WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Wednesday, November 2, 2022

‘ಕರ್ನಾಟಕ ರತ್ನ’ ಪ್ರಶಸ್ತಿಯನ್ನು ಅಪ್ಪುಗೆ ಅರ್ಪಿಸಿದ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ : ಇಲ್ಲಿದೆ ಫೋಟೋ

ಬೆಂಗಳೂರು: ಮಂಗಳವಾರ ಸಂಜೆ ವಿಧಾನಸೌಧದ ಮುಂಭಾಗ ಡಾ.ಪುನೀತ್‌ರಾಜ್‌ಕುಮಾರ್‌ಗೆ ಮರೋಣತ್ತರ ಕರ್ನಾಟಕ ರತ್ನ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಈ ವೇಳೆ ಪ್ರಶಸ್ತಿಯನ್ನು ನಟ, ನಿರ್ಮಾಪಕ, ಗಾಯಕ ಕರ್ನಾಟಕ ರತ್ನ ಪುನೀತ್‌ ರಾಜ್‌ ಅವರ ಪತ್ನಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅವರಿಗೆ ನೀಡ ಗೌರವಿಸಲಾಯಿತು.
ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ನಂತರ ಮನೆಗೆ ಆಗಮಿಸಿದ ಪುನೀತ್ ಪತ್ನಿ ಅಶ್ವಿನಿ ಹಾಗೂ ಅವರ ಎರಡನೇ ಪುತ್ರಿಯ ಜೊತೆಯಲ್ಲಿ ಕರ್ನಾಟಕ ರತ್ನ ಪ್ರಶಸ್ತಿಯ ಮೆಡಲ್ ಅನ್ನು ಪುನೀತ್ ಅವರ ಫೋಟೋಗೆ ಅರ್ಪಿಸಿದರು.
ಇದೇ ವೇಳೆ ಸಮಾರಂಭದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಡಾ. ರಾಜ್‌ಕುಮಾರ್‌ ಕುಟುಂಬದ ಸದ್ಯಸರು, ಖ್ಯಾತ ನಟರಾದ ರಜಿನಿಕಾಂತ್‌, ಜ್ಯೂ.ಎನ್‌ಟಿಆರ್‌ ಸೇರಿದಂತೆ ರಾಜಕೀಯ ನಾಯಕರುಗಳು ಭಾಗವಹಿಸಿದ್ದರು. ಇದೇ ವೇಳೆ ಕಾರ್ಯಕ್ರಮಕ್ಕೆ ಸಾವಿರಾರು ಜನತೆ ಆಗಮಿಸಿ ನೆಚ್ಚಿನ ನಟನಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದೇ ವೇಳೆ ಕಾರ್ಯಕ್ರಮ ಆಗಮಕ್ಕೂ ಮುನ್ನ ಗಾಯಕರು ನಟ ಪುನೀತ್‌ ರಾಜ್‌ಕುಮಾರ್‌ ಅವರ ಅಭಿನಯದ ಸಿನಿಮಾ ಹಾಡುಗಳನ್ನು ಹಾಡಿದ್ದರು. ಇದೇ ವೇಳೆ ಅಪ್ಪು ಅವರ ಕುರಿತು ಕಿರುಚಿತ್ರವನ್ನು ಕೂಡ ಪ್ರದರ್ಶನ ಮಾಡಿದರು.


ಇದೇ ವೇಳೆ ಮಾತನಾಡಿದ ರಜನಿ ಕಾಂತ್‌ ಅವರು ಮಾತನಾಡಿ, ಸಿಎಂ ಸಮ್ಮುಖದಲ್ಲಿ ಏಳು ಕೋಟಿ ಕನ್ನಡ ಮಕ್ಕಳಿಗೆ ರಾಜೋತ್ಸವದ ಶುಭಾಶಯಗಳು, ಎಲ್ಲರೂ ಜಾತಿ ಮತಗಳ ಭೇದವಿಲ್ಲದೇ ಎಲ್ಲರೂ ಒಂದಾಗಿ ಇರಲಿ ಅಂತ ಮನವಿ ಮಾಡಿಕೊಂಡರು. ಪುನೀತ್‌ ರಾಜ್‌ಕುಮಾರ್‌ ಅವರು ದೇವರ ಮಗು, ನಮ್ಮಲ್ಲಿ ಸ್ವಲ್ಪ ದಿನ ಇದ್ದು, ಅವರ ಆತ್ಮ ಇಲ್ಲದೇ ಇದ್ದು, ಅದು ಬಹಳ ದೊಡ್ಡ ಜೀವ ಮಳೆ ಕಾರಣದಿಂದ ಹೆಚ್ಚು ದಿನ ಮಾತನಾಡಲು ಸಾಧ್ಯವಾಗುತ್ತಿಲ್ಲ, ಮುಂದೆ ಒಂದು ದಿನ ಅಪ್ಪು ಅವರ ಬಗ್ಗೆ ಮಾತನಾಡುವೆ ಅಂತ ಹೇಳಿದರು
ಇದೇ ವೇಳೆ ಮಾತನಾಡಿದ ಜ್ಯೂ. ಎನ್‌ಟಿಆರ್‌ ಪರಂಪರೆ ಮತ್ತು ಉಪನಾಮ ಅನ್ನೊದು ಹಿರಿಯರಿಂದ ಬರುತ್ತದೆ ವ್ಯಕ್ತಿತ್ವದ ಅನ್ನೋಂದು ಸ್ವಂತ ಸಂಪಾದನೆ, ಆಹಂ ಇಲ್ಲದೇ, ಯುದ್ದವಿಲ್ಲದೇ ಗೆದ್ದ ರಾಜ ಇದ್ದರೇ ಅದು ಪುನೀತ್‌ ರಾಜ್‌ಕುಮಾರ್‌ ಮಾತ್ರ ಅಂತ ಹೇಳಿದರು. ಅವರ ನಗುವಿನಲ್ಲೂ ಯಾರನ್ನು ಕಾಣಸಲು ಸಾಧ್ಯವಿಲ್ಲ ಅಂತ ಹೇಳಿದರು. ಇನ್ನೂ ಇದೇ ವೇಳೇ ನಾನು ಇಲ್ಲಿಗೆ ಬರಲುಕಾರಣ ಸಾಧನೆ ಕಾರಣದಿಂದ ಅಲ್ಲ ಬದಲಿಗೆ ಪುನೀತ್‌ ರಾಜ್‌ಕುಮಾರ್‌ ಅವರ ಸ್ನೇಹಿತ ಅನ್ನುವ ಕಾರಣದಿಂದ ನನಗೆ ಸಂತೋಶ ಅಂತ ಹೇಳಿದರು. ಕರ್ನಾಟಕ ರತ್ನ ಅಂದ್ರೆ ಅದಕ್ಕೆ ಪುನೀತ್‌ ಹೆಸರು ಅಂತ ಹೇಳಿದರು.

kannadanewsnow





 

Tuesday, November 1, 2022

BIGG NEWS : ಇಲ್ಲಿವರೆಗೂ ಯಾರಿಗೆಲ್ಲಾ ಸಿಕ್ಕಿದೆ ‘ಕರ್ನಾಟಕ ರತ್ನ’ ಗೌರವ : ಇಲ್ಲಿದೆ ಸಂಪೂರ್ಣ ಪಟ್ಟಿ ಇಲ್ಲಿದೆ


ಬೆಂಗಳೂರು : ಇಂದು ದಿ.ನಟ ಪುನೀತ್ ರಾಜ್ ಕುಮಾರ್ ಅವರಿಗೆ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಕರ್ನಾಟಕ ರತ್ನ’ ಪ್ರಶಸ್ತಿಯನ್ನ ಈವರೆಗೆ ಒಂಬತ್ತು ಸಾಧಕರಿಗೆ ನೀಡಲಾಗಿದೆ.

ಕರ್ನಾಟಕ ರತ್ನ ಪ್ರಶಸ್ತಿಯನ್ನು ಮೊದಲ ಬಾರಿಗೆ 1991 ರಲ್ಲಿ ಆರಂಭಿಸಲಾಯಿತು. ಈ ಪ್ರಶಸ್ತಿಯನ್ನು ಯಾವುದೇ ಕ್ಷೇತ್ರದಲ್ಲಿ ಅಸಾಧಾರಣ ಕೊಡುಗೆಯನ್ನು ನೀಡಿದ ವ್ಯಕ್ತಿಗಳಿಗೆ ನೀಡಲಾಗುತ್ತದೆ. ಕರ್ನಾಟಕ ಪ್ರಶಸ್ತಿಯನ್ನು ಮೊದಲ ಬಾರಿಗೆ 1992 ರಲ್ಲಿ ನೀಡಲಾಯಿತು. ಕರ್ನಾಟಕ ರತ್ನ’ ಪ್ರಶಸ್ತಿಯನ್ನು ಪಡೆಯುವವರಿಗೆ 50 ಗ್ರಾಂ ತೂಕದ ಚಿನ್ನದ ಪದಕ, ನೆನಪಿನ ಕಾಣಿಕೆ ನೀಡಿ, ಶಾಲನ್ನು ಹೊದಿಸಿ ಗೌರವಿಸಲಾಗುತ್ತದೆ.

ಕರ್ನಾಟಕ ರತ್ನ ಪ್ರಶಸ್ತಿ ಪುರಸ್ಕೃತರ ಪಟ್ಟಿ

ಕುವೆಂಪು – ಸಾಹಿತ್ಯ – 1992
ಡಾ. ರಾಜ್‌ಕುಮಾರ್‌ – ಚಲನಚಿತ್ರ – 1992
ಎಸ್‌.ನಿಜಲಿಂಗಪ್ಪ – ರಾಜಕೀಯ – 1999
ಸಿ.ಎನ್‌.ಆರ್.ರಾವ್ – ವಿಜ್ಞಾನ – 2000
ದೇವಿಪ್ರಸಾದ್ ಶೆಟ್ಟಿ – ವೈದ್ಯಕೀಯ – 2001
ಭೀಮಸೇನ ಜೋಷಿ – ಸಂಗೀತ – 2005
ಶ್ರೀ ಶಿವಕುಮಾರ ಸ್ವಾಮೀಗಳು – ಸಾಮಾಜಿಕ ಸೇವೆ – 2007
ದೇ. ಜವರೇಗೌಡ – ಸಾಹಿತ್ಯ -2008
ಡಿ. ವೀರೇಂದ್ರ ಹೆಗ್ಗಡೆ – ಸಾಮಾಜಿಕ ಸೇವೆ – 2009.
ದಿ. ಪುನೀತ್ ರಾಜ್‌ಕುಮಾರ್- ಸಿನಿಮಾ ಹಾಗೂ ಸಾಮಾಜಿಕ ಸೇವೆ -2021


kannadanewsnow