
ಚೀನಾದ ಹೆಬಿಯಿಯ ತಾಂಗ್ಶಾನ್ ನಗರದಲ್ಲಿ ಭೂಕಂಪ ಉಂಟಾಗಿದ್ದು, ಬೀಜಿಂಗ್ ಹಾಗೂ ಸುತ್ತಮುತ್ತಲ ಪ್ರದೇಶದಲ್ಲೂ ಕಂಪನದ ಅನುಭವವಾಗಿದೆ ಎಂದು ಸರ್ಕಾರು ಸ್ವಾಮ್ಯದ ಕ್ಸಿನ್ಯೂವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಭೂಕಂಪದ ಕೇಂದ್ರ ಬಿಂದು ಗುಯೆ ಜಿಲ್ಲೆಯಲ್ಲಿ
ಸ್ಥಳೀಯ ಕಾಲಮಾನ 6:38 AMರಲ್ಲಿ ದಾಖಲಾಗಿದೆ, 10 ಕಿ.ಮೀ ಆಳದಲ್ಲಿ ಕಾಣಿಸಿಕೊಂಡಿದೆ
ಎಂದು ಚೀನಾದ ಭೂಕಂಪ ಜಾಲ ಕೇಂದ್ರ( ಸಿಇಎನ್ ಸಿ) ಹೇಳಿದೆ.
ಎರಡನೇ ಭೂಕಂಪದ ಅನುಭವ 2.2 ತೀವ್ರತೆ ಕೂಡಾ ಇದೇ ಜಿಲ್ಲೆಯಲ್ಲಿ ಅರ್ಧಗಂಟೆಗಳಲ್ಲಿ ಕಾಣಿಸಿಕೊಂಡಿದೆ. ಸದ್ಯಕ್ಕೆ ಯಾವುದೇ ಸಾವು ನೋವಿನ ವರದಿ ಕಂಡು ಬಂದಿಲ್ಲ.ಸದ್ಯಕ್ಕೆ ಕಂಪನದ ಅನುಭವ ಕಂಡು ಬಂದ ಪ್ರದೇಶಗಳಲ್ಲಿ ರೈಲು ಸಂಚಾರ ನಿರ್ಬಂಧಿಸಲಾಗಿದೆ. ಅಗ್ನಿ ಶಾಮಕದಳವನ್ನು ನಿಯೋಜಿಸಲಾಗಿದೆ. 1976ರಲ್ಲಿ ತಾಂಗ್ಶಾನ್ ಪ್ರಾಂತ್ಯದಲ್ಲಿ ರಿಕ್ಟರ್ ಮಾಪಕದಲ್ಲಿ ತೀವ್ರತೆ ಭೂಕಂಪ ಸಂಭವಿಸಿ240,000 ಮಂದಿ ಮೃತಪಟ್ಟಿದ್ದರು.
(ಮಾಹಿತಿOneindiaಕೃಪೆ )
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ