WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Sunday, June 13, 2021

ಅಪಹರಣವಾದ 24 ಗಂಟೆಯಲ್ಲೇ ಶಿಶು ರಕ್ಷಣೆ: ಗೋವಾ ಪೊಲೀಸರಿಗೆ ಸಿಎಂ ಸಾವಂತ್ ಶ್ಲಾಘನೆ

 


ಪಣಜಿ: ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಅಪಹರಣಕ್ಕೊಳಗಾಗಿದ್ದ ಒಂದೂವರೆ ತಿಂಗಳ ಶಿಶುವನ್ನು ಗೋವಾ ಪೊಲೀಸರು ಕೇವಲ 24 ಗಂಟೆಗಳಲ್ಲೇ ರಕ್ಷಿಸಿದ್ದಾರೆ. ಈ ಬಗ್ಗೆ ಅಲ್ಲಿನ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಶನಿವಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮಗು ಅಪಹರಿಸಿದ್ದ ಮಹಿಳೆಯನ್ನು ಉತ್ತರ ಗೋವಾದ ಸಾಲೇಲಿ ಗ್ರಾಮದಲ್ಲಿ ಬಂಧಿಸಲಾಗಿದೆ.
ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಮುನ್ನಡೆಸಿದ ಮತ್ತು ಅಪಹರಣವಾದ ಕೇವಲ 24 ಗಂಟೆಗಳಲ್ಲೇ ಒಂದೂವರೆ ತಿಂಗಳ ಶಿಶುವನ್ನು ರಕ್ಷಿಸಿದ ಗೋವಾ ಪೊಲೀಸರನ್ನು ಅಭಿನಂದಿಸುತ್ತೇನೆ. ನಾಗರಿಕರ ರಕ್ಷಣೆ ಮತ್ತು ಭದ್ರತೆಯೇ ಸರ್ಕಾರದ ಮೊದಲ ಆದ್ಯತೆ ಎಂದು ಸಾವಂತ್‌ ಟ್ವೀಟ್‌ ಮಾಡಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ ಜೂನ್‌ 11 ರಂದು, ಗೋವಾ ವೈದ್ಯಕೀಯ ಕಾಲೇಜು ಆಸ್ಪತ್ರೆಯಿಂದ ಅಪರಿಚಿತ ಮಹಿಳೆಯೊಬ್ಬರು ಶಿಶು ಅಪಹರಿಸಿದ್ದಾರೆ ಎಂಬ ಮಾಹಿತಿ ಅಗಾಕೈಮ್ ಪೊಲೀಸ್‌ ಠಾಣೆಗೆ ಲಭ್ಯವಾಗಿದೆ.
ಶಿಶುವಿನ ತಾಯಿ ಲಲಿತಾ ನಾಯಕ್‌ ಅವರನ್ನು ಭೇಟಿಯಾದ ಅಪರಿಚಿತ ಮಹಿಳೆಯೊಬ್ಬರು, ಮಾತನಾಡಿಸುವ ನೆಪದಲ್ಲಿ ಅವರ (ತಾಯಿಯ) ಗಮನವನ್ನು ಬೇರೆಡೆಗೆ ಸೆಳೆದು ಮಗು ಅಪಹರಿಸಿದ್ದಾರೆ.
ಮಾಹಿತಿ ದೊರೆತ ತಕ್ಷಣವೇ ಉತ್ತರ ಗೋವಾ ಜಿಲ್ಲೆ ಮತ್ತು ಅಪರಾಧ ವಿಭಾಗದ ತಂಡ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ಆರಂಭಿಸಿದೆ. ಸಿಸಿಟಿವಿ ದೃಶ್ಯಗಳಲ್ಲಿಯೂ ಮುಖ ಗುರುತು ಸ್ಪಷ್ಟವಾಗಿಲ್ಲದ ಕಾರಣ ಪ್ರಕರಣ ಬೇಧಿಸುವುದು ಸವಾಲಾಗಿದೆ ಎಂದು ಪೊಲೀಸರು ತಿಳಿಸಿದ್ದರು.
ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ತಂಡಗಳು ಲಭ್ಯವಾದ ನಿಖರ ಮಾಹಿತಿಯನ್ನು ಆಧರಿಸಿ ಬಿಚೋಲಿಮ್‌ ಮತ್ತು ವಲ್ಪೋಯಿ ನಗರ, ಸುತ್ತಮುತ್ತ ಹುಡುಕಾಟ ಆರಂಭಿಸಿದವು. ಬಳಿಕ ಸಾಲೇಲಿ ಗ್ರಾಮವನ್ನು ಸುತ್ತುವರಿದು, ಆಸ್ಪತ್ರೆ ಮತ್ತು ತಾಯಿ ನೀಡಿದ ಹೇಳಿಕೆಗಳಿಗೆ ಹೊಂದಿಕೆಯಾಗುವ ಮಗುವನ್ನು ಪತ್ತೆಹಚ್ಚಲಾಯಿತು.
ಬಂಧನಕ್ಕೊಳಗಾಗಿರುವ ಮಹಿಳೆಯನ್ನು ವಿಶ್ರಾಂತಿ ಗವಾಸ್‌ ಎಂದು ಗುರುತಿಸಲಾಗಿದೆ. ಮಗುವನ್ನು ತಾನೇ ಸಾಕಲು ನಿರ್ಧರಿಸಿದ್ದುದಾಗಿ ಮತ್ತು ಅದಕ್ಕಾಗಿಯೇ ಅಪಹರಿಸಿದ್ದಾಗಿ ವಿಚಾರಣೆ ವೇಳೆ ಆರೋಪಿ ಮಹಿಳೆ ಹೇಳಿಕೆ ನೀಡಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.
(ಮಾಹಿತಿ ಕೃಪೆ ಪ್ರಜಾವಾಣಿ)

No comments:

Post a Comment

ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ