ಭಾರತೀಯ ಮಸಾಲೆ ಮಂಡಳಿಯ ಅಂಕಿ-ಅಂಶಗಳ ಪ್ರಕಾರ, ವಿಶ್ವಾದ್ಯಂತ ತಯಾರಾದ ಐಸ್ ಕ್ರೀಂನಲ್ಲಿ ವೆನಿಲ್ಲಾ ಪರಿಮಳವನ್ನ ಶೇಕಡಾ 40ರಷ್ಟು ಬಳಸಲಾಗುತ್ತದೆ. ವೆನಿಲ್ಲಾ ಹಣ್ಣಿನ ಪರಿಮಳ ಅದ್ಭುತವಾಗಿದ್ದು, ಇದನ್ನ ಕೇಕ್, ಐಸ್ ಕ್ರೀಮ್, ಸುಗಂಧ ದ್ರವ್ಯಗಳು ಮತ್ತು ಇತರ ಸೌಂದರ್ಯವರ್ಧಕ ಉತ್ಪನ್ನಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ವೆನಿಲ್ಲಾದಲ್ಲಿ ವೆನಿಲಿನ್ ಎಂಬ ರಾಸಾಯನಿಕ ಅಂಶವಿದೆ. ಇದು ದೇಹದಿಂದ ಕೆಟ್ಟ ಕೊಲೆಸ್ಟ್ರಾಲ್ ತೆಗೆದುಹಾಕಲು ಸಹಾಯ ಮಾಡುತ್ತದೆ. ಇದರ ಹಣ್ಣುಗಳು ಮತ್ತು ಬೀಜಗಳು ಕ್ಯಾನ್ಸರ್’ನಂತಹ ರೋಗಗಳ ವಿರುದ್ಧ ಪರಿಣಾಮಕಾರಿ. ಇದಲ್ಲದೇ, ಇದು ಹೊಟ್ಟೆಯನ್ನ ಸ್ವಚ್ಛಗೊಳಿಸಲು, ರೋಗನಿರೋಧಕ ಶಕ್ತಿಯನ್ನ ಹೆಚ್ಚಿಸಲು ಮತ್ತು ಕೆಮ್ಮು, ಶೀತ ಮತ್ತು ಜ್ವರದಂತಹ ಕಾಯಿಲೆಗಳನ್ನ ನಿವಾರಿಸಲು ತುಂಬಾ ಪ್ರಯೋಜನಕಾರಿಯಾಗಿದೆ. ಹಾಗಾಗಿ ಮಾರುಕಟ್ಟೆಯಲ್ಲಿ ವೆನಿಲ್ಲಾ ಹಣ್ಣುಗಳು ಮತ್ತು ಬೀಜಗಳಿಗೆ ಉತ್ತಮ ಬೇಡಿಕೆಯಿದೆ. ಇದರಿಂದ ಹೆಚ್ಚಿನ ಬೆಲೆ ಸಿಗಲಿದೆ. ರೈತರಿಗೆ ಅಪಾರ ಆದಾಯ ಬರುತ್ತಿದೆ.
ವೆನಿಲ್ಲಾ ಆರ್ಕಿಡ್ ಕುಟುಂಬಕ್ಕೆ ಸೇರಿದ ಸಸ್ಯವಾಗಿದ್ದು, ಇನ್ನು ಈ ಕೃಷಿಗೆ ಕಂದು ಮಣ್ಣು ತುಂಬಾ ಸೂಕ್ತವಾಗಿದೆ. ಮಣ್ಣಿನ PH ಮೌಲ್ಯವು 6.5 ರಿಂದ 7.5 ರ ನಡುವೆ ಇದ್ದರೆ ಆ ಭೂಮಿಯಲ್ಲಿ ವೆನಿಲ್ಲಾ ಗಿಡಗಳು ಚೆನ್ನಾಗಿ ಬೆಳೆಯುತ್ತವೆ. ವೆನಿಲ್ಲಾ ಹಣ್ಣುಗಳು ಉದ್ದವಾಗಿರುತ್ತವೆ. ಇನ್ನು ಈ ವೆನಿಲ್ಲಾ ಹೂಬಿಡಲು, ಫಲ ನೀಡಲು ಮತ್ತು ಕೊಯ್ಲು ಮಾಡಲು ಸುಮಾರು 10 ತಿಂಗಳುಗಳನ್ನ ತೆಗೆದುಕೊಳ್ಳುತ್ತದೆ. ಅದರ ನಂತರ ಬೀಜಗಳನ್ನ ಅವುಗಳಿಂದ ಬೇರ್ಪಡಿಸಲಾಗುತ್ತದೆ.
ಈ ಬೀಜಗಳನ್ನ ಅನೇಕ ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಪ್ರಸ್ತುತ ನಮ್ಮ ದೇಶದಲ್ಲಿ ಒಂದು ಕಿಲೋ ವೆನಿಲ್ಲಾ ಬೀಜದ ಬೆಲೆ 40 ರಿಂದ 50 ಸಾವಿರ ರೂ. ವೆನಿಲ್ಲಾವನ್ನ ಹೆಚ್ಚಿನ ಪ್ರಮಾಣದಲ್ಲಿ ಬೆಳೆಸಿದರೆ ರೈತರು ಲಕ್ಷಾಧಿಪತಿಗಳಾಗುತ್ತಾರೆ. ಲಾಭವು ತುಂಬಾ ಹೆಚ್ಚಿದೆ.
kannadanewsnow