ಪಡಿತರ ಚೀಟಿ ಸರ್ಕಾರದಿಂದ ನೀಡಲಾಗುವ ಆಹಾರ ಪದಾರ್ಥಗಳನ್ನು ಕಡಿಮೆ ದರದಲ್ಲಿ ಪಡೆಯುವ ಸೌಲಭ್ಯವನ್ನು ನೀಡುತ್ತದೆ. ಆದರೆ ಪ್ರತಿನಿತ್ಯ ಪಡಿತರ ಚೀಟಿ ಫಲಾನುಭವಿಗಳು ಆಹಾರ ಧಾನ್ಯವನ್ನು ಪಡೆಯುವಲ್ಲಿ ಒಂದಲ್ಲಾ ಒಂದು ಸಮಸ್ಯೆಯನ್ನ ಎದುರಿಸುತ್ತಿದ್ದಾರೆ. ನ್ಯಾಯಬೆಲೆ ಅಂಗಡಿ ಮಾಲೀಕರು ಪಡಿತರ ಚೀಟಿ ಇದ್ದರೂ ಕೂಡ ಅವರಿಗೆ ಸಲ್ಲಬೇಕಾದ ಆಹಾರ ಧಾನ್ಯವನ್ನ ಸರಿಯಾದ ಪ್ರಮಾಣದಲ್ಲಿ ನೀಡುತ್ತಿಲ್ಲ ಎಂಬುದು ಹೆಚ್ಚಾಗಿ ಕೇಳಿಬರುತ್ತಿರುವ ದೂರು. ಹೀಗಾಗಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ( ಎನ್ ಎಫ್‌ಎಸ್‌ಎ) ಗ್ರಾಹಕರಿಗೆ ಸರಿಯಾದ ಪ್ರಮಾಣದಲ್ಲಿ ಪಡಿತರ ನೀಡುವ ಸೌಲಭ್ಯ ಒದಗಿಸಲು ಹಾಗೂ ಇಂತಹ ದೂರುಗಳಿಗೆ ತಕ್ಷಣ ಸ್ಪಂದಿಸಲು ಪ್ರತಿ ರಾಜ್ಯಕ್ಕೂ ಪ್ರತ್ಯೇಕ ಟೋಲ್ ಫ್ರೀ ದೂರವಾಣಿ ಸಂಖ್ಯೆಯನ್ನ ಮೀಸಲಿಟ್ಟಿದೆ. ಪಡಿತರ ಪಡೆಯುವಲ್ಲಿ ಸಮಸ್ಯೆ ಉಂಟಾದರೆ ಈ ಟೋಲ್ ಪ್ರೀ ನಂಬರ್‌ಗೆ ಕರೆ ಮಾಡಿ ದೂರು ದಾಖಲಿಸಬಹುದು ಅಥವಾ https://nfsa.gov.in/ ವೆಬ್‌ಸೈಟ್‌ನಲ್ಲಿ ದೂರು ದಾಖಲಿಸಬಹುದು. ಭ್ರಷ್ಟಾಚಾರ ನಿಯಂತ್ರಣದಲ್ಲಿ ಹಾಗೂ ಪಡಿತರ ಪಡೆಯುವಲ್ಲಿ ನಡೆಯುತ್ತಿರುವ ವಂಚನೆಗಳ ವಿರುದ್ಧ ಕ್ರಮ ಕೈಗೊಳ್ಳಲು ಈ ದೂರು ಸಹಾಯಕವಾಗಲಿದೆ.
ಕರ್ನಾಟಕ: 1800-425-9339
ಕೇರಳಾ- 1800-425-1550
ಮಹಾರಾಷ್ಟ್ರ- 1800-22-4950
ಗೋವಾ- 1800-233-0022
ಆಂದ್ರಪ್ರದೇಶ- 1800-425-2977
ಮಧ್ಯಪ್ರದೇಶ- 181
ಬಿಹಾರ- 1800-3456-194
ಗುಜರಾತ್- 1800-233-5500
ಉತ್ತರಪ್ರದೇಶ- 1800-180-0150
ಪಶ್ಚಿಮ ಬಂಗಾಳ- 1800-345-5505
ತೆಲಂಗಾಣ- 1800-4250-0333
ಪಂಜಾಬ್- 1800-3006-1313
(ಮಾಹಿತಿ ಕೃಪೆ ಒನ್ ಇಂಡಿಯಾ ಎಕ್ಸ್ಕ್ಲೂಸಿವ್)
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ