ಕೊರೊನಾ ಜೊತೆಗೆ ಜೀವಿಸುವುದು ಕಲಿಯಬೇಕಿದೆ ಎಂದು ಸರ್ಕಾರವೇ ಹೇಳುತ್ತಿದೆ. ಹಾಗಾಗಿ ಕೊರೊನಾ ಉಚ್ರಾಯದಲ್ಲಿದ್ದರೂ ಲಾಕ್‌ಡೌನ್ ಗೆ ಕೈಹಾಕುತ್ತಿಲ್ಲ ಸರ್ಕಾರಗಳು, ಬದಲಿಗೆ ಹಂತಹಂತವಾಗಿ ಅನ್‌ಲಾಕ್ ಮಾಡಲಾಗುತ್ತಿದೆ. ಕೊರೊನಾ ದಿಂದಾಗಿ ಭಾರಿ ದೊಡ್ಡ ಪೆಟ್ಟು ತಿಂದಿದ್ದು ಚಿತ್ರೋದ್ಯಮ. ಚಿತ್ರೀಕರಣ, ಚಿತ್ರಮಂದಿರಗಳು ದೇಶದಾದ್ಯಂತ ಅಧಿಕೃತ ಲಾಕ್‌ಡೌನ್ ಘೋಷಣೆಗೆ ಮುನ್ನವೇ ಸ್ಥಗಿತಗೊಳಿಸಲಾಗಿತ್ತು. ಬಹುತೇಕ ಉದ್ಯಮಗಳು ನಿಯಮಗಳನ್ವಯ ಪುನರ್‌ಪ್ರಾರಂಭವಾಗಿದೆಯಾದರೂ ಚಿತ್ರಮಂದಿರಗಳು ಮಾತ್ರ ಇನ್ನೂ ತೆರೆಯಲಾಗಿರಲಿಲ್ಲ. ಚಿತ್ರಮಂದಿರಗಳ ಮಾಲೀಕರು ಬಹುದೊಡ್ಡ ಆರ್ಥಿಕ ಪೆಟ್ಟು ತಿಂದಿದ್ದರು, ಆದರೆ ಈಗ ಭರವಸೆಯ ಬೆಳಕೊಂದು ಕಾಣಿಸಿಕೊಂಡಿದ್ದು, ಚಿತ್ರಮಂದಿರಗಳು ತೆರೆಯುವ ಮುನ್ಸೂಚನೆ ದೊರೆತಿದೆ.
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ