WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Saturday, May 8, 2021

ರಾಜ್ಯದಲ್ಲಿ ಕೋವಿಡ್ 19 ಸೋಂಕು ಹರಡುವುದನ್ನು ತಡೆಗಟ್ಟುಲು ಪ್ರಮುಖಾoಶಗಳು


 

ಮೇ 10ರಿಂದ 14 ದಿನಗಳ ಕಾಲ ಕರುನಾಡು ಸ್ತಬ್ಧ: ಲಾಕ್ ಡೌನ್ ಆದೇಶ ಹೊರಡಿಸಿದ ಸಿಎಂ ಬಿಎಸ್ ವೈ


 ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸೋಂಕಿತರ ಪ್ರಮಾಣ ಹಾಗೂ ಮೃತರ ಸಂಖ್ಯೆ ದಿನೇ ಏರುಗತಿಯಲ್ಲಿ ಸಾಗುತ್ತಿರುವುದರಿಂದ, ಇಂದು ತುರ್ತು ಸುದ್ದಿಗೋಷ್ಠಿ ನಡೆಸಿದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮೇ 10ರಿಂದ 14 ದಿನಗಳ ಕಾಲ ಸಂಪೂರ್ಣ ಲಾಕ್ ಡೌನ್ ಮಾಡಿ ಆದೇಶ ಹೊರಡಿಸಿದ್ದಾರೆ. 
ಸಚಿವರು ಮತ್ತು ಅಧಿಕಾರಿಗಳೊಂದಿಗಿನ ಹಲವು ಸುತ್ತಿನ ಸಭೆಯ ನಂತರ ಸಿಎಂ ಯಡಿಯೂರಪ್ಪ ಅಧಿಕೃತ ನಿರ್ಧಾರವನ್ನು ಇಂದು ಸಂಜೆ 7:30ಕ್ಕೆ ಪ್ರಕಟಿಸಿದ್ದಾರೆ. ಕರ್ನಾಟಕದಲ್ಲಿ ದಿನವೊಂದಕ್ಕೆ ಅರ್ಧ ಲಕ್ಷದಷ್ಟು ಕೋವಿಡ್ ಪ್ರಕರಣಗಳು ದಾಖಲಾಗುತ್ತಿದ್ದು, ಈಗಾಗಲೇ ಮೇ 12ರವರೆಗೂ ಜನತಾ ಕರ್ಫ್ಯೂ ಜಾರಿಯಲ್ಲಿದೆ. ಇದರಿಂದಲೂ ಸೋಂಕಿತರ ಸಂಖ್ಯೆ ನಿಯಂತ್ರಣಕ್ಕೆ ಬಾರದಿದ್ದರಿಂದ ರಾಜ್ಯಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. 

ಮಾರ್ಗಸೂಚಿ: 

ಸೋಮವಾರ ಬೆಳಗ್ಗೆ 6 ಗಂಟೆಯಿಂದ ಮೇ 24ರ ಬೆಳಗ್ಗೆ 6 ಗಂಟೆವರೆಗೆ ಕಠಿಣ ಲಾಕ್​ಡೌನ್​ 

ಬೆಳಗ್ಗೆ 6 ಗಂಟೆಯಿಂದ ಬೆಳಗ್ಗೆ 10 ಗಂಟೆವರೆಗೆ ಮಾತ್ರ ಹಾಲು, ದಿನಸಿ ಅಂಗಡಿಗಳನ್ನು ತೆರೆಯಲು ಅನುಮತಿ 

ಕೂಲಿ ಕಾರ್ಮಿಕರು ಬೆಂಗಳೂರು ಬಿಟ್ಟು ಹೋಗುವಂತಿಲ್ಲ. 

ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ತಳ್ಳುವ ಗಾಡಿಯಲ್ಲಿ ತರಕಾರಿ-ಹಣ್ಣುಗಳನ್ನು ಮಾರಲು ಅವಕಾಶ ನೀಡಲಾಗಿದೆ. 

ಕೈಗಾರಿಕೆ ಹೊಟೇಲ್, ಪಬ್, ಬಾರ್ ಕ್ಲೋಸ್.ಹೋಂ ಡೆಲಿವರಿ ಸೇವೆಗಳನ್ನು ಮಾತ್ರ ಒದಗಿಸಲು ಅನುಮತಿಸಲಾಗುವುದು. 

ಸರ್ಕಾರಿ ಕಚೇರಿ ಭಾಗಶ‍ಃ ಕೆಲಸ ಮಾಡಲಿದೆ. 

ಅಗತ್ಯವಸ್ತು ಸಾಗಿಸುವ ವಾಹನಗಳಿಗೆ ಅವಕಾಶವಿದೆ. 

ಅಂತರ್ ಜಿಲ್ಲಾ ಸಂಚಾರಕ್ಕೆ ಸಂಪೂರ್ಣ ನಿಷೇಧ 

ಮೇ 10 ರಿಂದ ರಾಜ್ಯಾದ್ಯಂತ ಎಲ್ಲಾ ಕಾರ್ಖಾನೆಗಳಿಗೆ ಬೀಗ 

ವಿಮಾನ ರೈಲು ಸಂಚಾರಕ್ಕೆ ಅನುಮತಿ 

ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆಗೆ ಮದ್ಯ ಮಾರಾಟಕ್ಕೆ ಅವಕಾಶ 

ಟ್ಯಾಕ್ಸಿ, ಅಟೋ ತುರ್ತು ಸೇವೆಗಳಿಗೆ ಅವಕಾಶ 

ಸಿನಿಮಾ, ಮಾಲ್, ಜಿಮ್ ಎಲ್ಲವೂ ಮೇ 24 ರವರೆಗೂ ಬಂದ್ 

ತುರ್ತು ವೈದ್ಯಕೀಯ ಸೇವೆ ಹೊರತು ಪಡಿಸಿ ಎಲ್ಲಾ ರೀತಿಯ ಸಂಚಾರಕ್ಕೆ ನಿರ್ಬಂಧವೇರಲಾಗಿದೆ. 

ಎಲ್ಲ ಕೃಷಿ ಮತ್ತು ಪೂರಕ ಚಟುವಟಿಕೆಗಳು, ಮೀನುಗಾರಿಕೆ, ಕೋಳಿ ಸಾಕಾಣಿಕೆ, ಮಾಂಸ ಮತ್ತು ಹೈನುಗಾರಿಕೆಗೆ ಸಂಬಂಧಿಸಿದ ಚಟುವಟಿಕೆಗಳಿಗೆ ಅನುಮತಿ ನೀಡಲಾಗುವುದು. 

ತಳ್ಳುಗಾಡಿಗಳಲ್ಲಿ ತರಕಾರಿ ಮಾರಲು ಬೆಳಿಗ್ಗೆ 6 ರಿಂದ ಸಂಜೆ 6ರ ವರೆಗೆ ಅವಕಾಶ 

ಎಲ್ಲ ಧಾರ್ಮಿಕ ಸ್ಥಳಗಳು/ಪೂಜಾ ಸ್ಥಳಗಳಿಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ. 

ಕ್ರೀಡಾ ಸಮುಚ್ಛಯ, ಸಾರ್ವಜನಿಕ ಈಜುಕೊಳ ಸಂಪೂರ್ಣ ಬಂದ್ 

ಈಗಾಗಲೇ ನಿಗದಿಯಾಗಿದ್ದ ಮದುವೆಗಳಿಗೆ ಅವಕಾಶ 
ಮದುವೆ ಸಮಾರಂಭಗಳಿಗೆ 50 ಜನರಿಗೆ ಮಾತ್ರ ಅವಕಾಶ 
ರಸ್ತೆ ಕಾಮಗಾರಿಗಳಿಗೆ ಯಾವುದೇ ನಿರ್ಬಂಧ ಇರುವುದಿಲ್ಲ. 
ಆಸ್ಪತ್ರೆಗಳು, ಮೆಡಿಕಲ್​ ಶಾಪ್​ಗಳು, ಬ್ಯಾಂಕ್​ಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ. 
ಯಾವುದೇ ಪಾಸ್ ವ್ಯವಸ್ಥೆಯನ್ನು ಜಾರಿಗೆ ತರುವುದಿಲ್ಲ. 
ಕೈಗಾರಿಕೆಗಳಿಗೆ ಷರತ್ತು ಬದ್ಧ ಅನುಮತಿ 
ಇ-ಕಾಮರ್ಸ್ ಸೇವೆಗಳಿಗೆ ಅವಕಾಶ 
ಹೊಟೇಲ್ ಗಳಿಂದ ಪಾರ್ಸೆಲ್ ತರಲು ಹೋಗಬೇಕಾದರೆ ನಡೆದುಕೊಂಡೆ ಹೋಗಬೇಕು. ವಾಹನಗಳಲ್ಲಿ ಹೋದರೆ ಶಿಕ್ಷೆ 
ಅಗತ್ಯ ಸೇವೆಗಳಿಗೆ ಬಿಟ್ಟು ಅನವಶ್ಯಕವಾಗಿ ವಾಹನಗಳನ್ನು ಚಲಾಯಿಸುವಂತಿಲ್ಲ. 
ಎಲ್ಲ ಸರಕು ಸಾಗಾಣಿಕೆ ವಾಹನಗಳ ಮುಕ್ತ ಸಂಚಾರಕ್ಕೆ ಅನುಮತಿ ನೀಡಲಾಗುವುದು. 
ನ್ಯಾಯಬೆಲೆ ಅಂಗಡಿಗಳು ತೆರೆಯಲಿವೆ. ಮದ್ಯ ಮಾರಾಟ ಮಳಿಗೆಗಳು ಕೇವಲ ಪಾರ್ಸೆಲ್ ಸೇವೆಗಾಗಿ ಬೆಳಿಗ್ಗೆ 6 ರಿಂದ 10ರ ವರೆಗೆ ತೆರೆಯಲಿವೆ. ಜನರು ಮನೆಯಿಂದ ಹೊರ ಬರುವುದನ್ನು ತಡೆಯುವ ನಿಟ್ಟಿನಲ್ಲಿ ದಿನದ 24 ಗಂಟೆಯೂ ಅಗತ್ಯ ವಸ್ತುಗಳ ಹೋಂ ಡೆಲಿವರಿ ಸೇವೆ ಒದಗಿಸುವುದನ್ನು ಉತ್ತೇಜಿಸಲಾಗುವುದು. 
ದೂರ ಸಂಪರ್ಕ, ಇಂಟರ್ ನೆಟ್ ಸೇವೆ, ಪ್ರಸಾರ ಮತ್ತು ಕೇಬಲ್ ಸೇವೆಗಳು ಲಭ್ಯವಾಗಲಿವೆ. 
ಅಂತ್ಯಸಂಸ್ಕಾರದಲ್ಲಿ ಗರಿಷ್ಠ 5 ಜನರಿಗೆ ಪಾಲುಗೊಳ್ಳಲು ಅವಕಾಶ. 
ಎಲ್ಲ ಸಾಮಾಜಿಕ, ರಾಜಕೀಯ, ಕ್ರೀಡೆ, ಮನರಂಜನೆ, ಶೈಕ್ಷಣಿಕ, ಸಾಂಸ್ಕೃತಿ, ಧಾರ್ಮಿಕ ಕಾರ್ಯಕ್ರಮಗಳು ಮೊದಲಾದ ಹೆಚ್ಚಿನ ಜನ ಸೇರುವ ಕಾರ್ಯಕ್ರಮಗಳು, ಸಮಾವೇಶಗಳನ್ನು ನಿಷೇಧಿಸಲಾಗಿದೆ.
(ಮಾಹಿತಿ ಕೃಪೆ ಉದಯವಾಣಿ)

Friday, May 7, 2021

ಕೊರೋನಾ ನಿಯಂತ್ರಿಸಲು ಭಾರತಕ್ಕೆ 10,000 ಆಮ್ಲಜನಕ ಸಾಂದ್ರಕಗಳು , ಮಾಸ್ಕ್ ಕಳುಹಿಸಿದ ವಿಶ್ವಸಂಸ್ಥೆ

 ಯುನೈಟೆಡ್​ ನೇಷನ್ಸ್​: ಭಾರತದಲ್ಲಿ ಕೊರೊನಾ ವಿರುದ್ಧ ಹೋರಾಡಲು ವಿಶ್ವಸಂಸ್ಥೆಯ ಹಲವು ಸಂಸ್ಥೆಗಳು ಸುಮಾರು 10,000 ಆಮ್ಲಜನಕ ಸಾಂದ್ರಕಗಳು ಮತ್ತು ಸುಮಾರು 10 ದಶಲಕ್ಷ ವೈದ್ಯಕೀಯ ಮಾಸ್ಕ್​ಗಳನ್ನು ಭಾರತಕ್ಕೆ ತಲುಪಿಸಿವೆ ಎಂದು ಯುಎನ್ ವಕ್ತಾರರು ತಿಳಿಸಿದ್ದಾರೆ.

ಯುನಿಸೆಫ್, ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‍ಒ) ಮತ್ತು ಯುಎನ್ ಜನಸಂಖ್ಯಾ ನಿಧಿ (ಯುಎನ್‍ಎಫ್‍ಪಿಎ) ಸುಮಾರು 10,000 ಆಮ್ಲಜನಕ ಸಾಂದ್ರಕಗಳು, ಸುಮಾರು 10 ದಶಲಕ್ಷ ವೈದ್ಯಕೀಯ ಮಾಸ್ಕ್​ಗಳು ಮತ್ತು 1.5 ದಶಲಕ್ಷಕ್ಕೂ ಹೆಚ್ಚು ಫೇಸ್​ ಶೀಲ್ಡ್​, ವೆಂಟಿಲೇಟರ್, ಆಮ್ಲಜನಕವನ್ನು ಉತ್ಪಾದಿಸುವ ಸ್ಥಾವರ, ಕೋಲ್ಡ್ ಚೈನ್ ಉಪಕರಣಗಳನ್ನು ಸಹ ರವಾನಿಸಿದೆ' ಎಂದು ಹೇಳಿದ್ದಾರೆ.

'ನಮ್ಮ ತಂಡವು ವಿಮಾನ ನಿಲ್ದಾಣದ ಥರ್ಮಲ್ ಸ್ಕ್ಯಾನರ್, ಟೆಸ್ಟಿಂಗ್​ ಕಿಟ್​ಗಳನ್ನು ಕಳುಹಿಸಿದೆ, ಜೊತೆಗೆ ತಾತ್ಕಾಲಿಕ ಡಬ್ಲ್ಯುಎಚ್‍ಒ ಟೆಂಟ್ ಮತ್ತು ಬೆಡ್​ಗಳನ್ನು ಕೂಡಾ ಒದಗಿಸುತ್ತಿದೆ. ಜೊತೆಗೆ ಸಾವಿರಾರು ಸಾರ್ವಜನಿಕ ಆರೋಗ್ಯ ತಜ್ಞರನ್ನು ನಿಯೋಜಿಸಿದೆ' ಎಂದು ಹೇಳಿದ್ದಾರೆ.

(ಮಾಹಿತಿ ಕೃಪೆ Kannada News Now )

ಆಕ್ಸಿಜನ್ ಲಿಕ್ವಿಡ್ ಸಾಗಿಸುತ್ತಿದ್ದ ಟ್ಯಾಂಕರ್ ಅಪಘಾತ ತಪ್ಪಿದ ಭಾರಿ ಅನಾಹುತ

 ಬೆಳಗಾವಿ.ಮೇ.7 ಜೀವಾಮೃತ ಆಕ್ಸಿಜನ್ ಲಿಕ್ವಿಡ್ ಸಾಗಿಸುತ್ತಿದ್ದ ಟ್ಯಾಂಕರ್ ಮುಂದೆ ಚಲಿಸುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದು ಅದೃಷ್ಟ ವಶಾತ್ ಯಾವುದೆ ಅನಾಹುತ ಸಂಭವಿಸಿಲ್ಲ. ಬೆಳಗಾವಿ ತಾಲೂಕಿನ ಮುತ್ನಾಳ್ ಗ್ರಾಮದ ರಾಷ್ಟ್ರೀಯ ಹೆದ್ದಾರಿ ನಾಲ್ಕರಲಗಲಿ ಅಪಘಾತ ನಡೆದಿದೆ.ಬೆಳಗಾವಿಗೆ ಆಕ್ಸಿಜನ್ ಲಿಕ್ವಿಡ್ ತುಂಬಿ ಕೊಂಡು ತೆರಳುತ್ತಿದ್ದಾಗ ಒವರ್ ಟೆಕ್ ಮಾಡುವ ಭರದಲ್ಲಿ ಮುಂದೆ ಚಲಿಸುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ.

ಡಿಕ್ಕಿ ಹೊಡೆದ ರಭಸಕ್ಕೆ ಟ್ಯಾಂಕರ್ ನ ಮುಂದಿನ ಟೈಯರ್ ಬ್ಲಾಸ್ಟ್ ಆಗಿದ್ದು ಆಯಕ್ಸಲ್ ಕೂಡ ಕಟ್ಟಾಗಿದೆ.ಒಂದು ವೆಳೆ ಆಯಕ್ಸಿಜನ್ ಸೊರಿಕೆ ಯಾಗಿದ್ದರೆ ಭಾರಿ ಅನಾಹುತವೆ ಸಂಭವಿಸುತ್ತಿತ್ತು ಅದೃಷ್ಟ ವಶಾತ್ ಯಾವುದೆ ಅನಾಹುತ ಸಂಭವಿಸಿಲ್ಲ.

ಸುಮಾರು.16 ಕೆ ಎ ಎಲ್ ಸಾಮಥ್ರ್ಯ ದ ಆಕ್ಸಿಜನ್ ಸಾಗಿಸಲಾಗುತ್ತಿತ್ತು.ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಸಂಬಂದ ಪಟ್ಟ ಅಧಿಕಾರಿಗಳು.ಪೆÇಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶಿಲನೆ ನಡೆಸಿ ಮತ್ತೊಂದು ಟ್ಯಾಂಕರ್ ನಲ್ಲಿ ಆಕ್ಸಿಜನ್ ಸ್ಥಳಾಂತರಿಸುವ ಸಿದ್ದತೆ ಕೈಗೊಂಡಿದ್ದಾರೆ.

(ಮಾಹಿತಿ ಕೃಪೆ ಈ ಸಂಜೆ )

Thursday, May 6, 2021

ಮದುವೆ ಸಮಾರಂಭಗಳಿಗೆ ಇ-ಪಾಸ್ ಪಡೆಯುವುದು ಹೇಗೆ?

 

ಧಾರವಾಡ, ಮೇ 06; ಕೋವಿಡ್ ಸೋಂಕು ನಿಯಂತ್ರಣಕ್ಕಾಗಿ ಕರ್ನಾಟಕ ಸರ್ಕಾರ ಲಾಕ್ ಡೌನ್ ಜಾರಿಗೊಳಿಸಿದೆ. ಮೇ 12ರ ಬೆಳಗ್ಗೆ 6 ಗಂಟೆಯ ತನಕ ಲಾಕ್ ಡೌನ್ ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ಮದುವೆಗಳನ್ನು ನಡೆಸಲು ಆಯಾ ಜಿಲ್ಲಾಡಳಿತದ ವತಿಯಿಂದ ಅನುಮತಿ ಪಡೆಯಬೇಕು.

ಧಾರವಾಡ ಜಿಲ್ಲೆಯಲ್ಲಿ ಲಾಕ್ ಡೌನ್ ಅವಧಿಯಲ್ಲಿ ಮದುವೆ ಸಮಾರಂಭಗಳನ್ನು ಮಾಡುವವರು ಜಿಲ್ಲಾಡಳಿತದ ವೆಬ್‍ಸೈಟ್ ಮೂಲಕ ಇ-ಪಾಸ್ ಪಡೆಯಬಹುದು.

ಆನ್‍ಲೈನ್ ಮೂಲಕ ಇ-ಪಾಸ್ ಪಡೆಯಲು ಮದುವೆ ಆಮಂತ್ರಣ ಪತ್ರಿಕೆ, ಪರವಾನಿಗೆ ಪಡೆಯುವವರ ಗುರುತಿನ ಚೀಟಿ (ಆಧಾರ್ ಕಾರ್ಡ್, ಪಾಸ್‍ಪೆÇೀರ್ಟ್, ಡ್ರೈವಿಂಗ್ ಲೈಸನ್ಸ್) ಮುಂತಾದವುಗಳನ್ನು ಅಪ್‍ಲೋಡ್ ಮಾಡಬೇಕು.

ಇ-ಪಾಸ್ ಧಾರವಾಡ ಜಿಲ್ಲೆ ವ್ಯಾಪ್ತಿಯೊಳಗೆ ಮಾತ್ರ ಅನ್ವಯ. ಮದುವೆಗಳಿಗೆ ಕನಿಷ್ಠ 50 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ಮದುವೆಗಳಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಬೇಕು.

ಸಮಾರಂಭದಲ್ಲಿ ಮಾರ್ಗಸೂಚಿಗಳನ್ನು ಪಾಲಿಸದೇ ಇದ್ದಲ್ಲಿ ಪರವಾನಿಗೆ ಪಡೆದ ವ್ಯಕ್ತಿ ಸಂಪೂರ್ಣ ಜವಾಬ್ದಾರ. ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಹಾಯವಾಣಿ (1077) ಸಹ ಆರಂಭಿಸಲಾಗಿದೆ.

ಮದುವೆಗೆ ಅನುಮತಿ ಪಡೆದ ವ್ಯಕ್ತಿಗಳಿಗೆ ಮದುವೆ ಕಾರ್ಯಕ್ರಮದಲ್ಲಿ 50 ಜನರ ಮಿತಿ ನಿರ್ವಹಿಸಲು ಕೈಗಳಿಗೆ ಧರಿಸಲು ಕೈ ಬ್ಯಾಂಡ್‍ಗಳನ್ನು ತಹಶೀಲ್ದಾರ್ ಕಚೇರಿ ಅಥವಾ ಹುಬ್ಬಳ್ಳಿ-ಧಾರವಾಡ ಪಾಲಿಕೆಯ ವಲಯ ಸಹಾಯಕ ಆಯುಕ್ತರ ಕಚೇರಿಯಿಂದ ಪಡೆಯಬಹುದು.

(ಮಾಹಿತಿ ಕೃಪೆ ಓನ್ ಇಂಡಿಯಾ)

ಮುಂದಿನ ತಿಂಗಳು 15 ರಿಂದ ಶಾಲೆ ಶುರು: ಬೇಸಿಗೆ ರಜೆ, ಶೈಕ್ಷಣಿಕ ವರ್ಷ ಆರಂಭದ ದಿನಾಂಕ ಘೋಷಣೆ

 

ಬೆಂಗಳೂರು: ಜೂನ್ 15 ರಿಂದ ಹೊಸ ಶೈಕ್ಷಣಿಕ ವರ್ಷ ಶುರುವಾಗಲಿದೆ. ಈ ಬಾರಿ ಶಾಲೆಗಳ ಬೇಸಿಗೆ ರಜೆ ಮತ್ತು ಮುಂದಿನ ಶೈಕ್ಷಣಿಕ ವರ್ಷ ಆರಂಭದ ದಿನಾಂಕವನ್ನು ಘೋಷಣೆ ಮಾಡಲಾಗಿದೆ. 

ಜೂನ್ 14 ರವರೆಗೆ ಪ್ರಾಥಮಿಕ ಮತ್ತು ಎಸ್‍ಎಸ್‍ಎಲ್ಸಿ ಹೊರತುಪಡಿಸಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ರಜೆ ಇರುತ್ತದೆ. ಜೂನ್ 1 ರಿಂದ 14 ರವರೆಗೆ ಎಸ್‍ಎಸ್‍ಎಲ್ಸಿ ಮಕ್ಕಳಿಗೆ ಪುನರ್ಮನನ ತರಗತಿಗಳು ನಡೆಯಲಿವೆ. 

ಶಿಕ್ಷಕರು ರಜೆ ಅವಧಿಯಲ್ಲಿ ಎಸ್‍ಎಸ್‍ಎಲ್ಸಿ ಪರೀಕ್ಷಾ ಸಿದ್ಧತೆಯ ಬಗ್ಗೆ ಗಮನಹರಿಸಬೇಕು ಎಂದು ಶಿಕ್ಷಣ ಇಲಾಖೆ ತಿಳಿಸಿದೆ. ಜೂನ್ 15 ರಿಂದ 2021 - 22 ನೇ ಸಾಲಿನ ಶೈಕ್ಷಣಿಕ ವರ್ಷ ಪ್ರಾರಂಭಿಸಲಾಗುವುದು ಎಂದು ಹೇಳಲಾಗಿದೆ.

(ಮಾಹಿತಿ ಕೃಪೆ ಕನ್ನಡದುನಿಯಾ)

ವಾರದಲ್ಲಿ ಒಂದು ದಿನ ಮಾತ್ರ ವರ್ಕ್ ಆಗುತ್ತೆ ಈ ಆಪ್.

 

ಪ್ರೀತಿಯ ಹುಡುಕಾಟದಲ್ಲಿ ಇರುವವರಿಗೆ ಡೇಟಿಂಗ್​ ಅಪ್ಲಿಕೇಶನ್​ಗಳು ಉತ್ತಮ ವೇದಿಕೆಗಳಾಗಿ ಬದಲಾಗುತ್ತದೆ. 

ಇದೇ ರೀತಿ ಹೊಸ ಡೇಟಿಂಗ್​ ಅಪ್ಲಿಕೇಶನ್ ​ಒಂದು ಇದೀಗ ಗ್ರಾಹಕರ ಬಳಕೆಗೆ ಲಭ್ಯವಾಗಿದ್ದು ಇದು ವಾರದಲ್ಲಿ ಕೇವಲ ಒಂದು ದಿನ ಮಾತ್ರ ಕಾರ್ಯನಿರ್ವಹಿಸಲಿದೆ. ಹೌದು..! ವಾರದ ಆರು ದಿನ ಅಪ್ಲಿಕೇಶನ್​ ಕಾರ್ಯ ನಿರ್ವಹಿಸೋದಿಲ್ಲ. 

ಲಂಡನ್​ ಮೂಲದ ಡಿಜಿಟಲ್​ ಫ್ಲಾಟ್​ಫಾರಂ ಥರ್ಸ್ ಡೇ ಯನ್ನ ಲಂಡನ್​ ಹಾಗೂ ನ್ಯೂಯಾರ್ಕ್​ನಲ್ಲಿ ಮಾರ್ಚ್​ 13ರಂದು ಲಾಂಚ್​ ಮಾಡಲಾಗಿದೆ. ಈ ಅಪ್ಲಿಕೇಶನ್​ ಈಗಾಗಲೇ 1.1 ಲಕ್ಷ ಬಳಕೆದಾರರನ್ನ ಹೊಂದಿದೆ. ಈ ಅಪ್ಲಿಕೇಶನ್​ನ್ನು ಕೇವಲ ಗುರುವಾರ ಮಾತ್ರ ಬಳಕೆ ಮಾಡಬಹುದಾಗಿದೆ. 

ಜನರು ಡೇಟಿಂಗ್​ ಅಪ್ಲಿಕೇಶನ್​ಗಳಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ ಅನ್ನೋದು ಸದ್ಯದ ವಾಸ್ತವವಾಗಿದೆ. ಇದರಿಂದಾಗಿ ಪ್ರೀತಿ ಪಾತ್ರರನ್ನ ಹುಡುಕೋದ್ರಲ್ಲಿ ಅವರಿಗೆ ಬೇಸರ ಹುಟ್ಟಿಕೊಳ್ಳುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ನಮ್ಮ ಅಪ್ಲಿಕೇಶನ್​ ಗುರುವಾರ ಮಾತ್ರ ನಿಮಗಾಗಿ ಬಾಗಿಲು ತೆರೆಯಲಿದೆ. ಅಲ್ಲದೇ ಡೇಟಿಂಗ್​ ಅಪ್ಲಿಕೇಶನ್​ ಹೊರತೂಪಡಿಸಿಯೂ ಜೀವನ ಇರೋದ್ರಿಂದ ಕೇವಲ ಒಂದು ದಿನ ಮಾತ್ರ ಡೇಟಿಂಗ್​ ಅಪ್ಲಿಕೇಶನ್​ ಸಮಯ ನೀಡಿದ್ರೆ ಸಾಕು ಎಂದು ಈ ಅಪ್ಲಿಕೇಶನ್​ ಮಾಲೀಕರು ಹೇಳಿದ್ದಾರೆ.

(ಮಾಹಿತಿ ಕೃಪೆ ಕನ್ನಡದುನಿಯಾ)

ಬೆಂಗಳೂರು; 100 ಹಾಸಿಗೆಯ ಕೋವಿಡ್ ಆಸ್ಪತ್ರೆ ಇಂದು ಉದ್ಘಾಟನೆ

 

ಬೆಂಗಳೂರು, ಮೇ 06; ಬೆಂಗಳೂರು ನಗರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಸೋಂಕಿತರು ಬೆಡ್‍ಗಳನ್ನು ಪಡೆಯಲು ಹರಸಾಹಸ ಪಡಬೇಕಿದೆ. ಜಾಲಹಳ್ಳಿಯಲ್ಲಿ ಇಂದು 100 ಹಾಸಿಗೆಯ ಆಸ್ಪತ್ರೆ ಉದ್ಘಾಟನೆಯಾಗುತ್ತಿದೆ. 

ಜಾಲಹಳ್ಳಿಯ ಏರ್ ಫೆÇೀರ್ಸ್ ಸ್ಟೇಷನ್‍ನಲ್ಲಿ 100 ಹಾಸಿಗೆಗಳ ಕೋವಿಡ್ ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ. ಸಾಮಾನ್ಯ ಜನರನ್ನು ಸಹ ಈ ಸೇನಾ ಆಸ್ಪತ್ರೆಗೆ ದಾಖಲು ಮಾಡಿಕೊಳ್ಳಲಾಗುತ್ತದೆ. ಏರ್ ಫೆÇೀರ್ಸ್‍ನ ಕಮಾಂಡ್ ಆಸ್ಪತ್ರೆ ಸಿಬ್ಬಂದಿ ಇದರ ನಿರ್ವಹಣೆ ನೋಡಿಕೊಳ್ಳಲಿದ್ದಾರೆ. 

ಬಿಬಿಎಂಪಿ ಮತ್ತು ರಾಜ್ಯ ಸರ್ಕಾರ ಸೂಚಿಸುವ ಜನರು ಈ ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನು ಪಡೆಯಬಹುದಾಗಿದೆ. ಆಕ್ಸಿಜನ್ ವ್ಯವಸ್ಥೆ ಹೊಂದಿರುವ ಬೆಡ್‍ಗಳು ಸಹ ಈ ಆಸ್ಪತ್ರೆಯಲ್ಲಿವೆ. ನಗರದಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ಹಿನ್ನಲೆಯಲ್ಲಿ ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ. 

ಬೆಂಗಳೂರು ನಗರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಏಪ್ರಿಲ್ 27ರಿಂದ ರಾಜ್ಯದಲ್ಲಿ ಲಾಕ್ ಡೌನ್ ಜಾರಿಗೊಳಿಸಲಾಗಿದೆ. ಮೇ 12ರ ಬೆಳಗ್ಗೆ 6 ಗಂಟೆಯ ತನಕ ಲಾಕ್ ಡೌನ್ ಜಾರಿಯಲ್ಲಿರಲಿದೆ. ಲಾಕ್ ಡೌನ್ ಇದ್ದರೂ ರಾಜ್ಯದಲ್ಲಿ ಬುಧವಾರ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ 50 ಸಾವಿರದ ಗಡಿಯನ್ನು ದಾಟಿದೆ.


'ಸೌಂದರ್ಯ' ದುಪ್ಪಟ್ಟುಗೊಳಿಸುವ ಲೋಳೆಸರ

 

ಲೋಳೆಸರ ಇದು ಹಳ್ಳಿಗಳ ಮನೆಯಂಗಳದಲ್ಲಿ ನಳನಳಿಸುವ ಬಹು ಉಪಯೋಗಿ ಸಸ್ಯ ಪ್ರಬೇಧ. ಲೋಳೆ ಇರುವ ಹಸಿರು ಬಣ್ಣದ ಎಲೆ ಹೊಂದಿರುವ ಇದನ್ನು ಅಲೋವೆರಾ ಎಂದೂ ಕರೆಯಲ್ಪಡುತ್ತಿದ್ದು, ಆಯುರ್ವೇದದಲ್ಲಿ ಇದರ ಬಳಕೆ ವ್ಯಾಪಕವಾಗಿದೆ.

(ಮಾಹಿತಿ ಕೃಪೆ ಕನ್ನಡದುನಿಯಾ)

ಗಾಯ, ಸುಟ್ಟ ಗಾಯ ಮತ್ತು ಚರ್ಮದ ಸೋಂಕಿಗೆ ಬಳಸಲಾಗುವ ಅಲೋವೆರಾವನ್ನು ಸೌಂದರ್ಯವರ್ಧಕವಾಗಿಯೂ ಬಳಸುತ್ತಾರೆ. ಆಲೋವೆರಾದಲ್ಲಿರುವ ಆಯಂಟಿ ಆಕ್ಸಿಡೆಂಟ್ ಗಳು ದೇಹದಲ್ಲಿರುವ ವಿಷವನ್ನು ಹೊರಹಾಕುವ ಜೊತೆಗೆ ದೇಹದಲ್ಲಿನ ಹಾನಿಗೊಳಗಾಗಿರುವ ಜೀವಕೋಶಗಳು ಮತ್ತು ಅಂಗಾಂಶಗಳನ್ನು ಸರಿಪಡಿಸುತ್ತದೆ.

ಆಲೋವೆರಾದ ಕ್ರೀಮ್ ಅನ್ನು ಮುಖದ ಮೇಲೆ ಲೇಪಿಸುವುದರಿಂದ ಮುಖದ ಮೇಲಿನ ಕಪ್ಪು ಕಲೆಗಳು ಮಾಯವಾಗಿ ಮುಖದ ಕಾಂತಿ ವೃದ್ದಿಸುತ್ತದೆ. ಅಲ್ಲದೇ ಇದರ ಜ್ಯೂಸ್ ಸೇವಿಸುವುದರಿಂದ ದೇಹಕ್ಕೆ ಅಗತ್ಯವಿರುವ ಅಗಾಧ ಪ್ರಮಾಣದ ಪೌಷ್ಠಿಕಾಂಶ, ಮಿನರಲ್ ಮತ್ತು ವಿಟಮಿನ್ ಗಳನ್ನು ಒದಗಿಸುತ್ತದೆ. ಈ ಜ್ಯೂಸ್ ನಲ್ಲಿ ಅಧಿಕ ಪ್ರಮಾಣದ ಅಮಿನೋ ಆಯಸಿಡ್ ಮತ್ತು ಫ್ಯಾಟಿ ಆಯಸಿಡ್ ಇದ್ದು, ಇದು ಆರೋಗ್ಯಕ್ಕೆ ಒಳ್ಳೆಯದು ಎಂಬ ಅಭಿಪ್ರಾಯ ವೈದ್ಯರದ್ದು.

MAIN NEWS: ಕೊರೊನಾದಿಂದ ರಕ್ಷಣೆ ಪಡೆಯುವ ಸುಲಭ ವಿಧಾನ ಹೇಳಿದ ಆಯುಷ ಆಯುಷ್ ಸಚಿವಾಲಯ

 

ಪ್ರಸ್ತುತ ಲಕ್ಷಾಂತರ ಮಂದಿ ಕೊರೊನಾಗೆ ಬಲಿಯಾಗ್ತಿದ್ದಾರೆ. ಕೊರೊನಾ ಸಂದರ್ಭದಲ್ಲಿ ರೋಗ ನಿರೋಧಕ ಶಕ್ತಿ ಮಹತ್ವ ಗೊತ್ತಾಗ್ತಿದೆ. ಶಕ ನಿರೋಧಕ ಶಕ್ತಿ ಹೆಚ್ಚಾಗಿದ್ದಲ್ಲಿ ಕೊರೊನಾ ಸೋಂಕಿನಿಂದ ಬೇಗ ಮುಕ ಮುಕ್ತಿ ಪಡೆಯಬಹುದು. ಯಾವುದೇ ಅಪಾಯವಿಲ್ಲದೆ ಕೊರೊನಾ ಗೆದ್ದು ಬರಬಹುದು.

ಕೊರೊನಾ ವೈರಸ್ ನಿಂದ ರಕ್ಷಿಸಲು ಮತ್ತು ರೋಗ ಶಕ್ತಿಯನ್ನು ಬಲಪಡಿಸಲು ದೇಶದ ಆಯುಷ್ ಕೆಲವು ಸಲಹೆಗಳನ್ನು ನೀಡಿದೆ. ವೇದ್ವೇದ ವಿಧಾನಗಳನ್ನು ಅನುಸರಿಸುವ ಮೂಲಕ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಜೊತೆಗೆ ಯಾವುದೇ ಅಡ್ಡ ಪರಿಣಾಮವಿಲ್ಲದೆ ರೋಗವನ್ನು ಗೆಲ್ಲಬಹುದು.

ದೇಹದ ರೋಗನಿರೋಧಕ ಶಕ್ತಿಯನ್ನು ನೈಸರ್ಗಿಕ ವಿಧಾನಗಳಿಂದ ಬಲಪಡಿಸಬಹುದು.

ಪ್ರತಿದಿನ ಚ್ಯವನ್‌ಪ್ರಶ್ ಸೇವಿಸಬೇಕು.

ಹಾಲನ ಹಾಲನ್ನು ದಿನಕ್ಕೆ 1 and 2 ಸೇವಿಸಬೇಕು ಸೇವಿಸಬೇಕು.

ಚಹಾ ಚಹಾ ಅಥವಾ ತುಳಸಿ, ದಾಲ್ಚಿನ್ನಿ, ಕರಿಮೆಣಸು, ಮತ ಶುಂಠಿ್ತು ಒಣ ದ್ರಾಕ್ಷಿಯಿಂದ ಮಾಡಿದ 1-2 ಬಾರಿ ಕುಡಿಯಿರಿ.

ಕೊರೊನಾ ವೈರಸ್ ದೇಶಾದ್ಯಂತ ಹರಡಿದ್ದು, ತಣ್ಣೀರು ಅಥವಾ ತಣ್ಣನೆಯ ವಸ್ತುಗಳನ್ನು ಸೇವಿಸುವುದನ್ನು. ಗಂಟಲು ಹಾಳಾಗುವ ಆಹಾರ ಸೇವನೆ ಮಾಡಬಾರದು. ದಿನಕ್ಕೆ ಹಲವಾರು ಬಾರಿ ಬಿಸಿ ನೀರು ಕುಡಿಯಿರಿ. ಬಿಸಿ ನೀರಿಗೆ ಒಂದು ಚಿಟಿಕೆ ಉಪ್ಪು ಮತ್ತು ಅರಿಶಿನ ಸೇರಿಸಿ ಗಾರ್ಗಲ್ ಮಾಡಿ. ಲಿ್ಲಿ ಮಾಡಿದ ಆಹಾರವನ್ನೇ ಈ ಸಮಯದಲ್ಲಿ ಸೇವನೆ ಮಾಡಿ. ತಿಂಡಿಯನ್ನು ಸೇವಿಸಬೇಡಿ. ಕೆ್ಕೆ ಅರಿಶಿನ, ಜೀರಿಗೆ, ಬೆಳ್ಳುಳ್ಳಿ, ಶುಂಠಿ ಮತ್ತು ಕೊತ್ತಂಬರಿ ಮುಂತಾದ ಮಸಾಲೆ ಸೇರಿಸಿ. ಈ ಆಹಾರ ಸ್ವಾಭಾವಿಕವಾಗಿ ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತವೆ.

ಮನೆಯಲ್ಲಿಯೇ ಯೋಗ ಮಾಡಬೇಕು. ಯೋಗ, ಪ್ರಾಣಾಯಾಮ, ಅನುಲೋಮ-ವಿಲೋಮ, ಆಳವಾದ ಉಸಿರಾಟದ ವ್ಯಾಯಾಮ ಮಾಡುವ ಮೂಲಕ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ. ದಿನಕ್ಕೆ ಒಂದು ಅಥವಾ ಎರಡು ಎರಡು ಬಾರಿ ಉಗಿ ತೆಗೆದುಕೊಳ್ಳಿ. ಪುದೀನಾ ಎಲೆಗಳನ್ನು ಹಾಕಿ ಉಗಿ ತೆಗೆದುಕೊಳ್ಳಬೇಕು. ಮು್ಮು ಕಾಡುತ್ತಿದ್ದರೆ ಲವಂಗದ ಪುಡಿಯನ್ನು ಜೇನು ತುಪ್ಪಕ್ಕೆ ಬೆರೆಸಿ ಸೇವನೆ ಮಾಡಬೇಕೆಂದು ಆಯುಷ್ ಸಚಿವಾಲಯ ಹೇಳಿದೆ. ಹೇಳಲಾಗಿದೆ ವೇಳೆ ಕೆಮ್ಮು ಜಾಸ್ತಿಯಿದ್ದರೆ ವೈದ್ಯರನ್ನು ಭೇಟಿಯಾಗುವಂತೆ ಹೇಳಲಾಗಿದೆ. ಫುಲ್ ಫುಲ್ಲಿಂಗ್ ಕೂಡ ಒಳ್ಳೆಯದು ಎಂದು ಆಯುಷ್ ಸಚಿವಾಲಯ ಹೇಳಿದೆ.

(ಮಾಹಿತಿ ಕೃಪೆ ಕನ್ನಡದುನಿಯಾ)


Wednesday, May 5, 2021

ಬೆಡ್ ಬ್ಲಾಕಿಂಗ್ ಪ್ರಕರಣದಲ್ಲಿ ನಾಲ್ವರು ಅರೆಸ್ಟ್, ದಂಧೆಯಲ್ಲಿ ಭಾಗಿಯಾಗಿದ್ಯಾರು ಗೊತ್ತಾ.?

ಬೆಂಗಳೂರು: ಬೆಂಗಳೂರಿನಲ್ಲಿ ಮಹತ್ವದ ಕಾರ್ಯಾಚರಣೆ ನಡೆಸಿರುವ ಪೊಲೀಸರು ಬೆಡ್ ಬ್ಲಾಕಿಂಗ್ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಸೋಂಕಿತರ ಹೆಸರಲ್ಲಿ ಬೆಡ್ ಕಾಯ್ದಿರಿಸಿ ಬೇರೆಯವರಿಂದ ಹಣ ಪಡೆದು ಬೆಡ್ ಗಳನ್ನು ಕೊಡುತ್ತಿದ್ದ ತಂಡ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿದ್ದು, ಜಾಲದ ಬಗ್ಗೆ ಸಂಸದ ತೇಜಸ್ವಿ ಸೂರ್ಯ ಗಮನಸೆಳೆದಿದ್ದರು. ಬೆಂಗಳೂರಿನ ಜಯನಗರ ಪೊಲೀಸ್ ಠಾಣೆಯಲ್ಲಿ 2 ಪ್ರಕರಣ ದಾಖಲಾಗಿದ್ದು ಸಿಸಿಬಿಗೆ ವರ್ಗಾವಣೆ ಮಾಡಲಾಗಿದೆ.

ತನಿಖೆ ಕೈಗೊಂಡ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂತ್ ತಿಳಿಸಿದ್ದಾರೆ.

ಬೊಮ್ಮನಹಳ್ಳಿ ವಲಯ ಕೋವಿಡ್ ವಾರ್ ರೂಮ್ ಉಸ್ತುವಾರಿ ಡಾ. ಸುರೇಶ್, ದಕ್ಷಿಣ ವಲಯ ವಾರ್ ರೂಮ್ ಉಸ್ತುವಾರಿ ಡಾ. ರೆಹಾನ್ ಭಾಗಿಯಾಗಿರುವ ಮಾಹಿತಿ ಗೊತ್ತಾಗಿದ್ದು, ಸುರೇಶ್ ಸೋಂಕು ತಗುಲಿ ಹೋಮ್ ಐಸೋಲೇಷನ್ ನಲ್ಲಿರುವುದರಿಂದ ರೆಹಾನ್ ಅವರನ್ನು ವಶಕ್ಕೆ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಹೇಳಲಾಗಿದೆ.

(ಮಾಹಿತಿ ಕೃಪೆ ಕನ್ನಡದುನಿಯಾ )

ದೇವಸ್ಥಾನದಲ್ಲಿ ನೀರು ಸುರಿದರೆ ಕೊರೋನಾ ಮಾಯ:ನಂಬಿದ ನೂರಾರು ಜನರ ಮೆರವಣಿಗ

ಅಹಮದಾಬಾದ್: ಗುಜರಾತ್‌ನ ಅಹಮದಾಬಾದ್‌ನಲ್ಲಿ ಕೋವಿಡ್ -19 ಪ್ರೋಟೋಕಾಲ್‌ಗಳನ್ನು ಬಹಿರಂಗವಾಗಿ ಮುರಿಯಲಾಯಿತು. ಧಾರ್ಮಿಕ ಮೆರವಣಿಗೆಯ ವಿಡಿಯೋ ವೈರಲ್ ಆದ ನಂತರ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಈ ಘಟನೆ ಮೇ 3 ರಂದು ಅಹಮದಾಬಾದ್ ಜಿಲ್ಲೆಯ ಸನಂದ್ ತಾಲ್ಲೂಕಿನ ನವಪುರ ಗ್ರಾಮದಲ್ಲಿ ನಡೆದಿದೆ. ಕೋವಿಡ್ -19 ಮಾನದಂಡಗಳನ್ನು ಉಲ್ಲಂಘಿಸಿದ್ದಕ್ಕಾಗಿ ಗ್ರಾಮದ ಮುಖ್ಯಸ್ಥ ಸೇರಿದಂತೆ 23 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆಯ ವಿಡಿಯೋವೊಂದರಲ್ಲಿ ನೂರಾರು ಮಹಿಳೆಯರು ತಲೆಗೆ ನೀರಿನ ಮಡಕೆಗಳೊಂದಿಗೆ ಬೈಲ್ಯದೇವ್ ದೇವಸ್ಥಾನದ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾರೆ.

ಕೆಲವು ಪುರುಷರು ಈ ಮಡಕೆಗಳನ್ನು ದೇವಾಲಯದ ಮೇಲ್ಭಾಗಕ್ಕೆ ತೆಗೆದುಕೊಂಡು ಖಾಲಿ ಮಾಡುತ್ತಿರುವುದನ್ನು ಸಹ ವೀಡಿಯೊದಲ್ಲಿ ಇದೆ. ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, ಬೈಲ್ಯದೇವ್ ದೇವಸ್ಥಾನದಲ್ಲಿ ನೀರು ಸುರಿದರೆ ಕರೋನವೈರಸ್ ಹೋಗುತ್ತದೆ ಎಂದು ನಂಬಿದ್ದರಿಂದ ಗ್ರಾಮಸ್ಥರು ಧಾರ್ಮಿಕ ಮೆರವಣಿಗೆಗಾಗಿ ನೆರೆದಿದ್ದರು.

ಸನಂದ್ ವಿಭಾಗದ ಉಪ ಪೊಲೀಸ್ ವರಿಷ್ಠಾಧಿಕಾರಿ ಕೆ.ಟಿ.ಕಮರಿಯಾ, 'ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ನೀರಿನ ಮಡಕೆಗಳನ್ನು ಒಟ್ಟುಗೂಡಿಸಿದ್ದರು. ಪೊಲೀಸ್ ತಂಡ ಒಂದೇ ದಿನ ಸ್ಥಳಕ್ಕೆ ಧಾವಿಸಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕಾಗಿ ಸರ್ಪಂಚ್ ಗಫಭಾಯ್ ಠಾಕೋರ್ ಸೇರಿದಂತೆ 23 ಗ್ರಾಮಸ್ಥರನ್ನು ಬಂಧಿಸಿತು. '

ಭಾರತೀಯ ದಂಡ ಸಂಹಿತೆ ಮತ್ತು ವಿಪತ್ತು ನಿರ್ವಹಣಾ ಕಾಯ್ದೆ ಮತ್ತು ಸಾಂಕ್ರಾಮಿಕ ರೋಗಗಳ ಕಾಯ್ದೆಯ ಸೆಕ್ಷನ್ 188 ರ ಅಡಿಯಲ್ಲಿ ಸಾರ್ವಜನಿಕ ಸಭೆಗಳಿಗೆ ಸಂಬಂಧಿಸಿದಂತೆ ಪೊಲೀಸ್ ಅಧಿಸೂಚನೆಯನ್ನು ಉಲ್ಲಂಘಿಸಿದ್ದಕ್ಕಾಗಿ ಎಲ್ಲಾ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಕೆ.ಟಿ.ಕಮರಿಯಾ ಹೇಳಿದರು.

(ಮಾಹಿತಿ ಕೃಪೆ Kannada News Now )

ಅಧಿಕಾರಿಗಳನ್ನು ಅಮಾನತು ಮಾಡಿ, ಸಚಿವರು ರಾಜೀನಾಮೆ ನೀಡಲಿ : ಅಭಯಚಂದ್ರ

 

ಹಳೆಯಂಗಡಿ: ಚಾಮರಾಜನಗರದಲ್ಲಿನ ಆಕ್ಸಿಜನ್ ದುರಂತ ಹಾಗೂ ಬೆಂಗಳೂರಿನಲ್ಲಿನ ಬೆಡ್ ಬ್ಲಾಕಿಂಗ್ ಹಗರಣದಲ್ಲಿನ ಅಧಿಕಾರಿಗಳನ್ನು ಹಾಗೂ ಎರಡೂ ಜಿಲ್ಲೆಯ ಜಿಲ್ಲಾಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕು, ಇದಕ್ಕೆ ನೇರ ಹೊಣೆಗಾರರಾಗಿರುವ ಆರೋಗ್ಯ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಆಗ್ರಹಿಸಿದರು.

ಹಳೆಯಂಗಡಿಯ ಮೂಲ್ಕಿ ಬ್ಲಾಕ್ ಕಾಂಗ್ರೆಸ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರಕ್ಕೆ ತನ್ನ ಆಡಳಿತದ ಅಧಿಕಾರಿಗಳನ್ನು ಹತೋಟಿಗೆ ಇಟ್ಟುಕೊಳ್ಳಲು ಸಾಧ್ಯವಾಗುತ್ತಿಲ್ಲ, ಇಷ್ಟೇಲ್ಲಾ ಹಗರಣ ನಡೆದರೂ ಕೇಂದ್ರ ಸರ್ಕಾರ ಮೌನ ವಹಿಸಿದೆ, ಆಡಳಿತ ನಡೆಸುವ ಬಿಜೆಪಿಯ ಇಬ್ಬರು ಶಾಸಕರು, ಒರ್ವ ಸಂಸದರೇ ಈ ಹಗರಣ ಬಯಲಿಗೆಳೆದಿರುವುದು ಸರ್ಕಾರದಲ್ಲಿನ ಇಚ್ಚಾಶಕ್ತಿಯ ಕೊರತೆ ಎದ್ದು ಕಾಣುತ್ತಿದೆ, ಸರ್ಕಾರದ ಮಂತ್ರಿ ಮಂಡಲ ಹಾಗೂ ಆಡಳಿತದ ಕಾರ್ಯದರ್ಶಿಯೇ ಇದಕ್ಕೆ ನೇರ ಹೊಣೆಯಾಗಿದ್ದಾರೆ. ರಾಜಕೀಯವನ್ನು ಸಮಾಜ ಸೇವೆಗೆಂದು ಮೀಸಲಿಡಿ, ಜನರ ಸಂಕಷ್ಟವನ್ನು ಅರಿತುಕೊಳ್ಳಬೇಕು ಎಂದ ಅವರು, ಧರ್ಮಸ್ಥಳದ ಯೋಜನೆಯಿಂದ ಬಂದಂತಹ ನೆರವು ಶ್ಲಾಘನೀಯ ಎಂದರು.

ಕರಾವಳಿಯ ಆಸ್ಪತ್ರೆಯವರು ಪರೋಕ್ಷವಾಗಿ ಸಮಾಜ ಸೇವಕರಾಗಿರುವುದರಿಂದ ಇಲ್ಲಿ ಬೆಂಗಳೂರಿನಂತೆ ಬೆಡ್ ಬ್ಲಾಕಿಂಗ್ ಮಾಡಲು ಸಾಧ್ಯವಿಲ್ಲ, ಅಧಿಕಾರಿಗಳ ಕುಮ್ಮಕ್ಕಿನಿಂದ ನಡೆದರೆ ಅದೂ ಸಹ ಖಂಡನೀಯ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಅಭಯಚಂದ್ರ ಅವರು ಉತ್ತರಿಸಿದರು.

ವೆನ್‌ಲಾಕ್‌ನಲ್ಲಿ ವೆಂಟಿಲೇಟರ್ ಹೆಚ್ಚಿಸಿ : ಮಿಥುನ್ ರೈ

ಮಂಗಳೂರಿನ ಜಿಲ್ಲಾ ವೆನ್‌ಲಾಕ್‌ನಲ್ಲಿ ಈಗಿರುವ ವೆಂಟಿಲೇಟರ್ ಸಾಕಾಗುವುದಿಲ್ಲ, ಇದನ್ನು 100ಕ್ಕೇರಿಸಬೇಕು, ಮುಂದಿನ ಅಪಾಯವನ್ನು ಅರಿತು ಇಂದೇ ಜಾಗೃತೆ ವಹಿಸಿರಿ, ಆಕ್ಸಿಜನ್ ಸಮಸ್ಯೆ ಜಿಲ್ಲೆಗೂ ಕಾಡಲಿದೆ, ಪ್ರತಿದಿನ ಕೋವಿಡ್ ವಿರುದ್ಧ ನಡೆಸುವ ಕಾರ್ಯದ ಬಗ್ಗೆ ಉಸ್ತುವಾರಿ ಸಚಿವರು ಪ್ರತಿಸ್ಪಂದಿಸಬೇಕು, ಹೊರ ರಾಜ್ಯ, ಜಿಲ್ಲೆಯಿಂದ ಜನರು ಕೋವಿಡ್‌ನೊಂದಿಗೆ ಆಗಮಿಸುತ್ತಿದ್ದರೂ ಜಿಲ್ಲಾಡಳಿತ ಎಚ್ಚೆತ್ತಿಲ್ಲ, ಜಿಲ್ಲೆಯ ಎಲ್ಲಾ 7 ಮಂದಿ ಸಚಿವರು, ಸಂಸದವರು ಒಟ್ಟಾಗಿ ರಾಜ್ಯ, ಕೇಂದ್ರಕ್ಕೆ ಒತ್ತಡ ಹಾಕಿ ಸುರಕ್ಷತೆಗಾಗಿ ಈಗಲೇ ಎಚ್ಚೆತ್ತುಕೊಳ್ಳಬೇಕು, ಬಡವರ್ಗದ ಜನರು ನಲುಗುತ್ತಿದ್ದಾರೆ ಅವರನ್ನು ಮೊದಲು ರಕ್ಷಿಸಲು ಪ್ರಯತ್ನಿಸಿ, ಕೋವಿಡ್ ನಿಯಂತ್ರಣಕ್ಕಾಗಿ ಪಕ್ಷಬೇದ ಮರೆತು ಕೆಲಸ ಮಾಡೋಣ ಎಂದರು.

ಕೆಪಿಸಿಸಿ ಜಿಲ್ಲಾ ವಕ್ತಾರ ಎಚ್.ವಸಂತ ಬೆರ್ನಾಡ್, ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಮಟ್ಟು, ಯುವ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಪೂಜಾರ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪದ್ಮಾವತಿ ಶೆಟ್ಟಿ, ಇಂಟಕ್‌ನ ಅಧ್ಯಕ್ಷ ಮೋಹನ್ ಕೊಟ್ಯಾನ್ ಶಿಮಂತೂರು ಮತ್ತಿತರರು ಉಪಸ್ಥಿರಿದ್ದರು.

(ಮಾಹಿತಿ ಕೃಪೆ ಉದಯವಾಣಿ )


ಸಿಎಂ ಯಡಿಯೂರಪ್ಪ ಹಾಗೂ ಸಚಿವರ ವಿರುದ್ಧ ಭ್ರಷ್ಟಾಚಾರ, ಪರೋಕ್ಷ ಹತ್ಯೆ ಆರೋಪ, ಎಂತಹ ನಾಟಕ!


 ಬೆಂಗಳೂರು: ಕೊರೋನಾ ಸೋಂಕಿತರ ಹೆಸರಿನಲ್ಲಿ ಹಾಸಿಗೆ ಬ್ಲಾಕ್ ಮಾಡಿಸಿ ದುಬಾರಿ ಬೆಲೆಗೆ ಬೇರೊಬ್ಬರಿಗೆ ಮಾರಾಟ ಮಾಡುತ್ತಿದ್ದ ದಂಧೆಯನ್ನು ಸಂಸದ ತೇಜಸ್ವಿ ಸೂರ್ಯ ಹಾಗೂ ಸರ್ಕಾರದ ಶಾಸಕರು ಬಯಲು ಮಾಡಿದ್ದು, ತಪ್ಪಿತ್ತಸ್ಥರ ವಿರುದ್ದ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ಸಂಸದ ತೇಜಸ್ವಿ ಅವರು ಸಿಎಂ ಯಡಿಯೂರಪ್ಪ ಹಾಗೂ ಸಚಿವರ ವಿರುದ್ಧ ಭ್ರಷ್ಟಾಚಾರ ಹಾಗೂ ಪರೋಕ್ಷ ಹತ್ಯೆ ಆರೋಪ ಮಾಡಿದ್ದಾರೆ, ಎಂತಹ ನಾಟಕ ಎಂದು ಕುಹಕವಾಡಿದೆ.

ಸಂಸದ ತೇಜಸ್ವಿ ಸೂರ್ಯ ಮತ್ತು ಅವರ ಸಂಬಂಧಿ ಶಾಸಕ ಮತ್ತು ಮತ್ತಿಬ್ಬರು ಶಾಸಕರು ಆಸ್ಪತ್ರೆಯಲ್ಲಿ ಹಾಸಿಗೆ ಹಗರಣದ ಬಗ್ಗೆ ಆರೋಪಿಸಿದ್ದಾರೆ. ರಾಜ್ಯದಲ್ಲೂ, ಕೇಂದ್ರದಲ್ಲೂ , ಬಿಬಿಎಂಪಿಯಲ್ಲೂ ಬಹುತೇಕ ಬೆಂಗಳೂರು ಎಂಪಿಗಳೂ ಎಲ್ಲರೂ ಬಿಜೆಪಿಯವರೇ!

ಒಬ್ಬರಲ್ಲ ಎಂದು ಮೂರು ಡಿಸಿಎಂಗಳು. ಅಧಿಕಾರವೆಲ್ಲ ತಮ್ಮ ಕೈಲಿದ್ದು ಸಹ ಬಿಜೆಪಿಯ ಎಂಪಿಗಳು, ಶಾಸಕರು ಪ್ರೆಸ್ ಮೀಟ್ ಮಾಡಿ ತಮ್ಮದೇ ಸರ್ಕಾರದ ವೈಫಲ್ಯತೆ, ಭ್ರಷ್ಟಾಚಾರವನ್ನು ಹೇಳುತ್ತಿದ್ದಾರೆ ಎಂದರೆ ಇದು ತೀರ ನಾಚಿಕೆಗೇಡು ಎಂದು ವಾಗ್ದಾಳಿ ನಡೆಸಿದೆ.

ಸಂಸದ- ಶಾಸಕರ ಪತ್ರಿಕಾಗೋಷ್ಠಿ ಅಧಿಕಾರಿಗಳ ಮೇಲೆ ಆರೋಪ ಹೊರಿಸಿ ಹೊಣೆಗಾರಿಕೆಯಿಂದ ಜಾರಿಕೊಳ್ಳುವ ಯತ್ನ ಹಾಗೂ ಬಿಜೆಪಿ ಒಳಜಗಳದ ಭಾಗವಷ್ಟೇ. ಬೆಡ್‌ಗಳ ಅವ್ಯವಹಾರ ನಡೆಯುತ್ತಿದ್ದರೂ ಕಣ್ಮುಚ್ಚಿ ಕುಳಿತಿದ್ದೇಕೆ? ಪತ್ರಿಕಾಗೋಷ್ಠಿ ಬದಲು ಲೋಪ ಸರಿಪಡಿಸುವ ಪ್ರಯತ್ನ ಮಾಡಿಲ್ಲ ಏಕೆ? ಇಂತಹ ದುರಿತ ಕಾಲದಲ್ಲೂ ಗಾಂಭೀರ್ಯತೆ ಇಲ್ಲವೇಕೆ? ಎಂದು ಪ್ರಶ್ನಿಸಿದೆ.

(ಮಾಹಿತಿ ಕೃಪೆ ಕನ್ನಡ ಪ್ರಭ)

Tuesday, May 4, 2021

ಇಳಕಲ್ ಸೀರೆ ಉಟ್ಕೊಂಡು..


👉 
 ಇಳಕಲ್ ಸೀರೆ ಉಟ್ಕೊಂಡು..
ಮೊಣಕಾಲ್ ಗಂಟ ಎತ್ಕೊಂಡು..
ಏರಿ ಮೇಲೆ ಎರಿ ಬಂದ್ಲು ನಾರಿ...
ಬುತ್ತಿ ತುಂಬ ಪ್ರೀತಿ ತಂದ್ಲು ಗೌರಿ...
❤ ❤music ❤ ❤
(ಒ) ಇಳಕಲ್ ಸೀರೆ ಉಟ್ಕೊಂಡು
ಮೊಣಕಾಲ್ ಗಂಟ ಎತ್ಕೊಂಡು
ಏರಿ ಮೇಲೆ ಎರಿ ಬಂದ್ಲು ನಾರಿ...
ಬುತ್ತಿ ತುಂಬ ಪ್ರೀತಿ ತಂದ್ಲು ಗೌರಿ...
ಮಲ್ಲಿಗೆ ಈ ಮಲ್ಲಿಗೆ
ಆಹಾ ಮೈಸೂರ್ ಮಲ್ಲಿಗೆ
ಐ ಲೆಸ್ಸಾ ಐಸ್ಸ ಐ ಲೆಸ್ಸಾ......ಐ ಲೆಸ್ಸಾ ಐಸ್ಸ ಐ ಲೆಸ್ಸಾ
(ಒ) ಇಳಕಲ್ ಸೀರೆ ಉಟ್ಕೊಂಡು
ಮೊಣಕಾಲ್ ಗಂಟ ಎತ್ಕೊಂಡು
ಏರಿ ಮೇಲೆ ಎರಿ ಬಂದ್ಲು ನಾರಿ
ಬುತ್ತಿ ತುಂಬ ಪ್ರೀತಿ ತಂದ್ಲು ಗೌರಿ
ಮಲ್ಲಿಗೆ ಈ ಮಲ್ಲಿಗೆ
ಆಹಾ ಮೈಸೂರ್ ಮಲ್ಲಿಗೆ
ಐ ಲೆಸ್ಸಾ ಐಸ್ಸ ಐ ಲೆಸ್ಸಾ......ಐ ಲೆಸ್ಸಾ ಐಸ್ಸ ಐ ಲೆಸ್ಸಾ
 ❤ ❤music❤ ❤  
ಐ ಲೆಸ್ಸಾ ಐಸ್ಸ ಐ ಲೆಸ್ಸಾ......ಐ ಲೆಸ್ಸಾ ಐಸ್ಸ ಐ ಲೆಸ್ಸಾ
(ಒ) ನಾಟಿ ಹೊಲದ ಕಳೆಯ ತೆಗೆದ್ಲು ಓ....
(ಈ) ಬಾಳ ಬಂಗಾರ ನೀನು
(ಒ) ಹೊಲಕೆ ತಾನೆ ಬೇಲಿ ಆದ್ಲು ಓ....
(ಈ) ಹಣೆಯ ಸಿಂಗಾರ ನೀನು
(ಒ) ಖಂಡ್ಗ ಖಂಡ್ಗ ಕನಸು ಬೆಳೆದ್ಲು ಓ....
(ಈ) ನಿನ್ನ ಕೈಲಾಡೋ ಬೊಂಬೆ
(ಒ) ಎದೆ ಕಣಜ ತುಂಬ್ಸೇ ಬಿಟ್ಲು ಓ....
(ಈ) ನಾನಯ್ಯ ಬೊಂಬೆ ನಾನಯ್ಯ
(ಒ) ಪುಂಗಿಯ ಬಳಿ ನಾಗ ಆದೆನು ನಾನೀಗ
ಏನು ಗುಂಗೊ ಗೌರಿ ಧನಿಯಲೀ....
ಮನ್ಸಿಗೆ ಸ್ನಾನ.... ಮಾಡ್ಸಿದ್ಲು...
ಪ್ರೀತಿಯ ಅಂಗಿ ತೊಡ್ಸಿದ್ಲು...
ಇಳಕಲ್ ಸೀರೆ ಉಟ್ಕೊಂಡು
ಮೊಣಕಾಲ್ ಗಂಟ ಎತ್ಕೊಂಡು
ಏರಿ ಮೇಲೆ ಎರಿ ಬಂದ್ಲು ನಾರಿ...
ಬುತ್ತಿ ತುಂಬ ಪ್ರೀತಿ ತಂದ್ಲು ಗೌರಿ...
ಮಲ್ಲಿಗೆ ಈ ಮಲ್ಲಿಗೆ
ಆಹಾ ಮೈಸೂರ್ ಮಲ್ಲಿಗೆ
ಐ ಲೆಸ್ಸಾ ಐಸ್ಸ ಐ ಲೆಸ್ಸಾ......ಐ ಲೆಸ್ಸಾ ಐಸ್ಸ ಐ ಲೆಸ್ಸಾ
❤ ❤music❤ ❤
(ಈ) ಒಂದೇ ತಣಿಗೆಯಾಗೆ ಊಟ ಓ....
(ಒ) ನೋಟದಾಗೆ ನಗೆಯಾ ಮೀಟಿ
(ಈ) ಇಬ್ರ ಬಾಯಿಗೊಂದೇ ಲೋಟ ಓ....
(ಒ) ಮೋಜಿನಾಗೆ ಎಲ್ಲೆಯ ದಾಟಿ
(ಈ) ಬೇಗ ಬಿದ್ರೆ ಮದ್ವೆ ಬೆಸ್ಗೆ ಓ....
(ಒ) ಮೋಡಿಯ ಮಾಡಿದೋಳ
(ಈ) ಇಬ್ರ ಇಷ್ಟಕ್ಕೊಂದೇ ಹಾಸ್ಗೆ ಓ...
(ಒ) ಪರಸಂಗ ಐತೇ..
(ಈ) ಕನಸಲ್ಲೆ ಬಾಳ್ತಿವ್ನಿ ನನಸಿಗೆ ಕಾಯ್ತಿವ್ನಿ
ತಾಳಿಗಿಷ್ಟು ಚಿನ್ನ ತಾರಯ್ಯ...
ಉಕ್ತೀನ್ ನಿನ್ ಮನೆಗೆ ಹಾಲಾಗಿ..
ಇರ್ತೀನ್ ನಿನ್ ಕುಡಿಗೆ ತಾಯಾಗಿ..
(ಒ) ಇಳಕಲ್ ಸೀರೆ ಉಟ್ಕೊಂಡು
ಮೊಣಕಾಲ್ ಗಂಟ ಎತ್ಕೊಂಡು
ಏರಿ ಮೇಲೆ ಎರಿ ಬಂದ್ಲು ನಾರಿ...
ಬುತ್ತಿ ತುಂಬ ಪ್ರೀತಿ ತಂದ್ಲು ಗೌರಿ...
ಮಲ್ಲಿಗೆ ಈ ಮಲ್ಲಿಗೆ
ಆಹಾ ಮೈಸೂರ್ ಮಲ್ಲಿಗೆ

ಐ ಲೆಸ್ಸಾ ಐಸ್ಸ ಐ ಲೆಸ್ಸಾ......ಐ ಲೆಸ್ಸಾ ಐಸ್ಸ ಐ ಲೆಸ್ಸಾ





ಏನೈತೋ ಅಂತರಾಳದಾಗೆ ಏನೈತೋ

 


👉 
 *ಏನೈತೋ ...ಓ..ಓ..ಓ
 ಅಂತರಾಳದಾಗೆ ಏನೈತೋ... ...ಓ..ಓ..ಓ  
ಅಂತರಾಳದಾಗೆ ಏನೈತೋ ...ಓ..ಓ..ಓ..ಓ. 
ಚಿಗುರೈತೋ, ...ಓ..ಓ..ಓ  
 ಮಾಗೈತೋ, ...ಓ..ಓ..ಓ..ಓ. 
 ಅರಳೈತೋ, ...ಓ..ಓ..ಓ ಮುದುರೈತೋ. ...ಓ..ಓ..ಓ..ಓ. 
ಪ್ರೀತಿ ರಸ ಬಳ್ಳಿ ಎಂಬುದು ಎಲೈತೋ.......ಓ..ಓ..ಓ..ಓ.
ಅಲ್ಲಿ ಬಾಳ ಮೊಗ್ಗು ಎಂದು ನಗುತೈತೋ...ಓ..ಓ..ಓ
ಏನೈತೋ ಅಂತರಾಳದಾಗೆ ಏನೈತೋ ...ಓ..ಓ..ಓ
ಅಂತರಾಳದಾಗೆ ಏನೈತೋ...ಓ..ಓ..ಓ
*****music******
ಪ್ರೀತಿ ಅಂದ್ರೆ ಗೋಡೆಗೆ ಎಸೀಯೋ ಚಂಡು ಅಂತಾರೆ
ಪುಟಿಯೋ ಚಂಡು ಅಂತಾರೆ
ಪ್ರೀತಿ ಅಂದ್ರೆ ಕೂಸಿಗೆ ಕಲ್ಸೋ ಮಾತು ಅಂತಾರೆ
ಮುದ್ದಿನ ಮಾತು ಅಂತಾರೆ
...ಓ..ಓ..ಓ...ಓ
ಪ್ರೀತಿ ಅಂದ್ರೆ ಗಿರಿಗೋಳ್ ಮುಂದಿನ ಧ್ವನಿಗೊಳ್ ಅಂತಾರೆ ಪ್ರತಿ ಧ್ವನಿಗೊಳ್ ಅಂತಾರೆ
ದೀಪದಿಂದ ದೀಪಾ ಹಚ್ಚೋ ಜ್ಯೋತಿ ಅಂತಾರೆ
ಪ್ರೀತಿ ಜ್ಯೋತಿ ಅಂತಾರೆ
ನಾವು ಕೊಟ್ಟರೆ ತಾನು ಕೊಡುವೇನು
ಆ ಆ ಆ ಆ ಆ ಹಾ
ನಾವು ಕೊಟ್ಟರೆ ತಾನು ಕೊಡುವೇನು ಅಂತದೆ ಮನಸಾರೆ
ಏನೈತೋ ...ಓ..ಓ..ಓ ಅಂತರಾಳದಾಗೆ ಏನೈತೋ ...ಓ..ಓ..ಓ
ಅಂತರಾಳದಾಗೆ ಏನೈತೋ ...ಓ..ಓ..ಓ
*****music*******
ಎಲ್ಲರ ಎದೆಯಲ್ಲೂ ಇರತೈತೆ ಪ್ರೇಮ ಪರಸಂಗ
ಒಂದು ಪ್ರೇಮ ಪರಸಂಗ
ಕೂಗದೇನೆ ಹೋಗೋ ಮದುವೆಲಿ ಅಗೋ ಮುಖಭಂಗ
ಒಲ್ಲದ ಪ್ರೀತಿ ರಸಭಂಗ 
ನಾವು ಹುಟ್ಟಿದ ಮ್ಯಾಲೆ ಸಾವು ಬಂದೆ ಬರುತೈತೆ  ಎ ಏ
ಬ್ಯಾಡ ಅಂದ್ರೆ ನಗುತೈತೆ ಎ ಏ 
ಪ್ರೀತಿ ಹುಟ್ಟಿದ ಮ್ಯಾಲೆ ಒಳಗೆ ನಗುತಾ ಇರುತೈತೆ
ಸಾಯುವರೆಗೂ ಕಾಯ್ತೈತೆ ಎ ಏ
ದಕ್ಕದಿದ್ರು ಪ್ರೀತಿಸೋದೆ
ಆ ಆ ಆ ಹಾ....
ದಕ್ಕದಿದ್ರು ಪ್ರೀತಿಸೋದೆ ಪ್ರೀತಿಯ ಗುಣವಂತೆ
ಏನೈತೋ ...ಓ..ಓ..ಓ
 ಅಂತರಾಳದಾಗೆ ಏನೈತೋ ...ಓ..ಓ..ಓ
ಅಂತರಾಳದಾಗೆ ಏನೈತೋ ...ಓ..ಓ..ಓ..ಓ... 
ಚಿಗುರೈತೋ, ...ಓ..ಓ..ಓ ಮಾಗೈತೋ, ...ಓ..ಓ..ಓ
 ಅರಳೈತೋ,...ಓ..ಓ..ಓ ಮುದುರೈತೋ ...ಓ..ಓ..ಓ..ಓ. 
ಪ್ರೀತಿ ರಸ ಬಳ್ಳಿ ಎಂಬುದು ಎಲೈತೋ ...ಓ..ಓ..ಓ 
ಅಲ್ಲಿ ಬಾಳ ಮೊಗ್ಗು ಎಂದು ನಗುತೈತೋ ...ಓ..ಓ..ಓ 
ಏನೈತೋ ಅಂತರಾಳದಾಗೆ ಏನೈತೋ ...ಓ..ಓ..ಓ 
ಅಂತರಾಳದಾಗೆ ಏನೈತೋ ...ಓ..ಓ..ಓ..ಓ. 


ಒಂದೇ ಒಂದು ಕಣ್ಣ ಬಿಂದು ಜಾರಿದರೆ ನನ್ನಾಣೆ ( Feamale )

 


👉

*ಒಂದೇ ಒಂದು ಕಣ್ಣ ಬಿಂದು ಜಾರಿದರೆ ನನ್ನಾಣೆ ನಿನ್ನ ನೋವ ಜೊತೆಯೆಂದು ನಾನಿರುವೆ ನಿನ್ನಾಣೆ

ರಾತ್ರಿಯ ಬೆನ್ನಿಗೆ,ಬೆಳ್ಳನೆ ಹಗಲು,

ಚಿಂತೆಯ ಹಿಂದೆಯೇ ಸಂತಸ ಇರಲು,

ಒಂದೇ ಒಂದು ಕಣ್ಣ ಬಿಂದು ಜಾರಿದರೆ ನನ್ನಾಣೆ

ಚಿಂತೆಯಲ್ಲೇ ನಿನ್ನಾ ಮನ ದೂಡಿದರೆ ನನ್ನಾಣೆ

ನೋವಿನ ಬಾಳಿಗೆ, ಧೈರ್ಯವೆ ಗೆಳೆಯಾ,

ಪ್ರೇಮದ ಜೋಡಿಗೆ,ತಾಕದು ಪ್ರಳಯ,

ಒಂದೇ ಒಂದು ಕಣ್ಣ ಬಿಂದು ಜಾರಿದರೆ ನನ್ನಾಣೆ

ನಿನ್ನ ನೋವ ಜೊತೆಯೆಂದು ನಾನಿರುವೆ ನಿನ್ನಾಣೆ

===🎶 music🎶===

ದಾಹ ನೀಗೋ ಗಂಗೆಯೇ ದಾಹ ಎಂದು ಕುಂತರೆ,

ಸುಟ್ಟು ಹಾಕೋ ಬೆಂಕಿಯೇ ತನ್ನ ತಾನೇ ಸುಟ್ಟರೆ,

ದಾರಿ ತೋರೋ ನಾಯಕ ಒಂಟಿ ಎಂದುಕೊಂಡರೆ,

ಧ್ಯರ್ಯ ಹೇಳೋ ಗುಂಡಿಗೆ ಮೂಕವಾಗಿ ಹೋದರೆ,

ಸೂರ್ಯನಿಲ್ಲ ಪೂರ್ವದಲ್ಲಿ,ಚಂದ್ರನಿಲ್ಲ

ರಾತ್ರಿಯಲಿ,

ದಾರಿಯಿಲ್ಲ ಕಾಡಿನಲ್ಲಿ,ಆಸೆಯಿಲ್ಲ ಬಾಳಿನಲಿ,

ನಂಬಿಕೆ ತಾಳುವ,ಅಂಜಿಕೆ ನೀಗುವ,ಶೋಧನೆ

ಸಮಯ,ಚಿಂತಿಸಿ ಗೆಲ್ಲುವ,

ಒಂದೇ ಒಂದು ಕಣ್ಣ ಬಿಂದು ಜಾರಿದರೆ ನನ್ನಾಣೆ

ನಿನ್ನ ನೋವ ಜೊತೆಯೆಂದು ನಾನಿರುವೆ ನಿನ್ನಾಣೆ

===🎶 music🎶===

ಮೂಡಣದಿ ಮೂಡಿ ಬಾ, ಸಿಂಧೂರವೆ ಆಗಿ ಬಾ,

ಜೀವಧಾರೆ ಆಗಿ ಬಾ,ಪ್ರೇಮ ಪುಷ್ಪ ಸೇರು ಬಾ,

ಬಾನಗಲ ತುಂಬಿ ಬಾ,ಆಸೆಗಳ ತುಂಬು ಬಾ,

ಸಿಂಗಾರವೇ ತೇಲಿ ಬಾ,ಸಂತೋಷವ ನೀಡು ಬಾ,

ಪ್ರೇಮದಾಸೆ ನನ್ನಾ ನಿನ್ನ ಬಂಧಿಸಿದೆ ನನ್ನಾಣೆ,

ಸಂತಸದ ಕಣ್ಣಾ ರೆಪ್ಪೆ ಸಂಧಿಸಿದೆ ನನ್ನಾಣೆ,

ದೇವರ ಗೂಡಿಗೂ ಭಿನ್ನಗಳಿರಲು ,

ಬಾಳಿನ ನಡೆಗೂ ಅಡ್ಡಿಗಳಿರಲು,

ಭೂಮಿಯಾಗಿ ನಾನಿರುವೆ,ಚಿಂತೆ ಬೇಡ ನನ್ನಾಣೆ,

ನಿನ್ನಾ ನೋವ ಮೇರುಗಿರಿಯ,ನಾ ಹೊರುವೆ ನಿನ್ನಾಣೆ


ಒಂದೇ ಒಂದು ಕಣ್ಣ ಬಿಂದು ಜಾರಿದರೆ ನನ್ನಾಣೆ ( Male )

 


👉 

 *ಒಂದೇ ಒಂದು ಕಣ್ಣ ಬಿಂದು ಜಾರಿದರೆ ನನ್ನಾಣೆ

ನಿನ್ನ ನೋವ ಜೊತೆಯೆಂದು ನಾನಿರುವೆ ನಿನ್ನಾಣೆ

ರಾತ್ರಿಯ ಬೆನ್ನಿಗೆ,ಬೆಳ್ಳನೆ ಹಗಲು,

ಚಿಂತೆಯ ಹಿಂದೆಯೇ ಸಂತಸ ಇರಲು,

ಒಂದೇ ಒಂದು ಕಣ್ಣ ಬಿಂದು ಜಾರಿದರೆ ನನ್ನಾಣೆ

ಚಿಂತೆಯಲ್ಲೇ ನಿನ್ನಾ ಮನ ದೂಡಿದರೆ ನನ್ನಾಣೆ

ನೋವಿನ ಬಾಳಿಗೆ, ಧೈರ್ಯವೆ ಗೆಳೆಯಾ,

ಪ್ರೇಮದ ಜೋಡಿಗೆ,ತಾಕದು ಪ್ರಳಯ,

ಒಂದೇ ಒಂದು ಕಣ್ಣ ಬಿಂದು ಜಾರಿದರೆ ನನ್ನಾಣೆ

ನಿನ್ನ ನೋವ ಜೊತೆಯೆಂದು ನಾನಿರುವೆ ನಿನ್ನಾಣೆ

===🎶music 🎶===

ದಾಹ ನೀಗೋ ಗಂಗೆಯೇ ದಾಹ ಎಂದು ಕುಂತರೆ,

ಸುಟ್ಟು ಹಾಕೋ ಬೆಂಕಿಯೇ ತನ್ನ ತಾನೇ ಸುಟ್ಟರೆ,

ದಾರಿ ತೋರೋ ನಾಯಕ ಒಂಟಿ ಎಂದುಕೊಂಡರೆ,

ಧ್ಯರ್ಯ ಹೇಳೋ ಗುಂಡಿಗೆ ಮೂಕವಾಗಿ ಹೋದರೆ,

ಸೂರ್ಯನಿಲ್ಲ ಪೂರ್ವದಲ್ಲಿ,ಚಂದ್ರನಿಲ್ಲ

ರಾತ್ರಿಯಲಿ,

ದಾರಿಯಿಲ್ಲ ಕಾಡಿನಲ್ಲಿ,ಆಸೆಯಿಲ್ಲ ಬಾಳಿನಲಿ,

ನಂಬಿಕೆ ತಾಳುವ,ಅಂಜಿಕೆ ನೀಗುವ,ಶೋಧನೆ

ಸಮಯ,ಚಿಂತಿಸಿ ಗೆಲ್ಲುವ,

ಒಂದೇ ಒಂದು ಕಣ್ಣ ಬಿಂದು ಜಾರಿದರೆ ನನ್ನಾಣೆ

ನಿನ್ನ ನೋವ ಜೊತೆಯೆಂದು ನಾನಿರುವೆ ನಿನ್ನಾಣೆ

===🎶music 🎶===

ಮೂಡಣದಿ ಮೂಡಿ ಬಾ, ಸಿಂಧೂರವೆ ಆಗಿ ಬಾ,

ಜೀವಧಾರೆ ಆಗಿ ಬಾ,ಪ್ರೇಮ ಪುಷ್ಪ ಸೇರು ಬಾ,

ಬಾನಗಲ ತುಂಬಿ ಬಾ,ಆಸೆಗಳ ತುಂಬು ಬಾ,

ಸಿಂಗಾರವೇ ತೇಲಿ ಬಾ,ಸಂತೋಷವ ನೀಡು ಬಾ,

ಪ್ರೇಮದಾಸೆ ನನ್ನಾ ನಿನ್ನ ಬಂಧಿಸಿದೆ ನನ್ನಾಣೆ,

ಸಂತಸದ ಕಣ್ಣಾ ರೆಪ್ಪೆ ಸಂಧಿಸಿದೆ ನನ್ನಾಣೆ,

ದೇವರ ಗೂಡಿಗೂ ಭಿನ್ನಗಳಿರಲು ,

ಬಾಳಿನ ನಡೆಗೂ ಅಡ್ಡಿಗಳಿರಲು,

ಭೂಮಿಯಾಗಿ ನಾನಿರುವೆ,ಚಿಂತೆ ಬೇಡ ನನ್ನಾಣೆ,

ನಿನ್ನಾ ನೋವ ಮೇರುಗಿರಿಯ,ನಾ ಹೊರುವೆ ನಿನ್ನಾಣೆ






ಕೇಳಿಸದೆ ಕಲ್ಲು ಕಲ್ಲಿನಲಿ ಕನ್ನಡ ನುಡಿ......ಹಂಪೆಯ ಗುಡಿ......

 



👉 
 *** ಓಓಓ.....ಓಓಓ...ಓಓಓ.....
ಓಓಓ.....ಓಓಓ...ಓಓಓ.....
ಓಓಓ.....ಓಓಓ...ಓಓಓ.....
(S1) ಕೇಳಿಸದೆ ಕಲ್ಲು ಕಲ್ಲಿನಲಿ
ಕನ್ನಡ ನುಡಿ......ಕನ್ನಡ ನುಡಿ......
ಕಾಣಿಸದೆ ಹೊನ್ನ ಚರಿತೆಯಲಿ
ಹಂಪೆಯ ಗುಡಿ......ಹಂಪೆಯ ಗುಡಿ.....
ವೈಭವದ ತವರು ಕೂಗಿದೆ
ಪ್ರೀತಿಸುವ ಹೃದಯ ಬೇಡಿದೆ,
ಕೇಳು ನೀನು......ಊ.....
(S2) ಕೇಳಿಸದೆ ಕಲ್ಲು ಕಲ್ಲಿನಲಿ
ಕನ್ನಡ ನುಡಿ......ಕನ್ನಡ ನುಡಿ......
ಕಾಣಿಸದೆ ಹೊನ್ನ ಚರಿತೆಯಲಿ
ಹಂಪೆಯ ಗುಡಿ......ಹಂಪೆಯ ಗುಡಿ......
ವೈಭವದ ತವರು ಕೂಗಿದೆ
ಪ್ರೀತಿಸುವ ಹೃದಯ ಬೇಡಿದೆ,
ಕೇಳು ನೀನು.....ಊ...
❤ ❤ ❤music❤ ❤ ❤
(S1) ಭೂರಮೆಯೆ ಆ..ಧರ ಈ ಕಲೆಯೆ ಸಿಂಗಾರ
ಬಂಗಾರ ತೆರೇರಿ ಮೂಡಣವೆ ಸಿಂಧೂರ
ದಿನ ದಿನ ದಿನ ಹೊಸದಗಿದೆ......
ಇಂದಿಗು ಜೀವಂತ ಶಿಲೆಯೊಳಗೆ ಸಂಗೀತ
ಸ್ವರ ಸ್ವರದ ಏರಿಳಿತ ತುಂಗೆಯಲಿ ಶ್ರಿಮಂತ
ಕಣ ಕಣ ಕಣ ಕರೆ ನೀಡಿದೆ.....ಏ......
ನೀನೊಮ್ಮೆ ಬಂದಿಲ್ಲಿ ಹಿತವಾ...ಗಿ
ಹಾ....ಡು ಓಓಓ.....ಓಓಓ...ಓಓಓ.....
ಓಓಓ.....ಓಓಓ...ಓಓಓ.....
ಓಓಓ.....ಓಓಓ...ಓಓಓ......ಓಓ..
ಕೇಳಿಸದೆ ಕಲ್ಲು ಕಲ್ಲಿನಲಿ
ಕನ್ನಡ ನುಡಿ......ಕನ್ನಡ ನುಡಿ........
ಕಾಣಿಸದೆ ಹೊನ್ನ ಚರಿತೆಯಲಿ
ಹಂಪೆಯ ಗುಡಿ......ಹಂಪೆಯ ಗುಡಿ.....
ವೈಭವದ ತವರು ಕೂಗಿದೆ
ಪ್ರೀತಿಸುವ ಹೃದಯ ಬೇಡಿದೆ,
ಕೇಳು ನೀನು......ಊ.....
❤ ❤ ❤music❤ ❤ ❤
(S2 ) ಗಾಳಿಯೆ ಆದೇಶ ಮೇಘವೆ ಸಂದೇಶ
ಪ್ರೇಮಕೆ ಸಂಕೇತ ಹೊಂಬಣ್ಣದಾಕಾಶ
ಋತು ಋತುಗಳು ನಿನ್ನ ಕಾದಿದೆ.......ಹೇ ಹೇ ಹೇ..
ನೀನಿರೆ ರಂಗೋಲಿ ಸಂಗಾತಿ ಸು..ವ್ವಾಲಿ
ನವರಸವು ಮೈತಾಳಿ ಜೀವನದ ಜೋಕಾಲಿ
ಯುಗ ಯುಗಗಳು ನಿನ್ನ ಕಾಯುವೆ.....ಹೇ ಹೇ ಹೇ..
ನೀನೊಮ್ಮೆ ಬಂದಿಲ್ಲಿ ಬೆಳಕನ್ನು ನೀ..ಡು
ಓಓಓ.....ಓಓಓ...ಓಓಓ.....
ಓಓಓ.....ಓಓಓ...ಓಓಓ.....
ಓಓಓ.....ಓಓಓ...ಓಓಓ......ಓಓಓ..
ಕೇಳಿಸದೆ ಕಲ್ಲು ಕಲ್ಲಿನಲಿ
ಕನ್ನಡ ನುಡಿ....ಕನ್ನಡ ನುಡಿ.....
ಕಾಣಿಸದೆ ಹೊನ್ನ ಚರಿತೆಯಲಿ
ಹಂಪೆಯ ಗುಡಿ.....ಹಂಪೆಯ ಗುಡಿ....
ವೈಭವದ ತವರು ಕೂಗಿದೆ
ಪ್ರೀತಿಸುವ ಹೃದಯ ಬೇಡಿದೆ,
ಕೇಳು ನೀನು......ಊ....
(S1) ಕೇಳಿಸದೆ ಕಲ್ಲು ಕಲ್ಲಿನಲಿ
ಕನ್ನಡ ನುಡಿ....ಕನ್ನಡ ನುಡಿ.....ಈ...


ಮೆಕ್ಸಿಕೊ ಮೆಟ್ರೋ ಮೇಲ್ಸೇತುವೆ ಕುಸಿತ : 13 ಮಂದಿ ಸಾವು, 70 ಕ್ಕೂ ಹೆಚ್ಚು ಜನರಿಗೆ ಗಾಯ

 

ಮೆಕ್ಸಿಕೋ : ಮೆಟ್ರೋದ ಮೇಲ್ಸೇತುವೆ ಕುಸಿದ ಪರಿಣಾಮ ರೈಲು ಅಪಘಾತವಾಗಿ 13 ಜನರು ಸಾವನ್ನಪ್ಪಿದ್ದು, 70 ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ಮೆಕ್ಸಿಕೊದಲ್ಲಿ ನಡೆದಿದೆ.

ಮೆಕ್ಸಿಕೋದ ರಾಜಧಾನಿಯ ದಕ್ಷಿಣದಲ್ಲಿ ಸ್ಥಳೀಯ ಕಾಲಮಾನ ರಾತ್ರಿ 10:30.m ಕ್ಕೆ ಸಂಭವಿಸಿದ ಅಪಘಾತದಲ್ಲಿ ಸುಮಾರು 70 ಜನರು ಗಾಯಗೊಂಡಿದ್ದಾರೆ ಎಂದು ಮೆಕ್ಸಿಕೊ ನಗರದ ನಾಗರಿಕ ರಕ್ಷಣಾ ಸಂಸ್ಥೆ ತಿಳಿಸಿದೆ.

ಮೆಟ್ರೋದ ಲೈನ್ 12 ರಲ್ಲಿ ಅಪಘಾತ ಸಂಭವಿಸಿದೆ, ಅವಶೇಷಗಳಡಿ ಕಾರುಗಳು ಸಿಕ್ಕಿಹಾಕಿಕೊಂಡಿದ್ದು, ಇನ್ನೂ ಹಲವರ ಪತ್ತೆಗೆ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

(ಮಾಹಿತಿ ಕೃಪೆ Kannada News Now)

ನಗರದಲ್ಲಿ ಏರುತ್ತಿರುವ ಕೊರೋನಾ ಸಾವು: ಚಾಮರಾಜಪೇಟೆ ಸ್ಮಶಾನದ ಮುಂದೆ 'ಹೌಸ್'ಫುಲ್' ಬೋರ್ಡ್ ಹಾಕಿದ ಸಿಬ್ಬಂದಿಗಳು!

 

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೊರೋನಾ ಉಲ್ಬಣಗೊಳ್ಳುತ್ತಿದ್ದು, ಸಾವು ಹೆಚ್ಚಾಗುತ್ತಿದೆ. ಸ್ಮಶಾನದಲ್ಲಿ ಮೃತದೇಹಗಳು ಭರ್ತಿಯಾಗಿರುವ ಹಿನ್ನಲೆಯೆಲ್ಲಿ ಚಾಮರಾಜಪೇಟೆ ಟಿಆರ್ ಮಿಲ್ ಸ್ಮಶಾನದ ಗೇಟಿನ ಮುಂದೆ ಹೌಸ್ ಫುಲ್ ಫಲಕವನ್ನು ಹಾಕಲಾಗಿದೆ.

ಭಾನುವಾರ ಸಂಜೆ ವೇಳೆ ಕೋವಿಡ್‍ನಿಂದ ಮೃತರಾದ 45 ಮೃತದೇಹಗಳ ಅಂತ್ಯಕ್ರಿಯೆ ನಡೆದಿದೆ. ಈಗಾಗಲೇ 19 ಮೃತದೇಹಗಳು ದಹನಕ್ಕೆ ಬಂದಿವೆ. ದಿನಕ್ಕೆ 20 ಮೃತದೇಹಗಳ ಅಂತ್ಯಕ್ರಿಯೆಗೆ ಇಲ್ಲಿ ಅವಕಾಶವಿದೆ. ಹೀಗಾಗಿ, ಸಿಬ್ಬಂದಿಗಳು ಈ ಫಲಕವನ್ನು ಹಾಕಲೇಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಹೇಳಲಾಗುತ್ತಿದೆ.

ಆರಂಭದಲ್ಲಿ ಹೌಸ್ ಫುಲ್ ಫಲಕವನ್ನು ಹಾಕಲಾಗಿತ್ತು. ನಂತರ ಸ್ಥಳೀಯರು ಪ್ರಶ್ನೆ ಮಾಡಲು ಆರಂಭಿಸಿದ ಬಳಿಕ ಫಲಕವನ್ನು ತೆಗೆದು ಹಾಕಲಾಗಿತ್ತು ಎಂದು ಸ್ಥಳೀಯ ನಿವಾಸಿ ಗಣೇಶ್ ಎಂಬುವವರು ಹೇಳಇದದಾರೆ.

ಮೇಡಿ ಅಗ್ರಹಾರದಲ್ಲಿರುವ ಬಿಬಿಎಂಪಿ ಸ್ಮಶಾನ, ಸುಮನಹಳ್ಳಿ ಸ್ಮಶಾನ, ಚಾಮರಾಜಪೇಟೆ ಸ್ಮಶಾನ, ವಿಲ್ನಸ್ ಗಾರ್ಡನ್ ಸ್ಮಶಾನ, ಹೆಬ್ಬಾಳ ಸ್ಮಶಾನಗಳಲ್ಲಿ ಪ್ರತೀನಿತ್ಯ 20ಕ್ಕೂ ಹೆಚ್ಚು ಮೃತದೇಹಗಳ ಅಂತ್ಯಕ್ರಿಯೆ ನಡೆಸಲಾಗುತ್ತಿದೆ.

(ಮಾಹಿತಿ ಕೃಪೆ ಕನ್ನಡ ಪ್ರಭ)

BIG BREAKING NEWS : ಚಾಮರಾಜನಗರ ಜಿಲ್ಲಾಸ್ಪತ್ರೆ ಬಳಿಕ ಕಲಬುರ್ಗಿಯಲ್ಲಿ ಆಕ್ಸಿಜನ್ ಸಿಗದೇ 4 ಸಾವು, 32 ರೋಗಿಗಳ ಪರದಾಟ

 

ಕಲಬುರ್ಗಿ : ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಸಿಗದೇ ನಿನ್ನೆ 24 ಕೊರೋನಾ ಸೋಂಕಿತರು ಸಾವನ್ನಪ್ಪಿದ ಪ್ರಕರಣ ಹಸಿಯಾಗಿರುವಾಗಲೇ, ಕಲಬುರ್ಗಿ ಜಿಲ್ಲೆಯ ಅಫಜಲಪುರ ತಾಲೂಕಿನ ತಾಲ್ಲೂಕು ಆಸ್ಪತ್ರೆಯಲ್ಲಿ ಮೆಡಿಕಲ್ ಆಕ್ಸಿಜನ್ ಸಿಗದೇ ನಾಲ್ವರು ಕೊರೋನಾ ಸೋಂಕಿತರು ಸಾವನ್ನಪ್ಪಿರುವ ದುರ್ಘಟನೆ ಸಂಭವಿಸಿದೆ. ಅಲ್ಲದೇ 32 ಸೋಂಕಿತರು ಆಕ್ಸಿಜನ್ ಸಿಗದೇ ಪರದಾಡುತ್ತಿರೋದಾಗಿ ತಿಳಿದು ಬಂದಿದೆ.

ಕಲಬುರ್ಗಿ ಜಿಲ್ಲೆಯಲ್ಲಿ ಕಳೆದ 10 ದಿನಗಳಿಂದ ಆಕ್ಸಿಜನ್ ಕೊರತೆ ಉಂಟಾಗಿದೆ ಎನ್ನಲಾಗಿದೆ. ಇದರ ಪರಿಣಾಮವಾಗಿ, ಅಫಜಲಪುರ ತಾಲೂಕು ಆಸ್ಪತ್ರೆಯಲ್ಲಿ ಆಕ್ಸಿಜನ್ ಖಾಲಿಯಾಗಿ ನಾಲ್ವರು ಸೋಂಕಿತರು ಸಾವನ್ನಪ್ಪಿರೋ ದುರ್ಘಟನೆ ಸಂಭವಿಸಿದೆ. ಮುಂಜಾನೆ 4 ಗಂಟೆಯಿಂದ ಆಕ್ಸಿಜನ್ ಖಾಲಿಯಾಗಿ ನಾಲ್ವರು ಸೋಂಕಿತರು ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ.

ಇನ್ನೂ ಕಲಬುರ್ಗಿಯಲ್ಲಿ ನಾಲ್ವರು ಸೋಂಕಿತರು ಆಕ್ಸಿಜನ್ ಸಿಗದೇ ಸಾವನ್ನಪ್ಪಿದ್ದರೇ, 32ಕ್ಕೂ ಹೆಚ್ಚು ಸೋಂಕಿತರು ಆಕ್ಸಿಜನ್ ಖಾಲಿಯಾಗಿದ್ದರಿಂದಾಗಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರೋದಾಗಿ ತಿಳಿದು ಬಂದಿದೆ.

(ಮಾಹಿತಿ ಕೃಪೆ Kannada News Now)

ಭಾರತದಲ್ಲಿ OPPO ತನ್ನ #OPPOA74 ಸ್ಮಾರ್ಟ್‌ಫೋನ್‌ನೊಂದಿಗೆ 5G ತಂತ್ರಜ್ಞಾನಗಾಗಿ ಹೊಸ ಮಾರ್ಗದತ್ತ ಸಾಗುತ್ತಿದೆ

 

ಭಾರತದಲ್ಲಿ 5G ಅನ್ನು ಸ್ಮಾರ್ಟ್ಫೋನ್ ತಂತ್ರಜ್ಞಾನದ ಮುಂದಿನ ದೊಡ್ಡ ವಿಷಯವೆಂದು ಹೇಳಲಾಗುತ್ತದೆ ಮತ್ತು ಕಾರಣವಿಲ್ಲದೆ. ಸಿಎಮ್ಆರ್ನ ವರದಿಯ ಪ್ರಕಾರ 5G ಸಿದ್ಧತೆ ಭಾರತದ ಅಗ್ರ ಮೂರು ಸ್ಮಾರ್ಟ್ಫೋನ್ ಖರೀದಿ ಡ್ರಾಯರ್ಗಳಲ್ಲಿ ಒಂದಾಗಿದೆ.83% ಖರೀದಿದಾರರು ಹೊಸ ಸ್ಮಾರ್ಟ್ಫೋನ್ ಆಯ್ಕೆಮಾಡುವಾಗ 5G ಅನ್ನು ಉನ್ನತ ಲಕ್ಷಣವೆಂದು ಪರಿಗಣಿಸಿದ್ದಾರೆ. ಅದರ ಅಲ್ಟ್ರಾಫಾಸ್ಟ್ ವೇಗ ಮತ್ತು ಅತ್ಯಂತ ಕಡಿಮೆ ಸುಪ್ತತೆಯೊಂದಿಗೆ 5G ಗ್ರಾಹಕರ ಅನುಭವಗಳನ್ನು ಹಿಂದೆಂದಿಗಿಂತಲೂ ಮರುರೂಪಿಸುವ ಶಕ್ತಿಯನ್ನು ಹೊಂದಿದೆ. ಇದು ವೀಡಿಯೊ ಸ್ಟ್ರೀಮಿಂಗ್, ಗೇಮಿಂಗ್, ಐಒಟಿ, ಸ್ವಾಯತ್ತ ವಾಹನಗಳು ಮತ್ತು ಹೆಚ್ಚಿನವುಗಳಿಂದ ಎಲ್ಲದರ ಮೇಲೆ ಪರಿಣಾಮ ಬೀರುತ್ತದೆ.

ಭಾರತದಲ್ಲಿ 5G ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡುವುದು ಮತ್ತು ಬಳಕೆದಾರರಿಗೆ ಈ ತಂತ್ರಜ್ಞಾನವನ್ನು ಬಳಸಲು ಸಿದ್ಧರಾಗಿರಲು ಅವಕಾಶ ನೀಡುವ ಒಂದು ಬ್ರಾಂಡ್ OPPO ಆಗಿದೆ. ಭಾರತದಲ್ಲಿ 5G ಸ್ಮಾರ್ಟ್ಫೋನ್ ಸಿದ್ಧತೆಗೆ ಬಂದಾಗ OPPO ಮುಂಚೂಣಿಯಲ್ಲಿದೆ. ಮತ್ತು 5G ಉತ್ಪನ್ನಗಳ ಮೇಲ್ಭಾಗದೊಂದಿಗೆ ಯಶಸ್ವಿ ಉಡಾವಣೆಗಳನ್ನು ಹಿಂತಿರುಗಿಸಿದೆ. ಈ ವರ್ಷ OPPO Reno 5 Pro 5G ಮತ್ತು OPPO F19 Pro+ 5G ಬಿಡುಗಡೆಯಾಯಿತು.

ಇವೆರಡೂ ಗ್ರಾಹಕರಿಂದ ಉತ್ತಮ ಯಶಸ್ಸು ಮತ್ತು ಮೆಚ್ಚುಗೆಯನ್ನು ಗಳಿಸಿವೆ. ಮೊದಲ ಮಾರಾಟದಲ್ಲಿ Reno 5 Pro 5G ತನ್ನ ಹಿಂದಿನ ಎಲ್ಲಾ ದಾಖಲೆಗಳನ್ನು 91% ರಷ್ಟು ಮಾರಾಟ ಮಾಡಿದೆ.ಇದರಲ್ಲಿ OPPO F19 Pro ಸೀರೀಸ್ ಮಾರುಕಟ್ಟೆಯಲ್ಲಿ ಲಭ್ಯವಾದ ಕೇವಲ 3 ದಿನಗಳಲ್ಲಿ 230 ಕೋಟಿ ರೂಗಳ ಮಾರಾಟವನ್ನು ದಾಖಲಿಸಿದೆ. OPPO ಯ 5G ಕೊಡುಗೆಗಳನ್ನು ಅದರ ಎಲ್ಲಾ ಬಳಕೆದಾರರು ಏಕೆ ಇಷ್ಟಪಡುತ್ತಾರೆ ಎಂಬುದನ್ನು ಇಲ್ಲಿ ನಾವು ಚೆನ್ನಾಗಿ ವಿವರಿಸುತ್ತದೆ.

5G ರೆಡಿ ಫೋನ್ಗಳನ್ನು ನೀಡುವ ಈ ಸಮರ್ಪಣೆ ಭಾರತೀಯ ಗ್ರಾಹಕರು ಕಡೆಗಣಿಸಿರುವ ವಿಷಯವಲ್ಲ. 5G ರೆಡಿ ಸ್ಮಾರ್ಟ್ಫೋನ್ಗಳನ್ನು ಹುಡುಕುತ್ತಿರುವ ಭಾರತೀಯ ಖರೀದಿದಾರರು OPPO ಹೆಚ್ಚು ಆದ್ಯತೆಯ ಬ್ರಾಂಡ್ಗಳಲ್ಲಿ ಒಂದಾಗಿದೆ ಎಂದು ಸಿಎಮ್ಆರ್ ಮೇಲೆ ತಿಳಿಸಿದ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅದರ ಪೋರ್ಟ್ಫೋಲಿಯೊದಲ್ಲಿ ಹಲವಾರು 5G ರೆಡಿ ಸ್ಮಾರ್ಟ್ಫೋನ್ಗಳು ಮತ್ತು OPPO ಸ್ಮಾರ್ಟ್ಫೋನ್ಗಳು ನೀಡುವ ಉನ್ನತ ದರ್ಜೆಯ ಮೌಲ್ಯದೊಂದಿಗೆ ಬ್ರ್ಯಾಂಡ್ 5G ಅಳವಡಿಕೆಗೆ ದಾರಿ ಮಾಡಿಕೊಡಲು ಸಹಾಯ ಮಾಡಿದೆ. ಮತ್ತು ಭಾರತದಲ್ಲಿ 5G ತಂತ್ರಜ್ಞಾನದ ಪ್ರವರ್ತಕರಲ್ಲಿ ಒಂದಾಗಿದೆ.

(ಮಾಹಿತಿ ಕೃಪೆ Digit)

ಹಣ್ಣುಗಳನ್ನು ಸೇವಿಸುವಾಗ ಈ ನಿಯಮ ಪಾಲಿಸಿ

 

ಬೆಂಗಳೂರು : ಹಣ‍್ಣುಗಳು ಆರೋಗ್ಯಕ್ಕೆ ಉತ್ತಮ ನಿಜ. ಆದರೆ ಅದನ್ನು ಸರಿಯಾದ ವಿಧದಲ್ಲಿ ಸೇವಿಸಬೇಕು. ಇಲ್ಲವಾದರೆ ಇದರಿಂದ ಅನಾರೋಗ್ಯ ಸಮಸ್ಯೆ ಕಾಡುತ್ತದೆ. ಹಾಗಾಗಿ ಹಣ್ಣುಗಳನ್ನು ಸೇವಿಸುವಾಗ ಈ ನಿಯಮ ಪಾಲಿಸಿ.


-ಜೀರ್ಣಕ್ರಿಯೆ ಸರಿಯಾಗಿ ಇಲ್ಲದಿದ್ದರೆ ವಿವಿಧ ಹಣ್ಣುಗಳನ್ನು ಒಟ್ಟಗೆ ಸೇವಿಸಬೇಡಿ.
-ಹಣ್ಣುಗಳನ್ನು ನೇರವಾಗಿ ಸೇವಿಸಿ, ರಸಕ್ಕಿಂತ ಹಾಗೇ ತಿನ್ನುವುದು ಪರಿಣಾಮಕಾರಿಯಾಗಿದೆ.
-ಸಂಜೆ 4 ಗಂಟೆಯ ಮೊದಲು ಹಣ್ಣುಗಳನ್ನು ತಿನ್ನುವುದು ಒಳ್ಳೆಯದು.
-ಆಹಾರದ ಮೊದಲು ಅಥವಾ ನಂತರ ಹಣ‍್ಣುಗಳನ್ನು ಸೇವಿಸಬೇಡಿ.
-ಹಾಲು ಮತ್ತು ಮೊಸರಿನೊಂದಿಗೆ ಹಣ‍್ಣುಗಳನ್ನು ಸೇವಿಸಿಬೇಡಿ.
-ರಾತ್ರಿಯ ವೇಳೆ ಹಣ್ಣುಗಳನ್ನು ಸೇವಿಸಬೇಡಿ.

(ಮಾಹಿತಿ ಕೃಪೆ ವೆಬ್ದುನಿಯಾ)

ರಾಜ್ಯದಲ್ಲಿ ರೆಮಿಡಿಸಿವಿರ್ ಪೂರೈಕೆ ಸಮಸ್ಯೆ ಹಾಗೂ ಅಭಾವ ತೀವ್ರಗೊಂಡ ಹಿನ್ನೆಲೆಯಲ್ಲಿ ಸಮಸ್ಯೆ ಬಗೆಹರಿಸಲು ಸಿಎಂ ಬಿಎಸ್‌ ಯಡಿಯೂರಪ್ಪ ಅವರು ತುರ್ತು ಸಭೆಯನ್ನು ಕರೆದಿದ್ದಾರೆ. ಈ ಕುರಿತಾದ ಮತ್ತಷ್ಟು ಮಾಹಿತಿ ಇಲ್ಲಿದೆ.

 

ಬೆಂಗಳೂರು: ರಾಜ್ಯದಲ್ಲಿ ರೆಮಿಡಿಸಿವಿರ್‌ ಸಮಸ್ಯೆ ಹಾಗೂ ಅಭಾವ ತಲೆಧೋರಿದ ಹಿನ್ನೆಲೆಯಲ್ಲಿ ಸಿಎಂ ಬಿಎಸ್‌ ಯಡಿಯೂರಪ್ಪ ಅವರು ತುರ್ತು ಸಭೆಯನ್ನು ಕರೆದಿದ್ದಾರೆ. ಸಿಎಂ ನಿವಾಸ ಕಾವೇರಿಯಲ್ಲಿ ಸಭೆ ನಡೆಯಲಿದೆ.
ಮಂಗಳವಾರ ಮಧ್ಯಾಹ್ಮ 1 ಗಂಟೆಗೆ ಈ ತುರ್ತು ಸಭೆ ನಡೆಯಲಿದ್ದು ಆರೋಗ್ಯ ಸಚಿವ ಡಾ.ಕೆ ಸುಧಾಕರ್‌ ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಲಿದ್ದಾರೆ.

ರಾಜ್ಯದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಮಿತಿ ಮೀರಿ ಏರಿಕೆ ಆಗುತ್ತಿದೆ. ಕೋವಿಡ್ ಲಾಕ್‌ಡೌನ್ ಜಾರಿಯಲ್ಲಿದ್ದರೂ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖ ಆಗುತ್ತಿಲ್ಲ. ಮತ್ತೊಂದು ಕಡೆ ತುರ್ತು ಸಂದರ್ಭದಲ್ಲಿ ಬಳಕೆ ಮಾಡುವ ರೆಮಿಡಿಸಿವಿರ್ ಕೊರತೆ ಎದುರಾಗಿದೆ.
ರೆಮಿಡಿಸಿವಿರ್ ಔಷಧಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಮೂಲಕ ಕೃತಕ ಅಭಾವ ಸೃಷ್ಟಿಸಲಾಗುತ್ತುದೆ ಎಂಬ ಆರೋಪವೂ ಇದೆ. ಮತ್ತೊಂದು ಕಡೆಯಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಈ ಔಷಧಿಗೆ 20,000 ರೂಪಾಯಿ ವರೆಗೆ ವಸೂಲಿ ಮಾಡುತ್ತಿದ್ದಾರೆ.
ಈ ಸಮಸ್ಯೆ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಂಡ ಹಿನ್ನೆಲೆಯಲ್ಲಿ ಸಿಎಂ ಬಿಎಸ್‌ ಯಡಿಯೂರಪ್ಪನವರು ಎಚ್ಚೆತ್ತುಕೊಂಡು ತುರ್ತು ಸಭೆ ನಡೆಸಿದ್ದಾರೆ. ಸಭೆಯಲ್ಲಿ ರೆಮಿಡಿಸಿವಿರ್ ಔಷಧಿ ಪೂರೈಕೆ ಸರಾಗವಾಗಿ ನಡೆಸುವ ನಿಟ್ಟಿನಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ.

(ಮಾಹಿತಿ ಕೃಪೆ vijaykarnataka )

ಬೆಂಗಳೂರಿನ ಅರ್ಧದಷ್ಟು ಜನರು ಕರೊನ ಸೊಂಕಿತರನ್ನು ಭೇಟಿ ಮಾಡಿರಬಹುದು: ಸಂಪರ್ಕ ಟ್ರೇಸಿಂಗ್‌ನಲ್ಲಿ ಆಘಾತಕಾರಿ ಮಾಹಿತಿ ಬಹಿರ

ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಡೆಸಿದ ಸಮೀಕ್ಷೆಯಲ್ಲಿ ಮೇ 1 ರ ವೇಳೆಗೆ 48. 5ಲಕ್ಷ ಜನರು ಕೋವಿಡ್-19 ರೋಗಿಗಳ ಸಂಪರ್ಕಕ್ಕೆ ಬಂದಿರುತ್ತಾರೆ ಎಂದು ಗುರುತಿಸಲಾಗಿದೆ. ಮುನ್ಸಿಪಲ್ ಸಂಸ್ಥೆಯ ಈ ಸಂಪರ್ಕ ಪತ್ತೆಹಚ್ಚುವಿಕೆಯು ನಗರದ ಜನಸಂಖ್ಯೆಯ ಸುಮಾರು ಅರ್ಧದಷ್ಟು ಜನರು ಕೋವಿಡ್ ಧನಾತ್ಮಕ ವ್ಯಕ್ತಿ ಅಥವಾ ಅವರ ಸಂಪರ್ಕದೊಂದಿಗೆ ಸಂಪರ್ಕಕ್ಕೆ ಬಂದಿರಬಹುದು ಎಂದು ತಿಳಿಸಿದೆ.

ಬಿಬಿಎಂಪಿ ಉಲ್ಲೇಖಿಸಿದ ಅಂಕಿಅಂಶವು 2020 ರಲ್ಲಿ ಅಂದಾಜಿಸಿದಂತೆ ನಗರದ ಜನಸಂಖ್ಯೆಯ ೪೫ ಪ್ರತಿಶತ ಮತ್ತು 2011 ರ ಜನಗಣತಿಯನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಿದ್ದರೆ ಜನಸಂಖ್ಯೆಯ ಶೇಕಡಾ 50 ಕ್ಕಿಂತ ಹೆಚ್ಚು ಜನ ಕೊರೋನಾ ಸೋಂಕಿತರ ಸಂಪರ್ಕಕ್ಕೆ ಬಂದಿದ್ದಾರೆ ಎಂದು ಟಿಒಐ ವರದಿ ಮಾಡಿದೆ.

48.5 ಲಕ್ಷ ಸಂಪರ್ಕಗಳಲ್ಲಿ 23.2 ಲಕ್ಷಕ್ಕೂ ಹೆಚ್ಚು ಪ್ರಾಥಮಿಕ ಮತ್ತು 25.3 ಲಕ್ಷ ದ್ವಿತೀಯ ಸಂಪರ್ಕಗಳಾಗಿವೆ. ಆದಾಗ್ಯೂ, ಕರ್ನಾಟಕದ ವಾರ್ ರೂಮ್ ಡೇಟಾ ಸಂಪರ್ಕ ದಸ್ತಾವುಗಿಸುವಿಕೆಯ ಪ್ರಕಾರ ಏಪ್ರಿಲ್ ೨೫ ಕ್ಕೆ ಕೊನೆಗೊಂಡ ವಾರದಲ್ಲಿ ರಾಜಧಾನಿ ನಗರದಲ್ಲಿ ೪೦ ಪ್ರತಿಶತದಷ್ಟು ಪ್ರಕರಣಗಳಿಗೆ ಪರೀಕ್ಷೆ ನಡೆದಿಲ್ಲ. ಆದ್ದರಿಂದ ಮುಂಬರುವ ವಾರಗಳಲ್ಲಿ ಪ್ರಾಥಮಿಕ ಮತ್ತು ಮಾಧ್ಯಮಿಕ ಸಂಪರ್ಕಗಳ ಪಟ್ಟಿಗೆ ಹೆಚ್ಚಿನ ಸಂಖ್ಯೆಗಳನ್ನು ಸೇರಿಸುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

'ಸಂಪರ್ಕಗಳನ್ನು ಪತ್ತೆ ಹಚ್ಚುವುದು ಒಂದು ಸವಾಲಾಗಿದೆ' ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರು ತಿಳಿಸಿದರು ಮತ್ತು ಪ್ರಾಥಮಿಕ ಸಂಪರ್ಕಗಳನ್ನು, ವಿಶೇಷವಾಗಿ ತಕ್ಷಣದ ಕುಟುಂಬದಿಂದ ಬಂದವರನ್ನು ಕೋವಿಡ್-19 ಗೆ ಆದ್ಯತೆಯ ಮೇಲೆ ಪರೀಕ್ಷಿಸಲಾಗುವುದು ಎಂದು ಭರವಸೆ ನೀಡಿದರು

ಇದಲ್ಲದೆ, ಬಿಬಿಎಂಪಿ ಮುಖ್ಯಸ್ಥರು ಎರಡನೇ ಕೋವಿಡ್ ಅಲೆಯ ತೀವ್ರತೆಯ ಬಗ್ಗೆ ಜನರಿಗೆ ಎಚ್ಚರಿಕೆ ನೀಡಿದರು, ಸುರಕ್ಷತಾ ಶಿಷ್ಟಾಚಾರಗಳಿಗೆ ಬದ್ಧರಾಗಿರಲು, ಕೋವಿಡ್ ಸೂಕ್ತ ನಡವಳಿಕೆಗೆ ಬದ್ಧರಾಗಿರಲು ಮತ್ತು ಸಂಪೂರ್ಣವಾಗಿ ಅಗತ್ಯವಿರದ ಹೊರತು ಹೊರಬರುವುದನ್ನು ತಪ್ಪಿಸಿ ಎಂದು ಜನರಿಗೆ ಸಲಹೆ ನೀಡಿದರು.

(ಮಾಹಿತಿ ಕೃಪೆ Kannada News Now )

IPL 2021: ಸಿಎಸ್‌ಕೆ ಪಂದ್ಯವೂ ಮುಂದೂಡಿಕೆ, ಐಪಿಎಲ್ ಮುಂಬೈಗೆ ಸ್ಥಳಾಂತರ?

 

ನವದೆಹಲಿ: ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದ ಬೌಲಿಂಗ್ ಕೋಚ್ ಎಲ್.ಬಾಲಾಜಿ ಅವರಿಗೆ ಕೋವಿಡ್-19 ಸೋಂಕು ದೃಢಪಟ್ಟಿರುವ ಕಾರಣ ನಾಳೆಯ (ಬುಧವಾರ) ಐಪಿಎಲ್ ಪಂದ್ಯವೂ ಮುಂದೂಡಿಕೆಯಾಗಿದೆ.

ನಿಗದಿಯಂತೆ ನಾಳೆ ಸಿಎಸ್‌ಕೆ ಮತ್ತು ರಾಜಸ್ಥಾನ್ ರಾಯಲ್ಸ್ (ಆರ್‌ಆರ್) ನಡುವೆ ಪಂದ್ಯ ನಡೆಯಬೇಕಿದೆ.

ಪಂದ್ಯವನ್ನು ಮರುನಿಗದಿ ಮಾಡಲಾಗುವುದು ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಮೂಲಗಳು ಖಚಿತಪಡಿಸಿರುವುದಾಗಿ 'ಪಿಟಿಐ' ಸುದ್ದಿಸಂಸ್ಥೆ ವರದಿ ಮಾಡಿದೆ.

ಈ ಮಧ್ಯೆ, ಟೂರ್ನಿಯನ್ನು ಮುಂಬೈಗೆ ಸ್ಥಳಾಂತರಿಸಲು ಬಿಸಿಸಿಐ ಸರ್ಕಾರದ ಅನುಮತಿ ಕೋರಿದ್ದು, ಕಾಯಲಾಗುತ್ತಿದೆ ಎಂದು 'ಎಎನ್‌ಐ' ಸುದ್ದಿಸಂಸ್ಥೆ ವರದಿ ಮಾಡಿದೆ.

ಕೋಲ್ಕತ್ತ ಮತ್ತು ಬೆಂಗಳೂರಿನಲ್ಲಿ ಕೋವಿಡ್ ಪರಿಸ್ಥಿತಿ ಉಲ್ಪಣಗೊಂಡಿರುವುದರಿಂದ ಎಲ್ಲ ಪಂದ್ಯಗಳನ್ನೂ ಮುಂಬೈಗೆ ಸ್ಥಳಾಂತರಿಸಲು ಬಿಸಿಸಿಐ ಮುಂದಾಗಿದೆ ಎಂಬ ಬಿಸಿಸಿಐ ಅಧಿಕಾರಿಯೊಬ್ಬರ ಹೇಳಿಕೆಯನ್ನು ವರದಿ ಉಲ್ಲೇಖಿಸಿದೆ.

'ಈವರೆಗಿನ ಮಾಹಿತಿ ಪ್ರಕಾರ, ಇಂದಿನ (ಮಂಗಳವಾರ) ಮುಂಬೈ ಇಂಡಿಯನ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವಣ ಪಂದ್ಯ ನಡೆಯಲಿದೆ. ಆದರೆ ನಾಳೆಯ ಪಂದ್ಯ ಮುಂದೂಡಿಕೆಯಾಗಬಹುದು. ಕೆಕೆಆರ್ ಮತ್ತು ಸಿಎಸ್‌ಕೆ ತಂಡಗಳಲ್ಲಿ ಈವರೆಗೆ ಕೋವಿಡ್ ಪ್ರಕರಣಗಳು ದೃಢಪಟ್ಟಿವೆ' ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೋಲ್ಕತ್ತ ನೈಟ್‌ ರೈಡರ್ಸ್ ತಂಡದ ಆಟಗಾರರಾದ ವರುಣ್ ಚಕ್ರವರ್ತಿ ಮತ್ತು ಸಂದೀಪ್ ವಾರಿಯರ್ ಅವರಿಗೆ ಕೋವಿಡ್-19 ಸೋಂಕು ದೃಢಪಟ್ಟಿದ್ದರಿಂದ ಸೋಮವಾರ ನಡೆಯಬೇಕಿದ್ದ ಆರ್‌ಸಿಬಿ-ಕೆಕೆಆರ್ ನಡುವಣ ಪಂದ್ಯ ಮುಂದೂಡಿಕೆಯಾಗಿತ್ತು.

(ಮಾಹಿತಿ ಕೃಪೆ ಪ್ರಜಾವಾಣಿ )

ಧರ್ಮಸ್ಥಳ: ಬ್ಯಾಂಕ್‌ ಸಭಾಂಗಣದಲ್ಲಿ ನೇಣು ಹಾಕಿಕೊಂಡು ಸಿಇಒ ಆತ್ಮಹತ್ಯೆ

 

ಉಜಿರೆ: ಧರ್ಮಸ್ಥಳದ ಸೇವಾ ಸಹಕಾರಿ ಬ್ಯಾಂಕಿನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರವೀಂದ್ರನ್ (57) ಸೋಮವಾರ ಬ್ಯಾಂಕಿನ ಸಭಾಂಗಣದಲ್ಲಿ ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಅವರಿಗೆ ಪತ್ನಿ ಮತ್ತು ಇಬ್ಬರು ಪುತ್ರಿಯರು ಇದ್ದಾರೆ.

ಸೋಮವಾರ ಬೆಳಿಗ್ಗೆ 7.30ಕ್ಕೆ ಬ್ಯಾಂಕಿಗೆ ಬಂದವರು ಹಾಜರಿ ಪುಸ್ತಕ ದಲ್ಲಿ ಸಹಿ ಮಾಡಿದ್ದರು. ಮಧ್ಯಾಹ್ನ ಬ್ಯಾಂಕಿನ ಸಭಾಭವನದಲ್ಲಿ ನೇಣು ಹಾಕಿದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ.

ನಿವೃತ್ತಿಗೆ ಮೊದಲೇ ಕೆಲಸಕ್ಕೆ ರಾಜೀನಾಮೆ ನೀಡಬೇಕೆಂದು ಬ್ಯಾಂಕಿನ ನಿರ್ದೇಶಕರಿಂದ ಒತ್ತಡ ಇತ್ತು ಎಂದು ಹೇಳಲಾಗುತ್ತಿದೆ. ಮಾಜಿ ಶಾಸಕ ಕೆ.ವಸಂತ ಬಂಗೇರ ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣದ ಸಮಗ್ರ ತನಿಖೆಗೆ ಒತ್ತಾಯಿಸಿದ್ದಾರೆ

(ಮಾಹಿತಿ ಕೃಪೆ ಪ್ರಜಾವಾಣಿ )

18 ದಿನಗಳ ಬಳಿಕ ಪೆಟ್ರೋಲ್‌, ಡೀಸೆಲ್ ದರ ಏರಿಕೆ : ಯಾವ ನಗರದಲ್ಲಿ ಎಷ್ಟಿದೆ?

 

ಪಂಚರಾಜ್ಯಗಳ ಚುನಾವಣಾ ಫಲಿತಾಂಶದ ಬಳಿಕ ನಿರೀಕ್ಷೆಯಂತೆ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗಿದೆ. 18 ದಿನಗಳ ಕಾಲ ತೈಲ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡದ ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಮಂಗಳವಾರ (ಮೇ 04)ರಂದು ಜನಸಾಮಾನ್ಯರಿಗೆ ಏರಿಕೆಯ ಬಿಸಿ ಮುಟ್ಟಿಸಿದೆ.

ನವದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್‌ಗೆ 15 ಪೈಸೆ ಏರಿಕೆಗೊಂಡು 90.55 ರೂಪಾಯಿಗೆ ತಲುಪಿದೆ. ಡೀಸೆಲ್ ದರ ಲೀಟರ್‌ಗೆ 18 ಪೈಸೆ ಹೆಚ್ಚಳಗೊಂಡು 80.91 ರೂಪಾಯಿಗೆ ಮುಟ್ಟಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.

ದೇಶದ ಪ್ರಮುಖ ನಗರಗಳಲ್ಲಿ ಮಂಗಳವಾರ ಪೆಟ್ರೋಲ್ ಮತ್ತು ಡೀಸೆಲ್ ದರ ಎಷ್ಟಿದೆ ಎಂಬುದರ ಮಾಹಿತಿ ಈ ಕೆಳಗಿದೆ.

ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್‌ಗೆ 90.55 ರೂ. ಮತ್ತು ಡೀಸೆಲ್ ದರ 80.91 ರೂ.

ಕೊಲ್ಕತ್ತಾದಲ್ಲಿ ಪೆಟ್ರೋಲ್ ದರ ಲೀಟರ್‌ಗೆ 90.76 ರೂ. ಮತ್ತು ಡೀಸೆಲ್ ದರ 83.78 ರೂ.

ಮುಂಬೈನಲ್ಲಿ ಪೆಟ್ರೋಲ್ ದರ ಲೀಟರ್‌ಗೆ 96.95 ರೂ. ಮತ್ತು ಡೀಸೆಲ್ ದರ 87.98 ರೂ.

ಬೆಂಗಳೂರಿನಲ್ಲಿ ಪೆಟ್ರೋಲ್ ದರ ಲೀಟರ್‌ಗೆ 93.67 ರೂ. ಮತ್ತು ಡೀಸೆಲ್ ದರ 85.87 ರೂ.

ಹೈದ್ರಾಬಾದ್‌ನಲ್ಲಿ ಪೆಟ್ರೋಲ್ ದರ ಲೀಟರ್‌ಗೆ 94.16 ರೂ. ಮತ್ತು ಡೀಸೆಲ್ ದರ 88.25 ರೂ.

ಚೆನ್ನೈನಲ್ಲಿ ಪೆಟ್ರೋಲ್ ದರ ಲೀಟರ್‌ಗೆ 92.55 ರೂ. ಮತ್ತು ಡೀಸೆಲ್ ದರ 85.90 ರೂ.

(ಮಾಹಿತಿ ಕೃಪೆ goodreturns.in )

ನಿಯಮ ಉಲ್ಲಂಘನೆ; ನ್ಯಾಯಾಂಗ ಬಂಧನ

 ಹೊಸಪೇಟೆ (ವಿಜಯನಗರ): ಕೋವಿಡ್‌ ಲಾಕ್‌ಡೌನ್‌ ನಿಯಮ ಉಲ್ಲಂಘಿಸಿ ಇಲ್ಲಿನ ಮೇನ್‌ ಬಜಾರ್‌ನಲ್ಲಿ ಫುಟ್‌ವೇರ್‌ ಅಂಗಡಿ ತೆರೆದಿದ್ದ ತಾಯಪ್ಪ (27) ಎಂಬುವರನ್ನು ಸೋಮವಾರ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

'ಲಾಕ್‌ಡೌನ್‌ ಸಮಯದಲ್ಲಿ ದಿನಸಿ, ಔಷಧ ಮಳಿಗೆ ಹೊರತುಪಡಿಸಿದರೆ ಬೇರೆ ಅಂಗಡಿಗಳನ್ನು ತೆರೆಯಲು ಅವಕಾಶ ಇಲ್ಲ. ಆದರೆ, ನಿಯಮ ಉಲ್ಲಂಘಿಸಿ ಅಂಗಡಿ ತೆರೆದಿದ್ದ ತಾಯಪ್ಪ ವಿರುದ್ಧ ಸಾಂಕ್ರಾಮಿಕ ರೋಗ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ವಹಿಸಲಾಗಿದೆ' ಎಂದು ಪಟ್ಟಣ ಠಾಣೆ ಪೊಲೀಸ್‌ ಇನ್‌ಸ್ಪೆಕ್ಟರ್‌ ಎಂ. ಶ್ರೀನಿವಾಸ್‌ 'ಪ್ರಜಾವಾಣಿ'ಗೆ ತಿಳಿಸಿದ್ದಾರೆ.

(ಮಾಹಿತಿ ಕೃಪೆ ಪ್ರಜಾವಾಣಿ )

ಔಷಧಿಗೆ ವೈದ್ಯರ ಚೀಟಿ ಕಡ್ಡಾಯ: ಬಿ.ಜಿ. ಶ್ರೀನಿವಾಸಪ್ರಸಾದ್‌

 

ಮಾಗಡಿ: ಪಟ್ಟಣದ ಔಷಧಿ ಮಾರಾಟ ಮಳಿಗೆಗಳಲ್ಲಿ ವೈದ್ಯರ ಸಲಹಾ ಚೀಟಿ ಇಲ್ಲದೆ ಮಾತ್ರೆ ಅಥವಾ ಔಷಧಿ ಮಾರಾಟ ಮಾಡಿದರೆ ಫಾರ್ಮಸಿ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ತಹಶೀಲ್ದಾರ್‌ ಬಿ.ಜಿ. ಶ್ರೀನಿವಾಸಪ್ರಸಾದ್‌
ತಿಳಿಸಿದರು.

ಪಟ್ಟಣದ ಫಾರ್ಮಸಿಗಳಿಗೆ ಸೋಮವಾರ ಭೇಟಿ ನೀಡಿ ಔಷಧಿ ಮಳಿಗೆಗಳ ಮಾಲೀಕರಿಗೆ ಸೂಚನೆ ನೀಡಿ ಅವರು ಮಾತನಾಡಿದರು.

ಕೆಮ್ಮು, ನೆಗಡಿ, ಜ್ವರ, ಕಫದ ಸಮಸ್ಯೆಗಳಿಗೆ ರೋಗಿಗಳು ನೇರವಾಗಿ ಔಷಧಿ ಮಳಿಗೆಗಳಲ್ಲಿ ಪ್ಯಾರಾಸಿಟಾಮಾಲ್‌, ಡೊಲೊ 650 ಸೇರಿದಂತೆ ಇತರೆ ಮಾತ್ರೆ ತೆಗೆದುಕೊಂಡು ಕೋವಿಡ್ ಸೋಂಕು ಉಲ್ಬಣವಾದ ಮೇಲೆ ಆಸ್ಪತ್ರೆಗೆ ಹೋಗುವುದು ಕಂಡುಬಂದಿದೆ. ಜ್ವರ, ನೆಗಡಿ, ಕೆಮ್ಮು ಕಾಣಿಸಿಕೊಂಡ ಕೂಡಲೇ ಸಾರ್ವಜನಿಕರು ವೈದ್ಯರಲ್ಲಿ ತೋರಿಸಿ ಚಿಕಿತ್ಸೆ ಪಡೆದರೆ ಕೋವಿಡ್‌ ಸೋಂಕು ಹರುಡುವುದನ್ನು ತಡೆಗಟ್ಟಬಹುದು ಎಂದರು.

ಔಷಧಿ ಮಳಿಗೆಗಳಲ್ಲಿ ವೈದ್ಯರ ಸಲಹಾ ಚೀಟಿ ಇಲ್ಲದೆ ಮಾತ್ರೆ ಮತ್ತು ಔಷಧಿ ಮಾರಾಟ ಮಾಡುವುದು ಅಪರಾಧವಾಗಲಿದೆ. ಕಾನೂನು ಉಲ್ಲಂಘಿಸಿದವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ಔಷಧಿ ಮಳಿಗೆಗಳ ಮಾಲೀಕರು ಸಹಕರಿಸಬೇಕು. ಔಷಧಿ ಮಳಿಗೆಗಳ ಮಾಲೀಕರು ವೈದ್ಯರ ಸಲಹಾ ಚೀಟಿ ಇಲ್ಲದೆ ಔಷಧಿ ಕೊಡುವುದಿಲ್ಲ ಎಂದರು.

ಡಿಟಿಒ ಡಾ.ಕುಮಾರ್‌, ಸಿಪಿಐ ಕುಮಾರ್ ಹಾಗೂ ಪೊಲೀಸ್‌ ಸಿಬ್ಬಂದಿ ಇದ್ದರು.

(ಮಾಹಿತಿ ಕೃಪೆ ಪ್ರಜಾವಾಣಿ )

ಕರ್ಫ್ಯೂ ಮುಂದುವರಿಕೆ ಬಗ್ಗೆ ಇಂದು ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ

 

ಬೆಂಗಳೂರು: ಕೋವಿಡ್-19 ಸೋಂಕು ಹೆಚ್ಚುತ್ತಿರುವ ಕಾರಣ ಈಗ ಜಾರಿಯಲ್ಲಿರುವ ಜನತಾ ಕರ್ಫ್ಯೂ ಮುಂದುವರಿಸುವ ಬಗ್ಗೆ ಇಂದು ಸಂಜೆ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡುತ್ತೇವೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನತಾ ಕರ್ಪ್ಯೂ ಮುಂದುವರಿಸುವುದು ಉತ್ತಮ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಇಂದು ಸಂಜೆ ಸಚಿವ ಸಂಪುಟ ಸಭೆಯಿದೆ. ಸಭೆಯಲ್ಲಿ ಸುಪ್ರೀಂ ಕೋರ್ಟ್ ಆದೇಶದ ಬಗ್ಗೆ ಚರ್ಚೆ ಮಾಡುತ್ತೇವೆ ಎಂದರು.

ರಾಜ್ಯದಲ್ಲಿ ಜನತಾ ಕರ್ಪ್ಯೂ ಜಾರಿ ಮಾಡಿ ಬೆಳಿಗ್ಗೆ ಅಗತ್ಯ ವಸ್ತುಗಳಿಗೆ ಅವಕಾಶ ಕೊಟ್ಟರೆ ಮಾರುಕಟ್ಟೆಗಳಿಗೆ ಸಿಕ್ಕಪಟ್ಟೆ ಜನರು ಬರುತ್ತಿದ್ದಾರೆ. ಹೀಗಾಗಿ ನಿಯಂತ್ರಣ ಮಾಡುವುದು ಅಗತ್ಯವಿದೆ. ಇಂದು ಸಿಎಂ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಸುಧೀರ್ಘವಾಗಿ ಚರ್ಚೆ ಮಾಡಿ ಬಳಿಕ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಎಸ್ ಟಿ ಸೋಮಶೇಖರ್ ಹೇಳಿದರು.

(ಮಾಹಿತಿ ಕೃಪೆ ಉದಯವಾಣಿ )

ಕನಕಪುರ: ಜಿಂಕೆ ನುಂಗಿದ್ದ ಹೆಬ್ಬಾವು ರಕ್ಷಣೆ

 

ಕನಕಪುರ: ಜಿಂಕೆ ನುಂಗಿದ್ದ ಹೆಬ್ಬಾವನ್ನು ಉರುಗ ಪ್ರೇಮಿ ಸ್ನೇಕ್‌ ನವೀನ್‌ ಹಿಡಿದು ಅರಣ್ಯಕ್ಕೆ ಸುರಕ್ಷಿತವಾಗಿ ಬಿಟ್ಟಿರುವುದು ತಾಲ್ಲೂಕಿನ ಸಾತನೂರು ಹೋಬಳಿ ಸೋಲಿಗೇರಿಯಲ್ಲಿ ಸೋಮವಾರ ನಡೆದಿದೆ.

ಸೋಲಿಗೇರಿ ಗ್ರಾಮದಲ್ಲಿ ಸುಮಾರು 35 ಕೆ.ಜಿ ತೂಕದ ಚಿಂಕೆಯನ್ನು ಭೇಟಿಯಾಡಿ ನುಂಗುವ 11 ಅಡಿ ಉದ್ದದ ಹೆಬ್ಬಾವು ಕಾಣಿಸಿಕೊಂಡಿದೆ. ತಕ್ಷಣವೇ ಅವರು ಹಾವು ಹಿಡಿಯುವ ಮಳಗಾಳ್‌ ಸ್ನೇಕ್‌ ನವೀನ್‌ ಅವರಿಗೆ ಕರೆ ಮಾಡಿದ್ದಾರೆ.


ಕೂಡಲೇ, ಸ್ನೇಹಿತನ ಜತೆಯಲ್ಲಿ ಹೊರಟ ನವೀನ್‌ ಕಾರ್ಯಪ್ರವೃತ್ತರಾಗಿ ಜಿಂಕೆಯನ್ನು ನುಂಗಿ ಜಮೀನಿನಲ್ಲಿದ್ದ ಹೆಬ್ಬಾವನ್ನು ಹಿಡಿದು ಮುತ್ತತ್ತಿ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.

ಹರಿಹರ ರವೀಂದ್ರೇಗೌಡ (ಪಪ್ಪಿ), ನಿತಿನ್‌ ಮತ್ತು ಸೋಲಿಗೇರಿ ಗ್ರಾಮಸ್ಥರು ಉಪಸ್ಥಿತರಿದ್ದರು.

(ಮಾಹಿತಿ ಕೃಪೆ ಪ್ರಜಾವಾಣಿ )

Monday, May 3, 2021

ಬಾಲ್ಯ ವಿವಾಹಕ್ಕೆ ತಡೆ

 

ದಾವಣಗೆರೆ: ಮಾಯಕೊಂಡ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ನಡೆಯಬೇಕಿದ್ದ ಬಾಲ್ಯ ವಿವಾಹವನ್ನು ಅಧಿಕಾರಿಗಳು ತಡೆದಿದ್ದಾರೆ. ಬಾಲಕಿಯನ್ನು ಬಾಲಮಂದಿರಕ್ಕೆ ದಾಖಲಿಸಿದ್ದಾರೆ.

18 ವರ್ಷದ ತುಂಬದ ಬಾಲಕಿಗೆ ಮದುವೆ ನಡೆಯಲಿದೆ ಎಂಬ ಮಾಹಿತಿ ಮಕ್ಕಳ ಸಹಾಯವಾಣಿಗೆ ಬಂದಿತ್ತು. ಅದರ ಆಧಾರದಲ್ಲಿ ವಾಣಿ ಕೊಲ್ಯಾಬ್ ಡಾನ್ ಬಾಸ್ಕೋ ತಂಡದ ಸಂಯೋಜಕ ಟಿ.ಎಂ.ಕೊಟ್ರೇಶ, ಕುರ್ಕಿ ಗ್ರಾಮ ಪಂಚಾಯಿತಿ ಪಿಡಿಒ ಸುರೇಖಾ, ಶಿಶು ಅಭಿವೃದ್ಧಿ ಯೋಜನೆ ಹಿರಿಯ ಮೇಲ್ವಿಚಾರಕಿ ಮೈತ್ರಾದೇವಿ, ಮೇಲ್ವಿಚಾರಕಿ ಕೆ.ಸಿ. ಪ್ರಮೀಳಾ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮಮತಾ, ಮಾಯಕೊಂಡ ಠಾಣೆ ಎಎಸ್‍ಐ ಮೂರ್ತಿ, ಕಾನ್‌ಸ್ಟೆಬಲ್ ಟಿ. ತಿಮ್ಮಪ್ಪ, ಚಾಲಕ ಮಾರುತಿ ಅವರನ್ನು ಒಳಗೊಂಡ ತಂಡ ಭಾನುವಾರ ಭೇಟಿ ನೀಡಿತ್ತು.

ಬಾಲಕಿಯ ಶಾಲಾ ದಾಖಲಾತಿ ಸಂಗ್ರಹಿಸಿ, ಪರಿಶೀಲಿಸಿದಾಗ ವಯಸ್ಸು 16 ವರ್ಷ 11 ತಿಂಗಳಾಗಿರುವುದು ಕಂಡು ಬಂದಿತು. ಬಾಲ್ಯ ವಿವಾಹ ನಿಷೇಧ ಕಾಯ್ದೆ ಪ್ರಕಾರ ಬಾಲ್ಯ ವಿವಾಹ ಮಾಡಿದರೆ 1 ವರ್ಷಕ್ಕೆ ಕಡಿಮೆ ಇಲ್ಲದಂತೆ ಜೈಲು ಶಿಕ್ಷೆ, ₹ 1 ಲಕ್ಷ ದಂಡ ಇರುವುದನ್ನು ತಿಳಿಸಲಾಯಿತು. ವರನ ತಾಯಿಯ ಅನಾರೋಗ್ಯದ ಕಾರಣದಿಂದ ಬೇಗ ಮದುವೆ ಮಾಡಬೇಕಾಗಿದೆ ಎಂದು ವಧುವಿನ ಕಡೆಯವರು ಪಟ್ಟು ಹಿಡಿದರು. ಹಾಗಾಗಿ ಬಾಲಕಿಯನ್ನು ವಶಕ್ಕೆ ಪಡೆದು ದಾವಣಗೆರೆಯ ಬಾಲಕಿಯರ ಬಾಲಮಂದಿರಕ್ಕೆ ದಾಖಲಿಸಿ ಬಾಲ್ಯ ವಿವಾಹವನ್ನು ತಡೆದಿದ್ದಾರೆ.

(ಮಾಹಿತಿ ಕೃಪೆ ಪ್ರಜಾವಾಣಿ )

ಸವದತ್ತಿಯ ಸುಂದರ ಐತಿಹಾಸಿಕ ಕೋಟೆ

 

ಸವದತ್ತಿ ಬೆಳಗಾವಿ ಜಿಲ್ಲೆಯ ಒಂದು ತಾಲೂಕು. ಇದೊಂದು ಪುಟ್ಟ ತಾಲೂಕಾದರೂ ಅನೇಕ ಐತಿಹಾಸಿಕ ಹಾಗೂ ಧಾರ್ಮಿಕ ಕ್ಷೇತ್ರಗಳನ್ನು ಒಳಗೊಂಡಿದೆ. ಮೊದಲು ಇದನ್ನು ಸೌಗಂಧಿಪುರ, ಸೌಗಂಧವತಿ, ಸುಗಂಧವರ್ತಿ ಎಂತಲೂ ಕರೆಯುತ್ತಿದ್ದರು. ಚಾಲುಕ್ಯರ ಕಾಲದಲ್ಲಿ ಈ ನಗರವು ಹೆಚ್ಚು ಶ್ರೀಮಂತ ಸ್ಥಿತಿಯಲ್ಲಿತ್ತು ಎನ್ನಲಾಗುತ್ತದೆ.

ರಟ್ಟರ ಆಳ್ವಿಕೆಯ ಅವಧಿಯಲ್ಲಿ ಇದು ಅವರ ರಾಜಧಾನಿಯಾಗಿತ್ತು. ಇಲ್ಲಿರುವ ರೇಣುಕಾ ಎಲ್ಲಮ್ಮ ದೇವಿಯ ದೇಗುಲ, ರೇಣುಕಾ ಜಲಾಶಯ ಹಾಗೂ ಸವದತ್ತಿ ಕೋಟೆಯು ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುತ್ತವೆ. ಧಾರವಾಡದಿಂದ 35 ಕಿ.ಮೀ. ಹಾಗೂ ಬೆಂಗಳೂರಿನಿಂದ 469 ಕಿ.ಮೀ. ದೂರದಲ್ಲಿದೆ. ರಸ್ತೆ ಮಾರ್ಗವು ಉತ್ತಮ ಸ್ಥಿತಿಯಲ್ಲಿರುವುದರಿಂದ ದಣಿವಿಲ್ಲದೆಯೇ ಇಲ್ಲಿಗೆ ಬರಬಹುದು.

18ನೇ ಶತಮಾನದ ಇತಿಹಾಸವನ್ನು ಹೊಂದಿರುವ ಈ ಕೋಟೆ ಒಂದು ಪುಟ್ಟ ಬೆಟ್ಟದ ಮೇಲಿದೆ. ಅಲ್ಲಿಯೇ ಒಂದು ಕಾಡಸಿದ್ಧೇಶ್ವರ ದೇಗುಲ ಇರುವುದನ್ನು ಕಾಣಬಹುದು. ಈ ಕೋಟೆಯು ದಟ್ಟ ಅರಣ್ಯ ಸಂಪತ್ತಿನಿಂದ ಸುತ್ತುವರಿದಿದೆ. ಬೆಳಗಾವಿ ಜಿಲ್ಲೆಯಿಂದ 83 ಕಿ.ಮೀ. ದೂರದಲ್ಲಿದೆ.

ಕರ್ನಾಟಕವನ್ನು ಆಳಿದ ರಾಜಮನೆತನದವರಲ್ಲಿ ರಟ್ಟರು ಒಬ್ಬರು. ಮೊದಲು ಮಾಂಡಲೀಕರಾಗಿ, ನಂತರ ಆಳುವ ಅರಸರಾಗಿ, 9 ರಿಂದ 13 ಶತಮಾನಗಳ ಕಾಲ ರಾಜ್ಯವಾಳಿದರು. ಆ ಕಾಲದಲ್ಲಿ ನಿರ್ಮಿಸಲಾದ ಕೋಟೆ, ಇಂದು ಪ್ರವಾಸ ತಾಣದಲ್ಲಿ ಒಂದಾಗಿದೆ.

ಪೂರ್ವ ದಿಕ್ಕಿಗೆ ಪ್ರಧಾನ ಬಾಗಿಲನ್ನು ಹೊಂದಿರುವ ಈ ಕೋಟೆ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ. ಒಂಬತ್ತು ತಿರುವುಗಳು ಹಾಗೂ 30 ಮೆಟ್ಟಿಲುಗಳ ಸಾಲಿವೆ. 120 ಅಡಿ ಎತ್ತರ ಇರುವ ಈ ಕೋಟೆ ಹೆಚ್ಚು ಸುಭದ್ರವಾಗಿದೆ .ಹತ್ತಿರದ ಆಕರ್ಷಣೆಮಲಪ್ರಭಾ ನದಿಯ ಅಣೆಕಟ್ಟು, ಯಲ್ಲಮ್ಮ ಗುಡ್ಡ, ರೇಣುಕಾ ಸಾಗರ, ಪುರದೇಶ್ವರ ದೇಗುಲ ಹಾಗೂ ಅಂಕೇಶ್ವರ ದೇಗುಲಗಳಿಗೂ ಭೇಟಿ ನೀಡಬಹುದು.

ಐತಿಹಾಸಿಕ ಕುರುಹುಗಳನ್ನು ಹೊಂದಿರುವ ಸವದತ್ತಿಯ ಕೋಟೆಯಲ್ಲಿ ಹಲವು ಸಿನಿಮಾಗಳ ಶೂಟಿಂಗ್ ಕೂಡ ನಡೆದಿವೆ. ಕನ್ನಡದ ಅಯ್ಯ ಸೇರಿದಂತೆ ಸಾಕಷ್ಟು ಚಿತ್ರಗಳ ಚಿತ್ರೀಕರಣದಲ್ಲಿ ಸವದತ್ತಿ ಕೋಟೆ ಕಾಣಿಸಿಕೊಂಡಿದೆ.

ವರ್ಷದಲ್ಲಿ ಎರಡ್ಮೂರು ಸಾರಿ ಇಲ್ಲಿಯ ರೇಣುಕಾ ಯಲ್ಲಮ್ಮ ದೇವಿಯ ದರ್ಶನಕ್ಕೆ ಬರುವ ಲಕ್ಷಾಂತರ ಭಕ್ತರು ಕೋಟೆಗೆ ಭೇಟಿ ನೀಡದೆ ತೆರಳುವುದಿಲ್ಲ. ಆದರೆ, ಕಳೆದ ಒಂದು ವರ್ಷದಿಂದ ಕೋವಿಡ್ ಕಾರಣವಾಗಿ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದೆ.

(ಮಾಹಿತಿ ಕೃಪೆ ಉದಯವಾಣಿ )