ವಿಜಯನಗರ (ಹೊಸಪೇಟೆ): ಜಾನಪದ ಆಕಾಡೆಮಿ ಅಧ್ಯಕ್ಷೆ ಹಾಗೂ ಪದ್ಮಶ್ರೀ ಪುರಸ್ಕೃತೆ ಮರಿಯಮ್ಮನಹಳ್ಳಿಯ ಮಂಜಮ್ಮ ಜೋಗತಿ ಅವರ ಜೀವನ ಚರಿತ್ರೆ 'ನಡುವೆ ಸುಳಿವ ಹೆಣ್ಣು' ಅನ್ನು ಪುಸ್ತಕ ಗುಲ್ಬರ್ಗಾ ವಿಶ್ವ ವಿದ್ಯಾಲಯ ಪಠ್ಯಕ್ರಮದಲ್ಲಿ ಅಳವಡಿಸುವ ಕಾರ್ಯ ನಡೆದಿದೆ.
ಅರುಣ್ ಜೋಳದ ಕೂಡ್ಲಿಗಿ ನಿರೂಪಣೆ ಮಾಡಿರುವ 'ನಡುವೆ ಸುಳಿವ ಹೆಣ್ಣು' ಪುಸ್ತಕ ವಿಶ್ವವಿದ್ಯಾಲಯದ ಬಿಎಸ್ಸಿ ನಾಲ್ಕನೇ ಸೆಮಿಸ್ಟರ್ ಬೇಸಿಕ್ ಕನ್ನಡ ವಿಷಯದ ಪಠ್ಯಕ್ರಮಕ್ಕೆ ಆಳವಡಿಸಲು ಪಠ್ಯಕ್ರಮ ಅಧ್ಯಯನ ಮಂಡಳಿ ಶಿಫಾರಸ್ಸು ಮಾಡಿದ್ದು, ಮುಂಬರುವ ಶೈಕ್ಷಣಿಕ ಸಾಲಿನ ಪಠ್ಯಕ್ರಮದಲ್ಲಿ ಸೇರ್ಪಡೆಯಾಗುವುದು ಖಚಿತವಾಗಿದೆ.
ಈ ಹಿಂದೆ ವಿಜಯಪುರದ ಅಕ್ಕಮಹಾದೇವಿ ವಿಶ್ವವಿದ್ಯಾಲಯದಲ್ಲಿ ಮಂಜಮ್ಮ ಜೋಗತಿಯವರ ಕುರಿತ ವಿಷಯವನ್ನು ಪಠ್ಯಕ್ರಮದಲ್ಲಿ ಅಳವಡಿಸಲಾಗಿತ್ತು. ಈ ಬಾರಿ ಅವರ ಸಂಪೂರ್ಣ ಜೀವನ ಚರಿತ್ರೆ ಪಠ್ಯಕ್ರಮವಾಗುತ್ತಿದ್ದು. ಸಮಗ್ರ ಪುಸ್ತಕವನ್ನು 100 ಪುಟಗಳಷ್ಟು ಸಂಕೀರ್ಣಗೊಳಿಸಿ ಮರುಮುದ್ರಿಸಲು ಪಲ್ಲವ ಪ್ರಕಾಶನಕ್ಕೂ ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಾಧನೆಗೈದವರ ಜೀವನ ಕುರಿತಂತೆ ಗುಲ್ಬರ್ಗಾ ವಿವಿ ತನ್ನ ಪಠ್ಯಕ್ರಮಗಳಲ್ಲಿ ಅಳವಡಿಸುತ್ತಾ ಬಂದಿದ್ದು, ಈಗ 'ನಡುವೆ ಸುಳಿವ ಹೆಣ್ಣು' ಪುಸ್ತಕವನ್ನು ಅಳವಡಿಸಲಾಗುತ್ತಿದೆ. ಇದಕ್ಕೆ ಕುಲಪತಿ ಪ್ರೊ.ದಯಾನಂದ ಅಗಸರ ಅವರ ಇಚ್ಛಾಶಕ್ತಿ ಕಾರಣ ಎಂದು ವಿವಿಯ ಕಲಾ ನಿಕಾಯದ ಡೀನ್ ಪ್ರೊ. ಎಚ್.ಟಿ.ಪೋತೆ 'ಪ್ರಜಾವಾಣಿ'ಗೆ ತಿಳಿಸಿದ್ದಾರೆ.
(ಮಾಹಿತಿ ಕೃಪೆ ಪ್ರಜಾವಾಣಿ)
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ