WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Saturday, March 6, 2021

ಬಿಎಸ್ಸಿ ಪಠ್ಯಕ್ಕೆ ಮಂಜಮ್ಮ ಜೋಗತಿ ಜೀವನ ಚರಿತ್ರೆ

 

ವಿಜಯನಗರ (ಹೊಸಪೇಟೆ): ಜಾನಪದ ಆಕಾಡೆಮಿ ಅಧ್ಯಕ್ಷೆ ಹಾಗೂ ಪದ್ಮಶ್ರೀ ಪುರಸ್ಕೃತೆ ಮರಿಯಮ್ಮನಹಳ್ಳಿಯ ಮಂಜಮ್ಮ ಜೋಗತಿ ಅವರ ಜೀವನ ಚರಿತ್ರೆ 'ನಡುವೆ ಸುಳಿವ ಹೆಣ್ಣು' ಅನ್ನು ಪುಸ್ತಕ ಗುಲ್ಬರ್ಗಾ ವಿಶ್ವ ವಿದ್ಯಾಲಯ ಪಠ್ಯಕ್ರಮದಲ್ಲಿ ಅಳವಡಿಸುವ ಕಾರ್ಯ ನಡೆದಿದೆ.

ಅರುಣ್ ಜೋಳದ ಕೂಡ್ಲಿಗಿ ನಿರೂಪಣೆ ಮಾಡಿರುವ 'ನಡುವೆ ಸುಳಿವ ಹೆಣ್ಣು' ಪುಸ್ತಕ ವಿಶ್ವವಿದ್ಯಾಲಯದ ಬಿಎಸ್ಸಿ ನಾಲ್ಕನೇ ಸೆಮಿಸ್ಟರ್ ಬೇಸಿಕ್ ಕನ್ನಡ ವಿಷಯದ ಪಠ್ಯಕ್ರಮಕ್ಕೆ ಆಳವಡಿಸಲು ಪಠ್ಯಕ್ರಮ ಅಧ್ಯಯನ ಮಂಡಳಿ ಶಿಫಾರಸ್ಸು ಮಾಡಿದ್ದು, ಮುಂಬರುವ ಶೈಕ್ಷಣಿಕ ಸಾಲಿನ ಪಠ್ಯಕ್ರಮದಲ್ಲಿ ಸೇರ್ಪಡೆಯಾಗುವುದು ಖಚಿತವಾಗಿದೆ.

ಈ ಹಿಂದೆ ವಿಜಯಪುರದ ಅಕ್ಕಮಹಾದೇವಿ ವಿಶ್ವವಿದ್ಯಾಲಯದಲ್ಲಿ ಮಂಜಮ್ಮ ಜೋಗತಿಯವರ ಕುರಿತ ವಿಷಯವನ್ನು ಪಠ್ಯಕ್ರಮದಲ್ಲಿ ಅಳವಡಿಸಲಾಗಿತ್ತು. ಈ ಬಾರಿ ಅವರ ಸಂಪೂರ್ಣ ಜೀವನ ಚರಿತ್ರೆ ಪಠ್ಯಕ್ರಮವಾಗುತ್ತಿದ್ದು. ಸಮಗ್ರ ಪುಸ್ತಕವನ್ನು 100 ಪುಟಗಳಷ್ಟು ಸಂಕೀರ್ಣಗೊಳಿಸಿ ಮರುಮುದ್ರಿಸಲು ಪಲ್ಲವ ಪ್ರಕಾಶನಕ್ಕೂ ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಾಧನೆಗೈದವರ ಜೀವನ ಕುರಿತಂತೆ ಗುಲ್ಬರ್ಗಾ ವಿವಿ ತನ್ನ ಪಠ್ಯಕ್ರಮಗಳಲ್ಲಿ ಅಳವಡಿಸುತ್ತಾ ಬಂದಿದ್ದು, ಈಗ 'ನಡುವೆ ಸುಳಿವ ಹೆಣ್ಣು' ಪುಸ್ತಕವನ್ನು ಅಳವಡಿಸಲಾಗುತ್ತಿದೆ. ಇದಕ್ಕೆ ಕುಲಪತಿ ಪ್ರೊ.ದಯಾನಂದ ಅಗಸರ ಅವರ ಇಚ್ಛಾಶಕ್ತಿ ಕಾರಣ ಎಂದು ವಿವಿಯ ಕಲಾ ನಿಕಾಯದ ಡೀನ್ ಪ್ರೊ. ಎಚ್.ಟಿ.ಪೋತೆ 'ಪ್ರಜಾವಾಣಿ'ಗೆ ತಿಳಿಸಿದ್ದಾರೆ.

(ಮಾಹಿತಿ ಕೃಪೆ ಪ್ರಜಾವಾಣಿ)

Friday, March 5, 2021

ಹೊಸಪೇಟೆ: ರಾಜ್ಯ ಬಜೆಟ್‌ನಲ್ಲಿ ನಮ್ಮೂರಿಗೇನು ಬೇಕು?

 

ವಿಜಯನಗರ (ಹೊಸಪೇಟೆ): ಪ್ರತಿ ಸಲ ರಾಜ್ಯ ಬಜೆಟ್‌ಗೆ ದಿನಗಳು ಸಮೀಪಿಸುತ್ತಿರುವಂತೆ ಸಹಜವಾಗಿಯೇ ಆಯಾ ಊರಿನವರ ನಿರೀಕ್ಷೆಗಳು ಹೆಚ್ಚಾಗುತ್ತವೆ. ಅದರಲ್ಲೂ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ವಿಜಯನಗರ ಜಿಲ್ಲೆಯ ಜನರ ಪಾಲಿಗೆ ಈ ಸಾಲಿನ ಆಯವ್ಯಯ ಮಹತ್ವದ್ದು.

ಜಿಲ್ಲಾಡಳಿತ ಭವನ ನಿರ್ಮಾಣ, ಜಿಲ್ಲಾಮಟ್ಟದ ಕಚೇರಿಗಳ ಸ್ಥಾಪನೆ, ಹೊಸ ಸಿಬ್ಬಂದಿ ನೇಮಕಾತಿ, ಅಧಿಕಾರಿಗಳ ಓಡಾಟಕ್ಕೆ ವಾಹನಗಳ ಖರೀದಿ, ರಸ್ತೆ ನಿರ್ಮಾಣ ಹೀಗೆ ಹತ್ತು ಹಲವು ಕೆಲಸಕ್ಕಾಗಿ ಅನುದಾನದ ಅಗತ್ಯ ಇರುತ್ತದೆ. ಒಂದರ್ಥದಲ್ಲಿ ಈಗಿರುವ ನಗರದ ಮರು ನಿರ್ಮಾಣ ಎಂದೇ ಹೇಳಬಹುದು.

ಇದರ ಜೊತೆಯಲ್ಲಿ ಜಿಲ್ಲೆ ವ್ಯಾಪ್ತಿಯ ತಾಲ್ಲೂಕುಗಳ ದಶಕಗಳ ಬೇಡಿಕೆಗಳಿಗೂ ಬಜೆಟ್‌ನಲ್ಲಿ ಮನ್ನಣೆ ಸಿಗಬಹುದೇ ಎಂಬ ಪ್ರಶ್ನೆಯೂ ಜನರನ್ನು ಕಾಡುತ್ತಿದೆ. ಕೂಡ್ಲಿಗಿ, ಕೊಟ್ಟೂರು, ಹರಪನಹಳ್ಳಿ ತಾಲ್ಲೂಕುಗಳಲ್ಲಿ ಕೆರೆ, ಕಟ್ಟೆ ತುಂಬಿಸಬೇಕು. ಕುಡಿಯುವ ನೀರಿನ ಸಮಸ್ಯೆ ನೀಗಿಸಬೇಕು ಎನ್ನುವುದು ಅನೇಕ ವರ್ಷಗಳ ಬೇಡಿಕೆಯಾಗಿದೆ. ಅದೇ ರೀತಿ ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿಯ ಕೆಲವು ಭಾಗಗಳಲ್ಲಿ ನೀರಾವರಿ ಸೌಕರ್ಯಕ್ಕೆ ಸಂಬಂಧಿಸಿದ ಯೋಜನೆಗಳು ಪ್ರಗತಿಯಲ್ಲಿವೆ. ಆದರೆ, ಎರಡೂ ತಾಲ್ಲೂಕಿನ ಅರ್ಧ ಭಾಗ ಈಗಲೂ ಮಳೆಯನ್ನೇ ಅವಲಂಬಿಸಿದೆ.

ಜಿಲ್ಲಾ ಕೇಂದ್ರ ಹೊಸಪೇಟೆ ಸೇರಿದಂತೆ ಇತರೆ ತಾಲ್ಲೂಕುಗಳಲ್ಲಿ ವಲಸೆ ಹೆಚ್ಚಿನ ಪ್ರಮಾಣದಲ್ಲಿ. ಅದರಲ್ಲೂ ತಾಂಡಾ ನಿವಾಸಿಗಳು ಉದ್ಯೋಗ ಅರಸಿಕೊಂಡು ಬೇರೆಡೆ ಗುಳೇ ಹೋಗುತ್ತಾರೆ. ಉದ್ಯೋಗ ಖಾತ್ರಿ ಯೋಜನೆ ಜಾರಿಗೆ ಬಂದ ನಂತರ ಸ್ವಲ್ಪ ಪ್ರಮಾಣದಲ್ಲಿ ವಲಸೆ ತಡೆಯಲು ಯಶಸ್ವಿಯಾಗಿದೆ. ಆದರೆ, ಇನ್ನೂ ಅನೇಕರು ನಿರುದ್ಯೋಗಿಗಳಾಗಿದ್ದಾರೆ. ಸ್ಥಳೀಯ ಬಹುತೇಕರಲ್ಲಿ ಕೌಶಲ ಇಲ್ಲ. ಕೈಗಾರಿಕೆಗಳಿದ್ದರೂ ಹೊರಗಿನವರು ಅಲ್ಲಿ ಆಕ್ರಮಿಸಿಕೊಂಡಿದ್ದಾರೆ.

'ವಿಜಯನಗರ ಜಿಲ್ಲೆ ಮಾಡಿರುವುದರಿಂದ ಜಿಲ್ಲಾ ಕೇಂದ್ರದ ಅಂತರ ತಗ್ಗಿರುವುದು ಒಳ್ಳೆಯ ವಿಷಯ. ನಮ್ಮ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಜನರಿಗೆ ಕೃಷಿ ಬಿಟ್ಟರೆ ಬೇರೆ ಉದ್ಯೋಗಗಳಿಲ್ಲ. ನೀರಿನ ಸಮಸ್ಯೆ ಬಗೆಹರಿಸಬೇಕು. ಕೈಗಾರಿಕೆಗಳನ್ನು ಸ್ಥಾಪಿಸಿ, ಜನರಿಗೆ ಉದ್ಯೋಗ ಕೊಡಬೇಕು' ಎನ್ನುತ್ತಾರೆ ಕೊಟ್ಟೂರಿನ ಯುವಕರಾದ ಬಸವರಾಜ, ಮಲ್ಲಿಕಾರ್ಜುನ.

ಹಂಪಿಯಲ್ಲಿ ಮೂಲಸೌಕರ್ಯಕ್ಕೆ ಸಿಕ್ಕಿತ್ತೇ ಹಣ?:

ವಿಶ್ವಪ್ರಸಿದ್ಧ ಹಂಪಿಯಲ್ಲಿ ಪ್ರವಾಸಿಗರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು ಎನ್ನುವುದು ದಶಕಗಳ ಬೇಡಿಕೆಯಾಗಿದೆ. ಆದರೆ, ಅದು ಈಡೇರಿಲ್ಲ. ದೇಶ-ವಿದೇಶಗಳಿಂದ ಬರುವ ಪ್ರವಾಸಿಗರಿಗೆ ನದಿ ತಟದಲ್ಲಿ ಸ್ನಾನಗೃಹ, ಶೌಚಾಲಯ, ಕಡಿಮೆ ದರದಲ್ಲಿ ಕೊಠಡಿ ಬಾಡಿಗೆ ಸೌಲಭ್ಯ ಇನ್ನೂ ಮರೀಚಿಕೆಯಾಗಿದೆ.

ಹಿಂದಿನ ಬಜೆಟ್‌ ಅನುದಾನವೇ ಸಿಕ್ಕಿಲ್ಲ:

ಹಂಪಿ ಮಾತಂಗ ಬೆಟ್ಟದ ಅಭಿವೃದ್ಧಿ ಕಾರ್ಯಕ್ಕೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಕೊನೆಯ ಬಜೆಟ್‌ನಲ್ಲಿ ₹1 ಕೋಟಿ ಮೀಸಲಿಡಲಾಗಿತ್ತು. ಎರಡು ವರ್ಷಗಳಾದರೂ ಆ ಹಣ ಬಿಡುಗಡೆಯಾಗಿಲ್ಲ.

'ಮಾತಂಗ ಬೆಟ್ಟದ ಅಭಿವೃದ್ಧಿಗೆ ಸರ್ಕಾರ ಘೋಷಿಸಿದ ಹಣ ಬಿಡುಗಡೆಯಾಗದೇ ಇರುವುದು ಬೇಸರ ಮೂಡಿಸಿದೆ. ನೆರೆ ನೆಪವೊಡ್ಡಿ ಆ ವರ್ಷ ಸಮ್ಮಿಶ್ರ ಸರ್ಕಾರ ಅನುದಾನ ನೀಡಿರಲಿಲ್ಲ. ಈ ವರ್ಷವಾದರೂ ಸರ್ಕಾರ ಅದಕ್ಕೆ ಅನುದಾನ ಬಿಡುಗಡೆ ಮಾಡಬೇಕು. ಹುಸಿ ಭರವಸೆಗಳನ್ನು ಕೊಡಬಾರದು' ಎಂದು ಮಾತಂಗ ಸಮಾಜದ ಮುಖಂಡ ನಿಂಬಗಲ್‌ ರಾಮಕೃಷ್ಣ ಹೇಳಿದರು.

(ಮಾಹಿತಿ ಕೃಪೆ ಪ್ರಜಾವಾಣಿ)

ವಿಭಜಿತ ಬಳ್ಳಾರಿ ಉಸ್ತುವಾರಿ ಯಾರಿಗೆ?

 

ಗಣಿನಾಡು ಬಳ್ಳಾರಿ ಜಿಲ್ಲೆಯಿಂದ ವಿಜಯನಗರ ಜಿಲ್ಲೆ ಪ್ರತ್ಯೇಕವಾದ ಬೆನ್ನಲ್ಲೇ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸ್ಥಾನ ಯಾರಿಗೆ ಒಲಿಯಲಿದೆ ಎಂಬ ಕುತೂಹಲ ಸೃಷ್ಟಿಯಾಗಿದೆ.

ಅವಿಭಜಿತ ಬಳ್ಳಾರಿ ಜಿಲ್ಲೆ ಉಸ್ತುವಾರಿ ವಹಿಸಿಕೊಂಡಿರುವ ಆನಂದ ಸಿಂಗ್‌ ಅವರೇ ಸದ್ಯ ಉಭಯ ಜಿಲ್ಲೆಗಳ ಉಸ್ತುವಾರಿಯಾಗಿದ್ದಾರೆ. ಆದರೆ ವಿಜಯ ನಗರ ಜಿಲ್ಲಾಭಿವೃದ್ಧಿ, ಅಧಿಕಾರಿಗಳ ನೇಮಕ ಸೇರಿ ಅಗತ್ಯ ಕೆಲಸಗಳು ಚುರುಕುಗೊಂಡಿರುವ ಹಿನ್ನೆಲೆಯಲ್ಲಿ ಆನಂದ ಸಿಂಗ್‌ ಅವರು ವಿಜಯನಗರ ಜಿಲ್ಲೆಯ ಉಸ್ತುವಾರಿಯನ್ನಷ್ಟೇ ವಹಿಸಿಕೊಳ್ಳಲಿದ್ದಾರೆ. ವಿಭಜಿತ ಬಳ್ಳಾರಿ ಜಿಲ್ಲೆಯ 5 ವಿಧಾನಸಭೆ ಕ್ಷೇತ್ರಗಳಲ್ಲಿ ಬಿಜೆಪಿಯ ಜಿ.ಸೋಮ ಶೇಖರ ರೆಡ್ಡಿ, ಸಿರುಗುಪ್ಪದ ಎಂ.ಎಸ್‌. ಸೋಮಲಿಂಗಪ್ಪ ಇಬ್ಬರು ಶಾಸಕರಿದ್ದಾರೆ. ಆದರೆ ಈ ಇಬ್ಬರನ್ನು ಹೊರತುಪಡಿಸಿ ಬಳ್ಳಾರಿ ಮೂಲದ ಮೊಳಕಾ ಲ್ಮೂರು ಶಾಸಕ, ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಹೆಸರು ಕೇಳಿಬರುತ್ತಿದೆ. ಬಳ್ಳಾರಿ ಜಿಲ್ಲೆ ವಿಭಜನೆಗೆ ತೀವ್ರವಾಗಿ ವಿರೋಧಿಸಿದ್ದ ಶಾಸಕ ಜಿ. ಸೋಮಶೇಖರ ರೆಡ್ಡಿ ಸಚಿವ ಆನಂದ ಸಿಂಗ್‌ ಯಾವುದೇ ಕಾರಣಕ್ಕೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಯಾಗಿ ಮುಂದುವರಿಯಬಾರದು ಎಂದು ಈಗಾಗಲೇ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಉಸ್ತುವಾರಿ ಯನ್ನು ಸಚಿವ ಬಿ.ಶ್ರೀರಾಮುಲು ಅವರಿಗೆ ನೀಡಲಿ ಎಂದೂ ಸಹಮತ ವ್ಯಕ್ತಪಡಿಸಿ ದ್ದಾರೆ. ಇತ್ತ ಸಚಿವ ಆನಂದ ಸಿಂಗ್‌ ಸಹ ಬಳ್ಳಾರಿ ಜಿಲ್ಲೆ ಉಸ್ತುವಾರಿ ಸಚಿವರಾಗಿ ನಾನೇ ಇರಬೇಕು. ಇಲ್ಲದಿದ್ದರೆ ಸಚಿವ ಬಿ. ಶ್ರೀರಾಮುಲು ಆಗಬೇಕು. ಹೊರಗಿನವರಿಗೆ ಬಿಟ್ಟು ಕೊಡಲು ನಾನು ಒಪ್ಪಲ್ಲ ಎಂದು ಖಡಕ್ಕಾಗಿಯೇ ಹೇಳಿದ್ದಾರೆ. ಹೀಗಾಗಿ ರಾಮುಲು ಅವರಿಗೇ ಜಿಲ್ಲೆಯ ಉಸ್ತುವಾರಿ ಲಭಿಸಲಿದೆಯೇ ಎಂಬ ಕುತೂಹಲ ಮೂಡಿದೆ.

ಉಸ್ತುವಾರಿಗಾಗಿ ರಾಮುಲು ಯತ್ನ: ಮೂಲಗಳ ಪ್ರಕಾರ ವಿಭಜಿತ ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಸಚಿವರಾಗಲು ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ತೆರೆಮರೆಯ ಪ್ರಯತ್ನದಲ್ಲಿದ್ದಾರೆ. ಆದಷ್ಟು ಬೇಗ ರಾಮುಲು ಬಳ್ಳಾರಿ ಜಿಲ್ಲಾ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ ಎಂಬ ಮಾತು ಕಮಲ ಪಕ್ಷದಲ್ಲಿ ಕೇಳಿ ಬರುತ್ತಿದೆ. ಮೇಲಾಗಿ ಆನಂದ ಸಿಂಗ್‌ ಮತ್ತು ಶ್ರೀರಾಮುಲು ಇಬ್ಬರೂ ಆಪ್ತ ರಾಗಿದ್ದಾರೆ. ಈ ಕಾರಣದಿಂದಲೇ ಬಳ್ಳಾರಿ ವಿಭಜನೆಗೆ ಸೋಮಶೇಖರ ರೆಡ್ಡಿ ವಿರೋಧಿ ಸಿದ್ದರೂ ರಾಮುಲು ವಿಜಯನಗರ ಪ್ರತ್ಯೇಕ ಜಿಲ್ಲೆ ರಚನೆಗೆ ಸಹಮತ ವ್ಯಕ್ತಪಡಿಸಿದ್ದರು.

ಭವಿಷ್ಯದ ರಾಜಕೀಯ ದೃಷ್ಟಿಯಿಂದ ವಿಜಯನಗರ ಜಿಲ್ಲೆ ರಚನೆಗೆ ಸಚಿವ ಬಿ.ಶ್ರೀರಾಮುಲು, ಸಹಮತ ವ್ಯಕ್ತಪಡಿಸಿ ದ್ದಾರೆ.2022ರ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ವಿಜಯನಗರ ಜಿಲ್ಲೆಯ ಕೂಡ್ಲಿಗಿ ಎಸ್‌ಟಿ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಲು ಸಹ ಚಿಂತನೆ ನಡೆಸಿದ್ದಾರೆ. ಒಂದು ವೇಳೆ ಸ್ಪರ್ಧಿಸಿದಲ್ಲಿ ಇದಕ್ಕೆ ಸಿಂಗ್‌ ಬೆಂಬಲವು ಸಹ ಸಿಗಲಿದೆ ಎನ್ನಲಾಗಿದೆ.

-ವೆಂಕೋಬಿ ಸಂಗನಕಲ್ಲು

(ಮಾಹಿತಿ ಕೃಪೆ ಉದ್ಯವಾಣಿ)

ಜಾತಿ ಗಣತಿ ವರದಿ ಬಿಡುಗಡೆಗೆ ಒತ್ತಾಯ, ಕಾಂತರಾಜು ಆಯೋಗ ವರದಿ ಬಹಿರಂಗಕ್ಕೆ ಆಗ್ರಹ


 ಬೆಂಗಳೂರು: ಮೀಸಲಾತಿಗಾಗಿ ವಿವಿಧ ಸಮುದಾಯದವರು ನಡೆಸಿರುವ ಹೋರಾಟ ಗುರುವಾರ ವಿಧಾನ ಪರಿಷತ್‌ನಲ್ಲಿಯೂ ಪ್ರತಿಧ್ವನಿಸಿತು. ಪಕ್ಷಭೇದ ಮರೆತು ಸದಸ್ಯರು ಈ ವಿಷಯವನ್ನು ಪ್ರಸ್ತಾಪಿಸಿದರು.

ಎಚ್‌. ಕಾಂತರಾಜು ನೇತೃತ್ವದ ಆಯೋಗದ ಸಾಮಾಜಿಕ-ಶೈಕ್ಷಣಿಕ ಸಮೀಕ್ಷಾ ವರದಿಯನ್ನು ಸರ್ಕಾರ ಸ್ವೀಕರಿಸಿ, ಬಹಿರಂಗಪಡಿಸಿದರೆ ಮೀಸಲಾತಿಗೆ ಸಂಬಂಧಿಸಿದ ಎಷ್ಟೋ ಸಮಸ್ಯೆಗಳು ಪರಿಹಾರವಾಗಲಿವೆ ಎಂದು ಸದಸ್ಯರು ಒಕ್ಕೊರಲಿನಿಂದ ಪ್ರತಿಪಾದಿಸಿದರು.

ಗಮನ ಸೆಳೆಯುವ ಸೂಚನೆ ಮಂಡಿಸಿದ ಬಿಜೆಪಿಯ ಕೆ.ಪಿ. ನಂಜುಂಡಿ, 'ಹಿಂದುಳಿದ ವರ್ಗಗಳ ಆಯೋಗ ನಡೆಸಿದ ಜಾತಿ ಜನಗಣತಿ ಸಮೀಕ್ಷಾ ವರದಿ ಸಿದ್ಧವಾಗಿ ಎರಡು ವರ್ಷಗಳೇ ಆಗಿವೆ. ಹಿಂದುಳಿದವರು ಮಾತ್ರವಲ್ಲದೆ, ಮೇಲ್ವರ್ಗದವರೂ ಈಗ ಮೀಸಲಾತಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಯಾವ ಸಮುದಾಯದವರು ಎಷ್ಟಿದ್ದಾರೆ, ಯಾರಿಗೆ ಮೀಸಲಾತಿ ಅವಶ್ಯಕತೆ ಇದೆ ಎಂಬುದು ಈ ವರದಿಯಿಂದ ಸ್ಪಷ್ಟವಾಗಲಿದ್ದು, ಅದನ್ನು ಬಿಡುಗಡೆ ಮಾಡುವುದು ಹೆಚ್ಚು ಪ್ರಸ್ತುತ' ಎಂದರು. ಬಿಜೆಪಿಯ ಎಚ್. ವಿಶ್ವನಾಥ್, 'ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ₹162 ಕೋಟಿ ವೆಚ್ಚದಲ್ಲಿ ವೈಜ್ಞಾನಿಕವಾಗಿ ಈ ಜಾತಿಗಣತಿ ಮಾಡಿಸಿದ್ದಾರೆ. ಅವರ ಸರ್ಕಾರ ಮತ್ತು ನಂತರ ಅಧಿಕಾರ ನಡೆಸಿದ ಸರ್ಕಾರಗಳು ವರದಿ ಬಿಡುಗಡೆಗೆ ಏಕೆ ಹಿಂದೇಟು ಹಾಕುತ್ತಿವೆ ಎಂಬುದು ಅರ್ಥವಾಗುತ್ತಿಲ್ಲ' ಎಂದರು.

'ಸಂವಿಧಾನ ಉಲ್ಲಂಘನೆ'

'ಧರ್ಮಾತೀತ ಮತ್ತು ಜಾತ್ಯತೀತವಾಗಿ ಕೆಲಸ ಮಾಡುತ್ತೇವೆ ಎಂದು ಪ್ರಮಾಣ ವಚನ ಸ್ವೀಕರಿಸಿರುವ ಸಚಿವರು ಅವರ ಜಾತಿಗೆ ಸಂಬಂಧಿಸಿದ ಮೀಸಲಾತಿ ಹೋರಾಟದಲ್ಲಿ ನೇರವಾಗಿ ಪಾಲ್ಗೊಳ್ಳುತ್ತಿದ್ದಾರೆ. ಇದು ಸಂವಿಧಾನದ ಉಲ್ಲಂಘನೆ' ಎಂದು ಜೆಡಿಎಸ್‌ನ ಮರಿತಿಬ್ಬೇಗೌಡ ದೂರಿದರು.

'ಜಾತಿಗಣತಿ ವರದಿ ಬಿಡುಗಡೆ ಮಾಡುವುದು ಬಿಟ್ಟು, ಕಾಲಹರಣ ಮಾಡುವ ಉದ್ದೇಶದಿಂದ ಸರ್ಕಾರವು ತ್ರಿಸದಸ್ಯ ಸಮಿತಿ ರಚಿಸುವ ಬಗ್ಗೆ ಮಾತನಾಡುತ್ತಿದೆ' ಎಂದೂ ಅವರು ಟೀಕಿಸಿದರು.

(ಮಾಹಿತಿ ಕೃಪೆ ಪ್ರಜಾವಾಣಿ)

Thursday, March 4, 2021

ಕೃಷಿ ಇಲಾಖೆ ರಾಯಭಾರಿಯಾಗಿ ದರ್ಶನ್ ನಾಳೆ ಅಧಿಕಾರ ಸ್ವೀಕಾರ


 ಬೆಂಗಳೂರು : ನಾಳೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್​ ಕೃಷಿ ಇಲಾಖೆಯ ರಾಯಭಾರಿಯಾಗಲಿದ್ದಾರೆ ಎಂದು ಕೃಷಿ ಸಚಿವ ಬಿಸಿ ಪಾಟೀಲ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.  ಈ ಬಗ್ಗೆ ಟ್ವೀಟ್ ಮಾಡಿರುವ ಸಚಿವರು, ರಾಜ್ಯ ಕೃಷಿ ಇಲಾಖೆಯ ನೂತನ ರಾಯಭಾರಿಯಾಗಿ ಕನ್ನಡದ ಜನಪ್ರಿಯ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಧಿಕಾರ ಸ್ವೀಕಾರ ಸಮಾರಂಭ ದಿನಾಂಕ: 05-03-2021 ರಂದು ವಿಕಾಸಸೌಧ, ಬೆಂಗಳೂರಿನಲ್ಲಿ ನಡೆಯಲಿದೆ ಎಂದಿದ್ದಾರೆ.

ಕೃಷಿ ಮತ್ತು ಪ್ರಾಣಿಗಳ ಬಗ್ಗೆ ಹೆಚ್ಚು ಒಲವವನ್ನು ಹೊಂದಿರು ದರ್ಶನ್ ರಾಯಭಾರಿಯಾಗಲು ಸಂಭಾವನೆಯನ್ನು ಪಡೆದಿಲ್ಲ ಎನ್ನಲಾಗಿದೆ.

(ಮಾಹಿತಿ ಕೃಪೆ ಉದಯವಾಣಿ)

ಹುಟ್ಟುಹಬ್ಬದ ಸಂಭ್ರಮದಲ್ಲಿ ಹಿರಿಯ ನಟಿ ತಾರಾ


 ಕನ್ನಡ ಚಿತ್ರರಂಗದ ಹೆಸರಾಂತ ಹಿರಿಯ ನಟಿ ತಾರಾ ಇಂದು ತಮ್ಮ 48ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನಟಿ ತಾರಾ 1984ರಂದು 'ಇಂಗೆಯುಮ್ ಒರು ಗಂಗೈ' ಎಂಬ ತಮಿಳು ಚಿತ್ರದ ಮೂಲಕ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದರು. ನಂತರ 1985ರಂದು 'ತುಳಸಿ ದಳ' ಎಂಬ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದರು.

ಕನ್ನಡದಲ್ಲೇ ಹೆಚ್ಚಾಗಿ ನಟಿಸಿರುವ ಇವರು ತೆಲುಗು, ತಮಿಳಿನಲ್ಲೂ ಕೆಲ ಸಿನಿಮಾಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ.  ಹಲವಾರು ಪ್ರಶಸ್ತಿಗಳನ್ನು ಪಡೆದುಕೊಳ್ಳುವ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ. ನಟಿ ತಾರಾ 1973 ಮಾರ್ಚ್ 4ರಂದು ಜನಿಸಿದ್ದು, ಇಂದು ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.

(ಮಾಹಿತಿ ಕೃಪೆ ಕನ್ನಡದುನಿಯಾ)

ಕೋಲಾರದಲ್ಲಿ ಪಿಎಸ್‌ಐ ಮೇಲೆ ಲಾಂಗ್‌ನಿಂದ ಹಲ್ಲೆ ಮಾಡಿ ಆರೋಪಿ ಪರಾರಿ

 

ಬೆಂಗಳೂರು: ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಯೋರ್ವನನ್ನು ಬಂಧಿಸಲು ಕೋಲಾರಕ್ಕೆ ತೆರಳಿದಾಗ ಆರೋಪಿ ಪಿಎಸ್‌ಐ ಮೇಲೆಯೇ ಲಾಂಗ್‌ನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ.

ನಗರದ ವೈಟ್‌ಫೀಲ್ಡ್ ಉಪವಿಭಾಗ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿ ಅಪ್ಟೆನ್, ಹಲವು ದಿನಗಳಿಂದ ತಲೆಮರೆಸಿಕೊಂಡು ಓಡಾಡುತ್ತಿದ್ದನು. ಕೆಜಿಎಫ್‌ ನಲ್ಲಿಆರೋಪಿ ಇರುವ ಕುರಿತು ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ ಮಹದೇವಪುರ ಠಾಣೆ ಪಿಎಸ್‌ಐ ಹರಿನಾಥ್ ಹಾಗೂ ಸಿಬ್ಬಂದಿ ಬುಧವಾರ ಸ್ಥಳಕ್ಕೆ ದೌಡಾಯಿಸಿ ಆರೋಪಿಯನ್ನು ಬಂಧಿಸಲು ಮುಂದಾಗಿದ್ದರು.

ಈ ವೇಳೆ ಆರೋಪಿ ಪಿಎಸ್‌ಐ ಬಲಗೈಗೆ ‌ಲಾಂಗ್ ನಿಂದ ಹೊಡೆದು ಮಾರಣಾಂತಿಕ ಹಲ್ಲೆ ನಡೆಸಿದ್ದನು. ಹೀಗಾಗಿ ತಮ್ಮ ಆತ್ಮರಕ್ಷಣೆಗಾಗಿ ಪಿಎಸ್‌ಐ ಆರೋಪಿ ಮೇಲೆ ಗುಂಡು ಹಾರಿಸಿದ್ದರು. ಅದರಿಂದ ತಪ್ಪಿಸಿಕೊಂಡು ಆರೋಪಿ ಪರಾರಿಯಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಗಾಯಗೊಂಡಿರುವ ಪಿಎಸ್‌ಐ ಹರಿನಾಥ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪರಾರಿಯಾದ ಆರೋಪಿ ಪತ್ತೆಗೂ ಶೋಧ ನಡೆದಿದೆ ಎಂದೂ ಮೂಲಗಳು ತಿಳಿಸಿವೆ.

(ಮಾಹಿತಿ ಕೃಪೆ ಕನ್ನಡಪ್ರಭ)

ಸದನದಲ್ಲೇ ಅಂಗಿ ಬಿಚ್ಚಿದ ಶಾಸಕ! ಸಿಎಂ ಮತ್ತು ಈಶ್ವರಪ್ಪ ವಿರುದ್ಧ ಆಕ್ರೋಶ.


 ಬೆಂಗಳೂರು: ಭದ್ರಾವತಿ ಕ್ಷೇತ್ರದಲ್ಲಿ ಭಾರಿ ಕಿರುಕುಳ ಅನುಭವಿಸುತ್ತಿದ್ದೇನೆ. ನನ್ನ ಕುಟುಂಬದ ವಿರುದ್ಧ ಅಟ್ರಾಸಿಟಿ ಕೇಸ್ ಹಾಕಿಸಿದ್ದಾರೆ. ರಾಜ್ಯ ಸರ್ಕಾರ ನನ್ನ ವಿರುದ್ಧ ಸೇಡಿನ ರಾಜಕಾರಣ ಮಾಡ್ತಿದೆ. ನೀವು ನನ್ನ ರಕ್ಷಣೆಗೆ ಬರಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬಳಿ ಇಂದು ಬೆಳಗ್ಗೆ ಕಾಂಗ್ರೆಸ್​ ಶಾಸಕಾಂಗ ಸಭೆಯಲ್ಲಿ ಶಾಸಕ ಸಂಗಮೇಶ್ ಅಳಲು ತೋಡಿಕೊಂಡಿದ್ದರು. ಇದಾದ ಕೆಲವೇ ಹೊತ್ತಿನಲ್ಲಿ ಸದನದಲ್ಲಿ ಅಂಗಿ ಬಿಚ್ಚಿ ಪ್ರತಿಭಟನೆ ನಡೆಸಿದರು.

ಸದನದಲ್ಲೇ ಶಾಸಕ ಬಿ.ಕೆ. ಸಂಗಮೇಶ್ ಶರ್ಟ್ ಬಿಚ್ಚಿ ಹೆಗಲ ಮೇಲೆ ಹಾಕಿಕೊಂಡು ಪ್ರತಿಭಟಿಸಿದ್ದಕ್ಕೆ ಗರಂ ಆದ ಸ್ಪೀಕರ್, ಸದನ ಅಂದ್ರೆ ಏನ್​ ಅನ್ಕೊಂಡಿದ್ದೀರಿ? ಸದನ ಅಂದ್ರೆ ತಮಾಷೆನಾ? ನಿಮ್ಮ ಈ ವರ್ತನೆ ಮೂಲಕ ಕ್ಷೇತ್ರದ ಜನತೆಗೆ ಅಗೌರವ ತಂದಿದ್ದೀರಿ. ಸಭ್ಯತೆ ಮರೆತು ವರ್ತಿಸಿದ್ದೀರಿ ಎಂದು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಲ್ಲದೆ, ಒಂದು ವಾರ ಸದನಕ್ಕೆ ಬಾರದಂತೆ ಅಮಾನತು ಮಾಡಿದ್ದಾರೆ. ಈ ಕುರಿತು ದಿಗ್ವಿಜಯ ನ್ಯೂಸ್​ಗೆ ಪ್ರತಿಕ್ರಿಯಿಸಿದ ಸಂಗಮೇಶ್​, ತನ್ನ ಮೇಲೆ ಸಿಎಂ ಕುಟುಂಬಸ್ಥರೇ ದೌರ್ಜನ್ಯವೆಸಗುತ್ತಿದ್ದಾರೆ ಎಂದು ಆರೋಪಗಳ ಸುರಿಮಳೆಗೈದಿದ್ದಾರೆ.

ನನ್ನನ್ನು ಅಮಾನತು ಮಾಡಿದ ಸ್ಪೀಕರ್ ಆದೇಶ ಹಿಂದೆ ಸಚಿವ ಈಶ್ವರಪ್ಪ, ಸಿಎಂ ಯಡಿಯೂರಪ್ಪ, ಸಂಸದ ರಾಘವೇಂದ್ರ ಇದ್ದಾರೆ. ನಾನು ಸ್ಪೀಕರ್ ಆದೇಶ ಒಪ್ಪಲ್ಲ. ಸ್ಪೀಕರ್ ರಾಜಕೀಯ ಏಜೆಂಟ್. ಬಿಜೆಪಿ ಸರ್ಕಾರದ ಏಜೆಂಟ್ ಆಗಿದ್ದಾರೆ. ನಾನು ಸದನಕ್ಕೆ ಹೋಗುತ್ತೇನೆ. ಸದನಕ್ಕೆ ಬರುವಂತೆ ಡಿಕೆಶಿ, ಸಿದ್ದರಾಮಯ್ಯ ಹೇಳಿದ್ದಾರೆ. ಆದೇಶ ಹಿಂಪಡೆಯದಿದ್ರೆ ಮುಂದಿನ ಹೋರಾಟದ ಬಗ್ಗೆ ಚರ್ಚೆ ಮಾಡ್ತೀವಿ ಎಂದು ಸಂಗಮೇಶ್​ ತಿಳಿಸಿದರು.

ಹೌದು, ಸದನದಲ್ಲಿ ನಾನು ಶರ್ಟ್ ಬಿಚ್ಚಿದ್ದು ನಿಜ. ಶರ್ಟ್ ಬಿಚ್ಚಿ ಪ್ರತಿಭಟನೆ ಮಾಡುವುದು ತಪ್ಪಲ್ಲ. ಪ್ಯಾಂಟ್-ಬನಿಯನ್ ಬಿಚ್ಚಿಲ್ಲ, ಯಾರ್ಯಾರೋ ಏನೇನೋ ಬಿಚ್ಚಿದ್ದಾರೆ, ಅಂಥವರ ಬಗ್ಗೆ ಕ್ರಮ ಇಲ್ಲ ಎಂದು ಟೀಕಿಸಿದರು. ಭದ್ರಾವತಿ ಕ್ಷೇತ್ರದಲ್ಲಿ ಬಿಜೆಪಿ ಡೆಪಾಸಿಟ್ ಇಲ್ಲ. ಭದ್ರಾವತಿ ಜನರನ್ನ ಹೊಡೆಯುವ ಕೆಲಸ ಮಾಡ್ತಿದ್ದಾರೆ. ನಾನು ಹಿಂದು, ಎಲ್ಲರೂ ಭಾರತೀಯರು. ಇವರು ಢೋಂಗಿ ರಾಮನ ಭಕ್ತರು. ನಾವು ಆತ್ಮದಲ್ಲಿ ರಾಮನನ್ನ ಇಟ್ಟುಕೊಂಡಿದ್ದೇವೆ. ನನ್ನನ್ನು ಯಾವ ಕಾರಣಕ್ಕೆ ಸಸ್ಪೆಂಡ್ ಮಾಡಿದ್ರು? ಒಂದು ವಾರ ಅಲ್ಲ, ಇನ್ನೊಂದು ವಾರ ಅಮಾನತು ಮಾಡ್ಲಿ ನಾನು ಹೆದರಲ್ಲ ಎಂದು ಎಚ್ಚರಿಸಿದರು.

ನನ್ನ ಮತ್ತು ನನ್ನ ಕುಟುಂಬದ ಮೇಲೆ ಸಿಎಂ ಕುಟುಂಬಸ್ಥರು ಹಲ್ಲೆ ಮಾಡಿದ್ದಾರೆ. ಕೇಸ್ ಹಾಕಿದ್ದಾರೆ. ನನ್ನ ಮನೆಯವರು ತಲೆ ಮರೆಸಿಕೊಂಡಿದ್ದಾರೆ. ತಾಕತ್ತಿದ್ದರೆ ಈಶ್ವರಪ್ಪ ನನ್ನನ್ನು ಜೈಲಿಗೆ ಕಳಿಸಲಿ. ನಾವು ಅವರಂತೆ ಸಿಡಿ ಮಾಡಿಲ್ಲ. ಭ್ರಷ್ಟಾಚಾರ ಮಾಡಿಲ್ಲ, ಅನ್ಯಾಯ ಮಾಡಿಲ್ಲ, ಶಿವಮೊಗ್ಗದಲ್ಲಿ‌ ಗಣಿ ಸ್ಫೋಟವಾಯ್ತು. ಅದರಲ್ಲಿ ಮೂವರು ಇನ್ನೂ ಸಿಕ್ಕಿಲ್ಲ ಎಂದು ಸಂಗಮೇಶ್​ ಕಿಡಿಕಾರಿದರು.

ಇತ್ತ ಮಧ್ಯಾಹ್ನ ಸದನಕ್ಕೆಂದು ಹೊರಟ ಶಾಸಕ ಸಂಗಮೇಶ್​ರನ್ನ ಪೂರ್ವ ಭಾಗಿಲಿನಲ್ಲೇ ತಡೆದ ಮಾರ್ಷಲ್​ಗಳು, ಒಳಬಿಡುವಂತಿಲ್ಲ, ಸ್ಪೀಕರ್ ಆದೇಶ ಇದೆ ಎಂದರು. ಅಷ್ಟರಲ್ಲಿ ಗರಂ ಆದ ಮಾಜಿ ಸಿಎಂ ಸಿದ್ದರಾಮಯ್ಯ,ಏಯ್ ಮಾರ್ಷಲ್, ಆದೇಶದ ಪ್ರತಿ ಇದ್ಯಾ? ಆದೇಶ ಬರುವವರೆಗೂ ಹೇಗೆ ತಡೆಯುತ್ತೀಯಾ? ಪರ್ಮನೆಂಟ್ ಆಗಿ ಅಮಾನತು ಮಾಡ್ತೀರಾ? ಎಂದರು. ನಡಿಯೋ ಒಳಗೆ ಎನ್ನುತ್ತಾ ಶಾಸಕ ಸಂಗಮೇಶ್​ರನ್ನು ವಿಧಾನಸಭೆ ಅಧಿವೇಶನ ಕಾರಿಡಾರ್​ಗೆ ಕರೆದೊಯ್ದರು.

(ಮಾಹಿತಿ ಕೃಪೆ ವಿಜಯವಾಣಿ)

ಪಡಿತರ ಪಡೆಯುವಲ್ಲಿ ಸಮಸ್ಯೆ ಉಂಟಾಗುತ್ತಿದ್ದರೆ ಈ ಟೋಲ್‌ ಫ್ರೀ ನಂಬರ್‌ಗೆ ಕರೆ ಮಾಡಿ ದೂರು ದಾಖಲಿಸಿ


 ಪಡಿತರ ಚೀಟಿ ಸರ್ಕಾರದಿಂದ ನೀಡಲಾಗುವ ಆಹಾರ ಪದಾರ್ಥಗಳನ್ನು ಕಡಿಮೆ ದರದಲ್ಲಿ ಪಡೆಯುವ ಸೌಲಭ್ಯವನ್ನು ನೀಡುತ್ತದೆ. ಆದರೆ ಪ್ರತಿನಿತ್ಯ ಪಡಿತರ ಚೀಟಿ ಫಲಾನುಭವಿಗಳು ಆಹಾರ ಧಾನ್ಯವನ್ನು ಪಡೆಯುವಲ್ಲಿ ಒಂದಲ್ಲಾ ಒಂದು ಸಮಸ್ಯೆಯನ್ನ ಎದುರಿಸುತ್ತಿದ್ದಾರೆ. ನ್ಯಾಯಬೆಲೆ ಅಂಗಡಿ ಮಾಲೀಕರು ಪಡಿತರ ಚೀಟಿ ಇದ್ದರೂ ಕೂಡ ಅವರಿಗೆ ಸಲ್ಲಬೇಕಾದ ಆಹಾರ ಧಾನ್ಯವನ್ನ ಸರಿಯಾದ ಪ್ರಮಾಣದಲ್ಲಿ ನೀಡುತ್ತಿಲ್ಲ ಎಂಬುದು ಹೆಚ್ಚಾಗಿ ಕೇಳಿಬರುತ್ತಿರುವ ದೂರು. ಹೀಗಾಗಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ( ಎನ್‌ ಎಫ್‌ಎಸ್‌ಎ) ಗ್ರಾಹಕರಿಗೆ ಸರಿಯಾದ ಪ್ರಮಾಣದಲ್ಲಿ ಪಡಿತರ ನೀಡುವ ಸೌಲಭ್ಯ ಒದಗಿಸಲು ಹಾಗೂ ಇಂತಹ ದೂರುಗಳಿಗೆ ತಕ್ಷಣ ಸ್ಪಂದಿಸಲು ಪ್ರತಿ ರಾಜ್ಯಕ್ಕೂ ಪ್ರತ್ಯೇಕ ಟೋಲ್‌ ಫ್ರೀ ದೂರವಾಣಿ ಸಂಖ್ಯೆಯನ್ನ ಮೀಸಲಿಟ್ಟಿದೆ. ಪಡಿತರ ಪಡೆಯುವಲ್ಲಿ ಸಮಸ್ಯೆ ಉಂಟಾದರೆ ಈ ಟೋಲ್‌ ಪ್ರೀ ನಂಬರ್‌ಗೆ ಕರೆ ಮಾಡಿ ದೂರು ದಾಖಲಿಸಬಹುದು ಅಥವಾ https://nfsa.gov.in/ ವೆಬ್‌ಸೈಟ್‌ನಲ್ಲಿ ದೂರು ದಾಖಲಿಸಬಹುದು. ಭ್ರಷ್ಟಾಚಾರ ನಿಯಂತ್ರಣದಲ್ಲಿ ಹಾಗೂ ಪಡಿತರ ಪಡೆಯುವಲ್ಲಿ ನಡೆಯುತ್ತಿರುವ ವಂಚನೆಗಳ ವಿರುದ್ಧ ಕ್ರಮ ಕೈಗೊಳ್ಳಲು ಈ ದೂರು ಸಹಾಯಕವಾಗಲಿದೆ.

ಕರ್ನಾಟಕ: 1800-425-9339
ಕೇರಳಾ- 1800-425-1550
ಮಹಾರಾಷ್ಟ್ರ- 1800-22-4950
ಗೋವಾ- 1800-233-0022
ಆಂದ್ರಪ್ರದೇಶ- 1800-425-2977
ಮಧ್ಯಪ್ರದೇಶ- 181
ಬಿಹಾರ-  1800-3456-194 
ಗುಜರಾತ್- 1800-233-5500
ಉತ್ತರಪ್ರದೇಶ- 1800-180-0150
ಪಶ್ಚಿಮ ಬಂಗಾಳ- 1800-345-5505
ತೆಲಂಗಾಣ- 1800-4250-0333
ಪಂಜಾಬ್- 1800-3006-1313

(ಮಾಹಿತಿ ಕೃಪೆ ಒನ್ ಇಂಡಿಯಾ ಎಕ್ಸ್ಕ್ಲೂಸಿವ್)

ಕಾಳಸಂತೆಯಲ್ಲಿ ಮಾರಲು ರೈಸ್ ಮಿಲ್ ಗಳಲ್ಲಿ ಸಂಗ್ರಹಿಸಿದ್ದ ಅಕ್ರಮ ಅಕ್ಕಿ ಪತ್ತೆ


 ರಾಯಚೂರಿನ 4 ರೈಸ್ ಮಿಲ್ ಗಳಲ್ಲಿ ಕಾಳಸಂತೆಯಲ್ಲಿ ಮಾರಾಟ ಮಾಡಲು ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಪಡಿತರ ಅಕ್ಕಿ ವಶಪಡಿಸಿಕೊಳ್ಳಲಾಗಿದೆ.

ರಾಯಚೂರು ಸಹಾಯಕ ಆಯುಕ್ತ ಸಂತೋಷ ಕಾಮೇಗೌಡ ನೇತೃತ್ವದಲ್ಲಿ ಗುರುವಾರ ಮುಂಜಾನೆ ನಡೆದ ದಾಳಿ ವೇಳೆ 4 ರೈಸ್ ಗಳಲ್ಲಿ 6.61,980 ರೂ. ಮೌಲ್ಯದ 884 ಚೀಲ ಪಡಿತರ ಅಕ್ಕಿ ಪತ್ತೆಯಾಗಿದ್ದು, ಅದನ್ನು ವಶಕ್ಕೆ ಪಡೆಯಲಾಗಿದೆ.

ಪಡಿತರ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲು ಯತ್ನಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಅಕ್ರಮ ದಾಸ್ತಾನು ವಶಪಡಿಸಿಕೊಳ್ಳಲಾಗಿದೆ.

ಮಂಚಾಲಪುರ ರಸ್ತೆಯಲ್ಲಿನ ಕೃಷ್ಣ ಸ್ವಾಮಿ ರೈಸ್ ಮಿಲ್ ಮೇಲೆ ದಾಳಿ ನಡೆಸಿ 2 ಲಕ್ಷ 23 ಸಾವಿರದ 150 ರೂ. ಮೌಲ್ಯದ 337 ಚೀಲ ಅಕ್ಕ ವಶಪಡಿಸಿಕೊಳ್ಳಲಾಗಿದೆ. ಗದ್ವಾಲ್ ರಸ್ತೆಯಲ್ಲಿನ ಬರುವ ನರಸಿಂಹ ರೈಸ್ ಮಿಲ್ ನಲ್ಲಿ 67,650 ಮೌಲ್ಯದ 109 ಚೀಲ ಹಾಗೂ ಚಂದ್ರಿಕಾ ರೈಸ್ ಮಿಲ್ ನಲ್ಲಿ 46,500 ರೂ. ಮೌಲ್ಯದ 60 ಚೀಲಗಳನ್ನು ವಶಪಡಿಸಿಕೊಳ್ಳಲಾಗಿದೆ. 

(ಮಾಹಿತಿ ಕೃಪೆ ಕನ್ನಡದ ವಾಹಿನಿ) 

ಆರೋಪ ಬಂದಾಗಲೇ ರಮೇಶ ರಾಜೀನಾಮೆ ಕೊಡಬೇಕಿತ್ತು: ಸತೀಶ ಜಾರಕಿಹೊಳಿ


 ಬೆಳಗಾವಿ: 'ಆರೋಪ ಕೇಳಿಬಂದ ಕೂಡಲೇ ರಮೇಶ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಿತ್ತು. ಒಂದು ದಿನ ಕಾಯುವ ಅಗತ್ಯವಿರಲಿಲ್ಲ' ಎಂದು ಸಹೋದರ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಪ್ರತಿಕ್ರಿಯಿಸಿದರು.

ಗೋಕಾಕದಲ್ಲಿ ಬುಧವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, 'ವಿರೋಧ ಪಕ್ಷ, ಆಡಳಿತ ಪಕ್ಷ ಹಾಗೂ ಜನರ ಆಗ್ರಹದಂತೆ ರಾಜೀನಾಮೆ ನೀಡಿದ್ದಾರೆ. ಈಗ
ನೈತಿಕತೆಯ ವಿಚಾರ ಮುಗಿದಿದೆ. ಇನ್ನೇನಿದ್ದರೂ ಕಾನೂನು ಹೋರಾಟವಷ್ಟೆ. ಆ ಸಿ.ಡಿ. ನಕಲಿಯೋ, ಅಸಲಿಯೋ ಎನ್ನುವುದನ್ನು ಪೊಲೀಸರು ತನಿಖೆ ಮಾಡಬೇಕು. ಸತ್ಯ ಬಯಲಿಗೆಳೆಯಬೇಕು' ಎಂದರು.

'ನಾವು ಸಹೋದರರಿರಬಹುದು. ಆದರೆ, ಪಕ್ಷ ಬೇರೆ. ಪಕ್ಷವೆಂದು ಬಂದಾಗ ನಮ್ಮ ಪಕ್ಷದ ಪರ ನಿಲ್ಲುತ್ತೇವೆ. ಎಲ್ಲದ್ದಕ್ಕೂ ಕುಟುಂಬ ಬೆರೆಸುವುದು ಸರಿಯಲ್ಲ' ಎಂದು ಹೇಳಿದರು.

'ರಮೇಶಗೆ ಅವರ ಪಕ್ಷದಲ್ಲೂ ಆಗದವರು ಇರುತ್ತಾರೆ. ಎಚ್ಚರಿಕೆಯಿಂದ ಇರಬೇಕು' ಎಂದು ಸಲಹೆ ನೀಡಿದರು.

(ಮಾಹಿತಿ ಕೃಪೆ ಪ್ರಜಾವಾಣಿ)

ರಾಸಲೀಲೆ ವಿಡಿಯೊ: ದಿನೇಶ್ ಕಲ್ಲಹಳ್ಳಿ ವಿರುದ್ಧ ದೂರು


ಬೆಂಗಳೂರು: ಸಚಿವರಾಗಿದ್ದ ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾದ ರಾಸಲೀಲೆ ವಿಡಿಯೊ ಬಹಿರಂಗಪಡಿಸಿದ್ದ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ವಿರುದ್ಧ ಕಬ್ಬನ್‌ ಪಾರ್ಕ್‌ ಠಾಣೆಗೆ ಕರ್ನಾಟಕ ಕನ್ನಡಪರ ಸಂಘಟನೆಗಳ ಒಕ್ಕೂಟ ದೂರು ನೀಡಿದೆ.

'ರಾಸಲೀಲೆ ವಿಡಿಯೊ ಬಹಿರಂಗದ ಹಿಂದೆ ರಾಜಕೀಯ ಷಡ್ಯಂತ್ರ ಇದೆ. ರಮೇಶ್ ಜಾರಕಿಹೊಳಿ ಅವರನ್ನು ರಾಜಕೀಯವಾಗಿ ಕುಗ್ಗಿಸುವ ಹಾಗೂ ತೇಜೋವಧೆ ಮಾಡುವ ಉದ್ದೇಶದಿಂದ ಈ ರೀತಿ ಮಾಡಲಾಗಿದೆ. ವಿಡಿಯೊಗೆ ಹಾಗೂ ದಿನೇಶ್ ಅವರಿಗೆ ಯಾವುದೇ ಸಂಬಂಧವಿಲ್ಲ. ಯುವತಿಗೆ ನಿಜವಾಗಿ ಅನ್ಯಾಯವಾಗಿದ್ದರೆ ಏಕೆ ದೂರು ನೀಡಿಲ್ಲ?' ಎಂದು ಒಕ್ಕೂಟದ ಅಧ್ಯಕ್ಷ ಪುಟ್ಟೇಗೌಡ ದೂರಿನಲ್ಲಿ ಪ್ರಶ್ನಿಸಿದ್ದಾರೆ.

ಇದನ್ನೂ ನೋಡಿ..

'ವಿಡಿಯೊದಲ್ಲಿ ಸಮ್ಮತಿಯುತ ಲೈಂಗಿಕ ಕ್ರಿಯೆ ವ್ಯಕ್ತವಾಗಿದೆ. ವೈಯಕ್ತಿಕ ವಿಚಾರವನ್ನು ಅಪಪ್ರಚಾರ ಮಾಡಲಾಗುತ್ತಿದ್ದು, ಇದರ ಹಿಂದೆ ಪ್ರಭಾವಿಗಳು ಇರಬಹುದು. ಇದೊಂದು ಬ್ಲ್ಯಾಕ್‌ಮೇಲ್ ರಾಜಕಾರಣ. ವಿಡಿಯೊ ಕುರಿತು ಸಮಗ್ರ ತನಿಖೆಯಾಗಬೇಕು. ದಿನೇಶ್‌ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು' ಎಂದು ಮನವಿ ಮಾಡಿದ್ದಾರೆ. ನಾಳೆ ಠಾಣೆಗೆ ಬರುವಂತೆ ನೋಟಿಸ್: ರಾಸಲೀಲೆ ವಿಡಿಯೊ ಪ್ರಕರಣ ಸಂಬಂಧ ಕಬ್ಬನ್‌ ಪಾರ್ಕ್‌ ಠಾಣೆಗೆ ಗುರುವಾರ (ಮಾ.4) ಬೆಳಿಗ್ಗೆ 11 ಗಂಟೆಗೆ ವಿಚಾರಣೆಗೆ ಬರುವಂತೆ ದಿನೇಶ್‌ ಕಲ್ಲಹಳ್ಳಿ ಅವರಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ. ರಾಸಲೀಲೆ ವಿಡಿಯೊ ಸಂಬಂಧ ದಿನೇಶ್‌ ಅವರು ಇದೇ ಠಾಣೆಗೆ ದೂರು ನೀಡಿದ್ದರು. ಹೆಚ್ಚಿನ ವಿಚಾರಣೆ ನಡೆಸಲು ಸಲುವಾಗಿ ನೋಟಿಸ್ ನೀಡಿರುವುದಾಗಿ ಮೂಲಗಳು ತಿಳಿಸಿವೆ.

(ಮಾಹಿತಿ ಕೃಪೆ ಪ್ರಜಾವಾಣಿ)


ಜನ ಮರಳೋ ಜಾತ್ರೆ ಮರಳೋ.. ತಾಯಿಗೆ ಮಗಳು ಸೀರೆ ಕೊಡಿಸಬೇಕು! ಬಳ್ಳಾರಿಯಲ್ಲಿ ಹಬ್ಬಿದೆ ವದಂತಿ

 

ಬಳ್ಳಾರಿ : ಗಣಿನಾಡು ಬಳ್ಳಾರಿಯಲ್ಲಿ ವದಂತಿಯೊಂದು ಹಬ್ಬಿದ್ದು, ತಾಯಿಗೆ ಮಗಳು ಹೊಸ ಸೀರೆ ಕೊಡಿಸಬೇಕು ಎನ್ನುವ ವದಂತಿ ಹಬ್ಬಿದ್ದು, ಮಹಿಳೆಯರು ತಾಯಿಗೆ ಸೀರೆ ಕೊಡಲು ಬಟ್ಟೆ ಅಂಗಡಿಗಳಿಗೆ ಮುಗಿಬಿದ್ದಿದ್ದಾರೆ.

ಹೌದು, ಬಳ್ಳಾರಿ ಜಿಲ್ಲೆಯ ಗ್ರಾಮೀಣಾ ಭಾಗದಲ್ಲಿ ತಾಯಿಗೆ ಮಗಳು ಸೀರೆ ಕೊಡಿಸಬೇಕು. ಸೀರೆ ಕೊಡದಿದ್ದರೆ ಕೇಡಾಗುತ್ತದೆ ಎಂಬ ವದಂತಿ ಹಿನ್ನೆಲೆಯಲ್ಲಿ ಹೆಣ್ಣು ಮಕ್ಕಳು ತಮ್ಮ ತಾಯಿಗೆ ಸೀರೆ ಖರೀದಿಸಲು ಮುಗಿಬಿದ್ದಿದ್ದಾರೆ. ಬಳ್ಳಾರಿಯ ಸೀರೆ ಅಂಗಡಿಗಳಲ್ಲಿ ಈಗ ಎಲ್ಲಿ ನೋಡಿದರೂ ಮಹಿಳೆಯರು ಸೀರೆ ಖರೀದಿಸಲು ಮುಂದಾಗಿದ್ದಾರೆ. ಸೀರೆ ಖರೀದಿಸಿ ಮಹಿಳೆಯರು ತವರಿಗೆ ಹೋಗಿ ತಾಯಿ ಹಣೆಗೆ ಕುಂಕಮ ಇಟ್ಟು ಸೀರೆ ಕೊಟ್ಟು ಬರುತ್ತಿದ್ದಾರೆ. ಕಳೆದ ವಾರದಿಂದ ಈ ವದಂತಿ ಹಬ್ಬಿದೆ ಎನ್ನಲಾಗಿದ್ದು, ವದಂತಿಯಿಂದ ಸೀರೆ ವ್ಯಾಪಾರ ಭರ್ಜರಿಯಾಗಿ ನಡೆಯುತ್ತಿದೆ.

(ಮಾಹಿತಿ ಕೃಪೆ ಕನ್ನಡ ನ್ಯೂಸ್ ನೌವ್)

Wednesday, March 3, 2021

ಕಮಲಾಪುರ ಪಟ್ಟಣ ಪಂಚಾಯತಿ: ₹47.92 ಕೋಟಿ ಬಜೆಟ್ ಮಂಡನೆ

 


ವಿಜಯನಗರ (ಹೊಸಪೇಟೆ): ತಾಲ್ಲೂಕಿನ ಕಮಲಾಪುರ ಪಟ್ಟಣ ಪಂಚಾಯತಿಯಲ್ಲಿ 2021-22ನೇ ಸಾಲಿಗೆ ಒಟ್ಟು ₹47.92 ಕೋಟಿ ಆಯವ್ಯಯ ಮಂಡಿಸಿದೆ.

ಪಟ್ಟಣ ಪಂಚಾಯತಿಯ ಕಚೇರಿಯಲ್ಲಿ ಮಂಗಳವಾರ ಸಂಜೆ ನಡೆದ ಆಯ-ವ್ಯಯ ಸಭೆಯಲ್ಲಿ ಪ್ರಸಕ್ತ ವರ್ಷದ ಬಜೆಟ್‌ ಮಂಡಿಸಲಾಯಿತು.

ಪ್ರಸಕ್ತ ವರ್ಷದಲ್ಲಿ ಎಸ್.ಎಫ್.ಸಿ ಮತ್ತು 15ನೇ ಹಣಕಾಸು ಯೋಜನೆಯಿಂದ ₹6 ಕೋಟಿ ಅನುದಾನದ ನಿರೀಕ್ಷೆಯಿದೆ. ಪಟ್ಟಣದಲ್ಲಿ ಸಾಮೂಹಿಕ ಶೌಚಾಲಯ ನಿರ್ವಹಣೆ, ಘನತ್ಯಾಜ್ಯ ವಸ್ತು, ಆಂತರಿಕ ರಸ್ತೆ ಮತ್ತು ಚರಂಡಿಗಳ ಅಭಿವೃದ್ಧಿ, ನಗರೋತ್ಥಾನ ಮುನ್ಸಿಪಾಲಿಟಿ-3ರ ಯೋಜನೆಯಲ್ಲಿ ಮಂಜೂರಾದ ₹2 ಕೋಟಿ ಹಾಗೂ ಜಿಲ್ಲಾ ಖನಿಜ ನಿಧಿಯಿಂದ ₹14 ಕೋಟಿ ಅನುದಾನದ ನಿರೀಕ್ಷೆಗಳಿವೆ.

ಪಟ್ಟಣದಲ್ಲಿ ಬಸ್ ನಿಲ್ದಾಣಗಳ ನವೀಕರಣ, ಪಂಚಾಯಿತಿ ಕಚೇರಿ ನಿರ್ವಹಣೆ ಹಾಗೂ ಮಳಿಗೆಗಳನ್ನು ನಿರ್ವಹಿಸುವ ಕಾಮಗಾರಿಗಳ ಚಾಲನೆ, ಘನತ್ಯಾಜ್ಯ ವಸ್ತು ವಿಲೇವಾರಿ ಘಟಕದ ಬದಲು ವಿಲೇವಾರಿ ಉದ್ಯಾನಕ್ಕಾಗಿ ಯೋಜನೆ ರೂಪಿಸುವ ಚಿಂತನೆ ಹೊಂದಲಾಗಿದೆ. ಹೊಸದಾಗಿ ನಿರ್ಮಾಣಗೊಂಡ 30 ಶೌಚಾಲಯಗಳ ನಿರ್ವಹಣೆಗಾಗಿ ಟೆಂಡರ್ ಕರೆಯುವುದು. ರಾಜೀವ್ ಗಾಂಧಿ ಗ್ರಾಮೀಣ ವಸತಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ವಿತರಿಸಲು ಸರ್ಕಾರದ ವತಿಯಿಂದ ಮಂಜೂರಾತಿ ಪಡೆಯುವುದು ಈ ಸಾಲಿನ ಬಜೆಟ್ ನ ಪ್ರಮುಖ ಅಂಶಗಳಾಗಿವೆ.

ಸಭೆಯಲ್ಲಿ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ನಾಗೇಶ್, ಅಧ್ಯಕ್ಷ ಸೈಯದ್ ಅಮಾನುಲ್ಲಾ, ಉಪಾಧ್ಯಕ್ಷೆ ಬೋರಮ್ಮ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಕಿಶೋರ್ ಕುಮಾರ್ ಸೇರಿದಂತೆ ಪಟ್ಟಣ ಪಂಚಾಯಿತಿಯ ಸದಸ್ಯರು ಇದ್ದರು.

(ಮಾಹಿತಿ ಕೃಪೆ ಪ್ರಜಾವಾಣಿ)

ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯದಲ್ಲಿ ಭಾರಿ ಪ್ರಮಾಣದ ಬೆಂಕಿ


 ಮೈಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಉದ್ಬೂರು ಗೇಟ್ ವಲಯದಲ್ಲಿ ಬುಧವಾರ ಮಧ್ಯಾಹ್ನ ಸುಮಾರು 3.30. ರ ಸಮಯದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಭಾರಿ ಪ್ರಮಾಣದ ಬೆಂಕಿಯನ್ನು ಅರಣ್ಯ ಅಧಿಕಾರಿಗಳುನಂದಿಸಲು ಹರಸಾಹಸ ಪಡುತ್ತಿದ್ದಾರೆ.

ವಿಶ್ವ ವನ್ಯಜೀವಿ ದಿನದ ಅಂಗವಾಗಿ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ವತಿಯಿಂದ ಸಮೀಪದ ದಮ್ಮನಕಟ್ಟೆಯಲ್ಲಿ ಇಲಾಖೆಯ ವಲಯ ಕಚೇರಿಯಲ್ಲಿ ಕಾರ್ಯಕ್ರಮ ನಡೆಯುತ್ತಿದ್ದು, ಹಿರಿಯ ಅಧಿಕಾರಿಗಳು ಇದ್ದಾರೆ. ಈಗಾಗಲೇ ಮುವತ್ತು ಎಕರೆಗೂ ಹೆಚ್ಚು ಅರಣ್ಯವನ್ನು ಬೆಂಕಿ ಆವರಿಸಿದೆ ಎನ್ನಲಾಗಿದೆ.

(ಮಾಹಿತಿ ಕೃಪೆ ಉದಯವಾಣಿ)


ಲೈಂಗಿಕ ದುರ್ಬಳಕೆ, ವಂಚನೆ ಆರೋಪ: ಜಲ ಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ರಾಜೀನಾಮೆ

ಬೆಂಗಳೂರು: ಸಚಿವ ರಮೇಶ ಜಾರಕಿಹೊಳಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

'ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುತ್ತಿದ್ದೇನೆ. ಪಕ್ಷಕ್ಕೆ ಮುಜುಗರ ಮಾಡಲು ಬಯಸುವುದಿಲ್ಲ. ತನಿಖೆ ಆದ ಬಳಿಕ ನಿರ್ದೋಷಿಯಾಗಿ ಬರುತ್ತೇನೆ. ಆ ಬಳಿಕ ಮತ್ತೆ ಸಚಿವ ಆಗುತ್ತೇನೆ ಎಂದು ರಮೇಶ್‌ ಅವರು ಮುಖ್ಯಮಂತ್ರಿಗೆ ಹೇಳಿದ್ದಾರೆ' ಎಂದು ಮೂಲಗಳು ತಿಳಿಸಿವೆ.

ಉದ್ಯೋಗ ಕೊಡಿಸುವ ಆಮಿಷವೊಡ್ಡಿ ಯುವತಿಯೊಬ್ಬಳನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡು ವಂಚಿಸಿದ ಆರೋಪದ ಮೇಲೆ ಜಲ ಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ವಿರುದ್ಧ ನಗರದ ಕಬ್ಬನ್ ಪಾರ್ಕ್ ಪೊಲೀಸ್‌ ಠಾಣೆಗೆ ಮಂಗಳವಾರ ದೂರು ಸಲ್ಲಿಕೆಯಾಗಿದೆ. ಸಿ.ಡಿ ವಿವಾದಕ್ಕೆ ಸಂಬಂಧಿಸಿದಂತೆ ರಮೇಶ ಅವರ ತಮ್ಮ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಬುಧವಾರ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.

(ಮಾಹಿತಿ ಕೃಪೆ ಪ್ರಜಾವಾಣಿ)

ರಮೇಶ್‌ ಜಾರಕಿಹೊಳಿ ವಿರುದ್ಧ ದೂರು; ರಾಜೀನಾಮೆ ಕೊಡುವುದಿಲ್ಲ ಎಂದ ಸಚಿವ


 ಬೆಂಗಳೂರು: ಉದ್ಯೋಗ ಕೊಡಿಸುವ ಆಮಿಷವೊಡ್ಡಿ ಯುವತಿಯೊಬ್ಬಳನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡು ವಂಚಿಸಿದ ಆರೋಪದ ಮೇಲೆ ಜಲ ಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ವಿರುದ್ಧ ನಗರದ ಕಬ್ಬನ್ ಪಾರ್ಕ್ ಪೊಲೀಸ್‌ ಠಾಣೆಗೆ ಮಂಗಳವಾರ ದೂರು ಸಲ್ಲಿಕೆಯಾಗಿದೆ.

ಸಂತ್ರಸ್ತ ಯುವತಿಯ ಪರವಾಗಿ ದೂರು ಸಲ್ಲಿಸಿರುವ ನಾಗರಿಕ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ದಿನೇಶ್‌ ಕಲ್ಲಹಳ್ಳಿ, ಸಚಿವರು ಯುವತಿಯ ಜತೆ ಏಕಾಂತದಲ್ಲಿ ಇರುವ ವಿಡಿಯೊ ತುಣುಕುಗಳು, ಇಬ್ಬರ ನಡುವೆ ನಡೆದಿರುವ ದೂರವಾಣಿ ಸಂಭಾಷಣೆಯ ಆಡಿಯೊ ತುಣುಕುಗಳ ಸಿ.ಡಿಗಳನ್ನು ಸಲ್ಲಿಸಿದ್ದಾರೆ.

ದೂರು ದಾಖಲಾಗುತ್ತಿದ್ದಂತೆ ಸಚಿವರದ್ದು ಎನ್ನಲಾದ ವಿಡಿಯೊ, ಆಡಿಯೊತುಣುಕುಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಮೈಸೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ರಮೇಶ್‌ ಜಾರಕಿಹೊಳಿ, ಆರೋಪ ಹೊರಬೀಳುತ್ತಿದ್ದಂತೆ ಅಜ್ಞಾತವಾಗಿದ್ದರು. ರಾತ್ರಿ ಬೆಂಗಳೂರಿಗೆ ಮರಳಿದ್ದಾರೆ.

'ಉತ್ತರ ಕರ್ನಾಟಕ ಮೂಲದ ಬಡ ಕುಟುಂಬದ ಯುವತಿಯೊಬ್ಬರು ಕಿರುಚಿತ್ರವೊಂದರ ನಿರ್ಮಾಣಕ್ಕೆ ನೆರವು ಕೋರಿ ಸಚಿವ ರಮೇಶ್‌ ಜಾರಕಿಹೊಳಿ ಅವರನ್ನು ಭೇಟಿಮಾಡಿದ್ದರು. ನಿನಗೆ ಕೆ‍ಪಿಟಿಸಿಎಲ್‌ನಲ್ಲಿ ಉದ್ಯೋಗ ಕೊಡಿಸುತ್ತೇನೆ ಎಂದು ಭರವಸೆ ನೀಡಿದ್ದರು. ಬಳಿಕ ಕಾಮತೃಷೆಗಾಗಿ ಬಳಸಿಕೊಂಡಿದ್ದು, ವಂಚಿಸಿದ್ದಾರೆ' ಎಂದು ದಿನೇಶ್‌ ಕಲ್ಲಹಳ್ಳಿ ದೂರಿನಲ್ಲಿ ಆರೋಪಿಸಿದ್ದಾರೆ.

'ಸಚಿವರ ಜತೆಗಿರುವುದನ್ನು ಸಂತ್ರಸ್ತ ಯುವತಿ ವಿಡಿಯೊ ರೆಕಾರ್ಡ್‌ ಮಾಡಿಕೊಂಡಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ರಮೇಶ್ ಜಾರಕಿಹೊಳಿ ಅವರು ಯುವತಿಯ ಕುಟುಂಬಕ್ಕೆ ಜೀವ ಬೆದರಿಕೆ ಒಡ್ಡಿದ್ದರು. ಬಳಿಕ ನನ್ನನ್ನು ಸಂಪರ್ಕಿಸಿದ ಯುವತಿಯ ಕುಟುಂಬದವರು, ವಿಡಿಯೊ ಮತ್ತು ಆಡಿಯೊ ಸಿ.ಡಿಗಳನ್ನು ನೀಡಿದ್ದರು. ಅವುಗಳ ಸತ್ಯಾಸತ್ಯತೆ ಪರಿಶೀಲಿಸಿ, ಸಚಿವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಬೇಕು. ಸಂತ್ರಸ್ತ ಯುವತಿ ರಕ್ಷಣೆಗೆ ಮುಂದಾಗಬೇಕು' ಎಂದು ದೂರಿನಲ್ಲಿ ಕೋರಿದ್ದಾರೆ.

ದಿನೇಶ್‌ ಕಲ್ಲಹಳ್ಳಿ ಅವರು ವಿಡಿಯೊ, ಆಡಿಯೊ ತುಣುಕುಗಳು ಮತ್ತು ದೂರಿನ ಪ್ರತಿಯೊಂದಿಗೆ ಮಂಗಳವಾರ ಸಂಜೆ ನಗರ ಪೊಲೀಸ್‌ ಕಮಿಷನರ್‌ ಕಚೇರಿಗೆ ಹೋಗಿದ್ದರು. ಕಮಿಷನರ್‌ ಕಮಲ್‌ ಪಂತ್‌ ಅವರಿಗೆ ನೇರವಾಗಿ ದೂರು ಸಲ್ಲಿಸಲು ಯತ್ನಿಸಿದರು. ಆದರೆ, ಕಬ್ಬನ್ ಪಾರ್ಕ್ ಪೊಲೀಸ್‌ ಠಾಣೆಯನ್ನು ಸಂಪರ್ಕಿಸುವಂತೆ ಕಮಿಷನರ್‌ ಸೂಚಿಸಿದರು. ಬಳಿಕ ಅಲ್ಲಿಗೆ ಬಂದ ದಿನೇಶ್‌, ಸಚಿವರ ವಿರುದ್ಧ ದೂರು ನೀಡಿದರು.

ದಿನೇಶ್‌ ಅವರಿಂದ ದೂರು ಸ್ವೀಕರಿಸಿದ ಕಬ್ಬನ್ ಪಾರ್ಕ್‌ ಠಾಣೆ ಪೊಲೀಸರು, ದಿನೇಶ್‌ ಅವರ ಹೇಳಿಕೆಯನ್ನು ವಿಡಿಯೊ ರೆಕಾರ್ಡ್ ಮಾಡಿಕೊಂಡರು. ಸಚಿವರು ಮತ್ತು ಯುವತಿಗೆ ಸಂಬಂಧಿಸಿದ ವಿಡಿಯೊ, ಆಡಿಯೊ ಸಿ.ಡಿಗಳು ಹೇಗೆ ಲಭ್ಯವಾದವು? ಯಾರು ತಲುಪಿಸಿದರು? ಸಂತ್ರಸ್ತರ ಬದಲು ದೂರು ನೀಡಲು ಬಂದಿದ್ದೇಕೆ? ಎಂಬ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಂಡಿದ್ದಾರೆ.

'ಸಂತ್ರಸ್ತೆ ಹೇಳಿಕೆ ನಂತರ ಕ್ರಮ: ಈ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ ಕೇಂದ್ರ ವಿಭಾಗದ ಡಿಸಿಪಿ ಎಂ.ಎನ್‌. ಅನುಚೇತ್‌, 'ದಿನೇಶ್ ಎಂಬುವವರು ಠಾಣೆಗೆ ಬಂದು ಒಂದು ದೂರು ನೀಡಿದ್ದಾರೆ. ತನಿಖೆ ಆರಂಭಿಸಲಾಗಿದ್ದು, ಸಂತ್ರಸ್ತೆ ಮತ್ತು ಅವರ ಕುಟುಂಬವನ್ನು ಸಂಪರ್ಕಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ' ಎಂದರು.

'ಸಚಿವರು ಬೆದರಿಕೆ ಒಡ್ಡಿದ್ದಾರೆ ಎಂದು ಸಂತ್ರಸ್ತೆ ಹಾಗೂ ಅವರ ಕುಟುಂಬದವರು ತಮಗೆ ತಿಳಿಸಿದ್ದಾರೆ ಎಂದು ದೂರುದಾರರು ತಿಳಿಸಿದ್ದಾರೆ. ಸಂತ್ರಸ್ತೆ ಮತ್ತು ಅವರ ಕುಟುಂಬದವರಿಂದ ಹೆಚ್ಚಿನ ವಿವರ ಪಡೆಯಬೇಕಿದೆ. ನಾವೇ ಅವರನ್ನು ಸಂಪರ್ಕಿಸಿ, ಮಾಹಿತಿ ಪಡೆದು ಕ್ರಮ ಜರುಗಿಸುತ್ತೇವೆ' ಎಂದು ತಿಳಿಸಿದರು.

ಸಚಿವರೊಂದಿಗೆ ಸಿಎಂ ಸಭೆ: ರಮೇಶ ಜಾರಕಿಹೊಳಿ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬರುತ್ತಿದ್ದಂತೆಯೇ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೇರಿದಂತೆ ಕೆಲವು ಪ್ರಮುಖ ಸಚಿವರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡು ಚರ್ಚಿಸಿದರು. ಬುಧವಾರ ಸಚಿವ ಸಂಪುಟ ಸಭೆ ನಿಗದಿಯಾಗಿದ್ದು,ಈ ವಿಷಯ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ.

ಹೈಕಮಾಂಡ್‌ ತಲುಪಿದ ಆರೋಪ: ಸಚಿವ ರಮೇಶ ಜಾರಕಿಹೊಳಿ ವಿರುದ್ಧದ ಆರೋಪ ಬಿಜೆಪಿ ವರಿಷ್ಠರನ್ನೂ ತಲುಪಿದೆ. ಯಡಿಯೂರಪ್ಪ ಅವರ ಸಂಪುಟದ ಸದಸ್ಯರೊಬ್ಬರು ಜಲ ಸಂಪನ್ಮೂಲ ಸಚಿವರಿಗೆ ಸಂಬಂಧಿಸಿದ ವಿಡಿಯೊ, ಆಡಿಯೊ ಸಿ.ಡಿಗಳನ್ನು ವರಿಷ್ಠರಿಗೆ ತಲುಪಿಸಿದ್ದಾರೆ ಎಂಬ ಸುದ್ದಿ ಪಕ್ಷದ ವಲಯದಲ್ಲಿ ದಟ್ಟವಾಗಿದೆ.

ಪ್ರಕರಣದ ಕುರಿತು ಹುಬ್ಬಳ್ಳಿಯಲ್ಲಿ ಮಂಗಳವಾರ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, 'ರಮೇಶ್‌ ಜಾರಕಿಹೊಳಿ ವಿರುದ್ಧ ಆರೋಪ ಕೇಳಿಬಂದಿರುವುದು ವರಿಷ್ಠರ ಗಮನಕ್ಕೂ ಬಂದಿದೆ. ಈ ಕುರಿತು ಪರಿಶೀಲನೆ ನಡೆಸಿ, ಸೂಕ್ತ ತೀರ್ಮಾನಕ್ಕೆ ಬರುತ್ತಾರೆ' ಎಂದರು.

ಹಾಲಪ್ಪ, ಮೇಟಿ ಪ್ರಕರಣಗಳ ನೆನಪು: 2010ರಲ್ಲಿ ಯಡಿಯೂರಪ್ಪ ಸಂಪುಟದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾಗಿದ್ದ ಹರತಾಳು ಹಾಲಪ್ಪ ವಿರುದ್ಧ ಮಹಿಳೆಯೊಬ್ಬರನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡ ಆರೋಪ ಕೇಳಿಬಂದಿತ್ತು. ತಕ್ಷಣವೇ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ, ಈ ಪ್ರಕರಣದಲ್ಲಿ ನ್ಯಾಯಾಲಯವು ಅವರನ್ನು ಆರೋಪದಿಂದ ಮುಕ್ತಗೊಳಿಸಿದೆ.

2016 ರಲ್ಲಿ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಅಬಕಾರಿ ಸಚಿವರಾಗಿದ್ದ ಎಚ್‌.ವೈ. ಮೇಟಿ ಅವರ ವಿರುದ್ಧವೂ ಇಂತಹದ್ದೇ ಆರೋಪ ಕೇಳಿಬಂದಿತ್ತು. ಆಗಲೂ, ಅವರಿಂದ ರಾಜೀನಾಮೆ ಪಡೆಯಲಾಗಿತ್ತು.

ಸಿದ್ದರಾಮಯ್ಯ ನಿವಾಸದಲ್ಲೂ ಸಭೆ: ರಮೇಶ ಜಾರಕಿಹೊಳಿ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನಿವಾಸದಲ್ಲೂ ಮಂಗಳವಾರ ರಾತ್ರಿ ತುರ್ತು ಸಭೆ ನಡೆಸಿ, ಚರ್ಚಿಸಲಾಗಿದೆ. ಸಿದ್ದರಾಮಯ್ಯ ನಿವಾಸಕ್ಕೆ ದೌಡಾಯಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಜಾರಕಿಹೊಳಿ ಪ್ರಕರಣದ ಕುರಿತು ಚರ್ಚಿಸಿದರು. ಶಾಸಕ ಜಮೀರ್‌ ಅಹಮ್ಮದ್ ಖಾನ್‌, ವಿಧಾನ ಪರಿಷತ್‌ ಸದಸ್ಯ ನಜೀರ್‌ ಅಹಮ್ಮದ್ ಕೂಡ ಇದ್ದರು.

ಸಚಿವರ ವಜಾಕ್ಕೆ ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ: 'ಕೆಲಸದ ಆಮಿಷವೊಡ್ಡಿ ಯುವತಿಯನ್ನು ಲೈಂಗಿಕವಾಗಿ ಬಳಸಿಕೊಂಡಿರುವ ರಮೇಶ ಜಾರಕಿಹೊಳಿ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು' ಎಂದು ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಸಂಜೆ ಪ್ರತಿಭಟನೆ ನಡೆಸಿದರು.

ಆನಂದರಾವ್ ವೃತ್ತದಲ್ಲಿರುವ ಕಾಂಗ್ರೆಸ್ ಕಚೇರಿ ಎದುರು ಸೇರಿದ್ದ ಕಾರ್ಯಕರ್ತರು, ರಮೇಶ ಜಾರಕಿಹೊಳಿ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು ಆಕ್ರೋಶ ವ್ಯಕ್ತಪಡಿಸಿದರು.

'ಅಮಾಯಕ ಹೆಣ್ಣು ಮಕ್ಕಳ ಜೀವನ ಹಾಳು ಮಾಡುತ್ತಿರುವ ಇಂಥವರೇ ಬಿಜೆಪಿ ಪಕ್ಷದಲ್ಲಿ ಹೆಚ್ಚಿದ್ದಾರೆ. ಈ ಬಗ್ಗೆ ನಾಯಕರು ಕೂಡಲೇ ಮಾತನಾಡಬೇಕು. ಜಾರಕಿಹೊಳಿ ಅವರನ್ನು ವಜಾ ಮಾಡದಿದ್ದರೆ, ಮುಖ್ಯಮಂತ್ರಿ ಕಚೇರಿ ಎದುರು ಧರಣಿ ಆರಂಭಿಸಲಾಗುವುದು' ಎಂದು ಪ್ರತಿಭಟನಕಾರರು ಎಚ್ಚರಿಕೆ ನೀಡಿದರು.

'ರಾಜೀನಾಮೆ ಕೊಡುವುದಿಲ್ಲ': 'ನಾನು ಯಾವುದೇ ತಪ್ಪು ಮಾಡಿಲ್ಲ. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ. ಸಮಗ್ರ ತನಿಖೆ ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಆಗ್ರಹಿಸುತ್ತೇನೆ' ಎಂದು ಸಚಿವ ರಮೇಶ್‌ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ. ರಾತ್ರಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, 'ಬುಧವಾರವೇ ದೆಹಲಿಗೆ ಹೋಗುತ್ತೇನೆ. ವಿಡಿಯೊದಲ್ಲಿರುವುದು ನಾನಲ್ಲ. ವಿಡಿಯೊವನ್ನು ಎಡಿಟ್‌ ಮಾಡಿ ನನ್ನ ಮುಖವನ್ನು ಸೇರಿಸಿದ್ದಾರೆ. ಎಲ್ಲವನ್ನೂ ವರಿಷ್ಠರಿಗೆ ಮನವರಿಕೆ ಮಾಡುವೆ' ಎಂದರು.

(ಮಾಹಿತಿ ಕೃಪೆ ಪ್ರಜಾವಾಣಿ)

ಸಾರಿಗೆ ಬಸ್ ಸಮಸ್ಯೆ; ಶಾಲೆಗಾಗಿ ನಿತ್ಯ 7 ಕಿ.ಮೀ 'ಪಾದಯಾತ್ರೆ'


 ಮಾನ್ವಿ (ರಾಯಚೂರು ಜಿಲ್ಲೆ): ತಾಲ್ಲೂಕಿನ ಕಪಗಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊಮ್ಮನಾಳ ಗ್ರಾಮದ ಮಕ್ಕಳು ಶಾಲೆಗಾಗಿ ನಿತ್ಯ 7 ಕಿ.ಮೀ ನಡೆದೇ ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಬೊಮ್ಮನಾಳ ಗ್ರಾಮದ 30ಕ್ಕೂ ಅಧಿಕ ಮಕ್ಕಳು ಪಕ್ಕದ ಮಾಚನೂರು ಗ್ರಾಮದ ಸರ್ಕಾರಿ ಹಿರಿಯ
ಪ್ರಾಥಮಿಕ ಶಾಲೆ ಹಾಗೂ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಮಾಚನೂರು ಗ್ರಾಮದಲ್ಲಿ ಶಾಲೆ ಆರಂಭವಾಗುವ ವೇಳೆ ಮತ್ತು ಶಾಲೆ ಬಿಡುವ ಸಮಯಕ್ಕೆ ಸಾರಿಗೆ ಬಸ್
ವ್ಯವಸ್ಥೆ ಇಲ್ಲ. ಹೀಗಾಗಿ ಬೊಮ್ಮನಾಳ ಗ್ರಾಮದ ಎಲ್ಲಾ ವಿದ್ಯಾರ್ಥಿಗಳು ನಿತ್ಯ ನಡೆದು ಹೋಗಿ ಬರಬೇಕಾಗಿದೆ.

ಬೊಮ್ಮನಾಳ, ಮಾಚನೂರು, ಬೇವಿನೂರು, ತುಪ್ಪದೂರು ಗ್ರಾಮಗಳ ಕಾಲೇಜು ವಿದ್ಯಾರ್ಥಿಗಳು ಮಾಚನೂರು ಗ್ರಾಮದಿಂದ ಮಾನ್ವಿ ಪಟ್ಟಣಕ್ಕೆ ತೆರಳಲು ಬೆಳಿಗ್ಗೆ ಒಂದು ಬಸ್ ಸಂಚರಿಸುತ್ತಿದೆ. ಆದರೆ, ಬೊಮ್ಮನಾಳ ಸೇರಿ ಈ ಭಾಗದ ಇತರ ಗ್ರಾಮಗಳ ಕಾಲೇಜು ವಿದ್ಯಾರ್ಥಿಗಳು ಜಿಲ್ಲಾ ಕೇಂದ್ರಕ್ಕೆ ತೆರಳಲು ನಿಗದಿತ ಸಮಯಕ್ಕೆ ಬಸ್ ಸಂಚಾರ ಇಲ್ಲ.

ಮಾನ್ವಿ-ರಾಯಚೂರು ಮಾರ್ಗದಲ್ಲಿ ಬರುವ ಬೊಮ್ಮನಾಳ ಕ್ರಾಸ್ ಹತ್ತಿರ ಸಾರಿಗೆ ಬಸ್‍ಗಳನ್ನು ನಿಲ್ಲಿಸುವುದಿಲ್ಲ. ನೇರ ಬಸ್ ಸೌಲಭ್ಯ ಇಲ್ಲದ ಕಾರಣ ಬೊಮ್ಮನಾಳ ಗ್ರಾಮದ ಕಾಲೇಜು ವಿದ್ಯಾರ್ಥಿಗಳಿಗೆ ರಾಯಚೂರಿನಿಂದ ಕುರ್ಡಿ ಕ್ರಾಸ್‍ನವರೆಗೆ ಬಸ್ ಪಾಸ್ ನೀಡಲಾಗಿದೆ. ವಿದ್ಯಾರ್ಥಿಗಳು ಪ್ರತಿ ದಿನ ಬೊಮ್ಮನಾಳ ಕ್ರಾಸ್‍ನಿಂದ ಕುರ್ಡಿ ಕ್ರಾಸ್‍ವರೆಗೆ ನಡೆದು ಹೋಗಬೇಕು ಅಥವಾ ಆಟೊ, ಟಂಟಂ ವಾಹನಗಳಲ್ಲಿ ಹಣ ಕೊಟ್ಟು ಸಂಚರಿಸಬೇಕಾದ ಪರಿಸ್ಥಿತಿ ಇದೆ.

ಪ್ರತಿ ದಿನ ಬೆಳಿಗ್ಗೆ 10ಗಂಟೆಯ ನಂತರ ಮಾನ್ವಿಯಿಂದ ಬೊಮ್ಮನಾಳ ಮಾರ್ಗವಾಗಿ ಒಂದು ಬಸ್ ಸಂಚರಿ
ಸುತ್ತದೆ. ಶಾಲಾ ಸಮಯಕ್ಕೆ ಸರಿಯಾಗಿ ಈ ಬಸ್ ಬಂದರೆ ವಿದ್ಯಾರ್ಥಿಗಳಿಗೆ ಅನುಕೂಲ ಎನ್ನುತ್ತಾರೆ ಗ್ರಾಮಸ್ಥರು.

'ಸಾರಿಗೆ ಬಸ್ ಕೊರತೆಯಿಂದ ಬೊಮ್ಮನಾಳ-ಮಾಚನೂರು ಭಾಗದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ನಿತ್ಯ ತೊಂದರೆಯಾಗುತ್ತಿದೆ. ಈ ಭಾಗಕ್ಕೆ ಹೆಚ್ಚುವರಿ ಬಸ್‍ಗಳ ಸೌಲಭ್ಯ ಕಲ್ಪಿಸಬೇಕು' ಎಂದು ಮಾಚನೂರು ಗ್ರಾ.ಪಂ ಸದಸ್ಯ ಅಂಬಣ್ಣ ಕಡದೊಡ್ಡಿ ಒತ್ತಾಯಿಸಿದ್ದಾರೆ.

***

ಗ್ರಾಮೀಣ ಭಾಗದ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಮರ್ಪಕ ಬಸ್ ಸೌಲಭ್ಯ ಒದಗಿಸಲು ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು.

- ನಾಗನಗೌಡ ಬೊಮ್ಮನಾಳ, ಅಧ್ಯಕ್ಷ, ಗ್ರಾಮ ಪಂಚಾಯಿತಿ ಕಪಗಲ್

***

ಬೊಮ್ಮನಾಳ-ಮಾಚನೂರು ಭಾಗದಲ್ಲಿ ಹೆಚ್ಚಿನ ಬಸ್‍ಗಳ ಸೌಲಭ್ಯ ಕಲ್ಪಿಸಲು ಸಾರಿಗೆ ಸಂಸ್ಥೆಯ ಮೇಲಧಿಕಾರಿಗಳ ಜತೆ ಚರ್ಚಿಸಲಾಗುವುದು.

- ಹನುಮಂತ್ರಾಯ, ಸಾರಿಗೆ ನಿರೀಕ್ಷಕ, ಮಾನ್ವಿ ಘಟಕ

(ಮಾಹಿತಿ ಕೃಪೆ ಪ್ರಜಾವಾಣಿ

Monday, March 1, 2021

ಇಂದಿನಿಂದ Covid-19 ಲಸಿಕೆ ನೋಂದಣಿ ಶುರು: Online ಅಪ್ಲಿಕೇಶನ್‌ನಲ್ಲಿ ನೋಂದಾಯಿಸಿಕೊಳ್ಳಿ

 

ಭಾರತದಲ್ಲಿ ಇಂದಿನಿಂದ CoWin ಮತ್ತು Aarogya Setu ಅಪ್ಲಿಕೇಶನ್ಗಳ ಮೂಲಕ ದೇಶದ ನಾಗರಿಕರು ಯಾವುದೇ ಸಮಯದಲ್ಲಿ ಮತ್ತು ಎಲ್ಲಿಯಾದರೂ ಕೊರೊನಾವೈರಸ್ ಲಸಿಕೆಗಾಗಿ ನೋಂದಾಯಿಸಲು ಮತ್ತು ಕಾಯ್ದಿರಿಸಲು ಸಾಧ್ಯ. ಈ ನೋಂದಣಿ 1ನೇ ಮಾರ್ಚ್ 2021 ಬೆಳಿಗ್ಗೆ 9 ಗಂಟೆಗೆ www.cowin.gov.in ನಲ್ಲಿ ತೆರೆಯಲಾಗಿದೆ. ಸ್ಲಾಟ್ಗಳನ್ನು ತೆರೆಯುವ ದಿನದಂದು ಮಧ್ಯಾಹ್ನ 3 ಗಂಟೆಗೆ ನೇಮಕಾತಿಗಳನ್ನು ಮುಚ್ಚಲಾಗುತ್ತದೆ. ವ್ಯಾಕ್ಸಿನೇಷನ್ ಕೇಂದ್ರಗಳು ಬೆಳಿಗ್ಗೆ 9 ರಿಂದ ಮಧ್ಯಾಹ್ನ 3 ರವರೆಗೆ ತೆರೆದಿರುತ್ತವೆ.

ಈ ಹಂತದಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಜನರು ಮತ್ತು 45 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು ಕೊಮೊರ್ಬಿಡಿಟಿ ಹೊಂದಿರುವವರು 10000 ಕ್ಕೂ ಹೆಚ್ಚು ಸರ್ಕಾರಿ ವ್ಯಾಕ್ಸಿನೇಷನ್ ಕೇಂದ್ರಗಳಿಂದ ಕೋವಿಡ್ -19 ಲಸಿಕೆಗಳನ್ನು ಉಚಿತವಾಗಿ ಪಡೆಯಬಹುದು. ಭಾರತ ಮುಂದಿನ ಹಂತದ ವ್ಯಾಕ್ಸಿನೇಷನ್ಗಳನ್ನು ಪ್ರಾರಂಭಿಸುತ್ತಿದ್ದಂತೆ ನೀವು ಕೋ-ವಿನ್ ಪೋರ್ಟಲ್ನಲ್ಲಿ ಹೇಗೆ ನೋಂದಾಯಿಸಿಕೊಳ್ಳಬಹುದು ಎಂಬುದು ತಿಳಿಯಿರಿ.

CoWin Portal ಮೂಲಕ ನೋಂದಣಿ

  • ಮೊದಲು Cowin.gov.in ಗೆ ಲಾಗ್ ಇನ್ ಮಾಡಿ ಮತ್ತು ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
  • ಇದರ OMS ಅನ್ನು ನಿಮ್ಮ ಮೊಬೈಲ್ ಸಂಖ್ಯೆಗೆ SMS ಮೂಲಕ ಕಳುಹಿಸಲಾಗುತ್ತದೆ.
  • ಒಟಿಪಿ ನಮೂದಿಸಿ ಮತ್ತು "ಪರಿಶೀಲಿಸು" ಬಟನ್ ಕ್ಲಿಕ್ ಮಾಡಿ.
  • ಒಟಿಪಿ ಮೌಲ್ಯೀಕರಿಸಿದ ನಂತರ "ವ್ಯಾಕ್ಸಿನೇಷನ್ ನೋಂದಣಿ" ಪುಟವು ತೆರೆಯುತ್ತದೆ.
  • ನಿಮ್ಮ ಫೋಟೋ ಐಡಿ ಪ್ರೂಫ್ನಂತಹ "ವ್ಯಾಕ್ಸಿನೇಷನ್ ನೋಂದಣಿ" ಪುಟದಲ್ಲಿ ಅಗತ್ಯವಿರುವ ವಿವರಗಳನ್ನು ನಮೂದಿಸಿ.
  • ನೀವು ಯಾವುದೇ ಕೊಮೊರ್ಬಿಡಿಟಿಗಳನ್ನು ಹೊಂದಿದ್ದೀರಾ ಎಂದು ನಿಮ್ಮನ್ನು ಕೇಳಲಾಗುತ್ತದೆ. ಹೌದು / ಇಲ್ಲ ಎಂದು ಉತ್ತರಿಸಬಹುದು.
  • ನೋಂದಣಿಗಾಗಿ ವಿವರಗಳನ್ನು ನಮೂದಿಸಿದ ನಂತರ ಕೆಳಗಿನ ಬಲಭಾಗದಲ್ಲಿರುವ "ನೋಂದಣಿ" ಬಟನ್ ಕ್ಲಿಕ್ ಮಾಡಿ.
  • ಯಶಸ್ವಿ ನೋಂದಣಿಯಲ್ಲಿ ನೀವು ದೃಢೀಕರಣದ ಮೆಸೇಜ್ ಸಹ ಮೊಬೈಲ್ ಸಂಖ್ಯೆಯಲ್ಲಿ ಪಡೆಯುವಿರಿ.
  • ನೋಂದಣಿ ಮುಗಿದ ನಂತರ ನಿಮಗೆ "ಖಾತೆ ವಿವರಗಳು" ತೋರಿಸಲಾಗುತ್ತದೆ. ನಿಮ್ಮ ನೇಮಕಾತಿಯನ್ನು "ಖಾತೆ ವಿವರಗಳು" ಪುಟದಿಂದ ನೀವು ಬೇಕಿದ್ದರೆ ಪುನಃ ಸರಿಪಡಿಸಬವುದು.
  • ವೇಳಾಪಟ್ಟಿ ನೇಮಕಾತಿಯನ್ನು ಸೂಚಿಸುವ ಬಟನ್ ಇರುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ ಮತ್ತು ನಿಮ್ಮ ಅಪಾಯಿಂಟ್ಮೆಂಟ್ ಮತ್ತು ವಾಯ್ಲಾವನ್ನು ನಿಗದಿಪಡಿಸಿ ಅಷ್ಟೇ.
  • ಪುಟದ ಕೆಳಗಿನ ಬಲಭಾಗದಲ್ಲಿರುವ "ಇನ್ನಷ್ಟು ಸೇರಿಸಿ" ಗುಂಡಿಯನ್ನು ಕ್ಲಿಕ್ ಮಾಡುವುದರ ಮೂಲಕ ಈ ಮೊಬೈಲ್ ಸಂಖ್ಯೆಯೊಂದಿಗೆ ಲಿಂಕ್ ಮಾಡಲಾದ ಇನ್ನೂ ಮೂರು ಜನರನ್ನು ನೀವು ಸೇರಿಸಲು ಅವಕಾಶವಿರುತ್ತದೆ.
  • ಸೇರಿಸಬೇಕಾದ ವ್ಯಕ್ತಿಗಳ ಎಲ್ಲಾ ವಿವರಗಳನ್ನು ನಮೂದಿಸಿ ಮತ್ತು ನಂತರ "ಸೇರಿಸು" ಬಟನ್ ಕ್ಲಿಕ್ ಮಾಡಿ.

Aarogya Setu ಮೂಲಕ ನೋಂದಣಿ

ನಿಮ್ಮ ನೇಮಕಾತಿ ಅಥವಾ ವ್ಯಾಕ್ಸಿನೇಷನ್ ಅನ್ನು ಕಾಯ್ದಿರಿಸಲು ನೀವು ಆರೋಗ್ಯಾ ಸೆಟು ಅಪ್ಲಿಕೇಶನ್ ಅನ್ನು ಸಹ ಬಳಸಬಹುದು. ಪ್ರತ್ಯೇಕ ಟ್ಯಾಬ್ ಅನ್ನು ರಚಿಸಲಾಗಿದೆ ಅದು ನಿಮ್ಮ ಹೆಸರು ವಯಸ್ಸು ಮತ್ತು ಲೈಂಗಿಕತೆಯಂತಹ ಕೆಲವು ವಿವರಗಳನ್ನು ಭರ್ತಿ ಮಾಡಲು ಮತ್ತು ವ್ಯಾಕ್ಸಿನೇಷನ್ಗಾಗಿ ನಿಮ್ಮನ್ನು ನೋಂದಾಯಿಸಲು ಅನುವು ಮಾಡಿಕೊಡುತ್ತದೆ.

ರಾಷ್ಟ್ರವ್ಯಾಪಿ ಕರೋನವೈರಸ್ ವ್ಯಾಕ್ಸಿನೇಷನ್ ಕಾರ್ಯಕ್ರಮದ ಮುಂದಿನ ಹಂತವನ್ನು ಭಾರತ ಕಿಕ್ಸ್ಟಾರ್ಟ್ ಮಾಡಲು ಸಜ್ಜಾಗುತ್ತಿದ್ದಂತೆ ದೆಹಲಿಯ ಏಮ್ಸ್ನಲ್ಲಿ ಭಾರತ್ ಬಯೋಟೆಕ್ನ ಕೋವಾಕ್ಸಿನ್ ಅನ್ನು ನಿರ್ವಹಿಸಿದ ಮೊದಲ ನಾಗರಿಕ ಎಂಬ ಹೆಗ್ಗಳಿಕೆಗೆ ಪಿಎಂ ಮೋದಿ ಪಾತ್ರರಾದರು. ಕರೋನವೈರಸ್ ಲಸಿಕೆ ತೆಗೆದುಕೊಂಡು ಕೊರೋನವೈರಸ್ ಸೋಂಕಿನ ವಿರುದ್ಧ ಲಸಿಕೆ ಪಡೆಯಲು ಅರ್ಹರಿಗೆ ಮನವಿ ಮಾಡಿದೆ ಎಂದು ಪಿಎಂ ಮೋದಿ ಸೋಮವಾರ ಬೆಳಿಗ್ಗೆ ಟ್ವೀಟ್ ಮಾಡಿದ್ದಾರೆ.

(ಮಾಹಿತಿ ಕೃಪೆ Digit)

Debit Credit Card: ಆನ್​ಲೈನ್ ಶಾಪಿಂಗ್​ಗೆ ನೀವು ಕಾರ್ಡ್ ಬಳಸ್ತೀರಾ? ಮೋಸ ಆಗದಿರಲು ಹೀಗೆ ಮಾಡಿ

 

ಇತ್ತೀಚಿನ ದಿನಗಳಲ್ಲಿ ಡೆಬಿಟ್/ಕ್ರೆಡಿಟ್ ಕಾರ್ಡ್ ಬಳಕೆಯ ಪ್ರಮಾಣ ಗಣನೀಯವಾಗಿ ಹೆಚ್ಚಾಗುತ್ತಿದೆ. ಭಾರತದ ನಗರಗಳಲ್ಲಿ ಕ್ರೆಡಿಟ್ ಕಾರ್ಡ್ ಉಪಯೋಗಿಸುವವರ ಸಂಖ್ಯೆ ಏರಿಕೆಯಾಗುತ್ತಿದೆ. ಒಂದಕ್ಕಿಂತ ಹೆಚ್ಚು ಕ್ರೆಡಿಟ್ ಕಾರ್ಡ್​ಗಳನ್ನು ಜನರು ಬಳಸುತ್ತಿದ್ದಾರೆ. ಪರ್ಸ್ ತುಂಬಾ ಹಣ ಕೊಂಡೊಯ್ಯುವುದನ್ನು ತಪ್ಪಿಸಲು, ಹೆಚ್ಚು ಸುರಕ್ಷತೆಯ ದೃಷ್ಟಿಯಿಂದ ಜನರು ಹೆಚ್ಚುಹೆಚ್ಚು ಕ್ರೆಡಿಟ್ ಕಾರ್ಡ್ ಉಪಯೋಗಿಸುತ್ತಿದ್ದಾರೆ. ಆದರೆ, ಕ್ರೆಡಿಟ್ ಕಾರ್ಡ್ ಬಳಸುವವರ ಸಂಖ್ಯೆ ಹೆಚ್ಚುತ್ತಿದ್ದಂತೆ ಮತ್ತು ಒಂದಕ್ಕಿಂತ ಹೆಚ್ಚು ಕ್ರೆಡಿಟ್ ಕಾರ್ಡ್ ಬಳಸುವವರ ಸಂಖ್ಯೆ ಹೆಚ್ಚಾದಂತೆ ಸೈಬರ್ ಕ್ರೈಮ್ ಪ್ರಕರಣಗಳ ಸಂಖ್ಯೆಯೂ ಏರಿಕೆಯಾಗುತ್ತಿದೆ.

ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ನೀಡಿರುವ ಮಾಹಿತಿಯಂತೆ, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಮತ್ತು ಇಂಟರ್ನೆಟ್ ಬ್ಯಾಂಕಿಂಗ್​ಗೆ ಸಂಬಂಧಿಸಿದಂತೆ 2020ರ ಆರ್ಥಿಕ ವರ್ಷದಲ್ಲಿ ಸುಮಾರು 50,000ಕ್ಕೂ ಹೆಚ್ಚು ವಂಚನೆ ಪ್ರಕರಣಗಳು ದಾಖಲಾಗಿವೆ. ಇತ್ತೀಚೆಗೆ ಅಂಧೇರಿ ಮೂಲದ ನವೋದ್ಯಮಿ ರೂ. 50,000 ಮೋಸಕ್ಕೊಳಗಾಗಿದ್ದರು. ಕರ್ನಾಟಕ ರಾಜ್ಯದಲ್ಲಿಯೂ ಇಂಥ ಹತ್ತು ಹಲವು ಪ್ರಕರಣಗಳು ದಾಖಲಾಗಿವೆ. ಕೇಜ್ರೀವಾಲ್ ಪುತ್ರಿ OLX ವ್ಯವಹಾರದಲ್ಲಿ ಮೋಸ ಹೋಗಿರುವುದನ್ನು ಕೂಡ ನಾವಿಲ್ಲಿ ಸ್ಮರಿಸಬಹುದು. ಇಂಥ ಘಟನಾವಳಿಗಳಿಂದ ರಕ್ಷಣೆ ಪಡೆಯಲು, ನಮ್ಮ ವ್ಯವಹಾರವನ್ನು ಸುರಕ್ಷಿತವಾಗಿರಿಸಲು 5 ವಿಧಾನಗಳನ್ನು ಇಲ್ಲಿ ನೀಡಲಾಗಿದೆ.

1) ಆಯ್ದ ವೆಬ್​ಸೈಟ್​ಗಳಿಂದ ಮಾತ್ರ ಶಾಪಿಂಗ್ ಮಾಡಿ
ಆನ್​ಲೈನ್ ಶಾಪಿಂಗ್ ಮಾಡುವವರ ಪ್ರಮಾಣ ಹೆಚ್ಚಾಗುತ್ತಿದೆ. ಕ್ರೆಡಿಟ್ ಕಾರ್ಡ್ ಹೊಂದಿರುವವರು ನಿಗದಿತ ರಿಯಾಯಿತಿ, EMI ಅವಕಾಶಗಳು ಪಡೆದು ಆನ್​ಲೈನ್ ವೇದಿಕೆಯಲ್ಲಿ ವಸ್ತುಗಳನ್ನು ಖರೀದಿಸುತ್ತಿದ್ದಾರೆ. ವೆಬ್​ಸೈಟ್ ಮೂಲಕ ಶಾಪಿಂಗ್ ಮಾಡುವಾಗ ಆ ವೆಬ್​ಸೈಟ್​ನೊಂದಿಗೆ ಸಂಪರ್ಕ ಸಾಧಿಸುವುದು ಸುರಕ್ಷಿತವೇ ಎಂದು ಮೊದಲು ಖಚಿತಪಡಿಸಿಕೊಳ್ಳಿ. ವೆಬ್​ಸೈಟ್​ನ ಅಡ್ರೆಸ್ http:// ಎಂದು ಆರಂಭವಾಗಿದ್ದರೆ ಅಂಥ ವೆಬ್​ಸೈಟ್​ಗಳ ಬಗ್ಗೆ ಎಚ್ಚರವಾಗಿರಿ. https:// ಎಂದು ಅಡ್ರೆಸ್ ಶುರುವಾಗಿದ್ದರೆ ಅವುಗಳನ್ನು ನಂಬಬಹುದು. ವೆಬ್​ಸೈಟ್​ನ ಸುರಕ್ಷತೆ ಪರಿಶೀಲಿಸಲು ಡಿಜಿಟಲ್ ಸರ್ಟಿಫಿಕೇಟ್​ಗಳು ಇರುವ ಬಗ್ಗೆ ಖಚಿತಪಡಿಸಿಕೊಳ್ಳಬಹುದು.

2) ಸಾರ್ವಜನಿಕ ಸಾಧನ, ನೆಟ್​ವರ್ಕ್ ಬಳಸುವುದು ಕಡಿಮೆ ಮಾಡಿ
ಯಾವುದೇ ವಿಧದಲ್ಲಿ ಆನ್​ಲೈನ್​ ಹಣಕಾಸು ವಹಿವಾಟು ನಡೆಸುವಾಗ ಸಾರ್ವಜನಿಕ ಸಾಧನಗಳನ್ನು ಅಥವಾ ನೆಟ್​ವರ್ಕ್ ಬಳಸುವುದು ಕಡಿಮೆ ಮಾಡಿ. ಯಾವತ್ತೂ ಹಣದ ವಹಿವಾಟನ್ನು ಪಾಸ್​ವರ್ಡ್ ಇರುವ ಖಾಸಗಿ ಲ್ಯಾಪ್​ಟಾಪ್, ಮೊಬೈಲ್​ಗಳಲ್ಲಿ ನಡೆಸಿ. ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ವಿವರಗಳನ್ನು ಸಾರ್ವಜನಿಕ ಸಾಧನಗಳಲ್ಲಿ ನೀಡಬೇಡಿ. ವೈಫೈ ಬಳಸುವುದಿದ್ದರೆ ಸೆಕ್ಯೂರ್ಡ್ ವೈಫೈ ಬಳಸಿ.

3) ಕ್ಯಾಶ್ ಆನ್ ಡೆಲಿವರಿ ಬಳಸುವುದು ಉತ್ತಮ
ಕ್ಯಾಶ್ ಆನ್ ಡೆಲಿವರಿ ಆಯ್ಕೆ ಬಳಸುವುದರ ಬಗ್ಗೆ ಹಲವರು ಉದಾಸೀನ ವ್ಯಕ್ತಪಡಿಸುತ್ತಾರೆ. ಡಿಜಿಟಲ್ ಪೇಮೆಂಟ್ ವಿಧಾನ ದೊಡ್ಡದು, ಕ್ಯಾಶ್ ಆನ್ ಡೆಲಿವರಿ ಬಳಸುವುದು ಸಣ್ಣತನ ಎಂಬ ಭಾವ ಇತ್ತೀಚಿನ ಜನರಲ್ಲಿ ಹೆಚ್ಚಾಗಿದೆ. ಜತೆಗೆ, ATMನಿಂದ ಹಣ ಡ್ರಾ ಮಾಡಿಕೊಳ್ಳಲು ಕೂಡ ಜನರು ಆಲಸ್ಯ ತೋರುತ್ತಾರೆ. ಆದರೆ, ಯಾವುದೇ ಆನ್​ಲೈನ್ ಶಾಪಿಂಗ್ ನಡೆಸುವಾಗ ಕ್ಯಾಶ್ ಆನ್ ಡೆಲಿವರಿ ಆಯ್ಕೆ ಆರಿಸಿಕೊಳ್ಳುವುದು ಸುರಕ್ಷಿತ.

4) ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ವಿವರಗಳನ್ನು ಸೇವ್ ಮಾಡಿಡಬೇಡಿ
ಕಾರ್ಡ್ ಮತ್ತು ಖಾತೆಯ ವಿವರಗಳನ್ನು ವೇಗವಾಗಿ ನೋಡಲು ಜನರು ಅವುಗಳ ಪಾಸ್​ವರ್ಡ್ ಮತ್ತಿತರ ವಿಷಯಗಳನ್ನು ಸೇವ್ ಮಾಡಿಟ್ಟುಕೊಳ್ಳುತ್ತಾರೆ. ಶಾಪಿಂಗ್ ಸೈಟ್​ಗಳಲ್ಲಿ ಕೂಡ ಮುಖ್ಯ ವಿವರಗಳನ್ನು ಮರೆತುಹೋಗುತ್ತದೆ ಎಂಬ ಕಾರಣಕ್ಕೆ ಸೇವ್ ಮಾಡಿ ಇಡುತ್ತಾರೆ. ಆದರೆ, ಹಾಗೆ ಸೇವ್ ಮಾಡಿಡುವುದು ಒಳ್ಳೆಯದಲ್ಲ. ಯಾವುದೇ ಸಂದರ್ಭ ಹಣ ವಹಿವಾಟು ಮಾಡಬೇಕಾದರೆ ಖುದ್ದಾಗಿ, ಹೊಸದಾಗಿ ಮತ್ತೆ ಪಾಸ್​ವರ್ಡ್ ಇತರ ವಿವರಗಳನ್ನು ನಮೂದಿಸಿ.

5) ಕಾರ್ಡ್ ಲಾಕ್ ಮಾಡಿಟ್ಟುಕೊಳ್ಳಿ
ನಿಮ್ಮ ಕ್ರೆಡಿಟ್ ಕಾರ್ಡ್ ಕಳವಾಗಬಹುದು ಅಥವಾ ಕಾಣೆಯಾಗಬಹುದು. ಇಂಥಾ ಸಂದರ್ಭದಲ್ಲಿ ಮೊದಲು ಮಾಡಬೇಕಾದ ಕೆಲಸ ಎಂದರೆ ಕಾರ್ಡ್​ನ್ನು ಲಾಕ್ ಮಾಡುವುದು. ನಾವು ಸಂಬಂಧಪಟ್ಟ ಬ್ಯಾಂಕ್​ಗೆ ಕರೆ ಮಾಡುವುದರ ಮುಖೇನ ಕಳೆದುಹೋದ ಕಾರ್ಡ್ ಯಾವುದೇ ರೀತಿಯಲ್ಲಿ ದುರ್ಬಳಕೆ ಆಗದಂತೆ ಬ್ಲಾಕ್ ಮಾಡಿಕೊಳ್ಳಬಹುದು. ಬಳಿಕ, ಕಾರ್ಡ್ ಸ್ಟೇಟ್​ಮೆಂಟ್ ಮೇಲೆ ಒಂದು ಕಣ್ಣಿಟ್ಟುಕೊಳ್ಳಬಹುದು. ಯಾವುದೇ ವಿಧದ ಅಕ್ರಮ ವ್ಯವಹಾರ ಕಂಡುಬಂದರೆ ಕೂಡಲೇ ಬ್ಯಾಂಕ್​ಗೆ ಸೂಚನೆ ನೀಡಬಹುದು.

(ಮಾಹಿತಿ ಕೃಪೆ TV9 ಕನ್ನಡ)

ಸಕ್ಕರೆ ಕಾಯಿಲೆ ಇರುವವರು ತಿನ್ನಲೇಬೇಕಾದ ಆಹಾರಗಳು ಯಾವುವು ಗೊತ್ತೇ?

 

ಮಧುಮೇಹವು ಇದೀಗ ಜೀವನಶೈಲಿಯ ಪ್ರಮುಖ ಸಮಸ್ಯೆಗಳಲ್ಲಿ ಒಂದಾಗಿದೆ. ರಕ್ತದಲ್ಲಿನ ಸಕ್ಕರೆ ಪ್ರಮಾಣ ತುಂಬಾ ಹೆಚ್ಚಾಗಲು ಕಾರಣವಾಗುವ ಈ ಸಮಸ್ಯೆಯು ದೇಹದ ವಿವಿಧ ಅಂಗಗಳಿಗೆ ಹಾನಿಯಾಗಬಹುದು. ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚುತ್ತಲೇ ಇರುವುದರಿಂದ ಕಡಿಮೆ ಇನ್ಸುಲಿನ್ ಬಿಡುಗಡೆಯು ಈ ಸಮಸ್ಯೆಗೆ ಮುಖ್ಯ ಕಾರಣವಾಗಿದೆ. ನಮ್ಮ ಸಕ್ಕರೆ ಮಟ್ಟವು ಏರಿಕೆಯಾಗಲು ಪ್ರಾರಂಭಿಸಿದ ನಂತರ ನಾವು ನಮ್ಮ ಜೀವನಶೈಲಿಯನ್ನು ಬದಲಾಯಿಸಬೇಕಾಗಿದೆ. ಆಗಾಗ್ಗೆ ಮೂತ್ರ ವಿಸರ್ಜನೆ, ತೂಕ ನಷ್ಟ, ದೃಷ್ಟಿ ತೊಂದರೆ, ಆಯಾಸ, ಹಸಿವು ಮತ್ತು ಬಾಯಾರಿಕೆ ನಿಮ್ಮಲ್ಲಿ ಮಧುಮೇಹ ಪ್ರಾರಂಭವಾಗಿದೆ ಎಂಬ ಸೂಚನೆಗಳು.

ಮಧುಮೇಹ ಇರುವವರಿಗೆ ಹೃದಯಾಘಾತ, ಮೂತ್ರಪಿಂಡದ ತೊಂದರೆ, ಖಿನ್ನತೆ ಮತ್ತು ಚರ್ಮದ ತೊಂದರೆಗಳು ಹೆಚ್ಚಾಗಿರುತ್ತವೆ. ಅದಕ್ಕಾಗಿಯೇ ನಾವು ಇವುಗಳ ಬಗ್ಗೆ ಜಾಗರೂಕರಾಗಿರಬೇಕು. ಎಷ್ಟೇ ಕಾಳಜಿಯನ್ನು ತೆಗೆದುಕೊಂಡರೂ ಔಷಧಿಗಳನ್ನು ಬಳಸಿದರೂ ನಮ್ಮ ಜೀವನಶೈಲಿಯನ್ನು ಬದಲಾಯಿಸದ ಹೊರತು ಮಧುಮೇಹವನ್ನು ನಿಯಂತ್ರಣದಲ್ಲಿಡುವುದು ಸ್ವಲ್ಪ ಕಷ್ಟ . ಮಧುಮೇಹ ಇರುವವರು ತಿನ್ನಲೇಬೇಕಾದ ಕೆಲವು ಆಹಾರಗಳ ಬಗ್ಗೆ ತಿಳಿದುಕೊಳ್ಳೋಣ. ಈ ಆಹಾರಗಳು ಅವರ ಮಧುಮೇಹವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.  ಟೊಮ್ಯಾಟೋ

ನಾವು ಕೆಂಪು ಟೊಮೆಟೊಗಳನ್ನು ಸಾರು,ಪಲ್ಯಗೆ ಬಳಸುತ್ತೇವೆ‌ . ಇದರಲ್ಲಿ ಲೈಕೋಪೀನ್ ಅಧಿಕವಾಗಿರುತ್ತದೆ. ಮಧುಮೇಹ ಮತ್ತು ಇತರ ದೀರ್ಘಕಾಲೀನ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುವ ಶಕ್ತಿಯನ್ನು ಇದು ಹೊಂದಿದೆ. ಅವರ ಗ್ಲೈಸೆಮಿಕ್ ಸೂಚ್ಯಂಕವೂ ತುಂಬಾ ಕಡಿಮೆ. ಇದು ಕಾರ್ಬೋಹೈಡ್ರೇಟ್‌ಗಳಲ್ಲೂ ಕಡಿಮೆ ಇರುವುದರಿಂದ ಮಧುಮೇಹರಲ್ಲದವರಿಗೂ ಇದು ಉತ್ತಮ ಆಹಾರವಾಗಿದೆ.

ಕಿತ್ತಳೆ

ಕಿತ್ತಳೆ ಸಿಟ್ರಸ್ ಕುಟುಂಬಕ್ಕೆ ಸೇರಿದೆ. ಇದರಲ್ಲಿ ಫೈಬರ್ ಅಧಿಕವಾಗಿರುತ್ತದೆ. ರಸವನ್ನು ಸೇವಿಸುವುದರಿಂದ ಅಥವಾ ಸಂಪೂರ್ಣ ಹಣ್ಣುಗಳನ್ನು ತಿನ್ನುವುದರಿಂದ ಉತ್ತಮ ಪ್ರಯೋಜನಗಳಿವೆ. ಹೇಗಾದರೂ, ನೀವು ರಸವನ್ನು ಕುಡಿಯಲು ಬಯಸಿದರೆ, ಅದರಲ್ಲಿ ಸಕ್ಕರೆ ಸೇರಿಸದೆ ಜ್ಯೂಸ್ ತಯಾರಿಸುವುದು ಉತ್ತಮ. ಅವುಗಳಲ್ಲಿ ಹೆಚ್ಚಿನ ಪ್ರಮಾಣದ ಫೈಬರ್ ಮತ್ತು ವಿಟಮಿನ್ ಸಿ ಸಮೃದ್ಧವಾಗಿದೆ, ಇದು ಮಧುಮೇಹವನ್ನು ಸುಲಭವಾಗಿ ನಿಯಂತ್ರಿಸಲು ಸಹಾಯ ಮಾಡುತ್ತದೆ.

ಬೀನ್ಸ್

ಬೀನ್ಸ್ ಬಹಳಷ್ಟು ಪೋಷಕಾಂಶಗಳನ್ನು ಹೊಂದಿರುತ್ತದೆ. ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ನಂತಹ ಖನಿಜಗಳಲ್ಲೂ ಇದು ಅಧಿಕವಾಗಿದೆ. ಮಧುಮೇಹವನ್ನು ಹೋರಾಡಲು ಇವು ನಮಗೆ ಸಹಾಯ ಮಾಡುತ್ತವೆ. ಇದರ ಗ್ಲೈಸೆಮಿಕ್ ಸೂಚ್ಯಂಕ ಕೂಡ ತುಂಬಾ ಕಡಿಮೆ. ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾದಾಗ ಉಂಟಾಗುವ ಸಮಸ್ಯೆಗಳಿಂದ ಇದು ನಿಮ್ಮನ್ನು ರಕ್ಷಿಸುತ್ತದೆ.

ವಾಲ್ನಟ್ಸ್

ವಾಲ್ನಟ್ಸ್ ಹೆಚ್ಚಿನ ಸೇವನೆಯು ಉತ್ತಮ ಫಲಿತಾಂಶವನ್ನು ನೀಡುತ್ತದೆ. ಅವುಗಳಲ್ಲಿ ಮೆಗ್ನೀಸಿಯಮ್, ಫೈಬರ್ ಮತ್ತು ಒಮೆಗಾ 3 ಕೊಬ್ಬಿನಾಮ್ಲಗಳು ಅಧಿಕವಾಗಿವೆ. ಅದಕ್ಕಾಗಿಯೇ ಮಧುಮೇಹಿಗಳಿಗೆ ಮಾತ್ರವಲ್ಲ, ಹೃದಯಾಘಾತ ಮತ್ತು ಕೊಲೆಸ್ಟ್ರಾಲ್ ಸಮಸ್ಯೆಯಿಂದ ಬಳಲುತ್ತಿರುವವರಿಗೂ ಇದು ಉತ್ತಮ ಆಹಾರವಾಗಿದೆ.

ಬೀಟ್ ರೂಟ್

ಮಧುಮೇಹ ಇರುವವರು ಸಕ್ಕರೆ ಅಂಶ ತಿನ್ನಲು ಬಯಸುವುದಿಲ್ಲ. ಆದರೆ ಬೀಟ್‌ರೂಟ್ ಅದಕ್ಕಿಂತ ಭಿನ್ನವಾಗಿದೆ. ಬೀಟ್ರೂಟ್ ಭಕ್ಷ್ಯಗಳು ತುಂಬಾ ಟೇಸ್ಟಿ ಮತ್ತು ಸಿಹಿಯಾಗಿರುತ್ತವೆ ಮತ್ತು ಜೀವಸತ್ವಗಳು ಮತ್ತು ಖನಿಜಾಂಶಗಳು ಅಧಿಕವಾಗಿವೆ. ಇದರಲ್ಲಿ ಕಾರ್ಬೋಹೈಡ್ರೇಟ್‌ಗಳೂ ಕಡಿಮೆ. ಇದು ಲಿಪೊಯಿಕ್ ಆಮ್ಲ ಎಂಬ ಸಂಯುಕ್ತವನ್ನು ಹೊಂದಿರುತ್ತದೆ.

(ಮಾಹಿತಿ ಕೃಪೆ Kannada News Now)

ಹುಬ್ಬಳ್ಳಿಯಲ್ಲಿ ದರ್ಶನ್ ನೋಡಲು ಮುಗಿಬಿದ್ದ ಅಭಿಮಾನಿಗಳು, ಪೊಲೀಸರಿಂದ ಲಾಠಿಚಾರ್ಜ್

 

ಭಾನುವಾರ ಸಂಜೆ 6 ಗಂಟೆಗೆ ಹುಬ್ಬಳ್ಳಿಯಲ್ಲಿ ರಾಬರ್ಟ್ ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮ (ಪ್ರಿ-ರಿಲೀಸ್ ಕಾರ್ಯಕ್ರಮ) ಆಯೋಜನೆಯಾಗಿದ್ದು, ಈ ಹಿನ್ನೆಲೆ ನಟ ದರ್ಶನ್ ಶನಿವಾರ ರಾತ್ರಿ ಗಂಡುಮೆಟ್ಟಿದ ನಾಡಿಗೆ ಬಂದಿಳಿದಿದ್ದಾರೆ.

ನಗರದ ಖಾಸಗಿ ಹೋಟೆಲ್‌ವೊಂದರಲ್ಲಿ ನಟ ದರ್ಶನ್ ರಾತ್ರಿ ಉಳಿದುಕೊಳ್ಳಲಿದ್ದಾರೆ ಎಂದು ತಿಳಿಯುತ್ತಿದ್ದಂತೆ ನೂರಾರು ಸಂಖ್ಯೆಯಲ್ಲಿ ಡಿ ಫ್ಯಾನ್ಸ್ ಹೋಟೆಲ್‌ ಬಳಿ ಜಮಾಯಿಸಿದರು.  ಶನಿವಾರ ಸುಮಾರು 11.30 ಗಂಟೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್, ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಸೇರಿದಂತೆ ರಾಬರ್ಟ್ ತಂಡ ಹುಬ್ಬಳ್ಳಿಗೆ ಬಂದು ತಲುಪಿದೆ. ಹೋಟೆಲ್‌ ಬಳಿ ಡಿ ಬಾಸ್ ಕಾರು ಬರುತ್ತಿದ್ದಂತೆ ಕಾರು ಸುತ್ತುವರಿದ ಅಭಿಮಾನಿಗಳು ಕಾರಿನ ಮೇಲೆ ಹೂವು ಎಸೆದು ಸ್ವಾಗತಿಸಿದರು.

ಹೋಟಲ್ ಗೇಟ್‌ನಿಂದ ಬಾಗಿಲವರೆಗೂ ದರ್ಶನ್ ಕಾರು ಹಿಂಬಾಲಿಸಿದರು. ಈ ವೇಳೆ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ದರ್ಶನ್ ಅವರನ್ನು ಕಾರಿನಿಂದ ಇಳಿಯಲು ಸಹ ಸಾಧ್ಯವಾಗದ ರೀತಿ ಫ್ಯಾನ್ಸ್ ಸೇರಿದ್ದರು. ಕೊನೆಯದಾಗಿ ಅಭಿಮಾನಿಗಳು ಚದುರಿಸಲು ಪೊಲೀಸರು ಲಘು ಲಾಠಿ ಚಾರ್ಜ್ ಮಾಡಬೇಕಾಯಿತು. ಬಳಿಕ ಕಾರಿನಿಂದ ಕೆಳಗೆ ಇಳಿದ ದರ್ಶನ್ ಅಭಿಮಾನಿಗಳನ್ನು ಒಡೆಯದಂತೆ ಪೊಲೀಸರಿಗೆ ಕೇಳಿಕೊಂಡಿದ್ದು ಕಂಡು ಬಂತು. ಇದಕ್ಕೂ ಮುಂಚೆ ಬೆಂಗಳೂರಿನಿಂದ ಹುಬ್ಬಳ್ಳಿ ಮಾರ್ಗವಾಗಿ ಕಾರಿನಲ್ಲಿ ಡಿ ಬಾಸ್ ಬಂದರು. ಈ ಹಿನ್ನೆಲೆ ಹೆದ್ದಾರಿಯುದ್ದಕ್ಕೂ ದರ್ಶನ್ ಅಭಿಮಾನಿಗಳು ನಿಂತು ಸ್ವಾಗತಿಸಿದರು.

(ಮಾಹಿತಿ ಕೃಪೆ Filmi Beat)

2021 ಈ ವರ್ಷದ ಭವಿಷ್ಯ ಹೇಳಿದ ಸಾರುವಯ್ಯನವರು ಕಾಲಜ್ಞಾನ"ಹೇಳಿಕೆಗೆ ಜನರು ತತ್ತರ |


 

ಇಂದು ಮತ್ತೆ ಅಡುಗೆ ಅನಿಲ ದರದಲ್ಲಿ 25 ರೂ. ಏರಿಕೆ..!

 

ಬೆಂಗಳೂರು,ಮಾ.1-ಕಳೆದ ಎರಡು ತಿಂಗಳಿನಿಂದ ಸತತವಾಗಿ ಆರು ಬಾರಿ ಅಡುಗೆ ಅನಿಲ ದರ ಏರಿಕೆಯಾಗಿದೆ. ಇಂದು ಮತ್ತೆ 25 ರೂ. ದರ ಹೆಚ್ಚಳವಾಗಿದ್ದು ಇದರಿಂದ ಜನಸಾಮಾನ್ಯರು ತತ್ತರಿಸುವಂತಾಗಿದೆ. ಇಂದು ಬೆಳಗ್ಗೆ ದರ ಏರಿಕೆ ಬಳಿಕ 14.2 ಕೆಜಿ ಸಿಲಿಂಡರ್‍ನ ದರ 822 ರೂ.ಆಗಿದೆ. ಎಲ್‍ಪಿಜಿ ದರ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಪೆಟ್ರೋಲ್ ಡೀಸೆಲ್ ದರದ ಏರಿಕೆಯಿಂದ ತತ್ತರಿಸುತ್ತಿರುವ ಜನರಿಗೆ ಗ್ಯಾಸ್ ಸಿಲಿಂಡರ್‍ನ ಬೆಲೆ ಏರಿಕೆ ತೀವ್ರ ಆಘಾತ ಮೂಡಿಸಿದೆ.

ಅಡುಗೆ ಅನಿಲದ ದರ ಏರಿಕೆ ದಾಖಲೆ ನಿರ್ಮಿಸಿದೆ. ಕಳೆದ ಮೂರು ತಿಂಗಳಲ್ಲಿ ಒಟ್ಟು 225 ರೂ.ಗಳಷ್ಟು ದರ ಹೆಚ್ಚಾಗಿದೆ. ಕಳೆದ ವರ್ಷದ ನವೆಂಬರ್ 30ರಂದು ಏರಿಕೆಯಾಗಿದ್ದ ಸಿಲಿಂಡರ್‍ನ ದರ ಮತ್ತೆ ಡಿಸೆಂಬರ್ 1ಕ್ಕೆ ಪರಿಷ್ಕರಣೆಯಾಗಿತ್ತು. ಕಳೆದ ಮೂರು ದಿನಗಳ ಹಿಂದೆ 797 ರೂ. ಇದ್ದ ದರ ಇಂದು 822 ರೂ.ಗಳಾಗಿದೆ.

ನಿರಂತರವಾಗಿ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ಬೆಲೆ ಏರಿಕೆಯಾಗುತ್ತಿರುವುದರಿಂದ ಜನಸಾಮಾನ್ಯರು ತತ್ತರಿಸಿ ಹೋಗಿದ್ದಾರೆ. ಇದರ ಬೆನ್ನಲ್ಲೇ ದಿನನಿತ್ಯದ ಅಗತ್ಯದ ವಸ್ತುಗಳ ಬೆಲೆಯೂ ಗಗನಮುಖಿಯಾಗುತ್ತಲೇ ಇದೆ. ಸರಕು ಸಾಗಾಣಿಕೆ ವೆಚ್ಚ ಸೇರಿದಂತೆ ನಾನಾ ರೀತಿಯ ಖರ್ಚುಗಳು ದುಬಾರಿಯಾಗ ತೊಡಗಿವೆ. ಇನ್ನು ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ದರದಲ್ಲೂ 96 ರೂ. ಹೆಚ್ಚಳವಾಗಿದೆ.

(ಮಾಹಿತಿ ಕೃಪೆ ಈ ಸಂಜೆ)

Big Breaking News: 'ಕರೋನ ಲಸಿಕೆ' ತಗೆದುಕೊಂಡ ಪ್ರಧಾನಿ ನರೇಂದ್ರ ಮೋದಿ


 ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಕರೋನ ಲಸಿಕೆಯನ್ನು ಇಂದು ಬೆಳಗ್ಗೆ ತೆಗೆದುಕೊಂಡಿದ್ದಾರೆ.

ಏಮ್ಸ್ ನಲ್ಲಿ COVID-19 ಲಸಿಕೆಯ ನನ್ನ ಮೊದಲ ಡೋಸ್ ತೆಗೆದುಕೊಂಡೆ ಅಂತ ಅವರು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದು, ಇದೇ ವೇಳೆ ಅವರು COVID-19 ನ ಜಾಗತಿಕ ಹೋರಾಟವನ್ನು ಬಲಪಡಿಸಲು ನಮ್ಮ ವೈದ್ಯರು ಮತ್ತು ವಿಜ್ಞಾನಿಗಳು ಕ್ಷಿಪ್ರ ಸಮಯದಲ್ಲಿ ಹೇಗೆ ಕೆಲಸ ಮಾಡಿದ್ದಾರೆ ಎಂಬುದು ಗಮನಾರ್ಹವಾಗವಿದೆ. ಲಸಿಕೆ ಯನ್ನು ತೆಗೆದುಕೊಳ್ಳಲು ಅರ್ಹರಾದ ಎಲ್ಲರಿಗೂ ನಾನು ಮನವಿ ಮಾಡಿ. ಒಟ್ಟಿಗೆ, ನಾವು ಭಾರತವನ್ನು COVID-19 ಅನ್ನು ನಿರ್ಮೂಲನೆ ಮಾಡೋಣ ಅಂತ ಹೇಳಿದ್ದಾರೆ.

ಸೋಮವಾರದಿಂದ ಅಂದ್ರೆ ಇಂದಿನಿಂದ ದೇಶಾದ್ಯಂತ 10 ಕೋಟಿ ಜನರಿಗೆ ಲಸಿಕೆ ಹಾಕುವ 'ಕೋವಿಡ್ -19' ಲಸಿಕೆ ಅಭಿಯಾನ ಎರಡನೇ ಹಂತದ ಅಭಿಯಾನ ಆರಂಭಿಸಲಿದೆ.

ಇಂದು 60 ವರ್ಷ ಮೇಲ್ಪಟ್ಟವರು ಮತ್ತು 45 ವರ್ಷ ಮೇಲ್ಪಟ್ಟ ವರಿಗೆ 45 ರಿಂದ 59 ವರ್ಷಗಳು ನಿರ್ದಿಷ್ಟ ಸಹ-ರೋಗಲಕ್ಷಣಗಳನ್ನು ಹೊಂದಿರುವವರಿಗೆ ಲಸಿಕೆ ಯನ್ನು ಸರ್ಕಾರ ಉಚಿತವಾಗಿ ನೀಡಲಿದೆ.

(ಮಾಹಿತಿ ಕೃಪೆ ಕನ್ನಡ ನ್ಯೂಸ್ ನೌವ್)