ಯುನೈಟೆಡ್ ನೇಷನ್ಸ್: ಭಾರತದಲ್ಲಿ ಕೊರೊನಾ ವಿರುದ್ಧ ಹೋರಾಡಲು ವಿಶ್ವಸಂಸ್ಥೆಯ ಹಲವು ಸಂಸ್ಥೆಗಳು ಸುಮಾರು 10,000 ಆಮ್ಲಜನಕ ಸಾಂದ್ರಕಗಳು ಮತ್ತು ಸುಮಾರು 10 ದಶಲಕ್ಷ ವೈದ್ಯಕೀಯ ಮಾಸ್ಕ್ಗಳನ್ನು ಭಾರತಕ್ಕೆ ತಲುಪಿಸಿವೆ ಎಂದು ಯುಎನ್ ವಕ್ತಾರರು ತಿಳಿಸಿದ್ದಾರೆ.
ಯುನಿಸೆಫ್, ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‍ಒ) ಮತ್ತು ಯುಎನ್ ಜನಸಂಖ್ಯಾ ನಿಧಿ (ಯುಎನ್‍ಎಫ್‍ಪಿಎ) ಸುಮಾರು 10,000 ಆಮ್ಲಜನಕ ಸಾಂದ್ರಕಗಳು, ಸುಮಾರು 10 ದಶಲಕ್ಷ ವೈದ್ಯಕೀಯ ಮಾಸ್ಕ್ಗಳು ಮತ್ತು 1.5 ದಶಲಕ್ಷಕ್ಕೂ ಹೆಚ್ಚು ಫೇಸ್ ಶೀಲ್ಡ್, ವೆಂಟಿಲೇಟರ್, ಆಮ್ಲಜನಕವನ್ನು ಉತ್ಪಾದಿಸುವ ಸ್ಥಾವರ, ಕೋಲ್ಡ್ ಚೈನ್ ಉಪಕರಣಗಳನ್ನು ಸಹ ರವಾನಿಸಿದೆ' ಎಂದು ಹೇಳಿದ್ದಾರೆ.
'ನಮ್ಮ ತಂಡವು ವಿಮಾನ ನಿಲ್ದಾಣದ ಥರ್ಮಲ್ ಸ್ಕ್ಯಾನರ್, ಟೆಸ್ಟಿಂಗ್ ಕಿಟ್ಗಳನ್ನು ಕಳುಹಿಸಿದೆ, ಜೊತೆಗೆ ತಾತ್ಕಾಲಿಕ ಡಬ್ಲ್ಯುಎಚ್‍ಒ ಟೆಂಟ್ ಮತ್ತು ಬೆಡ್ಗಳನ್ನು ಕೂಡಾ ಒದಗಿಸುತ್ತಿದೆ. ಜೊತೆಗೆ ಸಾವಿರಾರು ಸಾರ್ವಜನಿಕ ಆರೋಗ್ಯ ತಜ್ಞರನ್ನು ನಿಯೋಜಿಸಿದೆ' ಎಂದು ಹೇಳಿದ್ದಾರೆ.
(ಮಾಹಿತಿ ಕೃಪೆ Kannada News Now )
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ