ಮೃತ ದೇಹವನ್ನ ಸಾಗಿಸಲು ಯಾವುದೇ ಆಂಬುಲೆನ್ಸ್ ಹಾಗೂ ಆಟೋ ಸಿಗದ ಕಾರಣ ವ್ಯಕ್ತಿಯೊಬ್ಬರು ತಮ್ಮ ಕುಟುಂಬಸ್ಥರ ಸಹಾಯದಿಂದ ತಾಯಿಯ ಶವವನ್ನ ಬೈಕ್ನಲ್ಲಿ ಸಾಗಿಸಿದ್ದಾರೆ. ಆಂಧ್ರಪ್ರದೇಶದ ಶ್ರೀಕಾಕುಲಂನಲ್ಲಿ ಈ ದಾರುಣ ಘಟನೆ ನಡೆದಿದೆ.
ಕುಗ್ರಾಮವೊಂದರ ನಿವಾಸಿಯಾಗಿದ್ದ 50 ವರ್ಷದ ಜಿ. ಚೆಂಚು ಅಸ್ವಸ್ಥರಾಗಿದ್ದರು. ಕೂಡಲೇ ಆಕೆಯ ಪುತ್ರ ನರೇಂದ್ರ ಹಾಗೂ ಅಳಿಯ ರಮೇಶ್ ನೀಲಾಮಣಿ ದುರ್ಗಾ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಇಲ್ಲಿ ಚೆಂಚುಗೆ ಸಿಟಿ ಸ್ಕ್ಯಾನ್ಗಾಗಿ ಡಯಾಗ್ನೊಸ್ಟಿಕ್ ಕೇಂದ್ರಕ್ಕೆ ಹೋಗುವಂತೆ ಸೂಚನೆ ನೀಡಲಾಯ್ತು. ಶ್ರೀ ಕೃಷ್ಣ ಡಯಾಗ್ನೊಸ್ಟಿಕ್ ಕೇಂದ್ರದಲ್ಲಿ ಈಕೆಗೆ ಸ್ಕ್ಯಾನಿಂಗ್ ಮಾಡಲಾಯ್ತು. ಈಕೆಯ ಸ್ಕ್ಯಾನಿಂಗ್ ರಿಪೋರ್ಟ್ ಬರೋದಕ್ಕೂ ಮುನ್ನವೇ ಆಕೆ ಕೊನೆಯುಸಿರೆಳೆದಿದ್ದಾಳೆ. ಈ ಘಟನೆ ಬಳಿಕ ಡಾ. ಮೋಹನ್ ಬಾಬು ಎಂಬವರು ಚೆಂಚು ಕೋವಿಡ್ ಲಕ್ಷಣವನ್ನ ಹೊಂದಿದ್ದರು ಎಂದು ಹೇಳಿದ್ದಾರೆ. ಆಕೆಯ ಶವ ಸಾಗಿಸಲು ಯಾರೂ ಮುಂದೆ ಬಾರದ ಕಾರಣ ಪುತ್ರ ಹಾಗೂ ಅಳಿಯ ಬೈಕ್ನಲ್ಲಿಯೇ ಶವವನ್ನ ಸಾಗಿಸಿದ್ದಾರೆ. ಈಕೆಯ ಅಂತ್ಯಕ್ರಿಯೆಯನ್ನ ಕೋವಿಡ್ ಮಾರ್ಗಸೂಚಿಯಂತೆ ನೆರವೇರಿಸಲಾಗಿದೆ. ಚೆಂಚು ಶವವನ್ನ ಬೈಕ್ನಲ್ಲಿ ಸಾಗಿಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
(ಮಾಹಿತಿ ಕೃಪೆ ಕನ್ನಡ ದುನಿಯಾ)
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ