ನವದೆಹಲಿ: ಪಡಿತರ ಚೀಟಿಯ ಫಲಾನುಭವಿಗಳಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯು ಪಡಿತರ ಚೀಟಿಯ ನಿಯಮಗಳನ್ನು ಬದಲಾಯಿಸುತ್ತಿದೆ. ವಾಸ್ತವವಾಗಿ, ಸರ್ಕಾರಿ ಪಡಿತರ ಅಂಗಡಿಗಳಿಂದ ಪಡಿತರವನ್ನು ತೆಗೆದುಕೊಳ್ಳುವ ಅರ್ಹ ಜನರಿಗೆ ನಿಗದಿಪಡಿಸಿದ ಮಾನದಂಡಗಳಲ್ಲಿ ಇಲಾಖೆಯು ಬದಲಾವಣೆಗಳನ್ನು ಮಾಡುತ್ತಿದೆ.
ಹೊಸ ಮಾನದಂಡದ ಕರಡು ಈಗ ಬಹುತೇಕ ಸಿದ್ಧವಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರಗಳೊಂದಿಗೆ ಹಲವು ಸುತ್ತಿನ ಸಭೆಗಳನ್ನೂ ನಡೆಸಲಾಗಿದೆ.
ಮಾನದಂಡದಲ್ಲಿ ಬದಲಾವಣೆ
ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ಪ್ರಕಾರ, ಪ್ರಸ್ತುತ ದೇಶಾದ್ಯಂತ 80 ಕೋಟಿ ಜನರು ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಯ (NFSA) ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಅವರಲ್ಲಿ ಆರ್ಥಿಕವಾಗಿ ಸಮೃದ್ಧವಾಗಿರುವ ಅನೇಕ ಜನರಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಸಾರ್ವಜನಿಕ ವಿತರಣಾ ಸಚಿವಾಲಯವು ಮಾನದಂಡಗಳಲ್ಲಿ ಬದಲಾವಣೆಗಳನ್ನು ಮಾಡಲಿದೆ. ವಾಸ್ತವವಾಗಿ, ಈಗ ಹೊಸ ಮಾನದಂಡವನ್ನು ಸಂಪೂರ್ಣವಾಗಿ ಪಾರದರ್ಶಕಗೊಳಿಸಲಾಗುವುದು. ಇದರಿಂದ ಯಾವುದೇ ಅವ್ಯವಸ್ಥೆ ಉಂಟಾಗುವುದಿಲ್ಲ ಎನ್ನಲಾಗಿದೆ.
ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯು ಕಳೆದ ಆರು ತಿಂಗಳಿಂದ ಮಾನದಂಡ ಗುಣಮಟ್ಟ ಬದಲಾವಣೆ ಕುರಿತು ರಾಜ್ಯಗಳೊಂದಿಗೆ ಸಭೆ ನಡೆಸುತ್ತಿದೆ. ರಾಜ್ಯಗಳು ನೀಡುವ ಸಲಹೆಗಳನ್ನು ಅಳವಡಿಸಿಕೊಂಡು, ಹೊಸ ಮಾನದಂಡಗಳನ್ನು ಸಿದ್ಧಪಡಿಸಲಾಗುತ್ತಿದೆ. ಈ ಮಾನದಂಡಗಳನ್ನು ಶೀಘ್ರದಲ್ಲೇ ಅಂತಿಮಗೊಳಿಸಲಾಗುವುದು. ಹೊಸ ಮಾನದಂಡದ ಅನುಷ್ಠಾನದ ನಂತರ, ಅರ್ಹ ವ್ಯಕ್ತಿಗಳು ಮಾತ್ರ ಪ್ರಯೋಜನ ಪಡೆಯುತ್ತಾರೆ, ಅನರ್ಹರು ಪ್ರಯೋಜನವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಅಗತ್ಯವಿರುವವರನ್ನು ಗಮನದಲ್ಲಿಟ್ಟುಕೊಂಡು ಈ ಬದಲಾವಣೆ ಮಾಡಲಾಗುತ್ತಿದೆ.
ಒಂದು ರಾಷ್ಟ್ರ, ಒಂದು ಪಡಿತರ ಚೀಟಿ ಯೋಜನೆ
ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ಪ್ರಕಾರ, ಇಲ್ಲಿಯವರೆಗೆ 'ಒಂದು ರಾಷ್ಟ್ರ, ಒಂದು ಪಡಿತರ ಕಾರ್ಡ್ (ONORC) ಯೋಜನೆ'ಯನ್ನು ಡಿಸೆಂಬರ್ 2020 ರವರೆಗೆ 32 ರಾಜ್ಯಗಳು ಮತ್ತು ಯುಟಿಗಳಲ್ಲಿ ಜಾರಿಗೊಳಿಸಲಾಗಿದೆ. ಸುಮಾರು 69 ಕೋಟಿ ಫಲಾನುಭವಿಗಳು ಅಂದರೆ NFSA ಅಡಿಯಲ್ಲಿ ಬರುವ ಜನಸಂಖ್ಯೆಯ 86 ಪ್ರತಿಶತದಷ್ಟು ಜನರು ಈ ಯೋಜನೆಯ ಲಾಭವನ್ನು ಪಡೆಯುತ್ತಿದ್ದಾರೆ. ಪ್ರತಿ ತಿಂಗಳು ಸುಮಾರು 1.5 ಕೋಟಿ ಜನರು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತೆರಳುವ ಮೂಲಕ ಪ್ರಯೋಜನ ಪಡೆಯುತ್ತಿದ್ದಾರೆ ಎನ್ನಲಾಗಿದೆ.
kannadadunia-epaper
ಬೆಂಗಳೂರು: ನಗರದ ಜನರು ತಮ್ಮ ವ್ಯಾಪ್ತಿಯಲ್ಲಿ ಬಿದ್ದಿರುವ ರಸ್ತೆ ಗುಂಡಿಗಳ ಬಗ್ಗೆ ಪಾಲಿಕೆಯ ಕಂಟ್ರೋಲ್ ರೂಂಗೆ ದೂರು ನೀಡಿದರೆ ಅವುಗಳನ್ನು ಮುಚ್ಚಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದ್ದಾರೆ.
ಪಾಲಿಕೆಯ ಮುಖ್ಯ ಇಂಜಿನಿಯರ್ ಕಚೇರಿಯಿಂದ ಪ್ರತಿ ನಿತ್ಯ ಎಷ್ಟು ರಸ್ತೆಗುಂಡಿಗಳನ್ನು ಮುಚ್ಚಲಾಗಿದೆ ಎಂಬುದರ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ.
ಈ ಮಾಹಿತಿಯನ್ನು ಸಂಬಂಧಪಟ್ಟವರಿಗೆ ರವಾನಿಸಲಾಗುತ್ತಿದೆ. ನಗರದ ಹಲವು ಕಡೆಗಳಲ್ಲಿ ಈಗಾಗಲೇ ರಸ್ತೆಗುಂಡಿಗಳನ್ನು ಮುಚ್ಚಲಾಗಿದೆ. ಸಾರ್ವಜನಿಕರು ತಮ್ಮ ಪ್ರದೇಶಗಳ ರಸ್ತೆ ಗುಂಡಿಗಳ ಬಗ್ಗೆ ಮಾಹಿತಿ ನೀಡಿದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುವುದು ಎಂದರು.
ನಗರದಲ್ಲಿ ನಿಷೇಧವಿದ್ದರೂ ಫ್ಲೆಕ್ಸ್ ಮತ್ತು ಬ್ಯಾನರ್‌ಗಳನ್ನು ಹಾಕಲಾಗುತ್ತಿರುವ ಬಗ್ಗೆ ದೂರುಗಳಿವೆ. ಸಾರ್ವಜನಿಕರು ಇದರ ಬಗ್ಗೆಯೂ ಮಾಹಿತಿ ನೀಡಿದರೆ ತೆರವುಗೊಳಿಸಲಾಗುವುದು. ಜತೆಗೆ ಫ್ಲೆಕ್ಸ್ ಮತ್ತು ಬ್ಯಾನರ್ ಹಾಕುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು. ಇವುಗಳನ್ನು ತೆರವುಗೊಳಿಸಲು ಅಧಿಕಾರಿಗಳು ನಿರ್ಲಕ್ಷ್ಯವಹಿಸಿದರೆ ಅಂಥವರ ವಿರದ್ಧವೂ ಕ್ರಮಕೈಗೊಳ್ಳುತ್ತೇನೆ ಎಂದರು.
ಮಂಡ್ಯ :- 2021-22 ನೇ ಸಾಲಿನ ಸಮಗ್ರ ತೋಟಗಾರಿಕೆ ಅಭಿವೃದ್ದಿ ಯೋಜನೆಯಡಿ ತರಕಾರಿ ಬೀಜಗಳ ಕಿಟ್ ವಿತರಣೆ ಕಾರ್ಯಕ್ರ ಮದಡಿ ನೀರಾವರಿ ಸೌಲಭ್ಯವಿರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ವರ್ಗದ ರೈತರಿಗೆ ತರಕಾರಿ ಬೇಸಾಯಕ್ಕೆ ಅವಶ್ಯ ಕವಿರುವ ತರಕಾರಿ ಬೀಜಗಳನ್ನು ಗರಿಷ್ಠ 2 ಸಾವಿರ ರೂಪಾಯಿಗಳ ತರಕಾರಿ ಬೀಜಗಳ ಕಿಟ್ ಗಳನ್ನು ನೀಡಲಾಗುವುದು ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೆಶಕಿ ಕೆ.ಎಂ.ರೇಖಾ ತಿಳಿಸಿದರು.
ಮದ್ದೂರು ಪಟ್ಟಣದ ತೋಟಗಾರಿಕೆ ಕಛೇರಿಯಲ್ಲಿ ಇಂದು ಸುದ್ದಿಗೊಷ್ಟಿಯಲ್ಲಿ ಮಾತನಾಡಿದ ಅವರು ತರಕಾರಿ ಬೇಸಾಯಕ್ಕೆ ಬೇಕಾಗಿರುವ ಇತರೆ ವೆಚ್ಚವನ್ನು ಸಂಪೂರ್ಣವಾಗಿ ರೈತರೇ ಭರಿಸುವುದು ಆಸಕ್ತಿಯುಳ್ಳ ರೈತರು ಇಲಾಖೆಯನ್ನು ಸಂಪರ್ಕಿಸುವಂತೆ ಕೋರಿದ್ದಾರೆ.
ರಾಷ್ಟ್ರೀಯ ಕೃಷಿ ವಿಕಾಸನ ಯೋಜನೆಯಡಿ ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ ಅಳವಡಿಸಲಾದ ಎಲ್ಲಾ ರೈತರಿಗೆ ನೀರಿನಲ್ಲಿ ಕರಗುವ ರಸಗೊಬ್ಬರ ಘಟಕಕ್ಕೆ ಶೇ 25 ರಂತೆ ಪ್ರತಿ ಎಕರೆಗೆ 5 ಸಾವಿರ ರೂಪಾಯಿಗಳಂತೆ ಗರಿಷ್ಠ 1 ಹೆಕ್ಟೇರ್ ಗೆ ಸಹಾಯಧನ ನೀಡಲಾಗುವುದು ಎಂದರು.
ಕೂಯ್ಲೋತ್ತರ ನಿರ್ವಹಣಾ ಚಟುವಟಿಕೆಗಳಿಗೆ ಪ್ರೋತ್ಸಾಹ ಕಾರ್ಯಕ್ರಮದಡಿ ತರಕಾರಿ, ಹಣ್ಣಿನ ಬೆಳೆ ಬೆಳೆಯುತ್ತಿರುವ ರೈತರಿಗೆ ಬೆಳೆಗಳನ್ನ ಸಾಗಾಣಿಕೆ ಮಾಡಲು ಅನುಕೂಲವಾಗುವಂತೆ ಇಲಾಖೆಯಿಂದ ಅನುಮೋದಿತವಾದ ಮಾರಾಟಗಾರರಿಂದ ಪ್ಲಾಸ್ಟಿಕ್ ಕ್ರೇಟ್ಸ್ ಖರೀದಿಗೆ ಶೇ 25 ರಂತೆ ಪ್ರತಿ ಹೆಕ್ಟೇರ್ ಗೆ 3600 ರಂತೆ ಗರಿಷ್ಠ 2 ಹೆಕ್ಟರ್ ವರೆಗೆ ಸಹಾಯಧನ ನೀಡಲಾಗುವುದು ಎಂದು ತಿಳಿಸಿದರು.
ಕೇಂದ್ರ ಪುರಸ್ಕೃತ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಸೂಕ್ಷ್ಮ ಹನಿ ನೀರಾವರಿ ಕಾರ್ಯಕ್ರಮದಡಿ ಕಾಫಿ, ಟೀ, ರಬ್ಬರ್, ಅಡಿಕೆ ಎಳೆ ಹೊರತು ಪಡಿಸಿ ಉಳಿದ ತೋಟಗಾರಿಕಾ ಬೆಳೆಗಳಿಗೆ ಪ್ರತಿ ಫಲಾನುಭವಿಗಳಿಗೆ ಗರಿಷ್ಠ 5 ಹೆಕ್ಟೆರ್ ವರೆಗೂ ಸಹಾಯ ಧನವನ್ನು ಪಡೆಯಬಹುದಾಗಿದೆ. ಆದರೆ ತರಕಾರಿ ಹೂ ಬೆಳೆಗಳಿಗೆ ಗರಿಷ್ಠ 2 ಹೆಕ್ಟೇರ್ ಪ್ರದೇಶಕ್ಕೆ ಮಾತ್ರ ಸಹಾಯ ಧನ ನೀಡಲಾಗುವುದು ಎಂದರು.
ಹನಿನೀರಾವರಿ ಅಳವಡಿಕೆಗೆ ಮೊದಲ ಎರಡು ಹೆಕ್ಟೇರ್ ವರೆಗೆ ತೋಟಗಾರಿಕೆ ಬೆಳೆ ಬೆಳೆದ ಸಣ್ಣ ರೈತರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಠ ವರ್ಗದ ರೈತರಿಗೆ ಶೇ 90 ರಷ್ಟು ಸಹಾಯ ಧನ ಲಭ್ಯವಿದ್ದು, ಸಣ್ಣ ರೈತರು ಕಂದಾಯ ಇಲಾಖೆಯಿಂದ ಸಣ್ಣ ಇಳುವಳಿದಾರರ ದೃಢೀಕರಣ ಪತ್ರವನ್ನು ಪಡೆದು ಅರ್ಜಿಯೊಂದಿಗೆ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ. ಸಹಾಯ ಧನವನ್ನು 2 ಹೆಕ್ಟೇರ್ ನಿಂದ 5 ಹೆಕ್ಟೇರ್ ವರೆಗೆ ಶೇ 45 ರಷ್ಟು ಹಾಗೂ ಇತರೆ ವರ್ಗದ ರೈತರಿಗೆ ಶೇ 45 ರಷ್ಟು ನೀಡಲಾಗುವುದು ಎಂದು ವಿತರಿಸಿದರು.
ಈ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಲು ಹಾಗೂ ಸಂಬಂಧಿಸಿದ ಅಗತ್ಯ ದಾಖಲಾತಿಗಳಾದ ರೈತರ ಪಹಣಿ, ಪಹಣಿಯಲ್ಲಿ ಬೆಳೆ ನಮೂದಾಗದಿದ್ದಲ್ಲಿ ಕಂದಾಯ ಇಲಾಖೆಯಿಂದ ಬೆಳೆ ದೃಢೀಕರಣ ಪತ್ರ, ಕಂದಾಯ ಇಲಾಖೆಯಿಂದ ಚಕ್ಕುಬಂದಿ, ಅರ್ಹ ಇಲಾಖೆಯ ಅನುಮೋದಿತ ಕಂಪನಿಯಿಂದ ದರಪಟ್ಟಿ, ಕೃಷಿ ಹಾಗೂ ರೇಷ್ಮೆ ಇಲಾಖೆಯಿಂದ ಎನ್‌ಓಸಿಗಳನ್ನು ಅರ್ಜಿಯೊಂದಿಗೆ ಸಲ್ಲಿಸುವುದು.
ಆಸಕ್ತ ರೈತರು
1.) ಮದ್ದೂರು ಕಸಬ ಹೋಬಳಿಗೆ ಸಂಪತ್ ಕುಮಾರ್ ದೂರವಾಣಿ ಸಂಖ್ಯೆ 9986773974,
2.) ಕೊಪ್ಪಹೋಬಳಿ ಚಿರುನವುಕ್ಕರಸು ಮೊ.ಸಂ 9739632631
3.) ಆತಗೂರು ಹೋಬಳಿಗೆ ಕೆ.ಎಸ್.ಶಾಲಿನಿ ಮೊ.ಸಂ 8971353373 ಸಂಪರ್ಕಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ರೈತರು ಹಿರಿಯ ಸಹಾಯ ತೋಟಗಾರಿಕೆ ನಿರ್ದೆಶಕರ ಕಛೇರಿಗೆ ಸಂಪರ್ಕಿಸಲು ಕೋರಿದ್ದಾರೆ.
ಇನ್ನು ಮದ್ದೂರು ತಾಲ್ಲೂಕಿನ ಕೆರೆಮೇಗಳದೊಡ್ಡಿಯಲ್ಲಿರುವ ಪ್ರಗತಿಪರ ರೈತ ವರದರಾಜು ರವರ ತೋಟದಲ್ಲಿ ಫೆ.25 ಶುಕ್ರವಾರ ಕಾಳುಮೆಣಸು ಬೆಳೆ ಕುರಿತಾದ ತರಬೇತಿ ಕಾರ್ಯಕ್ರಮವನ್ನು ಬೆಳಿಗ್ಗೆ 10 ಗಂಟೆಗೆ ಆಯೋಜಿಸಿದ್ದು. ಈ ತರಬೇತಿ ಕಾರ್ಯಕ್ರಮಕ್ಕೆ ನುರಿತ ವಿಷಯ ತಜ್ಞರು ಆಗಮಿಸುತ್ತಿರುವುದರಿಂದ ಆಸಕ್ತ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕಿ ಕೆ.ಎಂ.ರೇಖಾ ಮನವಿ ಮಾಡಿದ್ದಾರೆ.
ವರದಿ : ಗಿರೀಶ್ ರಾಜ್ ಮಂಡ್ಯ.
ಬೆಂಗಳೂರು : ರಾಜ್ಯ ಸರ್ಕಾರವು ಪಡಿತರ ಚೀಟಿ ಕೋರಿ ಅರ್ಜಿ ಸಲ್ಲಿಸಿರುವವರಿಗೆ ಸಿಹಿಸುದ್ದಿ ನೀಡಿದ್ದು, ಅರ್ಹ ಅರ್ಜಿದಾರರಿಗೆ ಹೊಸ ಪಡಿತರ ಚೀಟಿ ವಿತರಿಸಲಾಗುವುದು ಎಂದು ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯ ಎಲ್.ನಾಗೇಂದ್ರ ಪ್ರಶ್ನೆಗೆ ಉತ್ತರಿಸಿದ ಅವರು, ಪಡಿತರ ಚೀಟಿ ಕೋರಿ ಸಲ್ಲಿಕೆಯಾಗಿರುವ ಅರ್ಜಿ ಪೈಕಿ ಅರ್ಹ ಅರ್ಜಿದಾರರಿಗೆ ಹೊಸ ಪಡಿತರ ಚೀಟಿ ವಿತರಣೆ ಕಾರ್ಯ ಪ್ರಕಗತಿಯಲ್ಲಿದ್ದು, ಅರ್ಜಿಗಳ ಪರಿಶೀಲನೆ ನಡೆಸಿ ಆದ್ಯತೆ ಮೇರೆಗೆ ಪಡಿತರ ಚೀಟಿ ವಿತರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಕೊರೊನಾ ಲಾಕ್ ಡೌನ್ ಅವಧಿಯಲ್ಲಿ ಹೊಸ ಪಡಿತರ ಚೀಟಿ ಕೋರಿ ಸಲ್ಲಿಸಿರುವ ಅರ್ಜಿಗಳ ಸ್ಥಳ ಪರಿಶೀಲನೆ ಕಾರ್ಯ ನಿಧಾನವಾಗಿತ್ತು. ಈ ಅವಧಿಯಲ್ಲಿ ಬಯೋಮೆಟ್ರಿಕ್ ಬಳಕೆ ಹಿಂಪಡೆದ ಕಾರಣ ಪಡಿತರ ಚೀಟಿ ವಿತರಣೆ ಕಾರ್ಯವನ್ನು ಸ್ಥಗಿತಗೊಳಿಸಲಾಗಿತ್ತು. ಸದ್ಯ ಹೊಸ ಪಡಿತರ ಚೀಟಿ ವಿತರಣೆ ಕಾರ್ಯ ಆರಂಭವಾಗಲಿದೆ.ಕನ್ನಡ news now