ನವದೆಹಲಿ: ಕರೊನಾ ಬಿಕ್ಕಟ್ಟಿನ ನಡುವೆಯೂ ನಡೆದಿರುವ ಪಂಚರಾಜ್ಯಗಳ ಚುನಾವಣೆಯ ಮತಎಣಿಕೆ ಆರಂಭವಾಗಿದೆ. ಮಧ್ಯಾಹ್ನದ ಒಳಗೆ ಸ್ಪಷ್ಟ ಚಿತ್ರಣ ಹೊರ ಬೀಳುವ ನಿರೀಕ್ಷೆಯಿದ್ದು, ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಪುದುಚೇರಿ ಮತ್ತು ಅಸ್ಸಾಂನ ಅಧಿಕಾರದ ಗದ್ದುಗೆಯನ್ನು ಈ ಬಾರಿ ಯಾರು ಹಿಡಿಯಲಿದ್ದಾರೆ? ಯಾವೆಲ್ಲ ಘಟಾನುಘಟಿ ನಾಯಕರು ಚುನಾವಣಾ ಅಖಾಡದಲ್ಲಿ ಗೆಲ್ಲಲಿದ್ದಾರೆ ಮತ್ತು ಸೋಲಲ್ಲಿದ್ದಾರೆ? ಮತದಾರರ ಒಲವು ಈ ಬಾರಿ ಯಾರ ಕಡೆಯಿದೆ? ಎಂಬಿತ್ಯಾದಿ ಕ್ಷಣದ ಕ್ಷಣದ ಕುತೂಹಲಕಾರಿ ಮಾಹಿತಿಯನ್ನು ದಿಗ್ವಿಜಯ 24×7 ನ್ಯೂಸ್ ವಾಹಿನಿಯ ನೇರಪ್ರಸಾರದಲ್ಲಿ ರಾಜಕೀಯ ತಜ್ಞರ ವಿಶ್ಲೇಷಣೆಯೊಂದಿಗೆ ವೀಕ್ಷಿಸಬಹುದಾಗಿದೆ. ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಜತೆಯಲ್ಲಿಯೇ ಕರ್ನಾಟಕದ ಮೂರು ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶವೂ ಬರಲಿದೆ.
ಇದರಿಂದ ರಾಜಕೀಯ ಧುರೀಣರ ಎದೆಯಲ್ಲಿ ಢವಢವ ಶುರುವಾಗಿದ್ದು, ಕರೊನಾ ನಿಯಮ ಪಾಲನೆ ಜತೆಗೆ ಮತ ಎಣಿಕೆ ಕಾರ್ಯ ಎಲ್ಲ ಕ್ಷೇತ್ರಗಳಲ್ಲೂ ಆರಂಭವಾಗಿದೆ.
(ಮಾಹಿತಿ ಕೃಪೆ ವಿಜಯವಾಣಿ)
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ