ಬೆಂಗಳೂರು : ಇಂದು ದಿ.ನಟ ಪುನೀತ್ ರಾಜ್ ಕುಮಾರ್ ಅವರಿಗೆ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಕರ್ನಾಟಕ ರತ್ನ’ ಪ್ರಶಸ್ತಿಯನ್ನ ಈವರೆಗೆ ಒಂಬತ್ತು ಸಾಧಕರಿಗೆ ನೀಡಲಾಗಿದೆ.
ಕರ್ನಾಟಕ ರತ್ನ ಪ್ರಶಸ್ತಿಯನ್ನು ಮೊದಲ ಬಾರಿಗೆ 1991 ರಲ್ಲಿ ಆರಂಭಿಸಲಾಯಿತು. ಈ ಪ್ರಶಸ್ತಿಯನ್ನು ಯಾವುದೇ ಕ್ಷೇತ್ರದಲ್ಲಿ ಅಸಾಧಾರಣ ಕೊಡುಗೆಯನ್ನು ನೀಡಿದ ವ್ಯಕ್ತಿಗಳಿಗೆ ನೀಡಲಾಗುತ್ತದೆ. ಕರ್ನಾಟಕ ಪ್ರಶಸ್ತಿಯನ್ನು ಮೊದಲ ಬಾರಿಗೆ 1992 ರಲ್ಲಿ ನೀಡಲಾಯಿತು. ಕರ್ನಾಟಕ ರತ್ನ’ ಪ್ರಶಸ್ತಿಯನ್ನು ಪಡೆಯುವವರಿಗೆ 50 ಗ್ರಾಂ ತೂಕದ ಚಿನ್ನದ ಪದಕ, ನೆನಪಿನ ಕಾಣಿಕೆ ನೀಡಿ, ಶಾಲನ್ನು ಹೊದಿಸಿ ಗೌರವಿಸಲಾಗುತ್ತದೆ.
ಕರ್ನಾಟಕ ರತ್ನ ಪ್ರಶಸ್ತಿ ಪುರಸ್ಕೃತರ ಪಟ್ಟಿ
ಕುವೆಂಪು – ಸಾಹಿತ್ಯ – 1992
ಡಾ. ರಾಜ್‌ಕುಮಾರ್ – ಚಲನಚಿತ್ರ – 1992
ಎಸ್.ನಿಜಲಿಂಗಪ್ಪ – ರಾಜಕೀಯ – 1999
ಸಿ.ಎನ್.ಆರ್.ರಾವ್ – ವಿಜ್ಞಾನ – 2000
ದೇವಿಪ್ರಸಾದ್ ಶೆಟ್ಟಿ – ವೈದ್ಯಕೀಯ – 2001
ಭೀಮಸೇನ ಜೋಷಿ – ಸಂಗೀತ – 2005
ಶ್ರೀ ಶಿವಕುಮಾರ ಸ್ವಾಮೀಗಳು – ಸಾಮಾಜಿಕ ಸೇವೆ – 2007
ದೇ. ಜವರೇಗೌಡ – ಸಾಹಿತ್ಯ -2008
ಡಿ. ವೀರೇಂದ್ರ ಹೆಗ್ಗಡೆ – ಸಾಮಾಜಿಕ ಸೇವೆ – 2009.
ದಿ. ಪುನೀತ್ ರಾಜ್‌ಕುಮಾರ್- ಸಿನಿಮಾ ಹಾಗೂ ಸಾಮಾಜಿಕ ಸೇವೆ -2021
kannadanewsnow
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ