WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Friday, May 15, 2020

ಸರ್ಜಿಕಲ್ ಮಾಸ್ಕ್ ಬಳಸುವಾಗ ಈ ತಪ್ಪುಗಳನ್ನು ಮಾಡದಿರಿl

ಫೇಸ್ ಮಾಸ್ಕ್ ಎಂಬ ಸಾಧನ ಕೆಲವಾರು ವರ್ಷಗಳಿಂದಲೂ ಬಳಕೆಯಲ್ಲಿದ್ದರೂ ಇದಕ್ಕೆ ಅಪಾರವಾದ ಪ್ರಾಮುಖ್ಯತೆ ಲಭಿಸಿದ್ದು ಕೋವಿಡ್ ಸಾಂಕ್ರಾಮಿಕ ರೋಗದ ಕಾರಣದಿಂದ. ಇದಕ್ಕೆ ಕನ್ನಡದ ಹೆಸರು ಹೇಗಿರಬಹುದು? ವಿವಿಧ ಮಾಧ್ಯಮಗಳು ಬೇರೆ ಬೇರೆ ಹೆಸರಿನಿಂದ ಕರೆಯುತ್ತಿವೆ. ಕೆಲವು 'ಮುಖ ಗುರಾಣಿ' ಎಂದು ಕರೆದರೆ, ಕೆಲವು 'ಮುಖ ಪಟ್ಟಿ','ಮುಖದ ಮಾಸ್ಕ್' ಎಂದೆಲ್ಲಾ ಕರೆಯುತ್ತಿವೆ. ವಾಸ್ತವದಲ್ಲಿ, ಇಂದು ನಮ್ಮ ಉಡುಗೆಯ ಅವಿಭಾಜ್ಯ ಅಂಗವಾಗಿರುವ ಈ ಮುಖಗುರಾಣಿ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಯೊಬ್ಬರೂ ಧರಿಸಲೇಬೇಕಾದ ಅಗತ್ಯವಸ್ತುವೂ ಆಗಿದೆ. ಇವುಗಳಲ್ಲಿ ಕೆಲವಾರು ವಿಧಗಳ ಮುಖಗುರಾಣಿಗಳಿವೆ.
ಭಾರೀ ಬೇಡಿಕೆಯ ಅಂಗವಾಗಿ ಮಾರುಕಟ್ಟೆಯಲ್ಲಿ ಎದುರಾಗಿರುವ ಕೊರತೆಯಿಂದಾಗಿ ನಮ್ಮ ಗುರಾಣಿಗಳನ್ನು ನಾವೇ ಮಾಡಿಕೊಳ್ಳುವಂತೆ ಸಲಹೆಯನ್ನೂ ಮಾಡಲಾಗುತ್ತಿದೆ. ಡಾ. ದೇವಿ ಶೆಟ್ಟಿಯವರೂ 'ಸರ್ಜಿಕಲ್ ಮಾಸ್ಕ್' ಎಂಬ ಮುಖಗುರಾಣಿಯನ್ನು ಸಾರ್ವಜನಿಕರು ಕೊಳ್ಳದೇ ವೃತ್ತಿಪರರಿಗೆ ದೊರಕುವಂತಾಗುವಂತೆ ಮಾಧ್ಯಮಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ಹಾಗಾಗಿ ಅನಿವಾರ್ಯವಾಗಿರುವ ಮುಖ ಗುರಾಣಿಯನ್ನು ಧರಿಸಬೇಕಾದರೆ ಸರಿಯಾದ ಕ್ರಮವನ್ನು ಮತ್ತು ಸರಿಯಾದ ಸಾಮಾಗ್ರಿಯಿಂದ ತಯಾರಿಸಲ್ಪಟ್ಟ ಉತ್ಪನ್ನವನ್ನೇ ಆಯ್ದುಕೊಳ್ಳುವುದು ಅಗತ್ಯವಾಗಿದೆ. ನಮಗರಿವಿಲ್ಲದಂತೆಯೇ ನಾವು ತಪ್ಪಾದ ಉತ್ಪನ್ನ ಅಥವಾ ತಪ್ಪಾದ ರೀತಿಯಲ್ಲಿ ಈ ಸಾಧನಗಳನ್ನು ಬಳಸುತ್ತಿದ್ದಿರಬಹುದು. ಇಂದಿನ ಲೇಖನದಲ್ಲಿ ಈ ತಪ್ಪುಗಳ ಬಗ್ಗೆ ಪ್ರತಿಯೊಬ್ಬರೂ ಅರಿತಿರಬೇಕಾದ ಮಾಹಿತಿಗಳನ್ನು ಒದಗಿಸಲಾಗಿದೆ. ಇಂದಿನ ಲೇಖನದ ವ್ಯಾಪ್ತಿಯಲ್ಲಿ ಈ ಮಾಸ್ಕ್ ಅನ್ನು ಮುಖಗುರಾಣಿ ಎಂದೇ ಕರೆಯಲಾಗಿದೆ.






ತಪ್ಪು ಸಾಮಾಗ್ರಿ ಬಳಸಿ ತಯಾರಿಸಲಾದ ಉತ್ಪನ್ನಗಳು:

ತಪ್ಪು ಸಾಮಾಗ್ರಿ ಬಳಸಿ ತಯಾರಿಸಲಾದ ಉತ್ಪನ್ನಗಳು:

ತಾತ್ತ್ವಿಕವಾಗಿ, ಕೊರೋನಾವೈರಸ್ ಕಣಗಳನ್ನು ತಡೆಗಟ್ಟುವಷ್ಟು ಮುಖಗುರಾಣಿ ಸಮರ್ಥವಾಗಿರಬೇಕು ಮತ್ತು ಈ ಬಟ್ಟೆಯ ಮೂಲಕ ಉಸಿರಾಟಕ್ಕೆ ಅಡ್ಡಿಯಾಗದಂತಿರಬೇಕು. ಇವೆಲ್ಲವೂ ಇದ್ದೂ ಧರಿಸಲು ಆರಾಮದಾಯಕವಾಗದಿದ್ದರೆ, ನೀವು ಅದನ್ನು ಸರಿಯಾಗಿ ಧರಿಸುವ ಸಾಧ್ಯತೆ ಕಡಿಮೆ. ಇತ್ತೀಚಿನ ಅಧ್ಯಯನ ಒಂದರಲ್ಲಿ ಕೆಲವು ಬಟ್ಟೆಗಳು ಎರಡೂ ಗುಣಲಕ್ಷಣಗಳನ್ನು ಹೊಂದಿವೆ ಎಂದು ಕಂಡುಹಿಡಿದಿದೆ. ಕಂಚುಕಗಳ ಪ್ಯಾಡ್‌ಗಳಿಂದ ಹಿಡಿದು ಕಾಫಿ ಫಿಲ್ಟರ್‌ಗಳವರೆಗಿನ 30 ಬಗೆಯ ವಸ್ತುಗಳನ್ನು ಸಂಶೋಧಕರು ಅಧ್ಯಯನ ಮಾಡಿದಾಗ, ಹಗುರವಾದ ಡೆನಿಮ್, ಪೇಪರ್ ಟವೆಲ್ ಮತ್ತು 80 ರಿಂದ 120 ಥ್ರೆಡ್ ಎಣಿಕೆಯೊಂದಿಗೆ 100 ಪ್ರತಿಶತದಷ್ಟು ಹತ್ತಿಯ ಬೆಡ್‌ಶೀಟ್‌ಗಳು ಈ ಕಾರ್ಯಕ್ಕೆ ಸೂಕ್ತ ಎಂದು ಕಂಡುಕೊಳ್ಳಲಾಗಿದೆ. ನೈಸರ್ಗಿಕ ನಾರುಗಳಿಂದ ತಯಾರಿಸಿದ ಬಟ್ಟೆಗಳು ಮತ್ತು ಬಿಗಿಯಾದ ನೇಯ್ಗೆ ಇರುವ ಬಟ್ಟೆಗಳು ಸಹ ವೈರಸ್ ಕಣಗಳನ್ನು ಫಿಲ್ಟರ್ ಮಾಡುವಲ್ಲಿ ಉತ್ತಮವೆಂದು ಕಂಡುಕೊಳ್ಳಲಾಗಿದೆ. ಸಾಮಾನ್ಯವಾಗಿ ಅನ್ವಯವಾಗುವ ನಿಯಮದ ಪ್ರಕಾರ ನಿಮ್ಮ ಬಟ್ಟೆಯನ್ನು ನೀವು ಬೆಳಕಿಗೆ ಅಡ್ಡಲಾಗಿ ಹಿಡಿದಾಗ ಇದರ ಮೂಲಕ ಬೆಳಕನ್ನು ನೋಡಬಹುದಾದರೆ, ಇದರ ನೇಯ್ಗೆ ತುಂಬಾ ಸಡಿಲ ಎಂದು ತಿಳಿದುಕೊಳ್ಳಬಹುದು. ಅಲ್ಲದೇ ನೀವು ಬಳಸುವ ಯಾವುದೇ ಸಾಮಾಗ್ರಿಯಾದರೂ ಅದು ಬಟ್ಟೆ ಒಗೆಯುವ ಯಂತ್ರದಲ್ಲಿ ತೊಳೆದು ಒಣಗಿಸುವಂತಿರಬೇಕು, ಈ ಮೂಲಕ ನೀವು ಅದನ್ನು ನಿಯಮಿತವಾಗಿ ಸ್ವಚ್ಛ ಗೊಳಿಸಿ ಮರುಬಳಕೆ ಮಾಡಿಕೊಳ್ಳುವಂತಿರಬೇಕು.
ಧರಿಸುವಾಗ ಮತ್ತು ತೆಗೆಯುವಾಗ ಮಾಡುವ ತಪ್ಪುಗಳು: 
 ಮುಖಗುರಾಣಿ ಧರಿಸುವ ಮುನ್ನ ಏನು ನೆನಪಿಲ್ಲದಿದ್ದರೂ ಸರಿ, ಕೈ ತೊಳೆದುಕೊಳ್ಳುವುದು ಮುಖ್ಯ. ಏಕೆಂದರೆ ನಿಮ್ಮ ಗಮನಕ್ಕೆ ಬಾರದೇ ಕೈಗಳಲ್ಲಿರುವ ಸೋಂಕು ನೇರವಾಗಿ ಮುಖಗುರಾಣಿಗೆ ತಾಕಬಹುದು ಹಾಗೂ ರಕ್ಷಿಸಬೇಕಾದ ಸಾಧನವೇ ಸೋಂಕು ಉಂಟುಮಾಡಬಹುದು. National Jewish Health ಸಂಸ್ಥೆ ನೀಡಿರುವ ಸಲಹೆಯ ಪ್ರಕಾರ ಪ್ರತಿ ಬಾರಿ ಮುಖಗುರಾಣಿಯನ್ನು ಧರಿಸುವ ಮುನ್ನ ಮತ್ತು ಧರಿಸಿದ ಬಳಿಕ ಹಾಗೂ ಮತ್ತು ತೆಗೆಯುವ ಮುನ್ನ ಮತ್ತು ಬಳಿಕ ಕನಿಷ್ಟ ಇಪ್ಪತ್ತು ಸೆಕೆಂಡುಗಳ ಕಾಲವಾದರೂ ಸೋಪು ಹಾಕಿ ಚೆನ್ನಾಗಿ ತೊಳೆದುಕೊಳ್ಳಬೇಕು. "ಇದರ ಮುಖ್ಯ ಸಂದೇಶವೆಂದರೆ ಕೈ ನೈರ್ಮಲ್ಯ" ಎಂದು ಸೋಂಕಿನ ನಿಯಂತ್ರಣ ಮತ್ತು ಸಾಂಕ್ರಾಮಿಕ ರೋಗಶಾಸ್ತ್ರದ (ಎಪಿಐಸಿ) ವೃತ್ತಿಪರರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಆನ್ ಮೇರಿ ಪೆಟ್ಟಿಸ್, RN ರವರು ತಿಳಿಸುತ್ತಾರೆ. "ನೀವು ಅದನ್ನು ಅತಿಯಾಗಿ ಮಾಡಬಾರದು, ಆದರೆ ಸಾಕಷ್ಟು ಆರ್ದ್ರತೆಯನ್ನು ಒದಗಿಸಲು ಮರೆಯದಿರಿ, ಈ ಮೂಲಕ ನಿಮ್ಮ ಚರ್ಮವು ಸೋಂಕನ್ನು ಆಹ್ವಾನಿಸುವಷ್ಟು ಚಿಕ್ಕ ಮಟ್ಟಿಗಿನ ಸವೆತಗಳನ್ನು ಅಥವಾ ಸೂಕ್ಷ್ಮ ಗಾಯಗಳನ್ನು ಉಂಟುಮಾಡಬಾರದು" ಎಂದು ಅವರು ಹೇಳುತ್ತಾರೆ. ಅಂದರೆ, ಸಾಮಾನ್ಯವಾಗಿ ಕೈ ತೊಳೆಯುವ ತಪ್ಪುಗಳನ್ನು ನೀವು ಮಾಡುತ್ತಿಲ್ಲ ಎಂದು ಖಚಿತಪಡಿಸಿಕೊಳ್ಳಿ. ಕೈ ತೊಳೆದ ಬಳಿಕ ಮುಖಗುರಾಣಿಯ ಕಿವಿಗೆ ತಾಕಿರುವ ಎಲಾಸ್ಟಿಕ್ ಭಾಗವನ್ನು ಮಾತ್ರವೇ ಸ್ಪರ್ಶಿಸಿ ಮೊದಲು ಒಂದು ಕಿವಿಗೆ ಸಿಕ್ಕಿಸಿಕೊಂಡ ಬಳಿಕ ಮುಖ ಮತ್ತು ಮೂಗು ಮುಚ್ಚುವಂತೆ ಆವರಿಸಿ ಅತ್ತಬದಿಯ ಎಲಾಸ್ಟಿಕ್ ಇನ್ನೊಂದು ಕಿವಿಯ ಹಿಂಬದಿಗೆ ಸಿಲುಕಿಸಿ. ಒಂದು ವೇಳೆ ನೀವು ಕನ್ನಡಕ ಧರಿಸುವವರಾಗಿದ್ದರೆ ಅಂತಿಮವಾಗಿ ಧರಿಸಿ.
ತಪ್ಪಾಗಿ ಧರಿಸುವುದು: 
ಒಂದು ವೇಳೆ ನಿಮ್ಮ ಮುಖಗುರಾಣಿಯಲ್ಲಿ ನೆರಿಗೆಗಳಿದ್ದರೆ ಇವು ಹೊರಕ್ಕೆ ಮಡಚಿರಬೇಕು ಮತ್ತು ಮಡಚಿರುವ ಅಂಚುಗಳು ಕಳಮುಖವಾಗಿ ಮಡಚಿದಂತಿರಬೇಕು. ಅಲ್ಲದೇ ನಡುಭಾಗ ಮೂಗು ಮತ್ತು ಬಾಯಿಯನ್ನು ಪೂರ್ಣವಾಗಿ ಆವರಿಸುವಂತಿರಬೇಕು ಹಾಗೂ ಸಾಮಾನ್ಯವಾಗಿ ಉಸಿರಾಡಲು ಸಾಧ್ಯವಾಗುವಂತಿರಬೇಕು ಎಂದು CDC ವಿವರಿಸುತ್ತದೆ. ಗುರಾಣಿಯ ಪಕ್ಕದ ಭಾಗ ತುಟಿಗಳ ಅಂಚಿನಿಂದ ಕನಿಷ್ಟ ಒಂದು ಇಂಚಿನಷ್ಟಾದರೂ ಆವರಿಸುವಷ್ಟು ಅಗಲವಿರಬೇಕು ಮತ್ತು ಕೆಳಭಾಗದ ನೆರಿಗೆ ಗದ್ದವನ್ನು ಪೂರ್ಣವಾಗಿ ಆವರಿಸುವಂತಿರಬೇಕು. ಈ ಭಾಗ ಗುರಾಣಿಯನ್ನು ದೃಢವಾಗಿ ಹಿಡಿದಿರಿಸುವಂತೆ ಇರಬೇಕು ಎಂದು notes Consumer ವಿವರಿಸುತ್ತದೆ. ಪುರುಷರು ಆದಷ್ಟೂ ತಮ್ಮ ಗಡ್ಡಗಳನ್ನು ಕಿರಿದಾಗಿಸುವ ಮೂಲಕ ಗದ್ದದ ಹಿಡಿತವನ್ನು ಬಲಯುತಗೊಳಿಸಬಹುದು.
 

Thursday, May 14, 2020

ಎಳನೀರು ಬರೀ ಬಾಯಾರಿಕೆಗಾಗಿ ಅಲ್ಲ: ಅದರಲ್ಲಿ ಯಾವ ಯಾವವಿಟಮಿನ್ ಗಳಿವೆಗೊತ್ತಾ.?

Fresh Green Coconut 
ಬೇಸಿಗೆಯಲ್ಲಿ ದಿನಕ್ಕೊಂದು ಎಳನೀರು ಕುಡಿಯುವುದರಿಂದ ದೇಹ ಡಿಹೈಡ್ರೇಷನ್ ಆಗುವುದನ್ನು ತಪ್ಪಿಸಬಹುದು.
ಎಳನೀರಿನಲ್ಲಿ ರೋಗ ನಿರೋಧಕ ಅಂಶಗಳಿದ್ದು, ಜ್ವರ ಮತ್ತಿತರ ವೈರಲ್ ಸೋಂಕಿನ ಸಮಸ್ಯೆಗಳಿಗೆ ಪರಿಹಾರವಾಗಿದೆ. ಇನ್ನು ಇದರಲ್ಲಿ ವಿಟಮಿನ್-ಸಿ ಹೇರಳವಾಗಿದ್ದು, ಪೊಟ್ಯಾಸಿಯಂ ಹಾಗೂ ಮೆಗ್ನೀಸಿಯಂ ರಕ್ತದೊತ್ತಡವನ್ನು ನಿಯಂತ್ರಿಸುತ್ತವೆ.

ನಿಯಮಿತವಾಗಿ ಎಳನೀರು ಕುಡಿಯುವುದರಿಂದ ದೇಹ ತೂಕ ಕಡಿಮೆ ಮಾಡಿಕೊಳ್ಳುವ ಜೊತೆಗೆ ದೇಹದ ಉಷ್ಣ ಸಂಬಂಧಿ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಬಹುದು.
* *****
ಎಳನೀರು ಒಂದು ಜನಪ್ರಿಯ ನೈಸರ್ಗಿಕ ಪಾನೀಯವಾಗಿದ್ದು ಜಗತ್ತಿನಾದ್ಯಂತ ಹೆಚ್ಚಿನ ಜನರು ಇದನ್ನು ಕುಡಿಯುತ್ತಾರೆ. ಎಲ್ಲಾ ಊರುಗಳಲ್ಲಿಯೂ ಎಳನೀರು ದೊರೆಯುತ್ತದೆ. ಮತ್ತು ಇದು ಕಡಿಮೆ ವೆಚ್ಚದಲ್ಲಿ ದೊರೆಯುವ ಎಳನೀರು ದೈಹಿಕವಾಗಿ ಮತ್ತು ಮಾನಸಿಕವಾಗಿ ಅತ್ಯುತ್ತಮ ಪಾನೀಯವಾಗಿದೆ. ಹಿಂದಿನ ಕಾಲದಿಂದಲೂ ಅನೇಕ ಆರೋಗ್ಯ ಸಮಸ್ಯೆಗಳನ್ನು ದೂರ ಮಾಡಿರುವ ಎಳನೀರು ವೈದ್ಯಕೀಯ ರಂಗದಲ್ಲೂ ತನ್ನ ಕರಾಮತ್ತನ್ನು ಪ್ರದರ್ಶಿಸಿರುವಂಥದ್ದಾಗಿದೆ. ಎಳನೀರು ಕಡಿಮೆ ಪ್ರಮಾಣದ ಸಕ್ಕರೆ ಅಂಶವನ್ನು ಒಳಗೊಂಡಿರುವುದರಿಂದ ಸೋಡಾ ಮತ್ತು ಕೆಲವೊಂದು ಹಣ್ಣುಗಳ ರಸಕ್ಕಿಂತಲೂ ಇದು ಉತ್ತಮವಾಗಿದೆ. ಪಾನೀಯವನ್ನು ಎದುರು ನೋಡುತ್ತಿರುವ ಮಕ್ಕಳು ಮತ್ತು ಹಿರಿಯರಿಗೆ ಹೆಚ್ಚು ಉಪಯುಕ್ತವಾಗಿರುವ ಎಳನೀರು ನಮ್ಮ ದೇಹದಲ್ಲಿರುವ ನಿರ್ಜಲೀಕರಣದ ಸಮಸ್ಯೆಯನ್ನು ದೂರ ಮಾಡುತ್ತದೆ. ಎಳನೀರಿನ ಪ್ರಾಮುಖ್ಯತೆಯನ್ನು ಒಮ್ಮೆ ನೀವು ಅರಿತುಕೊಂಡರೆ ನೀವು ಅದನ್ನು ಸೇವಿಸದೇ ಬಿಡಲಾರಿರಿ ಆದ್ದರಿಂದಲೇ ಇಂದಿನ ಲೇಖನದಲ್ಲಿ ಎಳನೀರಿನ ಆರೋಗ್ಯಕಾರಿ ಮಹತ್ವವನ್ನು ಇಲ್ಲಿ ತಿಳಿಸಿಕೊಡುತ್ತಿದ್ದೇವೆ. ನಿಮ್ಮ ಸೌಂದರ್ಯವನ್ನು ವರ್ಧಿಸುವುದರ ಜೊತೆಗೆ ನಿಮ್ಮ ಆರೋಗ್ಯವನ್ನೂ ವೃದ್ಧಿಸುತ್ತದೆ.
ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗುವ ಕೊಬ್ಬು ಮತ್ತು ಅರ್ಥರೋಜನಿಕ್‌ನ್ನು ನಿಯಂತ್ರಿಸುವ ಎಲ್‌-ಆರ್ಗನೈನ್‌ ಎಳನೀರಿನಲ್ಲಿ ಯಥೇತ್ಛವಾಗಿ ಇದೆ. ಎಳನೀರು ಸೇವನೆಯಿಂದ ಚರ್ಮ ಕಾಂತಿಯುಕ್ತವಾಗುತ್ತದೆ. ದೇಹವನ್ನು ತಂಪಾಗಿಡುವುದರೊಂದಿಗೆ ದೇಹದ ಉಷ್ಣತೆ ಮತ್ತು ಬೇಸಗೆಯಲ್ಲಿ ಉಷ್ಣ ಶರೀರದವರಿಗೆ ಕಾಣಿಸಿಕೊಳ್ಳುವ ಗುಳ್ಳೆ ನಿಯಂತ್ರಿಸುದಲ್ಲದೆ, ಅಲ್ಲದೆ ಇತ್ಯಾದಿ ಚರ್ಮ ಸಂಬಂಧಿ ಕಾಯಿಲೆಗಳಲ್ಲಿ ದೇಹದ ಮೇಲೆ ಮೂಡುವ ಕೆಂಪು ಗುಳ್ಳೆಗಳನ್ನು ಎಳನೀರು ಸೇವನೆ ತಡೆಯುತ್ತದೆ. 

Wednesday, May 13, 2020

ಕೋವಿಡ್ ಸಂಕಷ್ಟಕ್ಕೆ ಮಿಡಿದ ಸಾರಿಗೆ ನೌಕರರು: ಸಿಎಂ ಕೋವಿಡ್ ನಿಧಿಗೆ ದಿನದ ವೇತನ ನೀಡಿದ ಕೆಎಸ್​ಆರ್​ಟಿಸಿ ಸಿಬ್ಬಂದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕು ನಿಗಮಗಳ ಅಧಿಕಾರಿಗಳು, ನೌಕರರು ತಮ್ಮ ಒಂದು ದಿನದ ವೇತನವನ್ನು ಕೋವಿಡ್ -19 ಪರಿಹಾರ ನಿಧಿಗೆ ನೀಡಿದ್ದಾರೆ.
ಸಾರಿಗೆ ಸಚಿವ ಲಕ್ಷ್ಮಣ ಸವದಿ ಸಾರಿಗೆ ಇಲಾಖೆ ನೌಕರರ ಪರವಾಗಿ 9 ಕೋಟಿ 85 ಲಕ್ಷದ 9 ಸಾವಿರದ 228 ರು. ಚೆಕ್ ಅನ್ನು ಸಿಎಂ 'ಕೋವಿಡ್-19 ಪರಿಹಾರ ನಿಧಿಗೆ ನೀಡಿದ್ದಾರೆ. ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ಡಿಸಿಎಂ ಸವದಿ ಚೆಕ್ ಹಸ್ತಾಂತರಿಸಿದ್ದಾರೆ. ಕೆಎಸ್​ಆರ್​ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ,ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ ಸಹ ಈ ವೇಳೆ ಕಾರ್ಯಕ್ರಮದಲ್ಲಿ ಹಾಜರಿದ್ದರು. ಲಾಕ್ ಡೌನ್ ಪರಿಣಾಮ ಕಳೆದ ಒಂದೂವರೆ ತಿಂಗಳಿನಿಂದ ರಾಜ್ಯದಲ್ಲಿ ಬಸ್ ಸಂಚಾರವಿಲ್ಲ.
(ಮಾಹಿತಿ ಕೃಪೆ ಕನ್ನಡಪ್ರಭ....)

ಹೊಸಪೇಟೆ: ಪತಿಯ ಕುಡಿತಕ್ಕೆ ಬೇಸತ್ತ ಪತ್ನಿ ವಿಷ ಸೇವಿಸಿ ಆತ್ಮಹತ್ಯೆ!

ಬಳ್ಳಾರಿ: ಪತಿ ಕುಡಿತದ ಚಟಕ್ಕೆ ಬೇಸತ್ತ ಪತ್ನಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ಹೊಸಪೇಟೆಯಲ್ಲಿ ನಡೆದಿದೆ.
ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ತಾಂಡದಲ್ಲಿ ಈ ಘಟನೆ ನಡೆದಿದ್ದು, ಮೀನಾಕ್ಷಿ (30 ವರ್ಷ) ಸಾವಿಗೀಡಾದ ಮಹಿಳೆ. ಮೀನಾಕ್ಷಿ ಗಂಡ ಕುಡಿತದ ದಾಸನಾಗಿದ್ದು, ಪತ್ನಿ ಎಷ್ಟೇ ಬುದ್ಧಿವಾದ ಹೇಳಿದರೂ ಕುಡಿತ ಬಿಡುತ್ತಿರಲಿಲ್ಲ. ಕುಡಿತವನ್ನ ಬಿಡುವಂತೆ ಪತಿಗೆ ಪರಿ ಪರಿಯಾಗಿ ಮೀನಾಕ್ಷಿ ಬೇಡಿಕೊಂಡಿದ್ದಳು. ಆದರೆ ಅದಕ್ಕೆ ಪತಿ ಮಹಾಶಯ ಸೊಪ್ಪುಹಾಕುತ್ತಿರಲಿಲ್ಲ.
ಇತ್ತೀಚೆಗೆ ಕೊರೊನಾ ಲಾಕ್ ಡೌನ್ ನಂತರ ವೈನ್ ಶಾಪ್ ಪ್ರಾರಂಭವಾದ ಮೇಲೆ ಗಂಡನ ಕುಡಿತ ಹೆಚ್ಚಾಗಿತ್ತು, ಇದರಿಂದ ಬೇಸತ್ತು ಮನೆಯಲ್ಲಿ ವಿಷ ಸೇವಿಸಿ ಆತ್ಮ ಹತ್ಯೆಗೆ ಯತ್ನಿಸಿದ್ದಾಳೆ. ಕೂಡಲೇ ಅಸ್ವಸ್ಥ ಮಹಿಳೆಯನ್ನು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ
ಆದರೆ ಚಿಕಿತ್ಸೆ ಫಲಿಸದೆ ಆಕೆ ನಿ‌ನ್ನೆ ಸಾವನ್ನಪ್ಪಿದ್ದಾಳೆ, ಪ್ರಸ್ತುತ ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೊಸಪೇಟೆ: ಕೊರೋನಾ ಸುದ್ದಿ ಕೇಳಿ ಕೇಳಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಮಹಿಳೆ ಆತ್ಮಹತ್ಯೆ

ಹೊಸಪೇಟೆ: ಮಾಹಾಮಾರಿ ಕೊರೋನಾ ಹಾವಳಿಯ ಸುದ್ದಿ ಕೇಳಿ ಕೇಳಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ನಡೆದಿದೆ.
ಕೊರೋನಾ ಪಾಸಿಟಿವ್ ಪ್ರಕರಣ ಹೆಚ್ಚಾಗುತ್ತಿರುವ ಸುದ್ದಿ ಕೇಳಿದಾಗಲೆಲ್ಲ ಬೆಚ್ಚಿ ಬೀಳುತಿದ್ದ ಮಹಿಳೆ, ತನಗೆ ಕೊರೋನಾ ಮಾರಿ ಬಂದರೆ ಹೇಗೆ ಎಂದು ಆಗಾಗಾ ಭಯ ಪಡುತಿದ್ದಳು.
ಮಾನಸಿಕ ಖಿನ್ನತೆಗೆ ಒಳಗಾಗಿದ್ದ 34 ವರ್ಷ ಲಕ್ಷ್ಮಿ ಎಂಬ ಮಹಿಳೆ ಕೊನೆಗೆ ಇಂದು ಮಧ್ಯಾಹ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಮಹಿಳೆ ಬಳ್ಳಾರಿ ಜಿಲ್ಲೆ ಹೊಸಪೇಟೆ ನಗರದ ಜಬ್ಬಲ್ ವೃತ್ತದ ಬಳಿಯ ಪ್ರದೇಶದಲ್ಲಿ ವಾಸವಾಗಿದ್ದರು,
ಈ ಸಂಬಂಧ ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
(ಮಾಹಿತಿ ಕೃಪೆ ಕನ್ನಡಪ್ರಭ...)

ರಾಮನಗರ: ಮಗುವನ್ನು ಕೊಂದಿದ್ದ ಚಿರತೆ ಸೆರೆ

ರಾಮನಗರ: ಪೋಷಕರ ಜತೆ ಮಲಗಿದ್ದ ಮೂರು ವರ್ಷದ ಮಗುವನ್ನು ಹೊತ್ತೊಯ್ದು ಕೊಂದು ಹಾಕಿದ್ದ ಚಿರತೆ ಬೋನಿನಲ್ಲಿ ಸೆರೆಯಾಗಿದೆ. ಮಾಗಡಿ ತಾಲೂಕಿನ ಕದಿರಯ್ಯನ ಪಾಳ್ಯದಲ್ಲಿ ಈ ನರಭಕ್ಷಕ ಚಿರತೆ ಸೆರೆಯಾಗಿದ್ದು ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
ಮೂರು ವರ್ಷದ ಹೇಮಂತ್ ನನ್ನು ಮನೆಯಿಂದ ಹೊತ್ತೊಯ್ದು ಕೊಂದಿದ್ದ ಚಿರತೆ ಅರಣ್ಯ ಇಲಾಖೆಯ ಬೋನಿನಲ್ಲಿ ಸೆರೆಯಾಗಿದೆ. ಅರಣ್ಯ ಇಲಾಖೆಯವರು ಕದರಯ್ಯನಪಾಳ್ಯದ ಸುತ್ತ ಆರು ಕಡೆ ಬೋನ್ ಇರಿಸಿದ್ದರು.
ಇದೀಗ ಚಿರತೆ ಸೆರೆಯಾಗಿದ್ದು ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸಿಕ್ಕಿರುವ ಚಿರತೆಯನ್ನು ಅರಣ್ಯಕ್ಕೆ ರವಾನಿಸಲು ಅಥವಾ ಮೈಸೂರು, ಬನ್ನೇರುಘಟ್ಟ ಮೃಗಾಲಯಕ್ಕೆ ಕಳಿಸಲು ಮುಂದಿನ ದಿನಗಳಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವುದಾಗಿ ಇಲಾಖೆ ಮೂಲಗಳು ಹೇಳಿದೆ.ಕಳೆದ ಶುಕ್ರವಾರ ರಾತ್ರಿ ಕದಿರಯ್ಯನಪಾಳ್ಯಗ್ರಾಮದ ಚಂದ್ರಣ್ಣ ಹಾಗೂ ಮಂಗಳಗೌರಮ್ಮ ದಂಪತಿಯ ಮಗನಾದ ಹೇಮಂತ್ ಎಂಬ ಮಗುವನ್ನು ಚಿರತೆ ಹೊತ್ತೊಯ್ದು ಕೊಂದು ತಿಂದಿತ್ತು.
(ಮಾಹಿತಿ ಕೃಪೆ ಕನ್ನಡಪ್ರಭ...)

ಹೊಟ್ಟೆನೋವಿನ ಸಮಸ್ಯೆಗೆ ಈ ಮನೆಮದ್ದನ್ನು ಬಳಸಿ

ಬೆಂಗಳೂರು : ಹೊರಗಿನ ಫುಡ್ ಗಳನ್ನು ಸೇವಿಸಿದಾಗ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಮಾತ್ರವಲ್ಲ ಗ್ಯಾಸ್ಟ್ರಿಕ್ ಸಮಸ್ಯೆ, ಅಜೀರ್ಣ ಸಮಸ್ಯೆಯಾದಾಗ ಹೊಟ್ಟೆನೋಯುವುದು ಸಾಮಾನ್ಯ. ಈ ರೀತಿಯಾದ ಯಾವುದೇ ತರಹದ ಹೊಟ್ಟೆನೋವಿಗೂ ಈ ಮನೆಮದ್ದನ್ನು ಬಳಸಿ.
1 ಚಮಚ ಪುದೀನ ಸೊಪ್ಪಿನ ರಸಕ್ಕೆ 1 ಚಮಚ ಜೇನುತುಪ್ಪ ಬೆರೆಸಿ ಕುಡಿದರೆ ಇಂತಹ ಹೊಟ್ಟೆನೋವು ಇದ್ದರೂ ಕ್ಷಣಮಾತ್ರದಲ್ಲಿ ಕಡಿಮೆಯಾಗುತ್ತದೆ.

54 ವರ್ಷದ ಮಹಿಳೆಗೆ ಅವಳಿ ಮಕ್ಕಳು, ಪತಿಗೆ 64 ವರ್ಷ- ದಂಪತಿಯ ಬದುಕೇ ಒಂದು ಕರುಣಾಜನಕ ಕಥೆ

ಅಡೂರು: ಕೇರಳದ ಪತ್ತನಂತಿಟ್ಟ ವಡಸ್ಸೇರಿಕ್ಕರ ಗ್ರಾಮದಲ್ಲಿ 54ರ ಮಹಿಳೆ ಅವಳಿ ಮಕ್ಕಳ ತಾಯಿ ಆದುದೇ ಈಗ ಸುದ್ದಿ. ಮಹಿಳೆಯ ಹೆಸರು ಕುಮಾರಿ. ಆಕೆಯ ಪತಿಯ ಹೆಸರು ಶ್ರೀಧರನ್. ಅವರ ವಯಸ್ಸು 64 ವರ್ಷ. ಈ ವಯಸ್ಸಿನಲ್ಲೂ ಮಕ್ಕಳಾಗುತ್ತಾ ಎಂಬ ಪ್ರಶ್ನೆಯೇ ಆ ಊರಿನ ಬಹುತೇಕರನ್ನು ಕಾಡುತ್ತಿದೆ. ಇದೊಂದು ಅಚ್ಚರಿ ಕೂಡ ಹೌದು ಎನ್ನುತ್ತಾರೆ ಊರವರಷ್ಟೇ ಅಲ್ಲ, ವೈದ್ಯರು ಕೂಡ.ಅವಳಿ ಮಕ್ಕಳಿಗೆ ಜನ್ಮ ನೀಡಿರುವುದು ಖುಷಿಯೇ ಆದರೂ, ಅವರನ್ನು ಅತಿಯಾಗಿ ಕಾಡುತ್ತಿರುವ ನೋವು ಒಂದಿದೆ. ಅದನ್ನು ಕುಮಾರಿ ಹೇಳಿಕೊಂಡಿರುವುದು ಹೀಗೆ- ಪತ್ತನಂತಿಟ್ಟ ಜಿಲ್ಲೆಯ ವಡಸ್ಸೇರಿಕ್ಕರ ಗ್ರಾಮ ಪಂಚಾಯಿತಿ ಮಣಿಯರ ಎಂಬ ವಾರ್ಡ್​ನ ನಿವಾಸಿಗಳು ನಾವು.ನಮಗೆ ಮದುವೆಯಾಗಿ 29 ವರ್ಷ ಆಯಿತು. ಮದುವೆಯಾಗಿ ಐದು ವರ್ಷದ ಬಳಿಕ ಒಬ್ಬ ಮಗ ಜನಿಸಿದ್ದ. ಅವನಿಗೆ 23 ವರ್ಷ ಆಗುವ ತನಕ ಎಲ್ಲವೂ ಚೆನ್ನಾಗೇ ಇತ್ತು. ಅದೊಂದು ದಿನ ಆತ ನಮ್ಮನ್ನು ಬಿಟ್ಟು ಅಗಲಿ ಹೋದ. ಆ ನೋವು ನಮ್ಮನ್ನೂ ಇನ್ನೂ ಕಾಡುತ್ತಿದೆ. ಬೇರೆ ಮಕ್ಕಳಲಿಲ್ಲದ ನಮಗೆ ಸ್ನೇಹಿತರು, ಹಿತೈಷಿಗಳು ಸಾಂತ್ವನ ಹೇಳುತ್ತಿದ್ದರು. ಈ ದುರಂತವಾಗಿ ಐದಾರು ತಿಂಗಳು ಆಗಿರಬಹುದು. ಈ ವಯಸ್ಸಲ್ಲೂ ನಿಮಗೆ ಮಕ್ಕಳಾಗುವ ಸಾಧ್ಯತೆ ಇದೆ ಎಂದು ಒಬ್ಬರು ಹೇಳಿದ್ರು. ಆ ಮಾತು ನಮ್ಮಲ್ಲಿ ಮಕ್ಕಳ ಕುರಿತ ಆಸೆ ಮತ್ತೊಮ್ಮೆ ಚಿಗುರುವಂತಾಯಿತು.ಹಾಗೆ ಕೊಲ್ಲಂನಲ್ಲಿರುವ ಖಾಸಗಿ ಆಸ್ಪತ್ರೆಗೆ ಬಂದು ಡಾಕ್ಟರ್ ಬಳಿ ಎಲ್ಲವನ್ನೂ ವಿವರವಾಗಿ ತಿಳಿಸಿದೆವು. ನಮ್ಮ ವಯಸ್ಸಿನ ವಿಚಾರವನ್ನೂ ಹೇಳಿದೆವು. ಕೆಲವೊಂದು ಪರೀಕ್ಷೆಗಳನ್ನು ನಡೆಸಿದ ಅವರು ಮಕ್ಕಳಾಗುವ ಭರವಸೆ ನೀಡಿದರು. ಡಾ. ಸಿರಿಯಾಕ್ ಪಾಪಚ್ಚನ್​ , ಡಾ. ಬಿ. ಪ್ರಸನ್ನಕುಮಾರಿ, ಡಾ.ಜೆಸ್ನಾ ಹಸನ್​, ಡಾ.ಶ್ರೀಜಾ ಪಿ.ವರ್ಘೀಸ್​ ಅವರ ತಂಡದ ಚಿಕಿತ್ಸೆಯಂತೆ ಮೂರುವಾರಗಳ ಬಳಿಕ ನಾನು ಗರ್ಭ ಧರಿಸಿದೆ. ನಿಯತವಾದ ಚೆಕ್​ಅಪ್​ ಮತ್ತು ಆರೈಕೆಯ ಬಳಿಕ ಒಂದಲ್ಲ ಎರಡು ಮಕ್ಕಳಿಗೆ ಜನ್ಮ ನೀಡಿದ್ದೇನೆ. ಅವಳಿ ಮಕ್ಕಳ ಪೈಕಿ ಒಂದು ಗಂಡು, ಇನ್ನೊಂದು ಹೆಣ್ಣು. ಆ ಭಗವಂತ ಒಬ್ಬ ಮಗನನ್ನು ಕೊಟ್ಟು ಹಿಂಪಡೆದುಕೊಂಡ. ಬಳಿಕ ಈ ವಯಸ್ಸಿನಲ್ಲೂ ನಮಗೆ ಎರಡು ಮಕ್ಕಳನ್ನು ಕೊಟ್ಟು ಹರಸಿದ್ದಾನೆ ಎಂದು ಭಾವುಕರಾಗಿದ್ದಾರೆ. (ಏಜೆನ್ಸೀಸ್​)
(ಮಾಹಿತಿ ಕೃಪೆ ವಿಜಯವಾಣಿ...)

Tuesday, May 12, 2020

ಕಂಪ್ಲಿಗೂ ಕಾಲಿಟ್ಟಿತು ಕೋವಿಡ್

ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಮತ್ತೂಂದು ಕೋವಿಡ್‌-19 ಪತ್ತೆಯಾಗಿದ್ದು, ಜಿಲ್ಲೆಯ ಕಂಪ್ಲಿ ತಾಲೂಕಿನ ಶಿಬಿರದಿನ್ನಿ ಮಾರುತಿನಗರದ ನಿವಾಸಿಯೊಬ್ಬರಲ್ಲಿ ಕೋವಿಡ್‌
-19 ಸೋಂಕು ಆವರಿಸಿರುವುದು ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಪ್ರಕರಣಗಳ ಸಂಖ್ಯೆ 16ಕ್ಕೆ ಏರಿದಂತಾಗಿದೆ.
ರಾಜ್ಯ ಸರ್ಕಾರದ ಸೂಚನೆ ಮೇರೆಗೆ ಕಳೆದೆರಡು ದಿನಗಳ ಹಿಂದಷ್ಟೇ ಬೆಂಗಳೂರಿನಿಂದ ಬಂದಿದ್ದ ಕಂಪ್ಲಿಯ ಶಿಬಿರದಿನ್ನಿಯ ವಲಸೆ ಕಾರ್ಮಿಕ 28 ವರ್ಷದ ವ್ಯಕ್ತಿಗೆ ಮಹಾಮಾರಿ ಕೋವಿಡ್ ಸೋಂಕು ಆವರಿಸಿದ್ದು, ಈ ಕುರಿತು ಮೇ 12ರ ಮೀಡಿಯಾ ಬುಲೆಟಿನ್‌ನಲ್ಲಿ ಅ ಧಿಕೃತ ಘೋಷಣೆಯೊಂದೇ ಬಾಕಿಯಿದೆ. ಈ ಹಿನ್ನೆಲೆಯಲ್ಲಿ ಸೋಂಕಿತನನ್ನು ಬಳ್ಳಾರಿಯ ಕೋವಿಡ್‌ (ಜಿಲ್ಲಾ) ಆಸ್ಪತ್ರೆಗೆ ಕರೆತರಲಾಗಿದ್ದು, ಚಿಕಿತ್ಸೆ ಆರಂಭಿಸಲಾಗಿದೆ. ಅಲ್ಲದೇ, ಸೋಂಕಿತನೊಂದಿಗೆ ಸರ್ಕಾರಿ ಬಸ್‌ ನಲ್ಲಿ ಬೆಂಗಳೂರಿನಿಂದ ಬಳ್ಳಾರಿಗೆ ಬಂದಿದ್ದ ಸಹ ಪ್ರಯಾಣಿಕರನ್ನು ಸಹ ಸಾಂಸ್ಥಿಕ ಕ್ವಾರಂಟೈನ್‌ ಮಾಡಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ ಎಂದು ಆರೋಗ್ಯ ಇಲಾಖೆ ವೈದ್ಯಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಸೋಂಕಿತನಿಗೆ ತಾಯಿ, ಪತ್ನಿ, ಮಗು ಇದ್ದಾರೆ ಎಂದು ತಿಳಿದು ಬಂದಿದೆ. ಇವರ ಗಂಟಲು ದ್ರವವನ್ನು ಸಹ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬರಬೇಕಿದೆ ಅಷ್ಟೇ. ಸದ್ಯ ಇವರನ್ನೂ ಕ್ವಾರಂಟೈನ್‌ ಮಾಡಲಾಗಿದೆ. ಸೋಂಕಿತನು ಕಳೆದ ಮೇ 5 ರಂದು ಬೆಂಗಳೂರಿನಿಂದ ನೆರೆಯ ಕೊಪ್ಪಳ ಜಿಲ್ಲೆಯ ಗಂಗಾವತಿಗೆ ಸರ್ಕಾರಿ ಬಸ್‌ನಲ್ಲಿ ಬಂದಿದ್ದು, ಅಲ್ಲಿಂದ ಆಟೋ ಮೂಲಕ ಕಂಪ್ಲಿ ಶಿಬಿರದಿನ್ನಿಯ ಮಾರುತಿ ನಗರಕ್ಕೆ ಬಂದಿದ್ದಾನೆ. ಗಂಗಾವತಿಯಲ್ಲಿ ಸೋಂಕಿತನನ್ನು ಇಳಿಸಿದ ಸರ್ಕಾರಿ ಬಸ್‌, ಅಲ್ಲಿಂದ ಮುಂದೆ ಕೊಪ್ಪಳಕ್ಕೆ ಹೋಗಿದೆ. ಅಲ್ಲದೇ, ಸೋಂಕಿತನೊಂದಿಗೆ
ಸರ್ಕಾರಿ ಬಸ್‌ನಲ್ಲಿ ಬೆಂಗಳೂರಿನಿಂದ ಬಳ್ಳಾರಿಗೆ ಬಂದಿದ್ದ 28 ಸಹ ಪ್ರಯಾಣಿಕರನ್ನು ಪ್ರೈಮರಿ ಕಾಂಟ್ಯಾಕ್ಟ್ ಎಂದು ಗುರುತಿಸಿ ಸಾಂಸ್ಥಿಕ ಕ್ವಾರಂಟೈನ್‌ ಮಾಡಲು ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲಾಡಳಿತ ಸಿದ್ಧತೆ ನಡೆಸಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
16ಕ್ಕೇರಿದ ಪ್ರಕರಣಗಳ ಸಂಖ್ಯೆ: ಬಳ್ಳಾರಿ ಜಿಲ್ಲೆಯಲ್ಲಿ ಈಗಾಗಲೇ 15 ಪ್ರಕರಣಗಳಿದ್ದು, ಕಂಪ್ಲಿಯ 1 ಸೇರಿ 16ಕ್ಕೆ ಏರಿದಂತಾಗಿದೆ. ಹೊಸಪೇಟೆಯ ಒಂದೇ ಕುಟುಂಬದ 11 ಜನರ ಪೈಕಿ ಈಗಾಗಲೇ 10 ಜನರು ಸೋಂಕಿನಿಂದ ಗುಣಮುಖರಾಗಿ ಮನೆಗೆ ಸೇರಿದ್ದಾರೆ. ಜತೆಗೆ ಬಳ್ಳಾರಿ ನಗರದ ಗುಗ್ಗರಹಟ್ಟಿ ಪ್ರದೇಶದ ವ್ಯಕ್ತಿ ಸಹ ಗುಣಮುಖರಾಗಿದ್ದಾರೆ. ಇದೀಗ
ಬಳ್ಳಾರಿ ಕೌಲ್‌ಬಜಾರ್‌ನ 1, ಸಂಡೂರು ತಾಲೂಕು ಕೃಷ್ಣನಗರ 1, ಸಿರುಗುಪ್ಪ ತಾಲೂಕು ಎಚ್‌.ಹೊಸಳ್ಳಿ 1, ಕಂಪ್ಲಿ 1, ಹೊಸಪೇಟೆ 1 ಸೇರಿ ಒಟ್ಟು 5 ಸಕ್ರಿಯ ಪ್ರಕರಣಗಳಾಗಿವೆ.
ಜನತೆಯಲ್ಲಿ ಹೆಚ್ಚಿದ ಆತಂಕ
ಕಂಪ್ಲಿ: ಪಟ್ಟಣದಲ್ಲಿ ಮಾರಕ ಶಿಬಿರದಿನ್ನಿ ಮಾರುತಿನಗರ ನಿವಾಸಿ 28 ವರ್ಷದ ವಲಸೆ ಕಾರ್ಮಿಕನಲ್ಲಿ ಸೋಂಕು ದೃಢ ಸೋಂಕು ಪ್ರಕರಣ ದಾಖಲಾಗಿದ್ದು, ಸಾರ್ವಜನಿಕರಲ್ಲಿ ಆತಂಕ
ಮೂಡಿಸಿದೆ. ಕಳೆದ ಹಲವು ದಿನಗಳಿಂದ ಪಟ್ಟಣದಲ್ಲಿ ಬೇರೆ ಊರುಗಳಿಂದ ಆಗಮಿಸಿದ ಸುಮಾರು 50ಕ್ಕೂ ಅಧಿಕ ಜನರನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿತ್ತು. ಜೊತೆಗೆ ಸೋಂಕಿನ ಲಕ್ಷಣಗಳು ಕಂಡು ಬಂದವರ ಗಂಟಲು ದ್ರವವನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಇದರಲ್ಲಿ ಒಬ್ಬರದು ಪಾಸಿಟೀವ್‌ ಬಂದಿರುವುದು ದೃಢವಾಗಿದ್ದು, ಸೋಂಕಿತ ವ್ಯಕ್ತಿ
ವಾಸವಾಗಿರುವ ಪಟ್ಟಣದ ಶಿಬಿರದಿನ್ನೆ ಪ್ರದೇಶವನ್ನು ಕಂಟೇನ್ಮೆಂಟ್‌ ವಲಯವನ್ನಾಗಿ ರೂಪಿಸುತ್ತಿದ್ದು, ಆರೋಗ್ಯ, ಪುರಸಭೆ, ಕಂದಾಯ ಮತ್ತು ಪೊಲೀಸ್‌ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ಕೈಗೊಂಡಿದ್ದಾರೆ. ಈ ಪ್ರದೇಶಕ್ಕೆ ಒಳ ಬರುವ, ಹೊರ ಹೋಗುವ ಮಾರ್ಗ ಬಂದ್‌ ಮಾಡಲಿದ್ದಾರೆ. ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿದ ನಂತರ ಇನ್ನು ಹೆಚ್ಚಿನ ವಿವರಗಳು ತಿಳಿದು ಬರಲಿದೆ.
(ಮಾಹಿತಿ ಕೃಪೆ ಉದಯವಾಣಿ....)

ಕಂಟೈನ್ಮೆಂಟ್ ಬಿಟ್ಟು ಉಳಿದ ಸ್ಥಳಗಳಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ಅನುಮತಿ ನೀಡಿ: ಕೇಂದ್ರಕ್ಕೆ ಸಿಎಂ ಯಡಿಯೂರಪ್ಪ ಮನವಿ

ಬೆಂಗಳೂರು: ಜಿಲ್ಲಾವಾರು ಕೆಂಪು, ಕಿತ್ತಳೆ ಹಾಗೂ ಹಸಿರು ವಲಯಗಳನ್ನು ಗುರುತಿಸಬಾರದು, ಕಂಟೈನ್ಮೆಂಟ್ ವಲಯಗಳನ್ನು ಮಾತ್ರ ಕಟ್ಟುನಿಟ್ಟಾಗಿ ನಿರ್ಬಂಧಿಸಬೇಕು. ಕ್ಲಸ್ಟರುಗಳ ಸುತ್ತಲಿನ 50ರಿಂದ 100 ಮೀಟರ್ ವರೆಗಿನ ಪ್ರದೇಶವನ್ನು ಕಂಟೈನ್ಮೆಂಟ್ ವಲಯ ಎಂದು ಘೋಷಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಪ್ರಧಾನಿ ಮೋದಿಯವರು ದೇಶದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸೋಮವಾರ ಸಂವಾದ ನಡೆಸಿದ್ದು, ಈ ವೇಳೆ, ಪ್ರಧಾನಮಂತ್ರಿಗಳೊಂದಿಗೆ ಮಾತನಾಡಿರುವ ಯಡಿಯೂರಪ್ಪ ಅವರು, ರಾಜ್ಯದಲ್ಲಿ ಕೊರೋನಾ ನಿಯಂತ್ರಣಕ್ಕಾಗಿ ಕೈಗೊಂಡಿರುವ 4ಟಿ ಸೂತ್ರ ಸೇರಿದಂತೆ ಹಲವು ಕ್ರಮಗಳ ಕುರಿತು ಸಂಪೂರ್ಣ ಮಾಹಿತಿ ನೀಡಿದರು. ಅಲ್ಲದೆ, ಪ್ರಧಾನಿಗೆ ಕೆಲವು ಸಲಹೆಗಳನ್ನೂ ನೀಡಿದ್ದಾರೆ.ಮೇ ಅಂತ್ಯದವರೆಗೆ ದೇಶದಲ್ಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ವಿಮಾನಯಾನ ಪ್ರಾರಂಭಿಸಬಾರದು. ಅಂತರಾಷ್ಟ್ರೀಯ ಪ್ರಯಾಣಿಕರನ್ನು ಕಡ್ಡಾಯವಾಗಿ 14 ದಿನಗಳ ಸಾಂಸ್ಥಿಕ ಕ್ವಾರಂಟೈನ್ ಗೊಳಪಡಿಸಬೇಕು. ಹೊರ ರಾಜ್ಯ ಪ್ರಯಾಣಿಕರನ್ನು ಸಹ ಕಡ್ಡಾಯವಾಗಿ ಸಾಂಸ್ಥಿಕ ಕ್ವಾರಂಟೈನ್ ಮತ್ತು ಪರೀಕ್ಷೆಗೊಳಪಡಿಸಬೇಕು. ಹೊರ ರಾಜ್ಯದವರು ತಾವು ಹೊರಡುವ ಸ್ಥಳದಲ್ಲಿ ಆರೋಗ್ಯ ಪ್ರಮಾಣ ಪತ್ರವನ್ನು ಸ್ಥಳೀಯ ಆರೋಗ್ಯಾಧಿಕಾರಿಗಳಿಂದ ಪಡೆದುಕೊಳ್ಲಬೇಕು. ಹೊಂದಿಲ್ಲದವರನ್ನು ಕಡ್ಡಾಯವಾಗಿ ಕ್ವಾರಂಟೈನ್ ನಲ್ಲಿ ಇರಿಸಬೇಕೆಂದು ಸಲಹೆ ನೀಡಿದ್ದಾರೆ.
(ಮಾಹಿತಿ ಕೃಪೆ

ನಿಜ ಜೀವನದ 'ನಾಯಕ' ಬೆಳ್ಳಿತೆರೆಯ ಈ ಖಳ ನಟ

'ದಬಾಂಗ್' ಚಿತ್ರದ ಖಳನಟ ಸೋನು ಸೂದ್ ತಾವು ನಿಜ ಜೀವನದಲ್ಲಿ ನಾಯಕ ಎಂಬುದನ್ನು ನಿರೂಪಿಸಿದ್ದಾರೆ. ಹೌದು, ಸೋನು ಸೂದ್ ಲಾಕ್ ಡೌನ್ ಕಾರಣಕ್ಕಾಗಿ ಮುಂಬೈನ ಥಾಣೆಯಲ್ಲಿ ಸಿಲುಕಿಕೊಂಡಿದ್ದ ಗುಲ್ಬರ್ಗಾ ಮೂಲದ ಕೂಲಿ ಕಾರ್ಮಿಕರು ವಾಪಸ್ ತಮ್ಮ ಊರಿಗೆ ಮರಳಲು 10 ಬಸ್ ಗಳನ್ನು ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.
ಅಷ್ಟೇ ಅಲ್ಲ, ಪ್ರಯಾಣದ ವೇಳೆ ಈ ವಲಸೆ ಕಾರ್ಮಿಕರಿಗೆ ಆಹಾರಕ್ಕೆ ಕೊರತೆಯಾಗಬಾರದೆಂದು, ಆಹಾರದ ಕಿಟ್ ಗಳನ್ನು ಸಹ ನೀಡಿದ್ದಾರೆ. ಬಸ್ ವ್ಯವಸ್ಥೆ ಮಾಡುವ ಮುನ್ನ ಸೋನು ಸೂದ್ ಕರ್ನಾಟಕ ಹಾಗೂ ಮಹಾರಾಷ್ಟ್ರ ಸರ್ಕಾರದ ಅನುಮತಿ ಪಡೆದುಕೊಂಡಿದ್ದಾರೆ.
ಕೊರೊನಾ ಸಂಕಷ್ಟದ ಈ ಸಮಯದಲ್ಲಿ ಸೋನು ಸೂದ್ ಬಡ ಜನರ ಸಂಕಷ್ಟಕ್ಕೆ ಮಿಡಿಯುತ್ತಿದ್ದು, ಭಿವಂಡಿ ಪ್ರದೇಶದಲ್ಲಿ ನೆಲೆಸಿರುವ ವಲಸೆ ಕಾರ್ಮಿಕರಿಗೆ ಆಹಾರದ ಕಿಟ್ ವಿತರಿಸಿದ್ದರು.ಅಲ್ಲದೆ ಮುಂಬೈನ ತಮ್ಮ ಹೋಟೆಲ್ ನಲ್ಲಿ ಆರೋಗ್ಯ ಕಾರ್ಯಕರ್ತರ ವಸತಿಗೆ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಜೊತೆಗೆ ಪಂಜಾಬ್ ವೈದ್ಯರಿಗೆ 1500 ಪಿಪಿಇ ಕಿಟ್ ನೀಡಿದ್ದಾರೆ.
ಜೀವನೋಪಾಯಕ್ಕಾಗಿ ವಲಸೆ ಬಂದಿರುವ ಕಾರ್ಮಿಕರು ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ತಮ್ಮ ಕುಟುಂಬಸ್ಥರು ಹಾಗೂ ಪ್ರೀತಿಪಾತ್ರರೊಂದಿಗೆ ಇರುವ ಅಗತ್ಯವಿದೆ. ಹೀಗಾಗಿಯೇ ಅವರುಗಳಿಗೆ ಬಸ್ ವ್ಯವಸ್ಥೆ ಮಾಡಿಕೊಟ್ಟಿದ್ದು, ಮುಂದಿನ ದಿನಗಳಲ್ಲಿ ಇತರ ರಾಜ್ಯದ ವಲಸೆ ಕಾರ್ಮಿಕರಿಗೂ ವಾಪಸ್ ತೆರಳಲು ವ್ಯವಸ್ಥೆ ಮಾಡುವುದಾಗಿ ಸೋನು ಸೂದ್ ತಿಳಿಸಿದ್ದಾರೆ.
(ಮಾಹಿತಿ ಕೃಪೆ ಕನ್ನಡದುನಿಯಾ....)

ನಗರ ಬಿಟ್ಟು ಹಳ್ಳಿಗೆ ವಾಪಸ್ ಆದ ಯುವಕರಿಗೆ ಇಲ್ಲಿದೆ ಸುವರ್ಣಾವಕಾಶ

ಕೊರೊನಾ ವೈರಸ್ ಲಾಕ್ ‌ಡೌನ್‌ ನಂತ್ರ ತಮ್ಮ ಗ್ರಾಮ ತಲುಪಿದ ಅನೇಕ ಯುವಕರು ಮತ್ತೆ ನಗರಕ್ಕೆ ಬರಲು ಮನಸ್ಸು ಮಾಡ್ತಿಲ್ಲ. ಅವರು ಹಳ್ಳಿಗಳಲ್ಲಿ ಸೂಕ್ತ ಉದ್ಯೋಗವನ್ನು ಹುಡುಕುತ್ತಿದ್ದಾರೆ. ಅಂತಹ ಯುವಕರಿಗೆ ಮಣ್ಣಿನ ಆರೋಗ್ಯ ಕಾರ್ಡ್ ಯೋಜನೆ ಹೆಚ್ಚು ಪ್ರಯೋಜನಕಾರಿಯಾಗಿದೆ.
ಗ್ರಾಮ ಮಟ್ಟದಲ್ಲಿ ಮಿನಿ ಮಣ್ಣು ಪರೀಕ್ಷಾ ಪ್ರಯೋಗಾಲಯವನ್ನು ಸ್ಥಾಪಿಸುವ ಮೂಲಕ ಆದಾಯವನ್ನು ಗಳಿಸಬಹುದು. ಇದು ಭಾರತದ ಗ್ರಾಮೀಣ ಯುವಕರಿಗೆ ಉದ್ಯೋಗವನ್ನು ಒದಗಿಸುತ್ತದೆ. ಲ್ಯಾಬ್ ನಿರ್ಮಿಸಲು 5 ಲಕ್ಷ ರೂಪಾಯಿ ಖರ್ಚಾಗುತ್ತದೆ. ಸರ್ಕಾರ ಶೇಕಡಾ 75 ರಷ್ಟು ಅಂದರೆ 3.75 ಲಕ್ಷ ನೀಡುತ್ತದೆ. ಪ್ರಸ್ತುತ ದೇಶದ ರೈತ ಕುಟುಂಬಗಳ ಸಂಖ್ಯೆಗೆ ಹೋಲಿಸಿದರೆ ಲ್ಯಾಬ್‌ಗಳು ತೀರಾ ಕಡಿಮೆ. ಆದ್ದರಿಂದ ಅದರಲ್ಲಿ ಉದ್ಯೋಗದ ದೊಡ್ಡ ಅವಕಾಶವಿದೆ.
ಕೇಂದ್ರ ಕೃಷಿ ಸಚಿವಾಲಯದ ಈ ಯೋಜನೆಯಡಿ 18 ರಿಂದ 40 ವರ್ಷದ ಗ್ರಾಮೀಣ ಯುವಕರು ಲ್ಯಾಬ್ ಶುರು ಮಾಡಬಹುದು.ಮಣ್ಣಿನ ಪೋಷಕಾಂಶಗಳ ಕೊರತೆಯನ್ನು ಸುಧಾರಿಸಲು ಇದು ನೆರವಾಗುತ್ತದೆ. ಮಣ್ಣಿನ ಮಾದರಿ, ಪರೀಕ್ಷೆ ಮತ್ತು ಮಣ್ಣಿನ ಆರೋಗ್ಯ ಕಾರ್ಡ್ ಒದಗಿಸಲು ಸರ್ಕಾರವು ಪ್ರತಿ ಸ್ಯಾಂಪಲ್‌ಗೆ 300 ರೂಪಾಯಿ ನಿಗದಿಪಡಿಸಿದೆ. ಮಣ್ಣಿನ ಪರೀಕ್ಷೆಯ ಕೊರತೆಯಿಂದಾಗಿ ಯಾವ ಪ್ರಮಾಣದಲ್ಲಿ ಗೊಬ್ಬರವನ್ನು ಸೇರಿಸಬೇಕೆಂದು ರೈತರಿಗೆ ತಿಳಿದಿಲ್ಲ. ಲ್ಯಾಬ್ ನಿಂದ ರೈತರಿಗೆ ಇದ್ರ ಲಾಭ ಸಿಗಲಿದೆ. agricoop.nic.in ಮತ್ತು Dac.gov.in ನಲ್ಲಿ ಹೆಚ್ಚಿನ ಮಾಹಿತಿ ಲಭ್ಯವಿದೆ. 1800-180-1551 ನಂಬರ್ ಗೆ ಕರೆ ಮಾಡಿ ಮಾಹಿತಿ ಪಡೆಯಬಹುದು.
(ಮಾಹಿತಿ ಕೃಪೆ ಕನ್ನಡ ದುನಿಯಾ....)

Sunday, May 10, 2020

ಮದುವೆಗೆ ಬರದಂತೆ ಆಹ್ವಾನ!

ಬಳ್ಳಾರಿ: ಮದುವೆಗೆ ಬನ್ನಿ ಎಂದು ಆಮಂತ್ರಣ ಪತ್ರಿಕೆ ಕೊಟ್ಟು ಆಹ್ವಾನಿಸೋದು ಮಾಮೂಲು. ಆದರೆ ಕೋವಿಡ್ ಎಂಬ ಮಹಾಮಾರಿ ಮದುವೆ ಖುಷಿ, ಆಮಂತ್ರಣ ಪತ್ರಿಕೆಯ ಆಹ್ವಾನ ಎಲ್ಲದಕ್ಕೂ ಬ್ರೇಕ್‌ ಹಾಕಿದೆ. ಆದರೆ, ಲಾಕ್‌ಡೌನ್‌ ಅವಧಿಯಲ್ಲೇ ಮದುವೆಗೆ ಸಿದ್ಧವಾಗಿರುವ ಹೊಸಪೇಟೆಯ ಮದುಮಗನೊಬ್ಬ ವಾಟ್ಸ್‌ಆಯಪ್‌ ಆಮಂತ್ರಣ ಪತ್ರಿಕೆಯಲ್ಲಿ ಮದುವೆಗೆ ಬರದಂತೆ ಮನವಿ ಮಾಡಿಕೊಂಡಿದ್ದಾರೆ. ಜಿಲ್ಲೆಯ ಹೊಸಪೇಟೆಯ ಚಿರಂಜೀವಿ ಕರಣಂ ಎನ್ನುವವರು ಮೇ 10 ರಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು, ವಿಭಿನ್ನ ರೀತಿಯಲ್ಲಿ ಆಮಂತ್ರಣ ಪತ್ರಿಕೆ ರೂಪಿಸಿ ವಾಟ್ಸ್‌ಆಯಪ್‌ ಮೂಲಕ ಆಹ್ವಾನ ನೀಡುತ್ತಿದ್ದಾರೆ.
ಹೇಗಿದೆ ವಾಟ್ಸ್‌ಆಯಪ್‌ ಓಲೆ?: “ಸರಸ್ವತಿ ಎನ್ನುವವರೊಂದಿಗೆ ನನ್ನ ವಿವಾಹ ನಡೆಯಲಿದೆ. ಈ ವಿಷಯವನ್ನು ತಮ್ಮ “ಮಾಹಿತಿಗಾಗಿ’ ತಿಳಿಸುವುದಕ್ಕೆ ನನ್ನ ಮನಸ್ಸು ನಿರಾಕರಿಸುತ್ತಿದೆ.ಕೋವಿಡ್ ಹಿನ್ನೆಲೆಯಲ್ಲಿ ನನ್ನ ಬಂಧು- ಬಾಂಧವರನ್ನು ಮತ್ತು ಆತ್ಮೀಯರನ್ನು ಆಹ್ವಾನಿಸುವುದು ಕಷ್ಟಸಾಧ್ಯವಾಗುತ್ತಿದೆ. ಕ್ಷಮೆ ಇರಲಿ. ತಾವೆಲ್ಲ ಪರಿಸ್ಥಿತಿಯನ್ನು ಅರಿತುಕೊಂಡು ಮೇ 10 ರಂದು ಭಾನುವಾರ ನಡೆಯಲಿರುವ ನನ್ನ ಮದುವೆಗೆ ತಾವೆಲ್ಲರೂ ತಮ್ಮ ಮನೆಯಿಂದಲೇ ಆಶೀರ್ವದಿಸಬೇಕು ಎಂದು ತುಂಬು ಹೃದಯದಿಂದ ವಿನಂತಿಸುತ್ತೇನೆ. ಮುಂದಿನ ದಿನಗಳಲ್ಲಿ ನಾವೇ ತಮ್ಮ ಮನೆಗಳಿಗೆ ಆಗಮಿಸಿ ತಮ್ಮ ಆಶೀರ್ವಾದ ಪಡೆಯುತ್ತೇವೆ’ ಎಂದವರು ಕೋರಿದ್ದಾರೆ. ಜತೆಗೆ ಮನೆಯಲ್ಲೇ ಇರಿ, ಮಾಸ್ಕ್ ಧರಿಸಿ ಸಂಚರಿಸಿ, ಕೋವಿಡ್ ಓಡಿಸಿ ಎಂಬ ಸಂದೇಶದ ಜತೆಗೆ ಕೋವಿಡ್ ನಿಯಂತ್ರಣ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.
(ಮಾಹಿತಿ ಕೃಪೆ ಉದಯವಾಣಿ 9/05/2020)