ಕೊರೊನಾ ವೈರಸ್ ಲಾಕ್ ಡೌನ್ ನಂತ್ರ ತಮ್ಮ ಗ್ರಾಮ ತಲುಪಿದ ಅನೇಕ ಯುವಕರು ಮತ್ತೆ ನಗರಕ್ಕೆ ಬರಲು ಮನಸ್ಸು ಮಾಡ್ತಿಲ್ಲ. ಅವರು ಹಳ್ಳಿಗಳಲ್ಲಿ ಸೂಕ್ತ ಉದ್ಯೋಗವನ್ನು ಹುಡುಕುತ್ತಿದ್ದಾರೆ. ಅಂತಹ ಯುವಕರಿಗೆ ಮಣ್ಣಿನ ಆರೋಗ್ಯ ಕಾರ್ಡ್ ಯೋಜನೆ ಹೆಚ್ಚು ಪ್ರಯೋಜನಕಾರಿಯಾಗಿದೆ.
ಗ್ರಾಮ ಮಟ್ಟದಲ್ಲಿ ಮಿನಿ ಮಣ್ಣು ಪರೀಕ್ಷಾ ಪ್ರಯೋಗಾಲಯವನ್ನು ಸ್ಥಾಪಿಸುವ ಮೂಲಕ ಆದಾಯವನ್ನು ಗಳಿಸಬಹುದು. ಇದು ಭಾರತದ ಗ್ರಾಮೀಣ ಯುವಕರಿಗೆ ಉದ್ಯೋಗವನ್ನು ಒದಗಿಸುತ್ತದೆ. ಲ್ಯಾಬ್ ನಿರ್ಮಿಸಲು 5 ಲಕ್ಷ ರೂಪಾಯಿ ಖರ್ಚಾಗುತ್ತದೆ. ಸರ್ಕಾರ ಶೇಕಡಾ 75 ರಷ್ಟು ಅಂದರೆ 3.75 ಲಕ್ಷ ನೀಡುತ್ತದೆ. ಪ್ರಸ್ತುತ ದೇಶದ ರೈತ ಕುಟುಂಬಗಳ ಸಂಖ್ಯೆಗೆ ಹೋಲಿಸಿದರೆ ಲ್ಯಾಬ್‌ಗಳು ತೀರಾ ಕಡಿಮೆ. ಆದ್ದರಿಂದ ಅದರಲ್ಲಿ ಉದ್ಯೋಗದ ದೊಡ್ಡ ಅವಕಾಶವಿದೆ.
ಕೇಂದ್ರ ಕೃಷಿ ಸಚಿವಾಲಯದ ಈ ಯೋಜನೆಯಡಿ 18 ರಿಂದ 40 ವರ್ಷದ ಗ್ರಾಮೀಣ ಯುವಕರು ಲ್ಯಾಬ್ ಶುರು ಮಾಡಬಹುದು.ಮಣ್ಣಿನ ಪೋಷಕಾಂಶಗಳ ಕೊರತೆಯನ್ನು ಸುಧಾರಿಸಲು ಇದು ನೆರವಾಗುತ್ತದೆ. ಮಣ್ಣಿನ ಮಾದರಿ, ಪರೀಕ್ಷೆ ಮತ್ತು ಮಣ್ಣಿನ ಆರೋಗ್ಯ ಕಾರ್ಡ್ ಒದಗಿಸಲು ಸರ್ಕಾರವು ಪ್ರತಿ ಸ್ಯಾಂಪಲ್‌ಗೆ 300 ರೂಪಾಯಿ ನಿಗದಿಪಡಿಸಿದೆ. ಮಣ್ಣಿನ ಪರೀಕ್ಷೆಯ ಕೊರತೆಯಿಂದಾಗಿ ಯಾವ ಪ್ರಮಾಣದಲ್ಲಿ ಗೊಬ್ಬರವನ್ನು ಸೇರಿಸಬೇಕೆಂದು ರೈತರಿಗೆ ತಿಳಿದಿಲ್ಲ. ಲ್ಯಾಬ್ ನಿಂದ ರೈತರಿಗೆ ಇದ್ರ ಲಾಭ ಸಿಗಲಿದೆ. agricoop.nic.in ಮತ್ತು Dac.gov.in ನಲ್ಲಿ ಹೆಚ್ಚಿನ ಮಾಹಿತಿ ಲಭ್ಯವಿದೆ. 1800-180-1551 ನಂಬರ್ ಗೆ ಕರೆ ಮಾಡಿ ಮಾಹಿತಿ ಪಡೆಯಬಹುದು.
(ಮಾಹಿತಿ ಕೃಪೆ ಕನ್ನಡ ದುನಿಯಾ....)
(ಮಾಹಿತಿ ಕೃಪೆ ಕನ್ನಡ ದುನಿಯಾ....)
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ