ಅಡುಗೆಯಲ್ಲಿ ಈರುಳ್ಳಿಯನ್ನು ಹೆಚ್ಚಾಗಿ ಬಳಸುತ್ತಾರೆ. ಇದು ಅಡುಗೆಯ ರುಚಿಯ ಜೊತೆಗೆ ಪರಿಮಳವನ್ನು ಹೆಚ್ಚಿಸುತ್ತದೆ. ಅಲ್ಲದೇ ಇದರಿಂದ ಕೂದಲಿನ ಸಮಸ್ಯೆಯನ್ನು ನಿವಾರಿಸಬಹುದು. ಹಾಗಾಗಿ ಈರುಳ್ಳಿಯಿಂದ ಪೌಡರ್ ತಯಾರಿಸಿ ಬಳಸಿ ಆರೋಗ್ಯಕರವಾದ ಕೂದಲನ್ನು ಹೊಂದಿರಿ.
ಈರುಳ್ಳಿಯನ್ನು ಚೆನ್ನಾಗಿ ತೊಳೆದು ಉದ್ದವಾಗಿ ಪೀಸ್ ಮಾಡಿ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ. ಬಳಿಕ ಅದನ್ನು ಮಿಕ್ಸಿಯಲ್ಲಿ ಪುಡಿ ಮಾಡಿ. ಗಾಜಿನ ಬಾಟಲಿನಲ್ಲಿ ಸ್ಟೋರ್ ಮಾಡಿ ಇಡಿ. ವಾರದಲ್ಲಿ 2 ಬಾರಿ 2 ಚಮಚ ಈರುಳ್ಳಿ ಪುಡಿಯನ್ನು ತೆಗೆದುಕೊಂಡು 2 ಚಮಚ ಆಲಿವ್ ಆಯಿಲ್ ಅಥವಾ 2 ಚಮಚ ಜೇನುತುಪ್ಪ ಸೇರಿಸಿ ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ 2 ಗಂಟೆಗಳ ಬಳಿಕ ಕೂದಲನ್ನು ವಾಶ್ ಮಾಡಿ. ಇದು ನೆತ್ತಿಯಲ್ಲಿರುವ ಬ್ಯಾಕ್ಟೀರಿಯಾ ಸೋಂಕನ್ನು ನಿವಾರಿಸುತ್ತದೆ.
ರಕ್ತ ಪರಿಚಲನೆಯನ್ನು ಹೆಚ್ಚಿಸಿ ಆರೋಗ್ಯವಂತ ಕೂದಲು ಪಡೆಯಲು ಸಹಾಯ ಮಾಡುತ್ತದೆ. ಕೂದಲಿನ ತೇವಾಂಶ ಕಾಪಾಡಿ ಕೂದಲು ಹೊಳೆಯುವಂತೆ ಮಾಡುತ್ತದೆ.
(ಮಾಹಿತಿ ಕೃಪೆ ಕನ್ನಡದುನಿಯಾ)
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ