ಬೆಂಗಳೂರು : ರಾಜ್ಯದ 11 ಜಿಲ್ಲೆಗಳಲ್ಲಿ ನಾಳೆಯಿಂದ ಲಾಕ್ ಡೌನ್ ಮತ್ತೆ ಜೂನ್ 21ರವರೆಗೆ ಮುಂದುವರೆದರೇ, ಇನ್ನುಳಿದಂತ ಜಿಲ್ಲೆಗಳಲ್ಲಿ ಅನ್ ಲಾಕ್ ಮಾರ್ಗಸೂಚಿ ಕ್ರಮಗಳು ಜಾರಿಗೊಳ್ಳಲಿವೆ. ಬೆಂಗಳೂರು ಸೇರಿದಂತೆ 19 ಜಿಲ್ಲೆಗಳು ಅನ್ ಲಾಕ್ ಆಗುತ್ತಿರೋ ಕಾರಣದಿಂದಾಗಿ, ಬೆಂಗಳೂರಿಗೆ ಊರಿಗೆ ತೆರಳಿದ್ದಂತ ಜನರ ದಂಡೇ ವಾಪಾಸ್ ಆಗುತ್ತಿದ್ದಾರೆ.
ಹೌದು.. ನಾಳೆಯಿಂದ ಸಿಲಿಕಾನ್ ಸಿಟಿ ಬೆಂಗಳೂರು ಸೇರಿ ಸೇರಿದಂತೆ ರಾಜ್ಯದಲ್ಲಿ ಪಾಸಿಟಿವಿಟಿ ದರ ಕಡಿಮೆಗೊಂಡಿರುವಂತ ಜಿಲ್ಲೆಗಳಲ್ಲಿ ಅನ್ ಲಾಕ್ ಮಾರ್ಗಸೂಚಿ ಕ್ರಮಗಳು ಜಾರಿಗೊಳ್ಳಲಿವೆ. ಇನ್ನುಳಿದಂತೆ ಕೊರೋನಾ ಸೋಂಕಿನ ಪಾಸಿಟಿವಿಟಿ ದರ ಹೆಚ್ಚಾಗಿರುವಂತ 11 ಜಿಲ್ಲೆಗಳಲ್ಲಿ ಲಾಕ್ ಡೌನ್ ಮುಂದುವರೆಯುತ್ತಿದೆ.
ಲಾಕ್ ಡೌನ್ ಜಾರಿಗೊಂಡಿದ್ದ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ದುಡಿಯುತ್ತಿದ್ದಂತ ವಿವಿಧ ವರ್ಗದ ಜನರು, ನಾಳೆಯಿಂದ ಅನ್ ಲಾಕ್ ಆಗಿ, ಶೇ.50ರಷ್ಟು ನೌಕರರೊಂದಿಗೆ ಕಾರ್ಖಾನೆಗಳು, ಶೇ.30ರಷ್ಟು ನೌಕರರೊಂದಿಗೆ ಗಾರ್ಮೆಂಟ್ಸ್ ಗಳು ಕೂಡ ಆರಂಭಗೊಳ್ಳಲಿವೆ. ಇಂತಹ ವಿವಿಧ ವಲಯದಲ್ಲಿ ಕೆಲಸ ಮಾಡುತ್ತಿರುವಂತ ನೌಕರರು ಅನ್ ಲಾಕ್ ನಿಂದಾಗಿ ಕೆಲಸ ಮತ್ತೆ ಆರಂಭಗೊಳ್ಳುತ್ತಿರ ಕಾರಣ, ಬೆಂಗಳೂರಿನತ್ತ ಈಗ ಪಯಣ ಆರಂಭಿಸಿದ್ದಾರೆ.
ಕೊರೋನಾ ಪಾಸಿಟಿವಿಟಿ ದರ ಕಡಿಮೆಗೊಂಡಂತ ಜಿಲ್ಲೆಗಳಲ್ಲಿ ಅನ್ ಲಾಕ್ ಮಾರ್ಗಸೂಚಿ ಜಾರಿಗೊಳಿಸಿ, ಕಾರ್ಖಾನೆ, ಗಾರ್ಮೆಂಟ್ ಸೇರಿದಂತೆ ವಿವಿಧ ವಲಯಗಳ ಆರ್ಥಿಕ ಪುನಶ್ಚೇತನಕ್ಕೆ ಅವಕಾಶ ಮಾಡಿಕೊಟ್ಟಿರುವಂತ ರಾಜ್ಯ ಸರ್ಕಾರ, ಸಾರಿಗೆ ಸಂಚಾರಕ್ಕೆ ಮಾತ್ರ ಅವಕಾಶ ಮಾಡಿಕೊಟ್ಟಿಲ್ಲ.
ಬಹುತೇಕ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವಂತ ಅನೇಕ ನೌಕರರು ತಮ್ಮ ಖಾಸಗಿ ವಾಹನಗಳಿಗಿಂತ ಸಾರ್ವಜನಿಕ ಸಾರಿಗೆ ಬಳಸಿಕೊಂಡೇ ಕೆಲಸಕ್ಕೆ ತೆರಳುತ್ತಿರೋ ನೌಕರರು ಆಗಿದ್ದಾರೆ. ಬೆಂಗಳೂರಿನಲ್ಲಿ ಈಗ ಅನ್ ಲಾಕ್ ಮಾರ್ಗಸೂಚಿ ಜಾರಿಗೊಳಿಸಿ, ಕಂಪನಿಗಳನ್ನು ಆರಂಭಿಸಿದರೂ, ಕೆಲಸಕ್ಕೆ ಹೇಗೆ ತೆರಳೋದು ಎನ್ನುವುದೇ ನೌಕರರಿಗೆ ಯಕ್ಷ ಪ್ರಶ್ನೆಯಾಗಿದೆ. ಆ ಬಗ್ಗೆ ಸರ್ಕಾರ ನಂತ್ರದ ದಿನಗಳಲ್ಲಿ ಏನ್ ಕ್ರಮ ಕೈಗೊಳ್ಳಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.
(ಮಾಹಿತಿ ಕೃಪೆ Kannada News Now)
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ