ನವದೆಹಲಿ : ಭಾರತದಲ್ಲಿ ಕೊರೋನಾ ವೈರಸ್ ಪ್ರಕರಣಗಳ ಸಂಖ್ಯೆ 3 ಲಕ್ಸಕ್ಕಿಂತಲೂ ಅಧಿಕವಾಗಿದ್ದು, ಭಾನುವಾರ ಭಾರತದಲ್ಲಿ 3,69,957 ಹೊಸ ಕೋವಿಡ್ ಪ್ರಕರಣಗಳು ರಾತ್ರಿ 11.30ರ ತನಕ ದಾಖಲಾಗಿವೆ. ಈ ಅವಧಿಯಲ್ಲಿ ಒಟ್ಟು 3,455 ಜನರು ಮೃತಪಟ್ಟಿದ್ದಾರೆ.
ದೇಶದಲ್ಲಿ ಇದುವರೆಗೂ 1,99,19,900 ಕೋವಿಡ್ ಪ್ರಕರಣಗಳು ದಾಖಲಾಗಿವೆ. 2,18,909 ಜನರು ಮೃತಪಟ್ಟಿದ್ದಾರೆ. ಮಹಾರಾಷ್ಟ್ರದಲ್ಲಿ 56,647 ಹೊಸ ಕೋವಿಡ್ ಪ್ರಕರಣ,
ಕರ್ನಾಟಕದಲ್ಲಿ 37,773. ಕೇರಳದಲ್ಲಿ 31,959 ಹೊಸ ಪ್ರಕರಣಗಳು ದಾಖಲಾಗಿದ್ದವು.
ಮೇ 1ರ ತನಕ ದೇಶದಲ್ಲಿ 18,04,954 ಮಾದರಿಗಳ ಪರೀಕ್ಷೆಗಳನ್ನು ಮಾಡಲಾಗಿದೆ. ಮೇ 1ರ ಶನಿವಾರ 19 ಲಕ್ಷ ಮಾದರಿಗಳ ಕೋವಿಡ್ ಪರೀಕ್ಷೆ ನಡೆದಿದೆ. ಇದುವರೆಗೂ ದೇಶದಲ್ಲಿ 29.01 ಕೋಟಿ ಮಾದರಿಗಳ ಪರೀಕ್ಷೆಗಳನ್ನು ಮಾಡಲಾಗಿದೆ.
ಮೇ 2ರ ಬೆಳಗ್ಗೆ 7 ಗಂಟೆಯ ತನಕ 18.26 ಲಕ್ಷ ಲಸಿಕೆಯನ್ನು ನೀಡಲಾಗಿದೆ. ಕಳೆದ 24 ಗಂಟೆಯಲ್ಲಿಯೇ 9 ಲಕ್ಷ ಲಸಿಕೆ ಕೊಡಲಾಗಿದೆ. 15.68 ಲಕ್ಷ ಡೋಸ್ ಲಸಿಕೆಯನ್ನು ಇದುವರೆಗೂ ನೀಡಲಾಗಿದೆ.
(ಮಾಹಿತಿ ಕೃಪೆ Kannada News Now )
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ