ನವದೆಹಲಿ: ಪಿಎಂ ಕಿಸಾನ್ (pM Kisan ) ಟ್ರಾಕ್ಟರ್ ಯೋಜನೆ ಹೆಸರಿನಲ್ಲಿ ಒಂದು ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ (social media) ಹರಿದಾಡುತ್ತಿದ್ದು ಕೆಲವು ಮಾಧ್ಯಮಗಳು ಕೂಡ ಈ ಬಗ್ಗೆ ಸುದ್ದಿಯನ್ನು ಪ್ರಸಾರ ಮಾಡಿದೆ. ವೈರಲ್ ಸುದ್ದಿಯಲ್ಲಿ (Viral news) ಕೇಂದ್ರ ಸರ್ಕಾರವು ಪಿಎಂ ಕಿಸಾನ್ ಟ್ರಾಕ್ಟರ್ ಯೋಜನೆ (PM Kisan Tractor Project) ಮೂಲಕ ರೈತರಿಗೆ 5 ಲಕ್ಷ ರೂಪಾಯಿ ಸಹಾಯಧನ ನೀಡುತ್ತಿದೆ ಎಂದು ಹೇಳಲಾಗುತ್ತಿದೆ.
ಈ ನಡುವೆ ವೈರಲ್ ಆಗಿರುವ ಸುದ್ದಿಗೆ ಪಿಐಬಿ ತನ್ನ ಅಧಿಕೃತ ಟ್ವಿಟರ್‌ನಲ್ಲಿ ಹೇಳಿರುವಪ್ರಕಾರ, ಕೇಂದ್ರ ಸರ್ಕಾರವು ಇನ್ನು ಮುಂದೆ ಪಿಎಂ ಕಿಸಾನ್ ಟ್ರಾಕ್ಟರ್ ಯೋಜನೆಯನ್ನು ಜಾರಿಗೊಳಿಸುವುದಿಲ್ಲ. , ಈ ಯೋಜನೆಯ ಹೆಸರಿನಲ್ಲಿ ಮಾಡಿದ ಯಾವುದೇ ಹೇಳಿಕೆಗಳು ಸುಳ್ಳು ಅಂಥ ತಿಳಿಸಿದೆ. ಪಿಎಂಬಿ ಕಿಸಾನ್ ಟ್ರಾಕ್ಟರ್ ಯೋಜನೆ ಕುರಿತು ಅಂತರ್ಜಾಲದ ಸುಳ್ಳು ಸುದ್ದಿಗೆ ಸಂಬಂಧಿಸಿದಂತೆ ಪಿಐಬಿ ಟ್ವೀಟ್ ಮಾಡಿದೆ. ಪಿಐಬಿ ಪ್ರಕಾರ, ಪಿಎಂ ಕಿಸಾನ್ ಟ್ರಾಕ್ಟರ್ ಯೋಜನೆಯಂತಹ ಯಾವುದೇ ಯೋಜನೆ ಇಲ್ಲ, ಮತ್ತು ಸರ್ಕಾರವು ಅದನ್ನು ಜಾರಿಗೊಳಿಸುತ್ತಿಲ್ಲ ಅಂಥ ತಿಳಿಸಿದೆ.
(ಮಾಹಿತಿ ಕೃಪೆ Kannada News Now)
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ