WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Saturday, February 26, 2022

ರೈತರೇ ದಯವಿಟ್ಟು ಗಮನಿಸಿ: ತೋಟಗಾರಿಕೆ ಇಲಾಖೆಯ ಸವಲತ್ತು ಪಡೆಯಲು ಅರ್ಜಿ ಸಲ್ಲಿಸಿ

ಮಂಡ್ಯ :- 2021-22 ನೇ ಸಾಲಿನ ಸಮಗ್ರ ತೋಟಗಾರಿಕೆ ಅಭಿವೃದ್ದಿ ಯೋಜನೆಯಡಿ ತರಕಾರಿ ಬೀಜಗಳ ಕಿಟ್ ವಿತರಣೆ ಕಾರ್ಯಕ್ರ ಮದಡಿ ನೀರಾವರಿ ಸೌಲಭ್ಯವಿರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ವರ್ಗದ ರೈತರಿಗೆ ತರಕಾರಿ ಬೇಸಾಯಕ್ಕೆ ಅವಶ್ಯ ಕವಿರುವ ತರಕಾರಿ ಬೀಜಗಳನ್ನು ಗರಿಷ್ಠ 2 ಸಾವಿರ ರೂಪಾಯಿಗಳ ತರಕಾರಿ ಬೀಜಗಳ ಕಿಟ್ ಗಳನ್ನು ನೀಡಲಾಗುವುದು ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೆಶಕಿ ಕೆ.ಎಂ.ರೇಖಾ ತಿಳಿಸಿದರು.
ಮದ್ದೂರು ಪಟ್ಟಣದ ತೋಟಗಾರಿಕೆ ಕಛೇರಿಯಲ್ಲಿ ಇಂದು ಸುದ್ದಿಗೊಷ್ಟಿಯಲ್ಲಿ ಮಾತನಾಡಿದ ಅವರು ತರಕಾರಿ ಬೇಸಾಯಕ್ಕೆ ಬೇಕಾಗಿರುವ ಇತರೆ ವೆಚ್ಚವನ್ನು ಸಂಪೂರ್ಣವಾಗಿ ರೈತರೇ ಭರಿಸುವುದು ಆಸಕ್ತಿಯುಳ್ಳ ರೈತರು ಇಲಾಖೆಯನ್ನು ಸಂಪರ್ಕಿಸುವಂತೆ ಕೋರಿದ್ದಾರೆ.
ರಾಷ್ಟ್ರೀಯ ಕೃಷಿ ವಿಕಾಸನ ಯೋಜನೆಯಡಿ ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ ಅಳವಡಿಸಲಾದ ಎಲ್ಲಾ ರೈತರಿಗೆ ನೀರಿನಲ್ಲಿ ಕರಗುವ ರಸಗೊಬ್ಬರ ಘಟಕಕ್ಕೆ ಶೇ 25 ರಂತೆ ಪ್ರತಿ ಎಕರೆಗೆ 5 ಸಾವಿರ ರೂಪಾಯಿಗಳಂತೆ ಗರಿಷ್ಠ 1 ಹೆಕ್ಟೇರ್ ಗೆ ಸಹಾಯಧನ ನೀಡಲಾಗುವುದು ಎಂದರು.
ಕೂಯ್ಲೋತ್ತರ ನಿರ್ವಹಣಾ ಚಟುವಟಿಕೆಗಳಿಗೆ ಪ್ರೋತ್ಸಾಹ ಕಾರ್ಯಕ್ರಮದಡಿ ತರಕಾರಿ, ಹಣ್ಣಿನ ಬೆಳೆ ಬೆಳೆಯುತ್ತಿರುವ ರೈತರಿಗೆ ಬೆಳೆಗಳನ್ನ ಸಾಗಾಣಿಕೆ ಮಾಡಲು ಅನುಕೂಲವಾಗುವಂತೆ ಇಲಾಖೆಯಿಂದ ಅನುಮೋದಿತವಾದ ಮಾರಾಟಗಾರರಿಂದ ಪ್ಲಾಸ್ಟಿಕ್ ಕ್ರೇಟ್ಸ್ ಖರೀದಿಗೆ ಶೇ 25 ರಂತೆ ಪ್ರತಿ ಹೆಕ್ಟೇರ್ ಗೆ 3600 ರಂತೆ ಗರಿಷ್ಠ 2 ಹೆಕ್ಟರ್ ವರೆಗೆ ಸಹಾಯಧನ ನೀಡಲಾಗುವುದು ಎಂದು ತಿಳಿಸಿದರು.

ಕೇಂದ್ರ ಪುರಸ್ಕೃತ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಸೂಕ್ಷ್ಮ ಹನಿ ನೀರಾವರಿ ಕಾರ್ಯಕ್ರಮದಡಿ ಕಾಫಿ, ಟೀ, ರಬ್ಬರ್, ಅಡಿಕೆ ಎಳೆ ಹೊರತು ಪಡಿಸಿ ಉಳಿದ ತೋಟಗಾರಿಕಾ ಬೆಳೆಗಳಿಗೆ ಪ್ರತಿ ಫಲಾನುಭವಿಗಳಿಗೆ ಗರಿಷ್ಠ 5 ಹೆಕ್ಟೆರ್ ವರೆಗೂ ಸಹಾಯ ಧನವನ್ನು ಪಡೆಯಬಹುದಾಗಿದೆ. ಆದರೆ ತರಕಾರಿ ಹೂ ಬೆಳೆಗಳಿಗೆ ಗರಿಷ್ಠ 2 ಹೆಕ್ಟೇರ್ ಪ್ರದೇಶಕ್ಕೆ ಮಾತ್ರ ಸಹಾಯ ಧನ ನೀಡಲಾಗುವುದು ಎಂದರು.
ಹನಿನೀರಾವರಿ ಅಳವಡಿಕೆಗೆ ಮೊದಲ ಎರಡು ಹೆಕ್ಟೇರ್ ವರೆಗೆ ತೋಟಗಾರಿಕೆ ಬೆಳೆ ಬೆಳೆದ ಸಣ್ಣ ರೈತರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಠ ವರ್ಗದ ರೈತರಿಗೆ ಶೇ 90 ರಷ್ಟು ಸಹಾಯ ಧನ ಲಭ್ಯವಿದ್ದು, ಸಣ್ಣ ರೈತರು ಕಂದಾಯ ಇಲಾಖೆಯಿಂದ ಸಣ್ಣ ಇಳುವಳಿದಾರರ ದೃಢೀಕರಣ ಪತ್ರವನ್ನು ಪಡೆದು ಅರ್ಜಿಯೊಂದಿಗೆ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ. ಸಹಾಯ ಧನವನ್ನು 2 ಹೆಕ್ಟೇರ್ ನಿಂದ 5 ಹೆಕ್ಟೇರ್ ವರೆಗೆ ಶೇ 45 ರಷ್ಟು ಹಾಗೂ ಇತರೆ ವರ್ಗದ ರೈತರಿಗೆ ಶೇ 45 ರಷ್ಟು ನೀಡಲಾಗುವುದು ಎಂದು ವಿತರಿಸಿದರು.
ಈ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಲು ಹಾಗೂ ಸಂಬಂಧಿಸಿದ ಅಗತ್ಯ ದಾಖಲಾತಿಗಳಾದ ರೈತರ ಪಹಣಿ, ಪಹಣಿಯಲ್ಲಿ ಬೆಳೆ ನಮೂದಾಗದಿದ್ದಲ್ಲಿ ಕಂದಾಯ ಇಲಾಖೆಯಿಂದ ಬೆಳೆ ದೃಢೀಕರಣ ಪತ್ರ, ಕಂದಾಯ ಇಲಾಖೆಯಿಂದ ಚಕ್ಕುಬಂದಿ, ಅರ್ಹ ಇಲಾಖೆಯ ಅನುಮೋದಿತ ಕಂಪನಿಯಿಂದ ದರಪಟ್ಟಿ, ಕೃಷಿ ಹಾಗೂ ರೇಷ್ಮೆ ಇಲಾಖೆಯಿಂದ ಎನ್‌ಓಸಿಗಳನ್ನು ಅರ್ಜಿಯೊಂದಿಗೆ ಸಲ್ಲಿಸುವುದು.
ಆಸಕ್ತ ರೈತರು
1.) ಮದ್ದೂರು ಕಸಬ ಹೋಬಳಿಗೆ ಸಂಪತ್ ಕುಮಾರ್ ದೂರವಾಣಿ ಸಂಖ್ಯೆ 9986773974,
2.) ಕೊಪ್ಪಹೋಬಳಿ ಚಿರುನವುಕ್ಕರಸು ಮೊ.ಸಂ 9739632631
3.) ಆತಗೂರು ಹೋಬಳಿಗೆ ಕೆ.ಎಸ್.ಶಾಲಿನಿ ಮೊ.ಸಂ 8971353373 ಸಂಪರ್ಕಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ರೈತರು ಹಿರಿಯ ಸಹಾಯ ತೋಟಗಾರಿಕೆ ನಿರ್ದೆಶಕರ ಕಛೇರಿಗೆ ಸಂಪರ್ಕಿಸಲು ಕೋರಿದ್ದಾರೆ.
ಇನ್ನು ಮದ್ದೂರು ತಾಲ್ಲೂಕಿನ ಕೆರೆಮೇಗಳದೊಡ್ಡಿಯಲ್ಲಿರುವ ಪ್ರಗತಿಪರ ರೈತ ವರದರಾಜು ರವರ ತೋಟದಲ್ಲಿ ಫೆ.25 ಶುಕ್ರವಾರ ಕಾಳುಮೆಣಸು ಬೆಳೆ ಕುರಿತಾದ ತರಬೇತಿ ಕಾರ್ಯಕ್ರಮವನ್ನು ಬೆಳಿಗ್ಗೆ 10 ಗಂಟೆಗೆ ಆಯೋಜಿಸಿದ್ದು. ಈ ತರಬೇತಿ ಕಾರ್ಯಕ್ರಮಕ್ಕೆ ನುರಿತ ವಿಷಯ ತಜ್ಞರು ಆಗಮಿಸುತ್ತಿರುವುದರಿಂದ ಆಸಕ್ತ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕಿ ಕೆ.ಎಂ.ರೇಖಾ ಮನವಿ ಮಾಡಿದ್ದಾರೆ.
ವರದಿ : ಗಿರೀಶ್ ರಾಜ್ ಮಂಡ್ಯ.
ain+live+news-epaper


 

No comments:

Post a Comment

ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ