WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Wednesday, April 28, 2021

ಸಾರಿಗೆ ಸಂಚಾರ ಇಲ್ಲ.! ಹಾಗಾದ್ರೇ 'ಅಗತ್ಯ ಸೇವೆ ಇಲಾಖೆ ನೌಕರ'ರು ಕೆಲಸಕ್ಕೆ ಬರೋದು ಹೇಗೆ.?

 

ಕೆಎನ್‌ಎನ್ ಡಿಜಿಟಲ್ ಡೆಸ್ಕ್ : ನಿನ್ನೆ ರಾತ್ರಿ 9 ಗಂಟೆಯಿಂದ ರಾಜ್ಯಾಧ್ಯಂತ ಕೊರೋನಾ ಕರ್ಪ್ಯೂ ಜಾರಿಯಾಗಲಿದೆ. ರಾಜ್ಯ ಸರ್ಕಾರ ಕೊರೋನಾ ಸೋಂಕಿನ ನಿಯಂತ್ರಣಕ್ಕೆ ಈ ಕ್ರಮ ಕೈಗೊಂಡಿದೆ. ಕೊರೋನಾ ಕರ್ಪ್ಯೂ ಸಂದರ್ಭದಲ್ಲಿ ಅಗತ್ಯ ಸೇವೆ ಒದಗಿಸುವಂತ ಇಲಾಖೆ ಹೊರತಾಗಿ, ಎಲ್ಲವೂ ಬಂದು. ಕೆ ಎಸ್ ಆರ್ ಟಿ ಸಿ ಬಸ್ ಇಲ್ಲ. ಬಿಎಂಟಿಸಿ ಬಸ್ ಇಲ್ಲ. ಮೆಟ್ರೋ 14 ದಿನ ಬಂದ್. ಟ್ಯಾಕ್ಸಿ ಸೇವೆ ಏರ್ಪೋರ್ಟ್ ನಿಂದ, ರೈಲಿನಿಂದ ಬರೋ ಪ್ರಯಾಣಿಕರಿಗೆ ಮಾತ್ರ. ಇದರ ಮಧ್ಯೆ ಅಗತ್ಯ ಸೇವೆ ಇಲಾಖೆಯ ನೌಕರರು ಕರ್ತವ್ಯಕ್ಕೆ ಹಾಜರಾಗೋದು ಕಡ್ಡಾಯ. ಹಾಗಾದ್ರೇ.. ಯಾವುದೇ ಸಂಚಾರ ವ್ಯವಸ್ಥೆ ಇಲ್ಲದೇ ಅಗತ್ಯ ಸೇವೆ ಇಲಾಖೆ ನೌಕರರು ಬರೋದೇಗೆ ಸ್ವಾಮಿ.?

ಇದು ರಾಜ್ಯ ಸರ್ಕಾರಕ್ಕೆ, ಅಗತ್ಯ ಸೇವೆ ಒದಗಿಸುವಂತ ಇಲಾಖೆಯ ಪರವಾಗಿ ನಮ್ಮ ' ಕನ್ನಡ ನ್ಯೂಸ್ ನೌ' ಕಾಳಜಿಯ ಪ್ರಶ್ನೆಯಾಗಿದೆ. ನಿನ್ನೆ ರಾತ್ರಿ 9 ಗಂಟೆಯಿಂದ ಮೇ.12ರವರೆಗೆ ರಾಜ್ಯದಲ್ಲಿ ಕೊರೋನಾ ಕಂಟ್ರೋಲ್ ಗಾಗಿ 14 ದಿನ ಕೊರೋನಾ ಕರ್ಪ್ಯೂವನ್ನು ರಾಜ್ಯ ಸರ್ಕಾರ ಜಾರಿಗೊಳಿಸಿರೋದು ಉತ್ತಮ ನಿರ್ಧಾರವಾಗಿದೆ. ಕೊರೋನಾ ಜೈನ್ ಬ್ರೇಕ್ ಮಾಡೋದಕ್ಕೆ ರಾಜ್ಯ ಸರ್ಕಾರ ಕೈಗೊಂಡಿರುವ ಉತ್ತಮ ನಿರ್ಧಾರ ಕೂಡ. ಈ ಮೂಲಕ ರಾಜ್ಯದಲ್ಲಿ ಕೊರೋನಾ ನಿಯಂತ್ರಣ ಬಂದು, ಹತೋಟಿಗೆ ಬರಲಿ ಎಂಬುದಾಗಿ ನಮ್ಮ ಕೆಎನ್‌ಎನ್ ಕೂಡ ಬಯಸುತ್ತದೆ.

ಇದರ ಮಧ್ಯೆ.. ರಾಜ್ಯ ಸರ್ಕಾರಕ್ಕೆ ಕೊರೋನಾ ಕಂಟ್ರೋಲ್ ನಿಯಮದಿಂದಾಗಿ ಅಗತ್ಯ ಸೇವೆ ಒದಗಿಸುವಂತ ಇಲಾಖೆಯ ನೌಕರರು ಕರ್ತವ್ಯಕ್ಕೆ ಹಾಜರಾಗಿ, ಕೊರೋನಾ ಕಂಟ್ರೋಲ್ ಗೆ ಕೆಲಸ ಮಾಡುವಂತೆ ಸೂಚಿಸಿದೆ. ಅಲ್ಲದೇ ಸಾರ್ವಜನಿಕರಿಗೆ ಸೇವೆ ಒದಗಿಸುವಂತ ಕೆಲಸ ಮಾಡುವಂತೆಯೂ ರಾಜ್ಯ ಸರ್ಕಾರ ಹೊರಡಿಸಿರುವಂತ ಮಾರ್ಗಸೂಚಿ ಕ್ರಮದಲ್ಲಿ ತಿಳಿಸಿದೆ. ಆದ್ರೇ. ಸಾರಿಗೆ ಸಂಚಾರ ವ್ಯವಸ್ಥೆ ಇಲ್ಲದೇ ಇಂದು ಅಗತ್ಯ ಸೇವೆ ಒದಗಿಸುವಂತ ಇಲಾಖೆಯ ನೌಕರರು ಕರ್ತವ್ಯಕ್ಕೆ ಹಾಜರು ಆಗೋದೇಗೆ.?

ಬಸ್ ಇಲ್ಲ, ಮೆಟ್ರೋ ರೈಲ್ ಇಲ್ಲ. ಟ್ಯಾಕ್ಸಿ ಇಲ್ಲ. ಈ ಎಲ್ಲವೂ ಸಂಪೂರ್ಣ ಕೊರೋನಾ ಕರ್ಪ್ಯೂ ನಡುವೆ ಬಂದ್. ಹಾಗಾದ್ರೆ ಅಗತ್ಯ ಸೇವೆ ಒದಗಿಸುವಂತ ಆರೋಗ್ಯ, ಕಂದಾಯ, ವೈದ್ಯಕೀಯ ಸೇರಿದಂತೆ ಇತರೆ ಇಲಾಖೆಯ ನೌಕರರು ಕರ್ತವ್ಯಕ್ಕೆ ಹಾಜರಾಗೋದಕ್ಕೆ ಬರೋದು ಹೇಗೆ.? ಬೈಕ್, ಕಾರ್ ಇರೋರು ಹೇಗೋ ಬರ್ತಾರೆ ಸಾರ್.. ಇದ್ಯಾವುದೇ ಸೌಲಭ್ಯಗಳಿಲ್ಲದೇ ಇರುವಂತ ಅಗತ್ಯಸೇವೆ ಇಲಾಖೆಯಲ್ಲಿ ಕೆಲಸ ಮಾಡೋರು ಬರೋದಕ್ಕೆ ಏನ್ ವ್ಯವಸ್ಥೆ ಕೈಗೊಳ್ಳಲಾಗಿದೆ.?

ಸಾರಿಗೆ ಸಂಚಾರ ಎಲ್ಲವೂ ಬಂದ್ ಮಾಡೋ ಮೊದಲು ಅಗತ್ಯ ಸೇವೆ ಒದಗಿಸೋ ಇಲಾಖೆಯ ನೌಕರರಿಗೆ ಸರ್ಕಾರ ಕೆಲಸಕ್ಕೆ ಹಾಜರಾಗೋದಕ್ಕೆ ಕನಿಷ್ಠ ವ್ಯವಸ್ಥೆಯಾದ್ರೂ ಮಾಡಬೇಕು ಅಲ್ವಾ..? ಅದನ್ನು ಮಾಡದೇ.. ಅದೇನ್ ಮಾಡ್ತಿರೋ ಗೊತ್ತಿಲ್ಲ. ಅಗತ್ಯ ಸೇವೆ ಇಲಾಖೆಯ ನೌಕರರು ಕೆಲಸಕ್ಕೆ ಹಾಜರಾಗಿ ಅಂದ್ರೆ.. ಹ್ಯಾಂಗ್ ಬರೋದು ಸ್ವಾಮಿ ಅನ್ನೋದು ಕೊರೋನಾ ಕರ್ಪ್ಯೂ ನಡುವೆ ಕೆಲಸಕ್ಕೆ ಸಾರಿಗೆ ಸಂಚಾರದ ವ್ಯವಸ್ಥೆ ಇಲ್ಲದೇ ಗೊಂದಲದಲ್ಲಿರುವಂತ ನೌಕರರ ಪ್ರಶ್ನೆ ಕೂಡ.

ನಮ್ಮ ಕನ್ನಡ ನ್ಯೂಸ್ ಅವರ ಪರವಾಗಿ ಸರ್ಕಾರಕ್ಕೆ ಮನವಿ ಮಾಡುತ್ತಿದೆ. ಅಗತ್ಯ ಸೇವೆ ಒದಗಿಸುವಂತ ಸರ್ಕಾರಿ, ಖಾಸಗಿ ನೌಕರರಿಗೆ ಕನಿಷ್ಠ ಸಂಚಾರದ ವ್ಯವಸ್ಥೆ ಮಾಡಿ. ಬೈಕ್, ಕಾರ್ ಇರೋರು ಹೇಗೋ ಬರ್ತಾರೆ. ಕನಿಷ್ಠ ಇದ್ಯಾವುದೇ ಸೌಲಭ್ಯ ಇಲ್ಲದ ನೌಕರರು ಬರೋದಕ್ಕೆ ದಿನವೂ ಕೊರೋನಾ ಕರ್ಪ್ಯೂ ಸಮಯದಲ್ಲಿ ಕಷ್ಟ ಅನುಭವಿಸಬೇಕಾಗಿದೆ. ದಯವಿಟ್ಟು ರಾಜ್ಯ ಸರ್ಕಾರದ ಸಂಬಂಧಿಸಿದಂತ ಸಚಿವರು, ಅಧಿಕಾರಿಗಳು ಈ ಬಗ್ಗೆ ಗಮನಿಸಿ, ಕ್ರಮ ಕೈಗೊಳ್ಳಬೇಕಿದೆ. ಇಲ್ಲವಾದಲ್ಲಿ, ಹೀಗೆ ಸಮಸ್ಯೆಗೆ ಸಿಲುಕಿರುವಂತ ನೌಕರರಿಗೆ ಕೆಲಸಕ್ಕೆ ಹಾಜರಾತಿಯಿಂದ ವಿನಾಯ್ತಿಯಾದರೂ ಘೋಷಿಸಿ, ವರ್ಕ್ ಫ್ರಂ ಹೋಂ ವ್ಯವಸ್ಥೆಯಾದ್ರೂ ಕಲ್ಪಿಸಲಿ ಎಂಬುದು ನೌಕರರ ಪರವಾಗಿ ನಮ್ಮ ಮನವಿ ಕೂಡ ಆಗಿದೆ.

(ಮಾಹಿತಿ ಕೃಪೆ Kannada News Now )

No comments:

Post a Comment

ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ