ಆನ್ಲೈನ್ ಕ್ಲಾಸ್ ತೆಗೆದುಕೊಂಡಿದ್ದ ಶಿಕ್ಷಕಿ ವಿರುದ್ಧ ಅಸಭ್ಯ ಕಾಮೆಂಟ್: ಜಾಲತಾಣದಲ್ಲಿ ಫೋಟೋ ವೈರಲ್
ತಿರುವನಂತಪುರಂ: ಆನ್ಲೈನ್ನಲ್ಲಿ ತರಗತಿ ನಡೆಸುತ್ತಿದ್ದ ಶಿಕ್ಷಕಿ
ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಸಭ್ಯವಾಗಿ ಕಾಮೆಂಟ್ ಮಾಡಿದವರ ವಿರುದ್ಧ ಕೇರಳದ
ಸೈಬರ್ ಕ್ರೈಂ ವಿಭಾಗದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೇರಳದ ಶಿಕ್ಷಣಕ್ಕಾಗಿ ಮೂಲಭೂತ ಸೌಕರ್ಯ ಮತ್ತು ತಂತ್ರಜ್ಞಾನ ಇಲಾಖೆಯ ಮುಖ್ಯ
ಕಾರ್ಯದರ್ಶಿ ಅವರು ಎಡಿಜಿಪಿ ಮನೋಜ್ ಅಬ್ರಾಹಂ ಅವರಿಗೆ ಸಲ್ಲಿಸಿದ ದೂರಿನ ಆಧಾರದ ಮೇಲೆ
ಕ್ರಮ ತೆಗದುಕೊಳ್ಳಲಾಗಿದೆ.
ಫೇಸ್ಬುಕ್,
ಇನ್ಸ್ಟಾಗ್ರಾಂ, ಯೂಟ್ಯೂಬ್ ಮತ್ತು ವಾಟ್ಸ್ಆಯಪ್ಗಳಲ್ಲಿ ಶಿಕ್ಷಕಿ ವಿರುದ್ಧ
ಅವಹೇಳನಕಾರಿಯಾಗಿ ಕಾಮೆಂಟ್ ಮಾಡಿದ್ದು, ರಾಜ್ಯ ಯುವ ಆಯೋಗವು ಸಹ ಸುಮೊಟೊ ಪ್ರಕರಣ
ದಾಖಲಿಸಿಕೊಂಡಿದೆ.
ಯುವ ಆಯೋಗದ ಚೇರ್ ಪರ್ಸನ್ ಚಿಂಥ ಜೆರೊಮ್ ಘಟನೆ ಸಂಬಂಧ
ಕಿಡಿಕಾರಿದ್ದು, ಶಿಕ್ಷಕಿ ವಿರುದ್ಧ ಅಸಭ್ಯ ಕಾಮೆಂಟ್ ಮಾಡಿದವರು ವಿಕೃತ ಮನಸ್ಸಿನವರು
ಹಾಗೂ ಇದನ್ನು ಕೇರಳ ಒಪ್ಪುವುದಿಲ್ಲ. ಮತ್ತಿದು ನಮ್ಮ ಸಂಸ್ಕೃತಿಗೆ ವಿರುದ್ಧ ಎಂದು
ಆಕ್ರೋಶ ಹೊರಹಾಕಿದ್ದಾರೆ.
ಆರೋಗ್ಯ ಬಿಕ್ಕಟ್ಟಿನ ಸಮಯದಲ್ಲಿ ಸರ್ಕಾರ ಮತ್ತು ಶಿಕ್ಷಕರು
ಕಾರ್ಯನಿರ್ವಹಿಸುತ್ತಿರುವಾಗ ಅವರನ್ನು ಅವಮಾನಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ
ತೆಗೆದುಕೊಳ್ಳಬೇಕು. ಸಾಧ್ಯವಾದಷ್ಟು ಬೇಗ ಅಪರಾಧಿಗಳನ್ನು ಬಂಧಿಸಿ ಕಾನೂನು ಕ್ರಮಗಳನ್ನು
ತೆಗದುಕೊಳ್ಳಬೇಕೆಂದು ಯುವ ಆಯೋಗ ಆಗ್ರಹಿಸುತ್ತದೆ. ಕ್ರಮ ತೆಗೆದುಕೊಂಡ ಬಗ್ಗೆ ಎರಡು
ವಾರಗಳಲ್ಲಿ ವರದಿ ಸಲ್ಲಿಸಲು ಆಯೋಗ ಕೇಳಿದೆ.
ಶಿಕ್ಷಕಿಯನ್ನು ಟ್ರೋಲ್
ಮಾಡಿದ್ದಲ್ಲದೆ ಅವರ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿ ಅಸಭ್ಯವಾಗಿ
ಕಾಮೆಂಟ್ ಮಾಡಿರುವುದು ಗಮನಕ್ಕೆ ಬಂದಿದೆ. ಇದರೊಂದಿಗೆ ಶಿಕ್ಷಕಿಯ ಹೆಸರಿನಲ್ಲಿ ಅನೇಕ
ನಕಲಿ ಖಾತೆಯು ಸಹ ಸೃಷ್ಟಿಸಲಾಗಿದೆ. ವಿಕ್ಟರ್ ಚಾನಲ್ ಹೆಸರಿನ ಯೂಟ್ಯೂಬ್
ಚಾನಲ್ನಲ್ಲೂ ಸಹ ಶಿಕ್ಷಕಿಯ ವಿಡಿಯೋಗೆ ಅಶ್ಲೀಲವಾಗಿ ಕಾಮೆಂಟ್ ಮಾಡಿದ್ದಾರೆ. ಅನೇಕ
ಕಾಮೆಂಟ್ಗಳನ್ನು ವಿಕ್ಟರ್ಸ್ ಚಾನಲ್ ತೆಗೆದು ಹಾಕಿದೆ. (ಏಜೆನ್ಸೀಸ್)
(ಮಾಹಿತಿ
ವಿಜಯವಾಣಿ ಕೃಪೆ )
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ