ಮೊಳಕಾಲ್ಮುರು: 'ಒಂದು ವಾರದಿಂದ ಸರಿಯಾಗಿ ಊಟ ಮಾಡಿಲ್ಲ. ನಮ್ಮನ್ನು ಕೆಲಸಕ್ಕೆ ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದ ಬ್ರೋಕರ್ ಕೈಕೊಟ್ಟಿದ್ದಾನೆ. ಲಾಕ್‌ಡೌನ್ ಮುಗಿದರೂ ನಾವು ಬೆಂಗಳೂರಿಗೆ ಮತ್ತೆ ಹೋಗುವುದಿಲ್ಲ'
ಇದು ಕಲ್ಯಾಣ ಕರ್ನಾಟಕ ಜಿಲ್ಲೆಯಾದ ರಾಯಚೂರಿನ ಮಾನ್ವಿ ತಾಲ್ಲೂಕಿನ ಗ್ರಾಮಸ್ಥರ ಅಳಲು.
ಕ್ರೂಸರ್ ವಾಹನದಲ್ಲಿ ಮಕ್ಕಳು, ದೊಡ್ಡವರು ಸೇರಿ 30ಕ್ಕೂ ಹೆಚ್ಚು ಜನ ದಿನಬಳಕೆ ವಸ್ತುಗಳು, ಬಟ್ಟೆ, ಬಳಕೆ ವಸ್ತುಗಳನ್ನು ಹೇರಿಕೊಂಡು ವಾಪಸ್ ಹೋಗುತ್ತಿರುವುದು ಮೊದಲ ಲಾಕ್‌ಡೌನ್ ಸನ್ನಿವೇಶವನ್ನು ನೆನಪು ಮಾಡುವಂತಿತ್ತು. ಇಂತಹ ವಾಹನಗಳು 10-15 ನಿಮಿಷಕ್ಕೆ ಒಂದರಂತೆ ಈ ಹೆದ್ದಾರಿಯಲ್ಲಿ ಸಾಗುತ್ತಿವೆ. ಕತ್ತಲಾದಂತೆ ವಾಹನಗಳ ಸಂಖ್ಯೆ ಹೆಚ್ಚಳವಾಗುತ್ತಿದೆ ಎನ್ನಲಾಗಿದೆ.
ಕ್ರೂಸರ್‌ನಲ್ಲಿದ್ದ ಕಾರ್ಮಿಕ ಹನುಮಂತಪ್ಪ, 'ಕಟ್ಟಡ ನಿರ್ಮಾಣ ಕೆಲಸಕ್ಕೆ ನಾವೆಲ್ಲಾ ಬೆಂಗಳೂರಿಗೆ ಹೋಗಿ
ದ್ದೆವು.
'ಮುಂಗಾರು ಮಳೆ ಆರಂಭವಾಗುತ್ತಿದ್ದು, ನಮ್ಮ ಕಡೆ ಹೊಲಮನಿ ಕೆಲಸ ಸಿಗುತ್ತದೆ. ಕೊರೊನಾ ಕಡಿಮೆಯಾದರೂ ಮತ್ತೆ ಬೆಂಗಳೂರಿಗೆ ಹೋಗುವುದಿಲ್ಲ. 2ನೇ ಅಲೆ ಸಮಯದಲ್ಲಿನ ಹೊಟ್ಟೆ ಹಸಿವು ನಮ್ಮ ಈ ನಿರ್ಧಾರಕ್ಕೆ ಕಾರಣವಾಗಿದೆ. ಸಾಕಷ್ಟು ಕಷ್ಟವನ್ನು ಬೆಂಗಳೂರಿನಲ್ಲಿ ಅನುಭವಿಸಿದೆವು. ಯಾರೂ ನಮ್ಮ ಸಹಾಯಕ್ಕೆ ಬರಲಿಲ್ಲ' ಎಂದು ಅಳಲು ತೋಡಿಕೊಂಡರು.
ಕ್ರೂಸರ್‌ನ ಚಾಲನ ಸಿದ್ದಪ್ಪ, 'ನಮಗೆ ಖರ್ಚು ತೆಗೆದು ₹ 4-5 ಸಾವಿರ ಉಳಿಯುತ್ತದೆ. ದಾರಿಯಲ್ಲಿ ಮಾಮೂಲು ಕೊಟ್ಟುಕೊಂಡು ಬರಬೇಕಿದೆ' ಎಂದರು.
ರಾಜ್ಯದಲ್ಲಿ ಲಾಕ್‌ಡೌನ್ ಹೇರಿರುವ ಪರಿಣಾಮ ಬೆಂಗಳೂರಿನಿಂದ ಸಾರಿಗೆ ಬಸ್ಸುಗಳಲ್ಲಿ ಯಾವುದೇ ಸಾಮಾಜಿಕ ಅಂತರವಿಲ್ಲದೆ ಸಾವಿರಾರು ಮಂದಿ ಸ್ವಗ್ರಾಮಗಳಿಗೆ ಸೋಮವಾರ, ಮಂಗಳವಾರ ಬಂದಿದ್ದಾರೆ. ಇವರಿಂದ ಸೋಂಕು ಹಳ್ಳಿಗಳಿಗೆ ವ್ಯಾಪಿಸುವ ಆತಂಕ ಎದುರಾಗಿದೆ. ಆರೋಗ್ಯ ಇಲಾಖೆ ಬಂದವರ ಮಾಹಿತಿ ಪಡೆದು ಕ್ರಮ ಕೈಗೊಳ್ಳಬೇಕು ಎಂದು ಪಟ್ಟಣದ ರಾಮಸ್ವಾಮಿ, ಹರೀಶ್ ಮನವಿ ಮಾಡಿದ್ದಾರೆ.
(ಮಾಹಿತಿ ಕೃಪೆ ಪ್ರಜಾವಾಣಿ)
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ