I have shared in the popular news in dodmane photo studio uploaded in Bairava in all posted by all news papers in online upded news in kannada....
Contact number 9844043679
ಫೇಸ್ ಮಾಸ್ಕ್ ಎಂಬ ಸಾಧನ ಕೆಲವಾರು ವರ್ಷಗಳಿಂದಲೂ ಬಳಕೆಯಲ್ಲಿದ್ದರೂ ಇದಕ್ಕೆ
ಅಪಾರವಾದ ಪ್ರಾಮುಖ್ಯತೆ ಲಭಿಸಿದ್ದು ಕೋವಿಡ್ ಸಾಂಕ್ರಾಮಿಕ ರೋಗದ ಕಾರಣದಿಂದ. ಇದಕ್ಕೆ
ಕನ್ನಡದ ಹೆಸರು ಹೇಗಿರಬಹುದು? ವಿವಿಧ ಮಾಧ್ಯಮಗಳು ಬೇರೆ ಬೇರೆ ಹೆಸರಿನಿಂದ
ಕರೆಯುತ್ತಿವೆ. ಕೆಲವು 'ಮುಖ ಗುರಾಣಿ' ಎಂದು ಕರೆದರೆ, ಕೆಲವು 'ಮುಖ ಪಟ್ಟಿ','ಮುಖದ
ಮಾಸ್ಕ್' ಎಂದೆಲ್ಲಾ ಕರೆಯುತ್ತಿವೆ. ವಾಸ್ತವದಲ್ಲಿ, ಇಂದು ನಮ್ಮ ಉಡುಗೆಯ ಅವಿಭಾಜ್ಯ
ಅಂಗವಾಗಿರುವ ಈ ಮುಖಗುರಾಣಿ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಯೊಬ್ಬರೂ ಧರಿಸಲೇಬೇಕಾದ
ಅಗತ್ಯವಸ್ತುವೂ ಆಗಿದೆ. ಇವುಗಳಲ್ಲಿ ಕೆಲವಾರು ವಿಧಗಳ ಮುಖಗುರಾಣಿಗಳಿವೆ.
ಭಾರೀ ಬೇಡಿಕೆಯ ಅಂಗವಾಗಿ ಮಾರುಕಟ್ಟೆಯಲ್ಲಿ ಎದುರಾಗಿರುವ ಕೊರತೆಯಿಂದಾಗಿ ನಮ್ಮ
ಗುರಾಣಿಗಳನ್ನು ನಾವೇ ಮಾಡಿಕೊಳ್ಳುವಂತೆ ಸಲಹೆಯನ್ನೂ ಮಾಡಲಾಗುತ್ತಿದೆ. ಡಾ. ದೇವಿ
ಶೆಟ್ಟಿಯವರೂ 'ಸರ್ಜಿಕಲ್ ಮಾಸ್ಕ್' ಎಂಬ ಮುಖಗುರಾಣಿಯನ್ನು ಸಾರ್ವಜನಿಕರು ಕೊಳ್ಳದೇ
ವೃತ್ತಿಪರರಿಗೆ ದೊರಕುವಂತಾಗುವಂತೆ ಮಾಧ್ಯಮಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ಹಾಗಾಗಿ
ಅನಿವಾರ್ಯವಾಗಿರುವ ಮುಖ ಗುರಾಣಿಯನ್ನು ಧರಿಸಬೇಕಾದರೆ ಸರಿಯಾದ ಕ್ರಮವನ್ನು ಮತ್ತು
ಸರಿಯಾದ ಸಾಮಾಗ್ರಿಯಿಂದ ತಯಾರಿಸಲ್ಪಟ್ಟ ಉತ್ಪನ್ನವನ್ನೇ ಆಯ್ದುಕೊಳ್ಳುವುದು
ಅಗತ್ಯವಾಗಿದೆ.
ನಮಗರಿವಿಲ್ಲದಂತೆಯೇ ನಾವು ತಪ್ಪಾದ ಉತ್ಪನ್ನ ಅಥವಾ ತಪ್ಪಾದ ರೀತಿಯಲ್ಲಿ ಈ ಸಾಧನಗಳನ್ನು
ಬಳಸುತ್ತಿದ್ದಿರಬಹುದು. ಇಂದಿನ ಲೇಖನದಲ್ಲಿ ಈ ತಪ್ಪುಗಳ ಬಗ್ಗೆ ಪ್ರತಿಯೊಬ್ಬರೂ
ಅರಿತಿರಬೇಕಾದ ಮಾಹಿತಿಗಳನ್ನು ಒದಗಿಸಲಾಗಿದೆ. ಇಂದಿನ ಲೇಖನದ ವ್ಯಾಪ್ತಿಯಲ್ಲಿ ಈ ಮಾಸ್ಕ್
ಅನ್ನು ಮುಖಗುರಾಣಿ ಎಂದೇ ಕರೆಯಲಾಗಿದೆ.
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ