WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Thursday, October 14, 2021

2 ತಲೆ, 3 ಕಣ್ಣುಗಳೊಂದಿಗೆ ವಿಚಿತ್ರ ಕರು ಜನನ..!


ಭುವನೇಶ್ವರ, ಅ. 13- ನವರಾತ್ರಿಯ ಸಮಯದಲ್ಲಿ 2 ತಲೆ ಹಾಗೂ 3 ಕಣ್ಣುಗಳುಳ್ಳ ಕರು ಜನಿಸಿರುವುದರಿಂದ ಇದು ದೇವರ ವರ ಪ್ರಸಾದ ಎಂದು ತಿಳಿದು ಜನರು ಕರುವನ್ನು ಪೂಜಿಸುತ್ತಿರುವ ಘಟನೆಯು ಒರಿಸ್ಸಾದ ನಬ್ರಂಗ್ ಪುರ್ ಜಿಲ್ಲೆಯಲ್ಲಿ ನಡೆದಿದೆ. ನಬ್ರಂಗ್‍ಪುರ್ ಜಿಲ್ಲೆಯ ಬಿಜಾಪುರ ಗ್ರಾಮದಲ್ಲಿರುವ ಧನಿರಾಂ ಎಂಬ ರೈತನ ಮನೆಯಲ್ಲಿ ಈ ವಿಚಿತ್ರ ಕರು ಜನನವಾಗಿದ್ದು ಈ ಕರುವನ್ನು ನೋಡಲು ಸುತ್ತಮುತ್ತಲಿನ ಜನರು ತಂಡೋಪತಂಡವಾಗಿ ಬಂದು ಪೂಜೆಯನ್ನು ಸಲ್ಲಿಸಿದ್ದಾರೆ. ಧನಿರಾಂ ಅವರು ಎರಡು ವರ್ಷಗಳ ಹಿಂದೆ ಹಸುವೊಂದನ್ನು ಮನೆಗೆ ತಂದಿದ್ದು ಅದೇ ಈಗ ವಿಚಿತ್ರ ಕರುವಿಗೆ ಜನ್ಮ ನೀಡಿದೆ.

ಹಸುವು ಗರ್ಭ ಧರಿಸಿದ್ದಾಗ ಅದು ಅನಾರೋಗ್ಯದಿಂದ ಬಳಲುತ್ತಿದೆ ಎಂದು ನೆರೆಮನೆಯಾತ ಧನಿರಾಂಗೆ ತಿಳಿಸಿದ್ದರು, ಕರು ಜನಿಸಲಿ ಆಮೇಲೆ ನೋಡೋಣ ಎಂದು ಅವರು ಹೇಳಿದ್ದರು. ಆದರೆ ಈಗ ಹಸುವು 2 ತಲೆ ಹಾಗೂ 3 ಕಣ್ಣಿರುವ ಕರುವಿಗೆ ಜನ್ಮ ನೀಡಿದೆ.
ಕರುವು 2 ತಲೆ ಹೊಂದಿರುವುದರಿಂದ ಹಾಲು ಕುಡಿಯಲು ಪರದಾಡುವಂತಾಗಿದೆ.

(ಮಾಹಿತಿ ಕೃಪೆ ಈ ಸಂಜೆ)

Wednesday, October 13, 2021

ಒಂದೊಂದ್ಸಾರಿ ಹಿಂಗೇನೆ ನೋಡ್ ನೋಡ್ತಾಇದ್ದಂಗೇನೆ ಹಾಡಿನ ಸಾಹಿತ್ಯ

 


👉 

ಹೆಣ್ಣು:-ಒಂದೊಂದ್ಸಾರಿ ಹಿಂಗೇನೆ ನೋಡ್ ನೋಡ್ತಾಇದ್ದಂಗೇನೆ
ಆಕಾಶಾನೆ ಅಂಗೈಮೇಲೆ ತಂದಿಡ್ತಾನೆ
ಗಂಡು ಅಂದ್ರೆ ಹಿಂಗೇನೆ ಪ್ರೀತಿ ಅಂದ್ರೆ ತಂತಾನೆ
ಬಂಡೇಯಾದ್ರೂ ಬೆಣ್ಣೆಯಂತೆ ಕರಗೋಗ್ತಾನೆ
ಗಂಡು:-ನನಗೆ ಇದೇನಾಯ್ತೋ ಕಾಣೇ
ಮನಸೇ ಕಳೆದ್ಹೋಗಿದೆ..
ಹೊರಗೇ ನನ್ನೊಳಗೆಲ್ಲ ನೀನೇ
ನಿನದೇ ಜಪವಾಗಿದೇ..
ಹೆಣ್ಣು:-ಒಂದೊಂದ್ಸಾರಿ ಹಿಂಗೇನೆ ನೋಡ್ ನೋಡ್ತಾಇದ್ದಂಗೇನೆ
ಆಕಾಶಾನೆ ಅಂಗೈಮೇಲೆ ತಂದಿಡ್ತಾನೆ
************************
ಹೆಣ್ಣು:-ಪ್ರಿತಿಯಿಂದ್ಲೆ ತಾನೇ

ಆ ಮೋಡಾ ಕರಗಿ ಮಳೆಯು ಸುರಿಯೋದೂ..
ಗಂಡು:-ಹೌದಾ..
ಹೆಣ್ಣು:-ಪ್ರೇಮಾ ಇದ್ರೇ ತಾನೇ
ಆ ಕಡಲಾ ಕಡೆಗೆ ಹೊಳೆಯು ಹರಿಯೋದೂ..
ಗಂಡು:-ಹಂಗಾ..
ಹೆಣ್ಣು:-ದುಂಬಿ ದಂಡು ಹೂವ ಕಂಡು ಶರಾಣಾಗೋದು..
ಈ ಜಿಂಕೆ ದಂಡು ಹಸಿರ ಕಂಡು ಮರುಳಾಗೋದು
ಗಂಡು:-ಬೀಸೋ ಗಾಳಿಗೆ ಭಾರೀ ಮರವೇ ತಲೆಬಾಗೋದು
ಈ ಕಡಲಾ ನೀರು ಕುಣಿದುಕುಣಿದು ಅಲೆಯಾಗೋದು..ಆಆಆ.
ಹೆಣ್ಣು:-ಒಂದೊಂದ್ಸಾರಿ ಹಿಂಗೇನೆ ನೋಡ್ ನೋಡ್ತಾಇದ್ದಂಗೇನೆ
ಆಕಾಶಾನೆ ಅಂಗೈಮೇಲೆ ತಂದಿಡ್ತಾನೆ
************************
ಹೆಣ್ಣು:-ಸೂರ್ಯ ಚಂದ್ರ ಸಾಕ್ಷಿ

ಒಂದ್ ಸಾವಿರ ವರ್ಷ ಹಾಯಾಗಿರ್ತೀನಿ..
ಗಂಡು:-ಹೌದಾ..
ಹೆಣ್ಣು:-ನಾ ಮುದ್ದಿನ ಮಡದಿಯಾಗಿ
ನಿನ್ ನೂರು ಮಕ್ಕಳ ತಾಯಾಗಿರ್ತೀನಿ..
ಗಂಡು:-ಹಂಗಾ..
ಹೆಣ್ಣು:-ಜೋಡಿ ಹಕ್ಕಿಯಾಗಿ ನಾವು ಹಾರೋಣ ಬಾ..
ಈ ಕಾಮನಬಿಲ್ಲೇ ಜಾರೋ ಗುಂಪೆ ಜಾರೋಣ ಬಾ..
ಗಂಡು:-ಕಾಡು ಕಣಿವೆ ಬೆಟ್ಟ ಗುಡ್ಡ ಓಡಾಡುವಾ..
ಈಪ್ರೀತಿ ಎಲ್ಲಾ ಮುಳುಗಿ ಎದ್ದು ಈಜಾಡುವಾ..ಆಆಆ.
ಹೆಣ್ಣು ಅಂದ್ರೆ ಹಿಂಗೇನೆ
ವಯಸಿಗ್ ಬರ್ತಿದ್ ಹಂಗೇನೆ
ಆಕಾಶಕ್ಕೆ ಏಣಿ ಹಾಕೋದ್ ಸಹಜಾ ತಾನೇ.
ಪ್ರೀತಿ ಅಂದ್ರೆ ಹಿಂಗೇನೆ ಎರಡು ಜೀವ ಒಂದೇನೆ
ಭೂಮಿ ತುಂಬಾ ಇನ್ನು ಮುಂದೆ ನಾನು ನೀನೇ..
ಹೆಣ್ಣು:-ನನಗೆ ಇದೇನಾಯ್ತೋ ಕಾಣೇ.
ಮನಸೇ ಕಳೆದ್ಹೋಗಿದೆ..
ಹೊರಗೇ ನನ್ನೊಳಗೆಲ್ಲ ನೀನೇ
ನಿನದೇ ಜಪವಾಗಿದೇ..

ಕನ್ನಡದಲ್ಲಿ ಗೀತಾಂಜಲಿ ಹಾಡಿನ ಸಾಹಿತ್ಯ

 

 
👉
ಗೀತಾಂಜಲಿ
ಹಾಲುಗೆನ್ನೆಗೆ ವಾರೆಗಣ್ಣಿಗೆ
ನಮ್ಮೂರ ಹೆಣ್ಣಿಗೆ
ಪುಷ್ಪಾಂಜಲಿ
ತೊಂಡೆ ಹಣ್ಣಿಗೆ
ಬಾಳೆ ದಿಂಡಿಗೆ
ದಾಳಿಂಬೆ ಹಣ್ಣಿಗೆ

ಓ ಕನಕಾಂಬರಿ ನೀನು ಬಾರದೆ
ಪೂಜೆಗೆ ಹೂವಿಲ್ಲ
ಓ ಶ್ವೇತಾಂಬರಿ ನೀನು ಬಾರದೆ
ಉತ್ಸವ ಸಾಗಲ್ಲ

ಗೀತಾಂಜಲಿ
ಹಾಲುಗೆನ್ನೆಗೆ ವಾರೆಗಣ್ಣಿಗೆ
ನಮ್ಮೂರ ಹೆಣ್ಣಿಗೆ

ನೀರಾಗಲೇನೆ ನಾ?
ಮೈಯ ಮೇಲೆ ಜಾರಿ ಹೋಗಲು
ಗಾಜಾಗಲೇನೇ ನಾ?
ನಿನ್ನ ಅಂದ ಚಂದ ತೋರಲು

ಮಂಜಾಗಲೇನೆ ನಾ?
ನಿನ್ನ ಕೋಪ ತಂಪು ಮಾಡಲು
ತೇರಾಗಲೇನೆ ನಾ?
ನಿನ್ನ ಹೊತ್ತು ಕೊಂಡು ಹೋಗಲು

ಕೇಳದೆ ದೇವಿ ವರವ ಕೊಡಳು
ಹೊಗಳದೆ ನಾರಿ ಮನಸು ಕೊಡಳು
ಓ ಕನಕಾಂಬರಿ ನೀನು ಬಾರದೆ
ಪೂಜೆಗೆ ಹೂವಿಲ್ಲ
ಓ ಶ್ವೇತಾಂಬರಿ ನೀನು ಬಾರದೆ
ಉತ್ಸವ ಸಾಗಲ್ಲ

ಲಾಲಾಲಲಾ
ಲಾಲಲಾಲಲ ಲಾಲಲಾಲಲ
ಲಲಾಲಲಾಲಲ

ಕೈಲಾಸ ಕೈಯ್ಯಲಿ
ನೀನು ನನ್ನ ತೋಳಲ್ಲಿದ್ದಾರೆ
ಆಕಾಶ ಜೇಬಲಿ
ನಿನ್ನ ನಗು ಹೀಗೆ ಇದ್ದರೆ

ಓ ಮಿಂಚು ಹೂಗಳೆ
ನಿನ್ನ ಮಾತು ಕೇಳುತಿದ್ದರೆ
ಸೀನೆರೆ ಸಾಗರ
ನಿನ್ನ ಭಾವ ಹೀಗೆ ಇದ್ದರೆ

ಓಡದೆ ನೀನು
ಜಿಂಕೆಯಾದೆ
ಹಾರದೆ ನಾನು
ಹಕ್ಕಿಯಾದೆ
ಓ ಕನಕಾಂಬರಿ ನೀನು ಬಾರದೆ
ಪೂಜೆಗೆ ಹೂವಿಲ್ಲ
ಓ ಶ್ವೇತಾಂಬರಿ ನೀನು ಬಾರದೆ
ಉತ್ಸವ ಸಾಗಲ್ಲ

ಗೀತಾಂಜಲಿ
ಹಾಲುಗೆನ್ನೆಗೆ ವಾರೆಗಣ್ಣಿಗೆ
ನಮ್ಮೂರ ಹೆಣ್ಣಿಗೆ

ಪುಷ್ಪಾಂಜಲಿ
ತೊಂಡೆ ಹಣ್ಣಿಗೆ
ಬಾಳೆ ದಿಂಡಿಗೆ
ದಾಳಿಂಬೆ ಹಣ್ಣಿಗೆ


ಕೋವಿಡ್-19: ಭಾರತದಲ್ಲಿಂದು 15,823 ಹೊಸ ಕೇಸ್ ಪತ್ತೆ, 226 ಮಂದಿ ಸಾವು

  

ನವದೆಹಲಿ: ಕೊರೋನಾ 3ನೇ ಅಲೆ ಭೀತಿ ನಡುವೆಯೇ ಬುಧವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡ 24 ತಾಸುಗಳ ಅವಧಿಯಲ್ಲಿ ದೇಶದಲ್ಲಿ 15,823 ಕೊರೋನಾ ಪ್ರಕರಣಗಳು ದೃಢಪಟ್ಟಿದ್ದು, ಇದೇ ಅವಧಿಯಲ್ಲಿ 226 ಮಂದಿ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ. ಬುಧವಾರದ ಅಂಕಿ ಸಂಖ್ಯೆಯೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3,40,01,743ಕ್ಕೆ ತಲುಪಿದ್ದು, ಸಾವಿನ ಸಂಖ್ಯೆ 4,51,189ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. ದೇಶದಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ದೇಶದಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 2,07,653ಕ್ಕೆ ತಲುಪಿದೆ. ಈ ನಡುವೆ ಕಳೆದ 24 ಗಂಟೆಗಳಲ್ಲಿ 22,844 ಮಂದಿ ಗುಣಮುಖರಾಗುವುದರೊಂದಿಗೆ ಈವರೆಗೂ ಚೇತರಿಸಿಕೊಂಡವರ ಸಂಖ್ಯೆ 3,33,42,901ಕ್ಕೆ ತಲುಪಿದೆ. ಇನ್ನು ಭಾರತದಲ್ಲಿ ಒಂದೇ 13,25,399 ಮಂದಿಯನ್ನು ಕೊರೋನಾ ಪರೀಕ್ಷೆಗೊಳಪಡಿಸಲಾಗಿದ್ದು, 58,63,63,442 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ. ಭಾರತದಲ್ಲಿ ಜನವರಿ 16 ರಂದು ಸ್ವದೇಶಿ ನಿರ್ಮಿತ ಕೋವಿಶೀಲ್ಟ್ ಮತ್ತು ಕೋವ್ಯಾಕ್ಸಿನ್ ಕೊರೋನಾ ಲಸಿಕೆಗೆ ಪ್ರಧಾನಿ ಮೋದಿಯವರು ಚಾಲನೆ ನೀಡಿದ್ದು, ತಮ್ಮ ಜೀವವನ್ನೇ ಪಣಕ್ಕಿಟ್ಟು ಕೊರೋನಾ ವಿರುದ್ಧ ಹೋರಾಟ ಮಾಡುತ್ತಿರುವ ಕೊರೋನಾ ವಾರಿಯರ್ಸ್'ಗೆ ಲಸಿಕೆಯ ಮೊದಲ ಆದ್ಯತೆಯನ್ನು ನೀಡಲಾಗಿತ್ತು. ಬಳಿಕ 45 ವರ್ಷ ಮೇಲ್ಪಟ್ಟ ಎಲ್ಲಾ ನಾಗರೀಕರಿಗೆ ಲಸಿಕೆ ನೀಡಲಾಗಿತ್ತು. ಮೇ.1ರಿಂದ 18-45 ವರ್ಷ ವಯಸ್ಸಿನ ಎಲ್ಲರಿಗೂ ಲಸಿಕೆ ನೀಡಲಾಗುತ್ತಿದೆ. ಕೇಂದ್ರ ಸರ್ಕಾರ ಮಾಹಿತಿ ನೀಡಿರುವ ಪ್ರಕಾರ ಲಸಿಕೆ ಅಭಿಯಾನ ಆರಂಭವಾಗಿ ಇಲ್ಲಿಯವರೆಗೂ ಒಟ್ಟಾರೆ 96,43,79,212 ಜನರಿಗೆ ಲಸಿಕೆಯನ್ನು ನೀಡಲಾಗಿದೆ ಎಂದು ತಿಳಿಸಿದೆ...

(ಮಾಹಿತಿ ಕೃಪೆ ಕನ್ನಡ ಪ್ರಭ)

 

ರಾಜ್ಯದಲ್ಲಿ ವಿದ್ಯುತ್ ಕಡಿತ ಇಲ್ಲ; ಕಲ್ಲಿದ್ದಲು ಪೂರೈಕೆಗಾಗಿ ಕೇಂದ್ರಕ್ಕೆ ಬೇಡಿಕೆ: ಸಿಎಂ ಬೊಮ್ಮಾಯಿ

 


ಬೆಂಗಳೂರು, ಅಕ್ಟೋಬರ್ 13: ರಾಜ್ಯದ ವಿದ್ಯುತ್ ಉತ್ಪಾದನೆ, ಪೂರೈಕೆ ಪರಿಸ್ಥಿತಿ ಹಾಗೂ ರಾಜ್ಯದಲ್ಲಿ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿರುವ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ನಡೆಸಲಾಯಿತು.
"ವಿದ್ಯುತ್​ ಉತ್ಪಾದನೆ ಹಾಗೂ ಮಳೆಯಿಂದಾದ ಪರಿಣಾಮಗಳ ಕುರಿತು ಸಭೆ ನಡೆಸಿದ್ದೇನೆ. ಕೇಂದ್ರ ಗಣಿ ಮತ್ತು ಕಲ್ಲಿದ್ದಲು ಸಚಿವರ ಭೇಟಿ ಬಳಿಕ ಹೆಚ್ಚುವರಿ 2 ರೇಕ್ ಕಲ್ಲಿದ್ದಲು ಬರುತ್ತಿದೆ. ಇನ್ನೂ ಎರಡು ರೇಕ್ ಕಲ್ಲಿದ್ದಲು​ ಕೊಡುವುದಾಗಿ ಹೇಳಿದ್ದಾರೆ. ನಾವು ಹಣ ಪಾವತಿಸಿದ ತಕ್ಷಣ ಪೂರೈಕೆ ಪ್ರಕ್ರಿಯೆ ನಡೆಯುತ್ತದೆ. ರಾಜ್ಯದಲ್ಲಿ ವಿದ್ಯುತ್​ ಸ್ಥಗಿತ ಆಗದಂತೆ ನೋಡಿಕೊಳ್ಳುತ್ತೇವೆ," ಎಂದು ಗೃಹ ಕಚೇರಿ ಕೃಷ್ಣಾದಲ್ಲಿ ಅಧಿಕಾರಿಗಳ ಸಭೆ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.
"ರಾಜ್ಯದಲ್ಲಿ ಪ್ರಸ್ತುತ 98,863 ಮೆಟ್ರಿಕ್ ಟನ್ ಕಲ್ಲಿದ್ದಲು ದಾಸ್ತಾನು ಇದೆ. ತೆಲಂಗಾಣದ ಸಿಂಗರೇಣಿಯಿಂದ ಕಲ್ಲಿದ್ದಲು ತರಿಸುವ ಬಗ್ಗೆ ಅಲ್ಲಿನ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು."
"ರಾಜ್ಯದಲ್ಲಿ ಯಾವುದೇ ರೀತಿಯ ಪವರ್​ ಕಟ್ ಇಲ್ಲ. ಮುಂದೆಯೂ ರಾಜ್ಯದಲ್ಲಿ ಪವರ್​ ಕಟ್​ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ತೆಲಂಗಾಣ ಮುಖ್ಯಮಂತ್ರಿ ಜೊತೆಗೂ ಮಾತಾಡುತ್ತಿದ್ದೇನೆ. 10-12 ರೇಕ್ ಕಲ್ಲಿದ್ದಲು​ ನೀಡುವ ಕುರಿತು ಚರ್ಚಿಸಲಾಗುತ್ತಿದೆ. ಎಸ್ಕಾಂ ಆರ್ಥಿಕ ಸಫಲತೆ ಕಾಣಬೇಕು," ಎಂದು ಅವರು ಹೇಳಿದ್ದಾರೆ.
"ಸಿದ್ದರಾಮಯ್ಯ ಖಾಸಗೀಕರಣದ ಭ್ರಮೆಯಲ್ಲೇ ಇರ್ತಾರೆ. ಸರ್ಕಾರ ಫೇಲ್ ಆಗಿಲ್ಲ, ಕಲ್ಲಿದ್ದಲು ಕೊರತೆ ಆಗುವುದಕ್ಕೆ ಬಿಡಲ್ಲ. ಈ ಬಾರಿ ಮಳೆ ಹೆಚ್ಚು ಆಗಿದ್ದರಿಂದ ಕಲ್ಲಿದ್ದಲು ಸಮಸ್ಯೆ ಉಂಟಾಗಿದೆ. ಒಡಿಶಾದಲ್ಲಿ ಮಳೆ ಹೆಚ್ಚಾಗಿದ್ದರಿಂದ ಕಲ್ಲಿದ್ದಲು ಸಮಸ್ಯೆ ಉಂಟಾಗಿದೆ. ಒಡಿಶಾದಿಂದ ಕಲ್ಲಿದ್ದಲು ಬರಲು ನಿಧಾನವಾಗುತ್ತಿದೆ. ಸಿದ್ದರಾಮಯ್ಯರ ಆರೋಪ ಆಧಾರ ರಹಿತವಾದದ್ದು," ಎಂದು ಕೃತಕ ಅಭಾವ ಸೃಷ್ಟಿಸಿ ಖಾಸಗೀಕರಣ ಮಾಡಬಾರದು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಸಿಎಂ ಬಸವರಾಜ ಬೊಮ್ಮಾಯಿ ಉತ್ತರ ನೀಡಿದರು.
"ಎಸ್ಕಾಂಗಳ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಹಿಂದೆ ಸರ್ಕಾರ ಕೊಟ್ಟಿರುವ ಸಾಲವನ್ನು ಈಕ್ವಿಟಿಯಾಗಿ ಪರಿವರ್ತಿಸುವ ಪ್ರಸ್ತಾವನೆ ನಮ್ಮ ಮುಂದಿದ್ದು, ಅದರ ಬಗ್ಗೆಯೂ ಕ್ರಮ ಜರುಗಿಸಲಾಗುವುದು. ಎಸ್ಕಾಂ ಆರ್ಥಿಕವಾಗಿ ಸಬಲೀಕರಣಗೊಳ್ಳಲು ಆದಾಯ ಸಂಗ್ರಹಕ್ಕೆ ಆದ್ಯತೆ ನೀಡಿ, ಬಂಡವಾಳ ಹೂಡಿಕೆ ಪ್ರತ್ಯೇಕವಾಗಿ ಮಾಡಬೇಕು. ಹಣ ಪಾವತಿ ಬಾಕಿ ಉಳಿಸಿಕೊಳ್ಳಬಾರದು," ಎಂದು ಸೂಚಿಸಿರುವುದಾಗಿ ತಿಳಿಸಿದರು.

 

 
ಮಳೆಯಿಂದಾಗಿ 21 ಜನ ಸಾವನ್ನಪ್ಪಿದ್ದಾರೆ; ಪರಿಹಾರ ಭರವಸೆ
"ಅಕ್ಟೋಬರ್ 1ರಿಂದ ಈವರೆಗೂ ಮಳೆಯ ಕಾರಣದಿಂದ 21 ಜನರು ಮೃತಪಟ್ಟಿದ್ದಾರೆ. ಮೃತರ ಕುಟುಂಗಳಿಗೆ ಪರಿಹಾರ ನೀಡುವಂತೆ ಸೂಚನೆ ನೀಡಲಾಗಿದೆ. ಮಳೆಯಿಂದ ಮನೆಗಳಿಗೆ ಹಾನಿಯಾದವರಿಗೂ ಪರಿಹಾರ ಕೊಡುತ್ತೇವೆ. ಬೆಳೆ ಹಾನಿಯಾದ ರೈತರಿಗೂ ಪರಿಹಾರ ನೀಡಲು ಸೂಚನೆ ಕೊಡಲಾಗಿದೆ," ಎಂದರು.
"ಅಕ್ಟೊಬರ್‌ನಲ್ಲಿ ನಿರಂತರವಾಗಿ ಮಳೆಯಾಗಿದ್ದು, 2- 3 ಜಿಲ್ಲೆಗಳನ್ನು ಬಿಟ್ಟರೆ ಶೇ.30ರಿಂದ 50ರಷ್ಟು ಹೆಚ್ಚುವರಿ ಮಳೆಯಾಗಿದೆ. ಜೂನ್‌ನಿಂದ ಇಲ್ಲಿಯವರೆಗೂ 4,71,000 ಹೆಕ್ಟೇರ್ ಬೆಲೆ ಹಾನಿಯಾಗಿದ್ದು, 105 ಕೋಟಿ ರೂ.ಗಳ ಪರಿಹಾರವನ್ನು 1.17 ಲಕ್ಷ ರೈತರಿಗೆ ಬಿಡುಗಡೆ ಮಾಡಲಾಗಿದೆ. ಜಿಲ್ಲಾಧಿಕಾರಿಗಳ ಪಿ.ಡಿ. ಖಾತೆಯಲ್ಲಿ 738 ಕೋಟಿ ರೂ.ಗಳು ಲಭ್ಯವಿದೆ," ಎಂದು ಸಿಎಂ ಮಾಹಿತಿ ನೀಡಿದರು.
"ಅಕ್ಟೊಬರ್ 1ರಿಂದ 12ರೊಳಗೆ ಮರಣ ಹೊಂದಿದ 21 ಜನರಿಗೆ ಕೂಡಲೇ ಪರಿಹಾರ ನೀಡಲು ಸೂಚನೆ ನೀಡಲಾಗಿದ್ದು, ಹಾಗೂ ಮಳೆಯಿಂದ ಹಾನಿಗೊಳಗಾದವರಿಗೆ 10,000 ರೂ.ಗಳ ಎಕ್ಸ್ ಗ್ರೇಶಿಯಾ ಮೊತ್ತವನ್ನು ನೀಡಲು ಸೂಚಿಸಲಾಗಿದೆ. ಭಾಗಶಃ ಹಾನಿಗೊಳಗಾದ 2,500 ಮನೆಗಳಿಗೆ ಹಾಗೂ ಬೆಳೆ ಹಾನಿಗೂ ಕಳೆದ ವರ್ಷದಂತೆ ಎನ್‌ಡಿಆರ್‌ಎಫ್ ನಿಯಮಾವಳಿಗಳಂತೆ ಪರಿಹಾರ ನೀಡಲು ಸೂಚಿಸಲಾಗಿದೆ," ಎಂದು ಹೇಳಿದರು.
"2300 ವಿದ್ಯುತ್ ಕಂಬಗಳು ಬಿದ್ದಿದ್ದು, ರಸ್ತೆ, ಸೇತುವೆ, ಶಾಲಾ ಕಟ್ಟಡಗಳ ಹಾನಿಯನ್ನು ಮೌಲ್ಯಮಾಪನ ಮಾಡಿ ಪರಿಹಾರ ನೀಡಲು ಹಣ ಬಿಡುಗಡೆ ಸೂಚಿಸಲಾಗಿದೆ," ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗೃಹಕಚೇರಿ ಕೃಷ್ಣಾದಲ್ಲಿ ಹಿರಿಯ ಅಧಿಕಾರಿಗಳ ಜೊತೆ ಸಭೆ ಬಳಿಕ ತಿಳಿಸಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ಎಸ್​ಡಿಆರ್​ಎಫ್ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ. ಮಳೆಯಿಂದಾದ ಹಾನಿ, ಬೆಳೆ ಹಾನಿ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ಸಭೆಯಲ್ಲಿ ಸಚಿವರಾದ ಕೆ.ಎಸ್.ಈಶ್ವರಪ್ಪ, ವಿ.ಸೋಮಣ್ಣ, ಕೆ. ಗೋಪಾಲಯ್ಯ, ಭೈರತಿ ಬಸವರಾಜ್, ಮುನಿರತ್ನ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್, ಹಣಕಾಸು ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಪ್ರಸಾದ್, ಸಿಎಂ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್ ಭಾಗಿಯಾಗಿದ್ದರು.

Sunday, October 10, 2021

ನವರಾತ್ರಿಯಂದು ಚಮತ್ಕಾರ ಮಾಡುತ್ತೆ ಈ ʼಹೂʼ

  

ನವರಾತ್ರಿ ಹಬ್ಬ. ಸಮೀಪಿಸುತ್ತಿದೆ. ಸುಖ-ಸಂಪತ್ತಿಗಾಗಿ ಭಕ್ತರು ತಾಯಿ ದುರ್ಗೆಯ ಆರಾಧನೆಯಲ್ಲಿ ನಿರತರಾಗಿದ್ದಾರೆ. ತಂತ್ರ ಶಾಸ್ತ್ರಗಳ ಪ್ರಕಾರ ನವರಾತ್ರಿಯಂದು ಮನೆಗೆ ತರುವ ಕೆಲವೊಂದು ವಸ್ತುಗಳು ಶುಭಕರವಾಗಿದ್ದು, ಮನೆಯಲ್ಲಿ ಸದಾ ಶ್ರೀಮಂತಿಕೆ, ಸುಖ, ಸಂತೋಷ ನೆಲೆಸಿರುತ್ತದೆ.
ಶಂಖಪುಷ್ಪ : ಇದು ಬಹಳ ಕಲ್ಯಾಣಕಾರಿ ಪುಷ್ಪವಾಗಿದೆ. ಇದು ಸ್ಮರಣ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಕುಟುಂಬಸ್ಥರ ನಡುವೆ ಸಾಮರಸ್ಯ ಬೆಳೆಸುತ್ತದೆ. ನವರಾತ್ರಿಯಂದು ಶಂಖಪುಷ್ಪವನ್ನು ಮನೆಗೆ ತಂದು ಬೆಳ್ಳಿ ಪೆಟ್ಟಿಗೆಯಲ್ಲಿಟ್ಟು ಪೂಜಾ ಸ್ಥಳದಲ್ಲಿ ಸ್ಥಾಪನೆ ಮಾಡಿ ಪೂಜೆ ಮಾಡಿ. ಇದು ವ್ಯಾಪಾರಸ್ಥರಿಗೆ ಹಾಗೂ ವಿದ್ಯಾರ್ಥಿಗಳಿಗೆ ವೃದ್ಧಿಯಾಗಲಿದೆ.
ಬಾಳೆ ಗಿಡ : ಬಾಳೆ ಗಿಡ ಸುಖ-ಸಂತೋಷ, ಸಮೃದ್ಧಿಯ ಸಂಕೇತ. ನಿಮ್ಮ ಮನೆಯಲ್ಲಿ ಬಾಳೆ ಸಸಿಯಿಲ್ಲವಾದ್ರೆ ನವರಾತ್ರಿ ಸಂದರ್ಭದಲ್ಲಿ ಬಾಳೆ ಸಸಿ ತಂದು ಬೆಳೆಸಿ. ಧೂಮ-ದೀಪಗಳಿಂದ ಇದನ್ನು ಪೂಜೆ ಮಾಡಿ.
ಪಾರಿಜಾತ ಎಲೆ : ನವರಾತ್ರಿಯಂದು ಪಾರಿಜಾತ ಎಲೆಯನ್ನು ತಂದು ಕೆಂಪು ಬಟ್ಟೆಯಲ್ಲಿ ಸುತ್ತಿಡಿ. ಪೂಜೆ ಮಾಡುವ ಸ್ಥಳದಲ್ಲಿಟ್ಟು ಪೂಜೆ ಮಾಡಿ. ಇದು ಮನೆಯ ಶಾಂತಿ, ಸಂತೋಷವನ್ನು ವೃದ್ಧಿ ಮಾಡುತ್ತದೆ.
ಆಲದ ಎಲೆ : ನವರಾತ್ರಿ ದಿನ ಆಲದ ಮರದ ಎಲೆಯನ್ನು ತಂದು ಮನೆಯಲ್ಲಿಡಿ. ಇದ್ರ ಮೇಲೆ ಅರಿಶಿನ ಅಥವಾ ಕುಂಕುಮದಿಂದ ಸ್ವಸ್ಥಿಕವನ್ನು ರಚಿಸಿ. ನಂತ್ರ ಪೂಜೆ ಮಾಡಿ.

(ಮಾಹಿತಿ ಕೃಪೆ ಕನ್ನಡದುನಿಯಾ)

 

ಕನ್ನಡ ಚಿತ್ರರಂಗದ ಹಿರಿಯ ನಟ ಸತ್ಯಜಿತ್​ ವಿಧಿವಶ

  

 ಬೆಂಗಳೂರು: ಕೆಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗದ ಹಿರಿಯ ನಟ ಸತ್ಯಜಿತ್​ (72) ಅವರು ತಡರಾತ್ರಿ 2 ಗಂಟೆ ಸಮಯದಲ್ಲಿ ಬೆಂಗಳೂರಿನ ಬೌರಿಂಗ್​ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಸತ್ಯಜಿತ್ ಅವರ​ ಆರೋಗ್ಯ ಪರಿಸ್ಥಿತಿ ಗಂಭೀರವಾಗಿ ಕಳೆದ ಸೋಮವಾರ ಬೌರಿಂಗ್​ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರನ್ನು ತೀವ್ರ ನಿಗಾ ಘಟಕದಲ್ಲಿ (ಐಸಿಯು) ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಿಸದೇ ವಿಧಿವಶರಾಗಿದ್ದಾರೆ. 

ಆಸ್ಪತ್ರೆಗೆ ಸತ್ಯಜಿತ್ ದಾಖಲಿಸಿದ ದಿನ ಮಾಧ್ಯಮದವರ ಜತೆ ಮಾತನಾಡಿದ್ದ​ ಪುತ್ರ ಆಕಾಶ್, ತಂದೆಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ದಿನದಿಂದ ದಿನಕ್ಕೆ ಆರೋಗ್ಯ ಹದಗೆಡುತ್ತಲೇ ಇದೆ. ಸೂಕ್ತ ಸಮಯದಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದಿದ್ದರು. ಇನ್ನು ಮೂಲಗಳ ಪ್ರಕಾರ, ಹಲವು ದಿನಗಳಿಂದ ಆರೋಗ್ಯ ಕೈಕೊಟ್ಟಿದ್ದರಿಂದ ಸತ್ಯಜಿತ್​ ಕುಟುಂಬಕ್ಕೆ ಆರ್ಥಿಕ ಸಂಕಷ್ಟವೂ ಎದುರಾಗಿತ್ತು ಎಂದು ತಿಳಿದುಬಂದಿದೆ.

ಗ್ಯಾಂಗ್ರಿನ್​ನಿಂದಾಗಿ ಅವರ ಒಂದು ಕಾಲು ಕತ್ತರಿಸಲಾಗಿತ್ತು. ಬಳಿಕ ಸಕ್ಕರೆ ಕಾಯಿಲೆ ಮತ್ತು ಇನ್ನಿತರೆ ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದರು. ಕಾಲಿನಲ್ಲಿ ಗ್ಯಾಂಗ್ರಿನ್​ ಕಾಣಿಸಿಕೊಂಡ ಬಳಿಕ ಸಿನಿಮಾ ರಂಗದಿಂದ ಅವರಿಗೆ ಬೇಡಿಕೆ ಕಡಿಮೆ ಆಯಿತು. ಬಳಿಕ ಕುಟುಂಬದ ಹಣಕಾಸಿನ ಸ್ಥಿತಿಯು ಉತ್ತಮವಾಗಿರಲಿಲ್ಲ. ಅಲ್ಲದೆ, ಮಗಳ ಮೇಲೆಯೂ ಸತ್ಯಜಿತ್​ ಅಸಮಾಧಾನವಾಗಿತ್ತು. ಕುಟುಂಬ ಮತ್ತು ಆರೋಗ್ಯ ಸಮಸ್ಯೆಗಳಿಂದ ಸತ್ಯಜಿತ್​ ತುಂಬಾ ಕೊರಗಿ ಹೋಗಿದ್ದರು.
ಇನ್ನು 2018ರಲ್ಲಿ ತೆರೆಕಂಡ ಪ್ರಿಯಾಂಕಾ ಉಪೇಂದ್ರ ಅಭಿನಯದ ಸೆಕೆಂಡ್​ ಹಾಫ್​ ಚಿತ್ರದ ಸತ್ಯಜಿತ್‌ ಅಭಿನಯಿಸಿದ್ದರು. ಈ‌ ಸಿನಿಮಾ ಬಳಿಕ ಯಾವುದೇ ಸಿನಿಮಾಗಳಲ್ಲೂ ಅಭಿನಯಿಸಿಲ್ಲ. ಕನ್ನಡದಲ್ಲಿ ಸುಮಾರು 600 ಚಿತ್ರಗಳಲ್ಲಿ ಸತ್ಯಜಿತ್​ ನಟಿಸಿದ್ದಾರೆ. ವಿಲನ್​ ಮತ್ತು ಪೋಷಕ ಪಾತ್ರ ಸೇರಿದಂತೆ ಅನೇಕ ಚಿತ್ರಗಳಲ್ಲಿ ತಮ್ಮ ಕಾಮಿಡಿ ಟೈಮಿಂಗ್​ ಜನರನ್ನು ನಗಿಸಿದ್ದಾರೆ.
ಡಾ.ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಶಿವರಾಜ್ ಕುಮಾರ್, ಪುನೀತ್ ರಾಜ್‍ಕುಮಾರ್, ಸುದೀಪ್, ದರ್ಶನ್ ಸೇರಿದಂತೆ ಸಾಕಷ್ಟು ಕಲಾವಿದರ ಸಿನಿಮಾಗಳಲ್ಲಿ ಸತ್ಯಜಿತ್‌ ಖಳನಟ ಹಾಗು ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

(ಮಾಹಿತಿ ಕೃಪೆ ವಿಜಯವಾಣಿ)

 

Fact Check: ಪಿಎಂ ಕಿಸಾನ್ ಟ್ರಾಕ್ಟರ್ ಯೋಜನೆ ಅಡಿಯಲ್ಲಿ ರೈತರಿಗೆ 5 ಲಕ್ಷ ರೂ. ಸಹಾಯಧನ ನೀಡುತ್ತಿದ್ಯಾ? ಇಲ್ಲಿದೆ ವೈರಲ್‌ ಸುದ್ದಿಯ ಅಸಲಿಯತ್ತು

  

ನವದೆಹಲಿ: ಪಿಎಂ ಕಿಸಾನ್ (pM Kisan ) ಟ್ರಾಕ್ಟರ್ ಯೋಜನೆ ಹೆಸರಿನಲ್ಲಿ ಒಂದು ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ (social media) ಹರಿದಾಡುತ್ತಿದ್ದು ಕೆಲವು ಮಾಧ್ಯಮಗಳು ಕೂಡ ಈ ಬಗ್ಗೆ ಸುದ್ದಿಯನ್ನು ಪ್ರಸಾರ ಮಾಡಿದೆ. ವೈರಲ್‌ ಸುದ್ದಿಯಲ್ಲಿ (Viral news) ಕೇಂದ್ರ ಸರ್ಕಾರವು ಪಿಎಂ ಕಿಸಾನ್ ಟ್ರಾಕ್ಟರ್ ಯೋಜನೆ (PM Kisan Tractor Project) ಮೂಲಕ ರೈತರಿಗೆ 5 ಲಕ್ಷ ರೂಪಾಯಿ ಸಹಾಯಧನ ನೀಡುತ್ತಿದೆ ಎಂದು ಹೇಳಲಾಗುತ್ತಿದೆ.
ಈ ನಡುವೆ ವೈರಲ್‌ ಆಗಿರುವ ಸುದ್ದಿಗೆ ಪಿಐಬಿ ತನ್ನ ಅಧಿಕೃತ ಟ್ವಿಟರ್‌ನಲ್ಲಿ ಹೇಳಿರುವಪ್ರಕಾರ, ಕೇಂದ್ರ ಸರ್ಕಾರವು ಇನ್ನು ಮುಂದೆ ಪಿಎಂ ಕಿಸಾನ್ ಟ್ರಾಕ್ಟರ್ ಯೋಜನೆಯನ್ನು ಜಾರಿಗೊಳಿಸುವುದಿಲ್ಲ. , ಈ ಯೋಜನೆಯ ಹೆಸರಿನಲ್ಲಿ ಮಾಡಿದ ಯಾವುದೇ ಹೇಳಿಕೆಗಳು ಸುಳ್ಳು ಅಂಥ ತಿಳಿಸಿದೆ. ಪಿಎಂಬಿ ಕಿಸಾನ್ ಟ್ರಾಕ್ಟರ್ ಯೋಜನೆ ಕುರಿತು ಅಂತರ್ಜಾಲದ ಸುಳ್ಳು ಸುದ್ದಿಗೆ ಸಂಬಂಧಿಸಿದಂತೆ ಪಿಐಬಿ ಟ್ವೀಟ್ ಮಾಡಿದೆ. ಪಿಐಬಿ ಪ್ರಕಾರ, ಪಿಎಂ ಕಿಸಾನ್ ಟ್ರಾಕ್ಟರ್ ಯೋಜನೆಯಂತಹ ಯಾವುದೇ ಯೋಜನೆ ಇಲ್ಲ, ಮತ್ತು ಸರ್ಕಾರವು ಅದನ್ನು ಜಾರಿಗೊಳಿಸುತ್ತಿಲ್ಲ ಅಂಥ ತಿಳಿಸಿದೆ. 

(ಮಾಹಿತಿ ಕೃಪೆ Kannada News Now)

ಮಹಾಮಳೆಯಿಂದ ತತ್ತರಿಸಿದ ಜನತೆಗೆ ಬಿಗ್ ಶಾಕ್: ಇನ್ನೂ ಮೂರು ದಿನ ಭಾರಿ ಮಳೆ

 

ಬೆಂಗಳೂರು: ಅರಬ್ಬಿ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಮೂರು ದಿನ ಭಾರಿ ಮಳೆಯಾಗಲಿದೆ. ಬೆಂಗಳೂರು ಸೇರಿ ರಾಜ್ಯದಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯಿಂದ ಈ ಬಗ್ಗೆ ಮುನ್ಸೂಚನೆ ನೀಡಲಾಗಿದ್ದು, ಗುಡುಗು, ಗಾಳಿ ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಕಲಬುರ್ಗಿ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಅನೇಕ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ ಕರಾವಳಿಯ ಮೂರು ಜಿಲ್ಲೆಗಳಲ್ಲಿ, ಚಿತ್ರದುರ್ಗ, ತುಮಕೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಭಾಗದಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಅಕ್ಟೋಬರ್ 10 ರಿಂದ 13 ರವರೆಗೂ ರಾಜ್ಯದ ಬಹುತೇಕ ಭಾಗದಲ್ಲಿ ಮಳೆಯಾಗಲಿದೆ. ಕರಾವಳಿ, ದಕ್ಷಿಣ ಒಳನಾಡು, ಉತ್ತರ ಒಳನಾಡು, ಮಲೆನಾಡಿನ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗಲಿದೆ ಎಂದು ಹೇಳಲಾಗಿದೆ.

(ಮಾಹಿತಿ ಕೃಪೆ ಕನ್ನಡದುನಿಯಾ)