ಡಿಂಗ್ ಎಲ್ಲವನ್ನೂ ಫಾಲ್ಕೆಯವರೇ ನಿರ್ವಹಿಸಿದ್ದಾರೆ.

* ದಾದಾಸಾಹೇಬ್ ಸಿನಿಮಾ ಕಾಲದಲ್ಲಿ ಮಹಿಳಾ ಪಾತ್ರದ ಕೊರತೆ ತುಂಬಾ ಇತ್ತು. ಇದಕ್ಕಾಗಿಯೇ ಪುರುಷರನ್ನೇ ಮಹಿಳಾ ಪಾತ್ರಕ್ಕೆ ಬಳಸುತ್ತಿದ್ದರು. ಈ ಕಾರಣದಿಂದ 15 ಸಾವಿರ ರೂಪಾಯಿಗಳನ್ನು ಖರ್ಚು ಮಾಡಿದ್ದರಂತೆ.

(ಮಾಹಿತಿ ಕೃಪೆ ಉದಯವಾಣಿ )

No comments:

Post a Comment

ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ