ಬೇಸಿಗೆಯಲ್ಲಿ ದಿನಕ್ಕೊಂದು ಎಳನೀರು ಕುಡಿಯುವುದರಿಂದ ದೇಹ ಡಿಹೈಡ್ರೇಷನ್ ಆಗುವುದನ್ನು ತಪ್ಪಿಸಬಹುದು.
ಎಳನೀರಿನಲ್ಲಿ ರೋಗ ನಿರೋಧಕ ಅಂಶಗಳಿದ್ದು, ಜ್ವರ ಮತ್ತಿತರ ವೈರಲ್ ಸೋಂಕಿನ ಸಮಸ್ಯೆಗಳಿಗೆ ಪರಿಹಾರವಾಗಿದೆ. ಇನ್ನು ಇದರಲ್ಲಿ ವಿಟಮಿನ್-ಸಿ ಹೇರಳವಾಗಿದ್ದು, ಪೊಟ್ಯಾಸಿಯಂ ಹಾಗೂ ಮೆಗ್ನೀಸಿಯಂ ರಕ್ತದೊತ್ತಡವನ್ನು ನಿಯಂತ್ರಿಸುತ್ತವೆ.
ನಿಯಮಿತವಾಗಿ ಎಳನೀರು ಕುಡಿಯುವುದರಿಂದ ದೇಹ ತೂಕ ಕಡಿಮೆ ಮಾಡಿಕೊಳ್ಳುವ ಜೊತೆಗೆ ದೇಹದ ಉಷ್ಣ ಸಂಬಂಧಿ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಬಹುದು.
* *****
ಎಳನೀರು ಒಂದು ಜನಪ್ರಿಯ ನೈಸರ್ಗಿಕ ಪಾನೀಯವಾಗಿದ್ದು ಜಗತ್ತಿನಾದ್ಯಂತ ಹೆಚ್ಚಿನ
ಜನರು ಇದನ್ನು ಕುಡಿಯುತ್ತಾರೆ. ಎಲ್ಲಾ ಊರುಗಳಲ್ಲಿಯೂ ಎಳನೀರು ದೊರೆಯುತ್ತದೆ. ಮತ್ತು
ಇದು ಕಡಿಮೆ ವೆಚ್ಚದಲ್ಲಿ ದೊರೆಯುವ ಎಳನೀರು ದೈಹಿಕವಾಗಿ ಮತ್ತು ಮಾನಸಿಕವಾಗಿ ಅತ್ಯುತ್ತಮ
ಪಾನೀಯವಾಗಿದೆ.
ಹಿಂದಿನ ಕಾಲದಿಂದಲೂ ಅನೇಕ ಆರೋಗ್ಯ ಸಮಸ್ಯೆಗಳನ್ನು ದೂರ ಮಾಡಿರುವ ಎಳನೀರು ವೈದ್ಯಕೀಯ
ರಂಗದಲ್ಲೂ ತನ್ನ ಕರಾಮತ್ತನ್ನು ಪ್ರದರ್ಶಿಸಿರುವಂಥದ್ದಾಗಿದೆ. ಎಳನೀರು ಕಡಿಮೆ ಪ್ರಮಾಣದ
ಸಕ್ಕರೆ ಅಂಶವನ್ನು ಒಳಗೊಂಡಿರುವುದರಿಂದ ಸೋಡಾ ಮತ್ತು ಕೆಲವೊಂದು ಹಣ್ಣುಗಳ ರಸಕ್ಕಿಂತಲೂ
ಇದು ಉತ್ತಮವಾಗಿದೆ. ಪಾನೀಯವನ್ನು ಎದುರು ನೋಡುತ್ತಿರುವ ಮಕ್ಕಳು ಮತ್ತು ಹಿರಿಯರಿಗೆ
ಹೆಚ್ಚು ಉಪಯುಕ್ತವಾಗಿರುವ ಎಳನೀರು ನಮ್ಮ ದೇಹದಲ್ಲಿರುವ ನಿರ್ಜಲೀಕರಣದ ಸಮಸ್ಯೆಯನ್ನು
ದೂರ ಮಾಡುತ್ತದೆ.
ಎಳನೀರಿನ ಪ್ರಾಮುಖ್ಯತೆಯನ್ನು ಒಮ್ಮೆ ನೀವು ಅರಿತುಕೊಂಡರೆ ನೀವು ಅದನ್ನು ಸೇವಿಸದೇ
ಬಿಡಲಾರಿರಿ ಆದ್ದರಿಂದಲೇ ಇಂದಿನ ಲೇಖನದಲ್ಲಿ ಎಳನೀರಿನ ಆರೋಗ್ಯಕಾರಿ ಮಹತ್ವವನ್ನು ಇಲ್ಲಿ
ತಿಳಿಸಿಕೊಡುತ್ತಿದ್ದೇವೆ. ನಿಮ್ಮ ಸೌಂದರ್ಯವನ್ನು ವರ್ಧಿಸುವುದರ ಜೊತೆಗೆ ನಿಮ್ಮ
ಆರೋಗ್ಯವನ್ನೂ ವೃದ್ಧಿಸುತ್ತದೆ.
ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗುವ ಕೊಬ್ಬು ಮತ್ತು ಅರ್ಥರೋಜನಿಕ್‌ನ್ನು
ನಿಯಂತ್ರಿಸುವ ಎಲ್-ಆರ್ಗನೈನ್ ಎಳನೀರಿನಲ್ಲಿ ಯಥೇತ್ಛವಾಗಿ ಇದೆ. ಎಳನೀರು ಸೇವನೆಯಿಂದ
ಚರ್ಮ ಕಾಂತಿಯುಕ್ತವಾಗುತ್ತದೆ. ದೇಹವನ್ನು ತಂಪಾಗಿಡುವುದರೊಂದಿಗೆ ದೇಹದ ಉಷ್ಣತೆ ಮತ್ತು
ಬೇಸಗೆಯಲ್ಲಿ ಉಷ್ಣ ಶರೀರದವರಿಗೆ ಕಾಣಿಸಿಕೊಳ್ಳುವ ಗುಳ್ಳೆ ನಿಯಂತ್ರಿಸುದಲ್ಲದೆ,
ಅಲ್ಲದೆ ಇತ್ಯಾದಿ ಚರ್ಮ ಸಂಬಂಧಿ ಕಾಯಿಲೆಗಳಲ್ಲಿ ದೇಹದ ಮೇಲೆ ಮೂಡುವ ಕೆಂಪು
ಗುಳ್ಳೆಗಳನ್ನು ಎಳನೀರು ಸೇವನೆ ತಡೆಯುತ್ತದೆ.
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ