WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Thursday, March 4, 2021

ಸದನದಲ್ಲೇ ಅಂಗಿ ಬಿಚ್ಚಿದ ಶಾಸಕ! ಸಿಎಂ ಮತ್ತು ಈಶ್ವರಪ್ಪ ವಿರುದ್ಧ ಆಕ್ರೋಶ.


 ಬೆಂಗಳೂರು: ಭದ್ರಾವತಿ ಕ್ಷೇತ್ರದಲ್ಲಿ ಭಾರಿ ಕಿರುಕುಳ ಅನುಭವಿಸುತ್ತಿದ್ದೇನೆ. ನನ್ನ ಕುಟುಂಬದ ವಿರುದ್ಧ ಅಟ್ರಾಸಿಟಿ ಕೇಸ್ ಹಾಕಿಸಿದ್ದಾರೆ. ರಾಜ್ಯ ಸರ್ಕಾರ ನನ್ನ ವಿರುದ್ಧ ಸೇಡಿನ ರಾಜಕಾರಣ ಮಾಡ್ತಿದೆ. ನೀವು ನನ್ನ ರಕ್ಷಣೆಗೆ ಬರಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬಳಿ ಇಂದು ಬೆಳಗ್ಗೆ ಕಾಂಗ್ರೆಸ್​ ಶಾಸಕಾಂಗ ಸಭೆಯಲ್ಲಿ ಶಾಸಕ ಸಂಗಮೇಶ್ ಅಳಲು ತೋಡಿಕೊಂಡಿದ್ದರು. ಇದಾದ ಕೆಲವೇ ಹೊತ್ತಿನಲ್ಲಿ ಸದನದಲ್ಲಿ ಅಂಗಿ ಬಿಚ್ಚಿ ಪ್ರತಿಭಟನೆ ನಡೆಸಿದರು.

ಸದನದಲ್ಲೇ ಶಾಸಕ ಬಿ.ಕೆ. ಸಂಗಮೇಶ್ ಶರ್ಟ್ ಬಿಚ್ಚಿ ಹೆಗಲ ಮೇಲೆ ಹಾಕಿಕೊಂಡು ಪ್ರತಿಭಟಿಸಿದ್ದಕ್ಕೆ ಗರಂ ಆದ ಸ್ಪೀಕರ್, ಸದನ ಅಂದ್ರೆ ಏನ್​ ಅನ್ಕೊಂಡಿದ್ದೀರಿ? ಸದನ ಅಂದ್ರೆ ತಮಾಷೆನಾ? ನಿಮ್ಮ ಈ ವರ್ತನೆ ಮೂಲಕ ಕ್ಷೇತ್ರದ ಜನತೆಗೆ ಅಗೌರವ ತಂದಿದ್ದೀರಿ. ಸಭ್ಯತೆ ಮರೆತು ವರ್ತಿಸಿದ್ದೀರಿ ಎಂದು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಲ್ಲದೆ, ಒಂದು ವಾರ ಸದನಕ್ಕೆ ಬಾರದಂತೆ ಅಮಾನತು ಮಾಡಿದ್ದಾರೆ. ಈ ಕುರಿತು ದಿಗ್ವಿಜಯ ನ್ಯೂಸ್​ಗೆ ಪ್ರತಿಕ್ರಿಯಿಸಿದ ಸಂಗಮೇಶ್​, ತನ್ನ ಮೇಲೆ ಸಿಎಂ ಕುಟುಂಬಸ್ಥರೇ ದೌರ್ಜನ್ಯವೆಸಗುತ್ತಿದ್ದಾರೆ ಎಂದು ಆರೋಪಗಳ ಸುರಿಮಳೆಗೈದಿದ್ದಾರೆ.

ನನ್ನನ್ನು ಅಮಾನತು ಮಾಡಿದ ಸ್ಪೀಕರ್ ಆದೇಶ ಹಿಂದೆ ಸಚಿವ ಈಶ್ವರಪ್ಪ, ಸಿಎಂ ಯಡಿಯೂರಪ್ಪ, ಸಂಸದ ರಾಘವೇಂದ್ರ ಇದ್ದಾರೆ. ನಾನು ಸ್ಪೀಕರ್ ಆದೇಶ ಒಪ್ಪಲ್ಲ. ಸ್ಪೀಕರ್ ರಾಜಕೀಯ ಏಜೆಂಟ್. ಬಿಜೆಪಿ ಸರ್ಕಾರದ ಏಜೆಂಟ್ ಆಗಿದ್ದಾರೆ. ನಾನು ಸದನಕ್ಕೆ ಹೋಗುತ್ತೇನೆ. ಸದನಕ್ಕೆ ಬರುವಂತೆ ಡಿಕೆಶಿ, ಸಿದ್ದರಾಮಯ್ಯ ಹೇಳಿದ್ದಾರೆ. ಆದೇಶ ಹಿಂಪಡೆಯದಿದ್ರೆ ಮುಂದಿನ ಹೋರಾಟದ ಬಗ್ಗೆ ಚರ್ಚೆ ಮಾಡ್ತೀವಿ ಎಂದು ಸಂಗಮೇಶ್​ ತಿಳಿಸಿದರು.

ಹೌದು, ಸದನದಲ್ಲಿ ನಾನು ಶರ್ಟ್ ಬಿಚ್ಚಿದ್ದು ನಿಜ. ಶರ್ಟ್ ಬಿಚ್ಚಿ ಪ್ರತಿಭಟನೆ ಮಾಡುವುದು ತಪ್ಪಲ್ಲ. ಪ್ಯಾಂಟ್-ಬನಿಯನ್ ಬಿಚ್ಚಿಲ್ಲ, ಯಾರ್ಯಾರೋ ಏನೇನೋ ಬಿಚ್ಚಿದ್ದಾರೆ, ಅಂಥವರ ಬಗ್ಗೆ ಕ್ರಮ ಇಲ್ಲ ಎಂದು ಟೀಕಿಸಿದರು. ಭದ್ರಾವತಿ ಕ್ಷೇತ್ರದಲ್ಲಿ ಬಿಜೆಪಿ ಡೆಪಾಸಿಟ್ ಇಲ್ಲ. ಭದ್ರಾವತಿ ಜನರನ್ನ ಹೊಡೆಯುವ ಕೆಲಸ ಮಾಡ್ತಿದ್ದಾರೆ. ನಾನು ಹಿಂದು, ಎಲ್ಲರೂ ಭಾರತೀಯರು. ಇವರು ಢೋಂಗಿ ರಾಮನ ಭಕ್ತರು. ನಾವು ಆತ್ಮದಲ್ಲಿ ರಾಮನನ್ನ ಇಟ್ಟುಕೊಂಡಿದ್ದೇವೆ. ನನ್ನನ್ನು ಯಾವ ಕಾರಣಕ್ಕೆ ಸಸ್ಪೆಂಡ್ ಮಾಡಿದ್ರು? ಒಂದು ವಾರ ಅಲ್ಲ, ಇನ್ನೊಂದು ವಾರ ಅಮಾನತು ಮಾಡ್ಲಿ ನಾನು ಹೆದರಲ್ಲ ಎಂದು ಎಚ್ಚರಿಸಿದರು.

ನನ್ನ ಮತ್ತು ನನ್ನ ಕುಟುಂಬದ ಮೇಲೆ ಸಿಎಂ ಕುಟುಂಬಸ್ಥರು ಹಲ್ಲೆ ಮಾಡಿದ್ದಾರೆ. ಕೇಸ್ ಹಾಕಿದ್ದಾರೆ. ನನ್ನ ಮನೆಯವರು ತಲೆ ಮರೆಸಿಕೊಂಡಿದ್ದಾರೆ. ತಾಕತ್ತಿದ್ದರೆ ಈಶ್ವರಪ್ಪ ನನ್ನನ್ನು ಜೈಲಿಗೆ ಕಳಿಸಲಿ. ನಾವು ಅವರಂತೆ ಸಿಡಿ ಮಾಡಿಲ್ಲ. ಭ್ರಷ್ಟಾಚಾರ ಮಾಡಿಲ್ಲ, ಅನ್ಯಾಯ ಮಾಡಿಲ್ಲ, ಶಿವಮೊಗ್ಗದಲ್ಲಿ‌ ಗಣಿ ಸ್ಫೋಟವಾಯ್ತು. ಅದರಲ್ಲಿ ಮೂವರು ಇನ್ನೂ ಸಿಕ್ಕಿಲ್ಲ ಎಂದು ಸಂಗಮೇಶ್​ ಕಿಡಿಕಾರಿದರು.

ಇತ್ತ ಮಧ್ಯಾಹ್ನ ಸದನಕ್ಕೆಂದು ಹೊರಟ ಶಾಸಕ ಸಂಗಮೇಶ್​ರನ್ನ ಪೂರ್ವ ಭಾಗಿಲಿನಲ್ಲೇ ತಡೆದ ಮಾರ್ಷಲ್​ಗಳು, ಒಳಬಿಡುವಂತಿಲ್ಲ, ಸ್ಪೀಕರ್ ಆದೇಶ ಇದೆ ಎಂದರು. ಅಷ್ಟರಲ್ಲಿ ಗರಂ ಆದ ಮಾಜಿ ಸಿಎಂ ಸಿದ್ದರಾಮಯ್ಯ,ಏಯ್ ಮಾರ್ಷಲ್, ಆದೇಶದ ಪ್ರತಿ ಇದ್ಯಾ? ಆದೇಶ ಬರುವವರೆಗೂ ಹೇಗೆ ತಡೆಯುತ್ತೀಯಾ? ಪರ್ಮನೆಂಟ್ ಆಗಿ ಅಮಾನತು ಮಾಡ್ತೀರಾ? ಎಂದರು. ನಡಿಯೋ ಒಳಗೆ ಎನ್ನುತ್ತಾ ಶಾಸಕ ಸಂಗಮೇಶ್​ರನ್ನು ವಿಧಾನಸಭೆ ಅಧಿವೇಶನ ಕಾರಿಡಾರ್​ಗೆ ಕರೆದೊಯ್ದರು.

(ಮಾಹಿತಿ ಕೃಪೆ ವಿಜಯವಾಣಿ)

No comments:

Post a Comment

ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ