'ದಬಾಂಗ್' ಚಿತ್ರದ ಖಳನಟ ಸೋನು ಸೂದ್ ತಾವು ನಿಜ ಜೀವನದಲ್ಲಿ ನಾಯಕ ಎಂಬುದನ್ನು ನಿರೂಪಿಸಿದ್ದಾರೆ. ಹೌದು, ಸೋನು ಸೂದ್ ಲಾಕ್ ಡೌನ್ ಕಾರಣಕ್ಕಾಗಿ ಮುಂಬೈನ ಥಾಣೆಯಲ್ಲಿ ಸಿಲುಕಿಕೊಂಡಿದ್ದ ಗುಲ್ಬರ್ಗಾ ಮೂಲದ ಕೂಲಿ ಕಾರ್ಮಿಕರು ವಾಪಸ್ ತಮ್ಮ ಊರಿಗೆ ಮರಳಲು 10 ಬಸ್ ಗಳನ್ನು ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.
ಅಷ್ಟೇ ಅಲ್ಲ, ಪ್ರಯಾಣದ ವೇಳೆ ಈ ವಲಸೆ ಕಾರ್ಮಿಕರಿಗೆ ಆಹಾರಕ್ಕೆ ಕೊರತೆಯಾಗಬಾರದೆಂದು, ಆಹಾರದ ಕಿಟ್ ಗಳನ್ನು ಸಹ ನೀಡಿದ್ದಾರೆ. ಬಸ್ ವ್ಯವಸ್ಥೆ ಮಾಡುವ ಮುನ್ನ ಸೋನು ಸೂದ್ ಕರ್ನಾಟಕ ಹಾಗೂ ಮಹಾರಾಷ್ಟ್ರ ಸರ್ಕಾರದ ಅನುಮತಿ ಪಡೆದುಕೊಂಡಿದ್ದಾರೆ.
ಕೊರೊನಾ ಸಂಕಷ್ಟದ ಈ ಸಮಯದಲ್ಲಿ ಸೋನು ಸೂದ್ ಬಡ ಜನರ ಸಂಕಷ್ಟಕ್ಕೆ ಮಿಡಿಯುತ್ತಿದ್ದು, ಭಿವಂಡಿ ಪ್ರದೇಶದಲ್ಲಿ ನೆಲೆಸಿರುವ ವಲಸೆ ಕಾರ್ಮಿಕರಿಗೆ ಆಹಾರದ ಕಿಟ್ ವಿತರಿಸಿದ್ದರು.ಅಲ್ಲದೆ ಮುಂಬೈನ ತಮ್ಮ ಹೋಟೆಲ್ ನಲ್ಲಿ ಆರೋಗ್ಯ ಕಾರ್ಯಕರ್ತರ ವಸತಿಗೆ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಜೊತೆಗೆ ಪಂಜಾಬ್ ವೈದ್ಯರಿಗೆ 1500 ಪಿಪಿಇ ಕಿಟ್ ನೀಡಿದ್ದಾರೆ.
ಜೀವನೋಪಾಯಕ್ಕಾಗಿ ವಲಸೆ ಬಂದಿರುವ ಕಾರ್ಮಿಕರು ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ತಮ್ಮ ಕುಟುಂಬಸ್ಥರು ಹಾಗೂ ಪ್ರೀತಿಪಾತ್ರರೊಂದಿಗೆ ಇರುವ ಅಗತ್ಯವಿದೆ. ಹೀಗಾಗಿಯೇ ಅವರುಗಳಿಗೆ ಬಸ್ ವ್ಯವಸ್ಥೆ ಮಾಡಿಕೊಟ್ಟಿದ್ದು, ಮುಂದಿನ ದಿನಗಳಲ್ಲಿ ಇತರ ರಾಜ್ಯದ ವಲಸೆ ಕಾರ್ಮಿಕರಿಗೂ ವಾಪಸ್ ತೆರಳಲು ವ್ಯವಸ್ಥೆ ಮಾಡುವುದಾಗಿ ಸೋನು ಸೂದ್ ತಿಳಿಸಿದ್ದಾರೆ.
(ಮಾಹಿತಿ ಕೃಪೆ ಕನ್ನಡದುನಿಯಾ....)
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ