WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Saturday, September 26, 2020

ನಟ ಶರಣ್ ಆರೋಗ್ಯದ ಬಗ್ಗೆ ವೈದ್ಯರು ಹೇಳಿದ್ದೇನು ಗೊತ್ತಾ.? ಇಲ್ಲಿದೆ ಸಹೋದರಿ ಶ್ರುತಿ ನೀಡಿದ ಮಾಹಿತಿ

 

ಸ್ಯಾಂಡಲ್ ವುಡ್ ನಟ ಶರಣ್ ಆರೋಗ್ಯದ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಟಿ ಶ್ರುತಿ, ಅಣ್ಣನ ಆರೋಗ್ಯದಲ್ಲಿ ದೊಡ್ಡ ಸಮಸ್ಯೆಯೇನೂ ಆಗಿಲ್ಲ, ಕಿಡ್ನಿಯಲ್ಲಿ ಸ್ಟೋನ್ ಇರುವುದಾಗಿ ವೈದ್ಯರು ತಿಳಿಸಿದ್ದಾರೆ ಎಂದು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ನಟಿ ಶ್ರುತಿ, ಕಳೆದ ಎರಡು ದಿನಗಳಿಂದ ಶರಣ್ ಗೆ ಹೋಟ್ಟೆ ನೋವು ಕಾಣಿಸಿಕೊಂಡಿತ್ತು. ಸಿನಿಮಾ ಚಿತ್ರೀಕರಣಕ್ಕೆ ಅಡ್ಡಿಯಾಗಬಾರದು ಎಂಬ ಕಾರಣದಿಂದಾಗಿ ಆತ ನೋವು ತಡೆದುಕೊಂಡಿದ್ದ. ಇಂದು ಶೂಟಿಂಗ್ ವೇಳೆ ನೋವು ಹೆಚ್ಚಾಗಿದೆ. ಹೀಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದಾರೆ.

ವೈದ್ಯರು ಶರಣ್ ಗೆ ಕಿಡ್ನಿಯಲ್ಲಿ ಸ್ಟೋನ್ ಇದೆ ಎಂದಿದ್ದಾರೆ. ಚಿಕಿತ್ಸೆ ಬಳಿಕ ನಾಳೆ ವಾಪಸ್ ಮನೆಗೆ ಬರುತ್ತಾನೆ. ಯಾವುದೇ ಸಮಸ್ಯೆಯೂ ಆತನಿಗೆ ಇಲ್ಲ ಎಂದು ಹೇಳಿದ್ದಾರೆ.

ಸಿಂಪಲ್ ಸುನಿ ನಿರ್ದೇಶನದ ʼಅವತಾರ ಪುರುಷʼ ಚಿತ್ರದ ಶೂಟಿಂಗ್ ನಡೆಯುತ್ತಿದ್ದು, ಈ ವೇಳೆ ಇಂದು ನಟ ಶರಣ್ ಅವರಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

(ಮಾಹಿತಿ ಕೃಪೆ ಕನ್ನಡ ದುನಿಯಾ)

ಚಿತ್ರೀಕರಣದ ವೇಳೆ ಅನಾರೋಗ್ಯ: ಸ್ಯಾಂಡಲ್ ವುಡ್ ನಟ ಶರಣ್ ಆಸ್ಪತ್ರೆಗೆ ದಾಖಲು

 

 

ಬೆಂಗಳೂರು: ಸ್ಯಾಂಡಲ್ ವುಡ್ ನಟ ಶರಣ್ ಅವರಿಗೆ ಅನಾರೋಗ್ಯ ಕಾಣಿಸಿಕೊಂಡ ಹಿನ್ನಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಚಿತ್ರೀಕರಣದಲ್ಲಿ ಭಾಗವಹಿಸಿದ್ದ ಶರಣ್ ಅವರಿಗೆ ಸೆಟ್ ನಲ್ಲಿ ಅನಾರೋಗ್ಯ ಕಾಣಿಸಿಕೊಂಡಿದೆ. ಹೀಗಾಗಿ ಅವರನ್ನು ನಗರದ ಮಲ್ಲಿಗೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

 
  
ಶರಣ್ ಅವರು ಸಿಂಪಲ್ ಸುನಿ ನಿರ್ದೇಶನದ ಅವತಾರ್ ಪುರುಷ ಚಿತ್ರದ ಶೂಟಿಂಗ್ ನಲ್ಲಿ ಭಾಗವಹಿಸಿದ್ದರು. ಈ ವೇಳೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

BREAKING: ಕರ್ನಾಟಕ ಭೂಸುಧಾರಣೆಗಳ ತಿದ್ದುಪಡಿ ವಿಧೇಯಕ ಅಂಗೀಕಾರ!

 

 

ಬೆಂಗಳೂರು, ಸೆ. 26: ತೀವ್ರ ವಿವಾದಕ್ಕೆ ಕಾರಣವಾಗಿದ್ದ ಕರ್ನಾಟಕ ಭೂಸುಧಾರಣೆಗಳ ತಿದ್ದುಪಡಿ ವಿಧೇಯಕ ಅಂಗೀಕಾರವಾಗಿದೆ. ಕಾಂಗ್ರೆಸ್ ಪಕ್ಷದ ಸದಸ್ಯರ ತೀವ್ರ ವಿರೋಧದ ಮಧ್ಯೆಯೇ ವಿಧೇಯಕ ವಿಧಾನಸಭೆಯಲ್ಲಿ ಅಂಗೀಕಾರವಾಯಿತು. ಅದಕ್ಕೂ ಮೊದಲು ಸುದೀರ್ಘ ಚರ್ಚೆ ವಿಧೇಯಕದ ಮೇಲೆ ನಡೆಯಿತು. ಒಂದಿಷ್ಟು ತಿದ್ದುಪಡಿಗಳಿಗೆ ಸರ್ಕಾರ ಒಪ್ಪಿದ್ದು ವಿಶೇಷ.

ವಿಧೇಯಕದ ಪ್ರಕಾರ ಇನ್ನುಮುಂದೆ ಯಾರು ಬೇಕಾದರೂ ಕೃಷಿ ಜಮೀನು ಖರೀದಿ ಮಾಡಬಹುದು. ಇಲ್ಲಿಯವರೆಗೆ ಕೃಷಿಕರು ಮಾತ್ರ ಕೃಷಿ ಜಮೀನು ಖರೀದಿ ಮಾಡಲು ಅವಕಾಶವಿತ್ತು. ಕೃಷಿಯೇತರರಿಗೂ ಕೃಷಿ ಭೂಮಿ ಖರೀದಿಗೆ ಅವಕಾಶ ಕೊಡುವುದರಿಂದ ಕೆಟ್ಟ ಪರಿಣಾಮಗಳಾಗುತ್ತವೆ ಎಂಬುದು ಸೇರಿದಂತೆ ಹಲವು ತಿದ್ದುಪಡಿಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿತ್ತು.

ಈ ಹೊಸ ತಿದ್ದುಪಡಿಯಲ್ಲಿ ನೀರಾವರಿ ಪ್ರದೇಶದಲ್ಲಿ ಖರೀದಿ ಮಾಡುವ ಜಮೀನು ಕೃಷಿಗೆ ಮಾತ್ರ ಬಳಕೆಯಾಗಬೇಕು ಎಂಬುದನ್ನು ಸೇರಿಸಲಾಗಿದೆ. ಜೊತೆಗೆ 5 ಜನರಿರುವ ಒಂದು ಕುಟುಂಬ ಗರಿಷ್ಠ 54 ಎಕರೆ ಕೃಷಿ ಜಮೀನು ಖರೀದಿಗೆ ಅವಕಾಶ ಮಾಡಿಕೊಡಲಾಗಿದೆ. 5ಕ್ಕಿಂತ ಹೆಚ್ಚು ಇರುವ ಕುಟುಂಬ ಗರಿಷ್ಠ 108 ಎಕರೆ ಜಮೀನು ಖರೀದಿ ಮಾಡಬಹುದು. ಕೃಷಿ ಜಮೀನು ಖರೀದಿಸಲು ಈ ಹಿಂದೆ ಇದ್ದ 25 ಲಕ್ಷ ರೂ ವಾರ್ಷಿಕ ಆದಾಯ ಮಿತಿ ರದ್ದು ಮಾಡಿರುವುದಕ್ಕೂ ರೈತ ಸಂಘಟನೆಗಳು ಹಾಗೂ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದವು.

   

ಕರ್ನಾಟಕ ಭೂಸುಧಾರಣೆಗಳ ತಿದ್ದುಪಡಿ ವಿಧೇಯಕದ ಕುರಿತು ಚರ್ಚೆ ಸಂದರ್ಭದಲ್ಲಿ ಕಂದಾಯ ಸಚಿವ ಆರ್ ಅಶೋಕ್ ಅವರು ವಿಧೇಯಕವನ್ನು ಸಮರ್ಥಿಸಿಕೊಂಡರು. ಭೂಕಂದಾಯ ಕಾಯ್ದೆ 79 ಎ ತಿದ್ದುಪಡಿ ಮಾಡಲು ಪ್ರೊ. ನಂಜುಂಡಸ್ವಾಮಿ ಅವರೇ ಹೇಳಿದ್ದರು. ಹಿಂದೆ ವಿಧಾನಸಭೆ ಕಲಾಪದಲ್ಲೇ ರೈತ ನಾಯಕ ನಂಜುಂಡಸ್ವಾಮಿ ಕಾಯ್ದೆ ಬದಲಾವಣೆಗೆ ಒತ್ತಾಯಿಸಿದ್ದರು. ಈಗ ಕಾಂಗ್ರೆಸ್ ನಲ್ಲಿರುವ ಆರ್ ವಿ ದೇಶಪಾಂಡೆ ಅವರೂ ಕಾಯ್ದೆ ಬದಲಾವಣೆಗೆ ಒತ್ತಾಯ ಮಾಡಿದ್ದರು. ಕಾಯ್ದೆ ಬದಲಾವಣೆಗೆ ಕಾಂಗ್ರೆಸ್ ನಾಯಕರೇ ಒತ್ತಾಯ ಮಾಡಿ ಈಗ ಉಲ್ಟಾ ಮಾತಾಡ್ತಿದ್ದಾರೆ. ಈಗ ಕಾಂಗ್ರೆಸ್ ಅಧ್ಯಕ್ಷರಾಗಿರುವವರು ಈ ಹಿಂದೆ ಕಾಯ್ದೆ ಬದಲಾವಣೆ ಮಾಡಲು ಒತ್ತಾಯ ಮಾಡಿದ್ದರು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಮೇಲೆ ಅಶೋಕ್ ವಾಗ್ದಾಳಿ ಮಾಡಿದರು.

ಕನಕಪುರ ರಸ್ತೆಯಲ್ಲಿ ರವಿಶಂಕರ್ ಗುರೂಜಿಯವರು ಜಮೀನು ಪಡೆಯಲು ಸಾಧ್ಯವಾಗಲಿಲ್ಲ. ತಮ್ಮ ಸಿಬ್ಬಂದಿಯ ಮೂಲಕ ಜಮೀನು ಖರೀದಿಸಬೇಕಾಯ್ತು ಅಂತ ಹೇಳಿದ್ದರು. ಪರೋಕ್ಷವಾಗಿ ಕಾಯ್ದೆ ಬಗ್ಗೆ ಬದಲಾವಣೆ ಮಾಡಲು ಒತ್ತಾಯಿಸಿದ್ದರು ಎಂದು ಡಿ.ಕೆ.ಶಿವಕುಮಾರ್ ವಿರುದ್ಧ ಕಂದಾಯ ಸಚಿವ ಆರ್. ಅಶೋಕ್ ಅವರು ವಾಗ್ದಾಳಿ ಮಾಡಿದರು.

 

Friday, September 25, 2020

ಫಲಿಸದ ಅಭಿಮಾನಿಗಳ ಹಾರೈಕೆ ; ಗಾನ ನಿಧಿ ಎಸ್.ಪಿ. ಬಾಲಸುಬ್ರಮಣ್ಯಂ ಸ್ವರ ಲೀನ


 

ಚೆನ್ನೈ: ಆ ಧ್ವನಿ ಬದುಕುಳಿಯಬೇಕೆಂದು ಕಳೆದ ಒಂದು ತಿಂಗಳುಗಳಿಂದ ಕೋಟ್ಯಂತರ ಸಂಗೀತ ಪ್ರೇಮಿಗಳು ನಿರಂತರವಾಗಿ ಪ್ರಾರ್ಥಿಸುತ್ತಲೇ ಇದ್ದರು. ಆ ಜೀವವೂ ಕಳೆದೊಂದು ತಿಂಗಳಿನಿಂದ ಆಸ್ಪತ್ರೆಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿ ಹೋರಾಡುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಗಾಯನ ಲೋಕದ ಮೇರು ಪ್ರತಿಭೆ ಎಸ್. ಪಿ ಬಾಲಸುಬ್ರಹ್ಮಣ್ಯಂ ಇಂದು ಮಧ್ಯಾಹ್ನ ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ವಿವಿಧ ಭಾಷೆಯ ಸುಮಾರು ನಲವತ್ತು ಸಹಸ್ರಕ್ಕೂ ಹೆಚ್ಚು ಹಾಡುಗಳಿಗೆ ಧ್ವನಿಯಾಗಿದ್ದ ಆ ಕಂಠ ಕೋವಿಡ್ ಎಂಬ ಮಹಾಮಾರಿಯ ಕಪಿಮುಷ್ಠಿಗೆ ಸಿಲುಕಿ ವಿವಿಧ ರೀತಿಯ ನಳಿಕೆಗಳನ್ನು ತೂರಿಸಿಕೊಂಡು ಆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ನಿಶ್ಚೇತನವಾಗಿ ಮಲಗಿದ್ದರೆ, ಇತ್ತ ಅದನ್ನು ಊಹಿಸಿಕೊಳ್ಳಲೂ ಆಗದ ಸಂಕಟ ಆ ಧ್ವನಿಯನ್ನು ಹಾಗೂ ಸದಾ ನಗುಮೊಗದ, ಮಗು ಮನಸ್ಸಿನ ಆ ವ್ಯಕ್ತಿಯನ್ನು ಪ್ರೀತಿಸುವವರದ್ದಾಗಿತ್ತು.

ಆದರೆ, ಕಾಲನ ಕರೆಗೆ ಇದ್ಯಾವುದೂ ನಾಟಲೇ ಇಲ್ಲ. 'ಕಣ್ಣಿಗೆ ಕಾಣದ ನಾಟಕಕಾರ' ಈ ಜಗತ್ತಿನ ಜೊತೆಗಿನ ಅವರ 'ಬಂಧನ'ನವನ್ನು ಕಳಚಿ SPB ಎಂಬ ಸ್ವರ ಮಾಂತ್ರಿಕನ ಪ್ರಾಣವನ್ನು ಕಸಿದುಕೊಂಡು ಹೋಗಿಯೇ ಬಿಟ್ಟ. ಅಲ್ಲಿಗೆ, 'ಪ್ರೇಮದಾ ಕಾದಂಬರಿ ಬರೆದನು ಕಣ್ಣೀರಲಿ..' ಎಂದು ಭಾವ ತುಂಬಿ ಹಾಡಿದಾತ 'ಕಥೆಯು ಮುಗಿದೇ ಹೋದರೂ ಮುಗಿಯದಿರಲೀ ಬಂಧನ.' ಎಂದು ಹೇಳಿ ಹೊರಟೇ ಬಿಟ್ಟಿದ್ದಾರೆ.! ಅವರನ್ನು ಪ್ರೀತಿಸುತ್ತಿದ್ದ ಅವರ ಧ್ವನಿಗೆ ಮಾರು ಹೋಗಿದ್ದ ಹೃದಯಗಳು ಮಾತ್ರ ಇಲ್ಲಿ 'ಆದ್ರವಾಗಿವೆ'!

ಹೌದು, ಶ್ರೀಪತಿ ಪಂಡಿತಾರಾದ್ಯಲು ಬಾಲಸುಬ್ರಹ್ಮಣ್ಯಂ, ಎಸ್.ಪಿ. ಬಾಲಸುಬ್ರಹ್ಮಣ್ಯಂ, ಎಸ್.ಪಿ.ಬಿ. ಎಂಬ ಸ್ವರ ಮಾಂತ್ರಿಕ, ಗಾನ ಗಾರುಡಿ ಇನ್ನು ನೆನಪು ಮಾತ್ರ.

ಕೋವಿಡ್ 19 ಸೋಂಕಿನ ಕಾರಣದಿಂದ ವೈದ್ಯರ ಸಲಹೆ ಮೇರೆಗೆ ಆಗಸ್ಟ್ ಪ್ರಥಮ ವಾರದಲ್ಲಿ ಚೆನ್ನೈನ ಎಂ.ಜಿ.ಎಂ. ಹೆಲ್ತ್ ಕೇರ್ ಆಸ್ಪತ್ರೆಗೆ ದಾಖಲಾಗಿದ್ದ ಎಸ್.ಪಿ.ಬಿ., ಗುಣಮುಖರಾಗಿ ಅಲ್ಲಿಂದ ಶೀಘ್ರವೇ ಮರಳುವ ವಿಶ್ವಾಸವನ್ನು ತನ್ನ ಕೊನೆಯ ವಿಡಿಯೋ ಸಂದೇಶದಲ್ಲಿ ಹಂಚಿಕೊಂಡಿದ್ದರು.

ಆದರೆ, ಆಸ್ಪತ್ರೆಗೆ ದಾಖಲಾಗಿದ್ದ ಎಸ್.ಪಿ.ಬಿ. ಆರೋಗ್ಯ ಸ್ಥಿತಿ ಇದ್ದಕ್ಕಿದ್ದಂತೆಯೇ ಬಿಗಡಾಯಿಸತೊಡಗಿತ್ತು. ತಕ್ಷಣವೇ ಅವರನ್ನು ವೆಂಟಿಲೇಟರ್ ಆಧಾರಿತ ತುರ್ತು ನಿಗಾ ಘಟಕಕ್ಕೆ ಸ್ಥಳಾಂತರಿಸಿ ವಿಶೇಷ ಚಿಕಿತ್ಸೆಯನ್ನು ಪ್ರಾರಂಭಿಸಲಾಗಿತ್ತು.

ಇತ್ತ, ಅವರ ಕೋಟ್ಯಂತರ ಅಭಿಮಾನಿಗಳಲ್ಲಿ ಆತಂಕ ಮನೆಮಾಡತೊಡಗಿತ್ತು. ತಮ್ಮ ನೆಚ್ಚಿನ ಗಾಯಕ ಹೀಗೆ ಹಠಾತ್ತಾಗಿ ಗಂಭೀರ ಸ್ಥಿತಿಗೆ ಜಾರುವುದೆಂದರೆ ಅದನ್ನು ಅರಗಿಸಿಕೊಳ್ಳುವ ಸ್ಥಿತಿಯಲ್ಲೇ ಅಭಿಮಾನಿಗಳೂ, ದಕ್ಷಿಣ ಭಾರತ ಚಿತ್ರರಂಗವೂ ಇರಲಿಲ್ಲ.

ಅವರ ಜೊತೆಯಲ್ಲೇ ಇದ್ದ ಪುತ್ರ ಎಸ್.ಪಿ. ಚರಣ್ ಅವರು ತಮ್ಮ ತಂದೆಯ ಆರೋಗ್ಯ ಸ್ಥಿತಿಗತಿಯ ಕುರಿತಾಗಿ ನಿಯಮಿತವಾಗಿ ಮಾಹಿತಿಯನ್ನು ನೀಡುತ್ತಲೇ ಇದ್ದರು.

ಆಗೊಮ್ಮೆ ಈಗೊಮ್ಮೆ ಎಸ್.ಪಿ.ಬಿ. ಆರೋಗ್ಯ ಸ್ಥಿತಿ ಚಿಂತಾಜನಕ ಸ್ಥಿತಿಗೆ ಜಾರುತ್ತಿದ್ದರೂ ಎಂ.ಜಿ.ಎಂ. ಆಸ್ಪತ್ರೆಯ ತಜ್ಞ ವೈದ್ಯ ತಂಡದ ಸಾಹಸದಿಂದ ಈ ಸ್ವರ ಮಾಂತ್ರಿಕ ನಿಧಾನವಾಗಿ ಚೇತರಿಸಿಕೊಳ್ಳುವ ಆಶಾವಾದವನ್ನು ಮೂಡಿಸಿದ್ದರು.
ಆಗೊಮ್ಮೆ ಈಗೊಮ್ಮೆ ಎಸ್.ಪಿ.ಬಿ. ಆರೋಗ್ಯ ಸ್ಥಿತಿ ಚಿಂತಾಜನಕ ಸ್ಥಿತಿಗೆ ಜಾರುತ್ತಿದ್ದರೂ ಎಂ.ಜಿ.ಎಂ. ಆಸ್ಪತ್ರೆಯ ತಜ್ಞ ವೈದ್ಯ ತಂಡದ ಸಾಹಸದಿಂದ ಈ ಸ್ವರ ಮಾಂತ್ರಿಕ ನಿಧಾನವಾಗಿ ಚೇತರಿಸಿಕೊಳ್ಳುವ ಆಶಾವಾದವನ್ನು ಮೂಡಿಸಿದ್ದರು.